Category Archives: ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ

ಅಂತಃಪುರ ಗೀತೆಗಳು – ಏನೀ ಮಹಾನಂದವೇ – ಡಿ.ವಿ.ಜಿ

ಏನೀ ಮಹಾನಂದವೇ ಓ ಭಾಮಿನಿ
ಏನೀ ಸಂಭ್ರಮದಂದವೇ ಬಲು ಚಂದವೇ ||
ಏನೀ ವೃತಾಮೋದ ಏನೀ ಮುರಜ ನಾದ
ಏನೀ ಜೀವೋನ್ಮಾದ ಏನೀ ವಿನೋದ ||

ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ – ತಕಝಣುರೆನಿಸಿ ||
ಕುಕ್ಕುತೆ ಚರಣವ – ಕುಲುಕುತೆ ಕಾಯವ
ಸೊಕ್ಕಿದ ಕುಣಿತವ – ಕುಣಿವೆ ನೀನೆಲೆ ಬಾಲೆ ||

ಆರು ನಿನ್ನೆಯ ಹೃದಗಾರದೆ ನರ್ತಿಸಿ
ಮಾರ ಶೂರತೆಯ ಪ್ರಕಾರಿಸುತಿರ್ಪನ್ ||
ಸ್ಮೇರವದನ ನಮ್ಮ ಚೆನ್ನಕೇಶವ ರಾಯ
ಓರೆಗನ್ನಿಂ ಸನ್ನೆ ತೋರುತಲಿಹನೇನೆ ||

Advertisements

ನಾಯಿಮರಿ ನಾಯಿಮರಿ ತಿಂಡಿ ಬೇಕೆ

ಸಾಹಿತ್ಯ: ಜಿ.ಪಿ. ರಾಜರತ್ನಂ

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಬಣ್ಣದ ತಗಡಿನ ತುತ್ತೂರಿ

ಸಾಹಿತ್ಯ: ಜಿ.ಪಿ.ರಾಜರತ್ನಂ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

ಚಡ್ಡಿ ಗಿಡ್ಡಿ

ಚಡ್ಡಿ ಗಿಡ್ಡಿ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ ಹೈ ಹೈ

ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ ಹೈ ಹೈ

ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ ನಮ್ಮ ಕುದುರೆ
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಅದ್ರ ಬೆನ್ನ ತಟ್ಟಿಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಹಳ್ಳಾ ಗಿಳ್ಳಾ ಹಾರಿಕೊಂಡು
ಮಲ್ಲಿಗೆ ದಂಡು ಸೇರಿಕೊಂಡು
ಹೈ ಹೈ ಹೈ

ಕುದುರೆ ಮೈಯ್ಯ ಸವರಿ ತಟ್ಟಿ
ಹುರ್ಳಿ ಹಿರ್ಳಿ ತಂದುಕೊಟ್ಟು ಹೇ ಹೇ
ಸಾಕುವೆವು ನಮ್ಮ ತಟ್ಟು

ಮಲಗು ಮಲಗೆನ್ನ ಮರಿಯೆ

ಮಲಗು ಮಲಗೆನ್ನ ಮರಿಯೆ

ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ

ಜೋ..ಜೋಜೋಜೋ…

ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣದ ಚಿಗುರಿಗು ಚಂದ
ನಿದಿರೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು

ಜೋ..ಜೋಜೋಜೋ…

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಿಗೆ ಸಾಟಿಯೆ ಕಾಮ
ತಿಮ್ಮಪ್ಪನಿಗೆ ಮೂರು ನಾಮ

ಜೋ..ಜೋಜೋಜೋ…

ಬಾರೆ ನನ್ನ ದೀಪಿಕಾ

ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ
ಕಣ್ಣ ಮುಂದೆ ಸುಳಿಯೆ ನೀನು
ಕಾಲದ ತೆರೆ ಸರಿದು ತಾನು
ಜನುಮ ಜನುಮ ಜ್ಞಾಪಕ ||ಪ||

ನಿನ್ನ ಬೊಗಸೆ ಕಣ್ಣಿಗೆ
ಕೆನ್ನೆ ಜೇನು ದೊನ್ನೆಗೆ
ಸಮ ಯಾವುದೆ ಜನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ ||ಬಾರೆ||

ನಿನ್ನ ಕನಸು ಬಾಳಿಗೆ
ಧೂಪದಂತೆ ಗಾಳಿಗೆ
ಬೀಸಿ ಬರಲು ಜೀವ ಹಿಗ್ಗಿ
ವಶವಾಯಿತೆ ದಾಳಿಗೆ ||ಬಾರೆ||

ಮುಗಿಲ ಮಾಲೆ ನಭದಲಿ
ಹಾಲು ಪೈರು ಹೊಲದಲಿ
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ ||ಬಾರೆ||

ಹಿಂದೆ ಹೇಗೆ ಚಿಮ್ಮುತಿತ್ತು

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ
ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ

ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ
ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ

ಒಂದು ಸಣ್ಣ ಮಾತಿನಿರಿತ ತಾಳದಾಯ್ತೆ ಪ್ರೇಮ
ಜೀವವೆರಡು ಕೂಡಿ ಉಂಡ ಸ್ನೇಹವಾಯ್ತೆ ಹೋಮ

ಹಮ್ಮು ಬೆಳದು ನಮ್ಮ ಬಾಳು ಆಯ್ತು ಎರಡು ಸೀಳು
ಕೂಡಿಕೊಳಲಿ ಮತ್ತೆ ಪ್ರೀತಿ ತಬ್ಬಿಕೊಳಲಿ ತೋಳು

ಎಲ್ಲಿ ಜಾರಿತೋ ಮನವು

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ

ದೂರದೊಂದು ತೀರದಿಂದ
ತೇಲಿ ಪಾರಿಜಾತ ಗಂಧ||೨||
ದಾಟಿ ಬಂತು ಬೇಲಿ ಸಾಲ
ಮೀಟಿ ಹಳೆಯ ಮಧುರ ನೋವ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಬಾನಿನಲ್ಲಿ ಒಂಟಿ ತಾರೆ
ಸೋನೆ ಸುರಿವ ಇರುಳ ಮೋರೆ||೨||
ಕತ್ತಲಲ್ಲಿ ಕುಳಿತು ಒಳಗೆ
ಬಿಕ್ಕುತಿಹಳು ಯಾರೋ ನೀರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ

ಹಿಂದೆ ಯಾವ ಜನ್ಮದಲ್ಲೋ
ಮಿಂದ ಪ್ರೇಮ ಜಲದ ಕಂಪು
ಬಂದು ಚೀರುವೆದೆಯ ಭಾವ
ಹೇಳಲಾರೆ ತಾಳಲಾರೆ

ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ
ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಯಿತೋ
ಎಲ್ಲಿ ಜಾರಿತೋ ಎಲ್ಲೆ ಮೀರಿತೋ ನಿಲ್ಲದಾಯಿತೋ….ಓ..

ನನ್ನ ಇನಿಯನ ನೆಲೆಯ

ಸಾಹಿತ್ಯ : ಎನ್. ಎಸ್. ಲಕ್ಷ್ಮಿನಾರಾಯಣ ಭಟ್
ಸಂಗೀತ : ಸಿ. ಅಶ್ವಥ್
ಗಾಯನ : ಸಂಗೀತ ಕಟ್ಟಿ

ನನ್ನ ಇನಿಯನ ನೆಲೆಯ ಬಲ್ಲೆ ಏನೆ
ಹೇಗೆ ತಿಳಿಯಲಿ ಅದನು ಹೇಳೆ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳುವ ನಲ್ಲ ||೨||
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರದಿ ಬಗ್ಗಿಸ ಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲ್ಲಿಸಬಲ್ಲ ||೨||
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆಬಿತ್ತು ತೆನೆಯತ್ತು ತೂಗುವವನ ||೨||
ನಲ್ಲೆ ಅಳಲನು ಏಕೆ ತಿಳಿಯನವನು

ಯಾಕೆ ಅರ್ಥ ಬಾಳಿಗೆ

ಯಾಕೆ ಅರ್ಥ ಬಾಳಿಗೆ
ಯಾಕೆ ಅರ್ಥ ನಾಳೆಗೆ
ಅರ್ಥವೊಂದು ಯಾಕೆ ಬೇಕು ಅರಳಿ ನಗುವ ಹೂವಿಗೆ?

ಕಳೆದು ಹೋದ ನಿನ್ನೆಗೆ
ಕಂಡು ಮೆರೆವ ನಾಳೆಗೆ
ಬರೆದುದೆಲ್ಲ ಅಳಿಸಿ ಹೋಗಿಬಿಡುವ ಖಾಲಿ ಹಾಳೆಗೆ?

ತಿರುಗಿ ತಿರುಗಿ ಚಕ್ರ
ಹುಡುಕಿ ಹುಡುಕಿ ವ್ಯರ್ಥ
ಬಿಟ್ಟಲ್ಲೇ ಬಂದು ನಿಲುವ ಆಟವಷ್ಟೆ ಅರ್ಥ!

ನೋಟ ನೆಡಲಿ ಆಟದಿ
ಗೆಲುವ ಆಸೆ ಮನದಲಿ
ಸೋತರೇನು ಆಟ ತಾನೆ ಎನುವ ಜಾಣ್ಮೆ ಕಾಯಲಿ

ನಗುತ ಬಾಳು ಜೇವವೇ
ಮಾವು ಬೇವು ದಾಳಿಗೆ
ನಗುತ ಬಾಳು ಜೀವವೇ, ಹುಳಿ ಬೆರಸದೆ ಹಾಲಿಗೆ.