ಭಾರತದ ಆಟಗಳಲ್ಲಿ ಒಂದು ಗಟ್ಟಿತನ ಇಲ್ಲ

Cricket is religion in India

ಹತಾಶ ವಾಸ್ತವವೊಂದನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಏನಂದ್ರೆ, ಭಾರತದ ಆಟಗಳಲ್ಲಿ ಒಂದು ಗಟ್ಟಿತನ ಇಲ್ಲ. ನಮ್ಮ ಆಟಗಳಲ್ಲಿ ಯಾಕೆ ಗಟ್ಟಿತನವಿಲ್ಲ ಅನ್ನೋದಕ್ಕೂ ಕಾರಣಗಳಿವೆ. ಎಲ್ಲವಕ್ಕೂ ಒಂದು ಕಾರಣವಿರುತ್ತದೆ. ಭಾರತದಲ್ಲಿ ಆಟಗಳು ಅಂತ ಏನಿವೆ, ಅವೆಲ್ಲ ಮಕ್ಕಳಾಟಗಳು! ಇಲ್ಲಿ, ಯುವಕರಿಗೆ ಮೀಸಲಾದ, ಅವರ ಭಾವನೆಗಳಿಗೆ ವೇದಿಕೆ ಒದಗಿಸುವ ಯಾವ ಆಟವೂ ಇಲ್ಲ. ಏಕೆಂದರೆ, ಚಿಕ್ಕ ವಯಸ್ಸಿಗೆ ಮದುವೆ ಮಾಡುವ ಪರಿಪಾಠವಿದ್ದ ಭಾರತದಲ್ಲಿ ತಾರುಣ್ಯದ ನಲಿವಿಗೆ ಸಮಯವೇ ಇರಲಿಲ್ಲ. ನನ್ನ ತಾಯಿಗೆ ಮದುವೆಯಾಗಿದ್ದು ಆಕೆಯ ಏಳನೇ ವರ್ಷದಲ್ಲಿ. ಆಗ ತಂದೆಯ ವಯಸ್ಸು 12 ವರ್ಷಗಳಿರಬಹುದು. ಹೀಗೆ ಹನ್ನೆರಡನೇ ವಯಸ್ಸಿನಲ್ಲಿ ಮದುವೆಯಾಗಿ ಸಂಸಾರದ ನೊಗ ಹೊರುವವರು ಬಯಲಿಗಿಳಿದು ಕ್ರಿಕೆಟ್, ಫುಟ್‌ಬಾಲ್ ಆಡುವುದನ್ನು ನಿರೀಕ್ಷಿಸಲಿಕ್ಕಾಗುತ್ತದಾ?

ಪಶ್ಚಿಮದಲ್ಲಿ ಪರಿಸ್ಥಿತಿ ಭಿನ್ನ. 25, 28, 30ರ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಹುಡುಗರು 14ಕ್ಕೆ ಹಾಗೂ ಹುಡುಗಿ ಯರು 13ಕ್ಕೆಲ್ಲ ಮಗುವನ್ನು ಹೆರುವ ಸಾಮರ್ಥ್ಯ ಪಡೆದಿರುತ್ತಾರೆ. ಆದರೂ ಮತ್ತೊಂದು ಹತ್ತು ವರ್ಷ ಅವರು ಕಾಯುತ್ತಾರೆ. ಈ ಅವಧಿಯ ತಾರುಣ್ಯ ಎಲ್ಲೋ ಒಂದು ಕಡೆ ಅಭಿವ್ಯಕ್ತಗೊಳ್ಳಬೇಕಲ್ಲ? ಹೀಗಾಗಿಯೇ ಪಶ್ಚಿಮದ ಆಟಗಳಲ್ಲಿ ತಾರುಣ್ಯದ ಘಮ. ಭಾರತದ ಆಟಗಳಲ್ಲಿ ಮಾತ್ರ ಬಾಲ್ಯದ್ದೇ ನವಿರು. ಅವು ಭಾರತದ್ದು ಎಂಬ ಒಂದೇ ಕಾರಣಕ್ಕೆ ಆ ಆಟಗಳನ್ನು ಸ್ವಾಗತಿಸುತ್ತೀರಿ ಎಂದಾದರೆ ಅದು ನಿಮ್ಮ ಆಯ್ಕೆಗೆ ಬಿಟ್ಟ ವಿಷಯ. ಆದರೆ ಯೌವನದ ಗರ್ಭದಲ್ಲಿ ಜನಿಸಿದ ಒಂದೇ ಒಂದು ಆಟವೂ ಭಾರತದಲ್ಲಿಲ್ಲ ಎಂಬುದು ಮಾತ್ರ ಖರೆ.

ನಿಮಗೆ ಗೊತ್ತಿರಬೇಕು, ಆಟಗಳಿಗೂ ಒಂದು ವಯಸ್ಸಿದೆ. ಹೆಚ್ಚಿನ ಆಯುಷ್ಯ ಹೊಂದಿರುತ್ತಿದ್ದ ದೇಶಗಳಲ್ಲಿ ಬೇರೆ ಥರದ ಆಟಗಳು ಚಾಲ್ತಿಯಲ್ಲಿರುವುದನ್ನು ಗಮನಿಸಬಹುದು. ಉದಾಹರಣೆಗೆ ಚೆಸ್. ಇಂಥ ಆಟಗಳು ವಯಸ್ಸಾದವರದ್ದೇ ಹೊರತು ಯುವಕರದ್ದಲ್ಲ. ಎಲ್ಲವನ್ನೂ ಮುಗಿಸಿ ಸಂಧ್ಯಾಕಾಲದಲ್ಲಿರುವ ನಿರ್ಲಿಪ್ತತೆ ಹೊರಗೆ ಹಾಕುವ ಆಟವದು. ಇಂಥದೊಂದು ಭಾವವನ್ನು ಹೊರಗೆ ಹಾಕಿದ ನಂತರ ಕಬಡ್ಡಿಯೂ ಬೇಕಾಗುವುದಿಲ್ಲ, ಚೆಸ್ ಕೂಡ ಬೇಕಾಗುವುದಿಲ್ಲ. ಯುವಕರ ಸರಾಸರಿಯೇ ಹೆಚ್ಚಿರುವ ದೇಶಗಳಲ್ಲಿ ಅಲ್ಲಿನ ಆಟಗಳಲ್ಲೂ ಯೌವನ ಹರಡಿಕೊಂಡಿರುತ್ತದೆ.

ಬೀಟಲ್ ಸಂಗೀತ ಜಗತ್ತಿನಾದ್ಯಂತ ಆಕರ್ಷಣೆ, ಗೌರವ ಪಡೆದುಕೊಳ್ಳುತ್ತಿದೆ. ಅದರರ್ಥ ಆ ಸಂಗೀತ ತುಂಬ ಗ್ರೇಟ್ ಅಂತೇನೂ ಅಲ್ಲ. ಅದು ಯುವಕರಿಗೆ ಸೇರಿದೆ ಅನ್ನೋದು ಆಕರ್ಷಣೆಗೆ ಕಾರಣ. ಕ್ಲಾಸಿಕಲ್ ಸಂಗೀತವನ್ನು ಅರ್ಥೈಸಿಕೊಳ್ಳಲು ನಿಮಗೆ ತುಂಬ ಸಮಯ ಬೇಕು. ಅಷ್ಟರಲ್ಲಿ ವಯಸ್ಸಾಗಿರುತ್ತದೆ. ಬೀಟಲ್ ಹಾಗೂ ಇತರ ಸಂಗೀತಗಳಿಗೆ ಸೇರಿದ ಜನ ಮೇಲೆ-ಕೆಳಗೆ ಹಾರಿಕೊಂಡಿರುತ್ತಾರೆ ಅನ್ನೋದನ್ನು ಬಿಟ್ಟರೆ ಅದೇನೂ ಅದ್ಭುತ ನೃತ್ಯವೂ ಅಲ್ಲ, ಭಾರಿ ಸಂಗೀತವೂ ಅಲ್ಲ. ಆದರದು ಯುವಕರಿಗೆ ಕನೆಕ್ಟ್ ಆಗುತ್ತದೆ ಎಂಬುದು ಮುಖ್ಯವಾಗುತ್ತದೆ. ಜನರಿಗೆ ಭಾವನೆಗಳನ್ನು ಹೊರಹಾಕುವುದಕ್ಕೆ ಶಾಲಾ ಹಂತದಲ್ಲೇ ವೇದಿಕೆಗಳನ್ನು ಒದಗಿಸಬೇಕು. ನಮ್ಮ ದೇಶದಲ್ಲಿ ಸಮಸ್ಯೆ ಇರುವುದು ಈ ಹಂತದಲ್ಲೇ. ನಮ್ಮ ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆಗಳನ್ನು ಮಾಡುತ್ತಾರೆ, ಕಲ್ಲು ತೂರುತ್ತಾರೆ, ಶಿಕ್ಷಕರ ಮೇಲೆಯೇ ಮುರಿದುಕೊಂಡು ಬೀಳುತ್ತಾರೆ, ಶಾಲೆಗೇ ಬೆಂಕಿ ಇಡುತ್ತಾರೆ. ಇದಕ್ಕೇ ಜವಾಬ್ದಾರರು ನಾವೇ. ಅವರ ಭಾವನೆಗಳ ಜ್ವಾಲೆಯನ್ನು ಹೊರಹಾಕುವುದಕ್ಕೆ ಸೂಕ್ತ ಮಾರ್ಗವನ್ನು ನಾವು ಮಾಡಿಕೊಟ್ಟಿಲ್ಲ. ಕಲ್ಲು ಎಸೆಯುವುದಕ್ಕೂ ಮುಂಚೆ ಈ ಯುವಕರ ಕೈಗೆ ವಾಲಿಬಾಲ್ ಸಿಕ್ಕರೆ, ಕಲ್ಲು ತೂರಾಟದಲ್ಲಿ ಸಿಕ್ಕ ತೃಪ್ತಿಯನ್ನು ಇದರಲ್ಲೇ ಅನುಭವಿಸಬಲ್ಲರು. ಶಾಲೆ, ಅಲ್ಲಿನ ಶಿಕ್ಷಕರು ಎಲ್ಲರೂ ಇದರಿಂದ ನಿರಾಳವಾಗಿರಬಹುದು. ಆಟಗಳ ಸೈಕಾಲಜಿಯೇ ಇಷ್ಟು. ನಮ್ಮೊಳಗೆ ನಾವು ಭಾವನೆಗಳ ಲಾವಾರಸವನ್ನಿಟ್ಟುಕೊಂಡಿದ್ದೇವೆ. ಅವನ್ನು ಹೊರಗೆ ಚಿಮ್ಮಿಸಿ ಒಳಗಿನ ಕಾವನ್ನು ಉಪಶಮನ ಮಾಡುವುದೇ ಈ ಆಟಗಳ ಕೆಲಸ.

ಭಾರತದಲ್ಲಿ ಬಹಳ ಸಮಯದವರೆಗೂ ತಾರುಣ್ಯಕ್ಕೆ ಸ್ಥಾನವೇ ಇರಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಹುಡುಗ-ಹುಡುಗಿಯರು ಸಮಾಜದಲ್ಲಿ ಬೆರೆಯುವ ಮೊದಲೇ ಮದುವೆಗಳಾಗಿ ಬಿಟ್ಟಿರುತ್ತಿದ್ದವಾದ್ದರಿಂದ ಅಲ್ಲಿ ಪ್ರೇಮ ವಿವಾಹಗಳಿಗೆ ಜಾಗವಿರಲಿಲ್ಲ. ಗಂಡ-ಹೆಂಡತಿ ಆಟವಾಡುತ್ತ ಅಣ್ಣ-ತಂಗಿಯರಂತೆ ಬೆಳೆಯುತ್ತಿದ್ದರು. ಸಾವಿರಾರು ವರ್ಷಗಳವರೆಗೆ ತಾರುಣ್ಯ ಎಂಬುದು ಸಂವೇದನೆಗೇ ದಕ್ಕದಂತೆ ಕರಗಿ ಹೋಗುತ್ತಿತ್ತು. ಏಳೆಂಟು ವರ್ಷದವನಿದ್ದಾಗಲೇ ಅಪ್ಪನ ಕೆಲಸವನ್ನೇ ಮಗ ಅನುಸರಿಸಿಕೊಂಡು ಹೋಗುತ್ತಿದ್ದ. ಹೊಲಕ್ಕೆ ಹೋಗುತ್ತಲೋ, ಚಪ್ಪಲ್ಲಿ ಅಂಗಡಿಯಲ್ಲಿ ಜತೆಯಾಗುತ್ತಲೋ ಉದ್ಯೋಗಕ್ಕೆ ಧುಮುಕುತ್ತಿದ್ದ. ಬಾಲ್ಯ ಹಾಗೂ ವೃದ್ಧಾಪ್ಯದ ನಡುವೆ ತಾರುಣ್ಯಕ್ಕೆ ಸ್ಥಾನವೇ ಇರದಂತಾಗಿತ್ತು. ಯೌವನ ಬಂದಿದ್ದು ಪಶ್ಚಿಮದ ಆಧುನಿಕ ಶಿಕ್ಷಣದ ಮೂಲಕ. ಅದು ಯೂಥ್ ಎಂಬ ಹೊಸ ವರ್ಗವೊಂದನ್ನು ಸೃಷ್ಟಿಸಿತು. ಯೌವನಕ್ಕೆ ಬೇಕಾದ ಹಾಡು, ಸಾಹಿತ್ಯ ಹಾಗೂ ಸಿನಿಮಾಗಳು ಹುಟ್ಟಿದ್ದೇ ಅಲ್ಲಿಂದ.

ಪ್ರತಿಯೊಂದಕ್ಕೂ ಒಳ್ಳೆಯ ಹಾಗೂ ಕೆಟ್ಟ ಮುಖಗಳಿರುತ್ತವೆ. ನಾವದನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದಷ್ಟೆ ಮುಖ್ಯವಾದದ್ದು. ಆಟಗಳಿಗೂ ಈ ಮಾತು ಅನ್ವಯಿಸುತ್ತದೆ. ಸಾವಿರಾರು ವರ್ಷಗಳ ಧೂಳಿನ ಅವಶೇಷಗಳಲ್ಲಿ ಮುಚ್ಚಿಹೋದ ದೇಶದ ಆತ್ಮವನ್ನು ಈ ಮೂಲಕ ಕಂಡುಕೊಳ್ಳಬಹುದಾದ, ತೊಳೆದು ಹೊಳೆಸಬಹುದಾದ ಅವಕಾಶ ಇದ್ದೇ ಇದೆ. ಹೀಗಾಗಿ ದಿಲ್ಲಿಯಲ್ಲೋ, ಕೋಲ್ಕತ್ತಾದಲ್ಲೋ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದರೆ, ದೇಶಕ್ಕೆ ದೇಶವೇ ಕುಳಿತು ವೀಕ್ಷಿಸುತ್ತದೆ. ಈ ಭಾವನೆಗಳನ್ನು ಹೊರಹಾಕುವ ಪರಿ ಒಬ್ಬನದಲ್ಲ. ಇಡೀ ದೇಶವೇ ಅಂಥ ಒಂದು ಮನಸ್ಥಿತಿಗೆ ತನ್ನನ್ನು ರೂಪಿಸಿಕೊಳ್ಳುತ್ತದೆ. ಭಾರತದಲ್ಲಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದರೆ, ಅತ್ಯಾಚಾರ, ಹಿಂಸಾಚಾರ ನಡೆಯುವುದಿಲ್ಲ. ಗಡಿಯಲ್ಲಿರುವ ಯೋಧ ಬಂದೂಕು ಕೆಳಗಿಟ್ಟು ಟಿವಿ ಸೆಟ್ ಮುಂದೆ ಕುಳಿತಿರುತ್ತಾನೆ. ಕ್ರಿಕೆಟ್ ಬಗ್ಗೆ ಗಂಧಗಾಳಿ ಗೊತ್ತಿರದವರೂ ಟಿವಿ ಮುಂದೆ ಕುಳಿತವರ ಹಾವಭಾವಗಳನ್ನು ನೋಡಿ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಇಡೀ ದೇಶ ಒಂದು ಧ್ಯಾನಸ್ಥ ಸ್ಥಿತಿಗೆ ಕುಳಿತಿರುತ್ತದೆ. ಇದನ್ನು ಸಮೂಹಸನ್ನಿ ಎಂದು ಕರೆಯುವುದಿದ್ದರೆ ಬೇಕಾದರೆ ಕರೆಯಿರಿ. ಕ್ರೇಜಿ ಅಂತಾನೂ ಹೇಳಿ. ನನ್ನ ದೃಷ್ಟಿಯಲ್ಲಿ ಇದೊಂದು ಧ್ಯಾನ. ಕ್ರಿಕೆಟ್‌ಗೆ ಅಂಥ ಶಕ್ತಿಯಿದ್ದರೆ ಅದನ್ನು ಒಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ಓಶೋ ಮಾತು ಎಷ್ಟು ಸತ್ಯ! // <![CDATA[//

Advertisements

About sujankumarshetty

kadik helthi akka

Posted on ಏಪ್ರಿಲ್ 24, 2010, in "ಇ-ಲೋಕ" ಲೇಖನಗಳ “ಕನ್ನಡಲೋಕ”, ವಿಶ್ವೇಶ್ವರ ಭಟ್ - ನೂರೆಂಟುಮಾತು, Uncategorized and tagged . Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: