ಅಂತಃಪುರ ಗೀತೆಗಳು – ಏನೀ ಮಹಾನಂದವೇ – ಡಿ.ವಿ.ಜಿ

ಏನೀ ಮಹಾನಂದವೇ ಓ ಭಾಮಿನಿ
ಏನೀ ಸಂಭ್ರಮದಂದವೇ ಬಲು ಚಂದವೇ ||
ಏನೀ ವೃತಾಮೋದ ಏನೀ ಮುರಜ ನಾದ
ಏನೀ ಜೀವೋನ್ಮಾದ ಏನೀ ವಿನೋದ ||

ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ – ತಕಝಣುರೆನಿಸಿ ||
ಕುಕ್ಕುತೆ ಚರಣವ – ಕುಲುಕುತೆ ಕಾಯವ
ಸೊಕ್ಕಿದ ಕುಣಿತವ – ಕುಣಿವೆ ನೀನೆಲೆ ಬಾಲೆ ||

ಆರು ನಿನ್ನೆಯ ಹೃದಗಾರದೆ ನರ್ತಿಸಿ
ಮಾರ ಶೂರತೆಯ ಪ್ರಕಾರಿಸುತಿರ್ಪನ್ ||
ಸ್ಮೇರವದನ ನಮ್ಮ ಚೆನ್ನಕೇಶವ ರಾಯ
ಓರೆಗನ್ನಿಂ ಸನ್ನೆ ತೋರುತಲಿಹನೇನೆ ||

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in ಕವನ, ಡಾ||ಡಿ.ವಿ.ಗುಂಡಪ್ಪ, ಭಾವಗೀತೆ, ಭಾವಸಂಗಮ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: