ಹಿಂದೆ ಹೇಗೆ ಚಿಮ್ಮುತಿತ್ತು
ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ
ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ
ಒಂದು ಸಣ್ಣ ಮಾತಿನಿರಿತ ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ ಸ್ನೇಹವಾಯ್ತೆ ಹೋಮ
ಹಮ್ಮು ಬೆಳದು ನಮ್ಮ ಬಾಳು ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ ತಬ್ಬಿಕೊಳಲಿ ತೋಳು
Advertisements
Posted on ಆಗಷ್ಟ್ 9, 2009, in ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಭಾವಗೀತೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.
ನಿಮ್ಮ ಟಿಪ್ಪಣಿ ಬರೆಯಿರಿ
Comments 0