ನಾವೇನು ಅವರ ಸ್ವಂತ ಆಸ್ತಿ ಕೇಳಿದ್ದೆವಾ?

ಅದೇನು ಇದ್ದಕ್ಕಿದ್ದಂತೆಯೇ ಬೆಳಕಿಗೆ ಬಂದ ವಿಷಯವೂ ಅಲ್ಲ, ಕದ್ದುಮುಚ್ಚಿ ಕಬಳಿಸಿದ ಭೂಮಿಯೂ ಅಲ್ಲ.

ಕಳೆದ ಮೂರು ವರ್ಷಗಳಿಂದಲೂ ವಿಷಯ ನನೆಗುದಿಗೆ ಬಿದ್ದಿತ್ತು. ಬಲ್ತಾಲ್ ಬಳಿ ಭೂಮಿ ಕೊಡಿ ಎಂದು ‘ಶ್ರೀ ಅಮರನಾಥ್ ಶ್ರೈನ್ ಬೋರ್ಡ್’ ೨೦೦೫ರಲ್ಲೇ ಸರಕಾರದ ಮುಂದೆ ಬೇಡಿಕೆ ಇಟ್ಟಿತ್ತು. ಅದಕ್ಕೂ ಕಾರಣವಿದೆ. ಅಮರನಾಥ ಗುಹೆ ಇರುವುದು ಶ್ರೀನಗರದಿಂದ ೧೪೧ ಕಿ.ಮೀ. ದೂರದಲ್ಲಿ, ೧೨,೭೬೦ ಅಡಿ ಎತ್ತರದಲ್ಲಿ. ಪ್ರತಿವರ್ಷ ಮೇ ಬಂತೆಂದರೆ ಅಲ್ಲಿನ ಗುಹೆಯಲ್ಲಿ ಹಿಮದ ಶಿವಲಿಂಗ ಉದ್ಭವವಾಗ ತೊಡಗುತ್ತದೆ ಹಾಗೂ ಆಗಸ್ಟ್‌ನಲ್ಲಿ ಕರಗುತ್ತದೆ. ಇಂತಹ ಒಂದು ಶಿವಲಿಂಗದ ಅಸ್ತಿತ್ವ ಹಾಗೂ ಉಗಮಕ್ಕೆ ೫ ಸಾವಿರ ವರ್ಷಗಳ ಇತಿಹಾಸವಿದೆ. ನಮ್ಮೆಲ್ಲರ ಆರಾಧ್ಯ ದೈವನಾಗಿರುವ ಶಿವ ತನ್ನ ಜೀವನ ರಹಸ್ಯ ಹಾಗೂ ಮಾಯೆಯ ಬಗ್ಗೆ ಪತ್ನಿ ಪಾರ್ವತಿಗೆ ವಿವರಿಸಿದ್ದು ಇದೇ ಗುಹೆಯಲ್ಲಿ. ಅದರ ಪ್ರತೀಕವಾಗಿ ಪಾರ್ವತಿ ಹಾಗೂ ಗಣೇಶನ ಇನ್ನೆರಡು ಹಿಮಗುಡ್ಡೆಗಳೂ ಅಲ್ಲಿ ಉದ್ಭವವಾಗುತ್ತವೆ. ಹಾಗಾಗಿ ಸಹಜವಾಗಿಯೇ ಅಮರನಾಥ ಗುಹೆ ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಮುಸಲ್ಮಾನರು ಹೇಗೆ ಹಜ್ ಯಾತ್ರೆ ಕೈಗೊಳ್ಳುತ್ತಾರೋ ಹಾಗೆಯೇ ಜೀವಮಾನದಲ್ಲಿ ಒಮ್ಮೆಯಾದರೂ ಅಮರನಾಥಕ್ಕೆ ಭೇಟಿ ಕೊಡಬೇಕೆಂಬುದು ಬಹಳಷ್ಟು ಹಿಂದೂಗಳ ಹಂಬಲವಾಗಿದೆ. ಪ್ರತಿವರ್ಷ ಆಷಾಢ ಪೂರ್ಣಿಮೆಯಂದು ಅಮರನಾಥ ಯಾತ್ರೆ ಪ್ರಾರಂಭವಾಗುತ್ತದೆ, ಶ್ರಾವಣ ಪೂರ್ಣಿಮೆಯಂದು ಮುಕ್ತಾಯ. ಆದರೆ ಅಲ್ಲಿಗೆ ಯಾತ್ರೆ ಕೈಗೊಳ್ಳುವುದು, ಹೋಗಿ ತಲುಪುವುದು ಸುಲಭದ ಮಾತಲ್ಲ. ಶ್ರೀನಗರದಿಂದ ೯೬ ಕಿ.ಮೀ. ದೂರದಲ್ಲಿರುವ ಪಹಲ್‌ಗಾಂವ್‌ನಿಂದ ೪೨ ಕಿ.ಮೀ. ದೂರವನ್ನು ನಡೆದೇ ಕ್ರಮಿಸಬೇಕಾಗುತ್ತದೆ. ಹಾಗೆ ಕ್ರಮಿಸಲು ಕನಿಷ್ಠ ನಾಲ್ಕೈದು ದಿನಗಳೇ ಬೇಕು. ಅದೇನು ಸಮತಟ್ಟಾದ ಹಾದಿಯಲ್ಲ. ಪ್ರತಿಕೂಲ ಹವಾಮಾನವನ್ನೂ ಎದುರಿಸಿಕೊಂಡು ಗುಡ್ಡಗಾಡು ಹತ್ತಿ ೧೨,೭೬೦ ಅಡಿ ಎತ್ತರಕ್ಕೆ ತಲುಪಬೇಕು. ಜತೆಗೆ ಭಯೋತ್ಪಾದಕರ ಭಯ. ಇತ್ತೀಚೆಗಂತೂ ಪ್ರತಿವರ್ಷವೂ ಯಾತ್ರಾರ್ಥಿಗಳು ಭಯೋ ತ್ಪಾದಕ ದಾಳಿಗೆ ಬಲಿಯಾಗುತ್ತಿದ್ದಾರೆ. ಇಷ್ಟಾಗಿಯೂ ಜನ ಎದೆಗುಂದಿಲ್ಲ. ಬಲವಾದ ನಂಬಿಕೆ ಅವರನ್ನು ಎಳೆದುಕೊಂಡು ಬರುತ್ತಿದೆ. ಒಂದೂವರೆ ತಿಂಗಳ ಈ ಯಾತ್ರೆ ಯಲ್ಲಿ ವರ್ಷಕ್ಕೆ ಕನಿಷ್ಠ ನಾಲ್ಕು ಲಕ್ಷ ಭಕ್ತಾದಿಗಳು ಪಾಲ್ಗೊಂಡು ಶಿವಲಿಂಗವನ್ನು ದರ್ಶನ ಮಾಡಿ ಬರುತ್ತಾರೆ. ಆದರೆ ೪೨ ಕಿ.ಮೀ. ದೂರವನ್ನು ಕ್ರಮಿಸಲು ಎಷ್ಟು ಜನರಿಗೆ ಸಾಧ್ಯವಾದೀತು? ಮಕ್ಕಳು, ಮಹಿಳೆಯರು, ವಯೋ ವೃದ್ಧರು ಏನು ಮಾಡಬೇಕು?

ಅಮರನಾಥಕ್ಕೆ ತೆರಳಲು ಎರಡು ಮಾರ್ಗಗಳಿವೆ.

ಒಂದು ಸಾಂಪ್ರದಾಯಿಕ ಮಾರ್ಗವಾದ ದೀರ್ಘ ನಡಿಗೆ. ಇನ್ನೊಂದು ಬಲ್ತಾಲ್‌ನಿಂದ ಶೀಘ್ರ ಮಾರ್ಗ. ಅಂದರೆ ಬಲ್ತಾಲ್‌ನಿಂದ ಅಮರನಾಥ್‌ಗೆ ಕೇವಲ ೧೪ ಕಿ.ಮೀಟರ್‌ಗಳಷ್ಟೆ. ಬಹಳಷ್ಟು ಜನರು ಇದೇ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದಕಾರಣ ಯಾತ್ರಾರ್ಥಿಗಳು ತಂಗುವುದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಬಲ್ತಾಲ್ ಬಳಿ ಜಾಗದ ಅವಶ್ಯಕತೆ ಎದುರಾಯಿತು. ಈ ಸಂಬಂಧ ಯಾತ್ರೆ ಆಯೋಜನೆಯ ಉಸ್ತುವಾರಿ ಹೊತ್ತಿರುವ ‘ಶ್ರೀ ಅಮರನಾಥ್ ಶ್ರೈನ್ ಬೋರ್ಡ್’ ೨೦೦೫ರಲ್ಲಿ ಜಮ್ಮು- ಕಾಶ್ಮೀರ ಸರಕಾರದ ಮುಂದೆ ಅಹವಾಲೊಂದನ್ನು ಇಟ್ಟಿತು. ಆ ಅಹವಾಲನ್ನು ಕಾನೂನು ಇಲಾಖೆ ಪರಿಶೀಲನೆ ನಡೆಸಿತು. ಅರಣ್ಯ ಕಾಯಿದೆ ಅಡ್ಡಬರಬಹುದೆಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ನ ಸಮಿತಿ ಕೂಡ ಪ್ರಸ್ತಾವದ ಮೇಲೆ ಕಣ್ಣುಹಾಯಿಸಿತು. ಅಷ್ಟೇಕೆ ಮುಫ್ತಿ ಮೊಹಮದ್ ಸಯೀದ್ ಹಾಗೂ ಅವರ ಪುತ್ರಿ ಮೆಹಬೂಬಾ ಮುಫ್ತಿಯವರ ‘ಪಿಡಿಪಿ’ಗೇ ಸೇರಿರುವ ಅರಣ್ಯ ಸಚಿವ ಖಾಝಿ ಅಫ್ಜಲ್ ಹಾಗೂ ಉಪಮುಖ್ಯಮಂತ್ರಿ ಮುಜಫರ್ ಬೇಗ್ ಕೂಡ ಬೋರ್ಡ್‌ನ ಬೇಡಿಕೆಗೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಇತ್ತ ರಾಜ್ಯದ ಗವರ್ನರ್ ಆಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸಿನ್ಹಾ ಅವರಿಗೂ ಭೂಮಿ ಅಗತ್ಯದ ಅರಿವಾಯಿತು. ಯಾತ್ರಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕೆಂದು ಅವರಿಗೂ ಮನವರಿಕೆಯಾಯಿತು. ಅಷ್ಟಕ್ಕೂ ಕಡಿದಾದ ಬೆಟ್ಟಗಳ ಮೂಲಕ ಹಾದು ಹೋಗುವ ಭಕ್ತಾದಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂಬುದರಲ್ಲಿ ಯಾವ ತಪ್ಪಿದೆ? ಮೇಲಿಂದ ಒಂದು ಕಲ್ಲು ಜಾರಿದರೂ ಕೆಳಭಾಗದಲ್ಲಿ ತಂಗಿರುವ ಯಾತ್ರಾರ್ಥಿಗಳ ಟೆಂಟ್ ಮೇಲೆಯೇ ಬಂದು ಬೀಳುತ್ತದೆ. ಬಹಿರ್ದೆಸೆಗೆ ಹೋಗಬೇಕೆಂದರೆ ಬಯಲಲ್ಲಿ ಕೂರಬೇಕು! ಹಾಗಾಗಿ ರಾಜ್ಯಪಾಲ ಎಸ್.ಕೆ. ಸಿನ್ಹಾ ಅವರು ಶ್ರೀ ಅಮರನಾಥ್ ಶ್ರೈನ್ ಬೋರ್ಡ್‌ನ ಬೇಡಿಕೆಯನ್ನು ಈಡೇರಿಸಬೇಕೆಂಬ ಅಭಿಪ್ರಾಯಕ್ಕೆ ಬಂದರು. ೨೦೦೮, ಮೇ ೨೬ರಂದು ನಿರ್ಧಾರವೊಂದಕ್ಕೆ ಬಂದ ಕೇಂದ್ರ ಸರಕಾರ ಹಾಗೂ ಜಮ್ಮು-ಕಾಶ್ಮೀರ ರಾಜ್ಯ ಸರಕಾರ ಯಾತ್ರಿಗಳಿಗೆ ತಾತ್ಕಾಲಿಕ ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ೩೯.೮೮ ಹೆಕ್ಟೇರ್ ಭೂಮಿಯನ್ನು ಅಮರನಾಥ್ ಶ್ರೈನ್ ಬೋರ್ಡ್‌ಗೆ ವರ್ಗಾಯಿಸಲು ಮುಂದಾಯಿತು. ಪ್ರತಿಯಾಗಿ ಶುಲ್ಕದ ರೂಪದಲ್ಲಿ ೨೩.೧ ದಶಲಕ್ಷ ರೂ. ನೀಡುವಂತೆ ದೇವಾಲಯದ ಆಡಳಿತ ಮಂಡಳಿಗೆ ಸೂಚಿಸಿತು.

ಇದರಲ್ಲಿ ಕಾಶ್ಮೀರಿ ಮುಸಲ್ಮಾನರು ಕೋಪಿಸಿಕೊಳ್ಳುವಂಥದ್ದೇನಿದೆ?

ಶ್ರೀ ಅಮರನಾಥ್ ಶ್ರೈನ್ ಬೋರ್ಡ್‌ಗೆ ಅರಣ್ಯಭೂಮಿ ಯನ್ನು ಶಾಶ್ವತವಾಗಿಯೇನೂ ನೀಡಿಲ್ಲ. ವರ್ಷದಲ್ಲಿ ಒಂದೂವರೆ ತಿಂಗಳಷ್ಟೇ ನಡೆಯುವ ಯಾತ್ರೆಯ ವೇಳೆ ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವುದಕ್ಕಷ್ಟೇ ಭೂಮಿ ನೀಡಲಾಗಿತ್ತು. ಅಷ್ಟಕ್ಕೂ ಯಾತ್ರಾರ್ಥಿಗಳು ಬಯಲಲ್ಲೇ ಮಲಗಲು, ಬಹಿರ್ದೆಸೆಗೆ ಹೋಗಲು ಸಾಧ್ಯವೆ? ಇಲ್ಲಸಲ್ಲದ ಆರೋಪ ಹೊರಿಸುತ್ತಿರುವ ಹಾಗೂ ದ್ವೇಷದ ಕಿಡಿ ಸೃಷ್ಟಿಸುತ್ತಿರುವ ಮೆಹಬೂಬಾ ಮುಫ್ತಿಯವರಿಗೆ ಇಂತಹ ಕನಿಷ್ಠ eನವೂ ಇಲ್ಲವೆ? ಅವರಾಗಿದ್ದರೆ ಬಯಲಲ್ಲಿ ನಿತ್ಯಕರ್ಮವನ್ನು ಮುಗಿಸು ತ್ತಿದ್ದರೆ? ಅದಿರಲಿ, ಕಾಶ್ಮೀರಿ ಮುಸಲ್ಮಾನರು ತಮ್ಮ ಕಿಸೆ ಯಿಂದ ಏನನ್ನೋ ಕೊಡಬೇಕಾಗಿ ಬಂದಿರುವಂತೆ ವರ್ತಿ ಸುತ್ತಿರುವುದೇಕೆ? ಅರಣ್ಯಭೂಮಿಯೇನು ಇವರ ಸ್ವಂತ ಸ್ವತ್ತೆ? ಮುಸಲ್ಮಾನರೇನು ತಮ್ಮ ಸ್ವಂತ ಆಸ್ತಿಯನ್ನು ಕೊಡಬೇಕಾಗಿ ಬಂದಿದೆಯೇ? ಇಂಡಸ್ ನದಿಗೆ ಅಣೆಕಟ್ಟು ಕಟ್ಟಿ ಗುಹೆಗೆ ವಿದ್ಯುತ್ ರವಾನಿಸಲು  ಶ್ರೀ ಅಮರನಾಥ್ ಶ್ರೈನ್ ಬೋರ್ಡ್ ಹವಣಿಸುತ್ತಿದೆ ಎಂದು ವದಂತಿ ಹರಡಿಸಿದ್ದೇಕೆ? ಬಲ್ತಾಲ್ ಬಳಿ ಭೂಮಿ ನೀಡಿದರೆ ಮೊದಲೇ ದುರ್ಬರವಾಗಿರುವ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎನ್ನುತ್ತಿರುವ ಕಾಶ್ಮೀರಿಗರ ವಾದದಲ್ಲಿ ಯಾವ ಹುರುಳಿದೆ? ರಾಜ್ಯದುದ್ದಗಲಕ್ಕೂ ಬಾಂಬ್ ಸಿಡಿಸುವಾಗ ಇವರಿಗೆ ಪರಿಸರ ನೆನಪಾಗುವುದಿಲ್ಲವೆ? ಇತಿಹಾಸದ ಪುಟ ಸೇರಿರುವ ಪೂಂಛ್ ಹಾಗೂ ರಜೌರಿ ನಡುವೆ ಇದ್ದ ‘ಮುಘಲ್ ರಸ್ತೆ’ಗೆ ಈಗ ಮರುಜೀವ ನೀಡಲು ಹೊರಟಿದ್ದು ೧೦ ಸಾವಿರ ಮರಗಳನ್ನು ಕಡಿಯಬೇಕಾಗಿ ಬಂದಿದೆ. ಅದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲವೆ? ಮರ ಕಡಿಯುವುದರ ವಿರುದ್ಧ ಮುಸ್ಲಿಮರೇಕೆ ಅಪಸ್ವರವೆತ್ತುತ್ತಿಲ್ಲ? ಪ್ರತಿಭಟನೆಗೇಕೆ ಮುಂದಾಗಿಲ್ಲ? ಯಾವುದೋ ದುರ್ಗಮ ಸ್ಥಳದಲ್ಲಿ, ಬಟ್ಟಾ ಬಯಲಾದ ೧೦೦ ಎಕರೆ ಜಾಗ ಕೊಟ್ಟರೆ ಮುಸಲ್ಮಾನರಿಗೇಕೆ ನೋವಾಗುತ್ತದೆ? ಅವರು ಕಳೆದುಕೊಳ್ಳುವುದಾದರೂ ಏನು? ಇದೇ ಮುಫ್ತಿ ಮೊಹಮದ್ ಸಯೀದ್ ಸರಕಾರ ೨೦೦೫ರಲ್ಲಿ ‘ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ’ಯ ನಿರ್ಮಾಣಕ್ಕೆ ದಕ್ಷಿಣ ಕಾಶ್ಮೀರದ ಆವಂತಿಪುರದಲ್ಲಿ ಒಟ್ಟು ೮೦೦ ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ ಮುಸ್ಲಿಮರೇಕೆ ದಂಗೆಯೇಳಲಿಲ್ಲ? ಅದಿರಲಿ, ಅಮರನಾಥ್ ಶ್ರೈನ್ ಬೋರ್ಡ್‌ಗೆ ಭೂಮಿ ನೀಡಿದ ಕೂಡಲೇ,  ‘Isಡಿಚಿeಟ-ಣಥಿಠಿe seಣಣಟemeಟಿಣs‘ ರೂಪಿಸುವ ಹುನ್ನಾರವಿದು ಎನ್ನುತ್ತಿದ್ದಾರಲ್ಲಾ ಅದರಲ್ಲಿ ಎಷ್ಟು ಹುರುಳಿದೆ? ಅಮರನಾಥ ಯಾತ್ರೆ ಕೈಗೊಳ್ಳಬೇಕೆಂದಾದರೆ ಸರಕಾರದಿಂದ ಪೂರ್ವ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೆ ವರ್ಷದಲ್ಲಿ ಎರಡು ತಿಂಗಳಷ್ಟೇ ಅಮರನಾಥದ ಮಾರ್ಗ ತೆರೆದಿರುತ್ತದೆ. ಇಂತಹ ವಾಸ್ತವ ತಿಳಿದಿದ್ದೂ ಹುಸಿ ಆರೋಪ ಮಾಡುತ್ತಾರಲ್ಲಾ…

ಕಾಶ್ಮಿರದ ಮೇಲೆ ಮುಸಲ್ಮಾನರಷ್ಟೇ ಹಕ್ಕು ನಮ್ಮ ಪಂಡಿತರಿಗೂ ಇದೆ.

ಆದಾಗ್ಯೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಹಾಗೆ ವಿರೋಧಿಸುವುದೇ ಆದರೆ, ಏರ್‌ಪೋರ್ಟ್‌ಗಳಲ್ಲಿ ಪ್ರತ್ಯೇಕ ‘ಹಜ್ ಟರ್ಮಿನಲ್ಸ್’, ಪ್ರತಿರಾಜ್ಯಗಳಲ್ಲೂ ಹಜ್ ಭವನ, ವಕ್ಫ್ ಬೋರ್ಡ್‌ಗಳನ್ನು ಹೊಂದಲು ಮುಸಲ್ಮಾನರಿಗೆ ಯಾವ ನೈತಿಕ ಹಕ್ಕಿದೆ? ಪ್ರತಿ ವರ್ಷ ೧.೧ ಲಕ್ಷ ಮುಸ್ಲಿಮರು ಭಾರತದಿಂದ ಹಜ್ ಯಾತ್ರೆ ಕೈಗೊಳ್ಳುತ್ತಾರೆ. ಹಜ್ ಸಮಿತಿ ಮೂಲಕ ತೆರಳುವ ಅವರು ಪಾವತಿ ಮಾಡುವುದು ಕೇವಲ ೧೨ ಸಾವಿರ ರೂ! ಆದರೆ ಅವರ ವಿಮಾನಯಾನದ ಟಿಕೆಟ್ ಬೆಲೆಯೇ ತಲಾ ೪೦ ಸಾವಿರ ರೂ.ಗಳಾಗುತ್ತದೆ!! ಅದರಿಂದ ಸರಕಾರಕ್ಕೆ ಪ್ರತಿವರ್ಷ ೪೦೦ ಕೋಟಿ ರೂ. ನಷ್ಟವಾಗುತ್ತಿದೆ. ಇದು ಯಾರ ಹಣ? ಮುಸ್ಲಿಮರಲ್ಲಿ ಅಂಗೈ ಅಗಲ ಅರಣ್ಯಭೂಮಿಯನ್ನು ಕೊಡುವ ಉದಾರತೆಯೂ ಇಲ್ಲವೆ? ಯಾವುದೇ ಧಾರ್ಮಿಕ ವಿವಾದಗಳನ್ನೇ ತೆಗೆದುಕೊಳ್ಳಿ ಅವರೆಂದೂ ಹೃದಯವೈಶಾಲ್ಯತೆಯನ್ನೇ ತೋರಿದವರಲ್ಲ. ಇವರಿಗೆ ಪರಧರ್ಮೀಯರ ಭಾವನೆಗಳು ಅರ್ಥವಾಗಿದ್ದರೆ ಅಮರನಾಥ್ ಶ್ರೈನ್ ಬೋರ್ಡ್‌ಗೆ ಭೂಮಿ ಕೊಟ್ಟಾಗ ಏಕೆ ವಿರೋಧಿಸುತ್ತಿದ್ದರು? ಅದಿರಲಿ, ಭೂಮಿ ವರ್ಗಾವಣೆ ಆದೇಶವನ್ನು ಹಿಂತೆಗೆದುಕೊಂಡ ನಂತರವೂ ಕಾಶ್ಮೀರದಲ್ಲಿ ಪ್ರತಿಭಟನೆ ಮುಂದುವರಿದಿದೆ ಎಂದಾದರೆ ಅವರ ಉದ್ದೇಶ ಏನಿರಬಹುದು? “ಐoಥಿಚಿಟಣಥಿ ಣo ಥಿouಡಿ  homeಟಚಿಟಿಜ is ಠಿಚಿಡಿಣ oಜಿ ಜಿಚಿiಣh” ಅಂತ ಇಸ್ಲಾಂನಲ್ಲೇ ಹೇಳಿದ್ದರೂ ಅನುಯಾಯಿಗಳ ವರ್ತನೆಯಲ್ಲಿ ಮಾತ್ರ ಅದು ಕಾಣುತ್ತಿಲ್ಲ ಅಲ್ಲವೆ?

ಈ ರೀತಿಯ ಮನಸ್ಥಿತಿಯೇ ಎಲ್ಲ ಸಮಸ್ಯೆಗಳಿಗೂ ಮೂಲ ಕಾರಣವಾಗಿದೆ.

ಇಂತಹ ವ್ಯಕ್ತಿಗಳ ಪ್ರತಿಭಟನೆಗೆ ಬೆದರಿ ಭೂಮಿ ವರ್ಗಾವಣೆ ಆದೇಶವನ್ನೇ ಹಿಂತೆಗೆದುಕೊಂಡ ಸರಕಾರದ ಪುಕ್ಕಲುತನಕ್ಕೆ ಏನನ್ನಬೇಕು? ಜಮ್ಮುವಿನಲ್ಲಿ ಬಹುಸಂಖ್ಯಾತ ರಾಗಿರುವ ಹಿಂದೂಗಳೂ ಕೂಡ ಇದೇ ರೀತಿ ವರ್ತಿಸಿದರೆ ಏನಾದೀತು? ಅಕ್ಕಿ, ತರಕಾರಿಯಿಂದ ಹಿಡಿದು ಎಲ್ಲ ಸರಕು ಸರಂಜಾಮುಗಳೂ ಜಮ್ಮು ಮೂಲಕವೇ ಕಾಶ್ಮೀರಕ್ಕೆ ಸಾಗಬೇಕು. ಒಂದು ವೇಳೆ ಹಿಂದೂಗಳು ಜಮ್ಮು-ಶ್ರೀನಗರ ಹೆದ್ದಾರಿಗೆ ಅಡ್ಡವಾಗಿ ನಿಂತರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಬಹುದು? ಸರಕಾರ ಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ, ವಾಪಸ್ ಕರೆತರುವ ಮಾತನಾಡುತ್ತಿದೆ. ನಲವತ್ತು ಹೆಕ್ಟೇರ್ ಸರಕಾರಿ ಭೂಮಿಯನ್ನು ನೀಡಿದ್ದಕ್ಕೇ ಬೀದಿಗಿಳಿದಿರುವ ಮುಸ್ಲಿಮರು ಹಿಂದೂಗಳು ಕಣಿವೆಗೆ ವಾಪಸಾಗಲು ಬಿಟ್ಟಾರೆಯೇ? ಅಷ್ಟಕ್ಕೂ ಶತಶತಮಾನಗಳಿಂದಲೂ ಕಣಿವೆಯಲ್ಲಿದ್ದ ನಮ್ಮ ಪಂಡಿತರ ‘ಇಣhಟಿiಛಿ ಅಟeಚಿಟಿsiಟಿg”  ಮಾಡಿದ್ದಾರು? ನೀವೇ ಹೇಳಿ, ಜೂನ್ ೨೨ರಿಂದ ಜುಲೈ ಮೊದಲ ವಾರದವರೆಗೂ ಕಾಶ್ಮೀರದಲ್ಲಿ ನಡೆದ ಘಟನೆಗಳು ಮುಸಲ್ಮಾನರು ಬಹು ಸಂಖ್ಯಾತರಾದರೆ ಯಾವ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂಬುದಕ್ಕೆ ಮುನ್ಸೂಚನೆ ಎಂದನಿಸು ವುದಿಲ್ಲವೆ?

ಈ ಮಧ್ಯೆ, ಪ್ರತಿಭಟನೆಯ ನಡುವೆಯೂ ಅಮರನಾಥ ಯಾತ್ರಾರ್ಥಿಗಳಿಗೆ ಸಹಾಯ ಮಾಡುತ್ತಿರುವ ಕಾಶ್ಮೀರಿ ಮುಸಲ್ಮಾನರ ‘ಸತ್ಕಾರ ಗುಣ’ದ ಬಗ್ಗೆ ಕೆಲವರು ಮಾಧ್ಯಮಗಳಲ್ಲಿ ಹಾಡಿ ಹೊಗಳುತ್ತಿದ್ದಾರೆ! ಆದರೆ ವಾಸ್ತವದಲ್ಲಿ ಅವರೇನು ಸತ್ಕಾರ ಮಾಡುತ್ತಿದ್ದಾರೆಯೇ? ಅಮರನಾಥ ಯಾತ್ರೆಯುದ್ದಕ್ಕೂ ಸಿಗುವ ವ್ಯಾಪಾರಿಗಳೆಲ್ಲರೂ ಮುಸಲ್ಮಾನರೇ. ಯಾತ್ರಾರ್ಥಿಗಳಿಗೆ ಊರುಗೋಲು, ಕಂಬಳಿ, ಚಾಪೆ, ಟವೆಲ್, ಟೆಂಟ್‌ಗಳನ್ನು ಮಾರಾಟ ಮಾಡು ತ್ತಾರೆ. ಕುದುರೆಗಳನ್ನು ಬಾಡಿಗೆಗೆ ನೀಡುತ್ತಾರೆ. ಎರಡು ತಿಂಗಳು ದುಡಿದರೆ ವರ್ಷಪೂರ್ತಿ ಕುಳಿತು ತಿನ್ನಬಹುದು ಅಷ್ಟು ಲಾಭವಾಗುತ್ತದೆ. ಇದರಲ್ಲಿ ಸತ್ಕಾರದ ಮಾತೆಲ್ಲಿಂದ ಬಂತು?! ಒಂದೆಡೆ ತಾತ್ಕಾಲಿಕ  ಉದ್ದೇಶಕ್ಕಾಗಿ ಭೂಮಿ ನೀಡಿದ್ದರ ವಿರುದ್ಧವೂ ಹೋರಾಡುತ್ತಾರೆ, ಇನ್ನೊಂದೆಡೆ ಸತ್ಕಾರದ ನೆಪದಲ್ಲಿ ವ್ಯಾಪಾರವನ್ನೂ ಮಾಡುತ್ತಾರೆ. ಹೇಗಿದೆ ನೋಡಿ ತಂತ್ರ? ಇಂತಹ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕನುಗುಣವಾಗಿ ಸೇನೆಯಲ್ಲಿ ಮೀಸಲು, ಸರಕಾರಿ ಉದ್ಯೋಗ, ನ್ಯಾಯಾಂಗದಲ್ಲಿ ಮೀಸಲು ನೀಡಬೇಕೆಂದು ಸಾಚಾರ್ ಸಮಿತಿ ಶಿಫಾರಸು ಮಾಡಿದೆ. ಆ ಶಿಫಾರಸುಗಳನ್ನು ಜಾರಿಗೊಳಿಸಿದರೆ ದೇಶಕ್ಕೆ ಯಾವ ಗತಿ ಒದಗಿ ಬರಬಹು ದೆಂಬುದನ್ನು ಊಹಿಸಿಕೊಳ್ಳಿ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: