Category Archives: ಭಕ್ತಿಗೀತೆ

ಚೆಲ್ಲಿದರೂ ಮಲ್ಲಿಗೆಯಾ …………….ನವಿಲು ಸಾರಂಗ ಅಲ್ಲಿ ಕುಣಿದಾವೆ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಗಾಯನ : ಕೆ.ಎಸ್.ಸುರೇಖಾ

ನವಿಲು ಸಾರಂಗ ಅಲ್ಲಿ ಕುಣಿದಾವೆ
ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ
ನವಿಲು ಸಾರಂಗ ಅಲ್ಲಿ ಕುಣಿದಾವೆ
ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ

ಏಳೂ ಬೆಟ್ಟದಾ ಆ ಮಡಿಲಾಗೆ
ಹಾವೂ ಮುಂಗ್ಸಿ ದ್ವೇಷಾನಾ ಮರ್ತು ಬೆರೆತಾವೆ
ಏಳೂ ಬೆಟ್ಟದಾ ಆ ಮಡಿಲಾಗೆ
ಹಾವೂ ಮುಂಗ್ಸಿ ದ್ವೇಷಾನಾ ಮರ್ತು ಬೆರೆತಾವೆ
ಪ್ರೀತೀಯ ಲೋಕಕೆ ಸಾರ್ಯಾವೆ
ನಮ್ಮ ಮಾಯ್ಕಾನ ಮಹಿಮೆಯ ಹಾಡ್ಯಾವೆ
ಪ್ರೀತೀಯ ಲೋಕಕೆ ಸಾರ್ಯಾವೆ
ನಮ್ಮ ಮಾಯ್ಕಾನ ಮಹಿಮೆಯ ಹಾಡ್ಯಾವೆ
ನವಿಲು ಸಾರಂಗ ಅಲ್ಲಿ ಕುಣಿದಾವೆ
ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ

ಮೃಗರಾಜ ದ್ವೇಷಾವ ಮರೆತಾನೆ
ಮತ್ತೆ ಗಜರಾಜನೊಡನೆ ಕೂಡ್ಯಾನೆ
ಮೃಗರಾಜ ದ್ವೇಷಾವ ಮರೆತಾನೆ
ಮತ್ತೆ ಗಜರಾಜನೊಡನೆ ಕೂಡ್ಯಾನೆ
ಸ್ನೇಹಾದ ಸವಿಯ ಸಾರ್ಯಾನೆ
ನಮ್ಮ ಮಾದಯ್ಯನ ಸ್ಮ್ರರಣೆ ಮಾಡ್ಯಾನೆ
ಸ್ನೇಹಾದ ಸವಿಯ ಸಾರ್ಯಾನೆ
ನಮ್ಮ ಮಾದಯ್ಯನ ಸ್ಮ್ರರಣೆ ಮಾಡ್ಯಾನೆ
ನವಿಲು ಸಾರಂಗ ಅಲ್ಲಿ ಕುಣಿದಾವೆ
ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ

ಮಲೆಮ್ಯಾಲೆ ಶಾಂತಿಯ ಬೆಲೆ ಕಂಡೆ
ನಾ ಭಕ್ತಿಯ ಜೇನಿನ ಸವಿ ಉಂಡೆ
ಮಲೆಮ್ಯಾಲೆ ಶಾಂತಿಯ ಬೆಲೆ ಕಂಡೆ
ನಾ ಭಕ್ತಿಯ ಜೇನಿನ ಸವಿ ಉಂಡೆ
ಮಾದಯ್ಯನ ಮಹಿಮೆಯ ಸಿರಿಕಂಡು
ನಾ ದುಂಡಯ್ಯನ ಚರಣಕ್ಕೆ ಶರಣಾದೆ
ಮಾದಯ್ಯನ ಮಹಿಮೆಯ ಸಿರಿಕಂಡು
ನಾ ದುಂಡಯ್ಯನ ಚರಣಕ್ಕೆ ಶರಣಾದೆ
ನವಿಲು ಸಾರಂಗ ಅಲ್ಲಿ ಕುಣಿದಾವೆ
ನಮ್ಮ ಮಾದಯ್ಯನ ಮನೆಯಾಗೆ ನಲಿದಾವೆ

Advertisements

ಚೆಲ್ಲಿದರೂ ಮಲ್ಲಿಗೆಯಾ …..ಶ್ರವಣನ ಮದ ಮುರಿದ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಗಾಯನ : ಕೆ.ಎಸ್.ಸುರೇಖಾ ಮತ್ತು ನರಸಿಂಹನಾಯಕ್

ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ನರಸಿಂಹನಾಯಕ್:
ಉತ್ತಾರಾಜಮ್ಮನ ಕರದಲ್ಲಿ ಹುಟ್ಟಿದಾ
ಉತ್ತಾರಾಜಮ್ಮನ ಕರದಲ್ಲಿ ಹುಟ್ಟಿದಾ
ಶಿವದಾಸರಾ ಮಗನ ನೆನೆಯೋಣ ಭಜಿಸೋಣ
ಗುಂಜುಮಲೆಗೆ ನಾವ್ ಹೋಗೋಣ
ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ

ಕೆ.ಎಸ್.ಸುರೇಖಾ:
ತಾಳ ಮದ್ದಳೆ ನುಡಿಸಿ ಕಹಳೆ ಕಂಪನ್ನು ಊದಿ
ತಾಳ ಮದ್ದಳೆ ನುಡಿಸಿ ಕಹಳೆ ಕಂಪನ್ನು ಊದಿ
ಕಂಸಾಳೆ ಪದ ಹಾಡಿ ಮಾದಯ್ಯನ ಕೂಗೋಣ
ಕಂಸಾಳೆ ಪದ ಹಾಡಿ ಮಾದಯ್ಯನ ಕೂಗೋಣ
ಮಂಗಳ ಮೂರುತಿ ಬರುತಾನೆ
ನರಸಿಂಹನಾಯಕ್:
ಡೋಲು ಡೋಲಿನ ಕುಣಿತ ಮಾಡಿ ಇವನ ಬೇಡೋಣ
ಡೋಲು ಡೋಲಿನ ಕುಣಿತ ಮಾಡಿ ಇವನ ಬೇಡೋಣ

ನರಸಿಂಹನಾಯಕ್:
ಹಿಂಡ್ ಹುಲಿ ಹಾಸಿಗೆ ಮರಿಹುಲೆ ದಿಂಬಿಗೆ
ಹಿಂಡ್ ಹುಲಿ ಹಾಸಿಗೆ ಮರಿಹುಲೆ ದಿಂಬಿಗೆ
ಗಂಡ್ ಹುಲಿ ಗದ್ದುಗೆ ಮೇಲೇರಿ ಕುಳಿತವ್ನೆ
ಗಂಡ್ ಹುಲಿ ಗದ್ದುಗೆ ಮೇಲೇರಿ ಕುಳಿತವ್ನೆ
ಕೊಂಡಕ್ಕೆ ಹೋಗಿ ಬೇಡೋಣ
ಕೆ.ಎಸ್.ಸುರೇಖಾ:
ಶಿವಪ್ರಿಯನ ಸವಿನಾಮ ಭಕ್ತ ತುಂಬಿ ಹಾಡೋಣ
ಶಿವಪ್ರಿಯನ ಸವಿನಾಮ ಭಕ್ತ ತುಂಬಿ ಹಾಡೋಣ

ಕೆ.ಎಸ್.ಸುರೇಖಾ:
ಮಜ್ಜನ ಸೇವೆಗೆ ಮಳೆರಾಯ ಮಳಿ ಸುರಿಸಿ
ಮಜ್ಜನ ಸೇವೆಗೆ ಮಳೆರಾಯ ಮಳಿ ಸುರಿಸಿ
ಮಾದಯ್ಯನ ಮಂಡೆಗೆ ತಂಪನ್ನ ನೀಡ್ಯಾನೆ
ಮಾದಯ್ಯನ ಮಂಡೆಗೆ ತಂಪನ್ನ ನೀಡ್ಯಾನೆ
ಎಣ್ಣೆ ಮಜ್ಜನ ಮಾಡೋಣ
ನರಸಿಂಹನಾಯಕ್:
ಗುಲಗಂಜಿ ಮಲೆಯೇರಿ ಮಾದಯ್ಯನ ನೋಡೋಣ

ನರಸಿಂಹನಾಯಕ್:
ತಂಗಾಳಿ ಹಾಡಿಗೆ ತರಗೆಲೆ ತಾಳ ಹಾಕಿ
ತಂಗಾಳಿ ಹಾಡಿಗೆ ತರಗೆಲೆ ತಾಳ ಹಾಕಿ
ಸ್ವಾಮಿ ಮಾದಯ್ಯನ ಭಜನೆಯ ಮಾಡುತಾವೆ
ಸ್ವಾಮಿ ಮಾದಯ್ಯನ ಭಜನೆಯ ಮಾಡುತಾವೆ
ಮೈಯೆಲ್ಲ ಕಿವಿಯಾಗೆ ಕೇಳೋಣ
ಕೆ.ಎಸ್.ಸುರೇಖಾ:
ಮಾದಯ್ಯನ ಮಲೆಯಾಗಿ ಮರವಾಗಿ ನಿಲ್ಲೋಣ

ಕೆ.ಎಸ್.ಸುರೇಖಾ:
ಜನುಮ ಜನುಮದಾ ಪಾಪ ಪರಿಹಾರ ಮಾಡುತಾನೆ
ಜನುಮ ಜನುಮದಾ ಪಾಪ ಪರಿಹಾರ ಮಾಡುತಾನೆ
ಪವಾಡ ಪುರುಷ ಪರಶಿವನ ಅವತಾರಿ
ಲಂಕೇಶ ಪೂಜಿತ ಮಾದಯ್ಯ

ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ
ನರಸಿಂಹನಾಯಕ್:
ಆ……………….ಆ…………….
ಆ……………….ಆ…………….
ಕೆ.ಎಸ್.ಸುರೇಖಾ:
ಶ್ರವಣನ ಮದ ಮುರಿದ ಮಾದಯ್ಯನ ನೆನೆಯೋಣ

ಚೆಲ್ಲಿದರೂ ಮಲ್ಲಿಗೆಯಾ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಗಾಯನ : ಕೆ.ಎಸ್.ಸುರೇಖಾ, ಸುನೀತಾ ಮತ್ತು ನರಸಿಂಹನಾಯಕ್

ನರಸಿಂಹನಾಯಕ್ :
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ
ಕೆ.ಎಸ್.ಸುರೇಖಾ:
ಬಾಳ್ನಾಗೆ ತೊಡಕಾ ನೀ ನೀಗು ಬಾರ ಬಾಳಿಗೆ ಭಾಗ್ಯದಾ ಬೆಳಕಾಗಿ ಬಾರಾ
ಬಾಳ್ನಾಗೆ ತೊಡಕಾ ನೀ ನೀಗು ಬಾರ ಬಾಳಿಗೆ ಭಾಗ್ಯದಾ ಬೆಳಕಾಗಿ ಬಾರಾ
ನರಸಿಂಹನಾಯಕ್ :
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ

ಕೆ.ಎಸ್.ಸುರೇಖಾ:
ಸಾಧುಸಂತರ ಮನದೇವ ಬಾರಾ ಜಗದೇಕವೀರ ಜಂಗಮಾ ಬಾರಾ
ಸಾಧುಸಂತರ ಮನದೇವ ಬಾರಾ ಜಗದೇಕವೀರ ಜಂಗಮಾ ಬಾರಾ
ನರಸಿಂಹನಾಯಕ್ :
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ

ಸುನೀತಾ:
ಕೌಪೀನ ತೊಟ್ಟ ಶಿವಯೋಗಿ ಬಾರಾ ಮದಕರಿ ಪೂಜಿತ ಮಾದಯ್ಯ ಬಾರಾ
ಕೌಪೀನ ತೊಟ್ಟ ಶಿವಯೋಗಿ ಬಾರಾ ಮದಕರಿ ಪೂಜಿತ ಮಾದಯ್ಯ ಬಾರಾ
ನರಸಿಂಹನಾಯಕ್ :
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ
ಹೆಬ್ಬುಲಿಯ ನೀ ಏರಿ ಬಾ ಮಾದಯ್ಯ ಸರಗೂರ ಸರದಾರ ಬಾ

ನರಸಿಂಹನಾಯಕ್ :
ನವರತ್ನ ಮಿನುಗೋ ಗದ್ದುಗೆ ನೀ ಇಳಿದು ಬಾರಯ್ಯ ಮಹನೀಯಾ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ
ಬಾರಯ್ಯ ಸ್ವಾಮಿ ಮಾದಯ್ಯ
ನರಸಿಂಹನಾಯಕ್ :
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಲಂಕೇಶಪ್ರಿಯನೆ ಶಿವರೂಪಿ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ

ನರಸಿಂಹನಾಯಕ್ :
ಕಾಜಾಣ ಕೋಗಿಲೆ ಹಾಡೂತ ನಿನ ನಾಮ ಮನತುಂಬಿ ನಿನ್ನ ಮಲೆಯಾಗಿ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ನರಸಿಂಹನಾಯಕ್ :
ಕೋಗೀಲೆ ದ್ವನಿಯಾಗಿ ನೀ ಬೆರೆತು ಬಾರಯ್ಯ ನಿನ್ನ ಬಿಟ್ಟರೆ ಬಾಳಿಲ್ಲ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ನರಸಿಂಹನಾಯಕ್ :
ನಿನ್ನ ಬಿಟ್ಟರೆ ಬದುಕಿಲ್ಲ ಜಗದೊಡೆಯ ನೆಲಸಯ್ಯ ನಮ್ಮ ಮನದೊಳಗೆ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ನರಸಿಂಹನಾಯಕ್ :
ನಿನ್ನ ಬಿಟ್ಟರೆ ಬದುಕಿಲ್ಲ ಜಗದೊಡೆಯ ನೆಲಸಯ್ಯ ನಮ್ಮ ಮನದೊಳಗೆ
ಸಂಗಡಿಗರು:
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ
ಬಾರಯ್ಯ ಸ್ವಾಮಿ ಮಾದಯ್ಯ ಮಹನೀಯಾ

ಚೆಲ್ಲಿದರೂ ಮಲ್ಲಿಗೆಯಾ …….ಮೂರು ಕಣ್ಣಿನ ಮುಗಿಲ ಬ

ಸಂಗೀತ : ಸಾಧು
ಗಾಯನ : ಪ್ರೇಮಲತಾ, ನರಸಿಂಹನಾಯಕ್ ಮತ್ತು ಸಂಗಡಿಗರು

ನರಸಿಂಹನಾಯಕ್ :
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ
ಸಂಗಡಿಗರು:
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ

ನರಸಿಂಹನಾಯಕ್ :
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ
ಸಂಗಡಿಗರು:
ಕೂಗಿ ಕೂಗಿ ಕರೆದೆವಲ್ಲೋ ಕುಣಿಯುತ ಬಾರಯ್ಯ
ಪ್ರೇಮಲತಾ:
ಕೂಗಿನ ದನಿಗೆ ನವಿಲಿನಂತೆ ನಲಿದು ಬಾರಯ್ಯ
ಸಂಗಡಿಗರು:
ನಮ್ಮ ಕೂಗಿನ ದನಿಗೆ ನವಿಲಿನಂತೆ ನಲಿದು ಬಾರಯ್ಯ

ಸುನೀತಾ:
ಮಲ್ಲಿಗೆ ಹೂವ ಮುಡಿದು ಬಾರೋ ಮಲೆಯ ಮಾದಯ್ಯ
ಸಂಗಡಿಗರು:
ಮಲ್ಲಿಗೆ ಹೂವ ಮುಡಿದು ಬಾರೋ ಮಲೆಯ ಮಾದಯ್ಯ
ನರಸಿಂಹನಾಯಕ್ :
ಮೆಲ್ಲಮೆಲ್ಲಗೆ ಪಾದವನಿಟ್ಟು ಒಲಿದು ಬಾರಯ್ಯ
ಸಂಗಡಿಗರು:
ನೀ ಮೆಲ್ಲಮೆಲ್ಲಗೆ ಪಾದವನಿಟ್ಟು ಒಲಿದು ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ

ನರಸಿಂಹನಾಯಕ್ :
ಕಂಬದ ಬೋಳಿ ಬಿಂಬದ ಮ್ಯಾಲೆ ನಿಂದು ನೋಡಯ್ಯ
ಸಂಗಡಿಗರು:
ಕಂಬದ ಬೋಳಿ ಬಿಂಬದ ಮ್ಯಾಲೆ ನಿಂದು ನೋಡಯ್ಯ
ಸುನೀತಾ:
ಪಡುವಾಲ ಪರಿಸೆ ಬರುವ ಚಂದವ ನೋಡಯ್ಯ
ಸಂಗಡಿಗರು:
ನಿನ್ನ ಪಡುವಾಲ ಪರಿಸೆ ಬರುವ ಚಂದವ ನೋಡಯ್ಯ
ಪ್ರೇಮಲತಾ:
ಕರಿಯ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ಸಂಗಡಿಗರು:
ಕರಿಯ ಕಂಬಳಿ ಗದ್ದುಗೆಯಿಂದ ಎದ್ದು ಬಾರಯ್ಯ
ನರಸಿಂಹನಾಯಕ್ :
ನೀನು ಚಾರಿಚರುಗನು ಏರಿಕೊಂಡು ಬ್ಯಾಗನೆ ಬಾರಯ್ಯ
ಸಂಗಡಿಗರು:
ನೀನು ಚಾರಿಚರುಗನು ಏರಿಕೊಂಡು ಬ್ಯಾಗನೆ ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ

ನರಸಿಂಹನಾಯಕ್ :
ಕೆಂಡಾದೋಕುಳಿ ಗಂಡ ಕೆಂಡಗಣ್ಣಯ್ಯ
ಸಂಗಡಿಗರು:
ಕೆಂಡಾದೋಕುಳಿ ಗಂಡ ಕೆಂಡಗಣ್ಣಯ್ಯ
ಸುನೀತಾ:
ಕೆಂಡಾಕೊಂಡಕೆ ದಯಾ ಮಾಡೋ ದುಂಡು ಮಾದಯ್ಯ
ಸಂಗಡಿಗರು:
ಕೆಂಡಾಕೊಂಡಕೆ ದಯಾ ಮಾಡೋ ದುಂಡು ಮಾದಯ್ಯ
ಪ್ರೇಮಲತಾ:
ಬಾಣದಲ್ಲಿ ಮಿಂಚ್ ಹೊಳೆದಂಗೆ ಜಾಣ ಬಾರಯ್ಯ
ಸಂಗಡಿಗರು:
ಬಾಣದಲ್ಲಿ ಮಿಂಚ್ ಹೊಳೆದಂಗೆ ಜಾಣ ಬಾರಯ್ಯ
ನರಸಿಂಹನಾಯಕ್ :
ನೀನು ಪಾಶುಪತಿ ಪಂಜು ಬಾಣ ತೊಟ್ಟು ಬಾರಯ್ಯ
ಸಂಗಡಿಗರು:
ನೀನು ಪಾಶುಪತಿ ಪಂಜು ಬಾಣ ತೊಟ್ಟು ಬಾರಯ್ಯ
ಮೂರು ಕಣ್ಣಿನ ಮುಗಿಲ ಬಣ್ಣದ ಮುದ್ದು ಮಾದಯ್ಯ
ನೆತ್ತಿಯ ಮ್ಯಾಲೆ ನಾಗರ ಹೆಡೆ ನಲಿದು ಬಾರಯ್ಯ

ಚೆಲ್ಲಿದರೂ ಮಲ್ಲಿಗೆಯಾ …………ಹಾಲರವಿ ಬಂದೊ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಗಾಯನ : ನರಸಿಂಹನಾಯಕ್ ಮತ್ತು ಸಂಗಡಿಗರು

ಸಂಗಡಿಗರು:
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ನರಸಿಂಹನಾಯಕ್ :
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ನರಸಿಂಹನಾಯಕ್ :
ಹಾಲಂಬಾಡಿಂದ ವಾಲೂಗ ಮಾಡಿಕೊಂಡು
ಸಂಗಡಿಗರು:
ವಾಲಾಡಿಕೊಂಡು ಏಳುಮಲೆಗ್ ಹಾಲರವಿ ಬಂದೊ
ನರಸಿಂಹನಾಯಕ್ :
ವಾಲಾಡಿಕೊಂಡು ಏಳುಮಲೆಗ್ ಹಾಲರವಿ ಬಂದೊ
ಸಂಗಡಿಗರು:
ಹಾಲ್ಹಳ್ಳ ತುಂಬಿ ಹಾಲ್ಹಳ್ಳ ತುಂಬಿ ಜಾಲಾದ ಕೊಳ ತುಂಬಿ
ನರಸಿಂಹನಾಯಕ್ :
ಜೋಲುತ್ತ ಏಳುತ್ತ ಏಳಿಮಲೆಗೆ ಹಾಲರವಿ ಬಂದೊ
ಸಂಗಡಿಗರು:
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ನರಸಿಂಹನಾಯಕ್ :
ಸರಗೂರಿಂದ ಸರಣಾರು ಬಂದಾರೇ
ಸರಗೂರಿಂದ ಸರಣಾರು ಬಂದಾರೇ
ಸಂಗಡಿಗರು:
ಮಜ್ಜಾನದೊತ್ತಿಗೆ ಏಳುಮಲೆಗೆ ಹಾಲರವಿ ಬಂದೊ
ನರಸಿಂಹನಾಯಕ್ :
ಮಜ್ಜಾನದೊತ್ತಿಗೆ ಏಳುಮಲೆಗೆ ಹಾಲರವಿ ಬಂದೊ
ಸಂಗಡಿಗರು:
ಕಾಡುಬೆಟ್ಟದಲ್ಲಿ ತಮಟೆಯ ಸದ್ದೇನು
ನರಸಿಂಹನಾಯಕ್ :
ತಮಟೆಯ ಸದ್ದಲಿ ಏಳುಮಲೆಗೆ ಹಾಲರವಿ ಬಂದೊ
ಸಂಗಡಿಗರು:
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ

ನರಸಿಂಹನಾಯಕ್ :
ಆನೆದಿಂಬದಲ್ಲಿ ಆನಂದವೇ ನಮ್ಮ
ಸಂಗಡಿಗರು:
ಆನಂದಕಾರನ ಏಳುಮಲೆಗೆ ಹಾಲರವಿ ಬಂದೊ
ನರಸಿಂಹನಾಯಕ್ :
ಆನಂದಕಾರನ ಏಳುಮಲೆಗೆ ಹಾಲರವಿ ಬಂದೊ
ಸಂಗಡಿಗರು:
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ನರಸಿಂಹನಾಯಕ್ :
ಮಾದೇವ್ನ ಮಜ್ಜನದೊತ್ತಿಗೆ ಏಳುಮಲೆ ಹಾಲರವಿ ಬಂದೊ
ಸಂಗಡಿಗರು:
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಮ್ಯಾಲ್ ಹೂವಿನ ದಂಡೆ ವಾಲಾಡಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ
ಹಾಲರವಿ ಬಂದೊ ನೂರೊಂದು ಹಾಲರವಿ ಬಂದೊ

ಚೆಲ್ಲಿದರೂ ಮಲ್ಲಿಗೆಯಾ

ಜಾನಪದಭಕ್ತಿಗೀತೆ
ಸಂಗೀತ : ಸಾಧು
ಸಂಗೀತ : ಪ್ರೇಮಲತಾ, ಸುರೇಖ

ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯಕಾರ ಮಾದೇವ್ನಗೆ
ಚೆಲ್ಲಿದರೂ ಮಲ್ಲಿಗೆಯಾ ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯಕಾರ ಮಾದೇವ್ನಗೆ
ಚೆಲ್ಲಿದರೂ ಮಲ್ಲಿಗೆಯಾ ಚೆಲ್ಲಿದರೂ ಮಲ್ಲಿಗೆಯಾ

ಏಳುಮಲೆಯಲ್ಲಿ ಏನಯ್ಯಾ ಕೆಂಧೂಳು
ಏಳುಮಲೆಯಲ್ಲಿ ಏನಯ್ಯಾ ಕೆಂಧೂಳು
ನವಿಲಾಡಿ ನವುಲ ಮರಿಯಾಡಿ ಮಾದೇವ್ಗೆ
ಚೆಲ್ಲಿದರೂ ಮಲ್ಲಿಗೆಯಾ
ನವಿಲಾಡಿ ನವುಲ ಮರಿಯಾಡಿ ಮಾದೇವ್ಗೆ
ಚೆಲ್ಲಿದರೂ ಮಲ್ಲಿಗೆಯಾ
ಅವುತ ಮಾಡಿ ಗಿರಿಗೆ ಹೊರಟರು ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯಕಾರ ಮಾದೇವ್ನಗೆ
ಚೆಲ್ಲಿದರೂ ಮಲ್ಲಿಗೆಯಾ ಚೆಲ್ಲಿದರೂ ಮಲ್ಲಿಗೆಯಾ

ಮಲ್ಲೆ ಹೂವಿನಾ ಮಂಚ ಮರುಗಾದ ಮೇಲೊದಪು
ಮಲ್ಲೆ ಹೂವಿನಾ ಮಂಚ ಮರುಗಾದ ಮೇಲೊದಪು
ತಾವರೆ ಹೂವ ತಾಲೆ ದಿಂಬು ಚೆಲ್ಲಿದರೂ ಮಲ್ಲಿಗೆಯಾ
ತಾವರೆ ಹೂವ ತಾಲೆ ದಿಂಬು ಮಾದೇವ್ಗೆ
ಚೆಲ್ಲಿದರೂ ಮಲ್ಲಿಗೆಯಾ
ಅಲ್ಲೊಂದು ಘಳಿಗೆ ಸುಖನಿದ್ದೆ ಮಾದೇವ್ನಗೆ
ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಚೆಲ್ಲಿದರೂ ಮಲ್ಲಿಗೆಯಾ ಬಾನಾಸುರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯಕಾರ ಮಾದೇವ್ನಗೆ
ಚೆಲ್ಲಿದರೂ ಮಲ್ಲಿಗೆಯಾ ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ
ಚೆಲ್ಲಿದರೂ ಮಲ್ಲಿಗೆಯಾ

ಚೆಲ್ಲಿದರೂ ಮಲ್ಲಿಗೆಯಾ……ಮೆಲ್ಲ ಮೆಲ್ಲಗೆ ನಿನ್ನ ಮುದ್ದಾದ

ಸಂಗೀತ : ಸಾಧು
ಗಾಯನ : ನರಸಿಂಹನಾಯಕ್ ಮತ್ತು ಸಂಗಡಿಗರು

ನರಸಿಂಹನಾಯಕ್ :
ಮೆಲ್ಲ ಮೆಲ್ಲಗೆ ನಿನ್ನ ಮುದ್ದಾದ ಅಡಿಯಿಟ್ಟು
ಬಾರೋ ಬಾ ಬಾರೋ ದುಂಡು ಮಾದ
ಸಂಗಡಿಗರು:
ಮಾದಯ್ಯ ಸ್ವಾಮಿ ಬಾರೋ ಬಾ ಬಾರೋ ಮುದ್ದು ಮಾದ
ನರಸಿಂಹನಾಯಕ್ :
ಮುದ್ದಾದ ಮುಖದಾಗೆ ಸಕ್ಕರೆ ನಗೆನಕ್ಕು
ಬಾರೋ ನೀ ಏಳುಮಲೆ ಮಾದ
ಸಂಗಡಿಗರು:
ಮಾದಯ್ಯ ಸ್ವಾಮಿ ಹುಲುಯೇರಿ ಬಾರೋ ಮುದ್ದು ಮಾದ

ನರಸಿಂಹನಾಯಕ್ :
ಏಳುಮಲೆಯ ಜೋಳಿಗೆಯೊಳಗೆ ಎಂಥಾ ಜೊಂಪಾದ ನಿದ್ದೆ ನಿಂಗೆ
ಸಂಗಡಿಗರು:
ಮಾದಯ್ಯ ಸ್ವಾಮಿ ಎಂಥಾ ಜೊಂಪಾದ ನಿದ್ದೆ ನಿಂಗೆ
ನರಸಿಂಹನಾಯಕ್ :
ನಾಗಾನ ನೆರಳಿನಾಗೆ ಮರಿಹುಲಿಯ
ದಿಂಬಮಾಡಿ ಮಲಗಿದ್ದಿ ಮೈಯ ಮರೆತು
ಸಂಗಡಿಗರು:
ಮಾದಯ್ಯ ಸ್ವಾಮಿ ಮಲಗಿದ್ದಿ ಮೈಯ ಮರೆತು

ನರಸಿಂಹನಾಯಕ್ :
ದುಂಡುಮಲ್ಲಿಗೆ ದಂಡೆ ಮಂಡೇಗೆ
ಮುಡಿಸೋಕೆ ತಂದೀವೆ ಮುದ್ದು ಮಾದ
ಸಂಗಡಿಗರು:
ಮಾದಯ್ಯ ಸ್ವಾಮಿ ಮಲ್ಲಿಗೆ ತಂದೀವೆ ಮಾದ
ನರಸಿಂಹನಾಯಕ್ :
ಮಜ್ಜನಾ ಸೇವೆ ಮಾಡಾಕೆ ಬಂದೀವಿ ಅಂತರ ನೀರ ಹೊತ್ತು
ಸಂಗಡಿಗರು:
ಮಾದಯ್ಯ ಸ್ವಾಮಿ ಅಂತರ ನೀರ ಹೊತ್ತು
ನರಸಿಂಹನಾಯಕ್ :
ಎಣ್ಣೆಯ ಮಜ್ಜನ ಮಾಡಾಕೆ ಬಂದೀವೆ ಮಂಗಳ ಮೂರುತಿ ಏಳು
ಸಂಗಡಿಗರು:
ಮಾದಯ್ಯ ಸ್ವಾಮಿ ಮಂಗಳ ಮೂರುತಿ ಏಳು
ನರಸಿಂಹನಾಯಕ್ :
ಧೂಪಾದ ಹೊಗೆ ಹಾಕಿ ದೀಪವ
ಹಚ್ಚೀವಿ ಸುಖದಾ ಆ ನಿದ್ದೆ ಬಿಟ್ಟು ಏಳು
ಸಂಗಡಿಗರು:
ಮಾದಯ್ಯ ಸ್ವಾಮಿ ಜಗವಾ ಸಲಹೋಕೆ ಬೇಕು ಏಳು
ನರಸಿಂಹನಾಯಕ್ :
ಮೆಲ್ಲ ಮೆಲ್ಲಗೆ ನಿನ್ನ ಮುದ್ದಾದ ಅಡಿಯಿಟ್ಟು
ಬಾರೋ ಬಾ ಬಾರೋ ದುಂಡು ಮಾದ
ಓ………………..ಆ……………..

ಚೆಲ್ಲಿದರೂ ಮಲ್ಲಿಗೆಯಾ ………ಕಾಶಾಯ ಉಟ್ಟವನೆ

ಸಂಗೀತ : ಸಾಧು
ಗಾಯನ : ನರಸಿಂಹನಾಯಕ್ ಮತ್ತು ಸುರೇಖಾ

ನರಸಿಂಹನಾಯಕ್:
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ

ಸುರೇಖಾ:
ಮಂಗ್ಳ ಗುಡಿ ಸಿರಿಯಿಂದ ರಂಗೋಲಿ ಹಿಡಿರಿಂದ
ಮಾಸ್ವಾಮಿ ಬಂದವ್ನೆ
ನರಸಿಂಹನಾಯಕ್:
ಮಂದಾರ ಮಲ್ಲೆಯ ಹಾರವಾ ತನ್ನಿರೆ
ಮಂದಾರ ಮಲ್ಲೆಯ ಹಾರವಾ ತನ್ನಿರೆ
ಸ್ವಾಮಿಯ ಪಾದಕ್ಕೆ ಇರಿಸೋಣ
ಸ್ವಾಮಿಯ ಪಾದಕ್ಕೆ ಇರಿಸೋಣ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ

ಸುರೇಖಾ:
ಜಗಬೆಳಗೋ ಜಗದೀಶ ಹರನಾವರ ಫಲನೀತ
ನಮ್ಮ ಮನೆಗೀಗ ಬಂದವ್ನೆ
ನರಸಿಂಹನಾಯಕ್:
ಮಣೆ ಹಾಕಿ ಕುಳ್ಳಿರಿಸಿ ಮನಸಾರೆ ಪೂಜಿಸಿ
ಮಣೆ ಹಾಕಿ ಕುಳ್ಳಿರಿಸಿ ಮನಸಾರೆ ಪೂಜಿಸಿ
ಶುಭಕರನ ಸೇವೇಯಾ ಮಾಡೋಣ
ಶುಭಕರನ ಸೇವೇಯಾ ಮಾಡೋಣ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ

ಸುರೇಖಾ:
ಗಂಧ ಚಂದನ ತನ್ನಿ ಭಕ್ತರ ಮನೆಗಿನ್ನು
ಯತಿ ರೂಪಿ ಶಿವ ಮನೆಗೆ ಬಂದವ್ನೆ
ನರಸಿಂಹನಾಯಕ್:
ಓಂಕಾರದಲೆಯಲ್ಲಿ ಮಾದಯ್ಯ ಬೆರೆತವ್ನೆ
ಶಿವನಾಮ ನಿರತ ಹಾಡೀರೆ
ಶಿವನಾಮ ನಿರತ ಹಾಡೀರೆ
ಕಾಶಾಯ ಉಟ್ಟವನೆ ಹುಲುಯೇರಿ ಬರುತವ್ನೆ
ರುದ್ರಾಕ್ಷಿ ಮಾಲೆ ತೊಟ್ಟವನೆ ಮಾದಯ್ಯ ಸ್ವಾಮಿ ಬಂದವ್ನೆ