ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟನಾದವನು ಸಂಗೊಳ್ಳಿ ರಾಯಣ್ಣ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿರುವ ಗಣೇಶವಾಡಿ ಗ್ರಾಮವು ಸಂಗೊಳ್ಳಿ ರಾಯಣ್ಣನ ತಾಯಿ ಕೆಂಚವ್ವನ ತವರುಮನೆ. ಅಲ್ಲಿಯೆ ಸಂಗೊಳ್ಳಿ ರಾಯಣ್ಣನು ಜನಿಸಿದನು.

ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದರು. ಗಲ್ಲಿಗೇರಿಸಿದ ದಿನಾಂಕ ಜನವರಿ ೨೬.

ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫, ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ.

ಜೊತೆಗಾರರು

ರಾಯಣ್ಣನ ಜೊತೆಗೆ ಗಲ್ಲಿಗೇರಿದ ಅವನ ಜೊತೆಯ ಹೋರಾಟಗಾರರು ಇಂತಿದ್ದಾರೆ:

ಕ್ರಮ
ಸಂಖ್ಯೆ
ಹೆಸರು ಜಾತಿ ವಯಸ್ಸು
ರಾಯಣ್ಣ ಧನಗರ ೩೫
ಬಾಳನಾಯಿಕ ಬೇಡರ ೫೦
ಬಸಲಿಂಗಪ್ಪ ಲಿಂಗಾಯತ ೩೦
ರುದ್ರನಾಯಕ ಬೇಡರ ೫೦
ಕರಬಸಪ್ಪ ಲಿಂಗಾಯತ ೫೦
ಎಳಮಯ್ಯ ಬೇಡರ ೫೦
ಅಪ್ಪೂನಿ ಮುಸಲ್ಮಾನ ೪೦
ಭೀಮ ಬೇಡರ ೪೦
ರಾಣೋಜಿ ಕೊಂಡ ಮರಾಠಾ ೩೦
೧೦ ಕೋನೇರಿ ಮರಾಠಾ ೪೦
೧೧ ಕೆಂಚಪ್ಪ ೩೦
೧೨ ನ್ಯಾಮಣ್ಣ ಜೈನ ೪೦
೧೩ ಅಪ್ಪಾಜಿ ನಾಯಕ ಬೇಡರ ೩೦

ಕೊನೆಯ ಉಕ್ತಿ

ಸಂಗೊಳ್ಳಿ ರಾಯಣ್ಣನು ಗಲ್ಲಿಗೇರುವ ಮುನ್ನ ಹೇಳಿದ ಕೊನೆಯ ಮಾತು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

“ನನ್ನ ಕೊನೆ ಆಸೆ ಯಾವುದೆಂದರೆ ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸುವುದು”[೧].

ಹೊರಗಿನ ಸಂಪರ್ಕಗಳು

Advertisements

About sujankumarshetty

kadik helthi akka

Posted on ಆಗಷ್ಟ್ 15, 2009, in ಸ್ವಾತಂತ್ರ್ಯ ಹೋರಾಟಗಾರರು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: