ಒಂದು ಚಿಕ್ಕ ದಿವ್ಯ ಮಂತ್ರ ಮತ್ತು ಇಪ್ಪತ್ತೊಂದು ದಿನದ ಶಿಸ್ತು! -Fulfilling Your Dreams And Reaching Your Destiny!

ನೀವೇ ಪರೀಕ್ಷಿಸಿ ನೋಡಿ : ರಿಜಲ್ಡ್ ಸಿಕ್ಕರೆ ಒಪ್ಪಿಕೊಳ್ಳಿ. ನಿಮಗಿದು ಇಷ್ಟವಾಯಿತು ಅಂದರೆ, ಇದೇ ರೀತಿಯಾಗಿ ಇಚ್ಛಾಶಕ್ತಿ ಮತ್ತು ಆಂತರಿಕ ಶಿಸ್ತನ್ನು ರೂಢಿಸಿಕೊಳ್ಳಿ. ಆರಂಭದಲ್ಲಿ ಇದೆಲ್ಲ ನಿಮಗೆ ತಮಾಷೆಯಾಗಿ ಕಾಣಬಹುದು.

Robin Sharmaಇಂಗ್ಲಿಷಿನಲ್ಲಿ ರಾಬಿನ್ ಶರ್ಮ ಅಂತೊಬ್ಬರು ಬರೆಯುತ್ತಾರೆ. The Monk Who sold his Ferrari ಎಂಬ ಅವರ ಪುಸ್ತಕವೊಂದು ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರನ್ನಾಗಿಸಿದೆ. ಇಡೀ ಪುಸ್ತಕವನ್ನು ನಾನಿನ್ನೂ ಓದಿಲ್ಲವಾದರೂ ಅದರ ಬಗೆಗಿನ ವಿಮರ್ಶೆ, ವ್ಯಾಖ್ಯಾನ, ಅದರ ಕೆಲಪುಟಗಳು ಹೀಗೆ ಓದಿಕೊಂಡಿದ್ದೇನೆ. ಶಿಸ್ತಿನ ಬಗ್ಗೆ, ಆತ್ಮ ಸಂಯಮದ ಬಗ್ಗೆ ಬಹಳ ಅದ್ಭುತವಾಗಿ ಬರೆಯುತ್ತಾರೆ ರಾಬಿನ್ ಶರ್ಮಾ.

I am more than I appear to be, all the worlds strength and power rests inside me ಎಂಬುದು ಅವರು ಸಜೆಸ್ಟ್ ಮಾಡುವ ದಿನನಿತ್ಯದ ದಿವ್ಯ ಮಂತ್ರ. ನಾನು ಕಾಣುವುದಕ್ಕಿಂತ ವಿಭಿನ್ನ ಮತ್ತು ಅಧಿಕ. ಜಗತ್ತಿನ ಅಷ್ಟೂ ಶಕ್ತಿ ಮತ್ತು ತಾಕತ್ತು ನನ್ನೊಳಗಿವೆ ಎಂಬ ಅರ್ಥ ಈ ಮಂತ್ರಕ್ಕಿದೆ. ಇದನ್ನು ದಿನಕ್ಕೆ 30ಸಲ ಹೇಳಿಕೊಳ್ಳಿ ಅನ್ನುತ್ತಾರೆ. ಈ ಮಂತ್ರ ಐದು ಸಾವಿರ ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ಕೆಲವೇ ಕೆಲವು ಸನ್ಯಾಸಿಗಳು ಈ ಬಗ್ಗೆ ತಿಳಿದುಕೊಂಡಿದ್ದರು. ಈ ಮಂತ್ರ ಹೇಳಿಕೊಳ್ಳುವುದರ ಮೂಲಕ ಸ್ವಲ್ಪೇ ದಿನಗಳೊಳಗಾಗಿ ಆತ್ಮ ನಿಗ್ರಹ ಮತ್ತು ಅಧಿಕ ಇಚ್ಛಾಶಕ್ತಿ ನಿಮ್ಮಲ್ಲಿ ಬೆಳೆದುಬಿಡುತ್ತದೆ.

ನೆನಪಿಡಿ, ಪದಗಳು ಅದ್ಭುತವಾದ ಪ್ರಭಾವ ಬೀರುತ್ತವೆ. ಶಕ್ತಿಯ ಶಬ್ದರೂಪವೇ ಮಂತ್ರ. ಮನಸ್ಸನ್ನು ಭರವಸೆಯ ಶಬ್ದಗಳಿಂದ ತುಂಬಿಕೊಳ್ಳಿ : ಮನಸ್ಸಿಗೆ ಭರವಸೆ ಮೂಡುತ್ತದೆ. ಅದು ಹೋಪ್‌ಫುಲ್ ಆಗುತ್ತದೆ. ಕರುಣೆಯ ಶಬ್ದಗಳಿಂದ ತುಂಬಿಕೊಳ್ಳಿ : ಮನಸು ಕರುಣಾಳುವಾಗುತ್ತದೆ. ಅದೇ ಮನಸ್ಸಿಗೆ ಧೈರ್ಯವೆಂಬ ಶಬ್ದ ತುಂಬಿ : ಮನಸ್ಸು ಧೈರ್ಯವಂತವಾಗುತ್ತದೆ. ಪದಗಳಿಗೆ ಅದ್ಭುತ ಶಕ್ತಿಯಿದೆ.

I am more than I appear to be, all the worlds strength and power rests inside me ಎಂಬುದೂ ಒಂದು ಮಂತ್ರವೇ. ದಿನಕ್ಕೆ 30ಸಲ ಹೇಳಿಕೊಂಡರೆ ನಿಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣುತ್ತೀರಿ. ಸುಮ್ಮನೆ ಮನಸ್ಸಿನಲ್ಲಿ ಗೊಣಗಿಕೊಂಡರಾಗದು. ಒಂದು ಶಾಂತವಾಗಿರುವ ಸ್ಥಳಕ್ಕೆ ಹೋಗಿ. ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಮನಸ್ಸಿನ ಅಲೆದಾಟ ನಿಲ್ಲಿಸಿ. ದೇಹ ನಿಶ್ಚಲವಾಗಿರಲಿ. ಮನಸು ಬಲಹೀನಗೊಂಡಿದೆಯೆಂಬುದಕ್ಕೆ ಅತ್ಯುತ್ತಮ ಸೂಚನೆಯೆಂದರೆ, ದೇಹ ಚಡಪಡಿಸತೊಡಗುತ್ತದೆ. ಹಾಗಾಗದಂತೆ ನೋಡಿಕೊಳ್ಳಿ. ಫೈನ್.

ಈಗ ಮಂತ್ರವನ್ನು ಧೃಡವಾದ ದನಿಯಲ್ಲಿ ಗಟ್ಟಿಯಾಗಿ ಹೇಳಿಕೊಳ್ಳಿ. ಮತ್ತೆ ಮತ್ತೆ, ಪುನಃ ಪುನಃ ಹೇಳಿಕೊಳ್ಳಿ. ಹಾಗೆ ಹೇಳಿಕೊಳ್ಳುವಾಗ ನಿಮ್ಮನ್ನು ನೀವು ಒಬ್ಬ ಧೃಡ, ಶಿಸ್ತಿನ, ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ, ದೇಹ ಮತ್ತು ಅಂತರಂಗದ ಚಿಲುಮೆಯನ್ನು ವಶದಲ್ಲಿಟ್ಟುಕೊಂಡ ವ್ಯಕ್ತಿಯನ್ನಾಗಿ ಕಲ್ಪಿಸಿಕೊಳ್ಳಿ. ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಗಾಂಧಿ ಮತ್ತು ಮದರ್ ಥೆರೇಸಾ ಹೇಗೆ ವರ್ತಿಸುತ್ತಿದ್ದರೋ, ಹಾಗೆ ವರ್ತಿಸುತ್ತಿದ್ದೀರೆಂದು ಕಲ್ಪಿಸಿಕೊಳ್ಳಿ. ನಿಮಗೇ ಆಶ್ಚರ್ಯವಾಗತೊಡಗುತ್ತದೆ. ಈ ಮಂತ್ರ ಕೆಲಸ ಮಾಡತೊಡಗುತ್ತದೆ ಅನ್ನುತ್ತಾರೆ ರಾಬಿನ್ ಶರ್ಮಾ.

ಇದೆಲ್ಲ ಇಷ್ಟು ಸರಳವೇ ಅಂತ ಕೇಳಿದರೆ, ಈ ಮಂತ್ರವನ್ನು ಪೂರ್ವ ಪ್ರಪಂಚದ ಸಂತರು ಐದು ಸಾವಿರ ವರ್ಷದಿಂದ ತಮ್ಮ ಶಿಷ್ಯರಿಗೆ ಹೇಳಿಕೊಡುತ್ತಿದ್ದರು. ಇದು ಸುಮ್ಮನೆ ತಮಾಷೆಗಲ್ಲ ಅನ್ನುತ್ತಾರೆ. ಈತನಕ ಈ ಮಂತ್ರ ನಮ್ಮ ಮಧ್ಯೆ ಅನುರಣಗೊಳ್ಳುತ್ತಿದೆಯೆಂದರೆ, ಅದು ನಿಜಕ್ಕೂ ಕೆಲಸ ಮಾಡುತ್ತಿದೆ, ಪರಿಣಾಮಕಾರಿಯಾಗಿದೆ ಅಂತಲೇ ಅರ್ಥ ಅಲ್ಲವೇ? ನೀವೇ ಪರೀಕ್ಷಿಸಿ ನೋಡಿ : ರಿಜಲ್ಡ್ ಸಿಕ್ಕರೆ ಒಪ್ಪಿಕೊಳ್ಳಿ. ನಿಮಗಿದು ಇಷ್ಟವಾಯಿತು ಅಂದರೆ, ಇದೇ ರೀತಿಯಾಗಿ ಇಚ್ಛಾಶಕ್ತಿ ಮತ್ತು ಆಂತರಿಕ ಶಿಸ್ತನ್ನು ರೂಢಿಸಿಕೊಳ್ಳಿ. ಆರಂಭದಲ್ಲಿ ಇದೆಲ್ಲ ನಿಮಗೆ ತಮಾಷೆಯಾಗಿ ಕಾಣಬಹುದು. ಮೊದಲ ತಂತ್ರವೇನು ಗೊತ್ತಾ? ಯಾವ ಕೆಲಸವನ್ನು ಮಾಡಲು ನಿಮಗೆ ಇಚ್ಛೆ ಇಲ್ಲವೋ, ಅದನ್ನು ಮೊದಲು ಮಾಡಿಬಿಡಿ. ಆಫೀಸಿಗೆ ಹೋಗಲು ಬಸ್ಸು ಹಿಡಿಯುವ ಬದಲು ನಡೆದೇ ಹೋಗುತ್ತೇನೆ ಅಂತ ನಿರ್ಧರಿಸಿದಷ್ಟು ಸುಲಭ ಅದು. ಹಾಗೆ ಪ್ರತಿನಿತ್ಯ ಮಾಡುವುದರ ಮೂಲಕ ನಿಮ್ಮನ್ನು ಜಗ್ಗಿ ಕೂರಿಸುವ ಬಲಹೀನತೆ ಮತ್ತು ಅದಕ್ಕೆ ಸಂಬಂಧಿಸಿದ ಚಪಲದಿಂದ ಥಟ್ಟನೆ ಮುಕ್ತರಾಗಿ ಬಿಡುತ್ತೀರಿ. ವಿಲ್‌ಪವರ್ ಮತ್ತು ನಮ್ಮೊಳಗಿನ ತಾಕತ್ತನ್ನು ಬೆಳೆಸಿಕೊಳ್ಳಬೇಕಾದರೆ, ಮೊದಲು ಅದನ್ನು ಬಳಸಬೇಕು. ಆತ್ಮನಿಗ್ರಹ ಅಥವಾ ಸ್ವಯಂ ನಿಯಂತ್ರಣದ ಭ್ರೂಣವನ್ನು ರಕ್ಷಿಸಿ ಬೆಳೆಸಿದಷ್ಟೂ ಅದು ನೀವು ಕೋರಿದ ಫಲಿತಾಂಶವನ್ನು ಕೊಡತೊಡಗುತ್ತದೆ.

ಎರಡನೇ ತಂತ್ರವೆಂದರೆ just, ಮೌನ! ಆತ್ಮ ನಿಗ್ರಹ ತಂದುಕೊಳ್ಳುವ ಅತ್ಯುತ್ತಮ ಎಕ್ಸರ್‌ಸೈಜೆಂದರೆ ಮೌನ. ದೀರ್ಘಕಾಲದ ತನಕ ನಾಲಗೆಯನ್ನು ಹಿಡಿದಿಡಬೇಕು. ಟಿಬೇಟನ್ ಸನ್ಯಾಸಿಗಳಿಗಿದು ಬಲು ಪ್ರಿಯವಾದದ್ದು. ಇಡೀ ದಿನ ಮೌನವಾಗಿರುವ ಮೂಲಕ ನೀವು ಮನಸ್ಸನ್ನು ನಿಮಿಷ್ಟದಂತೆ ವರ್ತಿಸುವುವ ಹಾಗೆ ಮಾಡಿಕೊಳ್ಳುತ್ತೀರಿ. ಪ್ರತೀ ಸಲ ಮಾತಾಡಬೇಕೆಂಬ ಚಡಪಡಿಕೆ ಉಂಟಾದಾಗಲೂ ನೀವದನ್ನು ಪ್ರಯತ್ನ ಪೂರ್ವಕವಾಗಿ ಹತ್ತಿಕುತ್ತೀರಿ. ನಿಮ್ಮ ಇಚ್ಛೆಗೆ ತನ್ನದೇ ಆದಂಥ ಬುದ್ಧಿಯಿರುವುದಿಲ್ಲ. ಅದು ನಿಮ್ಮ ನಿರ್ದೇಶನಕ್ಕಾಗಿ, ಆದೇಶಕ್ಕಾಗಿ ಕಾಯುತ್ತದೆ. ಹೀಗಾಗಿ ಅದರ ಮೇಲೆ ನೀವು ಹೆಚ್ಚಿನ ಹಿಡಿತ ಸಾಧಿಸಿದಷ್ಟೂ ಅದು ಶಕ್ತಿವಂತವಾಗುತ್ತದೆ.

ಆದರೆ ಹೆಚ್ಚಿನವರು ತಮ್ಮ ಇಚ್ಛಾಶಕ್ತಿ ಅಥವಾ ವಿಲ್ ಪವರ್ ಬಳಸುವುದೇ ಇಲ್ಲ. ಏಕೆಂದರೆ, ಅನೇಕರಿಗೆ ತಮಗೊಂದು ಇಚ್ಛಾಶಕ್ತಿ ಇದೆ ಅಂತಲೇ ಗೊತ್ತಿರುವುದಿಲ್ಲ. ವಿಪರೀತ ಸಿಟ್ಟಿನವರು, ನಮಗಿದು ಹೆರಿಡಿಟರಿ ಅಂದುಕೊಂಡಿರುತ್ತಾರೆ. ತುಂಬ ಚಿಂತೆ ಮಾಡುವವರು ನನ್ನ ನೌಕರಿಯೇ ಅಂಥದ್ದು ಅಂದುಕೊಂಡಿರುತ್ತಾರೆ. ಇವರಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಪ್ರತಿಯೊಬ್ಬರೊಳಗೂ ಇರುವಂತೆ ತಮ್ಮಲ್ಲೂ ಒಂದು ಅಗಾಧವಾದ ತಾಕತ್ತಿದೆ. ಕದಲದೆ ಮಲಗಿರುವ ಅದು ಕೇವಲ ತಮ್ಮ ಅದೇಶಕ್ಕೆ, ಅಪ್ಪಣೆಗೆ ಕಾದಿದೆ! ಇದನ್ನು ಗೊತ್ತು ಮಾಡಿಕೊಳ್ಳುವ ಜವಾಬ್ದಾರಿ ಅವರಿಗಿರುವುದಿಲ್ಲ. ನಿಮ್ಮ ಪರಿಸರವನ್ನ, ಹೆರಿಡಿಟಿಯನ್ನ ಮೀರಿ ಬೆಳೆಯಬಹುದು. ಅದಕ್ಕಾಗಿ ನೀವು ನಿಮ್ಮ ಇಚ್ಛಾಶಕ್ತಿಗೆ ಒಡೆಯರಾಗಬೇಕು!

ಹೀಗೆಲ್ಲ ಪುಂಖಾನುಪುಂಖವಾಗಿ ಬರೆಯುತ್ತಾ ಹೋಗುತ್ತಾರೆ ರಾಬಿನ್ ಶರ್ಮಾ. ಅವರು ಬರೆದುದರ ಪೈಕಿ ನನಗೆ ತುಂಬ ಇಷ್ಟವಾದ ಸಿದ್ಧಾಂತವೆಂದರೆ, ಇಪ್ಪತ್ತೊಂದು ದಿನ ಸತತವಾಗಿ ಏನನ್ನಾದರೂ ನೀವು ಶಿಸ್ತಿನಿಂದ ಮಾಡಿದ್ದೇ ಆದರೆ, ಅದು ನಿಮ್ಮ ಬದುಕಿನ ಶಾಶ್ವತ ಅಭ್ಯಾಸವೇ ಆಗಿಹೋಗುತ್ತದೆ ಎಂಬುದು! ಇವತ್ತಿನಿಂದ ಇಪ್ಪತ್ತೊಂದು ದಿನ, ಏನನ್ನಾದರೂ ಸರಿಯೇ; ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ನೋಡ್ರಲ್ಲ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: