ಈಗ ಮದುವೆಯೂ ಗುತ್ತಿಗೆ, ಕುಟುಂಬ ವ್ಯವಸ್ಥೆ ಇಕ್ಕಟ್ಟಿಗೆ – Marriage : Past, Present and Future!

ಡಿಂಕ್ಸ್‌ಗಳಾಗುವವರಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚು. ವಿಚ್ಛೇದನ ಪಡೆದು ಮತ್ತೊಂದು ಮದುವೆಯಾಗುವುದು ಸುಲಭ. ಯಾಕೆಂದ್ರೆ ಮರುಮದುವೆಗೆ ಅಡ್ಡವಾಗುವವರು ಮಕ್ಕಳು. ಅವರೇ ಇಲ್ಲವೆಂದ ಮೇಲೆ ಅಡ್ಡಿಯಾದರೂ ಏತಕ್ಕೆ? ಅವರಿಗೆ ಒಂದು ತಿರುವಿನಲ್ಲಿ ಮಗು ಬೇಕೆಂದು ಅನಿಸಲಾರಂಭಿಸುತ್ತದೆ. ಆದರೆ ಸಂಗಾತಿ ಅದಕ್ಕೆ ವಿರೋಧಿಸುತ್ತಾನೆ/ಳೆ. ಇಬ್ಬರಿಗೂ ಬೇಕೆನಿಸಿದ ಕಾಲ ಮೀರಿರುತ್ತದೆ.

ಮದುವೆಯಾದರೂ ಮಕ್ಕಳು ಬೇಡವೆಂಬ ಡಿಂಕ್ಸ್‌ಗಳಿಗೆ ವಿರುದ್ಧ ಸಿದ್ಧಾಂತದ ಮತ್ತೊಂದು ಮದುವೆಯಿದೆ. ಅದೆಂದರೆ ಮದುವೆಯಾಗದೇ ಮಕ್ಕಳನ್ನು ಪಡೆಯುವುದು. ಮಗು ಬೇಕೆನಿಸಿದರೆ, ತಾಯಿಯಾಗಬೇಕೆನಿಸಿದರೆ ಮದುವೆಯೇ ಯಾಕಾಗಬೇಕು ಆಗದೇ ತಾಯಿಯಾಗಬಹುದಲ್ಲ? ಮದುವೆಯ ತಾಪತ್ರಯ, ಗಂಡನ ಕಿರಿಕಿರಿಯಿಲ್ಲದೇ, ಆಸರೆಗಾಗಿ, ಕರುಳಕುಡಿಗಾಗಿ ಮಗುವನ್ನು ಪಡೆವ ಈ ‘ಏಕಮುಖ ದಾಂಪತ್ಯ’ವೂ ಜನಪ್ರಿಯವಾಗುತ್ತಿದೆ. ಹಿಂದಿ ಚಿತ್ರತಾರೆ ನೀನಾಗುಪ್ತಾ ಕ್ರಿಕೆಟಿಗ ವಿವಿಯನ್‌ ರಿಚರ್ಡ್ಸ್‌ನನ್ನು ಮದುವೆಯಾಗದೇ ಹೆಣ್ಣು ಮಗುವನ್ನು ಪಡೆದದ್ದು ನೆನಪಿರಬಹುದು. ಈಗಂತೂ ಹೀಗೆ ತಾಯಿಯಾಗುವವರನ್ನು ‘ಮಹಾಧೈರ್ಯವಂತೆ’ ಎಂದೇ ಚಿತ್ರಿಸಲಾಗುತ್ತಿದೆ. (ಖಂಡಿತವಾಗಿಯೂ ಇದಕ್ಕೆ ಧೈರ್ಯಬೇಕು. ಗಂಡನಿಲ್ಲದಿರುವುದರಿಂದ ಭಂಡ ಧೈರ್ಯವೆನ್ನಬಹುದು)

ಹಣಕ್ಕಾಗಿ ತಾಯಿಯಾಗುವ ಬಾಡಿಗೆ ಅಮ್ಮಂದಿರು surrogate woman ಬಗ್ಗೆ ಈ ಅಂಕಣದಲ್ಲೇ ಹಿಂದೊಮ್ಮೆ ಬರೆದಿದ್ದೆ. ಹೆಂಡತಿಯ ಅನುಮತಿಯಾಂದಿಗೆ ಬೇರೊಬ್ಬ ಹೆಂಗಸಿನ ಗರ್ಭವನ್ನು ಬಾಡಿಗೆಗೆ ಪಡೆದು ಮಗುವನ್ನು ಹೊಂದುವ ಈ ಪದ್ಧತಿಯು ನಗರಪ್ರದೇಶಗಳಲ್ಲಿ ಸ್ವೀಕೃತವಾಗುತ್ತಿವೆ.

ಇವೆಲ್ಲವುಗಳ ಪರಿಣಾಮ ಬೀಳುತ್ತಿರುವುದು ನಮ್ಮ ವ್ಯವಸ್ಥೆ ಮೇಲೆ. ತನ್ಮೂಲಕ ನಮ್ಮ ಸಮಾಜದ ಮೇಲೆ. ಮದುವೆ ಹೇಗೆ ಸಮಾಜ ಸ್ವಾಸ್ಥ್ಯ ಕೆಡಿಸುತ್ತಿದೆಯೆಂಬುದಕ್ಕೆ ಇದು ನಿದರ್ಶನ. ಭಾರತೀಯ ಸಮಾಜದ ಆಧಾರವೆಂದರೆ ಸುಖಿ ಸಂಸಾರ, ದಾಂಪತ್ಯ. ಗಂಡ-ಹೆಂಡತಿಯರು ತಮ್ಮ ದಾಂಪತ್ಯದ 25,50, 60ನೇ ವರ್ಷಗಳನ್ನು ಆಚರಿಸಿಕೊಳ್ಳುವುದು ತೀರಾ ಸಾಮಾನ್ಯ. ಪಾಶ್ಚಾತ್ಯರಿಗೆ ಇದು ತೀರಾ ಸೋಜಿಗದ ವಿಚಾರ.

ಖ್ಯಾತ ತಾರೆ ಎಲಿಜಬೆತ್‌ ಟೇಲರ್‌ ಎಂಟನೆ ಮದುವೆಯಾದಾಗ, ನಿಮಗೇನನ್ನಿಸುತ್ತಿದೆ ಎಂದು ಪತ್ರಕರ್ತರು ಕೇಳಿದಾಗ, ‘ಕೆಲವರಂತೂ ಒಂದೇ ಗಂಡನ ಜೊತೆ ಹತ್ತಾರು ವರ್ಷ ಹೇಗೆ ಜೀವಿಸುತ್ತಾರೋ Its boring ಎಂದಿದ್ದಳು. ಇಂಥ ಮನಸ್ಥಿತಿಯವರಿಗೆ 25, 50 ವರ್ಷಗಳ ದಾಂಪತ್ಯ ಜೀವನ ಮುಗಿಸಿದವರನ್ನು ಕಂಡರೆ ಅಚ್ಚರಿಯಾಗದೇ ಇರದು. ದುರ್ದೈವವೆಂದರೆ ನಮ್ಮ ಸಮಾಜದೊಳಗೂ ಮದುವೆಯ ಈ ರೀತಿಯ ನಾನಾ ಅವತಾರಗಳು ಕಾಲಿಡುತ್ತಿರುವುದು.

‘ಇಂಡಿಯಾ ಟುಡೇ’ ಪತ್ರಿಕೆಯ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಒಂದು ಕೋಟಿ ಜೋಡಿಗಳು ಸತಿ-ಪತಿಯರಾಗುತ್ತಾರೆ. ಇಪ್ಪತ್ತೆೈದು ವರ್ಷಗಳ ಹಿಂದೆ ಶೇ.5ರಷ್ಟಿದ್ದ ವಿಚ್ಛೇದನ ಈಗ ಮೂರುಪಟ್ಟು ಹೆಚ್ಚಾಗಿದೆ. ಪ್ರತಿವರ್ಷ ಒಂದೂವರೆ ಲಕ್ಷ ಹೆಂಗಸರ ವಿರುದ್ಧ ದಾಂಪತ್ಯ ಸಂಬಂಧಿ ದೌರ್ಜನ್ಯಗಳಾಗುತ್ತಿವೆ. ಐದು ಕೋಟಿ ಹೆಂಗಸರು ಗಂಡ, ಅತ್ತೆ-ಮಾವನ ಕಾಟದಿಂದ ನರಳುತ್ತಿದ್ದಾರೆ. ಆ ಪೈಕಿ ಕೇವಲ ಶೇ. 0.01ರಷ್ಟು ಪ್ರಕರಣ ಮಾತ್ರ ಬೆಳಕಿಗೆ ಬರುತ್ತವೆ. ಶೇ. 80ರಷ್ಟು ಹೆಂಗಸರು ಬೇರೆ ದಾರಿ ಕಾಣದೆ ಗಂಡನ ಜತೆಗೆ ರಾಜಿ ಮಾಡಿಕೊಂಡು ಒಲ್ಲದ ಮನಸ್ಸಿನಿಂದ ಸಂಸಾರ ಮುಂದುವರಿಸುತ್ತಾರೆ. ಮದುವೆಯೆಂಬುದು ಇವರ ಪಾಲಿಗೆ ದುಃಸ್ವಪ್ನ. ವರದಕ್ಷಿಣೆ ಕಿರುಕುಳ, ಹಿಂಸೆಗೆ ಅದೆಷ್ಟೋ ಲಕ್ಷ ಮಹಿಳೆಯರು ಬಲಿಯಾಗುತ್ತಾರೆ.

ಇವನ್ನೆಲ್ಲ ಗಮನಿಸಿದರೆ, ಮದುವೆಯಾದವರು ಈ ಬಂಧನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಹಾಗೂ ಆಗದವರು ಬಡಿಸಿಕೊಂಡು ಬಂಧಿಗಳಾಗಲು ಪ್ರಯತ್ನಿಸುತ್ತಾರೆಂಬ ವಕ್ರತುಂಡೋಕ್ತಿ ನೆನಪಾಗುತ್ತದೆ. ಈ ಮಧ್ಯೆ ಮದುವೆಯ ಸುತ್ತ ಹತ್ತಾರು ಕಾನೂನುಗಳು, ಸಾವಿರಾರು ತೀರ್ಪುಗಳು, ಕೌಟುಂಬಿಕ ನ್ಯಾಯಾಲಯ… ಎಂಬ ಜಣುಕು ಜಂಜಾಟಗಳು. ಮೊನ್ನೆ ಮೊನ್ನೆ ಜಾರಿಗೆ ಬಂದಿರುವ ಕಾನೂನಿನ ಪ್ರಕಾರ, ಕೆ.ಎಸ್‌. ನರಸಿಂಹಸ್ವಾಮಿ ಬರೆದಂತೆ,

‘ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ’

ಎಂದು ಕೂಗಿದರೆ ಆಕೆ ನಿಮ್ಮ ಮೇಲೆ ಕೇಸು ಹಾಕಬಹುದು. ಏರಿದ ದನಿಯಲ್ಲಿ ಹೆಂಡತಿಯನ್ನು ಕರೆದರೂ ಸಾಕು, ಆಕೆ ನಿಮ್ಮನ್ನು ಕಂಬಿ ಎಣಿಸುವಂತೆ ಮಾಡಬಹುದು.

ಎಲ್ಲಿಗೆ ಬಂತು ಮದುವೆ?

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: