ಟಿಪ್ಪು ಸುಲ್ತಾನ್

‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್

ಟೀಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟೀಪು ಸುಲ್ತಾನ್ (೧೭೫೩ಮೇ ೪, ೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ, ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟೀಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು.
ಟೀಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟೀಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ.
೧೫ ನೆ ವಯಸ್ಸಿನಲ್ಲಿ ತನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ೧೭೮೨ ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು.
ಎರಡನೇ ಮೈಸೂರು ಯುದ್ಧ :

ಐದು ವರ್ಷಗಳ ನಂತರ ಎರಡನೇ ಮೈಸೂರು ಯುದ್ಧ ಆರಂಭವಾಯಿತು. ಈ ಯುದ್ಧದಲ್ಲಿ ಬ್ರಿಟಿಷರು ಸೋತರೂ ಅವರಿಂದ ಭಾರತದ ಸ್ವಾತಂತ್ರ್ಯಕ್ಕಿರುವ ಅಪಾಯವನ್ನು ಟೀಪು ಮನಗಂಡನು. ೧೭೮೨ ರಲ್ಲಿ ಹೈದರಾಲಿಯ ನಿಧನದ ನಂತರ ಟೀಪು ಸುಲ್ತಾನನಾದ ಮೇಲೆ ಬ್ರಿಟಿಷರ ಮುನ್ನಡೆಯನ್ನು ತಡೆಯಲು ಅನೇಕ ಮೈತ್ರಿತ್ವಗಳನ್ನು ಸ್ಥಾಪಿಸಲು ಹೆಣಗಿದ. ಮೊದಲು ಮರಾಠರೊಂದಿಗೆ ಹಾಗೂ ಮೊಘಲ್ ಸಾಮ್ರಾಜ್ಯದೊಂದಿಗೆ ಮೈತ್ರಿತ್ವವನ್ನು ಏರ್ಪಡಿಸಿದ.

ಆದರೆ ಈ ಮೈತ್ರಿತ್ವಗಳು ವಿಫಲವಾದಾಗ ಯೂರೋಪ್‌ನಲ್ಲಿ ‍ ಬೆಳೆಯುತ್ತಿದ್ದ ಏಳುವರ್ಷಗಳ ಯುದ್ಧದ ಪರಿಣಾಮವಾಗಿ ಸ್ವಲ್ಪ ದುರ್ಬಲವಾಗಿದ್ದ ಫ್ರಾನ್ಸ್‌ನತ್ತ ಟೀಪು ತಿರುಗಿದನು. ಈ ಮೈತ್ರಿತ್ವದಿಂದ ಅವನು ಪಡೆದದ್ದಕ್ಕಿಂತಲೂ ಹೆಚ್ಚು ನೆರವನ್ನು ನಿರೀಕ್ಷಿಸಿ ೧೭೮೯ ರಲ್ಲಿ ಬ್ರಿಟಿಷರ ಕೈಯಲ್ಲಿದ್ದ ಟ್ರಾವಂಕೋರ್ ರಾಜ್ಯದ ಮೇಲೆ ಆಕ್ರಮಣ ನಡೆಸಿದ;

ಮೂರನೇ ಮೈಸೂರು ಯುದ್ಧ :

ಇದರ ಪರಿಣಾಮ ಮೂರನೇ ಮೈಸೂರು ಯುದ್ಧ – ಇದರಲ್ಲಿ ಮೈಸೂರು ಸಂಸ್ಥಾನ ಬಲವಾಗಿ ಸೋತಿತು; ಇದೇ ಸಮಯದಲ್ಲಿ ಫ್ರಾನ್ಸ್ ದೇಶದಲ್ಲಿ ಕ್ರಾಂತಿ ಆರಂಭವಾಗಿ ಫ್ರಾನ್ಸ್ ದೇಶವು ಟೀಪುವಿನ ನೆರವಿಗೆ ಬರಲಾಗಲಿಲ್ಲ.

ನಾಲ್ಕನೇ ಮೈಸೂರು ಯುದ್ಧ :

ಟೀಪುವಿನ ಮರಣ ನಾಲ್ಕನೇ ಮೈಸೂರು ಯುದ್ಧದ ಸಮಯದಲ್ಲಿ ನಡೆಯಿತು. ೧೭೯೮ ರಲ್ಲಿ ನೆಪೋಲಿಯನ್ ಈಜಿಪ್ಟ್ ವರೆಗೆ ಬಂದಿಳಿದದ್ದು ಮುಂದಕ್ಕೆ ಭಾರತದಲ್ಲಿ ಬ್ರಿಟಿಷರ ಮೇಲೆ ಆಕ್ರಮಣ ನಡೆಸಲು, ಮತ್ತು ಇದರ ಮುಂದಿನ ಹೆಜ್ಜೆ ಮೈಸೂರು ಸಂಸ್ಥಾನವಾಗಿದ್ದಿತು. ನೈಲ್ ಯುದ್ಧದಲ್ಲಿ ಆಂಗ್ಲ ಅಧಿಕಾರಿ ಹೊರೇಷಿಯೋ ನೆಲ್ಸನ್ ನೆಪೋಲಿಯನ್‌ನ ಕನಸನ್ನು ತಡೆದರೂ ಸಹ, ಮೂರು ಸೇನಾ ತುಕಡಿಗಳು – ಮುಂಬಯಿಯಿಂದ ಒಂದು ಮತ್ತು ಇನ್ನೆರಡು ಆಂಗ್ಲ ತುಕಡಿಗಳು (ಆರ್ಥರ್ ವೆಲ್ಲೆಸ್ಲಿ ಮತ್ತು ಡ್ಯೂಕ್ ಆಫ್ ವೆಲ್ಲಿಂಗ್ಟನ್ ನ ನೇತೃತ್ವದಲ್ಲಿ) ಮೈಸೂರಿನತ್ತ ಹೆಜ್ಜೆ ಇಟ್ಟವು. ರಾಜಧಾನಿಯಾದ ಶ್ರೀರಂಗಪಟ್ಟಣ ಕ್ಕೆ ೧೭೯೯ ರಲ್ಲಿ ಈ ತುಕಡಿಗಳು ಮುತ್ತಿಗೆ ಇಟ್ಟವು. ಮೇ ೪ ರಂದು ಈ ಸೇನೆಗಳು ಕೋಟೆ ಗೋಡೆಗಳನ್ನು ಭೇದಿಸಿ ಒಳಗೆ ನುಗ್ಗುತ್ತಿದ್ದಾಗ ಮುನ್ನುಗ್ಗಿದ ಟೀಪು ಮೃತನಾದ.

ಟೀಪು ಸೃಷ್ಟಿಸಿದ ಒಂದು ಮುಖ್ಯ ಸೇನಾ ಪ್ರಗತಿಯೆಂದರೆ ರಾಕೆಟ್‍ಗಳ ಮೂಲಕ ದೊಡ್ಡ ಮಟ್ಟದ ಆಕ್ರಮಣವನ್ನು ನಡೆಸುವುದು. ಮೂರನೇ ಹಾಗೂ ನಾಲ್ಕನೇ ಮೈಸೂರು ಯುದ್ಧಗಳಲ್ಲಿ ಇವುಗಳ ಬಳಕೆಯ ಪರಿಣಾಮವಾಗಿ ಆಂಗ್ಲರು ಸಹ ಇವನ್ನು ಬಳಕೆಗೆ ತಂದರು.

ಅನೇಕ ಚರಿತ್ರಜ್ಞರ ವಿಮರ್ಶೆಯ ಪ್ರಕಾರ ಟೀಪುವಿನ ಆಡಳಿತ ಜಾತ್ಯತೀತ ಹಾಗೂ ಸ್ವಾತಂತ್ರ್ಯಪೂರ್ಣ ಆದರ್ಶಗಳನ್ನು ಹೊಂದಿದ್ದಿತು. ಟೀಪುವಿನ ಜೀವನದ ಒಂದು ಆಸಕ್ತಿಕರ ಅಂಶವೆಂದರೆ ಅವನು ಜಾಕೊಬಿನ್ ಕ್ಲಬ್ ನ ಸಂಸ್ಥಾಪಕರಲ್ಲಿ ಒಬ್ಬನು. ಅದರ ಸದಸ್ಯತ್ವವನ್ನು ಸ್ವೀಕರಿಸುವಾಗ ಫ್ರಾನ್ಸ್‌ ಬಗ್ಗೆ ಮಾಡಿದ ಭಾಷಣದಲ್ಲಿ ಈ ಮಾತುಗಳಿದ್ದವು:

“ನಿಮ್ಮ ದೇಶದ ಸಂಸ್ಕೃತಿಯನ್ನು ನಾನು ಮೆಚ್ಚುತ್ತೇನೆ; ನಿಮ್ಮ ದೇಶ ನನಗೆ ಪ್ರಿಯವಾದದ್ದು, ಮತ್ತು ನಾನು ಅದರ ಮಿತ್ರ. ನಿಮ್ಮ ದೇಶ ಎಂದಿಗೂ ನನ್ನ ದೇಶದಲ್ಲಿ ಸಹಕಾರ ಕಾಣುತ್ತದೆ, ನನ್ನ ದೇಶಕ್ಕೆ ಇಲ್ಲಿ ಸಹಕಾರ ದೊರೆತಿರುವಂತೆ, ನನ್ನ ದೇಶದ ತಂಗಿ!”

ನಾಗರಿಕ ಟೀಪು ಸುಲ್ತಾನ್ :

ಟೀಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಮಾಜಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು.

ವಿವಾದ

ಇತ್ತೀಚೆಗೆ ಕರ್ನಾಟಕದ ಸಚಿವ ಡಿ.ಎಚ್.ಶಂಕರಮೂರ್ತಿ ಅವರು ನೀಡಿದ ‘ಟೀಪು ಕನ್ನಡ ವಿರೋಧಿ’ ಎಂಬ ಹೇಳಿಕೆ ಟೀಪು ಕುರಿತ ವಿವಾದಗಳನ್ನು ಕೆಣಕಿತು.ಆಲಂಭಾಶ್ ರಾರಾವಿ

ಹೊರಗಿನ ಸಂಪರ್ಕಗಳು

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸ್ವಾತಂತ್ರ್ಯ ಹೋರಾಟಗಾರರು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: