ಚೆಲ್ಲಿದರೂ ಮಲ್ಲಿಗೆಯಾ …..ಶ್ರವಣನ ಮದ ಮುರಿದ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಗಾಯನ : ಕೆ.ಎಸ್.ಸುರೇಖಾ ಮತ್ತು ನರಸಿಂಹನಾಯಕ್

ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ನರಸಿಂಹನಾಯಕ್:
ಉತ್ತಾರಾಜಮ್ಮನ ಕರದಲ್ಲಿ ಹುಟ್ಟಿದಾ
ಉತ್ತಾರಾಜಮ್ಮನ ಕರದಲ್ಲಿ ಹುಟ್ಟಿದಾ
ಶಿವದಾಸರಾ ಮಗನ ನೆನೆಯೋಣ ಭಜಿಸೋಣ
ಗುಂಜುಮಲೆಗೆ ನಾವ್ ಹೋಗೋಣ
ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ

ಕೆ.ಎಸ್.ಸುರೇಖಾ:
ತಾಳ ಮದ್ದಳೆ ನುಡಿಸಿ ಕಹಳೆ ಕಂಪನ್ನು ಊದಿ
ತಾಳ ಮದ್ದಳೆ ನುಡಿಸಿ ಕಹಳೆ ಕಂಪನ್ನು ಊದಿ
ಕಂಸಾಳೆ ಪದ ಹಾಡಿ ಮಾದಯ್ಯನ ಕೂಗೋಣ
ಕಂಸಾಳೆ ಪದ ಹಾಡಿ ಮಾದಯ್ಯನ ಕೂಗೋಣ
ಮಂಗಳ ಮೂರುತಿ ಬರುತಾನೆ
ನರಸಿಂಹನಾಯಕ್:
ಡೋಲು ಡೋಲಿನ ಕುಣಿತ ಮಾಡಿ ಇವನ ಬೇಡೋಣ
ಡೋಲು ಡೋಲಿನ ಕುಣಿತ ಮಾಡಿ ಇವನ ಬೇಡೋಣ

ನರಸಿಂಹನಾಯಕ್:
ಹಿಂಡ್ ಹುಲಿ ಹಾಸಿಗೆ ಮರಿಹುಲೆ ದಿಂಬಿಗೆ
ಹಿಂಡ್ ಹುಲಿ ಹಾಸಿಗೆ ಮರಿಹುಲೆ ದಿಂಬಿಗೆ
ಗಂಡ್ ಹುಲಿ ಗದ್ದುಗೆ ಮೇಲೇರಿ ಕುಳಿತವ್ನೆ
ಗಂಡ್ ಹುಲಿ ಗದ್ದುಗೆ ಮೇಲೇರಿ ಕುಳಿತವ್ನೆ
ಕೊಂಡಕ್ಕೆ ಹೋಗಿ ಬೇಡೋಣ
ಕೆ.ಎಸ್.ಸುರೇಖಾ:
ಶಿವಪ್ರಿಯನ ಸವಿನಾಮ ಭಕ್ತ ತುಂಬಿ ಹಾಡೋಣ
ಶಿವಪ್ರಿಯನ ಸವಿನಾಮ ಭಕ್ತ ತುಂಬಿ ಹಾಡೋಣ

ಕೆ.ಎಸ್.ಸುರೇಖಾ:
ಮಜ್ಜನ ಸೇವೆಗೆ ಮಳೆರಾಯ ಮಳಿ ಸುರಿಸಿ
ಮಜ್ಜನ ಸೇವೆಗೆ ಮಳೆರಾಯ ಮಳಿ ಸುರಿಸಿ
ಮಾದಯ್ಯನ ಮಂಡೆಗೆ ತಂಪನ್ನ ನೀಡ್ಯಾನೆ
ಮಾದಯ್ಯನ ಮಂಡೆಗೆ ತಂಪನ್ನ ನೀಡ್ಯಾನೆ
ಎಣ್ಣೆ ಮಜ್ಜನ ಮಾಡೋಣ
ನರಸಿಂಹನಾಯಕ್:
ಗುಲಗಂಜಿ ಮಲೆಯೇರಿ ಮಾದಯ್ಯನ ನೋಡೋಣ

ನರಸಿಂಹನಾಯಕ್:
ತಂಗಾಳಿ ಹಾಡಿಗೆ ತರಗೆಲೆ ತಾಳ ಹಾಕಿ
ತಂಗಾಳಿ ಹಾಡಿಗೆ ತರಗೆಲೆ ತಾಳ ಹಾಕಿ
ಸ್ವಾಮಿ ಮಾದಯ್ಯನ ಭಜನೆಯ ಮಾಡುತಾವೆ
ಸ್ವಾಮಿ ಮಾದಯ್ಯನ ಭಜನೆಯ ಮಾಡುತಾವೆ
ಮೈಯೆಲ್ಲ ಕಿವಿಯಾಗೆ ಕೇಳೋಣ
ಕೆ.ಎಸ್.ಸುರೇಖಾ:
ಮಾದಯ್ಯನ ಮಲೆಯಾಗಿ ಮರವಾಗಿ ನಿಲ್ಲೋಣ

ಕೆ.ಎಸ್.ಸುರೇಖಾ:
ಜನುಮ ಜನುಮದಾ ಪಾಪ ಪರಿಹಾರ ಮಾಡುತಾನೆ
ಜನುಮ ಜನುಮದಾ ಪಾಪ ಪರಿಹಾರ ಮಾಡುತಾನೆ
ಪವಾಡ ಪುರುಷ ಪರಶಿವನ ಅವತಾರಿ
ಲಂಕೇಶ ಪೂಜಿತ ಮಾದಯ್ಯ

ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ನರಸಿಂಹನಾಯಕ್:
ಆ……………….ಆ…………….
ಆ……………….ಆ…………….
ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ

About sujankumarshetty

kadik helthi akka

Posted on ಸೆಪ್ಟೆಂಬರ್ 16, 2009, in ಜನಪದ ಗೀತೆ, ಭಕ್ತಿಗೀತೆ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮ ಟಿಪ್ಪಣಿ ಬರೆಯಿರಿ