ಹೋಮಿಯೋಪಥಿ ಲೇಖನ ಮಾಲಿಕೆಗೆ ಪತ್ರಗಳ ಮಹಾಪೂರ -Alternative Treatment and Homeopathy(Part-4)

ಪರ್ಯಾಯ ಔಷಧಿ(ಚಿಕಿತ್ಸೆ) ಹೋಮಿಯೋಪಥಿಯ ಬಗ್ಗೆ ಬರೆದ ನನ್ನ ಲೇಖನಗಳಿಗೆ ವಾಚಕರಿಂದ ಪತ್ರಗಳ ಮಹಪೂರವೇ ಬಂದಿದೆ. ‘ದಟ್ಸ್‌ಕನ್ನಡ’ ಅಂತರ್ಜಾಲ ಪತ್ರಿಕೆಯ ವಾಚಕರಿಗೆ ನಾನು ಕೃತಜ್ಞ. ನನ್ನ ಲೇಖನದ ಉದ್ದೇಶ ‘ಹೋಮಿಯೋಪಥಿ”ಯಿಂದಾದ ಅದ್ಭುತ ರೋಗನಿವಾರಕ ಪ್ರಭಾವದ ಬಗ್ಗೆ ನನ್ನ ಸ್ವಂತದ ಅನುಭವಗಳನ್ನು ವಾಚಕರಲ್ಲಿ ಹಂಚಿಕೊಳ್ಳುವುದಾಗಿತ್ತು.
ಡಾ.ಜೀವಿ ಕುಲಕರ್ಣಿನಮ್ಮೆಲ್ಲರ (ಶ್ರೀಸಾಮಾನ್ಯರ) (ಅ)ಸಾಮಾನ್ಯ ‘ವೈರಿ” ಎಂದರೆ ರೋಗ. ರೋಗ ನಿವಾರಣೆ ಮುಖ್ಯ, ಯಾವ ಮಾರ್ಗವನ್ನು ಅನುಸರಿಸುವೆವು ಮುಖ್ಯವಲ್ಲ. ನಾವು ನಿರ್ದಿಷ್ಟ ಊರು ತಲುಪಲು ಬಸ್, ರೈಲು, ಕಾರು, ಪ್ಲೇನು ಬಳಸಬಹುದು. ಕಾಲುನಡಿಗೆಯಿಂದ ಕೂಡ ಪ್ರವಾಸ ಮಾಡಬಹುದು. ರೋಗ ನಿವಾರಣೆಗೆ ಅನೇಕ ‘ಥೆರಪಿ”ಗಳಿವೆ. ಮಂತ್ರಗಳಿಂದ ಕೂಡ ರೋಗವನ್ನು ಹೋಗಲಾಡಿಸುವವರಿದ್ದಾರೆ. ಎಲ್ಲಾ ಔಷಧಿ ಮದ್ದು ವಿಫಲವಾದಾಗ ಹೋಮ-ಹವನದಿಂದ, ಮಂತ್ರ-ಜಪದಿಂದ, ಕುಲದೇವತೆಯ ಯಾತ್ರೆ ದರ್ಶನದಿಂದ ಸಮಾಧಾನ ದೊರೆತ ಉದಾಹರಣೆಗಳೂ ಇವೆ. ಜಾತಕ ಪರಿಶೀಲನೆಯಿಂದ ರೋಗದ ಸರಿಯಾದ ಕಲ್ಪನೆ ಬರುತ್ತದೆ ಎಂದು ಹೇಳುವವರಲ್ಲಿ ಡಾ. ರಹಾಳಕರರು ಒಬ್ಬರು.

ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ಬರೆದ ನನ್ನ ಲೇಖನಕ್ಕೆ ಐವತ್ತರಷ್ಟು ಪತ್ರಗಳು ಬಂದಿವೆ, ಇನ್ನೂ ಬರುತ್ತಲೇ ಇವೆ. ಹೆಚ್ಚಿನ ಪತ್ರಗಳು ಆತ್ಮೀಯವಾಗಿವೆ. ಗೌಪ್ಯವನ್ನು ಕಾಯಬೇಕು ಎಂಬ ವಿನಂತಿಯೊಂದಿಗೆ ಬಂದಿವೆ. ಆದ್ದರಿಂದ ಅವುಗಳನ್ನು ಉದ್ಧರಿಸುವುದಿಲ್ಲ. ಎಲ್ಲರಿಗೂ ನಾನು ಉತ್ತರ ಬರೆದಿದ್ದೇನೆ. ನನ್ನ ಸಲಹೆಯಿಂದ ಅವರಿಗೆ ಪ್ರಯೋಜನವಾದರೆ ನನ್ನ ಶ್ರಮ ಸಾರ್ಥಕವಾದಂತೆ.

ಪಂಜಾಬದಿಂದ ಒಬ್ಬರು ನನಗೆ ಪತ್ರ ಬರೆಯುತ್ತ, ‘ಬೆಂಗಳೂರಲ್ಲಿ ಪ್ರಸಿದ್ಧ ಹೋಮಿಯೋಪಥಿ ಡಾಕ್ಟರರಿದ್ದಾರೆ (ಡಾ. ಬಿ.ಟಿ.ರುದ್ರೇಶ) ನಿಮಗೆ ಅವರು ಗೊತ್ತೇ?” ಎಂದು ಕೇಳಿದರು. ನಾನು ಉತ್ತರಿಸುತ್ತ, ‘ಅವರ ಬಗ್ಗೆ ಓದಿದ್ದೇನೆ, ಅವರನ್ನು ಕಾಣಬೇಕೆಂಬ ಆಸೆ ಇದೆ. ನಾನು ಒಂದು ವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ನಿಮಗೆ ಅವರ ವೀಳಾಸ ಗೊತ್ತಿದ್ದರೆ ತಿಳಿಸಿರಿ” ಎಂದು ಬರೆದೆ. ನನಗೆ ಅವರ ವಿಳಾಸ ಸಂಪರ್ಕ ದೂರಧ್ವನಿ ನಂಬರ್ ತಿಳಿಸಿದ್ದಾರೆ.

ಮುಂಬೈಯ ಒಬ್ಬ ಪ್ರಸಿದ್ಧ ಲೇಖಕರ ಸಹೋದರ, ಎಂಜಿನಿಯರಿಂಗ ಕಾಲೇಜಿನ ನಿವೃತ್ತ  ಪ್ರಾಧ್ಯಾಪಕರೊಬ್ಬರು (ಅವರು ಲೇಖಕರು ಕೂಡ) ತಮ್ಮ ಮೊಮ್ಮಗಳ ಎತ್ತರ ಹೆಚ್ಚಿಸಲು ಔಷಧಿ ಕಳಿಸಲು ಸಾಧ್ಯವೇ ಎಂದು ಫೊನ್ ಮಾಡಿದರು. ‘ನಾನೇ ಮೈಸೂರಿಗೆ ಬರುತ್ತಿದ್ದೇನೆ ಬರುವಾಗ ಔಷಧಿ ತರುವೆ” ಎಂದು ಉತ್ತರಿಸಿದೆ. ಅವರ ತಂದೆ ಕನ್ನಡ ಪಂಡಿತರು. ಧಾರವಾಡದಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ನಾನು ಅವರನ್ನು ಕಂಡು ಮಾತಾಡಿದ ಸ್ಮೃತಿಚಿತ್ರ ಮನದಲ್ಲಿ ಮೂಡಿತು, ಖುಶಿಯಾಯಿತು.

ಹುಬ್ಬಳ್ಳಿಯ ಡಾ.ವಿನಯ ವರ್ಮಾ ಅವರ ಬಗ್ಗೆ, ಅವರ ಸೂಜಿಚಿಕಿತ್ಸೆಯ(ಆಕ್ಯುಪಂಕ್ಚರ್) ತಜ್ಞತೆಯ ಬಗ್ಗೆ  ಹಿಂದೆ ಮೂರು ಲೇಖನ ಬರೆದಿದ್ದೆ. ಅದನ್ನು ಅಮೇರಿಕಾವಾಸಿ ಒಬ್ಬ ಇಂಜಿನಿಯರ್ ಓದಿ ಮದ್ರಾಸಿನಲ್ಲಿರುವ ತಮ್ಮ ತಂದೆಗೆ ಪತ್ರ ಬರೆದರು. ಅವರ ಎರಡು ವರ್ಷದ ಮಗುವಿಗೆ ಕೈಕಾಲು ಚಲಿಸುತ್ತಿರಲಿಲ್ಲ. ಮಗುವನ್ನು ಕರೆದುಕೊಂಡು ಅಜ್ಜ ಹುಬ್ಬಳ್ಳಿಗೆ ಬಂದಿದ್ದರು. ಎರಡು ವಾರದಲ್ಲಿ ಗಣನೀಯ ಸುಧಾರಣೆ ಕಂಡುಬಂದಿತ್ತು. ಮಗುವಿನ ಚಿಕಿತ್ಸೆ ನಡೆದಾಗ (ಖಾಸಗಿ ಕೆಲಸಕ್ಕಾಗಿ) ನಾನು ಹುಬ್ಬಳಿಗೆ ಹೋಗಿದ್ದೆ. ಡಾ. ವರ್ಮಾ ಅವರಿಗೆ ‘ಹಲೋ” ಎಂದು ಪೋನ್ ಮಾಡಿದೆ. ‘ಎಲ್ಲಿದ್ದೀರಿ?” ಅಂತ ಕೇಳಿದರು. ಹುಬ್ಬಳ್ಳಿಗೆ ಬಂದ ವಿಷಯ ತಿಳಿಸಿದೆ. ತಮ್ಮ ಆಸ್ಪತ್ರೆಗೆ ಬರಲು ಕರೆದರು. ಗುಣಮುಖನಾಗುತ್ತಿದ್ದ ಬಾಲಕನನ್ನು ತೋರಿಸಿದರು. ‘ಈ ಹುಡುಗನ ಅಜ್ಜ ಮದ್ರಾಸಿನಿಂದ ಬಂದಿದ್ದಾರೆ. ಹುಡುಗನ ತಂದೆ ಅಮೇರಿಕೆಯಲ್ಲಿದ್ದಾರೆ. ನಿಮ್ಮ ಲೇಖನ ಓದಿ ಮಗನನ್ನು ಇಲ್ಲಿ ಕಳಿಸಿದ್ದಾರೆ” ಎಂದು ಹೇಳಿ ನನ್ನನ್ನು ಆ ವೃದ್ಧರಿಗೆ ಪರಿಚಯಿಸಿದರು.

‘ಇವರ ಲೇಖನ ಓದಿಯೇ ನಿಮ್ಮ ಮಗ ನಿಮ್ಮನ್ನಿಲ್ಲಿಗೆ ಕಳಿಸಿದ್ದು” ಎಂದು ಹೇಳಿದಾಗ, ಆ ಹಿರಿಯರ ಕಣ್ಣಲ್ಲಿ ಕೃತಜ್ಞತೆಯ  ಬಾಷ್ಪ ಕಂಡೆ. ‘ನಾನು ಲೇಖನ ಬರೆದದ್ದು ಸಾರ್ಥಕವಾಯಿತು” ಎಂದು ಮಿತ್ರ ವರ್ಮಾ ಅವರಿಗೆ ಹೇಳಿದೆ.

ನನಗೆ ಬಂದ ಹೆಚ್ಚಿನ ಪತ್ರಗಳು ತಲೆಯ ಕೂದಲು ಉದುರುವಿಕೆಯ ಬಗ್ಗೆ ಇವೆ. ಒಬ್ಬರಿಗೆ 32ವರ್ಷ. ತಲೆಯ ಮುಂಭಾಗದಲ್ಲಿ ಕೂದಲು ಉದುರುತ್ತಿವೆ, ಮುಂಭಾಗ ಬೋಳಾಗುತ್ತಿದೆ ಇದಕ್ಕೆ ಉಪಾಯವಿದೆಯೇ? ಎಂದು ಕೇಳಿದ್ದಾರೆ. ನನಗೆ ತಿಳಿದ ಮಟ್ಟಿಗೆ ‘ವೈರಲ್ ಇನ್‌ಫೆಕ್ಶನ್”ನಿಂದಾಗಿ ಕೂದಲು ಉದುರಿದ್ದರೆ ಅದಕ್ಕೆ ಔಷಧಿ ಕೊಡುತ್ತಾರೆ ಎಂದು ಉತ್ತರಿಸಿದೆ. ಡಾಕ್ಟರನ್ನು ಸಂಪರ್ಕಿಸಿ ‘ಬಾಲ್ಡ್‌ನೆಸ್”ಗೆ ಮದ್ದು ಇದೆಯೇ ಎಂದು ಕೇಳಿದೆ.  ‘ವಯಸ್ಸು ಕಡಿಮೆ ಇದ್ದರೆ ಈ ಔಷಧಿ ಕೆಲಸಮಾಡುತ್ತದೆ” ಅಂದರು.(‘ಖಲ್ವಾಟು ದರಿದ್ರಃಕ್ವಚಿತ್” ಎಂಬ ಸಂಸ್ಕೃತ ಸುಭಾಷಿತ ನೆನಪಾಯ್ತು).

ಮಕ್ಕಳ ಎತ್ತರದ ಬಗ್ಗೆ ಹಲವಾರು ಪತ್ರಗಳಿವೆ. ಗಂಡುಮಗು ಆಗಿದ್ದರೆ 12ರಿಂದ ಹದಿನೈದು ವರ್ಷದ ಬಗ್ಗೆ  ಡಾ.ರಹಾಳಕರರ ಔಷಧಿ ಪರಿಣಾಮಕಾರಿಯಾಗಿದೆಯಂತೆ. ಆದರೆ ಹೆಣ್ಣುಮಕ್ಕಳ ವಿಷಯದಲ್ಲಿ ‘ಅವರು ರಜಸ್ವಲೆ (ದೊಡ್ಡವರು) ಅದ ಮೇಲೆ ಈ ಔಷಧಿ ಪರಿಣಾಮ ಬೀರುವುದಿಲ್ಲ” ಎಂದು ಡಾಕ್ಟರರು ಹೇಳುತ್ತಾರೆ.

ಗಾಲ್‌ಬ್ಲಾಡರ್, ಕಿಡ್ನಿಯಲ್ಲಿ ಸ್ಟೋನ್ ಇದ್ದವರು ಪತ್ರ ಬರೆದಿದ್ದಾರೆ. ಹೋಮಿಯೋಪಥಿ ಮಾತ್ರೆಯಿಂದ ಶಸ್ತ್ರಚಿಕಿತ್ಸೆ ಇಲ್ಲದೇ ಸ್ಟೋನ್ ವಾಸಿ ಮಾಡಬಹುದು.
ವಿದೇಶದಿಂದ ಒಬ್ಬರು ತಮ್ಮ ಮಕ್ಕಳ ಸಮಸ್ಯೆಗಳ ಬಗ್ಗೆ ಸುದೀರ್ಘ ಪತ್ರ ಬರೆದು ಸಲಹೆ ಕೇಳಿದ್ದಾರೆ. ಮಕ್ಕಳ ಜಾತಕ ಇಲ್ಲ ಎಂದು ಜನನ ವಿವರ ತಿಳಿಸಿದ್ದಾರೆ. ಡಾಕ್ಟರ್ ರಾಹಾಳಕರರಿಗೆ ಆ ವಿವರ ಒದಗಿಸಿ ಜಾತಕ ಸಿದ್ಧ ಪಡಿಸಲು ಹೇಳಿದ್ದೇನೆ. ಹಾಗೆ ನೋಡಿದರೆ ಕಂಪ್ಯೂಟರ್‌ದಲ್ಲಿ ಜಾತಕ ಬರೆವ ಸಾಫ್ಟವೇರ್ ಇದೆ. ಅಂಥ ಜಾತಕ ರೆಡಿಮೇಡ್ ಬಟ್ಟೆ ಇದ್ದಂತೆ. ಜಾತಕ ಹಾಕಿಸುವುದು ಬಟ್ಟೆ ನಿಮ್ಮ ಅಳತೆ ಕೊಟ್ಟು ಹೊಲಿಸಿದಂತೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: