It pays to be systamatic -ವ್ಯವಸ್ಥಿತ ಬದುಕೆಂಬುದು ವಾದ್ಯವೃಂದ; ರವಿ

ಮೊನ್ನೆ ಹಾಗಾಯಿತು. ಕೇಳಿದ ಎರಡೆ ನಿಮಿಷಕ್ಕೆ ಆಫೀಸಿನ ಹುಡುಗಿಯೊಬ್ಬಳು ರುಚಿಯಾದ, ಬಿಸಿಯಾದ ಚಹ ಮಾಡಿ ತಂದಿಟ್ಟಳು. ಮತ್ತೆ ಸ್ವಲ್ಪ ಹೊತ್ತಿಗೆಯಾವುದೋ ಪುಸ್ತಕ ಕೇಳಿದೆ. ಅರ್ಧ ನಿಮಿಷದಲ್ಲಿ ಲೈಬ್ರರಿಯ ಕಪಾಟಿನಿಂದ ತೆಗೆದುಕೊಟ್ಟಲು. “How fast! ಅದರಲ್ಲೂ ಅಷ್ಟು accurate ಆಗಿ ಕೆಲಸ ಮಾಗುತ್ತವಲ್ಲ? ಇಂಥದೊಂದು ಸಿಸ್ಟಮ್ ಡೆವಲಪ್ ಆಗೋದಕ್ಕೆ ಎಷ್ಟು ಖರ್ಚು ಹಿಡೀತು?” ಬಂದವರು ಕೇಳಿದರು.

ಎಷ್ಟು ವರ್ಷ ಅಂತ ಹೇಗೆ ಲೆಕ್ಕ ಹಾಕಲಿ ? ಅಸಲಿಗೆ ನನ್ನ ಸುತ್ತ ಇಂಥದೊಂದು ಸಿಸ್ಟಮ್ ಇದೆ, ಅದು ಯಾರದೋ ಪ್ರಯತ್ನದಿಂದ ಬುದ್ಧಿಪೂರ್ವಕವಾಗಿ ಡೆವಲಪ್ ಆಗಿದೆ ಎಂಬ ವಿಚಾರವೇ ನನ್ನ ಗಮನದಲ್ಲಿರಲಿಲ್ಲ. ಆಫೀಸಿನ ಮಟ್ಟೀಗೆ ನಾವೊಂದು ಮೂವತ್ತು ಮೂವತ್ತೈದು ಜನ ಇದ್ದೇನೆ. ಎಲ್ಲರಿಗೂ ದಿನಕ್ಕೆ  ಎರಡು ಬಾರಿ ಚಹ ಸರಬರಾಜಾಗುವುದನ್ನು ಬಿಟ್ಟರೆ ಇಲ್ಲಿ ಅಂಥ ಯಾವ extraಸವಲತ್ತೂ ಇಲ್ಲ. ನನಗೆ ಮಾತ್ರ ಬೆಳಗಿನ ಮೊದಲ ಚಹದಿಂದ ಹಿಡಿದು ರಾತ್ರಿಯ ಊಟದ ಕೊನೆಯ ತುತ್ತಿನ ತನಕ , ಬಟ್ಟೆಯಿಂದ ಹಿಡಿದು ನನ್ನ ಬಾರ್ಬರ್ ತನಕ ಎಲ್ಲವೂ ಇಲ್ಲೇ ಆಗಬೇಕು, ಟೈಮಿಗೆ ಸರಿಯಾಗಿ ಮತ್ತು ಕರಾರುವಾಕ್ಕಾಗಿ! ಇದನ್ನೆಲ್ಲ ನೋಡಿಕೊಳ್ಳುವುದಕ್ಕೆ ಒಬ್ಬ ಹುಡುಗಿ ಮತ್ತು ಒಬ್ಬ ಹುಡುಗ ಇದ್ದಾರೆ.

ಇಂಥದೊಂದು ವ್ಯವಸ್ಥೆ, ಒಂದು ಸಿಸ್ಟಮ್ ನಿಮ್ಮ ಆಫೀಸಿನಲ್ಲೂ ಇರಬಹುದು. ಪೋಸ್ಟ್ ಆಫೀಸಿನಲ್ಲಿ , ಬ್ಯಾಂಕಿನಲ್ಲಿ, ಮಲ್ಟಿನ್ಯಾಷನಲ್ ಕಂಪೆನಿಗಳಲ್ಲಿ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ಈ ‘ವ್ಯವಸ್ಥೆ’ಗೆ ಕೊಡುತ್ತಾರೆ. ಆದರೆ ನಮ್ಮದು ಒಂದು ದಿನ ಸೃಷ್ಟಿಯಾದ, ಒಂದು ಸಲ ಬಂಡವಾಳ ಹಾಕಿದ, ಇವತ್ತಿನಿಂದ ಇದನ್ನು ಹೀಗೆ ನಡೆಸುತ್ತೇವೆಂದು ನಿರ್ಧರಿಸಿ ಆರಂಭಿಸಿದ ಸಂಸ್ಥೆಯಲ್ಲ. ಆ ಕೆಲಸವನ್ನು ನಾವು ‘ಪ್ರಾರ್ಥನಾ’ ಸ್ಕೂಲ್ ನಲ್ಲಿ ಮಾಡಲು ಸಾಧ್ಯವಾಯಿತು. ಏಕೆಂದರೆ, ಅದು ‘ಪತ್ರಿಕೆ’ ಹುಟ್ಟಿದ ಆರೇಳು ವರ್ಷಗಳಿಗೆ ಹುಟ್ಟಿತು. ಅಲ್ಲಿಲ್ಲಿ ಕಲಿತು ಬಂದವರಿಗಿಂತ, ಇಲ್ಲಿ ಬಂದು ಕೆಲಸ ಕಲಿತವರೇ ಜಾಸ್ತಿ, ನನಗಾದರೂ ಒಂದು ಆಫೀಸು Run [^] ಮಾಡಿ ಎಲ್ಲಿ ಗೊತ್ತಿತ್ತು?

ಗೊತ್ತಿರುವುದಿಲ್ಲ. ಆದರೂ ನಮ್ಮ ಸುತ್ತ ಒಂದು system ಕಟ್ಟಿಕೊಳ್ಳುತ್ತೇವೆ. ಏಳುತ್ತಿದ್ದಂತೆಯೇ ಕಾಫಿ ತಂದುಕೊಟ್ಟು  brushಗೆ ಪೇಸ್ಟು ಹಾಕಿಟ್ಟು ಟಾಯೆಟ್ಲು ಗೆ ಹೊರಟವನ ಕೈಗೆ ಆವತ್ತಿನಿಂದ ದಿನಪತ್ರಿಕೆ ತಂದುಕೊಡುವ ಮಗಳು ಸಿಸ್ಟಮ್ ನ ಒಂದು ಭಾಗ. ಅಂತೆಯೇ, ಖಾಯಿಲೆ ಬಿದ್ದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಬಂದು ನೋಡಿ, ತಕ್ಷಣಕ್ಕೊಂದು ಚಿಕಿತ್ಸೆ ಆರಂಭಿಸಿ, ಅವಶ್ಯಕತೆ ಇದ್ದರೆ ಸ್ಪೆಷಲಿಸ್ಟ್ ಗಳನು ಸಂಪರ್ಕಿಸಿ ಕಳಿಸಿಕೊಡುವ ಫ್ಯಾಮಿಲಿ ಡಾಕ್ಟರು, ನಿಮ್ಮ ಸಿಸ್ಟಮ್ ನ ಇನ್ನೊಂದು ಭಾಗ. ತೊಂದರೆಯಲ್ಲಿದ್ದೀರಿ ಅಂತ ಸುದ್ದಿ ಮುಟ್ಟಿದ ಕೂಡಲೆ ಸುತ್ತ ನೆರೆದು ನಿಮ್ಮನ್ನು ಕೇಳದೇನೇ, ನಿಮಗೆ ಬೇಕಾದುದೆಲ್ಲವನ್ನೂ ಮಾಡಿಟ್ಟು ತಮ್ಮ ಕೈಲಾದ ರೀತಿಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಿ ‘ಇನ್ನೇನಾದರೂ ಬೇಕಾ?’ ಅಂತ ಕೇಳುವ ಬಂಧು ಮಿತ್ರರಿದ್ದರೆ ಅದೂ ಒಂದು ಸಿಸ್ಟಮ್ಮೇ. ನಿಮ್ಮ ಮಗಳ ಮದುವೆಗೆ ಮುಂಚೆಯೇ ಬಂದು ಅದರ ಸವರಣೆ ವಹಿಸಿಕೊಳ್ಳುವವರು, ಸಂಬಂಧವಿರದಿದ್ದರೂ ಒಂದು ಮನೆಯ ಸಾವಿನ ಸೂತಕದಲ್ಲಿ ಭಾಗಿಯಾಗುವವರು, ನೀವು ಮನೆ ಕಟ್ಟುತ್ತಿದ್ದರೆ ಸುಮ್ಮನೆ ನಿಮ್ಮ ಜೊತೆ ಓಡಾಡಿ ನಿಮಗೆ ನೆರವಾಗುವವರು ;ಇವರು ಕೂಡ ಅವರೇ.

ಸರಿಯಾಗಿ ಯೋಚಿಸಿ. ನೀವು ನಡೆಸುವ ಆಫೀಸು, ನಿಮ್ಮ ಗೆಳೆಯರು, ಡಾಕ್ಟರು, ವಕೀಲರು ಇವರನ್ನೆಲ್ಲ ನೋಡಿಬಿಟ್ಟರೆ ನೀವೆಂಥವರು ಎಂಬುದು ಗೊತ್ತಾಗಿ ಹೋಗುತ್ತದೆ. ನಮ್ಮ ಆಫೀಸಿನಲ್ಲಿ ಅಪಸವ್ಯಗಳು ಇಲ್ಲವೆಂದಲ್ಲ. ಈ ಅಪಸವ್ಯಗಳು ಕೂಡ ನನ್ನ system ನ ಒಂದು ಭಾಗವೇ. ಕಣ್ಣೇ ಕಾಣಿಸದ ಟೆಲಿಫೋನ್ ಆಪರೇಟರು, ಕಿವಿ ಸ್ವಲ್ಪ ‘ದೂರ’ ಎಂಬಂತಿರುವ ದ್ವಾರಪಾಲಕ ಎಂಬಲ್ಲಿಂದ ಶುರುವಾಗಿ ಜೀವನದಲ್ಲಿ ಪೂರ್ತಿ ಸೋತು ನಿರಾಶಳಾಗಿ ಆತ್ಮಹತ್ಯೆ  ಮಾಡಿಕೊಳ್ಳಲು ನಿರ್ಧರಿಸಿ, ಕೊನೆ ಪ್ರಯತ್ನ ಎಂಬಂತೆ ಇಲ್ಲಿಗೆ ಬಂದವರಿಗೂ ಒಂದು ಕೆಲಸ ಅಂತ ಕೊಟ್ಟಿದ್ದೇನೆ. ನಮ್ಮಲ್ಲಿ ಕೆಲ ತಿಂಗಳ ಹಿಂದೆ ಒಬ್ಬ ಹೆಚ್ ಐ ವಿ ಪಾಸಿಟಿವ್ ಹುಡುಗಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಖಾಯಿಲೆಇದೆ ಅಂತ ಯಾರಿಗೂ ಗೊತ್ತಿರಲಿಲ್ಲ .ಬಿಟ್ಟು ಹೋಗುವ ದಿನ ‘ಖಾಯಿಲೆ ಇದೆ ಅನ್ನೋದು ಮರೆತೇ ಹೋಗಿದೆ ಅಣ್ಣಾ’ ಅಂದಿದ್ದಳು.

ಅದು ನಾವು ಕಟ್ಟಿಕೊಂಡ ವ್ಯವಸ್ಥೆಯ ಪರಿಣಾಮ. ನಮ್ಮೊಂದಿಗಿರುವವರು ಸದಾ ಖುಷಿಯಾಗಿರುವಂತೆ, ಉತ್ಸಾಹಿಗಳಾಗಿರುವಂತೆ, ಗೊಣಗುವಿಕೆ ರೂಢಿಯಾಗದವರಂತೆ ಸಂತೋಷವಾಗಿರಬೇಕೆಂದರೆ, ಅವರೆಲ್ಲರಿಗಿಂತ ಹೆಚ್ಚು ನಾವು ಉತ್ಸಾಹದೊಂದಿಗೆ ಕೆಲಸ ಮಾಡುತ್ತಲೇ ಇರುತ್ತೇವೆ. ಛಟ್ಟನೆ ಒಮ್ಮೆ ಬಿಡುವು ಮಾಡಿಕೊಂಡು ಎದ್ದ್ದು ಹೋಗಿ ಎಲ್ಲರನ್ನೂ ಮಾತನಾಡಿಸಿ, ಕೀಟಲೆ ಮಾಡಿ, ಮತ್ತೊಮ್ಮೆ ಒಬ್ಬೊಬ್ಬರನ್ನಾಗಿ ಕರೆದು ಮಾತನಾಡಿ, ಅವರ ಕಷ್ಟಸುಖ ವಿಚಾರಿಸಿ ನನ್ನ ಸುತ್ತಮುತ್ತಲಿನವರನ್ನು ಮತ್ತೆ ಮತ್ತೆ ನನ್ನವರನ್ನಾಗಿ ಮಾಡಿಕೊಳ್ಳುತ್ತಿರುತ್ತೇನೆ. ನನ್ನ ವಕೀಲರಿಗೆ, ವೈದ್ಯರಿಗೆ, ಇತರೆ ಪ್ರೊಫೆಷನಲ್ ಗೆಳೆಯರಿಗೆ ಚಿಕ್ಕ ಪುಟ್ಟ ಪಾರ್ಟಿ ಕೊಡುತ್ತಿರುತ್ತೇನೆ. ನನ್ನ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಚಾರ್ಟಡ್ ಅಕೌಂಟೆಂಟರೊಂದಿಗೆ ಬ್ಯಾಂಕಿನ ಅಧಿಕಾರಿಗಳೊಂದಿಗೆ ಹರಟುತ್ತಿರುತ್ತೇನೆ.

ಬೇಕೆಂದಾಗ ತೆರೆದುಕೊಳ್ಳುವ, ಬೇಡವಾದಾಗ ಕದವಿಕ್ಕಿಕೊಳ್ಳಲು ಸಾಧ್ಯವಾಗುವ ಒಂದು ಸಿಸ್ಟಮ್ ಮಾಡಿಕೊಳ್ಳದೆ ಹೋದರೆ ನನ್ನಂಥವನಿಗೆ ಬದುಕಲು ಸಾಧ್ಯವೇ ಆಗುವುದಿಲ್ಲ. ಈ ಹದಿಮೂರು ವರ್ಷಗಳಲ್ಲಿ ನಾನು, ನಿವೇದಿತಾ ಅತ್ಯಂತ ಎಚ್ಚರಿಕೆಯಿಂದ ನಮ್ಮ ಆಫೀಸು ಮತ್ತು ಬದುಕುಗಳಲ್ಲಿ ಕಟ್ಟಿಕೊಂಡ ವ್ಯವಸ್ಥೆ ಇದು. ಇದನ್ನು ಮಾಡಿಕೊಳ್ಳದೆ ಹೋಗಿದ್ದಿದ್ದರೆ ನನ್ನ ವಿದೇಶ ಯಾತ್ರೆಗಳು, ಕಾಡಿನ ಪಲಾಯನಗಳು, ಮಕ್ಕಳ್ ಮದುವೆ ಇವ್ಯಾವೂ ಸಾಧ್ಯವಾಗುತ್ತಿರಲಿಲ್ಲ .ಅಂತೆಯೇ ನಿವೇದಿತಾ ತನ್ನ ಅಕ್ಕನ ಕ್ಯಾನ್ಸರಿನ ವಿರುದ್ಧ ಅಂಥ ಯಶಸ್ವಿ ವಿಜಯ ಸಾಧಿಸಲಾಗುತ್ತಿರಲಿಲ್ಲ. ವೀಣಕ್ಕನ ಬದುಕಿನ ಸಂಜೆಗಾಲ ಹಾಗೆ ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗುತ್ತಿರಲಿಲ್ಲ.

ಇದೆಲ್ಲ ನಿಮಗೂ ಗೊತ್ತಿರುತ್ತದೆ. ನಿಮ್ಮ ಸುತ್ತಲೂ ಒಂದು ವ್ಯವಸ್ಥೆ ಇರುತ್ತದೆ. ಅದನ್ನು ಕುಸಿಯದಂತೆ ನೋಡಿಕೊಳ್ಳಿ. ಆಗಾಗ ಬಿದ್ದ ಬೇಲಿಯನ್ನು ಎಬ್ಬಿಸಿ ನಿಲ್ಲಿಸುತ್ತಿರಿ. ಅದು ಒಳ್ಳೆಯ ಸ್ವಾರ್ಥ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: