Bangalore series blasts and unanswered questions – ಒಂದು ಶುಕ್ರವಾರ ಮತ್ತು ಆರು ಬಾಂಬ್!

ಬೆಂಗಳೂರೆಂಬ ಬೆಂಗಳೂರು ಇದ್ದಕ್ಕಿದ್ದಂತೆ ನಡುಗಿ ಹೋಯಿತು. ಮೂದಲ ಸುದ್ದಿ ಬಂದಿದ್ದು ಮಡಿವಾಳ ಚೆಕ್ ಪೋಸ್ಟ್‌ನಲ್ಲಿ ಬಾಂಬ್ ಸಿಡಿಯಿತಂತೆ, ಹಿಂದೆಯೇ ನಾಯಂಡಹಳ್ಳಿ ಮತ್ತೊಂದು ಬಾಂಬ್ ಸ್ಫೋಟವಾಯಿತು ಅಂತ ಸುದ್ದಿ ಬಂತು. ಅರ್ಧ ಗಂಟೆಯ ಫಾಸಲೆಯಲ್ಲಿ ಒಟ್ಟು ಆರು ಬಾಂಬ್ ಗಳು ಸಿಡಿದವು. ಒಬ್ಬ ಹೆಣ್ಣು ಮಗಳು ತೀರಿಕೊಂಡಳು. ಐದು ಜನ ಗಾಯಗೊಂಡರು.

Of course, ಹೆಚ್ಚಿನ ಅನಾಹುತವೇನೂ ಆಗಲಿಲ್ಲ. ಬೆಂಗಳೂರು ಇನ್ನು ಬೆಂಗಳೂರಾಗಿ, ಉದ್ಯಾನ ನಗರಿಯಾಗಿ, ಕನಕ ವೃಷ್ಟಿಯಿಂದ ಸುರಿಸುವ ಐ.ಟಿ.ಸಿಟಿಯಾಗಿ ಉಲಿಯಲಿಲ್ಲ. “ಇದು ಮುಸ್ಲಿಂ ಉಗ್ರಗಾಮಿಗಳದೇ ಕೆಲಸ” ಅಂತ ಜನ ಮಾತನಾಡುತ್ತಿರುವುದಕ್ಕೆ ಕಾರಣಗಳಿವೆ. ಮೂದಲನೆಯದಾಗಿ, ಇವತ್ತು ಶುಕ್ರವಾರ. ಹಿಂದೆ ಮುಂಬಯಿಯಲ್ಲಿ ನೂರಾರು ಜನರನ್ನು ಕೊಂದ ಸರಣಿ ಬಾಂಬ್ ಸ್ಫೋಟಗಳನ್ನೂ ಶುಕ್ರವಾರದಂದೇ ಮಾಡಲಾಗಿತ್ತು. ಎರಡನೆಯದಾಗಿ, ಬೆಂಗಳೂರಿನಲ್ಲಿ ಇಂಥದೊಂದು ಕ್ರೌರ್ಯ ಮೆರೆಯಲಿಕ್ಕೆ ಬೇರೆ ಯಾವ ಗುಂಪಿಗೂ ಅಂಥ ಬಲವಾದ ಕಾರಣವಿಲ್ಲ. ಹಾಗಂತ ಮುಸ್ಲಿಮರೆಲ್ಲರನ್ನೂ ಗುಮಾನಿಯಿಂದ ನೋಡಬೇಕಾಗಿಲ್ಲ. ಒಂದ್ಯಾವುದೋ ಸಂಘಟನೆ, ಈಗಷ್ಟೆ ಚಿಗುರಿಕೊಂಡಿರುವಂತಹುದು ಈ ಕೆಲಸ ಮಾಡಿದೆಯಾ? ದೊಡ್ಡ ಮಟ್ಟದ ಭಯೋತ್ಪಾದನೆ ಮಾಡಬಲ್ಲ ಗುಂಪಿನೊಂದಿಗೆ ಸಂಪರ್ಕ ಪಡೆಯುವ, ಅದರ ನಾಯಕರಿಗೆ ತನ್ನ ತಾಕತ್ತು ತೋರಿಸಿಕೊಡುವ ಪ್ರಯತ್ನ ಮಾಡಿದೆಯಾ?ಹಾಗಂತ ಗುಮಾನಿ ಮೂಡುವುದು ಸಹಜ.

ಎಲ್ಲಕ್ಕಿಂತ ಮುಂಚೆ ಜುಲೈ 25, 2008ರ ಈ ಶುಕ್ರವಾರ ಬೆಂಗಳೂರಿನಲ್ಲಿ ಏನಾಯಿತು ಎಂಬುದನ್ನು ವಿವರಿಸುತ್ತೇನೆ ಕೇಳಿ. ಮೂದಲು, ಮಧ್ಯಾಹ್ನ ಒಂದು ಗಂಟೆ ಇಪ್ಪತ್ತು ನಿಮಿಷಕ್ಕೆ ಬೆಂಗಳೂರಿನ ಮಡಿವಾಳ ಚೆಕ್ ಪೋಸ್ಟಿನ ಬಳಿ ಬಾಂಬೊಂದು ಸಿಡಿಯಿತು. ಆದಾದ ಸ್ಲಲ್ಪ ಹೊತ್ತಿನಲ್ಲಿಯೇ ಆಡುಗೋಡಿಯಲ್ಲಿ ಮತ್ತೊಂದು ಬಾಂಬ್ ಬಿರಿಯಿತು. ಬೆನ್ನಲ್ಲೇ ರಿಚ್‌ಮಂಡ್ ವೃತ್ತದಲ್ಲಿ ಮತ್ತೊಂದು ಸ್ಫೋಟ ಕೇಳಿಸಿತು. ಆಮೇಲೆ ಸದ್ದು ಬಂದಿದ್ದು ಮೈಸೂರು ರಸ್ತೆ ಕಡೆಯಿಂದ. ಹೊಸಗುಡ್ಡದಹಳ್ಳಿ, ಪಂತರಪಾಳ್ಯ, ನಾಯಂಡಹಳ್ಳಿಯಲ್ಲಿ ಸ್ಫೋಟಗಳಾದವು. ಶಿವಾಜಿನಗರದಲ್ಲೂ ಸ್ಫೋಟವಾಯಿತಂತೆ, ನಾಲ್ಕು ಜನ ಸತ್ತರಂತೆ, ಇಪ್ಪತ್ತು ಜನ ಗಾಯಗೊಂಡರಂತೆ ಅಂತೆಲ್ಲ ಸುದ್ದಿಗಳು ಹರಡಿದವಾದರೂ ಅವು ನಿಜವಾಗಿರಲಿಲ್ಲ. ಸುಧಾ ಎಂಬ ಮಧ್ಯ ವಯಸ್ಕ ಮಹಿಳೆಯೊಬ್ಬಾಕೆ ತೀರಿಕೊಂಡಿದ್ದು ಬಿಟ್ಟರೆ ಚೇತನ್, ಅನ್ಬು, ಮಾರಿಯಪ್ಪ, ರವಿ ಮತ್ತು ಗುಳ್ಳಮ್ಮ ಎಂಬ ಐವರು ಗಾಯಗೊಂಡಿದ್ದಾರೆ. ಆಗಿರುವುದು ಇಷ್ಟೇ.

ಬೆಂಗಳೂರಿಗೆ ಬಾಂಬ್ ಕಲ್ಚರ್ ಹೊಸದು. ಯಾವಾಗಲೋ ಎಂ.ಪಿ.ಜಯರಾಜ್ ಕಾಲದಲ್ಲಿ ರೌಡಿಗಳು ಬಾಂಬು ಎಸದಾಡುತ್ತಿದ್ದರು. ಅದು ಬಿಟ್ಟರೆ ಸುತ್ತಮುತ್ತ ಕಲ್ಲಿನ ಕ್ವಾರಿದಳಲ್ಲಿ ನಿತ್ಯ ಜಿಲೇಟಿನ್ ಕಡ್ಡಿಗಳು ಆಕಸ್ಮಾತಾಗಿ ಸ್ಫೋಟಗೊಂಡು ಸಾವುಗಳಾಗುತ್ತಿದ್ದವು. ಕೆಲ ವರ್ಷಗಳ ಹಿಂದೆ ಇಸ್ಲಾಮಿಕ್ ಉಗ್ರರು ಬಾಂಬ್ ಸ್ಫೋಟ ನಡೆಸಿದರಾದರೂ ಮುಂಬಯಿಗಳಂಥ ಊರುಗಳಿಗೆ ಆದ ಅನುಭವಗಳು ಬೆಂಗಳೂರಿಗೆ ಆಗಿಲ್ಲ. ಇಲ್ಲಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಸಂಭವಿಸಿದ ವಿಜ್ಞಾನಿಯಂ ಹತ್ಯೆಯಂಥ ಉಗ್ರಗಾಮೀ ಕೃತ್ಯಕ್ಕೂ ಅಂಥ ಹೇಳಿಕೊಳ್ಳುವಂಥ huge canvas ಆಗಲಿಲ್ಲ.

ಈಗ ಸ್ಫೋಟ ಸಂಭವಿಸಿರುವ ಸ್ಫೋಟಗಳನ್ನೇ ತಗೆದುಕೊಳ್ಲಿ. ಇವಕ್ಕೆ ಆರ್ಡಿಎಕ್ಸ್‌ನಂಥ ಮರಣಾಂತಿಕ ಸಾಮಗ್ರಿ ಬಳಕೆಯಾಗಿಲ್ಲ. ಇವು ಯಾರು ಬೇಕಾದರೂ ಮನೆಯಲ್ಲೇ ಕುಳಿತು ತಯಾರು ಮಾಡಬಹುದಂತಹ ಬಾಂಬುಗಳು. ಪೊಲೀಸ್ ಭಾಷೆಗಳಲ್ಲಿ ಇವುಗಳನ್ನು crude bombಗಳೆನ್ನುತ್ತಾರೆ. ಇವುಗಳನ್ನು fitಮಾಡಲಿಕ್ಕೆ ನಟ್ಟು ಬೋಲ್ಟುಗಳನ್ನು ಬಳಸುತ್ತಾರೆ. ಹತ್ತರಿಂದ ಇಪ್ಪತ್ತು ಮೀಡರ್ ದೂರದಲ್ಲಿರುವವರನ್ನು ತೀವ್ರವಾಗಿ ಗಾಯಗೊಳಿಸುವ ಶಕ್ತಿ ಈ ಸ್ಫೋಟಕಗಳಿಗಿರುತ್ತದೆ. ತೀರ ಹತ್ತಿರದಲ್ಲಿದ್ದಾಗ ಮಾತ್ರ ಸಾವು ಸಂಭಲಿಸುತ್ತದೆ. ಗಮನಿಸಬೇಕಾದ ಒಂದು ಅಂಶವೆಂದರೆ, ಇಂಥ crude bombಗಳನ್ನು ಕೂಡ ಎಲ್ಲೋ ಒಂದು ಹುದುಗಿಸಿಟ್ಟು ಟೈಮರ್ ಅಳವಡಿಸಿ, ಅದರ ಮೂಲಕ ಸಿಡಿಸಬಹುದಾಗಿರುತ್ತದೆ. ಹೀಗೆ ಸಿಡಿಸಿದಾಗ ಭಯಾನಕವಾದ ಶಬ್ಧ. ಹೊಗೆ ಉಂಟಾಗುತ್ತವೆಯೇ ಹೊರತು ದೊಡ್ಡ ಮಟ್ಟದ ಅಪಾಯವಾಗುವುದಿಲ್ಲ.

ಇದಿಷ್ಟೂ ಇಟ್ಟ ಬಾಂಬುಗಳ ಕತೆಯಾದರೆ, ಇವುಗಳನ್ನು ಇಟ್ಟವರು ಆಯ್ಕೆ ಮಾಡಕೊಂಡ ಜಾಗಗಳೆಂಥವೋ ನೋಡಿ. ಮೂದಲನೆಯದು, ಮಡಿವಾಳದ ಚೆಕ್ ಪೋಸ್ಟ್ ಬಳಿಯ ಮುಖ್ಯರಸ್ತೆಯ ಬಸ್ ಸ್ಟಾಪ್ ಪಕ್ಕದ ಮೋರಿಯಿಂದ ಕೇವಲ ಇನ್ನೂರು ಮೀಟರ್ ದೂರದಲ್ಲಿ ಅತ್ಯಂತ ಹೆಚ್ಚಿನ ಜನ ಸೇರುವ ಫೋರಂ ಷಾಪಿಂಗ್ ಮಾಲ್ ಇದೆ. ಏನೇ ಬಲಹೀನ ಬಾಂಬು ಅಂದುಕೊಂಡರೂ, ಫೋರಂನಂತಹ ಗಿಜಿಗಿಜಿಯಲ್ಲಿ ಬಾಂಬು ಸಿಡಿದಿದ್ದರೆ ದೊಡ್ಡ ಮಟ್ಟದ ಅಪಾಯವಾಗುತ್ತಿತ್ತು. ಆದರೆ ಬಾಂಬು ಮಡಿವಾಳದ ಮೋರಿಯಲ್ಲಿ ಸಿಡಿದಿತ್ತು. ಬಸ್ಸಿಗೆ ಕಾಯುತ್ತ ನಿಂತಿದ್ದ ಪಿಳ್ಳಗೊಂಡನ ಹಳ್ಳಿಯ ಸುಧಾ ತೀರಿಕೊಂಡರು. ಅವರ ಗಂಡ ರವಿ ಗಾಯಗೊಂಡರು. ಶವವನ್ನು ಗಮನಿಸಿ ನೋಡಿದವರಿಗೆ ಕಂಡದ್ದೆಂದರೆ, ಕ್ರೂಡ್ ಬಾಂಬ್‌ನಿಂದ ಹೊರ ಚಿಮ್ಮಿದ ಕಬ್ಬಿಣದ ಚೂರುಗಳು ಆಕೆಯ ಪ್ರಾಣ ತೆಗೆದಿವೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಚೇತನ್, ಬಾಂಬು ಸಿಡಿದಾಗ ಬೈಕಿನಿಂದ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಅದರಂತೆಯೇ ಆಡುಗೋಡಿಯಲ್ಲಿ ಬಾಂಬು ಸಿಡಿದದ್ದು ರಸ್ತೆ ಪಕ್ಕದ ಖಾಲಿ ಸೈಟಿನಲ್ಲಿ. ಅಲ್ಲೂ ಹೆಚ್ಚಿನ ಜನವಿರಲಿಲ್ಲ. ಅನ್ಬು ಮತ್ತು ಮಾರಿಯಪ್ಪ ಎಂಬಿಬ್ಬರು ಕೂಲಿಕಾರರು ಗಾಯಗೊಂಡಿದ್ದಾರೆ.

ಮೂರನೆಯ ಸ್ಫೋಟ ಕೂಡ ರಿಚ್ಮಂಡ್ ಸರ್ಕಲಿನ ಮೋರಿಯೊಂದರ ಪಕ್ಕದಲ್ಲೇ ಸಿಡಿದಿದೆ. ಪಂತರ ಪಾಳ್ಯದ ಟಾಟಾ ಶೋರೂಂ ಪಕ್ಕದ ಖಾಲಿ ಸೈಟಿನಲ್ಲಿ ಮತ್ತೊಂದು ಬಾಂಬ್ ಸಿಡಿಸಲಾಗಿದೆ. ಹತ್ತಿರದಲ್ಲೇ ಇರುವ ಬ್ಯಾಟರಾಯನಪುರ ಹೋದರೆ, ಅಲ್ಲೂ ಅದರದೇ ಪುನರಾವರ್ತನೆ. ಸದಾ ಜನರಿಂದ ಕಿಕ್ಕಿರಿಯುವ ಗೋಪಾಲನ್ ಮಾಲ್‌ನಿಂದ ಬರೀ ನೂರು ಮೀಟರು ದೂರದ ಖಾಲಿ ಸೈಟಿನಲ್ಲಿ ಕ್ರೂಡ್ ಬಾಂಬ್ ಸಿಡಿದಿದೆ. ಅದರಂತೆಯೇ ನಾಯಂಡಹಳ್ಳಿ ಬಸ್ ಸ್ಟಾಪಿನೆದುರು ಖಾಲಿ ಸೈಟಿನಲ್ಲಿ ಎರಡು ಬಾಂಬು ಸಿಡಿದಿವೆ. ಎಲ್ಲೂ ಯಾರಿಗೂ ಗಾಯವಾಗಿಲ್ಲ. ಬಾಂಬು ಸಿಡಿಸಿದವರ ಉದ್ದೇಶ ಏನೇ ಇರಲಿ ; ಜಾಗಗಳಲ್ಲಿ ಬಾಂಬು ಇಡುವ ಧೈರ್ಯವಾಗಿಲ್ಲ. ಹಾಗಂತ, ಕೇವಲ ಯಾರನ್ನೋ ಎಚ್ಚರಿಸುವ ಪ್ರತಿಭಟಿಸುವ ಗಿರೀಶ್ ಮಟ್ಟಣ್ಣವರ್‌ಗೆ ಇದ್ದಂಥ ಉದ್ದೇಶವೂ ಅವರಿಗೆ ಇದ್ದಂತಿಲ್ಲ. ಕೈಲಿದ್ದ ಬಾಂಬು ಕ್ರೂಡ್ ಆದದ್ದೇ ಆಗಿರಲಿ, ಮೆಜೆಸ್ಟಿಕ್ ಬಳಿಯ ಬರ್ಮಾ ಬಜಾರಿನಲ್ಲೋ, ಮಾರುಕಟ್ಟೆಯಲ್ಲೋ ಸ್ಫೋಟಿಸಿದ್ದಿದ್ದರೆ ಅದರ ಪರಿಣಾಮ ಕಡಿಮೆ ಅನಾಹುತಕಾರಿಯಾದದ್ದೇನೂ ಆಗಿರುತ್ತಿರಲಿಲ್ಲ. ಹಂತಕರು ಆ ಮಟ್ಟದ ಧೈರ್ಯ ಮಾಡಿಲ್ಲ.

ಆದರೆ ಇಡೀ ಸರಣಿ ಸ್ಫೋಟದ ಒಂದು ಪ್ಯಾರರ್ನ್ ಎಂಥದಿದೆ ಎಂಬುದನ್ನು ಗಮನಿಸಬೇಕು. ಮಡಿವಾಳದ ಸ್ಫೋಟವನ್ನೇ ಅಭ್ಯಸಿಸುವುದಾದರೆ, ಅದಕ್ಕೆ ಹತ್ತಿರದಲ್ಲೇ ಈಜಿಪುರ ಮತ್ತು ನೀಲಸಂದ್ರ ಏರಿಯಾಗಳಿವೆ. ಎರಡೂ ಕಡೆ ಕೆಳಮಧ್ಯಮ ವರ್ಗದ ಮುಸ್ಲಿಮರು ವಾಸಿಸುತ್ತಾರೆ. ಎರಡನೆಯ ಬಾಂಬು ಸಿಡಿದ ಆಡುಗೋಡಿ ಕೂಡ ಮುಸ್ಲಿಂ ಕುಟುಂಬಗಳು ವಾಸಿಸುವ ಈಡಿಪುರ, ನೀಲಸಂದ್ರಗಳಿಗೆ ಹತ್ತಿರದಲ್ಲೇ ಇದೆ. ರಿಚ್ಮಂಡ್ ಸರ್ಕಲ್ಲಿನ ಆಸುಪಾಸಿನಲ್ಲಿ ಮುಸ್ಲಿಮರು ಇಲ್ಲವಾದರೂ, ಅಲ್ಲಿ ತುಂಬ ಹಲೆಯ ಸ್ಲಮ್ಮುಗಳಿವೆ. ಈ ಕಡೆಗೆ ಬಂದರೆ, ಹಳೇಗುಡ್ಡದ ಹಳ್ಳಿಯ ಬಾಂಬ್ ಸ್ಫೋಟಕ್ಕೆ ಮುಸ್ಲಿಮರದೇ ಪ್ರಾಬಲ್ಯವಿರುವ ಜೆಜೆ ನಗರವಿದೆ. ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ವಾಸಿಸುವ ಚಾಮರಾಜಪೇಟೆ ಹತ್ತಿರದಲ್ಲಿದೆ. ನಾಯಂಡಹಳ್ಳಿಯ ಮತ್ತು ಪಂತರಪಾಳ್ಯದ ಸ್ಫೋಟಗಳಿಗೂ ಸ್ಲಮ್ಮುಗಳು ಹತ್ತಿರಲ್ಲೇ ಇವೆ.

ಇಲ್ಲಿ ಮುಸ್ಲಿಮರಿಗೆ ಹಾನಿಗಾಗಲಿ ಎಂಬ ಉದ್ದೇಶ ಯಾವ ಸ್ಫೋಟದ ಹಿಂದೆಯೂ ಕಾಣುವುದಿಲ್ಲ. ಆದರೆ, ಶುಕ್ರವಾರ ಮಧ್ಯಾಹ್ನ ಅಂದರೆ, ಮುಸ್ಲಿಮರು ಸಾಮಾನ್ಯವಾಗಿ ನಮಾಜ್‌ಗೆ ಸೇರುವ ಹೊತ್ತು. ಅವರು ಸೇಫ್ ಆಗಿದ್ದಾಗ ಉಳಿದವರಿಗೆ ಹಾನಿಯಾಗಲಿ ಅಂತ ಈ ಕೆಲಸ ಮಾಡಿರಬಹುದು ಎಂಬ ವಾದಗಳೂ ಇವೆ. ಗಮನಿಸಬೇಕಾದುದು ಅದನ್ನಲ್ಲ. ಬಾಂಬು ಸಿಡಿದ ಸ್ಥಳಗಳಿಗೆ ಹತ್ತಿರದಲ್ಲಿ ಕೆಳಮಧ್ಯಮ ಮತ್ತು ಕೆಳ ವರ್ಗದ ಮುಸ್ಲಿಂ ಮನೆಗಳಿವೆಯೆಂದರೆ, ಹಂತಕರಿಗೆ ಇವು ಶೆಲ್ಟರ್‌ಗಳಾಗಿ ಬಳಕೆಯಾಗಿವೆಯಾ? ಈಗಷ್ಟೇ ಉಗ್ರವಾದದ ಕಡೆಗೆ ಕಣ್ತೆರೆಯುತ್ತಿರವ ಯಾವುದಾದರೂ ಚಿಕ್ಕಗುಂಪು, ಅಂತಾರಾಷ್ಟ್ರೀಯ ಮಟ್ಟದ ಉಗ್ರರಿಗೆ ತಮ್ಮ ತಾಕತ್ತು ತೋರಿಸಲು ಇಂಥದೊಂದು small attempt ಮಾಡಿರಬಹುದಾ? ಏನೇ ಪರಿಣತಿ, ಟ್ರೈನಿಂಗು ಹಾಳುಮೂಳು ಅಂತ ಪಡೆದಿದ್ದರೂ ಎಲ್ಲಿಂದಲೋ ಬಂದ ಉಗ್ರನೊಬ್ಬ ಬೆಂಗಳೂರಿನಂಥ ಊರಿನಲ್ಲಿ ಏಕಾಂಗಿಯಾಗಿ ಆರು ಕಡೆ ಬಾಂಬ್ ಇರಿಸಿ, ಟೈಮರ್ ಡಿವೈಸ್ ಬಳಸಿ ಸ್ಫೋಟಿಸುವುದು ಆಗುವ ಮಾತಲ್ಲ. ಅದಕ್ಕೆ ಒಂದು ಗುಂಪೇ ಬೇಕು. ಕಡೇ ಪಕ್ಷ ಆರೆಂಟು ಜನ ಕೆಲಸ ಮಾಡಿರಬೇಕು. ನಟ್ಟನಡು ಮಧ್ಯಾಹ್ನ ಸ್ಫೋಟಗಳಾಗಿವೆಯೆಂದರೆ, ಅವು ಹಿಂದಿನ ರಾತ್ರಿ ಕಟ್ಟಿ ಹೋದ ಬಾಂಬುಗಳಾಗಿರಲು ಸಾಧ್ಯವಿಲ್ಲ. ತುಸು ಹೊತ್ತಿಗೆ ಮುಂಚೆಯೇ ಅವುಗಳನ್ನು ಸ್ಥಾಪಿಸಿರಬೇಕು. ಹಾಗೆ ಸ್ಥಾಪಿಸಿಯಾದ ಮೇಲೆ ಎಂಥವನನ್ನೂ ಭಯ ಕಾಡಿಯೇ ಕಾಡುತ್ತದೆ. ಅಟ್ಲೀಸ್ಟ್ ಪರಾರಿಯಾಗುವ ದಾರಿಗಳಾದರೂ ಗೊತ್ತಿರಬೇಕು. ಅಲ್ಲಿಗೆ ಅರ್ಥ ಸ್ಫಷ್ಟವಿದೆ. ಸ್ಥಳೀಯ ಗುಂಪೊಂದು ಉಗ್ರವಾದದತ್ತ ಕಣ್ತೆರೆಯತೊಡಗಿದೆ.

ಪೊಲೀಸರು ಯಾವ ಆಂಗಲ್‌ನಿಂದ ಯೋಚಿಸಿದರೂ, ಇದು ನಕ್ಸಲರ ಅಥವಾ ತಮಿಳು ಉಗ್ರರ ಕೆಲಸವಲ್ಲ ಎಂಬುದು ಮನವರಿಕೆಯಾಗುತ್ತದೆ. ಪೊಲೀಸ್ ಅಧಿಕಾರಿಗಳು ಸಿಮಿ ಎಂಬ ಇಸ್ಲಾಮಿಕ್ ಸಂಘಟನೆಯ ಕೆಡೆಗೆ ತಮ್ಮ ನಿಗಾ ತಿರುಗಿಸಿದ್ದಾರೆ. ಇಷ್ಟೆಲ್ಲ ಆಗಿ ಕೊನೆಗೆ ಉಳಿಯುವ ಪ್ರಶ್ನೆಯೆಂದರೆ, ಸರಣಿ ಸ್ಫೋಟ ಮಾಡಿದ ಉಗ್ರರು ಕ್ರೂಡ್ ಬಾಂಬ್‌ಗಳನ್ನೇಕೆ ಬಳಸಿದರು? ಯಾರನ್ನು ಉದ್ದೇಶದಲ್ಲಿಟ್ಟುಕೊಂಡು ಈ ಕೆಲಸ ಮಾಡಿದರು? ಯಾರಿಗೆ ಯಾವ ಸಂದೇಶ ಮುಟ್ಟಿಸುವ ಪ್ರಯತ್ನವಿದು? ಬೆಂಗಳೂರಿಗೆ ಮತ್ತೊಂದು ಆಪತ್ತು ಕಾದಿದೆಯಾ?

ನಾವಿನ್ನು ನೆಮ್ಮದಿಯಿಂದ ಓಡಾಡುವುದು ಹೇಗೆ? ಮಕ್ಕಳನ್ನು ಶಾಲೆಗಳಿಗೆ ಕಳಿಸುವುದು ಹೇಗೆ? ಜಂಕ್ಷನ್ನುಗಳಲ್ಲಿ ಗಾಡಿ ನಿಲ್ಲಿಸಿಕೊಂಡು ಕಾಯುವುದೆಂತು? ನಮ್ಮ ಇಂಟೆಲಿಜೆನ್ಸ್ ವ್ಯವಸ್ಥೆ ಏನು ಮಾಡುತ್ತಿದೆ? ಹೀಗೆ ಪ್ರಶ್ನೆಗಳೇ ಉಳಿಯುತ್ತವೆ. ಒಟ್ಟಿನಲ್ಲಿ ಬೆಂಗಳೂರು ದಿಗ್ಭ್ರಮೆಯಲ್ಲಿದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: