ನಗೆಗಿಂತ ಮಿಗಿಲಾದ ಧರ್ಮ, ಸಂಭ್ರಮ ಯಾವುದಿದೆ ಹೇಳಿ? – Smile costs nothing… Keep Smiling!

2006 ಕಾಲಗರ್ಭದಲ್ಲಿ ಲೀನಾವಾಗುತ್ತಿದೆ. 2007 ಕೈಬೀಸಿ ಕರೆಯುತ್ತಿದೆ. ನೀವಂತೂ ಹೊಸ ವರ್ಷವನ್ನು ನಗುವಿನಿಂದಲೇ ಆರಂಭಿಸಿ… ನಿಮ್ಮ ನಗುವಿಗಾಗಿ ಒಂದಿಷ್ಟು ನಗೆ ಚಟಾಕಿಗಳು.
Smile costs nothing... Keep Smiling!ಹೊಸ ವರ್ಷ ಕುಕ್ಕರಗಾಲಿನಲ್ಲಿ ಕುಳಿತಿದೆ. ಎಲ್ಲೆಡೆ ಸಂಭ್ರಮ, ಸಡಗರ. ಹೊಸ ವರ್ಷದ ಸ್ವಾಗತಕ್ಕೆ ಮನಸ್ಸಿನಲ್ಲಿ ಏನೇನೋ ಸಿದ್ಧತೆ, ಸ್ಕೀಮು. ಇವುಗಳ ಸಾಕಾರಕ್ಕೆ ರಜೆಗಳ ಹಿಂಡು. ಮನೆಸೆಲ್ಲ ನಿರಾಳ. ಏನೇ ಹೊಸ ಕೆಲಸವಿರಲಿ, ಹೊಸವರ್ಷದಲ್ಲಿ ಮಾಡೋಣ ಬಿಡಿ ಎಂಬ ಮೂಡು. ಎರಡು ಸಾವಿರದ ಆರನ್ನು ಕಳಿಸಿಕೊಡುವ ಈ ಹೊತ್ತಿನಲ್ಲಿ, ಮುಂದಿನದನ್ನು ಎದುರುಗೊಳ್ಳು ಈ ಸಂದರ್ಭದಲ್ಲಿ ಉಳಿದೆಲ್ಲ ವಿಷಯ ಬದಿಗಿಟ್ಟು ಕೆಲವು ತಮಾಷೆಗಳನ್ನು ನಿಮಗಾಗಿ ಕೊಡುತ್ತಿದ್ದೇನೆ. ನಿಮಗೆ ಇಷ್ಟವಾದೀತು ಅಂತ.

ನಗೆಗಿಂತ ದೊಡ್ಡದೇನಿದೆ ಹೇಳಿ?

*

ಮೂವರು ಹೆಂಗಸರು ತಮ್ಮತಮ್ಮ ಗಂಡು ಮಕ್ಕಳ ಬಗ್ಗೆ ಅಭಿಮಾನದಿಂದ ಮಾತಾಡುತ್ತಿದ್ದರು. ಮೊದಲನೆಯವಳು ಹೇಳಿದಳು -ಆತ ಸನ್ಯಾಸಿಯಾಗಲು ಒಪ್ಪಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಆತನನ್ನು ಗೌರವದಿಂದ, ಪೂಜ್ಯಭಾವದಿಂದ ಕಾಣುವಾಗ ನನಗೆ ಅಷ್ಟೇ ಸಮಾಧಾನ.

ಎರಡನೆಯವಳು ಹೇಳಿದಳು- ನನ್ನ ಮಗ ಈಗ ಮಠಾಧೀಶನಾಗಲು ಒಪ್ಪಿರುವುದು ಅತೀವ ಸಂತಸದ ವಿಚಾರ. ಈಗ ಎಲ್ಲರೂ ಆತನ ಮುಂದೆ ತಲೆಬಾಗುತ್ತಾರೆ. ಪಾದಮುಟ್ಟಿ ನಮಸ್ಕಿರಿಸುತ್ತಾರೆ. ಅದನ್ನು ನೋಡಿದರೆ ನನಗೆ ಮನಸ್ಸಿಗೆ ಸಮಾಧಾನವಾಗುತ್ತದೆ.

ಮೂರನೆಯವಳು ಹೇಳಿದಳು -ನನ್ನ ಮಗ ಆರೂವರೆ ಅಡಿ ಎತ್ತರವಾಗಿದ್ದಾನೆ. ಆತ ಎಲ್ಲಿಗೆ ಹೋಗಲಿ, ಬರಲಿ, ಆತನನ್ನು ನೋಡಿದ ಕೂಡಲೇ ಜನ ತಮ್ಮಷ್ಟಕ್ಕೇ ಹೇಳಿಕೊಳ್ಳುತ್ತಾರೆ, ‘ಓ ಮೈ ಗಾಡ್‌!!!’.

*

ಇಬ್ಬರ ಮಧ್ಯೆ ಮಾತುಕತೆ ಸಾಗಿತ್ತು.

‘ಒಬ್ಬನ ಅಂತ್ಯಸಂಸ್ಕಾರವನ್ನು ಸಕಲ ರಾಜ ಮರ್ಯಾದೆಯಿಂದ ಮಾಡಬೇಕೆಂದರೆ ಆತ ಕನಿಷ್ಠ ಏನಾಗಿರಬೇಕು’ ಎಂದು ಕೇಳಿದ. ಅದಕ್ಕೆ ಮತ್ತೊಬ್ಬ ಹೇಳಿದ ‘ಆತ ಅಧಿಕಾರದಲ್ಲಿದ್ದಿರಬೇಕು. ಮುಖ್ಯಮಂತ್ರಿಯೋ, ಪ್ರಧಾನಿಯೋ, ರಾಜ್ಯಪಾಲನೋ, ರಾಷ್ಟ್ರಪತಿಯೋ ಆಗಿರಬೇಕು’. ಮೊದಲನೆಯವನು ಹೇಳಿದ -‘ಹೌದಾ, ಕನಿಷ್ಠಪಕ್ಷ ಆತ ಸತ್ತಿರಬೇಕೆಂದು ನಾನು ಭಾವಿಸಿದ್ದೆ’.

*

ಕೆಟ್ಟ ಮೇಲೆ ಬಂತು ಅಂತ ಎಲ್ಲರೂ ಹೇಳುತ್ತಾರೆ. ಅದಕ್ಕಿಂತ ಮುಂಚೆ ಬುದ್ಧಿ ಬರಬೇಕಾದರೆ ಏನು ಮಾಡಬೇಕು? ಮುಂಚಿತವಾಗಿ ಕೆಡಬೇಕು.

*

ಕಿಲೂ ರಾತ್ರಿ ಮನೆಗೆ ಬಂದ. ಕರೆಂಟ್‌ ಇರಲಿಲ್ಲ. ಮೊಂಬತ್ತಿ ಹಚ್ಚಿದ. ವಿಪರೀತ ಹಸಿವಾಗಿತ್ತು. ಮನೆಯಲ್ಲಿ ಊಟವಿರಲಿಲ್ಲ. ಮಾವಿನಹಣ್ಣು ಕತ್ತರಿಸಿದ. ಅದರಲ್ಲಿ ಹುಳವಿತ್ತು. ಎರಡನೆಯ ಹಣ್ಣು ಕತ್ತರಿಸಿದ. ಅದರಲ್ಲೂ ಹುಳವಿತ್ತು. ಮೂರನೆಯದನ್ನು ಕತ್ತರಿಸಿದ ಅದರಲ್ಲೂ ಹುಳವಿತ್ತು. ಮೊಂಬತ್ತಿ ಆರಿಸಿ ನಾಲ್ಕನೆಯ ಹಣ್ಣನ್ನು ಕತ್ತರಿಸಿ ತಿಂದ.

ನಾಲ್ಕು ನಿಮಿಷಗಳ ನಂತರ ಅಣುಬಾಂಬ್‌ ದಾಳಿಯಾಗುತ್ತದೆ ಅಂದ್ರೆ ಏನು ಮಾಡುತ್ತೀರಿ? -ಹೆಂಡತಿ ಗಂಡನಿಗೆ ಕೇಳಿದಳು.

ನಿನ್ನನ್ನು ಪ್ರೀತಿಸುತ್ತೇನೆ ಎಂದ ಗಂಡ.

ಅದಕ್ಕೆ ಹೆಂಡತಿ ಕೇಳಿದಳು -ಉಳಿದ ಮೂರು ನಿಮಿಷ ಏನು ಮಾಡುತ್ತೀರಿ?

*

ಮುಲ್ಲಾ ನಸ್ರುದ್ದೀನ್‌ ಮನೆಗೆ ಬಂದ ತಕ್ಷಣ ಆತನ ಹೆಂಡತಿ ಅವನ ಅಂಗಿಯನ್ನೆಲ್ಲ ನೋಡಿ, ಅದರಲ್ಲಿ ಏನಿರಬಹುದೆಂದು ಹುಡುಕುತ್ತಿದ್ದಳು. ಕಾಗದದಲ್ಲಿ ಫೋನ್‌ ನಂಬರ್‌ ಕಂಡರೆ ‘ಇದ್ಯಾವ ಹೆಂಗಸಿನದು’ ಎಂದು ಕೇಳುತ್ತಿದ್ದಳು. ಕೂದಲು ಸಿಕ್ಕರೆ ‘ಇಂದು ಯಾವಳ ಜತೆ ಮಲಗಿ ಬಂದೆ ಹೇಳು’ ಎಂದು ಕೇಳುತ್ತಿದ್ದಳು. ಮುಲ್ಲಾನ ಮೇಲೆ ಅಂಥ ಸಂದೇಹ.

ಒಂದು ದಿನ ಮುಲ್ಲಾನ ಕಿಸೆಯ್ಲಿ ಏನೂ ಸಿಗಲಿಲ್ಲ. ಹೆಂಡತಿ ಮುಲ್ಲಾನಿಗೆ ಹೊಡೆಯಲಾರಂಭಿಸಿದಳು. ಮುಲ್ಲಾನಿಗೆ ಹೆಂಡತಿ ಯಾಕೆ ಹೊಡೆಯುತ್ತಿದ್ದಾಳೆಂಬುದೇ ಗೊತ್ತಾಗಲಿಲ್ಲ. ಕಾರಣ ಕೇಳಿದ್ದಕ್ಕೆ, ಹೇಳಿದಳು -‘ಇಂದು ನೀನು ಬೋಳು ತಲೆ ಹೆಂಗಸಿನ ಜತೆ ಮಲಗಿ ಬಂದೆ ಹೌದಲ್ವಾ?’

*

ಯುವತಿಯಾಬ್ಬಳು ಪೊಲೀಸ್‌ ಅಧಿಕಾರಿ ಬಳಿ ಹೋಗಿ, ‘ಅಲ್ಲಿದ್ದಾನಲ್ಲ, ಅವನು ನನಗೆ ತೀವ್ರ ಅವಮಾನ ಮಾಡುತ್ತಿದ್ದಾನೆ. ದಯವಿಟ್ಟು ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ’ಎಂದಳು. ಅದಕ್ಕೆ ಪೊಲೀಸ್‌ ಅಧಿಕಾರಿ ‘ನಾನೂ ನೋಡ್ತಾ ಇದ್ದೇನೆ. ಅವನು ನಿನ್ನ ಕಡೆ ಒಂದು ಸಲ ಕೂಡ ಕತ್ತೆತ್ತಿ ನೋಡಿಲ್ಲವಲ್ಲ’ ಅಂದ. ಅದಕ್ಕೆ ಯುವತಿ ಕೇಳಿದಳು ‘ಅದು ಅವಮಾನವಲ್ಲವೇ?’

*

ಮರ್ಫಿಗೆ ತ್ರಿವಳಿಗಳು ಜನಿಸಿದ್ದಕ್ಕೆ, ದೇವಸ್ಥಾನದ ಅರ್ಚಕ ಅಭಿನಂದಿಸುತ್ತಾ, ‘ಕೊನೆಗೂ ದೇವರು ನಿಮ್ಮ ಪಾಲಿಗೆ ನಗು ಚೆಲ್ಲಿದನಲ್ಲಾ’ ಎಂದರು. ಇದನ್ನು ಕೇಳಿದ ಮರ್ಫಿ ಹೇಳಿದ -‘ಅದು ಕೇವಲ ನಗುವಲ್ಲ, ಅಟ್ಟಹಾಸದ ನಗು’.

*

ಎಂಟು ಸಲ ವಿವಾಹವಾಗಿದ್ದ ಹಾಲಿವುಡ್‌ನ ಖ್ಯಾತ ಅಭಿನೇತ್ರಿ ಗ್ಲಾರಿಯಾ ಲವ್‌ಜಾಯ್‌ ಮುಪ್ಪಿನಲ್ಲಿ ತೀರಿಕೊಂಡಳು. ಮೊದಲ ಗಂಡ ರೆಜಿನಾಲ್ಡ್‌ನ ಸಮಾಧಿಯ ಪಕ್ಕದಲ್ಲೇ ಆಕೆಯನ್ನು ಸಮಾಧಿ ಮಾಡಲಾಯಿತು. ಆಕೆಯ ಸಮಾಧಿಗೆ ಪುಷ್ಪಗುಚ್ಚವಿರಿಸುವಾಗ ಗ್ಲಾರಿಯಾ ಲವ್‌ಜಾಯ್‌ಯ ಇಬ್ಬರು ಸ್ನೇಹಿತೆಯರಿಗೆ ಆಕೆಯ ಸಮಾಧಿ ಮೇಲೆ ಬರೆದ ವಾಕ್ಯ ಕಣ್ಣಿಗೆ, Together at last ಎಂದು ಬರೆದಿತ್ತು.

ಒಬ್ಬಳು ಕೇಳಿದಳು -‘ಗ್ಲಾರಿಯಾ ಮತ್ತು ರೆಜಿನಾಲ್ಡ್‌ ಅಷ್ಟೊಂದು ಅನ್ಯೋನ್ಯನಾಗದ್ದರಾ? ನನಗೆ ಗೊತ್ತೇ ಇರಲಿಲ್ಲ’.

ಈ ಮಾತು ಕೇಳಿದ ಮತ್ತೊಬ್ಬಳು ಹೇಳಿದಳು -‘ಡೋಂಟ್‌ ಬಿ ಸಿಲ್ಲಿ. ಆ ವಾಕ್ಯ ಆಕೆಯ ಕಾಲುಗಳನ್ನು ನೋಡಿ ಬರೆಯಲಾಗಿದೆ.’

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: