ದೇವನದೆಂತಹ ದೊಡ್ಡಸ್ತಿಕೆ ಬಿಡ

ದೇವನದೆಂತಹ ದೊಡ್ಡಸ್ತಿಕೆ ಬಿಡ
ನನ್ನ ದೊರಿ ಮ್ಯಾಲಾ
ನನ್ನ ಬಿಟ್ಟು ಇನ್ನೊಂದು ಹೆಣ್ಣ
ಮ್ಯಾಲಿಲ್ಲ ಅವಗ ಖ್ಯಾಲಾ ||ಪ||

ರಾಮ ರಾಮನಂತೆ, ಹೊಗಳೆ ಹೊಗಳುತಾರೆ
ರಾಮನೇನು ಶುದ್ಧಾ…
ಯಾರ ಮಾತ ಕೇಳಿ ತನ್ನ ಸತಿಯನೆ
ಅಡವಿಗೆ ಅಟ್ಟಿದ್ದಾ…||ದೇವ||

ಬ್ರಹ್ಮ ದೇವನಂತೆ, ಬಹಳ ಹಿರಿಯನಂತೆ
ಬುದ್ಧಿ ಐತಾ ಅವಗಾ…
ಮೂರು ಜನ ಹೆಂಡಿರ್‍ಯಾತಕೋ
ಪ್ರೀತಿಯ ಬಗಿ ಹ್ಯಾಂಗಾ…||ದೇವ||

ಕೇಳಬ್ಯಾಡ ಶಿವನೇಳಿಗೆ ಗೌರಿಯ
ಗೋಳುಗೊಳಿಸಿಬಿಟ್ಟಾ…
ಹೇಳದೆ ಕೇಳದೆ ತನ್ನ ಜಟೆಯಲಿ
ಗಂಗೆಯ ತಂದಿಟ್ಟ…||ದೇವ||

ಕೃಷ್ಣನದೆಂತಹ ಖೊಟ್ಟಿತನವೋ
ನೋಡೆಷ್ಟು ಹೆಂಡಿರವಗಾ…
ಒಬ್ಬರಿಲ್ಲದಿನ್ನೆಷ್ಟು ಮಂದಿ
ಹಿಡಿದೀತು ಹೃದಯದಾಗಾ…||ದೇವ||

Advertisements

About sujankumarshetty

kadik helthi akka

Posted on ಸೆಪ್ಟೆಂಬರ್ 16, 2009, in ಜನಪದ ಗೀತೆ. Bookmark the permalink. 1 ಟಿಪ್ಪಣಿ.

  1. hi pritiya kannadigarige nan shubhashayagalu.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: