ಬೆಂಗಳೂರಿನ ಬೀಡಾಡಿ ನಾಯಿಯನ್ನು ಅವರು ಮ್ಯೂನಿಚ್‌ಗೆ ಕರೆಸಿಕೊಂಡರು! – Dogs and its lovers!

ಮನೆಯ ಯಜಮಾನ ಹೋದ ದುಃಖದಲ್ಲಿ ಸಿರಿ ನಾಲ್ಕು ದಿನ ಏನೂ ತಿನ್ನದೇ ಉಪವಾಸ ಸತ್ಯಾಗ್ರಹ ಹೂಡಿತ್ತು. ಈ ವಿಷಯವನ್ನು ಮಗನಿಗೆ ಹೇಳಿದರೆ ಆತನು ವಾಪಸ್‌ ಬಂದುಬಿಡಬಹುದೆಂಬ ಭಯದಿಂದ ಹೇಳಿರಲಿಲ್ಲ. ಲಂಡನ್‌ನಿಂದ ದಿನಕ್ಕೆ ಎರಡು ಸಲ ಫೋನ್‌ ಮಾಡಿದಾಗಲೂ ಸಿರಿಯ ಉಪವಾಸ ಸತ್ಯಾಗ್ರಹದ ಬಗ್ಗೆ ಮಾತಾಡಿರಲಿಲ್ಲ.

ಆ ಮೂಕ ಪ್ರಾಣಿಯ ಒಡಲೊಳಗೆ ಅದೆಂಥ ಪ್ರೀತಿಯಿತ್ತೋ, ಆಗಲಿಕೆಯ ನೋವಿತ್ತೋ ಮನೆಯ ಯಜಮಾನ ವಿಮಾನವೇರಿದ ಕ್ಷಣದಿಂದ ಒಂದೇ ಸಮನೆ ಅಳಲಾರಂಭಿಸಿತು. ರಾತ್ರಿಯೆಲ್ಲ ಮಲಗದೆ ಮುಗಿಲಿಗೆ ಮುಖವಿಟ್ಟು ಕುಂಯೋ ಎಂದು ಕೂಗಲಾರಂಭಿಸಿತು. ಮನೆಯಲ್ಲಿದ್ದ ಆಳು ಒಂದೆರಡು ಬಾರಿ ಗದರಿದ. ಸುಮ್ಮನಾಗದಾಗ ಸಂತೈಸಲು ಪ್ರಯತ್ನಿಸಿದ. ಪ್ರಯೋಜನವಾಗಲಿಲ್ಲ. ನಾಯಿ ಮುಂಡೇದು ಎಂದು ಜರಿದ ಎರಡು ಬಿಟ್ಟ. ಉಹುಂ.. ನಾಯಿ ಅಳು ನಿಲ್ಲಲಿಲ್ಲ. ಸಿರಿ ಐದನೆ ದಿನ ಉಪವಾಸ ಸತ್ಯಾಗ್ರಹ ಮುಂದುವರಿಸಿದಾಗ ಡಾಕ್ಟರನ್ನು ಮನೆಗೆ ಕರೆದರು. ಎಲ್ಲ ಕತೆ ಕೇಳಿದ ಡಾಕ್ಟರು, ಆಸ್ಪತ್ರೆಗೆ ಸೇರಿಸುತ್ತೇನೆ ಎಂದರು. ಆಸ್ಪತ್ರೆಯಲ್ಲಿ ಸಿರಿಯ ಅಳು ನಿಲ್ಲಿಸುವುದು ಸಾಧ್ಯವಾಗಲೇ ಇಲ್ಲ. ಡಾಕ್ಟರ್‌ ಇಂಥ ‘ರೋಗಿ’ಯ ಕತೆಯನ್ನು ಕೇಳಿದ್ದರು. ಆದರೆ ನೋಡಿರಲಿಲ್ಲ.

ಪ್ರತಿದಿನ ಲಂಡನ್‌ನಿಂದ ಫೋನ್‌ ಬಂದಾಗಲೂ ಸಿರಿಯ ಬಗ್ಗೆ ಕೇಳಿದಾಗ, ‘ಚೆನ್ನಾಗಿದ್ದಾಳೆ, ಎರಡು ದಿನ ಅತ್ತಳು, ಈಗ ಸರಿ ಹೋಗಿದ್ದಾಳೆ’ ಎಂಬ ಉತ್ತರ ತಾಯಿಯಿಂದ. ಆದರೆ ಮಗನಿಗೆ ಲಂಡನ್‌ನಲ್ಲಿ ವಿಚಿತ್ರ ಸಂಕಟ. ಪ್ರತಿಕ್ಷಣವೂ ತಾಯಿ ಏನು ಮಾಡುತ್ತಿದ್ದಾಳೋ, ಸಿರಿ ಏನು ಮಾಡುತ್ತಿದ್ದಾಳೋ ಎಂಬ ಕನವರಿಕೆ. ಹೆಂಡತಿಯ ಜತೆಗಿನ ಮಾತುಕತೆಯಲ್ಲೂ ಅವರಿಬ್ಬರೇ. ಯಾಕಾದರೂ ಈ ಕ್ಷುದ್ರ ನಗರಿಗೆ ಬಂದು ನರಳುತ್ತಿದ್ದೇನೋ ಎಂಬ ಸಂಕಟ ಅವರನ್ನು ಕಾಡುತ್ತಿತ್ತು. ಆರನೆ ದಿನವೂ ಸಿರಿಯ ಸತ್ಯಾಗ್ರಹ ಮುಂದುವರೆದಾಗ, ಡಾಕ್ಟರ್‌ ಕೈ ಎತ್ತಿದರು. ಇದು ಚಿಕಿತ್ಸೆಯಿಂದ ಗುಣವಾಗುವಂಥದ್ದಲ್ಲ, ಪ್ರೀತಿ, ಸಂತೈಕೆಯಲ್ಲೇ ಗುಣವಾಗುವಂಥದು ಎಂದು ಮನೆಗೆ ತಂದು ಬಿಟ್ಟು ಹೋದರು. ಮನೆಗೆ ಬಂದರೆ ಮುಗಿಲಿಗೆ ‘ಕುಂಯೋ’ ಮೊರೆತ. ಮನೆಯಲ್ಲಿದ್ದ ವೃದ್ಧ ತಾಯಿಗೆ ತಲೆಚಿಟ್ಟು ಹಿಡಿದುಹೋಗುವ ಅನುಭವ.

ಎಂಟನೆ ದಿನಕ್ಕೆ ಮೊರೆತ ನಿಂತಿತು.

ಸಿರಿ ಯಜಮಾನನ ಅಗಲಿಕೆಯ ನೋವಿನಲ್ಲಿ, ವಿರಹದ ಸಂಕಟದಲ್ಲಿ, ತಬ್ಬಲಿತನದ ವಿಚಿತ್ರ ಬೇಗುದಿಯಲ್ಲಿ ಉಪವಾಸ ಬಿದ್ದು ಸತ್ತು ಹೋಯಿತು. ಇನ್ನೇನು ಉಪವಾಸದಿಂದ ಸತ್ತೇ ಹೋಗುತ್ತೇನೆಂದು ಗೊತ್ತಾದಗಲೂ ಸಿರಿ ಅನ್ನಕ್ಕಾಗಿ ಬಾಯಿ ಹಾಕಲಿಲ್ಲ. ನೀರಿನಲ್ಲಿ ನಾಲಗೆ ಅದ್ದಲಿಲ್ಲ. ಯಜಮಾನನ ನೆನಪು, ಅಗಲಿಕೆ ಆ ಮೂಕಪ್ರಾಣಿಯನ್ನು, ಆ ‘ನಾಯಿಮುಂಡೆ’ಯನ್ನು ಅದೆಷ್ಟು ಕಲಕಿರಬಹುದು, ಕದಡಿರಬಹುದು, ಕಿತ್ತು ತಿಂದಿರಬಹುದು? ಏನೂ ತಿನ್ನದೇ ಸತ್ತೇ ಹೋಯಿತು.

ಮಗನಿಗೆ ತಿಳಿಸದೇ ಬೇರೆ ದಾರಿಯೇ ಇರಲಿಲ್ಲ. ‘ಸಿರಿ ನಿನ್ನ ನೆನಪಲ್ಲಿ ಸತ್ತು ಹೋಯಿತು’ ಎಂದು ತಾಯಿ ಹೇಳಿದಾಗ ಅವರಿಗೆ ಕಣ್ಣಿಗೆ ಕತ್ತಲೆ ಆವರಿಸಿದಂತಾಯಿತು. ಅಲ್ಲೇ ಕುಸಿದು ಬಿದ್ದುಬಿಟ್ಟರು. ತಕ್ಷಣವೇ ಬೆಂಗಳೂರಿಗೆ ಹೊರಡಲು ನಿರ್ಧರಿಸಿದರು. ಲಂಡನ್‌ಗೆ ಬಂದು ಹತ್ತು ದಿನವೂ ಆಗಿರಲಿಲ್ಲ. ಕಚೇರಿಯಲ್ಲಿಹೊಸ ಜವಾಬ್ದಾರಿವಹಿಸಿಕೊಂಡಿದ್ದರು. ಆದರೆ ಸಿರಿ ನೆನಪಿನ ಮುಂದೆ ಅವೆಲ್ಲ ಕ್ಷುಲ್ಲಕವೆನಿಸಿರಬೇಕು. ಹೆಂಡತಿಯಾಂದಿಗೆ ವಾಪಸ್‌ ಬಂದುಬಿಟ್ಟರು.

ಎರಡು ದಿನಗಳವರೆಗೆ ಸಿರಿಯ ಮೃತದೇಹವನ್ನು ಹಾಗೇ ಇಡಲಾಗಿತ್ತು. ‘ಅಂತ್ಯಸಂಸ್ಕಾರಕ್ಕೆ ಬಂದಿದ್ದಾರಂತೆ’ ಎಂದು ಯಾರೋ ಹೇಳಿದಾಗ, ಕೋರಮಂಗಲದಲ್ಲಿರುವ ಅವರ ಮನೆಗೆ ಹೋದರೆ ತಾಯಿಯೇ ಮನೆ ಬಾಗಿಲು ತೆರೆದರು. ‘ಮತ್ತೆ ನೀವು’ ಎಂದು ಕೇಳಬೇಕೆನಿಸುತ್ತಿದ್ದಂತೆ, ‘ಸಿರಿ ಸತ್ತು ಹೋಯ್ತು. ನಿಮ್ಮ ಸ್ನೇಹಿತ ಬಂದುಬಿಟ್ಟ. ಮಹಡಿ ಮೇಲಿದ್ದಾನೆ ಹೋಗಿ’ ಎಂದರು ವೃದ್ಧ ತಾಯಿ. ಒಂದು ಕ್ಷಣದಲ್ಲಿ ಘಟನೆಗಳ ಸರಮಾಲೆಯೇ ಕಣ್ಮುಂದೆ ಹಾದು ಹೋಯಿತು. ನಾಯಿ ಸತ್ತರೆ ಅಳ್ತಾರಾ,ಅಷ್ಟಕ್ಕೆ ಅಲ್ಲಿಂದ ಬರ್ತಾರಾ ಎಂದು ಅವರನ್ನು ಕೇಳಬೇಕೆನಿಸಿತು. ಧೈರ್ಯ ಸಾಕಾಗಲಿಲ್ಲ. ನಾಯಿ ಸಾಕಿದವರ ಪ್ರೀತಿ, ಸಂಕವೇನೆಂಬುದು ಚೆನ್ನಾಗಿ ಗೊತ್ತು. ಈ ಪ್ರೀತಿ, ಸಂಕಟಗಳೆರಡೂ ಅತಿಯಾಗಿರುವುದರಿಂದ ಏನೂ ಮಾತಾಡದೇ, ಸ್ವಲ್ಪ ಹೊತ್ತು ಇದ್ದು ಎದ್ದು ಬಂದೆ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: