Category Archives: ಜಿ.ಪಿ.ರಾಜರತ್ನಂ

ಗುರು-ಶಿಷ್ಯ ಪರಂಪರೆ – ಪ್ರೊ. ಎಚ್. ಆರ್. ರಾಮಕೃಷ್ಣರಾವ್, ತಮ್ಮ ಪೂಜ್ಯ ಗುರು, ಪ್ರೊ. ಜಿ. ಪಿ. ರಾಜರತ್ನಂ ರವರನ್ನು ನೆನೆಸಿಕೊಳ್ಳುತ್ತಾರೆ !

bigbamgcover_page_001_0.jpg

ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಒಬ್ಬ ಸಮರ್ಥ, ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾದವರು. ಅವರು ಸೆಂಟ್ರೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಕರ್ನಾಟಕಸಂಘದ ಕಾರ್ಯದರ್ಶಿಯಾಗಿ, ಪ್ರೊ. ಜಿ. ಪಿ. ರಾಜರತ್ನಂ, ಮತ್ತು ಪ್ರೊ. ವಿ. ಸೀ. ರವರ ಜೊತೆ ಅತ್ಯಂತ ನಿಕಟವಾಗಿ ಕೆಲಸಮಾಡಿದ್ದರು. ಇವರಿಬ್ಬರ ಕನ್ನಡಭಾಷೆಯ ಪ್ರಾವೀಣ್ಯತೆ, ಅದರಮೇಲಿನ ದಟ್ಟಒಲವು, ಹಾಗೂ ಕನ್ನಡ ಭಾಷೆಯಲ್ಲಿನ ಸ್ಪಸ್ಟ ಉಚ್ಚಾರಣೆ, ಮತ್ತು ಮಾತಿನ ವೈಖರಿಗಳಂದ ಪ್ರಭಾವಿತರಾಗಿ, ತಮಗೆ ಗೊತ್ತಿಲ್ಲದಂತೆ, ಆ ಎಲ್ಲ ವೈಚಾರಿಕ ಸದ್ಗುಣಗಳನ್ನೂ ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಂಡಿದ್ದಾರೆ. ಪರಂಪರಾಗತ ಸತ್ಪುರುಷರ ಮನೆತನದಲ್ಲಿ ಜನಿಸಿದ್ದ ಇವರಿಗೆ, ಸ್ವಾಭಾವಿಕವಾಗಿ, ಇಂತಹ ಮಹಾಉಪಾಧ್ಯಾಯರುಗಳು, ಹಾಗೂ ದೇಶಭಕ್ತರೂ ಅವರ ಜೀವನದಲ್ಲಿ ವಿಜೃಂಭಿಸಿದ್ದು ಆಚ್ಚರಿಯೇನಲ್ಲ !

ಸ್ವತಃ ಕನ್ನಡಭಾಷೆಯಲ್ಲಿ ಅನೇಕ ಪಠ್ಯಪುಸ್ತಕಗಳನ್ನು ಬರೆದು ಕನಿಷ್ಟಬೆಲೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಿದ ಹೆಗ್ಗಳಿಕೆ ಇವರದು. ಮಾಜಿ. ಪ್ರೆಸಿಡೆಂಟ್, ಎ. ಪಿ. ಜೆ. ಅಬ್ದುಲ್ ಕಲಾಂರವರ ಬಗ್ಗೆ ಇವರಿಗೆ ಬಹಳ ಗೌರವ. ’ಕಲಾಂಮೇಸ್ಟ್ರು”, ಇವರ ಬತ್ತಳಿಕೆಯಿಂದ ಮೂಡಿಬಂದ ಅತ್ಯಂತ ಜನಪ್ರಿಯ ಪುಸ್ತಕಗಳಲ್ಲೊಂದು. ವಿಜ್ಞಾನವನ್ನು ಜನಪ್ರಿಯಗೊಳಿಸಲು ದಶಕಗಳಿಂದ ದುಡಿಯುತ್ತಿದ್ದಾರೆ. ದಿವಂಗತ, ಪ್ರೊ. ಜಿ. ಟಿ. ನಾರಾಯಣರಾಯರನ್ನು ಕಂಡರೆ ಇವರಿಗೆ ಎಲ್ಲಿಲ್ಲದ ಆದರ !

ಪ್ರೊ. ಜಿ. ಪಿ. ರಾಜರತ್ನಂ ರವರ ನೂರನೆಯ ಹುಟ್ಟುಹಬ್ಬದ ಪ್ರಯುಕ್ತ, ತಮ್ಮ ಅನಿಸಿಕೆಗಳನ್ನೂ ಹಾಗೂ ಆ ದಿನಗಳ ಸುಮಧುರ ಕ್ಷಣಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಾರೆ. ಈಗ ಅವರು, ಅಮೆರಿಕದಲ್ಲಿ ಸಂಚರಿಸುತ್ತಿದ್ದಾರೆ. ನಾನು ಅವರನ್ನು ಇ-ಮೇಲ್ ಮುಖಾಂತರ ಭೆಟ್ಟಿಯಾಗಿ ಇವೆಲ್ಲದರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿರೆಂದು ಬಿನ್ನವಿಸಿಕೊಂಡಾಗ, ಒಪ್ಪಿ ಸಹಕರಿಸಿದ್ದಾರೆ. ಅವರಿಗೆ ಸಂಪದೀಯರೆಲ್ಲರ ಪರವಾಗಿ ಅಭಿನಂದನೆಗಳು.

ವಿಶೇಷವೆಂದರೆ, ರಾಮಕೃಷ್ಭರಾಯರ ಮುತ್ತಿನಂತಹ ಕನ್ನಡ ಅಕ್ಷರಗಳನ್ನು ನೋಡಿ ಕೆಲವರು ಈರ್ಷೆಪಟ್ಟುಕೊಂಡದ್ದೂ ಉಂಟು. ಸ್ಪುಟವಾದ, ಸುಂದರ ಲಿಪಿ. ಎಲ್ಲೂ ಅಪ್ಪಿತಪ್ಪಿ ತಪ್ಪುಗಳು ಕಾಣಿಸುವುದಿಲ್ಲ. ಸುಂದರ ಅಕ್ಷರಗಳಿಗೆ ಅತಿಹೆಸರಾದವರು ಇವರು. ‘ಇವೆಲ್ಲಾ ತಮ್ಮ ತಂದೆಯವರಿಂದ ಪಡೆದ ಬಳುವಳಿ,’ ಎನ್ನುತ್ತಾರೆ, ಅವರು. ತಾಯಿಯವರಿಂದ ಬಂದದ್ದು, ಅಪಾರ ಜ್ಞಾಪಕ ಶಕ್ತಿ ! ಅವರ ಮಾತುಗಳಲ್ಲಿ ಧನ್ಯತಾಭಾವ ಎದ್ದು ಕಾಣಿಸುತ್ತದೆ !

* ಚಿತ್ರದಲ್ಲಿ, ಪ್ರೊ. ಜಿ. ಪಿ. ರಾಜರತ್ನಂ ರವರ ಬಲಭಾಗದಲ್ಲಿ ವಿರಮಿಸಿರುವವರೇ, ಪ್ರೊ. ಎಚ್. ಆರ್. ರಾಮಕೃಷ್ಣರಾವ್ ರವರು.

Advertisements

ಗಮಾರ

ನಮ್ಮ ಹಳ್ಳಿಯ ಬೋರನನ್ನು ನಾವು ಪಟ್ಟಣದವರು ‘ಗಮಾರ’ ಎನ್ನುತ್ತಿದ್ದೆವು .

ಒಂದು ಸಲ ಬೋರನನ್ನು ಕಟ್ಟಿಕೊಂಡು ತೆಂಗಿನ ತೋಪಿಗೆ ಹೋಗಬೇಕಾಯಿತು. ತೆಂಗಿನ ಕಾಯಿಗಳನ್ನು ಕೀಳಿಸಬೇಕಾಗಿತ್ತು . ಬೋರನ ಮಗ ಅದನ್ನು ಹತ್ತಿದ . ಅವನನ್ನೂ ಅವನು ಏರಬೇಕಾದ ಮರವನ್ನೂ ನೋಡಿ ‘ಬೋರ ! ಜೋಪಾನವಾಗಿ ಹತ್ತುವ ಹಾಗೆ ಹೇಳು ಅವನಿಗೆ ” ಎಂದೆ .

“ಅದೇನೂ ಯೋಳಬೇಕಾಗಿಲ್ಲ , ಸೋಮಿ !” ಎಂದ .
ನನಗೆ ಮುಖ ಮುರಿದ ಹಾಗಾಯಿತು . ಎಷ್ಟಾದರೂ ‘ಗಮಾರ’ ಎಂದುಕೊಂಡು ಸುಮ್ಮನಾದೆ .

——————

ಮೊನ್ನೆ ಮನೆಯ ಹೆಂಚು ಸರಿಪಡಿಸಬೇಕಾಗಿತ್ತು . ಆ ಕೆಲಸಕ್ಕೂ ಬೋರ, ಬೋರನ ಮಗ ಬಂದರು .

ಹುಡುಗ ಸೂರು ಹತ್ತುವಾಗ ಬೋರ “ಎಲ್ಲಾರಾ ಬಿದ್ದುಗಿದ್ದೀಯ ಮೊಗ ! ವಸಿ ನೋಡಿಕೊಂಡು ಹತ್ತು ” ಅಂದ .

ನನಗೆ ತೆಂಗಿನ ತೋಟದಲ್ಲಿ ಅವನು ಮುಖ ಮುರಿದದ್ದು ನೆನಪಾಯಿತು.
” ಬೋರ !, ಅಷ್ಟಲ್ಲದೆ ನಿನ್ನನ್ನ ಗಮಾರ ಎನ್ನುತ್ತಾರೆಯೆ ! ತೆಂಗಿನ ಗಿಡ ಹತ್ತುವಾಗ ಹುಷಾರು ಹೇಳದೆ ಹೆಂಚಿನ ಸೂರು ಹತ್ತುವಾಗ ಹೇಳುತ್ತೀಯಲ್ಲ ! ನಿನ್ನ ಬುದ್ಧಿಯೋ ! ನೀನೋ ! ” ಎಂದೆ.

‘ನೀವೇನಾರ ಯೋಳಿ ಸೋಮಿ , ನಾನನಕ ಗಮಾರ , ಆದರೆ ನನಗೆ ಇಷ್ಟು ಗೊತ್ತು . ತೆಂಗಿನ ಮರ ಎತ್ತರ ಐತೆ ಅಂತ ಅತ್ತೋವನು ವುಸಾರಾಗೇ ಅತ್ತಾನೆ . ಸೂರು ಬಲೆ ಕೆಳಗದೇಂತ ಬೇವುಸಾರಾಗಿ ಅತ್ತಾನೆ . ಬೇವುಸಾರಾಗಿ ಇರೋವಾಗ ತಾನೇ ಬುದ್ಧಿ, ಬುದ್ವಾದ ಯೋಳಬೇಕಾದ್ದು ? ” ಎಂದ .
ನನ್ನ ತುಟಿ ಮುಚ್ಚಿತು . ಕಣ್ಣು ತೆರೆಯಿತು.

ಗಮಾರ- ಜಿ. ಪಿ. ರಾಜರತ್ನಂ ಅವರ ಕತೆ .

“ಆಯಿತ್ವಾರ ಬಂತು”

ಬಂತು ಬಂತ್ ಆಯಿತ್ವಾರ ಬಂತು
ಆಯವಾಗಿರಬೈದು ಮನೆಯಾಗ ಕುಂತು

ಕೋಳಿ ಕೂಗಾಕಿಲ್ಲ — ಉರಿನ್ ಆಕಿ ವೊಲೆಗೆ –
ಶಾರೆ ತುಂಬಾ ಯೆಣ್ಣೆ ತಟ್ಟಿ ನನ ತಲೆಗೆ –
ರಪರಪಾ ರಾಚಿದರೆ ಬಿಸಿ ಕುದೀ ನೀರ –
ಬಂದು ಮತ್ ಮಲಗಿದರೆ — ವಂಬತ್ತು ಪೂರ!

ವಂಬತ್ತು — ಬಿಸಿ ಕಾಪಿ! ಅತ್ತಕ್ ಉಪ್ಪಿಟ್ಟು!
ಅನ್ನೆಳ ಡಕ್ ಎಸರು ಜೊತೆ ಬಿಸಿ ಮುದ್ದೆಯಿಟ್ಟು!
ಮತ್ತೆ ಮಕ್ಕಳ ಕೂಟೆ, ಅವರ್ ಆಟಪಾಟ!
ದಚಿಬಾರ ವುಲಿಕುರಿ ಮಲ್ಲಿ ಸಂಗಾಟ!

ಸಂಜಿಗ್ ಅಣ್ಣಂಮ್ಮಂಗೆ ತಟ್ಟೆ ತಂಬಿಟ್ಟು !
ಬಿಕ್ಸದೋರ್ಗ್ ಅದನಲ್ಲೆ ಅಂಚಿ ಯೀಟಿಟ್ಟು!
ರಾತ್ರಿ ಮನೆಯಾಗ್ ಇಡದು ಆರುಮನಿ, ಬಜನೆ!
ನಿದ್ದಿ ಅತ್ತೂಗಂಟ ಕತೆ ಯೇಳೊ ಮಜನೆ!

ಆಯಿತ! ಸುರಿಯಾ ! ನಮಗೆ ನೀ ತಂಪುದೀಪ –
ಕತ್ತಲೇನೇ ಯಿರಲಿ ಮಿಕ್ಕ ದಿನ ತಾಪ !
ಈವೊಂದೆ ದಿನನೆ — ನಾ ಬಿಟ್ಟದ್ದೆ ಬಾಣ !
ನಾಳೆಯಿಂದ ಎಂಗೂನೆ ಅದೇ ಅಳೇ ಗಾಣ!

(ಸಂಗ್ರಹ – ನಾಗನ ಪದಗಳು)

‘ನಲ್ಲೀ ತಾವ್ ನಂ ಮಲ್ಲೀ’

‘ಶತಮಾನದ ಕಾವ್ಯ’ ದಿಂದ, ಶ್ರೀ. ಜೀ.ಪಿ.ರಾಜರತ್ನಂ, ಅವರ ಕವಿತೆಗಳಲ್ಲಿ ನನಗೆ ‘ಪ್ರಿಯವೆನಿಸಿದ’ ಕೆಲವು ಪದ್ಯಗಳನ್ನು ಕೆಳಗೆ ಕೊಟ್ಟಿದ್ದೇನೆ.

ಸಂಪಾದಕರು: ಶ್ರೀ. ಎಚ್. ಎಸ್. ವೆಂಕಟೇಶಮೂರ್ತಿಗಳು.

ಹೆಸರಾಂತ ಕವಿ, ರಾಜರತ್ನಂ ಕವಿತೆಗಳಲ್ಲಿ ರಸಿಕತೆಗೇನೂ ಕಡಿಮೆ ಇಲ್ಲ ! ಮಲ್ಲಿಯ ಮೇಲಿನ ಪ್ರೀತಿ, ಗೌರವ, ಹಾಗೂ ಮೆಚ್ಚುಗೆಯನ್ನು ಅವರ ಕಾವ್ಯಗಳಲ್ಲಿ ಕಾಣಬಹುದು !

“ನಲ್ಲೀ ತಾವ್ ನಂ ಮಲ್ಲೀ”

ನಿಂತ್ರೊಂ ಚಂದ ! ಕುಂತ್ರೊಂ ಚಂದ !
ನಡೀತಾ ನಿದ್ರ್, ಒಂ ಚಂದ !
ಮಲ್ಲಿ ಚೌರ್ಗೆ ಬೆಳೆಗೋದ್ ಚಂದ !
ನೀರ್ ತುಂಬೋದೂ ಚಂದ !

ತುಂಬೀದ್ ಚೌರ್ಗೆನ್ ವೂ ಎತ್ ದಂಗೆ
ಸೊಂಟ್ದಾಗ್ ಸಿಗ್ಸೋದ್ ಚಂದ !
ನಿರೀನ್ ಇಂಕ್ರ ನೆನೆಸ ದಂಗೇನೇ
ಚಿಮ್ತಾ ಬರೋದೆ ಚಂದ !

ಮಲ್ಲಮ್ಮ- ನನ್ ಮಕ್ಕಳ್ ತಾಯಿ !
ಮಲ್ಲೀ- ನಂಗ್ ಔಳ್ ಯೆಂಡ್ರು !
ನಂ ಪ್ಯಾಟೇಗ್ ಔಳೇ ಪಾಳೇಗಾತಿ !
ಯಿಂತೋಳನ್ ಯಾರ್ ಕಂಡ್ರು !

ಮಿಕ್ಕೋರ್ ಯಾರಾರ್ ‘ಮಲ್ಲೀಂ’ ತಂದ್ರೆ
ಅಲ್ ಉದರಿಸ್ ಬುಟ್ಟಾಳು !
ನಾನ್ ಅನಬೈದು – ನಂಗ್ ಅವಳ್ ಯೆಂಡ್ರು !
ಸಲ್ಗೆ- ನಂಗೆ ಏನ್ ಯೇಳು !

-ನೆನಪಿನಂಗಳದಿಂದ ಹೊರತೆಗೆದ, ಈಗಾಗಲೇ ಸಂಪದದಲ್ಲಿ ಪ್ರಕಟಿತ ಪದ್ಯ.

A (1998) – ಹೇಳ್ಕೊಳ್ಳೋಕ್ ಒಂದ್ ಊರು

ಸಾಹಿತ್ಯ: ಜಿ. ಪಿ. ರಾಜರತ್ನಂ
ಸಂಗೀತ: ಗುರುಕಿರಣ್
ಗಾಯನ: ಎಲ್. ಎನ್. ಶಾಸ್ತ್ರಿ

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಚಾಂದಿನಿss, ಚಾಂದಿನಿss

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ -|೨|

ಏನೋ ಖುಸಿಯಾದಾಗ
ಮತ್ ಹೆಚ್ಚಿ ಹೋದಾಗ
ಹಂಗೇನೆ ಪ್ರಪಂಚದಂಚ
ತೋಟ್ದಲ್ಲಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನಂಪ್ರಪಂಚ
ಹಿಗ್ಗೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಹಗಲೆಲ್ಲ ಬೆವರ್ ಹರಿಸಿ
ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹಿಳಿ ಹೆಂಡ ಕೊಂಚ
ಇತ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನಂಪ್ರಪಂಚ
ತುಂಬ್ ಹೋಯ್ತು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಲೂಕ್ ಇಲ್ಲ ಗಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನಂಪ್ರಪಂಚ
ಬಾಳೋದು ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಚಾಂದಿನಿss, ಚಾಂದಿನಿss

ದೇವ್ರಿಂದ್ರೆ ಕೊಡಲಣ್ನ ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನಂಪ್ರಪಂಚ
ಕುಣೀಯಾದೆ ರತ್ನಂಪ್ರಪಂಚ
ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನಂಪ್ರಪಂಚ

ನಾಯಿಮರಿ ನಾಯಿಮರಿ ತಿಂಡಿ ಬೇಕೆ

ಸಾಹಿತ್ಯ: ಜಿ.ಪಿ. ರಾಜರತ್ನಂ

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಕ್ವೊಂ ಕ್ವೊಂ ಬೌ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು

ಬಣ್ಣದ ತಗಡಿನ ತುತ್ತೂರಿ

ಸಾಹಿತ್ಯ: ಜಿ.ಪಿ.ರಾಜರತ್ನಂ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಪಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದು ಬೆರಾರಿಗು ಅದು ಇಲ್ಲೆಂದ
ತುತ್ತುರಿ ಊದಿದ ಕೊಳದ ಬಳಿ ಕಸ್ತುರಿ ನಡದನು ಬೀದೆಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು ಜಂಬದಕೋಳಿಗೆ ಗೋಳಾಯ್ತು

ಹೆಂಗಸ್ರವ್ರೆ

ಹೆಂಗಸ್ರವ್ರೆ ಹೂವ್ವಿದಂಗೆ
ನಲ್ಗಿಸ್ಬಾರ್ದು ಅವ್ರನ್ನು

ಒಂದು ಚೋಟುದ್ದ ಹೂವಂತದ್ನ ಒದ್ದು
ನಿಂತ್ರೆ ಉದ್ದಾರಾದ್ನಾ

ಚಡ್ಡಿ ಗಿಡ್ಡಿ

ಚಡ್ಡಿ ಗಿಡ್ಡಿ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ ಹೈ ಹೈ

ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ ಹೈ ಹೈ

ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ ನಮ್ಮ ಕುದುರೆ
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಅದ್ರ ಬೆನ್ನ ತಟ್ಟಿಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ ಹೈ ಹೈ

ಕುದುರೆ ಮೇಲೆ ಕುಳಿತುಕೊಂಡು
ಹಳ್ಳಾ ಗಿಳ್ಳಾ ಹಾರಿಕೊಂಡು
ಮಲ್ಲಿಗೆ ದಂಡು ಸೇರಿಕೊಂಡು
ಹೈ ಹೈ ಹೈ

ಕುದುರೆ ಮೈಯ್ಯ ಸವರಿ ತಟ್ಟಿ
ಹುರ್ಳಿ ಹಿರ್ಳಿ ತಂದುಕೊಟ್ಟು ಹೇ ಹೇ
ಸಾಕುವೆವು ನಮ್ಮ ತಟ್ಟು

ರತ್ನನ್ ಪದ

ಲೇ ಬ್ಯಾವರ್ಸಿ ನನ್ ಪುಟ್ನಂಜಿ ನ ರೂಪನಾಡ್ತಿನ್ ಬಾಪ
ನನ್ಗಾಗಾಗ್ಗಿ ಹಾಡಿಸ್ತೈತೆ ನನ್ ಪುಟ್ನಂಜಿ ರೂಪ (2)
ಹಾಲ್ನಲ್ ಕಮಲ್ದು ತೇಲ್ಬುಟ್ಟಿ ಮೇಲೊಂದ್ ತೆಳ್ಲ್ನೇ ಲೇಪ
ಚಿನ್ನದ ನೀರ್ನಲ್ ಕೊಟ್ಟಂಗೈತೆ ನನ್ ಪುಟ್ನಂಜಿ ರೂಪ
ಆಮಸ್ಯೆ ಲಿ ಹತ್ತಿಸ್ದಂಗೆ ಒಂದತ್ನೂರ್ ಮತಾಪ (2)
ಬೆಳ್ಕಾಗ್ತೈತೆ ಕಂಡ್ರೆ ನಂಗೆ ನನ್ ಪುಟ್ನಂಜಿ ರೂಪ ||ಲೇ||

ಬಟ್ಟೆ ಕಪ್ಪಿನ್ ತೊಳ್ಯಕ್ ನಾವು ಹೆಂಗಾಕ್ತಿವಿ ಸೋಪ (2)
ಮನ್ಸಿನ್ ಕೆಟ್ಭಾವ್ನೆಗಳ್ಗೆ ನನ್ ಪುಟ್ನಂಜಿ ರೂಪ
ದೇವರ್ತಾಕ್ ನಾನ್ ಒಯ್ಯಕ್ಕಿಲ್ಲ ಹಣ್ಣು ಕಾಯಿ ಧೂಪ
ದೇವರ್ಗೆಹಣ್ಣ್ಕಾಯಿ ಧೂಪ ಎಲ್ಲ ನನ್ ಪುಟ್ನಂಜಿ ರೂಪ ||ಲೇ||

ಚಿನ್ನದ ಭರಣಿಲ ತುಂಬಿಟ್ಟಂಗೆ ಹಾಲು ಸಕ್ರೆ ತುಪ್ಪ ( 2)
ಒಳ್ಳೆ ಗುಣಗಳ್ಗೊರ್ತೈತೆ ನನ್ ಪುಟ್ನಂಜಿ ರೂಪ
ಪುಟ್ನಂಜಿ ಕೈ ಹಿಡ್ದೋನು ನೀನೆ ಭಲೇ ಭೂಪ ( 2 )
ಅಂತ ನಂಗೆ ಬೆನ್ನ್ ತಟ್ತೈತೆ ನನ್ ಪುಟ್ನಂಜಿ ರೂಪ

ದೇವಸ್ತಾನ್ದಾಗೆನ್ಗಿರ್ತಿತೆ ಚಿನ್ನದ ನಂದಾ ದೀಪ ( 2 )
ಹಂಗ್ ನನ್ ಹಟ್ಟಿನ ಬೆಳ್ಗಿಸ್ತೈತೆ ನನ್ ಪುಟ್ನಂಜಿ ರೂಪ
ಇದನ್ ಕೇಳ್ದೋರ್ ಯಾರರ ಇವ್ನೋಬ್ಬುಚ್ಚ ಪಾಪ ( 2 )
ಅಂದೊರಿಗ್ ಅಯ್ಯೋ ಪಾಪ ಅಂತೈತೆ ನನ್ ಪುಟ್ನಂಜಿ ರೂಪ ||ಲೇ||