ಮಲ್ಲಿಗೆ,ಕರಿಬೇವು ಮತ್ತು ಕೊತ್ತಂಬರಿ – Home Medicine : Jasmine Flower, Curry leaves and coriander

Kottambari
ಕೊತ್ತಂಬರಿಯನ್ನು ಬೀಜಕ್ಕಾಗಿ (ಧನಿಯಾ, ಹವೀಜ) ಮತ್ತು ಸೊಪ್ಪಿಗಾಗಿ ಬೆಳೆಯುತ್ತಾರೆ. ಇದನ್ನು ಔಷಧಿಯಾಗಿ ಗ್ರೀಕ್ ವೈದ್ಯರು ಬಳಸುತ್ತಿದ್ದರಂತೆ. ಇದರ ಬೀಜವನ್ನು ಮಸಾಲೆಪುಡಿ, ಸಾಂಬಾರಪುಡಿಗಾಗಿ ಬಳಸಿದರೆ, ಸೊಪ್ಪನ್ನು ತಿನ್ನಲು ಬಳಸುತ್ತಾರೆ. ಇದರಲ್ಲಿ ವಿಟಮಿನ್ ‘ಸಿ’ ಮತ್ತು ವಿಟಮಿನ್ ‘ಎ’ದ ಅಂಶವಿರುತ್ತದೆ. ಇದರಲ್ಲಿ ಪೋಷಕಾಂಶಗಳಾದ ಸುಣ್ಣಾಂಶ, ರಂಜಕ, ಮತ್ತು ಕಬ್ಬಿಣ ಅಂಶ ಇವೆ.
ಔಷಧೀಯ ಗುಣಗಳು :

* ಬಾಯಿಹುಣ್ಣಿನ ತೊಂದರೆ ನಿವಾರಿಸಲು ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಬೇಕು. ಇಲ್ಲವೆ ಊಟದ ನಂತರ ಎಲೆಗಳನ್ನು ಅಗಿದು ತಿನ್ನಬೇಕು.

* ಇದರಲ್ಲಿ ಅಧಿಕ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆಯಿಂದ (ಎನಿಮಿಕ್)ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಚಮಚೆ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಬೇಕು. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುವುದು.

* ಉಷ್ಣದಿಂದ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಬೇಕು.

* ತಲೆಸುತ್ತಿಗೆ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲುಸಕ್ಕರೆ ಬೆರೆಸಿ ಸೇವಿಸಬೇಕು.

* ಆಹಾರವು ಸುಲಭವಾಗಿ ಜೀರ್ಣವಾಗಲು, ಹೊಟ್ಟೆಯುಬ್ಬರ ಕಾಡದೆ ಇರಲು ಪ್ರತಿದಿನ ಊಟದ ನಂತರ ಒಂದು ಲೋಟ ಮಜ್ಜಿಗೆಯನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಅಥವಾ ರಸದೊಂದಿಗೆ ಕುಡಿಯುವದನ್ನು ರೂಢಿಸಿಕೊಳ್ಳಬೇಕು.

* ಹಲ್ಲು ಹುಳುಕಾಗುದನ್ನು ತಡೆಯಲು, ಒಸಡು ಗಟ್ಟಿಗೊಳಿಸಲು ಪ್ರತಿದಿನ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ತಿನ್ನಬೇಕು.

ಅಡುಗೆಯಲ್ಲಿ ಹಲವಾರು ವಿಧಗಳಿಂದ ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಕೊತ್ತಂಬರಿಯಲ್ಲಿಯ ತೈಲಾಂಶ ಪಿತ್ತನಾಶಕವೂ ಆಗಿದೆ. ಕೊತ್ತಂಬರಿ ಸೊಪ್ಪಿನಿಂದ ಚಟ್ನಿ, ಸಂಡಿಗೆ, ವಡೆ, ದೋಸೆ, ಹಪ್ಪಳ ತಯಾರಿಸುವ ವಿಧಾನವನ್ನು ಲೇಖಕರು ವಿವರವಾಗಿ ಬರೆದಿದ್ದಾರೆ. ಹೆಚ್ಚಿನ ವಿವರಗಳಿಗೆ “ಮನೆಯಂಗಳದಲ್ಲಿ ಔಷಧಿವನ” ಪುಸ್ತಕವನ್ನುತಪ್ಪದೇ ಓದಿ. ಈ ಪುಸ್ತಕ ನಿಮ್ಮ ಮನೆಯಲ್ಲಿರಲಿ… ಅನಾರೋಗ್ಯ ಮೈಲಿ ದೂರಕ್ಕೆ ಓಡಿ…

ಮನೆಮದ್ದು ಓದಿದ ಮೇಲೆ ನಿಮಗೇನನ್ನಿಸಿತು. ನಿಮಗೆ ಗೊತ್ತಿರುವ ಮನೆಮದ್ದನ್ನು ನಮ್ಮಂದಿಗೆ ಹಂಚಿಕೊಳ್ಳಿ.

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: