ಬೀchi

Beechi

ಬೀchi

“ಹಾಸ್ಯ ಭೊಪತಿ

ಬೀchi – ೧೯೧೩೧೯೮೦

ಬೀchiಯವರ ಪೂರ್ಣ ಹೆಸರು ಭೀಮಸೇನ ರಾಯಸಂ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಇವರ ಜನ್ಮಸ್ಥಳ. ತಂದೆ ಶ್ರೀನಿವಾಸರಾವ್, ತಾಯಿ ಭಾರತಮ್ಮ. ಪೋಲಿಸ್ ಇಲಾಖೆಯಲ್ಲಿ ಕೆಲಸದಲ್ಲಿದ್ದರು. ಪತ್ನಿ ಸೀತಾಬಾಯಿ.

ತಮ್ಮ ಮೂವತ್ತೇಳನೆಯ ವಯಸ್ಸಿನವರೆಗೆ ಬೀಚಿಯವರು ಕನ್ನಡದಲ್ಲಿ ಬರೆಯುವುದಿರಲಿ, ಕನ್ನಡ ಪುಸ್ತಕವನ್ನು ಓದುವುದೂ ಅವಮಾನ ಎಂದು ಭಾವಿಸಿದ್ದರಂತೆ. ಬೀಚಿಯವರು ಮೊಟ್ಟಮೊದಲು ಓದಿ, ಪ್ರಭಾವಿತರಾದ ಪುಸ್ತಕ ಅ.ನ. ಕೃಷ್ಣರಾಯರು ಬರೆದ ಕಾದಂಬರಿ ಸಂಧ್ಯಾರಾಗ. ಆ ಘಟನೆಯ ಬಗ್ಗೆ ಬೀಚಿಯವರ ಮಾತುಗಳಿವು –

ಇಲಸ್ಟ್ರೇಟೆಡ್ ವೀಕ್ಲಿ ಪತ್ರಿಕೆಯನ್ನು ಕೈಲಿ ಹಿಡಿದು ಅದರಲ್ಲಿ ಕನ್ನಡಪುಸ್ತಕವನ್ನು ಬಚ್ಚಿಟ್ಟು ಓದಲಾರಂಭಿಸಿದೆ. ಆರಂಭಿಸಿದುದಷ್ಟೇ ನನಗೆ ಗೊತ್ತು. ಅದೆಷ್ಟು ಬಾರಿ ಕಂಣು ತೇವಗೊಂಡವೋ , ಎಷ್ಟು ಸಲ ಹೃದಯ ಮಿಡಿಯಿತೋ ನನಗೆ ಲೆಕ್ಕ ಸಿಕ್ಕಲಿಲ್ಲ. ಪುಸ್ತಕ ಮುಗಿದ ಮೇಲೆಯೇ ನನಗೆ ಎಚ್ಛರ. ಆ ಪುಸ್ತಕ ಯಾವುದು? ಸಂಧ್ಯಾರಾಗ, ಗ್ರಂಥಕರ್ತ ಅ.ನ. ಕೃಷ್ಣರಾಯ.

ಬೀchi ಬರಹಗಳು

ಬೀchiಯವರು ನಮ್ಮಿಂದ ಕಣ್ಮರೆಯಾಗಿದ್ದರೂ , ತಮ್ಮ ಹಾಸ್ಯ ಸಾಹಿತ್ಯ, ನಗೆಚಟಾಕಿಯ ಮೂಲಕ ಇಂದಿಗೂ ನಮ್ಮೊಂದಿಗಿದ್ದಾರೆ. ಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದುಕೊಟ್ಟವರು ಬೀchi. ಬೀಚಿ ಬರಹಗಳ ನಾಯಕ ತಿಂಮ. ತಿಂಮ ಎಂದರೆ ಬೀchi. ಬೀchi ಎಂದರೆ ತಿಂಮ. ತಿಂಮನ ಪ್ರಸಂಗಗಳನ್ನು ಓದಿ ನಗದಿದ್ದವರೇ ಇಲ್ಲ. ಹಾಗೂ ನಗಲಿಲ್ಲವೆಂದರೆ ಅವರು ಬೀಚಿಯವರೇ ಹೇಳುವಂತೆ – ನಗೆ-ಶತ್ರು.ಸುಧಾ ವಾರಪತ್ರಿಕೆಯ ನೀವು ಕೇಳಿದಿರಿಅಂಕಣದಲ್ಲಿ, ಓದುಗರ ಪ್ರಶ್ನೆಗಳಿಗೆ ಬೀಚಿಯವರು ಉತ್ತರಿಸುತ್ತಿದ್ದ ರೀತಿ ಅವಿಸ್ಮರಣೀಯ.
ಹಾಸ್ಯದ ಮಾತುಗಳಿಂದ ಜನ ಸಮುದಾಯವನ್ನು ನಗಿಸುವುದಷ್ಟೇ ಬೀಚಿಯವರ ಉದ್ದೇಶವಾಗಿರಲಿಲ್ಲ. ನಗಿಸುವುದರೊಂದಿಗೆ ಸಮಾಜಕ್ಕೊಂದು ಸೂಕ್ತ ಸಂದೇಶವನ್ನು ಕೊಡುವ ಕಾಳಜಿ ಅವರಲ್ಲಿತ್ತು. ಬೀchiಯವರ ಹಾಸ್ಯ ಕಾರುಣ್ಯ ಮಿಶ್ರಿತ. ಈ ರೀತಿಯ ಹಾಸ್ಯವನ್ನು ನಮ್ಮಲ್ಲಿ ಸೃಷ್ಠಿಸಿದವರು ಇಬ್ಬರೇ ಇಬ್ಬರು. ಒಬ್ಬರು ಬೀಚಿ ಮತ್ತೊಬ್ಬರು ಟಿ.ಪಿ.ಕೈಲಾಸಂ

ಪ್ರಮುಖವಾಗಿ ವಿಡಂಬನಾ ಶೈಲಿಯಲ್ಲಿರುವ ಕಾದಂಬರಿಗಳು, ನಾಟಕಗಳು, ಕಥೆ-ಕವನಗಳು, ಹರಟೆ, ಆತ್ಮಚರಿತ್ರೆ – ಈ ಎಲ್ಲವೂ ಸೇರಿದಂತೆ ಒಟ್ಟಾರೆಯಾಗಿ ರಚಿಸಿರುವ ಕೃತಿಗಳ ಸಂಖ್ಯೆ ಅರವತ್ತಮೂರು.

ಮೊಟ್ಟಮೊದಲ ಕೃತಿ ದಾಸಕೂಟ. ಈ ಚೊಚ್ಚಿಲು ಕಾದಂಬರಿಗೆ ಮೆಚ್ಚಿಗೆಯ ಮುನ್ನುಡಿಯನ್ನು ಬರೆದು ಹರಸಿದವರು ಅ.ನ.ಕೃಷ್ಣರಾಯರು. ಬೀಚಿ ಎಂದರೆ ಅನಕೃಗೆ ಬಲು ಅಚ್ಚುಮೆಚ್ಚು.

ಬೀಚಿಯವರು ೧೯೮೦ ನವೆಂಬರ್ ೭ರಂದು ದಿವಂಗತರಾದರು.

ಕಾದಂಬರಿಗಳು

 • ದಾಸ ಕೂಟ
 • ಬೆಳ್ಳಿ ತಿಂಮ ನೂರೆಂಟು ಹೇಳಿದ
 • ತಿಂಮನ ತಲೆ
 • ತಿಂಮಾಯಣ
 • ನನ್ನ ಭಯಾಗ್ರಫಿ (ಆತ್ಮಚರಿತ್ರೆ)
 • ಉತ್ತರಭೂಪ
 • ಅಂದನಾ ತಿಂಮ
 • ತಿಂಮ ರಸಾಯನ
 • ಸತೀಸೂಳೆ
 • ಮೇಡಮ್ಮನ ಗಂಡ
 • ಹೆಣ್ಣು ಕಾಣದ ಗಂಡು
 • ಸರಸ್ವತಿ ಸಂಹಾರ
 • ಮಾತ್ರೆಗಳು
 • ಮಾತನಾಡುವ ದೇವರುಗಳು
 • ದೇವರಿಲ್ಲದ ಗುಡಿ
 • ಖಾದಿ ಸೀರೆ
 • ಸತ್ತವನು ಎದ್ದು ಬಂದಾಗ
 • ಟೆಂಟ್ ಸಿನಿಮಾ
 • ಬಿತ್ತಿದ್ದೇ ಬೇವು
 • ಬೆಂಗಳೂರು ಬಸ್ಸು
 • ಆರಿದ ಚಹ
 • ನರಪ್ರಾಣಿ
 • ಬ್ರಹ್ಮಚಾರಿ
 • ಕನ್ನಡ ಎಂಮ್ಮೆ
 • ಆತೊ

ನಾಟಕಗಳು

 • ರೇಡಿಯೋ ನಾಟಕಗಳು
 • ಹನ್ನೊಂದನೆಯ ಅವತಾರ
 • ಮನುಸ್ಮೃತಿ
 • ಏಕೀಕರಣ
 • ವಶೀಕರಣ
 • ಏಕೋದರರು
 • ಸೈಕಾಲಜಿಸ್ಟ್ ಸಾರಂಗಪಾಣಿ
 • ದೇವರ ಆತ್ಮಹತ್ಯೆ

ಅಂಕಣಗಳು

 • ಕೆನೆಮೊಸರು (ವಿಶಾಲ ಕರ್ನಾಟಕ)
 • ಬೇವಿನಕಟ್ಟೆ (ರೈತ)
 • ನೀವು ಕೇಳಿದಿರಿ(ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಓದುಗರ ಈ ಪ್ರಶ್ನೋತ್ತರಮಾಲಿಕೆ, ಬಳಿಕ ಉತ್ತರಭೂಪ ಎನ್ನುವ ಶೀರ್ಷಿಕೆಯಲ್ಲಿ ಸಂಕಲಿತವಾಗಿ ಪ್ರಕಟವಾಗಿದೆ.


Advertisements

About sujankumarshetty

kadik helthi akka

Posted on ಏಪ್ರಿಲ್ 15, 2009, in "ಇ-ಲೋಕ" ಕವಿಗಳ “ಕನ್ನಡಲೋಕ”. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: