ಬಜೆಟ್‌ನಲ್ಲಿ ಮದುವೆಗೆ ಹಣ ನೀಡಿ ಪ್ರಸ್ತಕ್ಕೆ ಅಂಜಿದೊಡೆಂತಯ್ಯ! – Infrastructure Development and Karnataka Budget!

ಅಭಿವೃದ್ಧಿ ಮಂತ್ರ ನಮಗೆ ಗೊತ್ತಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಒಳ್ಳೆಯ ಅಂಶಗಳನ್ನು ಕಲಿಯುವ ಮನಸ್ಸು ನಮ್ಮವರಿಗಿಲ್ಲ. ಮೊನ್ನೆ ಯಡಿಯೂರಪ್ಪ ಮಂಡಿಸಿದ ಕರ್ನಾಟಕದ ಬಜೆಟ್‌ ನೋಡಿದರೆ, ಈ ಅಂಶಗಳು ಅರ್ಥವಾಗುತ್ತವೆ!
Vishweshwar Bhat comments on B S Yediyurappas second successive Budgetಥಾಮಸ್‌ ಫ್ರೀಡ್‌ಮನ್‌ನ ಹೆಸರು ಕೇಳಿರಬೇಕು. ಜಾಗತೀಕರಣ ಪರಿಣಾಮವನ್ನು ಇವನಷ್ಟು ಪರಿಣಾಮಕಾರಿಯಾಗಿ ಯಾರೂ ಹೇಳಿಲ್ಲ. World is Flat ಹಾಗೂ Lexus and the Olive tree ಪುಸ್ತಕಗಳಲ್ಲಿ ಈತ ಜಾಗತೀಕರಣದ ವಿಶ್ವರೂಪ ತೆರೆದಿಟ್ಟಿದ್ದಾನೆ. ಫ್ರೀಡ್‌ಮನ್‌ ಜಾಗತೀಕರಣದ ವಿವಿಧ ರೂಪಗಲನ್ನು ಪರಿಚಯಿಸುತ್ತಾ ಜಗತ್ತಿನ ಎಲ್ಲ ದೇಶಗಳಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಕ್ಷ್ಣವಾಗಿ ಗಮನಿಸುತ್ತಾನೆ.

ಜಾಗತೀಕರಣದಿಂದ ಸಂಸ್ಕೃತಿನಾಶವಾಗಿದ್ದು ಒಂದೆಡೆ ಇರಲಿ, ಆದರೆ ಅದರಿಂದಾದ ಪ್ರಯೋಜನಗಳನ್ನು ಸಹ ಆತ ಗುರುತಿಸಿದ್ದಾನೆ -‘ಜಾಗತೀಕರಣ ಇಡೀ ವಿಶ್ವವನ್ನು ಒಂದೇ ಸ್ವರೂಪದತ್ತ ನಿರ್ಮಿಸಹೊರಟಿದೆ. ಇಂದು ಅಮೆರಿಕದಲ್ಲಿದ್ದುದನ್ನು ನಾಳೆ ಹಾಂಗ್‌ಕಾಂಗ್‌ನಲ್ಲಿ ನೋಡಬಹುದು. ನಿನ್ನೆ ಜಪಾನ್‌ನಲ್ಲಿದ್ದುದನ್ನು ಇಂದು ಜೊಹಾನ್‌ಬರ್ಗ್‌ ತಲುಪಿರುತ್ತದೆ. ಜಾಗತೀಕರಣದ ದಾರಿಯಲ್ಲಿ ಟಿಂಬಕ್ಟು ಹಾಗೂ ಟ್ರಿನಿಡಾಡ್‌ ದೂರವಿಲ್ಲ. ಸಿಂಗಪುರದಲ್ಲಿ ಮಾಲ್‌ ಎದ್ದರೆ ಶಾಪಿಂಗ್‌ ಮಾಡಲೆಂದು ಪ್ಯಾರಿಸ್‌ನಿಂದ ಬರುತ್ತಾರೆ. ವಿಚಿತ್ರವೆಂದರೆ ಅಲ್ಲಿ ಸಿಗುವ ಕೆಲವು ಸಾಮಾನುಗಳು ಪ್ಯಾರಿಸ್‌ನಿಂದಲೇ ಬಂದಿರುತ್ತವೆ. ಪ್ಯಾರಿಸ್‌ನ ಈ ಸಾಮಾನುಗಳನ್ನು ತೈವಾನ್‌ನಲ್ಲಿ ಮಾಡಿರುತ್ತಾರೆ. ತೈವಾನ್‌ಗೆ ಬಿಡಿ ಭಾಗ ಭಾರತದಿಂದ ಪೂರೈಕೆಯಾಗಿರುತ್ತದೆ. ಅವನ್ನೆಲ್ಲ ಜೋಡಿಸುವವರು ಚೀನಾದವರು.’

ಥಾಮಸ್‌ ಫ್ರೀಡ್‌ಮನ್‌ ಹೀಗೆ ಬರೆಯುತ್ತಾ, ಮತ್ತೊಂದು ಒಳಸುಳಿ ಗಮನಿಸುತ್ತಾನೆ -‘ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಿರುವುದನ್ನು ಗಮನಿಸಬಹುದು. ಅಲ್ಲಿನ ಜನ ತಮ್ಮ ಊರು ಕಳೆದ ಏಳೆಂಟು ವರ್ಷಗಳಲ್ಲಿ ಗಣನೀಯವಾಗಿ ಬದಲಾಗಿದೆಯೆಂದು ಹೇಳುತ್ತಾರೆ. ಇನ್ನು ಕೆಲವೆಡೆ ಗುರುತೇ ಸಿಗದಷ್ಟು ಬದಲಾವಣೆಯಾಗಿದೆ. ನಗರ, ರಸ್ತೆ, ಕಟ್ಟಡ, ಪಾರ್ಕು, ಗಗನಚುಂಬಿಗಳಿಂದ ಚಹರೆಯೇ ಪರಿವರ್ತನೆಯಾಗಿದೆ. ಆದರೆ ಎಲ್ಲೆಲ್ಲಿ ಇಂಥ ಬದಲಾವಣೆಗಳಾಗಿವೆಯೋ ಅಲ್ಲೆಲ್ಲ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸದೇ ಯಾವುದೇ ನಗರ ಅಥವಾ ಊರಿನ ಚಹರೆ ಪರಿವರ್ತಿಸಲು ಸಾಧ್ಯವಿಲ್ಲ. ಯಾವ ಊರಲ್ಲಿ ರಸ್ತೆ, ಚರಂಡಿ, ವಿದ್ಯುತ್‌, ನೀರು, ಸೇತುವೆ, ಟೆಲಿಫೋನ್‌, ಆಸ್ಪತ್ರೆ, ಶಾಲೆ, ಆಟದ ಮೈದಾನ ಹಾಗೂ ಪಾರ್ಕುಗಳಿಲ್ಲವೋ ಆ ಊರು ಮುಂದುವರಿಯಲು ಸಾಧ್ಯವೇ ಇಲ್ಲ. ನಾನು ನೋಡಿದ ದೇಶಗಳಲ್ಲಿ ಈ ಎಲ್ಲ ಸಂಗತಿಗಳು ಎಲ್ಲೆಲ್ಲಿ ಹೆಚ್ಚಿವೆಯೋ ಆ ಎಲ್ಲ ದೇಶಗಳು ಮುಂದುವರೆದಿವೆ. ಕೇವಲ ಹತ್ತು ವರ್ಷಗಳಲ್ಲಿ ಜಗತ್ತಿನ ಭೂಪಟದಲ್ಲಿ ಇತರ ದೇಶಗಳ ಲಕ್ಷ್ಯಸೆಳೆದಿವೆ. ಈ ಮೂಲಸೌಕರ್ಯಗಳನ್ನು ಹೊಂದದೇ ಯಾವ ರಾಷ್ಟ್ರವೂ ಈ ದಿನಗಳಲ್ಲಿ ಮುಂದುವರಿಯಲು ಸಾಧ್ಯವೇ ಇಲ್ಲ.’

ಥಾಮಸ್‌ ಫ್ರೀಡ್‌ಮನ್‌ನ ಈ ಮಾತು ಅದೆಷ್ಟು ನಿಜವೆಂದು ಅನಿಸಿದ್ದು ಸಿಂಗಪುರದಲ್ಲಿ ನಿಂತಾಗ. ಬರಿಗಾಲಲ್ಲಿ ನಡೆದಾಡಿಯೇ ಎರಡು ದಿನಗಳಲ್ಲಿ ಕ್ರಮಿಸಬಹುದಾದಷ್ಟು ದೊಡ್ಡದಾಗಿರುವ ಈ ದೇಶದ ಯಾವುದೇ ಜಾಗದಲ್ಲಿ ನಿಂತರೂ ಮೂಲಸೌಕರ್ಯ ಎಂಬ ಪದದ ಅರ್ಥ ಚೆನ್ನಾಗಿ ಆಗುತ್ತದೆ. ಆ ದೇಶದ ಅಂಗುಲ ಅಂಗುಲವನ್ನೂ ಪುಟ್ಟ ಮಗುವನ್ನು ಎತ್ತಿ ಬೆಳೆಸಿ ಪೋಷಿಸಿ ಸಲಹಿ ಆರೈಕೆ ಮಾಡಿದ್ದರಿಂದ ಸಿಂಗಪುರ ವಿಶ್ವದ ಗಮನ ಸೆಳೆೆಯುತ್ತಿದೆ. ಆ ರಾಷ್ಟ್ರದಲ್ಲಿ ಇಲ್ಲದ ಬಹುರಾಷ್ಟ್ರೀಯ ಕಂಪನಿಗಳಿಲ್ಲ. ಜಗತ್ತಿನಲ್ಲಿರುವ ಪ್ರಮುಖ ಬ್ಯಾಂಕುಗಳೆಲ್ಲ ಸಿಂಗಪುರದಲ್ಲಿ ಕಚೇರಿ ಹೊಂದಿವೆ. ಸಿಂಗಪುರದಲ್ಲಿ ಇಲ್ಲ ಅಂತಾದರೆ,ಅದು ಬಹುರಾಷ್ಟ್ರೀಯ ಎಂದು ಕರೆಸಿಕೊಳ್ಳುವುದಿಲ್ಲ.

ಅಮೆರಿಕವೂ ಒಮ್ಮೆ ಕೈತೊಳೆದುಕೊಂಡು ಮುಟ್ಟಬೇಕು ಹಾಗಿದೆ ಸಿಂಗಪುರ. ಆ ಪುಟ್ಟ ರಾಷ್ಟ್ರವನ್ನು ಗಾರ್ಡನ್‌ ನೇಷನ್‌ ಎಂದು ಕರೆಯುವುದುಂಟು. ಆದರೆ ಅದಕ್ಕಿಂತ ಸೂಕ್ತವೆಂದರೆ ಸಿಂಗಪುರವನ್ನು A nation in garden ಎಂದು ಕರೆಯಬಹುದು. ಇವೆಲ್ಲ ಸಾಧ್ಯವಾದದ್ದು ಹೇಗೆಂದರೆ ಮೂಲಸೌಕರ್ಯ ಅಭಿವೃದ್ಧಿಪಡಿಸಿದ್ದರಿಂದ. ಸಿಂಗಪುರವನ್ನು ಕಟ್ಟಿದ ಲೀ ಕ್ವಾನ್‌ ಹ್ಯೂ ಹೇಳುತ್ತಾನೆ -ನಮ್ಮ ದೇಶ ಹಾಗೇ ಅವತರಿಸಿಲ್ಲ. ಇಲ್ಲಿನ ಪ್ರತಿಯಾಂದು ಈ ದೇಶದ ಜನರ ದುಡಿಮೆಯಿಂದ ಅರಳಿದೆ. ಮೂಲಸೌಕರ್ಯ ಒದಗಿಸದೇ ಯಾವ ದೇಶವೂ ಉದ್ಧಾರವಾಗದು. ನೀವು ಸಿಂಗಪುರದಲ್ಲಿ ಎಲ್ಲಿಯೇ ನಿಂತರೂ ನಿಮ್ಮ ಮುಂದೆ ಮೂಲಸೌಕರ್ಯ ಅನಾವರಣಗೊಳ್ಳುತ್ತದೆ. ನಮ್ಮ ದೇಶ ಕಟ್ಟಲು ಇದಕ್ಕಿಂತ ಭಿನ್ನವಾದ ಶಾರ್ಟ್‌ಕಟ್‌ ಇತ್ತೆಂದು ನನಗೆ ಅನಿಸುವುದಿಲ್ಲ.

ಥಾಮಸ್‌ ಫ್ರೀಡ್‌ಮನ್‌ ಇರಬಹುದು, ಲೀಕ್ವಾನ್‌ ಇರಬಹುದು. ಇವರೆಲ್ಲ ಹೇಳುವ ಒಂದೇ ಮಂತ್ರ ಅಂದ್ರೆ ಮೂಲಸೌಕರ್ಯ. ವಿಶ್ವದ ಮುಂದುವರಿದ ಎಲ್ಲ ದೇಶಗಳ ಅಭಿವೃದ್ಧಿಯ ಮೂಲ ಮಂತ್ರವೂ ಇದೇ. ಈ ಮಂತ್ರವನ್ನು ಪಠಿಸದೇ ಅಭಿವೃದ್ಧಿ ಸಾಧಿಸಿದ, ಸಾಧಿಸುತ್ತಿರುವ ದೇಶಗಳಿದ್ದರೆ ತೋರಿಸಿ ನೋಡೋಣ ಎಂದು ಇಬ್ಬರೂ ಸವಾಲು ಹಾಕುತ್ತಾರೆ. ಸಿಂಗಪುರ, ಹಾಂಗ್‌ಕಾಂಗ್‌, ಜಪಾನ್‌, ಲಂಡನ್‌, ಅಮೆರಿಕ, ಕೆನಡ, ಆಸ್ಟ್ರೇಲಿಯಾ,.. ಹೀಗೆ ಯಾವುದೇ ದೇಶ ನೋಡಿ, ಅಲ್ಲಿ ರಸ್ತೆಗಳನ್ನು ಮನೆಯ ಜಗುಲಿಗಿಂತ ಸುಂದರವಾಗಿ ಕಟ್ಟಿದ್ದಾರೆ.

ಶಾಲೆಯನ್ನು ಮನೆಯ ದೇವರಕೋಣೆಗಿಂತ ಭಕ್ತಿಯಿಂದ ನಿರ್ಮಿಸಿದ್ದಾರೆ. ಅಲ್ಲಿನ ಸಾರ್ವಜನಿಕ ಶೌಚಾಲಯಗಳು ನಮ್ಮ ಬೆಡ್‌ರೂಮು, ನಡುಮನೆಗಿಂತ ಸ್ವಚ್ಛವಾಗಿವೆ. ವಿಮಾನ ನಿಲ್ದಾಣ, ದೇಗುಲದಷ್ಟೇ ಶುಭ್ರವಾಗಿದೆ. ಮನೆಯಂಗಳದಲ್ಲಿರುವುದಕ್ಕಿಂತ ರಸ್ತೆಯ ಬದಿಯ ಹೂಗಳು, ಉದ್ಯಾನಗಳು ನಳನಳಿಸುತ್ತವೆ. ಬೀದಿಗಳಲ್ಲಿ ಕಸಕಡ್ಡಿ ಹುಡುಕಿದರೂ ಸಿಗುವುದಿಲ್ಲ. ಇವೆಲ್ಲ ಈ ದೇಶಗಳಿಗೆ ಸಾಧ್ಯವಾದದ್ದು ಹೇಗೆ?

ಅದೇ ಮಂತ್ರ-ಮೂಲ ಸೌಕರ್ಯ. ಈ ಮಂತ್ರದಿಂದ ಮಾತ್ರ ಅಭಿವೃದ್ಧಿಯೆಂಬ ಮಾವಿನಕಾಯಿ ಉದುರುವುದು ಸಾಧ್ಯ. ಇದಿಲ್ಲದೇ ನೀವು ಏನು ಮಾಡಿದರೂ ಪ್ರಯೋಜನವಿಲ್ಲ. ಜಾಗತೀಕರಣದ ಬಹುದೊಡ್ಡ ಲಾಭವೆಂದರೆ, ಎಲ್ಲ ದೇಶಗಳೂ ಮೂಲಸೌಕರ್ಯದ ಅಗತ್ಯವನ್ನು ಮನಗಂಡಿದ್ದು. ಮನಸ್ಸು ಮಾಡಿದರೆ ಆಫ್ರಿಕಾ ಖಂಡ ಇನ್ನು ಹತ್ತು ವರ್ಷಗಳಲ್ಲಿ ಈ ಜಗತ್ತು ಬೆರಗಾಗುವಂಥ ಪವಾಡ ಸೃಷ್ಠಿಸಬಹುದು. ಹಿಂದುಳಿಯುವುದು ತಪ್ಪಲ್ಲ. ಹಿಂದುಳಿದಿದ್ದೇವೆಂದು ಗೊತ್ತಿದ್ದೂ ಹಾಗೇ ಇರುವುದು ತಪ್ಪು.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: