ಟಿ.ಪಿ.ಕೈಲಾಸಂ

ಟಿ.ಪಿ.ಕೈಲಾಸಂ

ಟಿ.ಪಿ.ಕೈಲಾಸಂ

” ಕನ್ನಡಕ್ಕೊಬ್ನೆ ಕೈಲಾಸಂ “

” ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ “

ಕನ್ನಡಕ್ಕೊಬ್ನೆ ಕೈಲಾಸಂ’, ಎಂದು ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ ! ಯಾರೊ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೆ,ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಗಯಾಡಿದ್ದರಂತೆ.

ಪರಿವಿಡಿ

” ಕನ್ನಡಕ್ಕೊಬ್ನೆ ಕೈಲಾಸಂ “

ಟಿ ಪಿ ಕೈಲಾಸಂ (೧೮೮೪೧೯೪೬) ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ನಾಡು-ನುಡಿಯ ವೈಭವದ ಬಗೆಗಿನ ಚಿತ್ರಗೀತೆಯೊಂದರಲ್ಲಿ ಹೀಗೆ ಹೇಳಲಾಗಿದೆ: ಕೈಲಾಸಂ ಕಂಡ ನಮಗೆ ಕೈಲಾಸ ಯಾಕೆ ಬೇಕು. ಈ ಹಾಡಿನ ನುಡಿ ಅತ್ಯಂತ ಪೂರಕವಾಗಿದೆ ಎಂದರೆ ಉತ್ಪ್ರೇಕ್ಶೆಯಲ್ಲ.

ಸಾಹಿತ್ಯ

ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ಇವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ, ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ. ಪ್ರತಿಪದ, ಪ್ರತಿವಾಕ್ಯಗಳೂ ಮೊದಲೇ ನಿರ್ಧಾರಿತವಾಗಿದ್ದು, ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಇಲ್ಲಿ ಸರ್. ಎಮ್. ವಿ ರವರನ್ನು ನೆನೆಸಬೇಕು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಮೊದಲ ತಯಾರಿಯಿಲ್ಲದೆ ಯಾವ ಸಮಾರಂಭಕ್ಕೂ ಅವರು ಹೋಗುತ್ತಿರಲಿಲ್ಲ.

ಜೀವನ

ತಮಿಳು ಮೂಲದವರಾದರೂ ಕನ್ನಡವನ್ನು ಎತ್ತಿ ಹಿಡಿದು ಕನ್ನಡಕ್ಕಾಗಿ ಶ್ರಮಿಸಿದ ಇವರು, ಕನ್ನಡ ರಂಗಭೂಮಿಗೆ ತಮ್ಮ ಜೀವನದ ಬಹು ಪಾಲು ಶ್ರಮವನ್ನು ಧಾರೆ ಎರೆದರು. ಜೀವನದುದ್ದಕ್ಕೂ ಹಾಸ್ಯಭರಿತ ಮಾತಿನ ಚಟಾಕಿಯಿಂದ ಸುತ್ತಲಿರುವ ಜನರ ಮನವೊಲಿಸಿಕೊಳ್ಳುವ, ರಂಜಿಸುವ ಗುಣ ಇವರಲ್ಲಿತ್ತು. ಕೈಲಾಸಂರವರು ಅತ್ಯಂತ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಜಸ್ಟಿಸ್ ಪರಮಶಿವ ಅಯ್ಯರ್ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದರು. ಕೈಲಾಸಂ ಸ್ವತಃ ಅತ್ಯಂತ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರು. ಅವರು ಇಂಗ್ಲೆಂಡಿನಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಚಿನ್ನದ ಪದಕಗಳನ್ನು ಪಡೆದು, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸರ್ಕಾರಿ ಹುದ್ದೆಯಲ್ಲಿ ತಮ್ಮ ಹೆಸರು ಮಾಡಿದ್ದರು. ಸರ್ಕಾರಿ ಕೆಲಸದಲ್ಲಿ ಅವರ ಮನಸ್ಸು ತುಂಬಾ ದಿನ ಇರಲಿಲ್ಲ. ಕೈಲಾಸಂರವರ ಬಗ್ಗೆ ಶ್ರೀ ಕೇಶವ ರಾವ್ ಅವರು ಒಂದು ಸ್ವಾರಸ್ಯಕರವಾದ ಪುಸ್ತಕವನ್ನು ಬರೆದಿದ್ದಾರೆ. ಅದರ ಹೆಸರು ‘ಕನ್ನಡಕ್ಕೊಬ್ಬನೇ ಕೈಲಾಸಂ’. ಈ ಪುಸ್ತಕದಲ್ಲಿ ಕೈಲಾಸಂರವರ ಬಾಲ್ಯ, ವಿದ್ಯಾಭ್ಯಾಸ ಮತ್ತು ಅವರ ಕೆಲಸದ ಬಗ್ಗೆ ಸಾಕಷ್ಟು ವಿವರವಾಗಿ ಬರೆದಿರುತ್ತಾರೆ. ಮತ್ತೊಂದು ಪುಸ್ತಕವೆಂದರೆ ‘ಕೈಲಾಸಂ ಜೋಕ್ಸೂ ಸಾಂಗ್ಸೂ’. ಇದರಲ್ಲಿ ಕೈಲಾಸಂರವರ ಹಾಸ್ಯ ಪ್ರಜ್ಣೆಯ ಸಮಗ್ರ ಪರಿಚಯವಾಗುತ್ತದೆ.

‘ದೇಹಧಾರಢ್ಯ,’ ಕ್ಕೆ, ಹಾಗೂ ‘ಫುಟ್ಬಾಲ್ ಆಟ,’ ಕ್ಕೆ ಆವರ ಪ್ರಮುಖಆದ್ಯತೆ ಇತ್ತು

ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ಒಳ್ಳೆಯ ಶಿಕ್ಷಣ, ವ್ಯಾಯಾಮ ಮತ್ತು ವಾತಾವರಣದಿಂದ ಒಂದು ಸಂಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ದಾರಿಯಾಯಿತು. ಉನ್ನತ ವ್ಯಾಸಂಗಕ್ಕಾಗಿ ಅವರನ್ನು ಆಗಿನ ಕಾಲಕ್ಕೇ ಇಂಗ್ಲೆಂಡಿಗೆ ಮೈಸೂರು ಮಹರಾಜರು ತಮ್ಮ ಖರ್ಚಿನಿಂದ ಕಳಿಸಿದರು. ಅಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹಾಗೂ ಚಿನ್ನದ ಪದಕಗಳನ್ನು ಗಳಿಸಿದರು. ಅವರಿಗಿದ್ದ ಅಪಾರ ಪ್ರತಿಭೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮೂರೇ ವರ್ಷಗಳಲ್ಲಿ ಮುಗಿಸಬಹುದಾದರೂ ಅವರು ಸುಮಾರು ಏಳು ವರ್ಷಗಳ ಕಾಲ ತೆಗೆದುಕೊಂಡರು. ಏಕೆಂದರೆ, ಅವರಿಗೆ ಇಂಗ್ಲೆಂಡಿನ ಜೀವನ ಶೈಲಿ ತುಂಬಾ ಇಷ್ಟವಾಗಿ ಪ್ರತೀ ಸಲ ಪರೀಕ್ಷೆಗೆ ಏನಾದರೊಂದು ನೆಪ ಕೊಟ್ಟು ತಪ್ಪಿಸ್ಕೊಳ್ತಿದ್ರು. ಕೊನೆಗೆ ಮನೆಯಿಂದ ದುಡ್ಡು ಬರುವುದು ಕಷ್ಟವಾಗತೊಡಗಿದಾಗ ಉಳಿದ ಪರೀಕ್ಷೆಗಳನ್ನು ಮುಗಿಸಿ ಭಾರತಕ್ಕೆ ವಾಪಸ್ಸಾದರು. ಅವರಿಗೆ ಇಂಗ್ಲೀಶರ ಉಡುಪು ಧರಿಸುವುದು ಎಷ್ಟರ ಮಟ್ಟಿಗೆ ಕರಗತವಾಗಿತ್ತೆಂದರೆ ಅವರ ಕೆಲವು ಆಂಗ್ಲ ಮಿತ್ರರಿಗೆ ಕೈಲಾಸಂ ಬಟ್ಟೆ ಧರಿಸುವುದನ್ನು ಹೇಳಿಕೊಡುತ್ತಿದ್ದರು! ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು.

ಅವರ ಬಾಯಿನಲ್ಲಿ ಬಂದ ಪ್ರತಿವಾಕ್ಯದಲ್ಲೂ ನಗು, ಹಾಸ್ಯದ ಲೇಪವಿತ್ತು

ಶ್ರೀ ಕೇಶವ ರಾವ್ ಅವರ ‘ಕನ್ನಡಕ್ಕೊಬ್ಬನೇ ಕೈಲಾಸಂ’ ಪುಸ್ತಕದಲ್ಲಿ ಕೈಲಾಸಂ ಅವರು ತಮ್ಮ ನಾಟಕಗಳಲ್ಲಿ ಆಡುಭಾಷೆಯ ಉಪಯೋಗದ ಬಗ್ಗೆ ಸಾಕಷ್ಟು ಸ್ವಾರಸ್ಯಕರವಾಗಿ ಉಲ್ಲೇಖಿಸಿದ್ದಾರೆ. ಒಂದು ಬಾರಿ ಅವರು ನಾಟಕ ಬರೆಸುತ್ತಿದ್ದಾಗ ‘ಕಸಬಾ ಹೋಬಳಿ’ ಎಂಬುದಕ್ಕೆ ‘ಕಸ್ಬಾ ಹೋಬ್ಳಿ’ ಅಂತ ಹೇಳಿದಾಗ ಬರೆದುಕೊಳ್ಳುತ್ತಿದ್ದ ಶಿಷ್ಯೋತ್ತಮ ‘ಸಾರ್, ಹಾಗೆ ಬರೆದ್ರೆ ಜನ ನಗೋದಿಲ್ವೆ’ ಅಂತ ಕೇಳಿದಾಗ ಕೈಲಾಸಂ ‘ಜನ ನಗ್ಲೀ ಅಂತಾನೆ ಹೀಗೆ ಬರೆಸ್ತಾ ಇರೋದು, ತೆಪ್ಗೆ ಹೇಳ್ಡಹಾಗೆ ಬರ್ಕೊ ರಾಜಾ’ ಅಂತ ಆ ಶಿಷ್ಯನ ಬಾಯಿ ಮುಚ್ಚಿಸಿದರು.

‘ಆಧುನಿಕ ರಂಗಭೂಮಿಯ ಹರಿಕಾರ’

ಇವರು ಬರೆದ ನಾಟಕಗಳು ಅನೇಕ. ತಾವು ಬರೆದ ನಾಟಕಗಳಲ್ಲಿ ವ್ಯವಹಾರಿಕ ಭಾಷೆಯನ್ನು ಉಪಯೋಗಿಸಿಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ಕೊನೆಗೆ ಅತ್ಯಂತ ಸ್ವಾರಸ್ಯಕರವಾಗಿದ್ದ ಇವರ ನಾಟಕಗಳು ಎಲ್ಲರ ಮನವನ್ನೂ ಗೆದ್ದಿತು! ” Little lays and Plays “, ಎಂಬ ಶೀರ್ಷಿಕೆಯಲ್ಲಿ ಸಂಕಲಿತವಾಗಿರುವ ಕೈಲಾಸಂ ರವರ ಇಂಗ್ಲೀಷ್ ಕವಿತೆಗಳಲ್ಲಿ, ” The Recipe,” ಎಂಬುದು ಒಂದು ವಿಶಿಷ್ಠ ರಚನೆ. ಕೈಲಾಸಂ ರವರ ಛಾಪನ್ನು ಸ್ಪಷ್ಟವಾಗಿ ಧರಿಸಿರುವ ಈ ಕೆಳಗೆ ನಮೂದಿಸಿರುವ ಕವಿತೆ, ಗಾಂಧೀಜಿಯವರನ್ನು ಕುರಿತು ರಚಿಸಿದ್ದು. ” ನಮ್ಮ ಬಾಪೂ,” ಎನ್ನುವ ಶೀರ್ಷಿಕೆಯಲ್ಲಿನ ಪದ್ಯವನ್ನು ರಾಜರತ್ನಂ ರವರು, ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಮಾಡಿದ್ದಾರೆ. ‘ಲೋಕತಾರಕ ಬಾಪೂ,’ ಎಂಬ ಅಪರೂಪದ ಖಾದ್ಯ, ನಂತರ ಸರ್ವರಿಗೂ ಖುಷಿಕೊಟ್ಟಿತು.

‘The Recipe’

-Bapu.

Into a bare handful of lones and skin

Pour just an ounce or so flesh and blood ;

Put in a heart love-full as SEA in flood ;

Likewise a mind sea-deep and free from sin ;

Fix on two jumboo ears …two goo goo eyes’

Paint on a smile of babe at mother’s breast ;

Inclose a soul that caps Himavat’s crest

And speaks with tongue which honey’s sweet defies !

The ‘Stuffing ?’ : Goat’s milk, soya beans and dates

Now, cover to brim with suffring human’s tears

And take this dish in gool for one score years ;

Take out and ‘garnish’ it with pariah mates ;

wrap up in rag, prop up with like bamboo

And serve ; The world Redeemen ; our Baapoo !
ನಮ್ಮ ಬಾಪೂ’

ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ ; ಅದಕೆ ಸುರಿ

ಮೂರು ನಾಲ್ಕೋ ಚಮಚ ರಕ್ತ ಮಾಂಸ ; ಜೊತೆಗಿರಿಸು

ಪಾಪಮಂ ನೆರೆತೊರೆದ ಕಡಲಿನಾಳದ ಮನಸ,

ನೆರೆಬಂದ ಕಡಲಿನೊಲ್ ಪ್ರೇಮಮಂ ತುಂಬಿದೆದೆಯ ;

ಹಚ್ಚು-ಮೊರಕಿವಿಯೆರಡ, ಎರಡು ಪಿಳಿ ಪಿಳಿ ಕಣ್ಣ ;

ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ

ಒಳಗಿರಿಸು ಜೇನು ನಗುವ ವೊಲಿನಿಯ ನಾಲಗೆಯ,

ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ
ಪೂರಣವೋ ? ಸೋಯಬೀನ್ಸ್, ಖರ್ಜೂರ, ಮೇಕೆಹಾಲು  !

ಮೇಲಿನಂಚಿನವರೆಗು ದುಖಿಃಗಳ ಕಣ್ಣೀರು ತುಂಬಿ

ಪಕ್ವ ಮಾಡೀ ಇದನು ಸೆರೆಮನೆಯೊಳಿಂದಿನಿತು ವರುಷ

ಹೊರಗೆ ತೆಗೆ ಪರಯ ಪರಿವಾರದಿಂ ಗಮಗಮಿಸಗೊಳಿಸಿ,

ಚಿಂದಿಯಂ ಸುತ್ತಿ, ಸೆಳೆಬೊಂಬಿನಾಲಂಬವನ್ನಿತ್ತು

ಬಡಿಸು ತಾ ! ಅವನ್ ಕಾಣ್ ! ಲೋಕ ತಾರಕ ! ನಮ್ಮ ಬಾಪೂ !
-ಟಿ. ಪಿ. ಕೈಲಾಸಂ.

ಅನುವಾದ : ಜಿ. ಪಿ. ರಾಜರತ್ನಂ.

ಇವರು ರಚಿಸಿದ ನಾಟಕಗಳು

 • ೧೯೧೮ – ‘ಟೊಳ್ಳುಗಟ್ಟಿ'(ಅಥವಾ ‘ಮಕ್ಕಳ ಸ್ಕೂಲ್ ಮನೇಲಲ್ವೇ’)ಆಧುನಿಕ ಕನ್ನಡ ನಾಟಕ.
 • ೧೯೨೦ – ‘ಪೋಲಿ ಕಿಟ್ಟಿ’ — ಈ ನಾಟಕವು ಕನ್ನಡದಲ್ಲಿ ಸಿನಿಮಾ ಆಗಿ ಕೂಡ ಹೊರಬಂದು ಯಶಸ್ಸು ಕಂಡಿದೆ.
 • ೧೯೨೯ – ‘ಕಾಳಮ್ನ ಐಕ್ಳು’,’ಒಲವಿನ ಕೊಲೆ’.
 • ಇತರೆ
  • ‘ಬಹಿಷ್ಕಾರ’
  • ‘ನಂಬಾಯ್ಸು’
  • ‘ಮೊಮ್ಮಗಳ ಮುಯ್ಯಿ’
  • ‘ಹರಿಶ್ಚಂದ್ರನ ಹಿಂಸಾ’
  • ‘ಹೋಂರೂಲು’
  • ‘ಗಂಡಸ್ಕತ್ರಿ’
  • ‘ವೈದ್ಯನ ವ್ಯಾಧಿ’
  • ‘ತಾಲಿಕ್ಕಟ್ಟೋಕ್ಕೂಲೀನೇ’
  • ‘ಹುತ್ತದಲ್ಲಿ ಹುತ್ತ’
  • ‘ಬಂಡ್ವಾಳ್ವಿಲ್ಲದ ಬಡಾಯಿ’
  • ‘ಅಮ್ಮಾವ್ರಗಂಡ’
  • ‘ಸೀಕರ್ಣೆ ಸಾವಿತ್ರಿ’
  • ‘ಸತ್ತವನ ಸಂತಾಪ’
  • ‘ಅನುಕೂಲಕ್ಕೊಬ್ಬಣ್ಣ’
  • ‘ನಮ್‍ಕಂಪ್ನಿ’
  • ‘ನಂಕ್ಲಬ್ಬು’
  • ‘ನಂ‍ಬ್ರಾಹ್ಮಣ್ಕೆ’
  • ‘ಸೂಳೆ’


Advertisements

About sujankumarshetty

kadik helthi akka

Posted on ಏಪ್ರಿಲ್ 15, 2009, in "ಇ-ಲೋಕ" ಕವಿಗಳ “ಕನ್ನಡಲೋಕ”. Bookmark the permalink. 1 ಟಿಪ್ಪಣಿ.

 1. Hi, interesting post. I have been pondering this issue,so thanks for writing. I’ll definitely be coming back to your blog.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: