ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ!

೨೦೦೫ರಲ್ಲಿ ಸಾಯುವಾಗ ಪೋಪ್ ಜಾನ್‌ಪಾಲ್ ಮನದಲ್ಲಿ ಒಂದು ಕೊರಗು ಹಾಗೇ ಉಳಿದಿತ್ತು.

೧೯೭೯ರಲ್ಲಿ ಟರ್ಕಿ, ೧೯೮೧ರಲ್ಲಿ ಪಾಕಿಸ್ತಾನ, ಜಪಾನ್, ೧೯೮೧ ಹಾಗೂ ೧೯೯೫ರಲ್ಲಿ ಫಿಲಿಪ್ಪೀನ್ಸ್, ೧೯೮೪ ಮತ್ತು ೧೯೮೯ರಲ್ಲಿ ದಕ್ಷಿಣ ಕೊರಿಯಾ, ೧೯೮೪ರಲ್ಲಿ ಥಾಯ್ಲೆಂಡ್, ೧೯೮೬ರಲ್ಲಿ ಬಾಂಗ್ಲಾದೇಶ, ಸಿಂಗಪುರ, ೧೯೮೬ ಮತ್ತು ೧೯೯೯ರಲ್ಲಿ ಭಾರತ, ೧೯೮೯ರಲ್ಲಿ ಇಂಡೋನೇಷಿಯಾ ಮತ್ತು ಈಸ್ಟ್ ಟಿಮೋರ್, ೧೯೯೫ರಲ್ಲಿ ಶ್ರೀಲಂಕಾ, ೧೯೯೭ರಲ್ಲಿ ಲೆಬನಾನ್, ೨೦೦೧ರಲ್ಲಿ ಕಝಕಸ್ತಾನ್, ೨೦೦೨ರಲ್ಲಿ ಅಝರ್ ಬೈಜಾನ್- ಹೀಗೆ ೨೬ ವರ್ಷಗಳ ತಮ್ಮ ಪೋಪ್‌ಗಿರಿಯಲ್ಲಿ ಜಾನ್‌ಪಾಲ್ ಏಷ್ಯಾದ ೧೫ ರಾಷ್ಟ್ರಗಳಿಗೆ ಭೇಟಿ ಕೊಟ್ಟಿದ್ದರು.

೧೯೯೯ರಲ್ಲಿ ನಮ್ಮ ಹೊಸದಿಲ್ಲಿಗೆ ಭೇಟಿ ನೀಡಿದ್ದಾಗಲಂತೂ “The people of Asia need Jesus Christ and his gospel. Asia is thirsting for the living water that Jesus alone can give…” ಎಂದು ಸಾರ್ವಜನಿಕವಾಗಿ ಘೋಷಣೆಯನ್ನು ಮಾಡುವ ಮೂಲಕ ಮತಾಂತರ ಮಾಡುವ ತಮ್ಮ ಉದ್ದೇಶವನ್ನು ಬಹಿರಂಗಗೊಳಿಸಿದ್ದರು.  ಹಾಗೆಯೇ, “1.3 billion people have been seeking spiritual fulfillment” ಎನ್ನುವ ಮೂಲಕ ಜಗತ್ತಿನ ಅತ್ಯಂತ ಜನಭರಿತ ರಾಷ್ಟ್ರವಾದ ಚೀನಾಕ್ಕೆ ಭೇಟಿ ನೀಡುವ ತಮ್ಮ ಮನದ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ ಚೀನಾ ಸೊಪ್ಪುಹಾಕಲಿಲ್ಲ. ಅಷ್ಟೇಕೆ, ಇಂದಿಗೂ ವ್ಯಾಟಿಕನ್ ಜತೆ ರಾಜತಾಂತ್ರಿಕ ಸಂಬಂಧವನ್ನೇ ಹೊಂದಿರದ ಏಕಮಾತ್ರ ಬಲಿಷ್ಠ ರಾಷ್ಟ್ರವೆಂದರೆ ಚೀನಾವೊಂದೇ! ಅಷ್ಟೇ ಅಲ್ಲ, ಕ್ಯಾಥೋಲಿಕ್ ಚರ್ಚ್‌ಗಳು ಜಗತ್ತಿನ ಯಾವುದೇ ಭಾಗದಲ್ಲಿದ್ದರೂ ಅವುಗಳು ವ್ಯಾಟಿಕನ್‌ನ ನೇರ ನಿಯಂತ್ರಣಕ್ಕೊಳಪಟ್ಟಿವೆ. ಆದರೆ ಚೀನಾದಲ್ಲಿ ೧.೨ ಕೋಟಿ ಕ್ಯಾಥೋಲಿಕ್ಕರಿದ್ದರೂ ಅವರು ನಡೆಸುತ್ತಿರುವ ಚರ್ಚ್‌ಗಳು ಚೀನಿ ಸರಕಾರದ ನಿಯಂತ್ರಣದಲ್ಲಿವೆ! ಇಂದಿಗೂ ವ್ಯಾಟಿಕನ್‌ನ ಮಹದಾಸೆಯೆಂದರೆ ಚೀನಾದಲ್ಲಿ ಮತಾಂತರ ಕಾರ್ಯ ನಡೆಸುವುದು. ಅದಕ್ಕಾಗಿ ತನ್ನೆಲ್ಲಾ ಪ್ರಭಾವವನ್ನು ಬಳಸಿ ಪೋಪ್ ಜಾನ್‌ಪಾಲ್ ಅವರ ಚೀನಾ ಭೇಟಿಗೆ ಅವಕಾಶ ಪಡೆದುಕೊಳ್ಳಲು ಯತ್ನಿಸಿತು. ಆದರೆ ಚೀನಾ ವ್ಯಾಟಿಕನ್‌ಗೆ ಕಿಮ್ಮತ್ತು ಕೊಡಲಿಲ್ಲ. ಹಾಗಾಗಿ ಪೋಪ್ ಜಾನ್ ಆಸೆಯೊಂದಿಗೇ ಅಸು ನೀಗಬೇಕಾಯಿತು. ಅವರ ನಂತರ ಪೋಪ್ ಆಗಿ ಬಂದಿರುವ ಬೆನೆಡಿಕ್ಟ್ ಅವರಿಗೆ, “Please come to China to bring us love and democracy” ಎಂದು ಹಾಂಕಾಂಗ್‌ನ ಪ್ರಭಾವಿ ಮಾಧ್ಯಮ ದೊರೆ ಜಿಮ್ಮಿ ಲಾ ಇತ್ತೀಚೆಗೆ ಕರೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ “I will come” ಎಂದು ಬೆನೆಡಿಕ್ಟ್ ಕೂಡ ಹೇಳಿದ್ದಾರೆ. ಆದರೆ “ಯಾವಾಗ” ಭೇಟಿ ನೀಡುತ್ತೀರಿ? ಎಂಬ ಪ್ರಶ್ನೆಗೆ  The timing depends on “God’s wish” ಎಂದಿದ್ದಾರೆ!!

ಪಾಪ… ಪೋಪ್ ಬೆನೆಡಿಕ್ಟ್ ಅವರ ಅಸಹಾಯಕತೆಯನ್ನು ನೋಡಿ.

“ಯಾವಾಗ ಬರುತ್ತೀರಿ” ಅಂತ ಕೇಳಿದರೆ “ದೇವರು ಇಚ್ಛಿಸಿದಾಗ” ಎನ್ನಬೇಕಾಗಿ ಬಂದಿದೆ. ಅಣಕವೆಂದರೆ ಚೀನಾಕ್ಕೆ ಭೇಟಿ ನೀಡಲು ಜೀಸಸ್‌ಗಿಂತ ಚೀನಾ ಅಧ್ಯಕ್ಷ ಹೂ ಜಿಂಟಾವೂ ಅಣತಿ ಮುಖ್ಯವಾಗಿದೆ! ಆದರೆ ನಾಚಿಕೆಯನ್ನುಂಟು ಮಾಡುವ ಸಂಗತಿಯೆಂದರೆ, ವಿಶ್ವದ ಅತ್ಯಂತ ಬಲಿಷ್ಠ ಧರ್ಮಗುರುವಿಗೆ “ನಮ್ಮ ನೆಲದ ಮೇಲೆ ಕಾಲಿಡಲು ಅವಕಾಶ ಕೊಡುವುದಿಲ್ಲ” ಎಂದು ಹೇಳುವ ಎದೆಗಾರಿಕೆಯನ್ನು ಚೀನಾ ತೋರುತ್ತಿದ್ದರೆ ಮೊನ್ನೆ ಆಗಸ್ಟ್ ೨೩ರಂದು ನಮ್ಮ ಒರಿಸ್ಸಾದಲ್ಲಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಎಂಬ ೮೪ ವರ್ಷದ ವಯೋವೃದ್ಧ ಸನ್ಯಾಸಿಯನ್ನು ಮತಾಂಧ ಕ್ರೈಸ್ತರು ಕೊಲೆಗೈದಿದ್ದರೂ ಶಿಕ್ಷಿಸುವ ತಾಕತ್ತು ನಮ್ಮನ್ನಾಳು ವವರಿಗಿಲ್ಲ!! ಈ ಮಿಷನರಿಗಳು ಬಹುಸಂಖ್ಯಾತ ಧರ್ಮಕ್ಕೆ ಸೇರಿರುವ ಒಬ್ಬ ಸಾಧುವನ್ನೇ ಕೊಲ್ಲುವಷ್ಟು ಬೆಳೆದಿದ್ದಾರೆ ಎಂದರೆ ಅದಕ್ಕೆ ಯಾರನ್ನು ದೂರಬೇಕು? ಇಷ್ಟು ದಿನ ಮತಾಂತರಿಗಳನ್ನು, ಮಿಷನರಿಗಳ ಆಮಿಷವನ್ನು, ಅವರಿಗೆ ಹರಿದು ಬರುತ್ತಿರುವ ಹಣದ ಥೈಲಿಯನ್ನು ದೂರಿದ್ದಾಯಿತು. ಇನ್ನೆಷ್ಟು ದಿನ ಅಂತ ಮಿಷನರಿಗಳತ್ತ ಬೊಟ್ಟು ಮಾಡಬೇಕು? ನಮ್ಮ ಹಿಂದೂ ಧರ್ಮ ಈ ಸ್ಥಿತಿಗೆ ಬರಲು ಕಾರಣ ಯಾರು? ಮಿಷನರಿಗಳೋ, ಅಭಿಮಾನಶೂನ್ಯ ಹಿಂದೂಗಳೋ?

ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ನೆನಪಿಸಿಕೊಳ್ಳಿ.

ನಮ್ಮ ದೇಶದ ಅಧಃಪತನ ಪ್ರಾರಂಭವಾಗಿದ್ದೇ ಬೌದ್ಧ ಧರ್ಮದ ಪ್ರಗತಿಯೊಂದಿಗೆ. ಅಶೋಕನನ್ನು ಮಹಾ ಸಾಮ್ರಾಟ ಅಂತ ನಾವು ಹೊಗಳಬಹುದು. ಆದರೆ ಅಶೋಕ ಮಾಡಿದ್ದೇನು? ಕಳಿಂಗ ಯುದ್ಧದಲ್ಲಿ ಸಂಭವಿಸಿದ ಪ್ರಾಣ ಹಾನಿಯನ್ನು ಕಂಡು ಆತ ಶಸ್ತ್ರತ್ಯಾಗ ಮಾಡಿದ್ದೇನೋ ಸರಿ. ಆದರೆ ಅದರಿಂದುಂಟಾದ ಹಾನಿಯನ್ನು ಗಮನಿಸಿ. ಕ್ಷತ್ರಿಯನಾಗಿ ಉತ್ತಮ ಆಡಳಿತ ನೀಡುವ ಬದಲು, ಜನಸಾಮಾನ್ಯರ ರಕ್ಷಣೆ ಮಾಡುವ ಬದಲಾಗಿ ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿಯಂತೆ ಶಾಂತಿ ಬೋಧನೆ ಗಿಳಿದ. ಮಕ್ಕಳನ್ನೂ ಧರ್ಮಪ್ರಸಾರಕ್ಕೆ ಕಳುಹಿಸಿದ. ಹೀಗೆ ಬೌದ್ಧ ಧರ್ಮ ಜನಪ್ರಿಯಗೊಳ್ಳಲಾರಂಭಿಸಿದಂತೆ ನಮ್ಮ ಆಳುವ ದೊರೆಗಳು ಶೌರ್ಯ ಮರೆತು ಶಾಂತಿ ಮಂತ್ರಪಠಿಸ ಲಾರಂಭಿಸಿದರು. ಹೋರಾಟ ಮನೋಭಾವನೆಯೇ ಕುಂದಿಹೋಯಿತು. ಜತೆಗೆ ಜಾತಿ, ಪಂಥಗಳೆಂಬ ವಿಷಬೀಜಗಳು ನಮ್ಮ ಸಮಾಜವನ್ನೇ ಒಡೆದು ಹಾಕಿದವು. ಹಾಗಾಗಿ ಮುಸಲ್ಮಾನರು ಸಾವಿರಾರು ಮೈಲು ದೂರದಿಂದ ಬಂದು ಭಾರತದ ಮೇಲೆ ಆಕ್ರಮಣ ಮಾಡಿದರೂ ಅವರನ್ನು ಎದುರಿಸುವ, ಮಟ್ಟಹಾಕುವ ತಾಕತ್ತು ನಮ್ಮ ರಾಜರಿಗಿರಲಿಲ್ಲ. ಸಾಲದೆಂಬಂತೆ ಕ್ಷಮೆಯೆಂಬ ದುಬಾರಿ ದೌರ್ಬಲ್ಯವೂ ನಮ್ಮ ರಾಜರ ಮೈಗೂಡಿಕೊಂಡಿತ್ತು. ನೀವೇ ಯೋಚಿಸಿ, ೧೧೯೧ರಲ್ಲಿ ಭಾರತದ ಮೇಲೆ ದಂಡೆತ್ತಿ ಬಂದು ಸೋತು ಶರಣಾದ ಮೊಹಮದ್ ಘೋರಿಗೆ ಪೃಥ್ವಿರಾಜ್ ಚವ್ಹಾಣ್ ಕ್ಷಮಾದಾನ ನೀಡದೆ ಕೊಲೆಗೈದಿದ್ದರೆ ಮುಂದಾಗುವ ಅನಾಹುತ ತಪ್ಪುತ್ತಿರಲಿಲ್ಲವೆ? ೧೧೯೨ರಲ್ಲಿ ಮತ್ತೆ ದಂಡೆತ್ತಿ ಬಂದ ಮೊಹಮದ್ ಘೋರಿ ಪೃಥ್ವಿರಾಜನನ್ನು ಸೋಲಿಸಿದ್ದಲ್ಲದೆ ಶಿರಚ್ಛೇದವನ್ನೂ ಮಾಡಿದ! ಎಲ್ಲಿಂದಲೋ ಬಂದ ಮುಸಲ್ಮಾನರು ನಮ್ಮ ಮೇಲೆ ಅಧಿಪತ್ಯ ಸ್ಥಾಪಿಸಿದರು. ಆದರೂ ನಾವು ಎಚ್ಚೆತ್ತುಕೊಳ್ಳಲಿಲ್ಲ. ಹಿಂದೂಗಳು ಎಂತಹ ಮೂರ್ಖರೆಂದರೆ ಸೋಮನಾಥ ದೇವಾಲಯದ ಮೇಲೆ ಘಜ್ನಿ ಮೊಹಮದ್ ಆಕ್ರಮಣ ಮಾಡಿದಾಗ “ದೇವಾಲಯವನ್ನು ನಾಶಪಡಿಸುವ ಮುನ್ನ ನಮ್ಮನ್ನು ಕೊಲ್ಲು” ಎಂದು ಪುರೋಹಿತರು ಅಡ್ಡ ನಿಂತರು. ಹಾಗೆ ಹೋರಾಡುವುದನ್ನು ಬಿಟ್ಟು ಕೈಕಟ್ಟಿ ನಿಂತ ಬುದ್ಧಿಗೇಡಿ ಹಿಂದೂಗಳನ್ನು ಮೊದಲು ಕೊಂದ ಘಜ್ನಿ, ನಂತರ ದೇವಸ್ಥಾನವನ್ನು ದೋಚಿಕೊಂಡು ಹೋದ. ಏಕೆಂ ದರೆ  “ಧರ್ಮೋ ರಕ್ಷತಿ ರಕ್ಷಿತಃ”  ಎಂಬ ಶ್ಲೋಕ ಬರೀ ಉಚ್ಛಾರಣೆಯಲ್ಲೇ ಉಳಿದು, ಆಚರಣೆಗೆ ಬರಲಿಲ್ಲ. ನೀವು ಯಾವುದೇ ಪ್ರಾಚೀನ ದೇವಸ್ಥಾನಕ್ಕೆ ಹೋಗಿ. ಗರ್ಭ ಗುಡಿಗೂ ಮೊದಲು ಗಣ ದೇವರನ್ನು ಕಾಣಬಹುದು. ಈ ಗಣದೇವರು ಯಾರು? ನಮ್ಮ ದೇವರ ಕಾವಲುಗಾರರು. ‘ಕಾಯುವ ದೇವರಿಗೇ ಕಾವಲುಗಾರನೆ?’ ಎಂದು ಕೇಳ ಬೇಡಿ. ಧರ್ಮವನ್ನು ರಕ್ಷಿಸಿದರೆ ಧರ್ಮ ನಿಮ್ಮನ್ನು ರಕ್ಷಿಸುತ್ತದೆ ಎಂಬ ಗೀತೆಯ ಮಾತನ್ನು ನೆನಪಿಸಿಕೊಳ್ಳಿ.

ಹಾಗೆ ನೆನಪಿಸಿಕೊಡುವುದಕ್ಕೋಸ್ಕರವೇ ವಿವೇಕಾನಂದರು ಜನ್ಮವೆತ್ತರು.

“ಈ ಕಾಲದಲ್ಲಿ ಬೃಂದಾವನದಲ್ಲಿ ಕೊಳಲನ್ನೂದುವ ಕೃಷ್ಣನನ್ನು ನೋಡಿಕೊಂಡು ಕುಳಿತರೆ ನಡೆಯುವುದಿಲ್ಲ. ಈಗ ಬೇಕಾಗಿರುವುದು ಗೀತೆಯ ರೂಪದಲ್ಲಿ ಸಿಂಹನಾದ ಮಾಡಿದ ಶ್ರೀಕೃಷ್ಣ, ಧನುರ್ಧಾರಿಯಾದ ರಾಮ, ಮಹಾವೀರ, ಕಾಳೀಮಾತೆ. ಆಗ ಮಾತ್ರ ನಮ್ಮ ಜನ ಉದ್ಯಮಶೀಲರು, ಕರ್ತವ್ಯವಂತರೂ ಆಗಿ ಶಕ್ತಿವಂತರಾಗಿ ಎದ್ದು ನಿಲ್ಲುತ್ತಾರೆ. ಈ ದೇಶದಲ್ಲಿ ಯಾರು ‘ಧರ್ಮ ಧರ್ಮ’ ಎನ್ನುತ್ತಿದ್ದಾರೋ ಅವರಲ್ಲಿ ಅನೇಕರು ದುರ್ಬಲರಾದ ರೋಗಿಗಳು, ಹುಳುಕು ಮೆದುಳಿನವರು ಅಥವಾ ವಿಚಾರಶೂನ್ಯರಾದ ಹುಂಬರು. ಈ ಮಹಾ ರಜೋಗುಣವು ಉದ್ದೀಪ್ತವಾಗದ ಹೊರತು ನಿಮಗೆ ಇಹವೂ ಇಲ್ಲ, ಪರವೂ ಇಲ್ಲ” ಎಂದು ಸ್ವಾಮಿ ವಿವೇಕಾನಂದರು ಝಾಡಿಸುತ್ತಾರೆ.

“ವೇದ್ ಮರ್ಯಾದಾ ಜಗ್ ಮೇ ಚಲಾವೋ
ಗೋವ್ ಘಾತ್ ಕಾ ದೋಷ್ ಜಗ್ ಸೆ ಮಿಠಾವೋ”

ಹಾಗೆಂದು ಗುರು ಗೋವಿಂದ ಸಿಂಗರೂ ಹೇಳಿದರು. ಆದರೆ ಹಿಂದೂಗಳ ಎಮ್ಮೆ ಚರ್ಮದೊಳಕ್ಕೆ ಅದು ಹೊಕ್ಕಲೇ ಇಲ್ಲ. ಇವತ್ತು ಹಿಂದೂ ಧರ್ಮಕ್ಕೆ ಅತಿ ಹೆಚ್ಚು ಅಪಾಯ ಎದುರಾಗಿರುವುದು ಅನ್ಯಧರ್ಮ ಅಥವಾ ಧರ್ಮೀಯರಿಂದಲ್ಲ. ನಮ್ಮಲ್ಲೇ ಇರುವ “Feminish Hinduism”(ಸ್ತ್ರೀ ಸ್ವರೂಪಿ)ನಿಂದ. ಇದನ್ನು ಮೊದಲು ಹುಟ್ಟು ಹಾಕಿದವರು ಚೈತನ್ಯ, ಮೀರಾ ಬಾಯಿ. ಅವ ರೇನೋ ಗೀತೆ, ಭಜನೆ ಹಾಡಿಕೊಂಡು  “Divine Love” ಅನ್ನು ಹುಡುಕಿಕೊಂಡು ಹೋದರು. ಉಳಿದವರೂ ಕೂಡ ವಿಚಾರಶೂನ್ಯರಂತೆ ಅದೇ ಹಾದಿ ತುಳಿದರು. “ಭಗವತಿ, ಪರಮಪತಿ ಪರಮೇಶ್ವರನೇ ನನ್ನ ಪತಿ, ರಾಧೇಯ” ಎಂದು ಎಲ್ಲರೂ ದೇವರಿಗೆ ಶರಣಾಗಲು ಹೊರಟರು. ಇತ್ತ ದೇಶ ಅನ್ಯರಿಗೆ ಶರಣಾಯಿತು! ನೀವು ಯಾವುದೇ ಮಠ, ಮಂದಿರಗಳಿಗೆ ಹೋಗಿ ಶಾಂತಿ, ಶಾಂತಿ ಅಂತ ಬೋಧನೆ ಮಾಡುತ್ತಾರೆ. “ದೇವರಿಗೆ ಶರಣಾಗು, ಉಳಿದಿದ್ದೆಲ್ಲ ದೇವರ ಕೆಲಸ” ಎನ್ನುತ್ತಾರೆ. ನೀವೇ ಯೋಚನೆ ಮಾಡಿ, ಸಂಸಾರಿಗಳಿಗೆ “ಮಂತ್ರದಿಂದ ಮಾವಿನಕಾಯಿ ಉದುರುತ್ತದೆ”, ‘ಬ್ರಹ್ಮ ಸತ್ಯ, ಜಗತ್ ಮಿಥ್ಯ” ಎಂದು ಬೋಧನೆ ಮಾಡಿದರೆ ದೇಶ ಉಳಿಯುತ್ತದೆಯೇ? ಅಪಾಯ ಕಾಲದಲ್ಲಿ ಬೇಕಾಗುವುದು ಕರ್ಮಯೋಗವೇ ಹೊರತು, ಭಕ್ತಿಯೋಗವಲ್ಲ ಅನ್ನುವುದು ನಮ್ಮ ಸ್ವಾಮಿಗಳಿಗೆ ಅರಿವಾಗುವುದು ಯಾವಾಗ? ಮಗು ಬೇಕು ಅಂತ ದೇವರಿಗೆ ಮೊರೆಯಿಟ್ಟರೆ ಸಾಕಾಗುವುದಿಲ್ಲ. ನಮ್ಮ ಪ್ರಯತ್ನವೂ ಬೇಕು ಅಲ್ಲವೆ? ಹಾಗೆಯೇ ‘ಹರೇ ಕೃಷ್ಣ, ಹರೇ ಹರೇ ಹರೇ, ಕೃಷ್ಣ, ಕೃಷ್ಣ, ಕೃಷ್ಣ..’ ಅಂತ ಕುಳಿತುಕೊಂಡಿದ್ದರೆ ಭರತ ಖಂಡ ಖಂಡಿತ ಉಳಿಯುವುದಿಲ್ಲ. ಇವತ್ತು ನಮಗೆ ಬೇಕಾಗಿರುವುದು ದೇವರ ಹೆಗಲಿಗೆ ಹೇರಿ ಕುಳಿತುಕೊಳ್ಳುವ “Passive Hinduism” ಅಥವಾ ‘ಸ್ತ್ರೀ ಸ್ವರೂಪಿ ಹಿಂದೂಯಿಸಂ’ ಅಲ್ಲ, ರಾಣಾ ಪ್ರತಾಪ್, ಶಿವಾಜಿ ಮಹಾರಾಜ, ಗುರು ಗೋವಿಂದ ಸಿಂಗ್, ರಂಜಿತ್ ಸಿಂಗ್ ಅನುಸರಿಸಿದ, ಸ್ವಾಮಿ ವಿವೇಕಾನಂದರು ಹೇಳಿದ “Masculine Hinduism”. ಅದಕ್ಕಾಗಿಯೇ ಶಿವಾಜಿ ಮಹಾರಾಜರು “ಹರ ಹರ ಮಹಾದೇವ್” ಅನ್ನುವುದನ್ನು ಹೇಳಿಕೊಟ್ಟರು, ಗುರು ಗೋವಿಂದ ಸಿಂಗರು “ಸತ್ ಶ್ರೀ ಅಕಾಲ್” ಎನ್ನುತ್ತಾ ಶತ್ರುಗಳನ್ನು ಮಟ್ಟಹಾಕಿ ಎಂದರು. ಸತತ ಹೋರಾಟ ಮಾಡಿದ ರಾಣಾ ಪ್ರತಾಪ್ ಅನುಸರಿಸಿದ್ದೂ  Masculine Hinduism ಅನ್ನೇ. ನಮ್ಮ ಹಳೆಯ ಹನುಮಂತನ ಗುಡಿಗಳನ್ನು ನೆನಪು ಮಾಡಿಕೊಳ್ಳಿ. ಅಲ್ಲಿ ಬರೀ ಭಜನೆಯನ್ನು ಮಾತ್ರ ಮಾಡುತ್ತಿರಲಿಲ್ಲ, ಗರಡಿಗಳೂ ನಡೆಯುತ್ತಿದ್ದವು. ಅಂದರೆ “God realisation”ಗಿಂತ ಮೊದಲು ನೀನೇನು ಎಂಬ “Self realisation” ಅನ್ನು ಜನರಿಗೆ ಮಾಡಿಸಬೇಕು. ಸ್ವರಕ್ಷಣೆಯನ್ನು ನಮ್ಮ ಜನರಿಗೆ ಕಲಿಸಬೇಕು. ಹೋರಾಟ ಮನೋಭಾವನೆಯನ್ನು ಮರಳಿ ತುಂಬಬೇಕು? “ನಮಗೇಕೆ ಮಾರಾಯ?” ಅಂತ ಕುಳಿತರೆ ಗತಿಯೇನು? “ಅಹಿಂಸಾ ಪರಮೋಧರ್ಮ” ಎಂದು ಹೇಳುವ ನಮ್ಮ ಧರ್ಮ, “ಹಸುವನ್ನು ರಕ್ಷಿಸುವ ಸಲುವಾಗಿ ಹುಲಿಯನ್ನು ಕೊಲ್ಲು” ಎಂದೂ ಹೇಳುತ್ತದೆ. ಒಂದು ಕಪಾಳಕ್ಕೆ ಹೊಡೆದರೆ ಇನ್ನೊಂದು ತೋರು ಎನ್ನುವ ಮಹಾತ್ಮ ಗಾಂಧೀಜಿಯವರೇ “I prefer violence to cowardice. Non-violence doesn’t mean cowardice” ಎಂದಿದ್ದರು. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಚೀನಾ ಪ್ರೇರಿತ ಮಾವೋ ವಾದಿಗಳು, ಬಾಂಗ್ಲಾ, ಪಾಕಿಸ್ತಾನ ಪ್ರೋತ್ಸಾಹಿತ ಜಿಹಾದಿಗಳು ಹಾಗೂ ವ್ಯಾಟಿಕನ್ ಪೋಷಿತ ಮತಾಂತರಿಗಳಿಗೆ ನಾವು “Sitting Ducks” ಆಗುವುದರಲ್ಲಿ ಯಾವ ಅನು ಮಾನವೂ ಇಲ್ಲ.

ಒಂದು ಕ್ಷಣ ಯೋಚನೆ ಮಾಡಿ, ಯಾರಾದರೂ ನಿಮ್ಮ ಹೆಂಡತಿ ಅಥವಾ ಸಹೋದರಿಯನ್ನು ಅಪಹರಿಸಲು ಅಥವಾ ಅತ್ಯಾಚಾರಗೈಯ್ಯಲು ಬಂದರೆ ಏನು ಮಾಡುತ್ತೀರಿ? ಅತ್ಯಾಚಾರ ಮಾಡಿದರೆ ಪೊಲೀಸರು ಬಂಧಿಸುತ್ತಾರೆ, ಕೋರ್ಟ್ ಶಿಕ್ಷೆ ಕೊಡುತ್ತದೆ ಅಂತ ಕಾಯುತ್ತೀರೋ ಅಥವಾ ಹಿಡಿದು ಚಚ್ಚುತ್ತೀರೋ? ಹಾಗೆಯೇ “ನಿಮ್ಮ ದೇವರ ಮೂಗು ಸರಿಯಿಲ್ಲ, ನಿಮ್ಮ ದೇವರುಗಳೆಲ್ಲ ಕಾಲ್ಪನಿಕ, ಬಲಿ ಕೇಳುವ ನಿಮ್ಮ ದೇವರು ಮಹಾಕ್ರೂರಿ, ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನೇ ಲಕ್ಷ್ಮಣನಿಗೆ ಹೇಳಿ ಸೀತೆಯನ್ನು ಕೊಂದುಹಾಕಿಸಿದ, ನಿಮ್ಮಲ್ಲಿರುವುದು ಅರೆಬೆತ್ತಲೆ ಸ್ವಾಮಿ ಗಳು, ಕೃಷ್ಣ ಕ್ರಿಸ್ತ ಒಂದೇ” ಎಂದು ಯಾರಾದರೂ ಪುಕ್ಕಟೆ ಬೈಬಲ್ ಹಂಚಲು, ಬೊಗಳೆ ಬಿಡಲು, ಮರುಳು ಮಾಡಲು ಬಂದರೆ ಸುಮ್ಮನೆ ಕುಳಿತುಕೊಳ್ಳಬೇಡಿ. ಇತ್ತೀಚೆಗೆ ದಾವಣಗೆರೆ ಹಾಗೂ ಬೆಂಗಳೂರಿನ ದೊಮ್ಮಲೂರಿನಲ್ಲಿ ಮಾಡಿದಂತೆ ಮತಾಂತರ ಮಾಡಲು ಬಂದವರನ್ನು ಬಂಧಿಸಿ, ಮೈಗೆ ಬಿಸಿ ಮುಟ್ಟಿಸಿ, ಪೊಲೀಸರಿಗೊಪ್ಪಿಸಿ, ಒಂದು ಕೇಸು ಹಾಕಿ. ಅಷ್ಟಕ್ಕೂ ನಮಗೆ ಬೇಕಿರುವುದು ಪಿಳ್ಳಂಗೋವಿ ಕೃಷ್ಣನಲ್ಲ, ಶತ್ರುವನ್ನು ಕೊಲ್ಲು ಎಂದು ರಣರಂಗದಲ್ಲೇ ಭಗವದ್ಗೀತೆ ಬೋಧಿಸಿದ ಶ್ರೀಕೃಷ್ಣ!

ಅಂದಮಾತ್ರಕ್ಕೆ, ದೇವರ ಮುಂದೆ ಗೀತೆಗಳನ್ನು ಹಾಡುವುದು, ಭಜನೆ, ನರ್ತನೆ ಮಾಡುವುದು, ಹರೇ ಹರೇ..ಕೃಷ್ಣ ಕೃಷ್ಣ..ಎನ್ನುವುದು ತಪ್ಪು ಎಂದಲ್ಲ. ಆದರೆ ಶಾಂತಿ ಮಂತ್ರ ಎಲ್ಲ ಕಾಲಕ್ಕೂ ಅನ್ವಯವಾಗುವಂಥದ್ದಲ್ಲ. ಅಪಾಯ ಎದುರಾದಾಗ ಹೋರಾಡಬೇಕೇ ಹೊರತು ದೇವರ ಮೇಲೆ ಭಾರ ಹಾಕಿ ಕುಳಿತುಕೊಳ್ಳುವುದಲ್ಲ. ಪಾಂಡವರು ಹಾಗೂ ಕೌರವರ ನಡುವಿನ ಯುದ್ಧವನ್ನು ತಪ್ಪಿಸುವುದಕ್ಕೋಸ್ಕರ ಸಂಧಾನಕ್ಕೆ ಮುಂದಾಗಿದ್ದ, ಶಾಂತಿ ಬೋಧನೆಗಿಳಿದಿದ್ದ ಕೃಷ್ಣ, ಅಗತ್ಯ ಬಂದಾಗ ಸ್ವಂತ ಮಾವ ಕಂಸನನ್ನೂ ಕೊಂದ, ಜರಾಸಂದನನ್ನೂ ಕೊಲ್ಲಿಸಿದ. ಅದನ್ನು ನಾವೂ ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಕಾಶಿ, ಮಥುರಾ, ಅಯೋಧ್ಯೆ, ಸೋಮನಾಥದಂತಹ ನಮ್ಮ ದೇವಾಲಯಗಳ ಮೇಲೆ ಆಕ್ರಮಣವಾಗುತ್ತಿತ್ತು. ಆದರೆ ಇಂದು ನಮ್ಮ ನಂಬಿಕೆ, ವಿಶ್ವಾಸವನ್ನೇ ಪ್ರಶ್ನಿಸುತ್ತಿರುವ ಹಾಗೂ ಜನರನ್ನು ದಾರಿ ತಪ್ಪಿಸುತ್ತಿರುವ ಮತಾಂತರಿಗಳು, ಜಿಹಾದಿಗಳು ಹಿಂದೂಧರ್ಮದ ಉಳಿವಿಗೇ ಅಪಾಯ ತಂದೊಡ್ಡಿದ್ದಾರೆ. ಕೇವಲ ಮೂವತ್ತು ವರ್ಷಗಳ ಅಂತರದಲ್ಲಿ ದಕ್ಷಿಣ ಕೊರಿಯಾದಂತಹ ಬೌದ್ಧ ರಾಷ್ಟ್ರ ಮತಾಂತರಿಗಳಿಂದಾಗಿ ಕ್ರೈಸ್ತ ರಾಷ್ಟ್ರವಾಗಿ ಮಾರ್ಪಾಡಾಗಿರುವ ಉದಾಹರಣೆ ನಮ್ಮ ಮುಂದಿದೆ. ಒಂದೆಡೆ ಒರಿಸ್ಸಾದಲ್ಲಿ ನಡೆಯುವ ಘಟನೆಗಳಿಗೆ ವ್ಯಾಟಿಕನ್‌ನಿಂದ ಟೀಕೆ ಬರುತ್ತದೆ, ಸರಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ನಾವು ನೀಡುವ ಶುಲ್ಕ ದಲ್ಲಿ ನಡೆಸುತ್ತಿರುವ ಶಾಲೆ, ಕಾಲೇಜುಗಳನ್ನು ಮುಚ್ಚಿ ಬಹುಸಂಖ್ಯಾತರನ್ನೇ ಹೆದರಿಸುತ್ತಾರೆ. ಇನ್ನೊಂದೆಡೆ ಮಲೇ ಷಿಯಾದಲ್ಲಿ ಹಿಂದೂಗಳಿಗೆ ಸರಕಾರ ಸಾಲ ನೀಡುವುದನ್ನೇ ನಿಲ್ಲಿಸಿ ಬೆದರಿಸುತ್ತಿದೆ. ಫಿಜಿಯಲ್ಲಿ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಮಹೇಂದ್ರ ಚೌಧರಿ ಸರಕಾರವನ್ನೇ ಕಿತ್ತೊಗೆದು ಹಿಂದೂಗಳಿಗೆ ಜೀವ ಬೆದರಿಕೆ ಹಾಕುವ ಘಟನೆಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಾವೂ ನಿರ್ಲಿಪ್ತರಾಗಿ ಕುಳಿತರೆ, ಮಾಮೂಲಿ ಜಡತ್ವವನ್ನು ಬಿಡದಿದ್ದರೆ, ಆ ಜಾತಿ-ಜಾತಿ ಅಂತ ನಾವೇ ಬಡಿದಾಡಿ ಕೊಂಡಿದ್ದರೆ ಇರುವ ಏಕೈಕ ನೆಲೆಯಾದ ಭಾರತವೂ ಕೈತಪ್ಪಿ ಹೋಗುವುದಿಲ್ಲವೆ? ಇಂತಹ ಸರಳ ಸತ್ಯ ನಮಗೆ ಅರ್ಥವಾಗಲು ಇನ್ನೆಷ್ಟು ಲಕ್ಷ್ಮಣಾನಂದ ಸರಸ್ವತಿಗಳು ದಾರುಣವಾಗಿ ಹತ್ಯೆಯಾಗಬೇಕು?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: