ದೇವೆಗೌಡರಿಗೊಂದು ಮಸ್ಕಚಸ್ಕ! – I have no intension of insulting anyone : Ravi

ಹತ್ತು ಕೋಟಿ ರುಪಾಯಿಗಳ ಮೊತ್ತಕ್ಕೆ ದಾವೆ ಹೂಡಿ ‘ಮುಖ್ಯಮಂತ್ರಿ ಐ ಲವ್ ಯೂ’ ಚಿತ್ರಕ್ಕೆ ತಡೆಯಾಜ್ಞೆ ತರಲು ಹೊರಟ ದೇವೆಗೌಡರಿಗೆ ಹಾಸನದ ನ್ಯಾಯಾಲಯದಲ್ಲಿ ಪಾರ್ಷಿಯಲ್ ಪರಾಭವ ಉಂಟಾಗಿದೆ. ಮಾಜಿ ಪ್ರಧಾನಿಯನ್ನು ಅಷ್ಟರ ಮಟ್ಟಿಗೆ ಡಿಫೀಟು ಮಾಡಿದ ಖುಷಿ ನನಗೂ ಆಗಿದೆ : ಮಸ್ಕಚಸ್ಕ!

ಸಿನೆಮಾ ಚಿತ್ರೀಕರಣ ತೆರಪಿಲ್ಲದೆ ಸಾಗಿದೆ. ಒಟ್ಟಾರೆಯಾಗಿ ಸಿನೆಮಾದಲ್ಲಿ ನಾನು ಹದಿಮೂರು ದೃಶ್ಯಗಳಲ್ಲೇನೋ ಕಾಣಿಸಿಕೊಳ್ಳುತ್ತಿದ್ದೇನೆ. ತೀರ ಎನ್ಟಿ ರಾಮರಾಯನಂತೆ ಫ್ರೇಮ್ ಟು ಫ್ರೇಮ್ ಕಾಣಿಸಿಕೊಳ್ಳುವ ಉಮ್ಮೇದಿಯೂ ನನಗೀಲ್ಲ, ನಾನು ಅಂಥ ಪರಿ ನಟನೂ ಅಲ್ಲ.

In fact, ಈ ಚಿತ್ರದ ಮೂಲಕ ರಾಯನ್ನಾದರೂ ಹಿಡಿದು ಮುಖಕ್ಕೆ ಮಸಿ ಬಳಿದು ಛಡಾಬಡಾ ಅವಮಾನಿಸಿ ಬಿಡುವ ಉದ್ದೇಶ ಕೂಡ ನನಗಿಲ್ಲ. ದೇವೆಗೌಡರಿಗೆ ಯಾರೋ ಶಾಸ್ತ್ರ ಹೇಳಿದಂತಿದೆ : ಅವರು ನನ್ನ ಬೆನ್ನು ಬಿದ್ದಿದ್ದಾರೆ. ಒಂದು ದೇಶವಾಳಿದ ಪ್ರಧಾನಿಯ ಈ ತೆರನಾದ ಭಯಗಳನ್ನು ನೋಡುತ್ತಿದ್ದರೆ-ತಮಾಷೆ ಎನ್ನಿಸುತ್ತದೆ.

ಇನ್ನು ಹಾಡುಗಳ ಚಿತ್ರೀಕರಣಕ್ಕಾಗಿ ನಮ್ಮ ತಂಡ ಮಡಿಕೇರಿ, ಮೂನಾರ್ ಮುಂತಾದೆಡೆಗೆ ಹೊರಡಬೇಕು. ತಾಂತ್ರಿಕ ನಿರ್ದೇಶನದ ಬಹುಪಾಲು ಭಾರ ಹೊತ್ತಿರುವ ನನ್ನ ಗೆಳೆಯ ದ್ವಾರ್ಕಿ ರಾಘು ಹಾಡುಗಳ ಚಿತ್ರೀಕರಣವನ್ನು ಅನಾಯಾಸವಾಗಿ ಮಾಡಿಕೊಂಡು ಬರುತ್ತಾನೆ.

ಮೊನ್ನೆ ವಿಜಿ ಮತ್ತು ಮದರಾಸಿನ ಬೆಸೆಂಟ್ ರವಿ ಮಧ್ಯದ ಫೈಟ್ ಒಂದರ ಚಿತ್ರೀಕರಣವನ್ನು ದ್ವಾರ್ಕಿ ರಾಘು ಮತ್ತು ಥ್ರಿಲ್ಲರ್ ಮಂಜು ಸೇರಿ ಮಾಡಿದರು. ರಷಸ್ ನೋಡಿದಾಗ ‘ಅದ್ಭುತ’ ಅನ್ನಿಸಿತು. ಈ ಹುಡುಗ ವಿಜಿ ನಿಜಕ್ಕೂ ಎಂಥ ಅಗಾಧವಾದ ಕಲಾವಿದ ಗೊತ್ತಾ? ಮಾರ್ಚ್ ಹೊತ್ತಿಗೆ ಸಿನೆಮಾ ಬಿಡುಗಡೆಯಾಗುತ್ತದಲ್ಲ? ನೀವೇ ನೋಡುತ್ತೀರಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: