‘Ilidu baa taayi..’ song – ಇಳಿದು ಬಾ ತಾಯಿ..ಇಳಿದು ಬಾ ತಾಯಿ – ಚಿತ್ರ ಅರಿಶಿನ ಕುಂಕುಮ

ದೂರದಿಂದ ಭಾರತದ ಮುಡಿಯಿಂದ ಗಂಗೆಯನ್ನು ಪಾದದವರೆಗೂ ಕರೆ ತರುವ  ವರಕವಿ ಬೇಂದ್ರೆ ಅವರು 1970 ರಲ್ಲಿ ಅರಿಶಿನ ಕುಂಕುಮ ಚಿತ್ರಕ್ಕೆ ಬರೆದ ‘ ಇಳಿದು ಬಾ. .. ತಾಯಿ.. ಇಳಿದು ಬಾ ‘ ಎಂಬ ಹಾಡನ್ನು ಹಾಡುತ್ತಿದ್ದರಂತೆ. ಅದೇನೆ ಇರಲಿ.. ಅಂದು ಕವಿ ಬರೆದ ಶಕ್ತಿಪೂರ್ಣ ಸಾಹಿತ್ಯಕ್ಕೆ ಸೊಗಸಾದ ಸಂಗೀತ ನೀಡಿದವರು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್ . ಪಿಬಿ ಶ್ರೀನಿವಾಸ್ ಅವರ ಕಂಚಿನ ಕಂಠದಲ್ಲಿ ಈ ಹಾಡನ್ನು ಕೇಳುತ್ತಿದ್ದರೆ ಮಿಂಚಿನ ಸಂಚಾರವಾಗುತ್ತದೆ.

ಸಾಹಿತ್ಯ : ವರಕವಿ ಡಾ.ದ.ರಾ.ಬೇಂದ್ರೆ
ಸಂಗೀತ : ವಿಜಯಭಾಸ್ಕರ್
ಗಾಯನ : ಡಾ.ಪಿ.ಬಿ.ಶ್ರೀನಿವಾಸ್

ಆಆ..ಆಆ.. ಆಆ..ಆಆ..
ಓಂ..ಓಂ..ಓಂ..

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ಡಿಕ್ದಿಗಂತದಲಿ ಘಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ನಿನಗೆ ಪೊಡಮಡುವೆ ನಿನ್ನ ನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ
ನೆಲೆದೆ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ
ನೀರಿರರದ ಮೀನ ಕರೆಕರೆವ ಬಾ
ಕರುಕಂಡ ಕರುಳೆ ಮನವುಂಡ ಮರುಳೆ
ಉದ್ದoಡ ಅರುಳೆ ಸುಳಿಸುಳಿದೆ ಬಾ
ಶಿವಶುಭ್ರ ಕರುಣೆ ಅತಿಗಿoಚದರುಣೆ
ವಾತ್ಸಲ್ಯವರುಣೆ ಇಳಿ ಇಳಿದು ಬಾ
ಸುರಸ್ವಪ್ನವಿದ್ದ ಪ್ರತಿಬಿಂಬವಿದ್ದ
ಉದ್ದುದ್ದ ಶುದ್ದ ನೀರೇ..ನೀರೇ..
ಎಚ್ಚೆತ್ಟು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೆ
ಸಿರಿಪಾರಿಜಾತ ವರಪಾರಿಜಾತ
ತಾರಾಕುಸುಮದಿಂದೇ
ಬೃoದಾರವoದೆ ಮಂದಾರಗಂದೆ
ನೀನೇ ತಾಯಿ ತಂದೇ
ರಸಪೂರ್ಣಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದಕನ್ಯೆ….ಕನ್ಯೆ
ಇಳಿದು ಬಾ ತಾಯಿ ಇಳಿದು ಬಾ

ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ
ಬಂದಾರೆ ಬಾರೆ ಒಂದಾರೆ ಸಾರೆ
ಕಣ್ ಧಾರೆ ತಡೆವರೆನೇ
ಅವತಾರವೆಂದೇ ಎಂದಾರೆ ತಾಯಿ
ಈ ಅಧ:ಪಾತವನ್ನೇ
ಹರಕೆ ತಂದಂತೆ ಮಮತೆ ಮಿಂದಂತೆ
ತುoಬಿ ಬಂದಂತೆ

ದುಂ ದುಂ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯಿ ದುಡುಕಿ ಬಾ
ಹರಣ ಹೊಸತಾಗೇ ಹೊಳೆದು ಬಾ
ಬಾಳು ಬೆಳಕಾಗಿ ಬೆಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅoಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಅರಿಶಿನ ಕುಂಕುಮ
ಬಿಡುಗಡೆ ವರ್ಷ ೧೯೭೦
ಚಿತ್ರ ನಿರ್ಮಾಣ ಸಂಸ್ಥೆ ಗುರುಭಕ್ತಿ ಫಿಲಂಸ್
ನಾಯಕ ಕಲ್ಯಾಣಕುಮಾರ್
ನಾಯಕಿ ಕಲ್ಪನಾ, ಲೀಲಾವತಿ
ಪೋಷಕ ವರ್ಗ ರಾಜೇಶ್, ಬಿ.ವಿ.ರಾಧ, ದ್ವಾರಕೀಶ್
ಸಂಗೀತ ನಿರ್ದೇಶನ ವಿಜಯಭಾಸ್ಕರ್
ಕಥೆ / ಕಾದಂಬರಿ
ಚಿತ್ರಕಥೆ
ಸಂಭಾಷಣೆ
ಸಾಹಿತ್ಯ ದ.ರಾ.ಬೇಂದ್ರೆ, ಚಿ.ಉದಯಶಂಕರ್
ಹಿನ್ನೆಲೆ ಗಾಯನ ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ
ಛಾಯಾಗ್ರಹಣ ಆರ್.ಎನ್.ಕೃಷ್ಣ
ನೃತ್ಯ
ಸಾಹಸ
ಸಂಕಲನ
ನಿರ್ದೇಶನ ಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕರು ನಾಗೇಂದ್ರಪ್ಪ
ಪ್ರಶಸ್ತಿಗಳು
ಇತರೆ ಮಾಹಿತಿ’ ಈ ಚಿತ್ರದಲ್ಲಿಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ.
Arishina Kunkumar actress Kalpana

ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಅರಳಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟವರು ವರಕವಿ ಬೇಂದ್ರೆ. ”ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ”ಕುಣಿಯೋಣು ಬಾರಾ ಕುಣಿಯೋಣು ಬಾ…” ಎಂದು ಹಾಡಿ, ಬರೆದು ಉತ್ಸಾಹದ ಚಿಲುಮೆ ಚಿಮ್ಮಿಸಿದ ಕವಿ.

1970ರಲ್ಲಿ ತೆರೆಕಂಡ ‘ಅರಿಶಿನ ಕುಂಕುಮ’ ಚಿತ್ರಕ್ಕಾಗಿ ಬೇಂದ್ರೆ ಅವರ ”ಇಳಿದು ಬಾ…ತಾಯಿ…ಇಳಿದು ಬಾ…” ಎಂಬ ಗೀತೆಯನ್ನು ಅಳವಡಿಸಿಕೊಳ್ಳಲಾಗಿದೆ. ಶಕ್ತಿಪೂರ್ಣ ಸಾಹಿತ್ಯಕ್ಕೆ ಸೊಗಸಾದ ಸಂಗೀತ ನೀಡಿದವರು ಸಂಗೀತ ಸಾಮ್ರಾಟ್ ವಿಜಯಭಾಸ್ಕರ್. ಪಿಬಿ ಶ್ರೀನಿವಾಸ್ ಅವರ ಕಂಚಿನ ಕಂಠದಿಂದ ಹೊರಹೊಮ್ಮಿದ ಈ ಹಾಡು ಕೇಳುಗರಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ.

ಕಲ್ಯಾಣ್ ಕುಮಾರ್, ಕಲ್ಪನಾ, ಲೀಲಾವತಿ ಮುಖ್ಯಭೂಮಿಕೆಯಲ್ಲಿನ ಚಿತ್ರ. ರಾಜೇಶ್, ಬಿ.ವಿ.ರಾಧಾ, ದ್ವಾರಕೀಶ್ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದಲ್ಲಿ ಈ ಚಿತ್ರ ತೆರೆಕಂಡಿತ್ತು. ಈ ಹಾಡಿನ ದೃಶ್ಯದಲ್ಲಿ ಅನಕೃ ಮತ್ತಿತರ ಗಣ್ಯರು ಕಾಣಿಸಿಕೊಳ್ಳುತ್ತಾರೆ.

ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||

ಹರನ ಜಡೆಯಿಂದ ಹರಿಯ ಅಡಿಯಿಂದ
ಋಶಿಯ ತೊಡೆಯಿಂದ ನುಸುಳಿ ಬಾ;
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ

ನಿನಗೆ ಪೊಡಮಡುವೆ ನಿನ್ನನುಡುತೊಡುವೆ
ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ

ದಯೆಯಿರದ ದೀನ
ಹರೆಯಳಿದ ಹೀನ
ನೀರಿರದ ಮೀನ ಕರೆಕರೆವ ಬಾ
ಇಳಿದು ಬಾ ತಾಯೇ ಇಳಿದು ಬಾ.

ಕರು ಕಂಡ ಕರುಳೆ
ಮನ ಉಂಡ ಮರುಳೆ
ಉದ್ದಂಡ ಅರುಳೆ
ಸುಳಿಸುಳಿದು ಬಾ;
ಶಿವಶುಭ್ರ ಕರುಣೆ
ಅತಿಕಿಂಚದರುಣೆ
ವಾತ್ಸಲ್ಯವರಣೆ
ಇಳಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!
ಸಿರಿವಾರಿಜಾತ ವರಪಾರಿಜಾತ ತಾರಾ-ಕುಸುಮದಿಂದೆ
ವೃಂದಾರವಂದ್ಯೆ ಮಂದಾರಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನಂದ ಕನ್ಯೆ!
ಇಳಿದು ಬಾ ತಾಯಿ ಇಳಿದು ಬಾ

ಬಂದಾರೆ ಬಾರೆ ಒಂದಾರೆ ಸಾರೆ ಕಣ್ಧಾರೆ ತಡೆವರೇನೆ?
ಅವತಾರವೆಂದೆ ಎಂದಾರೆ ತಾಯಿ, ಈ ಅಧಃಪಾತವನ್ನೆ?
ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ

ದುಮ್ ದುಮ್ ಎಂದಂತೆ ದುಡುಕಿ ಬಾ
ನಿನ್ನ ಕಂದನ್ನ ಹುಡುಕಿ ಬಾ
ಹುಡುಕಿ ಬಾ ತಾಯೆ ದುಡುಕಿ ಬಾ
ಹರಣ ಹೊಸದಾಗಿ ಹೊಳೆದು ಬಾ
ಬಾಳುಬೆಳಕಾಗೆ ಬೆಳೆದು ಬಾ
ಕೈ ತೊಳೆದು ಬಾ
ಮೈ ತಳೆದು ಬಾ
ಶಂಭು ಶಿವಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

Advertisements

About sujankumarshetty

kadik helthi akka

Posted on ಆಗಷ್ಟ್ 9, 2009, in "ಇ-ಲೋಕ" ಗಾನ ಕೋಗಿಲೆಗಳ “ಕನ್ನಡಲೋಕ”. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: