Category Archives: ಜಾಲತರಂಗ – ಡಾ|| ಮೈ.ಶ್ರೀ. ನಟರಾಜ

‘ಡಿ ವಿ ಜಿ’ ಅವರ ‘ಅಂತಃಪುರ ಗೀತೆಗಳು’(ಭಾಗ -2) – D.V.Gundappas Anthapura geetegalu(Part 2)

ಇನ್ನು ಮುಂದೆ ಆಯ್ದ ಹತ್ತು ಗೀತೆಗಳನ್ನು ಕೇಳಿ ಆನಂದಿಸೋಣ.

(1) ಶುಕ ಸಖಿ

ಮದನಿಕೆ ಪ್ರೀತಿಯ ಗಿಣಿಯೊಂದನ್ನು ಸಾಕಿದ್ದಾಳೆ. ಇದು ಸಾಧಾರಣ ಹಕ್ಕಿಯಲ್ಲ, ಕಲಿಸಿದನು ಉಲಿಯುವ ಗಿಣಿ. ಆಹಾ ಸುಂದರಿ ಎಂದು ಹೇಳಿಕೊಟ್ಟರೆ ಅದೂ ಕೂಡ -ಆಹಾ ಸುಂದರಿ ಎನ್ನುತ್ತದೆ! ಮನುಷ್ಯನ ಭ್ರಮೆಗೆ ಮತ್ತಷ್ಟು ಪಿತ್ಥ ಏರಿಸಲು ಇನ್ನೇನು ಬೇಕು ಹೇಳಿ? ಕವಿ ಮನುಷ್ಯನ ದೌರ್ಬಲ್ಯಕ್ಕೆ ಮರುಗುತ್ತಾರೆ. ‘ಸರಸವಾಡೆ ಕೆಳೆಯನ್‌ ಎತ್ತಲರಸಿ ತಂದೆಯೇ?’ ಆಟವಾಡಲು ಎಲ್ಲಿಂದ ಹುಡುಕಿ ತಂದೆ ಎಂದು ಕೇಳುತ್ತಾರೆ.

‘ನುಡಿಯ ಕೇಳ್ವರ್‌ ಇರದೇ ಮನಸು ರೋಸಿ ಹೋದುದೇ?’ ಮನುಷ್ಯನಿಗೆ ಎಲ್ಲ ಇದ್ದು ತನ್ನ ಮಾತನ್ನು ಕೇಳುವವರು ಯಾರೂ ಇಲ್ಲದಿದ್ದಾಗ ಚಿಂತಾಜನಕವಾದ ಪರಿಸ್ಥಿತಿ ಉಂಟಾಗುತ್ತದೆ. ಅಂಥಾ ಸಂದರ್ಭದಲ್ಲಿ ಇಂಥಾ ಒಂದು ಅರಗಿಣಿಯನ್ನು ಸಾಕಿಬಿಟ್ಟರೆ ಸರಿ, ಒಳ್ಳೊಳ್ಳೆ ಮಾತುಗಳನ್ನು ಹೇಳಿಕೊಟ್ಟು ಹೊಗಳಿಸಿಕೊಳ್ಳ ಬಹುದಲ್ಲವೇ? ಕಲಿಸಿದ್ದನ್ನು ಮಾತ್ರ ಹೇಳಿ ಒಪ್ಪಿಸುವ ಈ ಗಿಣಿ ಸತ್ಯವನ್ನಂತೂ ನುಡಿಯುವುದಿಲ್ಲ. ನಿಜವಾಗಿ ನಿನ್ನ ಮನಸನ್ನು ತಿಳಿಯಬಲ್ಲವ ಅವನೊಬ್ಬನೇ, ಚೆನ್ನಕೇಶವ ಎಂದು ಮದನಿಕೆಗೆ ಜ್ಞಾಪಿಸುತ್ತಾರೆ. ಇಡೀ ಜಗತ್ತಿನ ಸೌಂದರ್ಯಕ್ಕೆ ಕಾರಣನಾದ ಆ ಪರಮಾತ್ಮನಲ್ಲದೇ ಮತ್ತಾರು ನಿನ್ನ ಸೊಬಗಿಗೆ ಕಾರಣರು? ಎಂದು ಕೇಳುತ್ತಾರೆ.

ಮತ್ತೊಂದು ಭಾವ ಕೂಡ ಈ ಶಿಲ್ಪದಲ್ಲಿ ಅಡಗಿದೆ. ಗಂಡ ಅಥವಾ ಪ್ರೇಮಿ ತಪ್ಪು ಮಾಡಿದಾಗ ಅವನೊಂದಿಗೆ ಮಾತು ಬಿಟ್ಟು ಮೌನವನ್ನಾಚರಿಸಿ ಮೂರನೇ ಮಾಧ್ಯಮದ ಮೂಲಕ ಮಾತನಾಡುವ, ಸಂದೇಶ ಕಳಿಸುವ ಹೆಣ್ಣಿನ ಚಾಳಿ ಗಂಡಸರಿಗೆಲ್ಲ ಗೊತ್ತೇ ಇರಬೇಕು. ‘ವಿಕಟವ ಗೈದನೇ ವಲ್ಲಭನ್‌, ಅಕಳಂಕಿತೆ, ಸೈಸು,’ ಪ್ರಿಯಕರ ತಪ್ಪು ಮಾಡಿದರೂ ಅದನ್ನು ಸಹಿಸಿಕೊಂಡಿರುವ ಔದಾರ್ಯ ಹೆಣ್ಣಿಗಿರಬೇಕೆಂಬ ಬುದ್ಧಿವಾದದ ಸೂಚನೆಯೂ ಇಲ್ಲಿದೆ.

ಈಗ ಕೇಳಿ: ಶುಕ ಸಖಿ, ರಾಗ-ಹಂಸಧ್ವನಿ, ತಾಳ ರೂಪಕ.

(2) ಮುರಜಾಮೋದೆ

Darpana Sundari - Shilabalikeಈ ಮದನಿಕೆಯ ಕೈಯ್ಯಲ್ಲೊಂದು ಢಮರುಗ, ಅದನ್ನು ತಲೆಯ ಮೆಲೆತ್ತಿ ಹಿಡಿದು ಕೋಲಿನಿಂದ ತಾಳ ತಟ್ಟುತ್ತಾ ಇದ್ದಾಳೆ. ‘ಡಕ್ಕೆಯ ಶಿರಕೆತ್ತಿ ತಾಳಗೋಲಿಂ ತಟ್ಟಿ, ತಕ್ಕಿಟ ಧಿಮಿಕಿಟ ತಕಝಣುರೆನಿಸಿ, ಕುಕ್ಕುತೆ ಚರಣವ ಕುಲುಕುತೆ ಕಾಯವ, ಸೊಕ್ಕಿದ ಕುಣಿತವ ಕುಣಿವೆ ನೀನೆಲೆ ಬಾಲೆ, ಏನೀ ಮಹಾನಂದವೇ ಓ ಭಾಮಿನಿ, ಏನೀ ಸಂಭ್ರಮದಂದವೇ, ಬಲ್ಚಂದವೇ.’

ಇಲ್ಲಿನ ವ್ಯಂಗ್ಯವನ್ನು ಗಮನಿಸಿ. ‘ಬಲ್‌ ಚಂದವೇ’ ನೃತ್ಯದ ಆಮೋದದಿಂದ ಜೀವನದ ಉನ್ಮಾದವನ್ನ, ಉನ್ಮತ್ತತೆಯನ್ನ ಪ್ರದರ್ಶಿಸುತ್ತಿರುವ, ಕಾಲನ್ನು ಕುಕ್ಕುತ್ತಾ, ಮೈಯನ್ನು ಬಳುಕಿಸಿತ್ತಿರುವ ಈ ಸಂಭ್ರಮಕ್ಕೆ ಕಾರಣವೇನೆಂದರೆ, ‘ಆರೋ ನಿನ್ನ ಹೃದಯಾಗಾರದಿ ನರ್ತಿಸಿ ಮಾರಶೂರತೆಯನ್ನ ಪ್ರಚಾರಿಸುತಿರ್ಪನ್‌ ಅಂದರೆ, ಕಾಮಪ್ರಚೋದನೆ ನಡೆದಿದೆಯೇ ಎಂಬ ಅನುಮಾನ.’ ಇಲ್ಲಿ ಪ್ರೇಮಕ್ಕಿಂತ ಕಾಮವೇ ಹೆಚ್ಚಾಗಿದೆ, ಅದು ಸಲ್ಲದು ಅನ್ನುವ ಸೂಚನೆ ಇದೆ. ನೃತ್ಯದಲ್ಲಿ ಕಾಮುಕತೆ ಅಂದರೆ ‘ಸಿಡಕ್ಟಿವ್‌ ಎಮ್ಫಸಿಸ್‌’ ಹೆಚ್ಚಾದಾಗ ಆಗುವ ಆಭಾಸವನ್ನು ಕುರಿತು ಹೇಳುವ ಮಾತಿದು. ಅವಳಿಗೆ ತಿಳುವಳಿಕೆಯ ಜೊತೆಗೆ ಒಂದಿಷ್ಟು ಎಚ್ಚರಿಕೆಯನ್ನೂ ಕೊಡುತ್ತಾರೆ. ‘ಸ್ಮೇರವದನ ನಮ್ಮ ಚನ್ನಕೇಶವರಾಯ ನಗುಮೊಗದ ಕೇಶವ ಓರೆಗಣ್ಣಿನಿಂದ ನೋಡುತ್ತಿದ್ದಾನೆ, ಜೋಕೆ!

ಈ ಶಿಲ್ಪವನ್ನು ನೋಡಿ, ಮನಸ್ಸಿನಲ್ಲೆ ಕುಣಿತದ ಜತಿಗಳನ್ನ ಹೇಳಿಕೊಳ್ಳಿ : ಝಣಜ್ಝಣತ್ಕ ಕಿಂಕಿಣೀ, ಢಣಢಣತ್ಕ ಢಕ್ಕಿಣೀ, ಸ್ವನ್ನೋತ್ತರಂಗಿತಾಂಗಿನೀ, ಮೃಣಾಲ ಲೋಲ ನರ್ತಿನೀ.

ಇದೋ ಕೇಳಿ : ಮುರಜಾಮೋದೆ, ರಾಗ ಕಮಾಚ್‌, ತಾಳ, ಆದಿ.

(3) ಮಂಜು ಕಬರೀ

ಈ ಮದನಿಕೆಯ ಸೌಂದರ್ಯದ ರಹಸ್ಯ ಅವಳ ಜಡೆ. ‘ಇವಳು ಯಾರು ಬಲ್ಲೆ ಏನು? ಇವಳ ಹೆಸರ ಹೇಳಲೇನು, ಇವಳ ದನಿಗೆ ತಿರುಗಲೇನು, ಇವಳು ಏತಕೋ ಬಂದು ನನ್ನ ಸೆಳೆದಳು’ ನೆನಪಿರಬಹುದು, ಅಲ್ಲಿಯೂ ಅವಳ ಜಡೆಯೇ ಆಕರ್ಷಣೆ. ಸುಂದರವಾದ ಕೇಶರಾಶಿಗೆ, ಮತ್ತು ತರಿಸುವ ಕಾಶ್ಮೀರಾಗರು ಕೇಶ ತೈಲ ಉಜ್ಜಿಕೊಂಡು ಇದೀಗ ಮಿಂದು ಬಂದಿದ್ದಾಳೆ ಶುಭ್ರಕಾಂತಿಯಿಂದ. ಜಡೆಯ ತುದಿಯಿಂದ ನೀರು ತೊಟ್ಟಿಕ್ಕುತ್ತಿರುವುದನ್ನು ಗಮನಿಸಿದಿರಾ? ಇಷ್ತೇ ಸಾಲದೇ ಗಂಡನ್ನು ಮುಗ್ಗರಿಸಿ ಕೆಡವಲು? ಅವಳು ಸ್ಮಿತಾಧರಿ! ಇನ್ನೇನು ನಗುತ್ತಾಳೆ ಅನ್ನುವ ನಿರೀಕ್ಷೆಯನ್ನುಂಟುಮಾಡುವ ಆ ತುಟಿಗಳನ್ನು ಸ್ವಲ್ಪ ಗಮನವಿಟ್ಟು ಪರೀಕ್ಷಿಸಿ. ಇವಳ ತಲೆಯ ಆಭರಣಗಳೋ ಕಿರೀಟದ ನವರತ್ನಗಳಂತಿವೆ. ‘ವಾಸನೆಗಳ ಕಟ್ಟಿ ನಾಗಪಾಶವ ಸುತ್ತಿದ್ದಾಳೆ.’ ಇಲ್ಲಿ ವಾಸನೆ ಎಂಬುದಕ್ಕೆ ಎರಡರ್ಥ, ಒಂದು ಕನ್ನಡದ ಸುವಾಸನೆ ಮತ್ತೊಂದು ಸಂಸ್ಕೃತದ ವಾಸನೆ ಅಂದರೆ ವಿಷಯವಾಸನೆ. ನಾಗಪಾಶ ಹಾಕಿದರೆ ಮುಗಿಯಿತು, ಮೂಳೆ ಮುರಿಯುವ ಬಿಗಿತ. ಹೆಣ್ಣಿನ ಮೋಹಪಾಶದ ಬಿಗಿತ ಅದು!

ಕವಿ ಕೇಳುತ್ತಾರೆ, ಕೇಶವನನ್ನು ಮೋಹಪಾಶದಿಂದ ಬಿಗಿಯೋದಕ್ಕೆ ಮೋಸದ ಹೆರಳೇ? ಇವಳೇನು, ವಿಗ್‌ ಧರಿಸಿದ್ದಾಳ? ಕಾರಿರುಳುನ ಕಪ್ಪು ಮೋಡದಂಥ ಮೋಸದ ಹೆರಳಿನಿಂದ ನಾಗಪಾಶ ಹಾಕುವುದನ್ನ ಕವಿ ಒಪ್ಪುವುದಿಲ್ಲ.

ಕೇಳೋಣ: ಮಂಜು ಕಬರೀ, ರಾಗ ನಾಟಕುರಂಜಿ, ತಾಳ ಮಿಶ್ರಚಾಪು.

(4) ಜಗನ್ಮೋಹಿನಿ

ಈ ಹಿಂದೆ ನೋಡಿದ ಮದನಿಕೆಯರು ಸುಂದರಿಯರು ನಿಜ, ಆದರೆ, ಅವರೆಲ್ಲ ಕೇವಲ ಮನುಷ್ಯಮಾತ್ರದವರು. ಮಾನವಸೌಂದರ್ಯವೇ ಮತ್ತುತರಿಸುವಂತಿರುವಾಗ, ಇನ್ನು ಭಗವಂತನೇ ಸುಂದರಿಯ ರೂಪ ತಳೆದು ಬುವಿಗೆ ಬಂದುಬಿಟ್ಟರೆ?

ಹಿಂದೆ ರಾಕ್ಷಸರಿಗೂ ದೇವತೆಗಳಿಗೂ ಅಮರರಾಗಬೇಕೆಂಬ ಆಸೆ ಉಂಟಾಯಿತಂತೆ. ಅದಕ್ಕಾಗಿ ಅವರು ಅಮರತ್ವವನ್ನು ಅನುಗ್ರಹಿಸುವ ಅಮೃತಕ್ಕಾಗಿ ಸಮುದ್ರಮಥನಮಾಡಬೇಕಯಿತು. ಪರ್ವತರಾಜನೇ ಕಡೆಗೋಲಾದ, ಮಹಾಸರ್ಪ ವಾಸುಕಿಯೇ ಹಗ್ಗವಾದ. ನೀರಿನಲ್ಲಿ ಪರ್ವತ ಮುಳುಗದಂತೆ ನೋಡಿಕೊಳ್ಳಲು ಮಹಾವಿಷ್ಣು ಕೂರ್ಮಾವತಾರಿಯಾದ. ದೇವಾಸುರರು ಹಾವನ್ನು ಹಗ್ಗದಂತೆ ಜಗ್ಗಾಡಿ ಸಮುದ್ರದಲ್ಲಿದ್ದ ಅಮೃತವನ್ನು ವಿಷವನ್ನು ಬೇರ್ಪಡಿಸಿದರು. ತಕ್ಷಣ ಅಮೃತಕ್ಕಾಗಿ ಕಚ್ಚಾಟವಾಯಿತು. ಸಮಸ್ಯೆಯ ಪರಿಹಾರಕ್ಕೆ ಇದ್ದಾನಲ್ಲ, ನಮ್ಮ ಮಹಾವಿಷ್ಣು? ಮೋಹಿನಿಯ ಅವತಾರ ತಾಳಿಬಂದ! ದೇವತೆಗಳಿಗೆ ಮಾತ್ರ ಅಮೃತವನ್ನು ಹಂಚಿ ರಕ್ಕಸರಿಗೆ ಮಣ್ಣುತಿನ್ನಿಸಿದಳಲ್ಲವೇ ಆ ಮೋಹಿನಿ? ಅವಳೇ ಜಗನ್ಮೋಹಿನಿ. ಅವಳೆಂತಹ ಮೋಹಿನಿ ಎಂದರೇ ಆತ್ಮಸಂಯಮಕ್ಕೆ ಹೆಸರಾದ ಮಹಾದೇವ, ಕಾಮನನ್ನೇ ಸುಟ್ಟ ಪರಮೇಶ್ವರ ಅವಳ ರೂಪಕ್ಕೆ ಮರುಳಾದ.

ಅಂದರೆ, ಭಗವಂತ ಜಗನ್ಮೋಹನ, ಜಗನ್ಮೋಹಿನಿ ಎರಡೂ ಅವನೇ. ಅವನ ಮಾಯಾಜಾಲದಲ್ಲಿ ಸತ್ಯವೂ ಸ್ವಾಹಾ ಸೌಂದರ್ಯವೂ ಸ್ವಾಹಾ. ಹೀಗೆ ಸತ್ಯ, ಶಿವ ಮತ್ತು ಸುಂದರವನ್ನ ಒಂದುಗೂಡಿಸುವ ಚೆಲುವ ಕೇಶವನ ಸೊಬಗನ್ನು ಭಟ್ಟಿ ಇಳಿಸುವ ಈ ಗೀತೆಯನ್ನು ಕೇಳಿ.

ಜಗನ್ಮೋಹಿನಿ, ರಾಗ: ವರಾಳಿ, ತಾಳ: ರೂಪಕ.

(5) ಕೀಶರುಷ್ಟೆ

ಭಗವದ್‌ಸೃಷ್ಟಿಯಲ್ಲಿ ಕೇವಲ ಸೌಂದರ್ಯ ಮಾತ್ರವೇ ಇದೆ ಎಂದು ನಂಬಲಾಗದು. ಈ ವಿಶ್ವ ಅವನ ಲೀಲೆ, ಅಂದರೆ, ಆಟ! ಆಟ ಎಂದಮೇಲೆ, ಗಾಂಭೀರ್ಯದ ಜೊತೆಜೊತೆಗೇ, ಹುಡುಗಾಟ, ಹುಚ್ಚಾಟ, ಚೇಷ್ಟೆ, ಇವೆಲ್ಲವೂ ಇದ್ದೇ ಇರುತ್ತವೆ. ಚೇಷ್ಟೆ ಎಂದಾಗ ನೆನಪಾಗುವುದು, ಕಪಿ. ಅದಕ್ಕೇ ನಾವು ಮಕ್ಕಳನ್ನು ಗದರಿಸುವಾಗ ‘ಕಪಿಚೇಷ್ಟೆ ಸಾಕು’ ಎನ್ನುವುದು!

ಈ ಮದನಿಕೆಯನ್ನು ನೋಡಿ, ಆಕೆಗೆ ಸ್ವಲ್ಪ ಕೋಪ ಬಂದಿರುವ ಹಾಗಿದೆ. ಏಕೆ ಕೋಪ? ಕಪಿಯೊಂದು ಬಂದು ಅವಳ ಅಂಗವಸ್ತ್ರವನ್ನು ಎಳೆದುಹಾಕಿದೆ. ಕಪಿಗೂ ಹೆಣ್ಣಿನ ಅಂಗವನ್ನ ಅದರ ಮೂಲರೂಪದಲ್ಲೇ ಕಂಡು ಸವಿಯುವ ಚಪಲ. ಈ ಕಾರಣದಿಂದಲೇ ಮನುಷ್ಯನ ಮನಸ್ಸನ್ನು ಕಪಿಗೆ ಹೋಲಿಸುತ್ತಾರೆ.

ಈ ಮುಜುಗರದ ಸಂದರ್ಭವನ್ನೂ ಕವಿ ಉಪಯೋಗಿಸಿಕೊಂಡು ಮದನಿಕೆಗೆ ಸಮಾಧಾನ ಹೇಳುತ್ತಾರೆ. ‘ಉಡಿಗೆಯನ್‌ ಎಳೆಯೆ, ನಿನ್ನ ಒಡಲಿನ ವಯ್ಯಾರದ ಬೆಡಗು ಕಣ್ಗಳಿಗೆ ನೂರ್ಮಡಿ ಸೊಗಸಾಯ್ತೇ?’ ಎಂದು ವ್ಯಂಗ್ಯವಾಡುತ್ತಾರೆ. ಯಾರ ಕಣ್ಣಿಗೆ ನೂರ್ಮಡಿ ಸೊಗಸಾಯ್ತು? ಆ ಕಪಿಯ ಚೇಷ್ಟೆಯಿಂದ ರಸಿಕ ಕೇಶವನ ಕಣ್ಣಿಗೆ ನಿನ್ನ ಸೌಂದರ್ಯದರ್ಶನವಾಯ್ತು, ‘ಬಿಡು ದೋಷದೃಷ್ಟಿಯ,’ ಎನ್ನುತ್ತಾರೆ. ಸಾಂತ್ವನ ಮಾಡುತ್ತ, ಈ ಹುಡುಗಾಟದ ಹುಚ್ಚು, ಕೇಶವನಿಗೆ ಮೆಚ್ಚು ಎಂದು ತಿಳಿಯಹೇಳುತ್ತಾರೆ, ಈ ಕಪಿಯ ಚೇಷ್ಟೆಗೂ ಆದಿಕೇಶವನೇ ಮೂಲ ಎಂಬುದನ್ನೂ ನೆನಪಿಸುತ್ತಾ.

ಮುಂದೆ ಕೇಳಿ, ಕೀಶರುಶ್ಟೆ, ಕಾಂಬೋಜಿ ರಾಗದಲ್ಲಿ ಮತ್ತು ಆದಿತಾಳದಲ್ಲಿ.

(6) ನೀಲಾಂಬರೆ

ಪಾಪ, ನೋಡಿ, ಈ ಮದನಿಕೆಯ ಸೀರೆಯ ನೆರಿಯಲ್ಲಿ ಚೇಳೊಂದು ಬಂದು ಸೇರಿಕೊಂಡಿದೆ. ಅದನ್ನು ಕಂಡು ಬೆಚ್ಚಿ ಭಯಭ್ರಾಂತಳಾಗಿ ಸೀರೆಯನ್ನು ಕೊಡವಿ ಚೇಳನ್ನು ಕೆಡಹಲು ಯತ್ನಿಸುತ್ತಿರುವ ಸುಂದರ ಶಿಲ್ಪವಿದು. ಚೇಳಿಗೆ ಹೆಣ್ಣಿನ ಸೀರೆಯ ನೆರಿಗೆಯಡಿ ಬಚ್ಚಿಟ್ಟುಕೊಳ್ಳುವ ರಸಿಕಬುದ್ಧಿಯನ್ನು ಹೇಳಿಕೊಟ್ಟವರಾರು? ‘ಬೆಚ್ಚಿಸಿ ನಿನ್ನನು ನಿಶ್ಚೇಲಗೈದು, ತನ್ನಕ್ಷಿಗೆ ಸಿಂಗಾರದೂಟವನುಣಿಸೆ, ವೃಶ್ಚಿಕಮಂತ್ರವನುಚ್ಚರಿಸಿದನೇನೆ, ಅಚ್ಚು-ಮೆಚ್ಚಿನ ನಿನ್ನ ಮಾಯಾವಿ ಕೇಶವ’ ಎಂಬ ಉತ್ತರವನ್ನು ಕವಿಯೇ ಕೊಡುತ್ತಾರೆ.

ಈ ಶಿಲ್ಪದ ವೈಶಿಷ್ಟ್ಯವನ್ನು ಕವಿ ನಾಲ್ಕೇ ಮಾತುಗಳಲ್ಲಿ ವಿವರಿಸುತ್ತಾರೆ, ‘ದೃಷ್ಟ ವೃಶ್ಚಿಕಾ, ನಷ್ಟ ವೇಷ್ಟಿಕಾ, ಸ್ಪಷ್ಟ ಕನ್ಯಕಾ, ಹೃಷ್ಟ ಲೌಕಿಕಾ’ ಅಂದರೆ, ಚೇಳನ್ನು ಕಂಡವಳು ಬಟ್ಟೆಯನು ಕಳಚಿದಳು, ಮೈಯ್ಯ ತೋರಿದಳು, (ನೀಲಾಂಬರೆಯಾಗಿ) ಕಣ್ಣ ತಣಿಸಿದಳು. ನೀಲಾಂಬರೆ ಎಂಬುದಕ್ಕೆ ಎರಡರ್ಥ, ನೀಲಿ ಸೀರೆಯನುಟ್ಟವಳು, ಹಾಗೂ ನೀಲಿ ಅಂಬರವೇ ಬಟ್ಟೆಯಗಿ ಉಳ್ಳವಳು!

ಮುಂದಿನ ಗೀತೆ, ನೀಲಾಂಬರೆ, ಇದಕ್ಕೆ ಮತ್ಯಾವ ರಾಗ? ನೀಲಾಂಬರಿ. ತಾಳ ಮಿಶ್ರಚಾಪು.

(7) ಕೊರವಂಜಿ

ಈ ಮದನಿಕೆ ಒಂದು ಪ್ರಸಿದ್ಧ ನೃತ್ಯಗೀತೆಯಾಗಿ ನೂರಾರುಬಾರಿ ನೂರಾರು ನಗರಗಳಲ್ಲಿ ರಂಗವನ್ನೇರಿಬಿಟ್ಟಿದ್ದಾಳೆ. ‘ಡಮರು ಢಣರು ಢಂಢಣರೆನೆ, ಚಿಟಿಕೆ ತಾಳ ಚಟಚಟವೆನೆ, ಕುಲುಕಿ ಬಳುಕಿ ಬಳ್ಳಿಯೊಡನೆ, ಒಲಿದು ನಲಿದು ಕುಣಿದ ಲಲನೆ-ನಟನವಾಡಿದಳ್‌, ತರುಣಿ ನಟನವಾಡಿದಳ್‌.’

ಹಳ್ಳಿಯಿಂದ ಹಳ್ಳಿಗೆ ಕಾಲ್ನಡಗೆಯಲ್ಲಿ ಹೋಗಿ, ಮನೆಮನೆಗಳ ಮುಂದೆ ನಿಂತು ಚಿಟಿಕೆ ತಾಳ ಹಾಕುತ್ತ, ಬುಡುಬುಡಿಕೆ ಮಾಡುವ ಮುಗ್ದ ಕೊರವಂಜಿಯೂ ಕೇಶವೇಶನ ದಾಸಿಯೇ ಆಗುತ್ತಾಳೆ. ಇವಳ ನೃತ್ಯದಲ್ಲಿ ಈಶತಾಂಡವವಿದೆ, ರಾಸಲೀಲೆಯ ರಭಸವಿದೆ, ಆಶೆನೋಟದ ರತಿಲೀಲೆಯೂ ಇದೆ, ಅದರ ಜೊತೆಗೇ, ಕೇಶವನಲ್ಲಿ ಅಚಲ ಭಕ್ತಿ ಮತ್ತು ಮುಗ್ದಮನಸ್ಸಿನ ಸೇವಾಭಾವನೆಯೂ ತುಂಬಿದೆ.

ಇನ್ನು ಗೀತೆಯನ್ನು ಕೇಳೋಣ, ಕೊರವಂಜಿ, ಹುಸೇನಿ ರಾಗ ಮತ್ತು ಏಕ ತಾಳ.

(8) ನಾಟ್ಯ ಸುಂದರಿ

ಇವಳೊಬ್ಬಳು ಸುಂದರ ನರ್ತಕಿ. ಇವಳು ತನ್ನ ವಲ್ಲಭನಿಗಾಗಿ ನಿರೀಕ್ಷಣೆಯಲ್ಲಿದ್ದಾಳೆ, ಇನ್ನೇನು ಬಂದಾನು ಎಂಬ ಆಶಾಭಾವದ ಜೊತೆಗೇ, ಇನ್ನೂ ಏಕೆ ಬರಲಿಲ್ಲ ಎಂಬ ತವಕವೂ ಸೇರಿದೆ. ಈ ಗೀತೆಯಲ್ಲಂತೂ ಕವಿಯ ವರ್ಣನೆ ತುಂಬಾ ಸೊಗಸಾಗಿದೆ. ಇವಳ ಮುಖ, ಝಲ್ಲರೀ ಝಂಕೃತಾಮೊದ ಮುಗ್ಧಾನನಮ್‌ (ಝಲ್ಲರೀ ವಾದ್ಯದ ಝಂಕಾರದಿಂದ ಮುದಗೊಂಡ ಮುಖಕಮಲ ಇವಳದ್ದು), ಮಲ್ಲಿಕಾ ಮಾಲಿಕಾಲಂಕೃತ ಉರಸ್ಥಲಂ (ಮಲ್ಲಿಗೆಯ ಹಾರ ಎದೆಯಮೇಲೆ ಶೋಭಿಸುತ್ತಿದೆ), ವಲ್ಲರಾಗಾರದೊಳ್‌ ಚೇಟಿಕಾ ನರ್ತನಮ್‌, ವಲ್ಲಭ ಸ್ವಾಗತಾನಂದ ಸಂವೀಕ್ಷಣಮ್‌ (ವಲ್ಲಭ ಬರುತ್ತಾನೆ, ಅವನ ಸ್ವಾಗತಕ್ಕೆ ಒಂದು ಸುಂದರ ನೃತ್ಯವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಾ ಇರುವ) ಇವಳ ಒಂದು ಸುಂದರ ಭಂಗಿ ಅತ್ಯಂತ ಆಕರ್ಷಣೀಯವಾಗಿದೆ, ಗಮನಿಸಿ.

ಕವಿಹೃದಯ ಅವಳೊಂದಿಗೆ ಸರಸವಾಡುತ್ತದೆ. ಸುಂದರಿ ನೀನೇ, ಸುಂದರಿ ನೀನೆ ಎಂದು ಹಲುಬುತ್ತಾರೆ, ಅಷ್ಟೇ ಅಲ್ಲ, ಕಂದರ್ಪ ಸಂದೇಶ ದುರಂಧರಿಯೂ ನೀನೆ, ಮನ್ಮಥನ ಸಂದೇಶವನ್ನು ಹೊತ್ತ ಪುಷ್ಪವೂ ನೀನೆ ಎಂದು ಮನಃಪೂರ್ವಕವಾಗಿ ಮೆಚ್ಚುತ್ತಾರೆ. ಅವಳು ಮಾಡಬಹುದಾದ ಸ್ವಾಗತನೃತ್ಯವನ್ನು ಊಹಿಸಿಕೊಳ್ಳುತ್ತಾ, ಪದಕರ ವಿನ್ಯಾಸ (ಕೈ ಕಾಲ್ಗಳ ಚಲನೆ), ವದನಾಧರ ಹಾಸಗಳು (ಮುಖ ಮತ್ತು ತುಟಿಯಲ್ಲಿ ವ್ಯಕ್ತವಾಗುವ ನಗೆ), ಮೃದುನಯನ ವಿಕಾಸಗಳು (ಹಿತವಾದ ಕಣ್ಣಿನ ಅರಳುವಿಕೆ), ಮತ್ತು ಹೃದಯಾಂಗ ವಿಲಾಸಗಳು (ವಕ್ಷಸ್ಥಳದ ಕುಲುಕುಗಳು) ಇವನ್ನೆಲ್ಲ ಬಣ್ಣಿಸುತ್ತಾರೆ. ಬಳ್ಳಿಯಂಥ ಅವಳ ಶರೀರ ಗೀತಮಾಧುರ್ಯಕ್ಕೆ ತಲೆದೂಗುತ್ತ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಈ ನರ್ತಕಿಯನ್ನು ವಸಂತ ಋತುವಿನ ಸುಂದರ ಸುಪ್ರಭಾತದಂದು ಅರಳುವ ಒಂದು ಸುಂದರ ಪುಷ್ಪಕ್ಕೆ ಹೋಲಿಸುವುದನ್ನು ನೋಡಿದರೆ, ಗುಂಡಪ್ಪನವರು ಈ ಸುಂದರಿಗೆ ಮಾರುವೋಗಿದ್ದರೋ ಎಂಬ ಅನುಮಾನ ಬಾರದೇ ಇರದು! ಆದರೆ ಅಂಥ ಅನುಮಾನಕ್ಕೆ ಆಸ್ಪದ ಕೊಡದೇ, ಕೇಶವವಿಭುಸಂಪ್ರೀತೆ ಎನ್ನುತ್ತ ಅವಳ ಸೌಂದರ್ಯವನ್ನು ಶಿಲ್ಪಿಯಂತೆ ತಾವೂ ಚೆನ್ನಕೇಶವನಿಗೆ ಸಮರ್ಪಿಸುವುದನ್ನು ಮಾತ್ರ ಮರೆಯುವುದಿಲ್ಲ.

ಈಗ ಕೇಳೋಣ, ನಾಟ್ಯಸುಂದರಿ, ರಾಗ ಬೇಗಡೆ, ತಾಳ ರೂಪಕ.

(9) ಮುಕುರ ಮುಗ್ಧೆ

‘ನಾರ್ಸಿಸ್ಟಿಕ್‌ ಬಿಹೇವಿಯರ್‌’ ಅಥವಾ ಆತ್ಮರತಿ ಎಂಬುದು ಮನುಷ್ಯನ ಹಳೇ ರೋಗಗಳಲ್ಲಿ ಒಂದು, ಅದರಲ್ಲೂ ಹೆಣ್ಣಿನ ಅತಿದೊಡ್ಡ ದೌರ್ಬಲ್ಯಗಳಲ್ಲಿ ಇದೂ ಒಂದು. ತನ್ನ ಮುಖವನ್ನು ಕನ್ನಡಿಯಲ್ಲಿ ಕಂಡು ತನಗೆ ತಾನೇ ಮರುಳಾಗುವ ಮೋಹವನ್ನು ಶಿಲ್ಪಿ ಈ ಕೆತ್ತನೆಯಲ್ಲಿ ಜೀವಂತಗೊಳಿಸಿದ್ದಾನೆ.

ಹುಣ್ಣಿಮೆ ಚಂದಿರನಂತಿರುವ ಈ ಮದನಿಕೆಯ ಗುಂಡುಮುಖದಲ್ಲಿ ಮೆರೆಯುತ್ತಿರುವ ಹಣೆಯಮೇಲೆ, ಕುಂಕುಮವನ್ನಿಟ್ಟುಕೊಳ್ಳಲು ಬಲಗೈಯ್ಯ ಒಂದು ಬೆರಳು ಸಿದ್ಧವಾಗಿದೆ, ಗಮನಿಸಿ. ನಟ್ಟನಡುಹಣೆಯಲ್ಲಿ ಸರಿಯಾಗಿ ಕುಂಕುಮವಿಟ್ಟುಕೊಳ್ಳಲು ಬೇಕಾದ ಕನ್ನಡಿಯನ್ನು ಎಡಗೈಯ್ಯಲ್ಲಿ ಹಿಡಿದಿದ್ದಾಳೆ. ಅರೆ, ಇದೇನಿದು? ಇವಳು ಕುಂಕುಮದ ವಿಚಾರವನ್ನೇ ಮರೆತಂತಿದೆ! ತನ್ನ ಸೌಂದರ್ಯಕ್ಕೆ ತಾನೇ ಬೆರಗಾಗಿ ಪರವಶಳಗಿದ್ದಾಳೆಯೇ?

ನಿಜವಾಗಿ ಪರವಶಳೋ, ಅಥವಾ ಇದೂ ಒಂದು ‘ಸ್ಮರತಂತ್ರ ನಯವೋ?’ ಅಂದರೆ, ಸುಮ್ಮನೆ ನಟಿಸುತ್ತ, ತನ್ನ ಇನಿಯನನ್ನು ಆಕರ್ಷಿಸಲು ಹೂಡಿದ ಮನ್ಮಥನಾಟವೊ? ‘ಎಲೆ ಸುಂದರಿ, ನಿನ್ನ ಕುಂಕುಮದೊಡೆಯ ಯಾರೆಂದು ಮರೆತೆಯ? ಸುಮ್ಮನೆ ಸಮಯ ಹಾಳುಮಾಡಬೇಡ, ನಿನಗೆ ನೀನೇ ಮೋಸ ಮಾಡಿಕೊಳ್ಳಬೇಡ. ನಿಜವಾದ ಧನ್ಯತೆ ಬೇಕಾಗಿದ್ದಲ್ಲಿ, ಬೇಗ ಕುಂಕುಮವಿಟ್ಟುಕೋ, ಆ ಕನ್ನಡಿಯನ್ನು ಅತ್ತ ತೆಗೆದಿಡು, ನೋಡು ಚೆನ್ನಕೇಶವನನ್ನ,’ ಎಂದು ಕವಿ ಎಚ್ಚರಿಸುತ್ತಾರೆ.

ಮುಂದೆ ಕೇಳಿ, ಮುಕುರಮುಗ್ಧೆ, ಕೇದಾರ ರಾಗ, ಆದಿತಾಳ.

(10) ವಿರಹಾರ್ತೆ

ಪ್ರೇಮದಲ್ಲಿ ಮಿಲನಕ್ಕೆ ಎಷ್ಟು ಪ್ರಾಮುಖ್ಯತೆ ಉಂಟೋ ಅಷ್ಟೇ ಪ್ರಾಮುಖ್ಯತೆ ವಿರಹಕ್ಕೂ ಇದೆ. ವಿರಹದಲ್ಲೇ ನಿಜವಾದ ಪ್ರೇಮದ ಅರಿವಾಗುವುದು, ವಿರಹದಲ್ಲೇ ಪ್ರೇಮದ ಉತ್ಕಟತೆ ಹೆಚ್ಚುವುದು, ವಿರಹದಲ್ಲೇ ನೈಜಪ್ರೇಮದ ಪರೀಕ್ಷೆಯಾಗುವುದು. ಈ ಮದನಿಕೆ ವಿರಹದಿಂದ ಕೊರಗಿ ಕರಗಿಬಿಟ್ಟಿದ್ದಾಳೆ. ಅವಳನ್ನು ಕಂಡು ಕವಿ ಕನಿಕರದಿಂದ ಕೇಳುತ್ತಾರೆ. ‘ನಾಥನೇಂ ಮುನಿದನೇ, ಮಾತನೇ ತೊರೆದನೇ, ಏತಕೀ ವಿರಹವೇ, ಪ್ರೀತಿಪ್ರಮೋದನೆ?’

‘ನೀನು ನಿಜವಾಗಿ ಪ್ರೀತಿಪ್ರಮೋದನೆಯೇ ಆಗಿದ್ದಲ್ಲಿ ವಿರಹಕ್ಕೇನು ಕಾರಣ? ಓಹೋ, ಪ್ರಣಯಸಲ್ಲಾಪದಲ್ಲಿ ಸ್ವಲ್ಪ ಎಲ್ಲೆಮೀರಿ ವಿನಯವನ್ನು ಬಿಟ್ಟು, ನಾಚಿಕೆಗೆಟ್ಟವಳಂತೆ ವರ್ತಿಸಿಬಿಟ್ಟೆಯಾ? ಅಥವಾ, ಯಾವ ಕಾರಣದಿಂದ ಇನಿಯನಿಗೆ ಕೋಪ ಬಂದಿದೆ, ಎನ್ನುವುದನ್ನು ಅರ್ಥ ಮಾಡಿಕೊಳ್ಳದೇ ಹೋದೆಯ? ಅಥವಾ, ನಿನ್ನ ಪ್ರೀತಿಗೆ ಬದಲಾಗಿ ಏನಾದರೋ ಷರತ್ತು ಹಾಕಿದೆಯ? ಹೀಗೇ ಮಾಡು, ಹಾಗೇ ಮಾಡು ಎಂದೆಲ್ಲ ಪಣಗಳನ್ನೊಡ್ಡಿದೆಯ? ಹೀಗೆಲ್ಲ ಮಾಡ ಬಹುದೇ ಸುಂದರಿ? ನಿನ್ನಿನಿಯ ಯಾರು? ಅವನು ಸಾಧಾರಣನಲ್ಲ, ಅವನು ಚೆಲುವ ನಾರಾಯಣ.’

ವಿರಹಾರ್ತೆಯ ವಿರಹಾಲಾಪದ ವಿವರವವನ್ನು ಕೇಳಿ, ಖರಹರಪ್ರಿಯ ರಾಗದಲ್ಲಿ, ಮತ್ತು ಖಂಡಚಾಪು ತಾಳದಲ್ಲಿ.

Advertisements

‘ಡಿ ವಿ ಜಿ’ ಅವರ ‘ಅಂತಃಪುರ ಗೀತೆಗಳು’ D.V.Gundappas Anthapura geetegalu(Part 1)

ಹಿನ್ನೆಲೆ : ರಾಜಧಾನಿಯ ಕನ್ನಡ ಸಂಘವಾದ ಕಾವೇರಿಯ ಆಶ್ರಯದಲ್ಲಿ 2004ರ ದೀವಳಿಗೆ ಮತ್ತು ಕನ್ನಡ ರಾಜ್ಯೋತ್ಸವಗಳನ್ನು ಆಚರಿಸಿದಾಗ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡಿವಿಜಿಯವರ ಅಂತಃಪುರ ಗೀತೆಗಳ ಬಹುಮಾಧ್ಯಮ ನಿರೂಪಣೆಯೂ ಒಂದು.

ಆ ಸಂದರ್ಭದಲ್ಲಿ ಸಂಗೀತ ವಿದುಷಿ ಉಷಾ ಚಾರ್‌ ಮತ್ತು ಎ.ಆರ್‌. ಚಾರ್‌ ದಂಪತಿಗಳು ಸೆರೆ ಹಿಡಿದ ಬೇಲೂರು ದೇವಾಲಯದ ಶಿಲಾಬಾಲಿಕೆಯರ ಸುಂದರ ಛಾಯಾಗ್ರಹಣಗಳ ಪ್ರದರ್ಶನದ ಜೊತೆ ಜೊತೆಗೇ ಉಷಾ ಅವರ ಸಂಗೀತ ನಿರ್ದೇಶನದಲ್ಲಿ ಅಂತಃಪುರ ಗೀತೆಗಳ ಗೋಷ್ಠಿಗಾನ ಸಹ ಏರ್ಪಾಡಾಗಿತ್ತು. ಆ ಕಾರ್ಯಕ್ರಮಕ್ಕೆ ಪೂರ್ವ ಪೀಠಿಕೆ, ಗೀತಗಳ ವ್ಯಾಖ್ಯಾನ ಮತ್ತು ಉಪಸಂಹಾರ ಮುಂತಾದ ಪ್ರಾತ್ಯಕ್ಷಿಕೆ ನಡೆಸಿಕೊಡುವ ಸದವಕಾಶ ನನ್ನದಾಗಿತ್ತು. ಅಂದು ಉಪಯೋಗಿಸಿದ ಪಠ್ಯಭಾಗವನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ.

ಡಾ. ಡಿ. ವಿ. ಗುಂಡಪ್ಪನವರು

D.V. Gundappa‘ಡಿ ವಿ ಜಿ,’ ಈ ಮೂರು ಅಕ್ಷರಗಳಿಂದ ಪ್ರಸಿದ್ಧರಾದ ಡಿ. ವಿ. ಗುಂಡಪ್ಪ ಅವರ ಹೆಸರನ್ನು ಕೇಳದ ಕನ್ನಡ ಸಾಹಿತ್ಯಪ್ರೇಮಿ ಬಹುಶಃ ಯಾರೂ ಇರಲಿಕ್ಕಿಲ್ಲ. ಪ್ರತಿಭೆ-ಪಾಂಡಿತ್ಯ, ಬದುಕು-ಬರಹ, ವೇದಾಂತ-ರಾಜಕಾರಣ, ಹೀಗೆ ಪರಸ್ಪರ ವಿರುದ್ಧವೆನಿಸುವ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಕ್ಷೇತ್ರದಲ್ಲೂ ವಿಕ್ರಮವನ್ನು ಸಾಧಿಸಿದ ಡಿವಿಜಿ ಕನ್ನಡದಲ್ಲಿ, ಕರ್ನಾಟಕದಲ್ಲಿ ಏಕಮೇವಾದ್ವಿತೀಯ. ಈ ಮಾತುಗಳು ‘ಎಚ್ಚೆಸ್ಕೆ’ ಅವರ ಒಂದು ಲೇಖನದಿಂದ ಉದ್ಧರಿಸಿದವು.

ಗುಂಡಪ್ಪನವರು ಜನಿಸಿದ್ದು 1,888ರಲ್ಲಿ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ಕೋಲಾರ ಜಿಲ್ಲೆಯ ಪ್ರಭಾವದಿಂದ ತೆಲುಗು, ಪೂರ್ವಜರ ನುಡಿಯಾದ್ದರಿಂದ ತಮಿಳು, ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದದ್ದರಿಂದ ಕನ್ನಡ, ಸ್ವಪ್ರಯತ್ನದಿಂದ ಸಂಸ್ಕೃತ, ಹಾಗೂ ತಾವು ಆರಿಸಿಕೊಂಡ ವೃತ್ತಿ, ಪತ್ರಿಕೋದ್ಯಮದ ಸಲುವಾಗಿ ಇಂಗ್ಲೀಷು, ಇವಿಷ್ಟೂ ಭಾಷೆಗಳಲ್ಲಿ ಅಸಾಮಾನ್ಯ ಪಾಂಡಿತ್ಯ ಗಳಿಸಿದ ನಿಸ್ಸೀಮರಿವರು.

ಸಾಹಿತಿಯಾಗಿ ಕವನ, ವಿಮರ್ಶೆ, ಜೀವನಚರಿತ್ರೆ, ಮುಂತಾಗಿ ಅನೇಕ ಪ್ರಕಾರಗಳಲ್ಲಿ ಇವರು ಕೃಷಿ ಮಾಡಿದ್ದಾರೆ. ವಸಂತಕುಸುಮಾಂಜಲಿ, ನಿವೇದನ, ಅಂತಃಪುರಗೀತೆ ಮುಂತಾದವು ಇವರ ಕವಿತಾಶಾಕ್ತಿಗೆ ನಿದರ್ಶನಗಳಾಗಿವೆ. ವಿಶ್ವವಿಖ್ಯಾತ ಓಮರ್‌ ಖಯ್ಯಾಮನ ‘ರುಬಾಯಿಯಾತ್‌’ನ ಕನ್ನಡ ಭಾಷಾಂತರ ‘ಉಮರನ ಒಸಗೆ’ ಅದು ಭಾಷಾಂತರವೇ ಅಲ್ಲವೇನೋ ಅನ್ನುವಷ್ಟು ಉತ್ಕೃಷ್ಟವಾಗಿದೆ. ಮೂಲಕೃತಿಯ ಸೊಗಸನ್ನು ಕನ್ನಡದ ಸೊಗಡಿಗೆ ಇಳಿಸಿ ಉಮರನ ಕಾವ್ಯಕ್ಕೆ ಮರುಜನ್ಮ ಕೊಟ್ಟು, ಉಮರನನ್ನು ಅಮರನನ್ನಾಗಿಸಿದ್ದಾರೆ. ‘ಮಂಕುತಿಮ್ಮನ ಕಗ್ಗ’ ಡಿವಿಜಿ ಯವರ ಮೇರುಕೃತಿ. ತಮ್ಮ ಜೀವನತತ್ತ್ವಗಳನ್ನು ಮಾರ್ಮಿಕವಾಗಿ ನಿರೂಪಿಸುವ ನಾಲ್ಕು ಸಾಲಿನ ಪದ್ಯಗಳ ಸಂಗ್ರಹ, ಇದು. ಇದರಲ್ಲಿನ ಪ್ರತಿಯಾಂದು ಪದ್ಯವೂ ಒಂದು ಆಣಿ ಮುತ್ತು.

1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಿವಿಜಿ ಅಧ್ಯಕ್ಷರಾಗಿದ್ದರು. 1961ರಲ್ಲಿ, ಡಿವಿಜಿಯವರ ಬಹುಮುಖ ಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಕೊಟ್ಟು ಸತ್ಕರಿಸಿತು. ‘ಶ್ರೀಮದ್‌ಭಗವದ್‌ಗೀತಾ ತಾತ್ಪರ್ಯ’ ಅಥವಾ ‘ಜೀವನಧರ್ಮಯೋಗ’ ಎಂಬ ಇವರ ಮಹತ್ವಪೂರ್ಣ ಉಪನ್ಯಾಸಗ್ರಂಥಕ್ಕೆ 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ದೊರಕಿತು. 1975ರಲ್ಲಿ ಕಣ್ಮರೆಯಾದ ಡಿವಿಜಿ ಇಂದಿಗೂ ಕನ್ನಡನಾಡಿನ ಜೀವನಾಡಿಯಾಗಿದ್ದಾರೆ. ಅವರೇ ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆಯ ಉಸಿರಾಗಿ ನಿರಂತರ ಸ್ಫೂರ್ತಿಯ ನೆಲೆಯಾಗಿದ್ದಾರೆ.

ಕನ್ನಡದಲ್ಲಿ ಅಮರವಾಗಿರುವ ಅಂತಃಪುರಗೀತೆಗಳು

ಡಿವಿಜಿಯವರ 59 ಗೀತೆಗಳ ಸಂಕಲನ, ‘ಅಂತಃಪುರಗೀತೆ’ ಹೊಯ್ಸಳ ಶಿಲ್ಪದ ಶಿಲಾಬಾಲಿಕೆಯರನ್ನು ಕುರಿತು ಬರೆದ ಮೊಟ್ಟ ಮೊದಲ ಕನ್ನಡ ಕವನ ಸಂಗ್ರಹ. ಇಲ್ಲಿನ ವಸ್ತು ಅನೇಕಬಾರಿ ಅನೇಕ ಕಲಾವಿದರ ಸಂಗೀತ, ನೃತ್ಯ, ಚಿತ್ರ ಮತ್ತು ಚಲನಚಿತ್ರ ಮಾಧ್ಯಮಗಳಿಗೆ ವಸ್ತುವಾಗಿದೆ. ಗುಂಡಪ್ಪನವರು ಸಂಗೀತ ರಸಿಕರಷ್ಟೇ ಅಲ್ಲ, ಸಂಗೀತ ಶಾಸ್ತ್ರವನ್ನು ಚೆನ್ನಾಗಿ ಬಲ್ಲವರಾಗಿದ್ದರು. ತಮ್ಮ ಗೀತೆಗಳಿಗೆ ತಕ್ಕ ರಾಗ ಮತ್ತು ತಾಳಗಳನ್ನು ಸಹ ತಮ್ಮ ಪುಸ್ತಕದಲ್ಲಿ ಅವರೇ ಸಲಹೆ ಮಾಡಿದ್ದಾರೆ.

ಹೊಯ್ಸಳ ಸಾಮ್ರಾಜ್ಯ ಶಿಲ್ಪಿಗಳ ತವರು

Halebeedu Templeದೇವರೊಬ್ಬನೇ, ನಾಮ ಹಲವು ಎಂಬ ತತ್ವವನ್ನ ಹಾಗೂ ಎಲ್ಲ ಧರ್ಮಗಳ ಸಾರವೂ ಒಂದೇ ಎಂಬ ಸಮನ್ವಯ ಭಾವವನ್ನ ಪರಿಪಾಲಿಸಿದ ಉದಾಹರಣೆಗಳು ಭಾರತದ ಚರಿತ್ರೆಯಲ್ಲಿ ಹಲವಾರಿವೆ. ಕ್ರಿಸ್ತಶಕ ಹನ್ನೊಂದರಿಂದ ಹದಿನಾಲ್ಕನೇ ಶತಮಾನದವರೆಗೆ ಕರ್ನಾಟಕವನ್ನಾಳಿದ ಒಂದು ರಾಜವಂಶ ಸರ್ವಧರ್ಮಸಮನ್ವಯದ ಜೊತೆಗೆ ಅತ್ಯುತ್ತಮ ಮಟ್ಟದ ಕಲಾಪ್ರೇಮವನ್ನು ಪ್ರತಿಪಾದಿಸಿ ಜಗದ್ವಿಖ್ಯಾತವಾಯಿತು.

ದೋರಸಮುದ್ರ ಎಂಬ ನಗರದ ಬಳಿ ಗುರುವೊಬ್ಬ ಶಿಷ್ಯರಿಗೆ ಪಾಠ ಹೇಳುತ್ತಿದ್ದಾಗ ಭಯಂಕರ ಹುಲಿಯಾಂದು ಆರ್ಭಟಿಸುತ್ತ ಅವರ ಮೇಲೆರಗಲು ಬಂತಂತೆ. ಆಗ ಗುರುವು, ರಾಜವಂಶದ ಕ್ಷತ್ರಿಯ ಶಿಷ್ಯನಾದ ಸಳನನ್ನು ಕುರಿತು, ‘ಹೊಯ್‌ ಸಳ’ ಸಳನೇ ಹೊಡೆ, ಎಂದು ಆಜ್ಞೆ ಇತ್ತಾಗ, ಒಂದು ಕ್ಷಣವೂ ಹಿಂದೆ-ಮುಂದೆ ನೋಡದೇ, ಕಠಾರಿಯಿಂದ ಹುಲಿಯನ್ನು ಹೊಯ್ದು ಎಲ್ಲರನ್ನೂ ರಕ್ಷಿಸಿದನಂತೆ. ಬಲ್ಲಾಳವಂಶದ ಆ ವೀರ ಕ್ಷತ್ರಿಯಕುಮಾರನೇ ಪ್ರಸಿದ್ಧ ಹೊಯ್ಸಳ ವಂಶದ ಮೂಲ ಪುರುಷನೆಂದು ಐತಿಹ್ಯವಿದೆ. ಅಂತೆಯೇ ಹುಲಿಯನ್ನು ಕಠಾರಿಯಿಂದ ಇರಿಯುತ್ತಿರುವ ಚಿತ್ರವೇ ಹೊಯ್ಸಳ ರಾಜವಂಶದ ಲಾಂಛನವಾಯಿತು. ಅಂದಿನ ಹೊಯ್ಸಳ ರಾಜಧಾನಿ, ದೋರಸಮುದ್ರ ಅಥವಾ ದ್ವಾರಸಮುದ್ರ, ಇಂದಿನ ಕರ್ನಾಟಕದ ಹಾಸನ ಜಿಲ್ಲೆಯ ಹಳೇಬೀಡು.

ಬಲ್ಲಾಳರಾಯ, ವೀರಬಲ್ಲಾಳ, ಬಿಟ್ಟಿದೇವ, ಬಿಟ್ಟಿಗ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟ ವಿಷ್ಣುವರ್ಧನ, ಹೊಯ್ಸಳವಂಶದ ಅತ್ಯಂತ ಬಲಶಾಲಿ, ಪರಾಕ್ರಮಿ ಮತ್ತು ಪ್ರಸಿದ್ಧನಾದ ಅರಸ. ಈತನಿಗೆ ಐದು ಅರಸಿಯರು, ಅವರಲ್ಲಿ, ಶಾಂತಲೆ ಮತ್ತು ಲಕ್ಷ್ಮಿ ಅವನ ಎರಡು ಕಣ್ಣುಗಳಂತೆ ಮೆರೆದು ಪಟ್ಟದರಸಿಯರಾದರು. ಶಾಂತಲೆ, ನೃತ್ಯವಿಶಾರದೆ. ಲಕ್ಷ್ಮಿ ವೀಣಾವಾದನಪಟು. ಜಿನಧರ್ಮ, ಶೈವಧರ್ಮ ಮತ್ತು ವೈಷ್ಣವಧರ್ಮಗಳನ್ನು ಸಮಾನವಾಗಿ ಕಂಡು ತನ್ನ ಜೀವನದಲ್ಲಿ ಮೂರೂ ಧರ್ಮಗಳನ್ನು ಕೆಲಕಾಲ ಅನುಸರಿಸಿ ಬಾಳಿದ ಸರ್ವಧರ್ಮಸಮನ್ವಯಕಾರಿ, ವಿಷ್ಣುವರ್ಧನ. ಕ್ಷಾತ್ರಧರ್ಮಕ್ಕನುಗುಣವಾಗಿ ಅನೇಕ ರಾಜ್ಯಗಳನ್ನು ಆಕ್ರಮಿಸಿ ಮಹಾಪರಾಕ್ರಮಿ ಎನಿಸಿಕೊಂಡರೂ, ಅವನು ಶಾಂತಿಪ್ರಿಯ., ಧರ್ಮಭೀರು, ಭಗವದ್ಭಕ್ತ ಮತ್ತು ಕಲೋಪಾಸಕ.

ಸಂಗೀತ-ನೃತ್ಯ ಮತ್ತು ವಿವಿಧ ಕಲೆಗಳಲ್ಲಿ ತೀವ್ರ ಆಸಕ್ತಿ ಉಳ್ಳ ರಾಣಿಯರ ಕನಸುಗಳನ್ನು ನನಸಾಗಿಸಲು, ದೇಶವಿದೇಶಗಳಿಂದ ಬಂದು ನೆಲೆಸಿದ ಅನೇಕ ನಿಪುಣ ಶಿಲ್ಪಿಗಳ ತವರು ಅಂದಿನ ಹೊಯ್ಸಳ ಸಾಮ್ರಾಜ್ಯ. ರಾಜಾಶ್ರಯ ಮತ್ತು ರಸಿಕ ಪ್ರಜೆಗಳ ಪ್ರೋತ್ಸಾಹದಿಂದ ಕರ್ನಾಟಕದ ಮೂಲೆ-ಮೂಲೆಗಳಲ್ಲಿ ಕಲ್ಲರಳಿ ಹೂವಾಯಿತು, ಕಲ್ಲು ಹಾಡಿ ನರ್ತಿಸಿತು, ಕಲ್ಲಿನಲ್ಲಿ ಕಾವ್ಯರಚನೆಯಾಯಿತು, ಭಾರತೀಯ ಶಿಲ್ಪಶಾಸ್ತ್ರದ ಸುವರ್ಣ ಅಧ್ಯಾಯವೊಂದು ಬರೆಯಲ್ಪಟ್ಟಿತು.

ಅಮರ ಶಿಲ್ಪಿ ಜಕ್ಕಣ, ಅವನ ಮಗ ಡಂಕಣ, ಹಾಗೂ ಇತರ ಶಿಲ್ಪಚತುರರ ನೈಪುಣ್ಯದಿಂದ, ಜಗದ್‌ಪ್ರಖ್ಯಾತವಾದ ಬೇಲೂರ ಚನ್ನಕೇಶವ ಅಥವಾ ಕಪ್ಪೆಚನ್ನಿಗರಾಯನ ದೇಗುಲ ಮತ್ತು ದೋರಸಮುದ್ರದ ಯುಗಳ ಶೈವಾಲಯ ಶಾಂತಲೇಶ್ವರ ಮತ್ತು ಹೊಯ್ಸಳೇಶ್ವರ ದೇವಾಲಯಗಳು ಮೇಲೆದ್ದವು. ಅದಾದಮೇಲೆ ಕಟ್ಟಿದ ಮತ್ತೊಂದು ಭವ್ಯ ಕಲಾಮಂದಿರ, ಸೋಮನಾಥಪುರದ ಕೇಶವ ದೇವಾಲಯ. ಈ ದೇವಾಲಯದ ಸೌಂದರ್ಯ ಎಷ್ಟಿತ್ತೆಂದರೆ, ದೇವತೆಗಳೂ ಅಸೂಯೆಪಟ್ಟು, ಅದನ್ನು ದೇವಲೋಕಕ್ಕೆ ಹಾರಿಸಿಕೊಂಡು ಹೋಗಬಯಸಿದರೆಂಬ ದಂತಕಥೆಯೂ ಹುಟ್ಟಿಕೊಂಡಿತು!

ನೃತ್ಯಪಟು ಶಾಂತಲೆ, ಪಟ್ಟದರಸಿಯಾದರೂ ಇತರ ಆಸ್ಥಾನ ನರ್ತಕಿಯರೊಂದಿಗೆ ಶಿಲ್ಪಿಗಳಿಗೆ ರೂಪದರ್ಶಿಯಾಗಿ ನೃತ್ಯಭಂಗಿಗಳನ್ನು ಮಾಡಿ ತೋರಿಸುತ್ತಿದ್ದಳೆಂದರೆ, ಅಂದಿನ ಕಲಾಪ್ರೇಮ ಮತ್ತು ಕಲೋಪಾಸಕತೆಯಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇಂದು ನಾವು ಪ್ರಸ್ತುತ ಪಡಿಸುತ್ತಿರುವ ಸಂಗೀತರೂಪಕದ ವಸ್ತು ಹೊಯ್ಸಳ ಸಾಮ್ರಾಜ್ಯದ ಶಿಲ್ಪಗಳಿಂದ ಸ್ಫೂರ್ತಿಗೊಂಡು ಜನಿಸಿದ ಕಾವ್ಯವೊಂದರ ಗೇಯಸ್ವರೂಪ.

ಬೇಲೂರಿನ ಭವ್ಯ ದೇಗುಲ

Beluru Channakeshava Templeಬೇಲೂರು ಚನ್ನಕೇಶವ ದೇವಾಲಯ 32 ಭುಜಗಳುಳ್ಳ ನಕ್ಷತ್ರಾಕಾರದ ತಳಪಾಯದ ಮೇಲೆ ನಿಂತಿರುವ ಒಂದು ಭವ್ಯ ಕಟ್ಟಡ. ಗರ್ಭಗೃಹದಲ್ಲಿ ಚನ್ನಕೇಶವ, ಅವನ ಸುತ್ತ ಜಾಲಂಧ್ರಗಳು. ಒಳಗೆಲ್ಲ ಕಂಬಗಳು, ಕಂಬಗಳಮೇಲೆಲ್ಲ ಕುಸುರಿ ಕೆಲಸ. ಹೊರಗಿನ ಪ್ರಾಕಾರದ ಮೇಲೆ ಭಗವದ್‌ಸೃಷ್ಟಿಯಲ್ಲಿರುವ ಅನೇಕ ಸಸ್ಯವರ್ಗ, ಪಕ್ಷಿವರ್ಗ, ಪ್ರಾಣಿವರ್ಗ, ಮನುಷ್ಯವರ್ಗ. ಸಣ್ಣ ನೊಣದಿಂದ ಹಿಡಿದು, ಹಲ್ಲಿ, ಹಾವು, ಚೇಳು, ಆಡು, ಜಿಂಕೆ, ಸಿಂಹ, ಹುಲಿ, ಆನೆ, ಕುದುರೆ, ಕಪಿ, ಮಾನವ, ರಾಜ, ನೌಕರ, ಸೈನಿಕ, ಗಂಡು, ಹೆಣ್ಣು, ಏನಿಲ್ಲ, ಏನುಂಟು? ಎಲ್ಲವೂ ಭಗವಂತನ ಸುತ್ತ ಪ್ರದಕ್ಷಿಣೆ ಹಾಕುತ್ತಿರುವಂತೆ ಭಾಸವಾಗುವುದು. ಇವೆಲ್ಲ ಕಣ್ಣಿಗೆಟಕುವ ಎತ್ತರದಲ್ಲಿದ್ದರೆ, ಮೇಲೆ, ಮೂಲೆಮೂಲೆಗಳಲ್ಲಿ, ಶಿಲ್ಪಿಗಳ ಕೈಚಳಕದಿಂದ ಜೀವತಳೆದ ಸ್ತ್ರೀಸೌಂದರ್ಯದ ವೈವಿಧ್ಯ. ಪದ್ಮಿನಿ, ಕುಮುದಿನಿ, ಅಶ್ವಿನಿ, ಹಸ್ಥಿನಿಗಳ ಸೌಂದರ್ಯದ ಸೊಬಗು. ವಿವಿಧಭಂಗಿಗಳಲ್ಲಿ ನಿಂದಿರುವ ಈ ಶಿಲಾಬಾಲಿಕೆಯರೊಂದಿಗೆ ಕವಿ ನಡೆಸುವ ಏಕಮುಖಸಂವಾದ ಸಲ್ಲಾಪಗಳೇ ಅಂತಃಪುರಗೀತೆಗಳ ಸಾರ.

ಚೆನ್ನಕೇಶವನೆನ್ನಿ, ಚೆಲುವನಾರಾಯಣನೆನ್ನಿ, ಅವನು ಸೃಷ್ಟಿಕರ್ತ, ವಿಶ್ವರೂಪೀ ಭಗವಂತ. ಅವನ ಸುತ್ತಲೂ ಅವನೇ ಸೃಷ್ಟಿಸಿದ ಮಾಯಾಜಾಲ. ಸೌಂದರ್ಯವೂ ಅವನ ಸೃಷ್ಟಿಯ ಒಂದು ರಹಸ್ಯವೇ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಭಗವಂತ ಶಿವಸ್ವರೂಪ, ಆ ಶಿವಸ್ವರೂಪದ ದರ್ಶನವೇ ಸತ್ಯದ ದರ್ಶನ. ಆ ಸತ್ಯದರ್ಶನದ ಅನುಭವವೇ ಸೌಂದರ್ಯದ ಅನುಭವ ಮತ್ತು ಅನುಭಾವ. ಇವೆಲ್ಲದರ ಸಮಗ್ರಭಾವವೇ ‘ಸತ್ಯಮ್‌-ಶಿವಮ್‌-ಸುಂದರಮ್‌’ ಎಂಬ ಮಹಾವಿಷ್ಣುಸ್ವರೂಪ.

ಈ ಮಹಾವಾನುಭವದ ತಾತ್ಪರ್ಯವನ್ನು ಅರಿತೇ ಒಬ್ಬ ಉತ್ತಮ ಕಲಾಕಾರ ಕಲಾಸೃಷ್ಟಿ ಮಾಡುತ್ತಾನೆ. ಸೌಂದರ್ಯವೇ ಅವನ ಸಂದೇಶವಾಗುತ್ತದೆ. ಹೀಗಾಗಿ, ಭೌತಿಕ ಸೌಂದರ್ಯ ಒಂದು ಸ್ತರದಲ್ಲಿ ಕಂಡುಬಂದರೆ, ಮತ್ತೊಂದು ಸ್ತರದಲ್ಲಿ ಆಧ್ಯಾತ್ಮಿಕ ಸೌಂದರ್ಯ ದರ್ಶನವಾಗುತ್ತದೆ. ಹೊರಗಣ್ಣಿನ ದೃಷ್ಟಿಗೆ ಗೋಚರವಾಗುವುದು ಒಂದಾದರೆ, ಮತ್ತೊಂದು ಒಳಗಣ್ಣಿನ ಊಹೆಗೆ ಮಾತ್ರ ನಿಲುಕುವಂಥದ್ದು. ಡಿವಿಜಿ ಯವರು ಈ ತತ್ತ್ವವನ್ನು ವ್ಯಾಖ್ಯಾನಿಸುವಾಗ ಬೇಲೂರು ಮದನಿಕೆಯರ ಪ್ರತಿಯಾಂದು ಹಾವ-ಭಾವ-ಭಂಗಿಗಳನ್ನೂ ಆ ಕೇಶವೇಶನಿಗೇ ಅರ್ಪಿಸಿ ಧನ್ಯರಾಗುತ್ತಾರೆ. ಈ ಮದನಿಕೆಯರಾದರೋ, ಒಮ್ಮೆ ನಗು, ಒಮ್ಮೆ ಅಳು, ಒಮ್ಮೆ ಭಯ, ಒಮ್ಮೆ ಭ್ರಾಂತಿ, ಒಮ್ಮೆ ಕೋಪ, ಒಮ್ಮೆ ಶಾಂತಿ ಯನ್ನು ಪ್ರದರ್ಶಿಸುತ್ತಾರೆ. ಒಮ್ಮೊಮ್ಮೆ ಆತ್ಮರತಿಯಲ್ಲಿ ತೊಡಗಿ ತಮ್ಮ ಲಾವಣ್ಯಕ್ಕೆ ತಾವೇ ಮಾರುವೋಗುತ್ತಾರೆ, ತಮ್ಮ ಬೆಡಗಿನಿಂದ ತಾವೇ ಬೆರಗಾಗುತ್ತಾರೆ.

ಇಂದಿನ ಶ್ರೇಷ್ಠ ನರ್ತಕ/ನರ್ತಕಿಯರೂ ನೋಡಿ ಕಲಿಯಬಹುದಾದಂಥ ನೃತ್ಯ ಭಂಗಿಗಳು ಬೇಲೂರು ಹಳೇಬೀಡುಗಳ ಭಿತ್ತಿಗಳ ಮೇಲೆ ಕೆತ್ತಲ್ಪಟ್ಟಿವೆ ಎಂದರೆ ಕನ್ನಡನಾಡಿನಲ್ಲಿ ಭರತನಾಟ್ಯ ಸುಮಾರು ಸಾವಿರವರ್ಷಗಳ ಮುಂಚೆಯೇ ಯಾವ ಮಟ್ಟವನ್ನು ಮುಟ್ಟಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ. ವೀಣಾ-ವೇಣು-ಢಕ್ಕೆ-ಢಮರು ಮುಂತಾದ ವಾದ್ಯತರಂಗಗಳ ತಾಳವಿಲಾಸವನ್ನು ಪ್ರದರ್ಶಿಸುತ್ತ, ಹೊರನೋಟಕ್ಕೆ ರಸಿಕರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದರೂ, ಈ ಶಿಲಾಬಾಲಿಕೆಯರ ಅಂತಿಮ ಗುರಿ ಕೇಶವೇಶನ ಹೃದಯಾಂತರಂಗವೇ ಆಗಿರಲಿ ಎಂಬ ಆಶಯವನ್ನು ಕವಿ ಮತ್ತೆ ಮತ್ತೆ ವ್ಯಕ್ತಪಡಿಸುತ್ತಾರೆ, ಈ ಗೀತೆಗಳಲ್ಲಿ. ಇಡೀ ವಿಶ್ವವೇ ಒಂದು ಅಂತಃಪುರ, ಅಲ್ಲಿ ಭಕ್ತರೆಲ್ಲ ಪ್ರೇಮಿಗಳು, ಅವರ ಪ್ರೇಮಕ್ಕೆ ಒಬ್ಬನೇ ಪಾತ್ರ, ಅವನೇ ಚೆನ್ನಕೇಶವ. ಇದು ಡಿವಿಜಿ ಯವರು ಕಂಡ ಹೊಯ್ಸಳ ಶಿಲ್ಪದ ಸೂಚ್ಯವೇದಾಂತ.

‘ಆಧುನಿಕ ಕನ್ನಡ ಸಣ್ಣಕತೆಗಳ ಜನಕ’ – ಮಾಸ್ತಿ ವೆಂಕಟೇಶ ಅಯ್ಯಂಗಾರ್‌ Masti The Father of Kannada Short Stories

ಜ್ಞಾನಪೀಠ ಪ್ರಶಸ್ತಿಯು ಭಾರತೀಯ ಸಾಹಿತ್ಯಪ್ರಪಂಚದ ಅತ್ಯುನ್ನತ ಗೌರವದ ಕುರುಹು. ಅಂಥ ಪ್ರಶಸ್ತಿಯನ್ನು ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಬಗ್ಗೆ ಮಾತನಾಡುವುದೇ ಒಂದು ಹೆಮ್ಮೆಯ ವಿಷಯ.

‘ಆಧುನಿಕ ಕನ್ನಡ ಸಣ್ಣಕತೆಗಳ ಜನಕ’ ಎಂಬ ಬಿರುದುಗಳನ್ನು ಪಡೆದ ಈ ಮಹಾನುಭಾವರ ಕಾವ್ಯನಾಮ, ‘ಶ್ರೀನಿವಾಸ.’ ಆದರೂ, ‘ಮಾಸ್ತಿ’ ಎಂಬ ಅಂಕಿತದಿಂದಲೇ ಅವರು ಪ್ರಸಿದ್ಧ. ‘ಮಾಸ್ತಿ ಕನ್ನಡದ ಆಸ್ತಿ’ ಎಂಬುದು ಆಗಾಗ್ಗೆ ಕೇಳಿಬರುವ ಮಾತು, ಆದರೆ, ಅವರು ಕೇವಲ ಕನ್ನಡದ ಆಸ್ತಿ ಮಾತ್ರವಲ್ಲ, ಇಡೀ ಭಾರತೀಯ ಸಾಹಿತ್ಯಲೋಕದ ಒಂದು ದೊಡ್ಡ ಆಸ್ತಿ ಎಂಬುದನ್ನು ನಾವು ಗಮನಿಸಬೇಕು. ಕಾದಂಬರಿ, ನಾಟಕ, ಕಾವ್ಯ ಮತ್ತು ಪ್ರಬಂಧಗಳನ್ನೂ ಬರೆದ ಮಾಸ್ತಿ ಎಲ್ಲಕ್ಕಿಂತ ಮೊದಲು ಕತೆಗಾರರು. ಸುಮಾರು ಏಳು ದಶಕಗಳ ಕಾಲ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದ ಮಾಸ್ತಿ, ಕನ್ನಡ ಕತೆಗಳಿಗೆ ಒಂದು ಸ್ಥಾನವನ್ನು ಕಲ್ಪಿಸಿಕೊಟ್ಟ ಉದ್ದಾಮ ಲೇಖಕ.

ಮಾಸ್ತಿಯವರ ಶೈಲಿ ನೇರ, ಸರಳ, ಆತ್ಮೀಯ, ಸ್ವಾರಸ್ಯಕರ ಮತ್ತು ಸ್ವಾನುಭವದಿಂದ ಶ್ರೀಮಂತ. ಅವರು ಮೈಸೂರು [^] ಸಂಸ್ಥಾನದ ಸರ್ಕಾರಿ ಆಡಳಿತವರ್ಗದ ಪ್ರತಿನಿಧಿಯಾಗಿ ನೂರಾರು ಹಳ್ಳಿಗಳನ್ನು, ಪಟ್ಟಣಗಳನ್ನು ಹತ್ತಿರದಿಂದ ನೋಡಿದವರು. ಅಲ್ಲಿನ ವಿವಿಧ ಮಟ್ಟದ ಸಾಧಾರಣ ಜನರೊಂದಿಗೆ ದಿನನಿತ್ಯದ ಸಂಪರ್ಕವನ್ನು ಇಟ್ಟುಕೊಂಡಿದ್ದವರು.

ಸಮಾಜದ ವಿವಿಧಶ್ರೇಣಿಗಳ, ಅಂದರೆ, ಬಡವ-ಶ್ರೀಮಂತ, ವಿದ್ಯಾವಂತ-ಅನಕ್ಷರಸ್ತ, ರೈತಾಪಿ ಜನ, ಅಧಿಕಾರಿವರ್ಗ, ಹೀಗೆ ಜನಸಾಮಾನ್ಯರ ಮತ್ತು ಅಸಾಮಾನ್ಯರ ಬದುಕಿನ ನೋವು-ನಲಿವುಗಳನ್ನು ಕಣ್ಣಾರೆ ಕಂಡಿದ್ದರು. ಇಂಥ ವಿಶಾಲ ಅನುಭವವುಳ್ಳ ಲೇಖಕರು ಸೃಷ್ಟಿಸುವ ಪಾತ್ರಗಳಲ್ಲಿ ವೈವಿಧ್ಯತೆ ಇರುತ್ತದೆ. ಅವರು ಸೃಷ್ಟಿಸುವ ಪಾತ್ರಗಳು ಕೇವಲ ಕಾಲ್ಪನಿಕ ಪಾತ್ರಗಳಷ್ಟೇ ಆಗದೇ ಸೃಜನಶೀಲತೆಯ ಕುರುಹಾಗಿ, ಜೀವಂತವಾಗಿ ಕಣ್ಮುಂದೆ ಬರುವ ಪಾತ್ರಗಳು. Masti Venkatesha Iyengar

ಮಾಸ್ತಿಯವರ ಕತೆಗಳ ವ್ಯಾಪ್ತಿಗೆ ಮತ್ತು ಕತೆಗಳಲ್ಲಿ ಅವರು ಸೃಷ್ಟಿಸುವ ಪಾತ್ರ ವೈವಿಧ್ಯತೆಗೆ ಮಿತಿ ಎಂಬುದೇ ಇಲ್ಲವೇನೊ. ಅವರ ಲೇಖನಿಗೆ ಸಿಕ್ಕ ಕತೆಗಳು ನೂರಾರು. ಅವರು ಕಲ್ಪಿಸಿದ ನೂರಾರು ಪಾತ್ರಗಳು ಒಂದಕ್ಕಿಂತ ಒಂದು ಭಿನ್ನ.

ಅವರು ರಾಮಾಯಣ ಮಹಾಭಾರತಗಳಂಥ ಮಹಾಕಾವ್ಯಗಳಿಂದ ಯಾವುದೋ ಒಂದು ತುಣುಕನ್ನು ಸ್ವತಂತ್ರ ಕತೆಯಂತೆ ಬೆಳೆಸಿಬಿಡುತ್ತಾರೆ. ಅಷ್ಟೇ ಸೌಲಭ್ಯದಿಂದ, ಶೇಕ್ಸ್‌ಪಿಯರನ ನಾಟಕದ ಭಾಗವೊಂದನ್ನೂ ಸ್ವತಂತ್ರ ಕತೆಯಂತೆ ಹೇಳಿಬಿಡುತ್ತಾರೆ. ತಮ್ಮ ಕಣ್ಮುಂದೆ ನಡೆಯುವ ಒಂದು ಘಟನೆಯನ್ನಂತೂ ಸರಿಯೇ ಸರಿ, ಓದುಗನ ಕಣ್ಣಿಗೆ ಕಟ್ಟುವಂತಹ ಕತೆಯಾಗಿಸುತ್ತಾರೆ.

ನಾನು ನಿರೂಪಣೆಗಾಗಿ ಎತ್ತಿಕೊಂಡ ಮಾಸ್ತಿಯವರ ಸಣ್ಣ ಕತೆಗಳ ಶ್ರೇಣಿಯ ಹದಿನೈದನೇ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಅದರಲ್ಲಿ, ಮೇಲೆ ಹೇಳಿದ ಗುಂಪಿಗೆ ಸೇರುವ, ಅಂದರೆ, ಪುರಾಣದ ಮೂಲದ, ಇತಿಹಾಸದ ಮೂಲದ, ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಕತೆಗಳಿವೆ. ಹಲವು ಉದಾಹರಣೆಗಳನ್ನು ನೋಡೋಣ, ಹಾಗೇ ಆ ಸಂಕಲನದ ಒಂದು ಕತೆಯನ್ನು ಒಂದಿಷ್ಟು ಚರ್ಚಿಸೋಣ.

ಕತೆಗಳ ಮೂಲಸ್ಥಾನ ನಮ್ಮ ಪುರಾಣಗಳಲ್ಲಿದ್ದಾಗ, ಅಂಥ ಕತೆಗಳು, ನಮಗೆ ಚಿರಪರಿಚಿತವಾದ ಭಾರತದಲ್ಲೇ ನಡೆದಿದ್ದಿರಬಹುದಾದವು. ಅವು ನಡೆದು ಸಹಸ್ರಾರು ವರ್ಷಗಳೇ ಕಳೆದಿವೆ, ಅದರೂ ಇಂದಿನ ಚೌಕಟ್ಟಿನಲ್ಲೂ ಅವು ಅರ್ಥಪೂರ್ಣವಾಗುವಂತೆ ಅವರು ಅವನ್ನು ಪುನರ್ನಿಮಾಣ ಮಾಡುತ್ತಾರೆ. ಅದರ ಆಳವನ್ನು ಹುಡುಕುತ್ತಾರೆ, ಹೊಸದಾಗಿ ಅರ್ಥೈಸುತ್ತಾರೆ. ಮಾಸ್ತಿಯವರ ಲೇಖನಿಯಲ್ಲಿ ಅವು ಅವರದ್ದೇ ಸ್ವಂತ ಕತೆಯಾಗುತ್ತವೆ. ಇಂಥ ಕತೆಗೆ ‘ಶ್ರೀ ಕೃಷ್ಣನ ಅಂತಿಮ ಸಂದರ್ಶನ’ ಮತ್ತು ‘ಕುಚೇಲನ ಮರಿಮಗ’ ಒಳ್ಳೆಯ ಉದಾಹರಣೆಗಳು.

ಮಾಸ್ತಿಯವರ ಇನ್ನೊಂದು ಬಗೆಯ ಕತೆಗಳು ದೂರದ ಯೂರೋಪಿನಲ್ಲೆಲ್ಲೋ ನೂರಾರು ವರ್ಷಗಳ ಹಿಂದೆ ನಡೆದವು. ಪರಕೀಯನೊಬ್ಬ, ನಮಗೆ ಹೊರಗಿನದೆನಿಸುವ ಪರಿಸರದಲ್ಲಿ ಬರೆದದ್ದು, ನಮಗೆ ಪರಕೀಯವಾದ ಭಾಷೆಯಲ್ಲಿ ಬರೆದದ್ದು, ನಮಗೆ ಹತ್ತಿರವಲ್ಲದ ಸಾಮಾಜಿಕ, ರಾಜಕೀಯ, ಮತ್ತು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಓದಿದ ಕತೆಯೋ ನಾಟಕವೋ ಇವರಿಗೆ ಸ್ಫೂರ್ತಿಯಾಗುತ್ತದೆ. ‘ಲಿಯರ್‌ ದೊರೆಯ ಮಗಳುದಿರು’ ಮತ್ತು ‘ಪೊಲೋನಿಯಾ ಹೇಳಿಕೆ’ ಉತ್ತಮ ಉದಾಹರಣೆಗಳು.

ಕನ್ನಡ ನಾಡಿನ ಇತಿಹಾಸದ ಪುಟಗಳಿಂದಲೂ ಇವರು ಅತ್ಯಂತ ಸಫಲವಾಗಿ ಕತೆಗಳನ್ನು ಸೃಷ್ಟಿಸಿದ್ದಾರೆ. ಇದಕ್ಕೆ ಉದಾಹರಣೆ, ‘ದೋರನ ಕಂಬಳ’ ಎಂಬ ಇವರ ಇಂಥ ಒಂದು ಕತೆ. ಬ್ರಿಟಿಷರು ಇಂದಿನ ಚೆನ್ನೈ (ಅಂದಿನ ಚೆನ್ನ ಪುರಿ) ಬಂದರನ್ನು ಯಾವ ಯುದ್ಧವನ್ನೂ ಮಾಡದೇ ಹೇಗೆ ವಿಜಯನಗರದ ಅಳಿದುಳಿದ ರಾಜವಂಶದಿಂದ ಅಪಹರಿಸಿದರು ಎಂಬ ದಾರುಣ ಕತೆಯನ್ನು ಓದಿದಾಗ ಇಡೀ ಭಾರತದ ಚರಿತ್ರೆಯೇ ಕಣ್ಮುಂದೆ ಸುಳಿಯುತ್ತದೆ.

ಮೇಲಿನ ಬಗೆಯ ಕತೆಗಳೇ ಅಲ್ಲದೇ, ನಮಗೆ ತೀರ ಹತ್ತಿರದ, ಇಂದಿನ ವಿಷಯಗಳನ್ನೂ ಇವರು ಕತೆಯಾಗಿಸುತ್ತಾರೆ. ರೈಲಿನಲ್ಲಿ ಹೋಗುವಾಗ ನಡೆದೆಯಬಹುದಾದ ಘಟನೆಯಿಂದ ಇವರ ಕತೆ ಹುಟ್ಟಬಹುದು, ಬೆಳೆಯಬಹುದು. ಇದು ಅವರ ವರ್ತಮಾನ ಮತ್ತು ಕಣ್ಣಾರೆ ಕಂಡ, ಕಿವಿಯಾರೆ ಕೇಳಿದ ಸಂಗತಿಗಳ ಸರಮಾಲೆ. ‘ಒಬ್ಬ ತಾಯಿ, ಮಗ’ ಎಂಬ ಇವರ ಕತೆಯಾಂದರಲ್ಲಿ ಕ್ರೈಸ್ತ ಪಾದ್ರಿಗಳು ಹೇಗೆ ಅವಿದ್ಯಾವಂತ ಬಡವರಿಗೆ ಆಮಿಷಗಳನ್ನೊಡ್ಡಿ ಧರ್ಮಪರಿವರ್ತನೆಯಲ್ಲಿ ತೊಡಗುತ್ತಾರೆ ಎಂಬುದನ್ನು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.

ಪುರಾಣ ಇತಿಹಾಸಗಳಿಂದ ಬಂದ ಭೂತಕಾಲದ ಕತೆಗಳು ಹಲವಾದರೆ, ವರ್ತಮಾನದ ಕತೆಗಳು ಹಲವು ಹತ್ತು. ಸ್ಫೂರ್ತಿಯ ನೆಲೆ ಎಲ್ಲೇ ಇದ್ದರೂ, ಅವರು ಕತೆ ಹೇಳುವ ಶೈಲಿ ಮಾತ್ರ ನೇರ, ಸರಳ ಮತ್ತು ಅಗತ್ಯಕ್ಕೆ ತಕ್ಕಷ್ಟು ಮಾತ್ರ ವರ್ಣನೆಗಳಿಂದ ಕೂಡಿ ಅತ್ಯಂತ ಸಹಜವಾಗಿ ತೋರುವ ಕಥಾನಕ. ಇಂಥ ಕತೆ ಹೇಳುವ ನೈಪುಣ್ಯ ಮಾಸ್ತಿಯವನ್ನು ಬಿಟ್ಟರೆ ಅವರ ಕಾಲದ ಕತೆಗಾರರಲ್ಲಿ ಮತ್ಯಾವ ಬರಹ [^]ಗಾರನಿಗೂ ದಕ್ಕಿರಲಿಲ್ಲವೆಂದೇ ನನ್ನ ನಂಬಿಕೆ.

ಮಾಸ್ತಿಯವರ ವಿದ್ಯಾಭ್ಯಾಸದ ಫಲವಾಗಿ ಅವರಿಗೆ ಇಂಗ್ಲಿಷ್‌ ಭಾಷೆಯ ಮೇಲಿನ ಪ್ರಭುತ್ವ ಇತ್ತು. ಇಂಗ್ಲಿಷ್‌ ಅಧಿಕಾರಿಗಳ ಹತ್ತಿರದ ಪರಿಚಯ, ಇಂಗ್ಲೆಂಡ್‌ ದೇಶದ ಚರಿತ್ರೆಯ ಹಾಗೂ ಬ್ರಿಟಿಷರು ಭಾರತವನ್ನು ಆಳುವಾಗ ಅಳವಡಿಸಿಕೊಂಡ ರೀತಿನೀತಿಗಳೆಲ್ಲ ಅವರಿಗೆ ಕರತಲಾಮಲಕ. ಮನೆಯಲ್ಲಿನ ಸಂಪ್ರದಾಯ ಮತ್ತು ಸುಸಂಸ್ಕೃತ ಪರಿಸರದಿಂದಾಗಿ, ಭಾರತೀಯ ಸಂಸ್ಕೃತಿಯ, ಹಿಂದೂ ಧರ್ಮಶಾಸ್ತ್ರಗಳ ಮತ್ತು ಪುರಾಣ-ಇತಿಹಾಸಗಳ ಆಳವಾದ ಅರಿವು ಅವರಿಗೆ ಚಿಕ್ಕಂದಿನಿಂದಲೇ ಆಗಿತ್ತು. ಈ ರೀತಿ ಬೆಳೆದ ವ್ಯಕ್ತಿ ಮನುಷ್ಯನನ್ನು ನೋಡುವ ಕ್ರಮದಲ್ಲೇ ಒಂದು ವೈಶಿಷ್ಟ್ಯ ಇರುತ್ತದೆ.

‘ಶ್ರೀ ಕೃಷ್ಣನ ಅಂತಿಮ ಸಂದರ್ಶನ’ ಎಂಬುದು ಮಹಾಭಾರತದ ಕೊನೆಯ ಭಾಗದಿಂದ ಬಂದ ಕತೆ. ಇದರಲ್ಲಿ ಕೃಷ್ಣನ ಕೊನೆ ಅಂದರೆ, ಎಲ್ಲ ಸಾಧಾರಣ ಮನುಷ್ಯರಿಗೂ ಬರುವಂತೆ, ಕೃಷ್ಣ ಸಹ ತನ್ನ ದೇಹವನ್ನು ತ್ಯಾಗಮಾಡುವ ಸನ್ನಿವೇಶ. ಯುಧಿಷ್ಠಿರನಿಗೆ ಕನಸಿನಲ್ಲಿ ಕಾಣಿಸಿಕೊಂಡ ಕೃಷ್ಣ ತನ್ನ ಅಂತ್ಯದ ಬಗ್ಗೆ ಸೂಚನೆ ನೀಡುತ್ತಾನೆ, ಆ ಕಾರಣದಿಂದ ಚಿಂತೆಗೊಳಗಾದ ಯುಧಿಷ್ಠಿರ, ತಮ್ಮ ಅರ್ಜುನನನ್ನು ಕೃಷ್ಣನ ಕ್ಷೇಮಸಮಾಚಾರ ತಿಳಿದು ಬರಲು ಹಸ್ತಿನಾವತಿಯಿಂದ ದ್ವಾರಕೆಗೆ ಕಳಿಸುತ್ತಾನೆ. ಅರ್ಜುನ ಕೃಷ್ಣನನ್ನು ಕಂಡು ಹಿಂದಿರುಗುವ ವೇಳೆಗೆ ಕೃಷ್ಣನ ದೇಹಾಂತ್ಯ ವಾಗುತ್ತದೆ. ಇದು ಕಥಾಸಾರಾಂಶ. ಈ ಸಣ್ಣ ಕತೆಯಲ್ಲಿ ಮಾಸ್ತಿಯವರ ಜೀವನದೃಷ್ಟಿಯನ್ನು ಹುಡುಕುತ್ತ ಹೋದರೆ, ನಮಗೆ ಸಾಕಷ್ಟು ವಿಚಾರಗ್ರಹಣೆ ಆದೀತು.

ಉದಾಹರಣೆಗೆ, ಇಲ್ಲಿ ಹಿನ್ನೆಲೆಯಲ್ಲಿ ಬರುವ ಬಲರಾಮನ ಪಾತ್ರವನ್ನೇ ತೆಗೆದುಕೊಳ್ಳಿ. ಬಲರಾಮನ ದೌರ್ಬಲ್ಯಗಳಲ್ಲಿ ಕುಡಿತವೂ ಒಂದು, ಇದನ್ನು ಕಂಡು ಅನುಸರಿಸಿದ ಯಾದವರ ಕಿರಿಯ ಪೀಳಿಗೆ, ಮದ್ಯಪಾನದ ಅತಿಯಿಂದಾಗಿ ದಾರಿಗೆಡುತ್ತಾರೆ, ಅಂತಃಕಲಹದಿಂದ ಇಡೀ ವಂಶವೇ ನಿರ್ವಂಶವಾಗುತ್ತದೆ. ತನ್ನ ಕಣ್ಮುಂದೇ ನಡೆಯುವ ಕುಲನಾಶವನ್ನು ಕಂಡು ದುಃಖಿಸಿ ಕೃಷ್ಣ ತನ್ನ ಜೀವನವನ್ನು ತೊರೆಯುತ್ತಾನೆ. ಇದು ಕತೆಯ ಒಳಗಿನ ಮುಖ್ಯ ಕತೆ.

ಈ ಕತೆಯ ಪಾತ್ರಗಳ ವೈಶಿಷ್ಟ್ಯವೆಂದರೆ, ಇವರೆಲ್ಲ ಮನುಷ್ಯರೇ. ಕೃಷ್ಣ ದೇವರಲ್ಲ, ಮನುಷ್ಯ ಎಂಬ ಸೂಕ್ಷ್ಮವಾದ ವಿಷಯವನ್ನು ಮಾಸ್ತಿಯವರು ಕೃಷ್ಣನ ಬಾಯಿಂದಲೇ ಹೇಳಿಸುತ್ತಾರೆ, ಅದೂ ತಮ್ಮ ತೊಂಬತ್ತರ ವಯಸ್ಸಿನಲ್ಲಿ! ‘ ಸೃಷ್ಟಿ ಎಲ್ಲ ದೇವರೇ, ದೇವರಲ್ಲದೇ ಬೇರೆ ಏನೂ ಇಲ್ಲ, ಇರುವುದೆಲ್ಲ ಈ ಅರ್ಥದಲ್ಲಿ ಅವನ ಅವತಾರವೇ, ಸುರ, ನರ, ಕಿನ್ನರ, ಕಿಂಪುರುಷ, ಕ್ರಿಮಿ, ಕೀಟ, ಎಲ್ಲ ಬ್ರಹ್ಮ’ ಎಂಬ ಅದ್ವೈತವನ್ನು ಸಾರುತ್ತಾರೆ, ಹುಟ್ಟಿನಿಂದ ವಿಶಿಷ್ಟಾದ್ವೈತಿಯಾದ ಈ ಶ್ರೀವೈಷ್ಣವ!

ಮೇಲ್ನೋಟಕ್ಕೆ ಒಂದು ಪೌರಾಣಿಕ ಎನ್ನಿಸುವ ಈ ಕತೆಯಲ್ಲಿ, ಮಾಸ್ತಿಯವರು ಚಿತ್ರಿಸುವ ಗಂಡ-ಹೆಂಡತಿಯರಾದ ಕೃಷ್ಣ-ರುಕ್ಮಿಣಿಯರ ಸಂಬಂಧದ ಸೊಗಸನ್ನು ಕಾಣಬೇಕು. ಅಣ್ಣ-ತಮ್ಮಂದಿರಾದ ಬಲರಾಮ-ಕೃಷ್ಣರ ಸಂಬಂಧದ ಸೂಕ್ಷ್ಮವನ್ನು ಕಾಣಬೇಕು. ಕೃಷ್ಣ-ಆರ್ಜುನರು ನರ-ನಾರಾಯಣರು, ಎರಡು ದೇಹಗಳು, ಒಂದೇ ಜೀವ ಎಂಬ ಸತ್ಯವನ್ನು ಅರ್ಜುನ ಕಂಡುಕೊಳ್ಳುವ ಅನುಭವವನ್ನೂ ಅದರಿಂದ ಪಡುವ ವಿಸ್ಮಯವನ್ನೂ ಎಷ್ಟು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂಬುದನ್ನು ಓದಿ ಅರಿತುಕೊಳ್ಳಬೇಕು.

ಹೆಚ್ಚಾಗಿ ನನ್ನ ಮನಸ್ಸಿಗೆ ನಾಟಿದ ಒಂದು ಅಂಶವನ್ನು ಹಂಚಿಕೊಳ್ಳದೇ ಈ ಪ್ರಬಂಧವನ್ನು ಮುಗಿಸಲಾರೆ. ಕೃಷ್ಣಾರ್ಜುನರು ಎರಡು ದೇಹ ಒಂದು ಪ್ರಾಣ ಎಂದೆಲ್ಲ ಹೇಳಿದರೂ, ಕೃಷ್ಣ ಕೃಷ್ಣನೇ, ಅರ್ಜುನ ಅರ್ಜುನನೇ ಎಂಬ ಸತ್ಯವನ್ನು ಬಹು ಸರಳವಾಗಿ ವಿವರಿಸುವ ಮಾಸ್ತಿಯವರ ಒಳನೋಟವನ್ನು ಈ ಮಾತುಗಳಿಂದ ಕಂಡುಕೊಳ್ಳಬಹುದು.

ಸಂದರ್ಭ ಹೀಗಿದೆ. ಪತಿಯನ್ನು ಇನ್ನೇನು ಕಳೆದು ಕೊಳ್ಳುವ ಕಾಲ ಸನ್ನಿಹಿತವಾಗಿದೆ, ಆಕೆಯನ್ನು ಕಂಡು ಸಮಾಧಾನ ಹೇಳಲು ಅರ್ಜುನ ಬಂದಾಗ, ರುಕ್ಮಿಣಿಯ ದೃಷ್ಟಿಯಲ್ಲಿ ಕೃಷ್ಣ ಯಾವಾಗಲೂ ತನ್ನೊಡನೆಯೇ ಇರುವ ಸಂಗಾತಿ ಆದ್ದರಿಂದ ಅವಳಿಗೆ ವಿರಹದ ಸೊಲ್ಲೂ ಇಲ್ಲ. ಇದರಿಂದ ಅರ್ಜುನನಿಗೆ ಆಶ್ಚರ್ಯವೋ ಆಶ್ಚರ್ಯ. ಈ ಮಾತನ್ನು ಕೃಷ್ಣನಿಗೆ ವರದಿ ಮಾಡಿದಾಗ ಕೃಷ್ಣ ಹೇಳುವುದೇನು? ‘ಇದು ತಿಳಿಯಲಿ ಎಂದೇ ನಾನು ನಿನ್ನನ್ನು ಅಲ್ಲಿಗೆ ಹೋಗಿ ಆಕೆಯನ್ನು ಕಾಣು ಎಂದು ಕಳುಹಿಸಿದೆ. ಈ ಮಾತು ನಿನಗೂ ಹೊಂದುತ್ತದೆ. ನಾನು ಇರುವುದಿಲ್ಲ, ಎಂದರೆ ನನ್ನ ದೇಹ ಇಲ್ಲಿರುವುದಿಲ್ಲ. ಆದರೂ, ನಾನು ಏನೂ ಆಗುವುದಿಲ್ಲ, ಎಲ್ಲಿಯೂ ಹೋಗುವುದಿಲ್ಲ, ಸದಾ ನಾನು ಜೊತೆಗಿದ್ದೇನೆಂದು ನಿಶ್ಚಯ ಮಾಡಿಕೊಂಡು ಬಾಳು. ನಿನಗೆ ಯಾವ ಚಿಂತೆಯೂ ಇರುವುದಿಲ್ಲ.’

ಅದ್ದಕ್ಕೆ, ಅರ್ಜುನನ ಪ್ರತಿಕ್ರಿಯೆ ಏನು? ‘ಹೌದು ಕೃಷ್ಣ, ಈ ಮಾತನ್ನು ನೀನು ನನಗೆ ಯುದ್ಧದ ದಿನ ಹೇಳಿದೆ. ಹೋಗುವುದು ದೇಹ, ನಾವಲ್ಲ. ಸುಲಭವಾದ ಸತ್ಯ. ಆದರೆ, ಕೈಲಿ ಹಿಡಿದ ಪಾದರಸದಂತೆ ಮನಸ್ಸಿನಿಂದ ಜಾರಿ ಹೋಗುತ್ತದೆ. ಅಂಟುವ ಸತ್ಯ ಅಲ್ಲ; ನಂಟಾಗುವ ಸತ್ಯವೂ ಅಲ್ಲ. ಕೃಷ್ಣ ಎಲ್ಲಿಯೂ ಹೋಗಿಲ್ಲ, ಜೊತೆಗೆ ಇದ್ದಾನೆ ಎಂದು ಕೊಂಡ ಮನಸ್ಸು ಮರುಕ್ಷಣ ’ಅಯ್ಯೋ ಕೃಷ್ಣ ಜೊತೆಗಿಲ್ಲವಲ್ಲ ಎಂದು ಗೋಳು ಕರೆಯುತ್ತದೆ.’ ಎಂಥ ಸತ್ಯ! ಆಡುವುದು ಸುಲಭ, ಅರ್ಥಮಾಡಿಕೊಳ್ಳುವುದೂ ಅಸಾಧ್ಯವೇನಲ್ಲ, ಆದರೆ, ಅನುಸರಿಸುವುದು ಮಾತ್ರ ಎಂತೆಂಥ ಜ್ಞಾನಿಗಳಿಗೂ ಕಷ್ಟಸಾಧ್ಯ.

ಸುಮಾರು ಎರಡು ದಶಕಗಳಿಗೂ ಹಿಂದೆ ಅಕಸ್ಮಾತ್‌ ನಾನು ಭಾರತಕ್ಕೆ ಭೇಟಿ ಇತ್ತ ಸಂದರ್ಭದಲ್ಲಿ ಜೀವನದ ಅಂಚನ್ನು ತಲುಪಿದ್ದ ಮಾಸ್ತಿಯವರಿಗೆ ಜ್ಞಾನಪೀಠ ಬಂದಿತ್ತು. ಅದೇ ಮೊದಲು, ಅದೇ ಕೊನೆ ನನಗೆ ಅವರ ದರ್ಶನ. ಡಿಸೆಂಬರ್‌ 3ರಂದು ಲಾಸ್‌ ಏಂಜಲೀಸಿನಲ್ಲಿ ನಡೆದ ಕನ್ನಡ ಸಾಹಿತ್ಯ [^] ರಂಗದ ಎರಡನೇ ಸಮ್ಮೇಳನದ ‘ಮಾಸ್ತಿ ಕನ್ನಡ [^]ದ ಆಸ್ತಿ’ ಎಂಬ ವಿಚಾರ ಸಂಕಿರಣದಲ್ಲಿ ನಾನು ಮಂಡಿಸಿದ ಮೇಲಿನ ಪ್ರಬಂಧವನ್ನು ‘ಜಾಲತರಂಗ’ದ ಓದುಗರೊಂದಿಗೆ ಹಂಚಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಬ್ರಾಹ್ಮಣ, ಬ್ರಾಹ್ಮಣ್ಯ : ಒಂದಿಷ್ಟು ಚಿಂತನ-ಮಂಥನ – responses to Dr. Natarajs article on Brahminism

Dear Dr.Nataraj,

Please find my findings on the topic of Brahmana from various texts. Your article is well written and should receive favourable response from like minded people. Also I forgot to mention the use of Vagnopayeetham in the vedas. The use is not restricted to Brahmins only. Any person with a deeksha or purpose can wear it.

Vagnopayeetham paramam pavithram prajapathe yath sahajam purasthath;
Aushyamagram paramuncha shubram yagnopayeetham balamastu thejah;

My understanding is everey varnas work has to be done with a deeksha. Hence are entitled to wear it. However the responsibilty to keep the pavithrathe (pavithram) which gives strength (Balamastu) and thejus is on the individual.

Respectfully,

– Nagaraja Rao

*

ಮಾನ್ಯರೇ,

ಅಂಕಣ ಓದಿದೆ. ಚಾಂದೋಗ್ಯೋಪನಿಷತ್ತಿನ ನನಗೆ ಇಷ್ಟವಾದ ಕತೆ ಜ್ಞಾಪಕಕ್ಕೆ ಬಂದಿತು.

– ಕೃಷ್ಣಪ್ರಿಯ

*

Dear Nataraja,

Enjoyed reading your excellent article. I used to have many such discussions with my late grandfather during my teen years. Here! Here!

– Ramapriyan

*

Hi,

Writing to you after reading this article.

What youve discussed on the article is pretty much fine. But I couldnt make out what your stands for, over there. Can you please explain what youre referring to, by saying “nInaarigaadeyO ele braahmaNa” ?

cheers,

– Hari Prasad Nadig

*

Namaskara Dr. Nataraj,

This is a response to your article in thatskannada.com website with title “Neenaarigadheyo ele brahmana?”.

That girl has asked the right question. One will not become Brahmin by birth. According to the profession one chooses will make one Brahmin/Kshatriya/Shudra/Vaishya. Eventhough I belong to Brahmin family, I cant call myself a Brahmin as Im working under another person. I can also be called as Vaishya as I invest money. But, I cant be called Brahmin nor Kshatriya.

Also, to add to it, there are some swamijis who are doing business through educational institutions. So, they are Vaishyas.

In your article, you have mentioned about the website of that Brahmin Sangha. Can you please give me that website address?

Thanks & Regards,

– Suresh

*

Dear Editor,

The article by Dr. M.S. Nataraj titled Neenarigadeyo ele Brahmana should have been appropriate if it had been Neenu yava Brahmano?, because the lady has questioned the very basic definition of word Brahmana and the appropriateness of calling ourselves as Brahmins.

My children born in Canada have asked the same question, for which I gave the usual answer that I am a Brahmin because I was born in a Brahmin Madhwa family . They did not understand one word I said and went away unconvinced. Now they are married and gone, the question is still not answered.

After reading several books published by Bharatheeya Vidya Bhavans Gandhi centre,I am asking myself as to what kind of Brahmin I am?. Am I a Jathi Brahmana or Guna Brahmana or Karma Brahmana.

As Sri Krishna defines the category of chaturvarna as “Chaturvarnam Maya Srusnam, Guna Karma Vibhagatah”. Lord Krishna did not define Brahmanas by this verse, but said, the whole human race is divided into four categories based on guna and karma. Further in Purusha Suktha, the verse “Brahmanosya Mukha Maasit Bahu Rajanya Kruthah” is stated. This verse only states that Brahmana was born from the face of Purusha, i.e. Bhaghavan etc. It does not answer the basic question asked by the lady in the conference.

“Janmajayathe Shudrah Karmate Viprah” . Meaning one is a Shudra by birth and Brahmana by deeds. Then all of us who call ourselves as Brahmana remain shudras all our life because of the malina (asudha) associated with birth and not doing our karma during the rest of our lives..

In Veda-Vedanta, Brahmana is defined in terms of a time phase Bhattabhaskara divides Brahmanayam as two types. “Dvividam Brahmanyam Karma Brahmanyam and Kalpa Brahmanyam “. Karma Brahmanyam is the one which defines different karmas and mantra vidhana viniyogas. Kalpa Brahmanyam is the one which has mantra pata only. Both Brahmanas deals with explanation of mantras as well as yagnas and adhyatma chintas.

How and when yagnas are to be performed is illustrated in Brahma Granthas or books. In the absence of this knowledge.

Vishnu Sahasranamam-

“Yagno yagnapathiryagna yagnagno yagna vahanah;
Yagnabrudyagnakrudhyagni yagnabhu yagna sadhanah;
Yagnantha krudyagna guyhya manna mannada yevacha:”

“Atmayonihi swayam jatho vykhana samagayanah” -are all the names for Lord Vishnu .

Jathi Brahmana cannot be called as Brahmanas by born into a perticular alone.

Going back to the verse “Chaturvarnam Maya Srusnam etc.”, if the father has guna and karma with the knowledge of granthas to perform yaga and yagna then he is a brahmin. If the childern does not have it, then they are not brahmins. Jathi Brahmana alone does not qualify to be guna karma Brahmana.

Vedas contain diferent shakas or groups of Brahmanas. The four vedas are Rigveda,Yajur veda,Samaveda and Atharvanaveda.

Rigveda contains Iytareya Brahmana, Kaushithaki Brahmana.

Yajurveda contains Thytherya Brahmana, Shathapatha Brahmana.

Samaveda contains Thandya Maha Brahmana, Shadvimsha Brahmana,Arsheya Brahmana, Daivatha Brahmana, Upanishad Brahmana, Samhitopanishad Brahmana, Vamsha Brahmana,Jaiminiya Brahmana.

Atharvanaveda contains Gopatha Brahmana.

Mahipathi dasa illustrates in his Charanavyuha commentary on maharanva as follows:

Kaushithaki Brahmana was practiced in south india.

Tunga krishna thatha godha syhadri shikarvadhi;

Achandhra deshaparyantham bahruhu chalchalayini:

also in north india, Uttare gurjare deshe vedo bahruhucha erithah;

Kaushithaki Brahmanam chashakha shankayini sthitha:

Sayanacharya defines Iytareya as itareya. A maharshi had many wives, one was illtreated by him and was called as itara or “beryavalu in Kannada. The son born to this illtreated wife was hurt by this treatment and did thapas and devathas granted him the knowledge of Iytareya Brahmana,Iytareya aranyaka,Iytareya upanishad.

Madhya Pradesh of todays India was the centre of Iytareya Brahmana. During this time of Brahmana, many famous kshtriya names like Janamejaya,Parikshita,Sharyarthamanava, Shathanika sathrarjitha,Dushyantha and the most famous Bharatha. All the people lived under Bharatha were called Bharathiyas of todays Hindusthan.

Offering animals as yagnapashu was in vogue during the time of this Iytareya brahmana.Later on this was rejected at the time of Kaushithaki brahmana. All the three great Acharyas (Shankara, Ramanuja, Madhwa)accepted this theory and yagnapashu made out of dhanya (hittu in kannada) was offered as a symbolic gesture during yagna.The argument put forth was that ” Amushmin loke pashuvo manushyan ashyanthi” – meaning that the live pashu offered during yagna will come back as manushya in next life and offer the manushya as yagna pashu,so that this cycle should be stopped.

The concept of Vishnu and Rudra came into existence during the time of Kaushithaki brahmana.

Followers of Vishu called Vyshnavas considered Vishnu as the greatest and Agni as the lowest of devathas ” Agniravaradhyah, Vishnu paradhyah”.

Followers of Rudra called Saiveites considered Rudra (shiva is another name) as the greatest .

Rudro yaijeshtascha, shreshtadevanam”.

Thus started the war of supremacy between Vyshnavas and Saivas. Some extremists even went to the extent as calling Saivas as equivalent to Shavas (no life) and calling Vyshnavas as (Visheshana or exemplary).

Thytherya Brahmana is part of Krishna Yajurveda.It contains names of different yagas

The illustration of Bharadwaja muni is in this Brahmana. He got three lives and remained brahmachari. Indra offered him one more life after Bharadwaja became old and asked how he is going to spend his life. Bharadwaja replied that he will learn vedas and remain brahmachari. Indra showed three mountains and said the Vedas are like these mountains and what you have learnt in three centuries is equivalent to three fistful of mud from these mountains. This shows that achievement of Gnana is endless (anantha).

Yagna yagas were plenty during this Brahmana time.Gold,Silver coins and Cows were offered as gifts. The respect for women is illustrated in this Brahmana and treating all women as janani (mother) except the ones chosen for procreation is mentioned. The so called Chaturvarna with delegation of work came during this time.There is proof that in addition to Chaturvarna, a fifth varna called Sankaravarna due to mixing of the four varnas is mentioned. So todays mixing of Chaturvarna is nothing new and todays society of intermixing is of the Sankaravarna type. The offsprings of this group belong to the fifth varna and their duties are not defined.

Hence the ladys question of varnas is answered here.

Shathapatha Brahmana is part of Shukla yajurveda.This Brahmana has 100 chapters and emphasizes the fact that learning of vedas is like a yagna and the devathas or supreme beings will be pleased and grant ones wish. Due to incessant rain and earhquakes, jalapralaya (sunami) and bhumi pralaya will happen. If this happens in a infinite scale the Bhumi will be consumed by water (Anthya pralaya). Manu or man will be saved by a big fish. The water will recede and there is life born again from the bijas collected by Man. This theory is illustrated as Noahs Ark in old testment.

Thandya,Shadvimsha,Arsheya,Daivatha,Upanishad, Samhitopanishad, Vamsha, Jaiminiya Brahmana are part of. Samaveda which is the veda of music.

During this Brahmana time music was given predominence. Yagnas conducted by Anaryas (tribals) is referred to as Sarpayagnas.Idol worship is mentioned. Cleansing of mind by yagnas and thrikala sandhya vandana is also mentioned. The importence of yagnas seems to be in the decline during this brahmana time.

Indra,Prajapathi,Soma,Varuna ,Thrusta,Angirasa,Poosha,Sarswathi devatha worship is illustrated.

Upanishad (come sit close) and Brahmana mix followed to hail the supremacy of one devatha over the other. However there is also harmony between the two calling one God Narayana (Vishnu). Narayana suktha ( Sa Brahma, Sa Shiva, Sa Hari). Narayanopanishad (Brahma Narayana, Shivashcha Narayana, Rudrashcha Narayanaya etc.) identifying Brahma and Shiva came from Narayana (Vishnu).(Narayanath Brahma Jayathe, Rudro Jayathe,Indrao jayathe etc.). Upanishads are the last chapters of Vedas and are twleve (12) of them.

Rudras were recited by Saivetes during Yagna time.

Gopatha Brahmana time is illustrated in Atharvanaveda.This Brahmana time is the latest of all the vedas.This is divided into two parts. Purva Gopatha,Uttara Gopatha.

In the Purva Gopatha the greatness of pranava mantra “OM“, the “Gayathri“, the practice of “Brahmacharya” (absentence from sex) to preserve energy (Dhatu) is illustrated.Mention of purnahuti( symbolic offering everything at the end of yagna).Ashwamedha, Purushamedha etc. is mentioned.

In the Uttara Gopatha, the struggle of Rudra to get all the benifit of yagna is mentioned. The kind of arpana (ahuti) for various devathas is given and the discretionary time of doing karma such as prataha(morning), madhyanha (afternoon), sandhya (evening) is mentioned.

“Thasmadh Brahmano naiva gayenanritheth” – Brahmana forbids the person doing yagna from singing or dancing during the time of doing yagna. That means only Veda Manthras should be recited and will go to Swarga (heaven). The followers of Atharvanaveda go to Brahma Loka. The person who has taken Dheeksha (oath) to do yagna is called Dheekshita.

Note: The above illustrations are taken from authenticated texts and not the interpretation of the author and given to clarify the role of Brahmanas to the present time .Ommisions and mistakes are the authors responsiblity and not the texts and hence be forgiven.Verbal translation to Kannada is not advised to prevent misinterpretation.

Please limit the comments based on your own sources

Respectfully,

– Nagaraja Rao, Toronto, Canada

*

Nararaj,

Again, you said it. Vyasa is another example. Other examples are Parashurama and Ravana, who were jati bhahmanas.

Just last week my son (11 years) asked me what is the difference between a panjabi and kshatria. I was surprised and asked why this question. He said that he thought that his friend was a punjabi. But, his friend told him that he is a kshatriya. I explained him this Chaturvarna, and concluded that a person can be all the 4, or can be more one one of these 4, etc. He responded back saying that to run this world we need all these 4!

Then came an interesting question: Dad, then What are you?

I asked him to think and let me know. He replied back saying that day time I am a (software) shudra 🙂 Sometimes when I sing, and when I sit for reading, I become brahmana. When I shout at him and his sister, I am a Kshatriya, and when I write checks to pay the bills, I am a vaishya 🙂 Then, he told that as of now, both he ahd his sisters are brahmana, and he doesnt know the future, but has promised to kepp me updated 🙂 I didnt have courage to ask what about his mom!

– Nagaraj Patil

*

Namaskara Nataraj avarige

nimma lekhana ninarigadeyo ele brahmaNa lekhana odide, chennagi mudi bandide..

bahushaha aa tharuNi mandisiruva abhipraya arthapurnavaagide haagu sathyakke saniha vaagide,. i ondhu vaadavanu naanu sumaru 15 varshada hinde mandisalu prayathna pattu yashasvi aagidde, aadre bahumana mathra 10-15 etugaLu hiriyarinda. 🙂

1) Huttininda vyakati brahmaNa,, aadre idu eshtu sathya? brhamana annodhu kevala ondhu jaathi maatra alla , idhu ondhu jeevana shaili antha nann abhipraya. Nammalle eshtu jana nijavaada brahamaNatvana paalisitha idivi? bahushaha idhu uttara sikada prashne.,.,,

2) Nijavaada brhamaNa yaru? idakke uttara sigabekidre bahusha modalu naavu artha maadikollabekada vishaya brahamana karthavya enu? nijavada brahmanathva andre enu?

naanu i vishayavaagi sumaru janara baLi charche nadesiddini, kelavara abhipraya,, devara pooje maadodhu, sadnhyavandane maadodhu,, innu kelavara drushtili nijavada brahamana andre manavateya moolavanna arithu adakke thakkante nadeyodhu. bahushaha eradane abhipraya sari antha nanna anisike

3) Brahamana bhojana priyaha antha heLthare, aadre adhu brahmaNa bahu-jana-priya ,, andre janara prithige patraradonu,, yaru manavanagi, itararige prithi, vatsalya thoristhano avanu ellarigu prithipatranagthane,, bahushaha avane brahaMana…

4) vishayana artha maadikondu, adanna bereyorige bodhisi, agathya biddaga charhce nadesi, chinthane mandisi, nijavada sathyamsha tiLisodhu brhamanara inondhu nijavaada guna.

Sari sir, nanna e-patra doddadayitu ankothini,, nimma comments/suggestions ge nanna athmiya swagata

– Bhaskara maisuru

*

Natraj avare,

Nimme lekhana thumba chennaagi mooDi bandide. I liked the part where you discuss about the 4 sectors in the present day situation, which makes some of us Shudras by way of work and BraahmaNas by way of birth. Also, the part about how to attain real BraahmaNism by way of learning from a Guru and furthering that knowledge with your experiences to come up with your own theories in life to become a Brahmagnaani, this made me think about our kids. I would really like to translate the whole article in english and let my kids read. Hopefully they will understand where they come from and where they stand in the present day. Thank you for an important and thought provoking article.

– Meena Jois

*

Sir,

Mr. Natarajs article on Brahmanya was very informative. I also loved reading about a simple wedding he wrote about a couple of months ago. The wedding vows were beautiful. Ironically, I read about it the day after Mr. Dharam Singhs sons wedding which had 70,000 guests. The latter took place in Gulbarga only 3 weeks after the area was hard hit by the floods!

Can we have an English translation of the two articles, on your website? I would like to share both with the younger generation as well as others. (We could benefit also). I look forward to them. Please let me know when you would be publishing them.

– Namita, NY

ನೀನಾರಿಗಾದೆಯೋ ಎಲೆ ಬ್ರಾಹ್ಮಣ? – Evolution of Brahminism!

ಅಖಿಲ ಅಮೆರಿಕ ಬ್ರಾಹ್ಮಣ ಸಂಘದಲ್ಲಿ ಬಾಲಕಿಯಾಬ್ಬಳ ಸವಾಲು :

ಅಮೆರಿಕದಲ್ಲಿ ಇರುವ ಹಲವಾರು ಭಾರತೀಯ ಸಂಘ-ಸಂಸ್ಥೆಗಳ ಪೈಕಿ ಹಲವು, ಜಾತಿಯನ್ನು ಆಧಾರವಾಗಿಟ್ಟುಕೊಂಡು ಕಟ್ಟಿದ ಸಂಘಗಳು. ಬ್ರಾಹ್ಮಣ ಜನಾಂಗದ ಉಪಜಾತಿಗಳನ್ನು ಪ್ರತಿನಿಧಿಸುವ ಹಲವಾರು ಸಂಘಗಳಿವೆ. ಅದೇರೀತಿ, ಅಮೆರಿಕದ ಎಲ್ಲ ಬ್ರಾಹ್ಮಣವರ್ಗಗಳನ್ನೂ (ಭಾಷೆ ಮತ್ತು ಪ್ರಾಂತೀಯ ವ್ಯತ್ಯಾಸಗಳಿಗೆ ಗಮನ ಕೊಡದೇ) ಒಟ್ಟುಗೂಡಿಸುವ ಉದ್ದೇಶದಿಂದ ಹುಟ್ಟಿದ ಬ್ರಾಹ್ಮಣ ಸಂಘವೂ ಒಂದಿದೆ.

ಕಳೆದ ವರ್ಷ ಈ ಬ್ರಾಹ್ಮಣ ಸಂಘ ನ್ಯೂಜೆರ್ಸಿ ಪ್ರಾಂತ್ಯದಲ್ಲಿ ಒಂದು ಸಮಾವೇಶವನ್ನೇರ್ಪಡಿಸಿ ಹಲವು ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ನಾನು ಆ ಕಾರ್ಯಕ್ರಮಕ್ಕೆ ಆಹ್ವಾನಿತನಾಗಿದ್ದರೂ ಕಾರಣಾಂತರಗಳಿಂದ ಹೋಗಲಾಗಲಿಲ್ಲ. ಅಲ್ಲಿ ನಡೆದ ಕಲಾಪವೊಂದರಲ್ಲಿ, ಅಮೇರಿಕದಲ್ಲಿ ಬೆಳೆದ ಎರಡನೇ ಪೀಳಿಗೆಯ ತರುಣಿಯಾಬ್ಬಳು ಅಲ್ಲಿ ನೆರೆದಿದ್ದ ಬ್ರಾಹ್ಮಣರಿಗೆ ಸವಾಲೊಂದನ್ನೆಸೆದಳು.

‘ನಾನಾಗಲೀ ನೀವಾಗಲೀ ಬ್ರಾಹ್ಮಣರಲ್ಲ’ ಎಂಬೊಂದು ಪ್ರಬಂಧವನ್ನು ಮಂಡಿಸಿ, ಒಂದಿಷ್ಟು ಜನರನ್ನು ಕೊಂಚ ತಿಣುಕುವಂತೆ ಮಾಡಿದಳು. ಅವಳ ಪ್ರಬಂಧ ಮತ್ತೆ ಇದೇ ಸಂಸ್ಥೆಯ ಜಾಲತಾಣದಲ್ಲಿ ಕಾಣಿಸಿಕೊಂಡು ನೂರಾರು ಜನರು ಅದನ್ನು ಓದಿದ್ದಾರೆ. ವಿಶ್ವದ ನಾನಾ ಕಡೆಗಳಿಂದ ಆ ಪ್ರಬಂಧಕ್ಕೆ ಪ್ರತಿಕ್ರಿಯೆಗಳು ಬಂದಿವೆ. ಮುಖ್ಯವಾಗಿ ಅವಳ ಪ್ರಬಂಧದ ಕೇಂದ್ರ ಬಿಂದು – ‘ವ್ಯಕ್ತಿ ಹುಟ್ಟುಮಾತ್ರದಿಂದ ಬ್ರಾಹ್ಮಣನಾಗುತ್ತಾನೆಯೇ (ಅಂದರೆ ತಂದೆ-ತಾಯಿಗಳು ಬ್ರಾಹ್ಮಣರೆಂಬ ಒಂದೇ ಕಾರಣದಿಂದ ಬ್ರಾಹ್ಮಣ್ಯ ಬರುತ್ತದೆಯೇ) ಅಥವಾ ಯಾರು ಬೇಕಾದರೂ ತಮ್ಮ ಸ್ವಂತ ಅಧ್ಯಯನ ಮತ್ತು ಆಚಾರಗಳಿಂದ ಬ್ರಾಹ್ಮಣರಾಗಲು ಸಾಧ್ಯವೇ?’ ಎಂಬ ಪ್ರಶ್ನೆಯಾಗಿತ್ತು.

ಸವಾಲಿನ ಗಾಂಭೀರ್ಯ :

ಪ್ರಪಂಚಕ್ಕೆ ಬ್ರಾಹ್ಮಣರನ್ನು ಕೊಟ್ಟ ಭಾರತದಲ್ಲೇ ಬ್ರಾಹ್ಮಣ್ಯ ಮಾಯವಾಗುತ್ತಿರುವ ಇಂದಿನ ಈ ಯುಗದಲ್ಲಿ ಅಮೆರಿಕದ ಬ್ರಾಹ್ಮಣ ಸಂಘವೊಂದರ ಜಾಲತಾಣದಲ್ಲಿ ಇಲ್ಲಿನ ಎರಡನೇ ಪೀಳಿಗೆಯ ಬಾಲಕಿಯಾಬ್ಬಳು ಈ ಬಗ್ಗೆ ಸವಾಲೆಸದಳೆಂದರೆ ಅದನ್ನು ಕೊಂಚ ಗಂಭೀರವಾಗೇ ಪರಿಗಣಿಸಬೇಕಲ್ಲವೇ? ಜಾತಿಯ ಬಗ್ಗೆ ಮಾತನಾಡುವಾಗ ಅಥವಾ ಬರೆಯುವಾಗ ನಾವು ಆ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಇಂದಿನ ಭಾರತದಲ್ಲಿ ಜಾತಿ ಎಂಬುದು ಬಹು ಮುಖ್ಯಪಾತ್ರವನ್ನು ಹೊಂದಿದೆ.

ಸಾಮಾಜಿಕವಾಗಿ ಭಾರತದ ವಿಶ್ಲೇಷಣೆ ಮಾಡುವಾಗ ಜಾತಿಯನ್ನು ಬಿಟ್ಟು ಮಾತಾಡಲು ಏನಿದೆ? ರಾಜಕೀಯ ದೃಷ್ಟಿಯಿಂದ ನೋಡಿದರೆ, ಭಾರತದ ಇಡೀ ರಾಜಕೀಯವೆಲ್ಲ ಜಾತಿಯ ಆಧಾರದ ಮೇಲೇ ನಿಂತಿದೆ. ಭಾರತೀಯರ ಆರ್ಥಿಕ ಪರಿಸ್ಥಿತಿಗೂ ಜಾತಿಗೂ ನಿಕಟವಾದ ಸಂಬಂಧವಿದೆ. ಬ್ರಿಟಿಷರು ಭಾರತದ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು (ಹೆಚ್ಚಾಗಿ ದುರುಪಯೋಗಿಸಿಕೊಂಡು) ಲಾಭ ಪಡೆದುಕೊಂಡರು. ಹಿಂದೂಗಳಲ್ಲದವರು ತಮ್ಮ ಸ್ವಾರ್ಥಸಾಧನೆಗಳಿಗೆ ಜಾತಿಪದ್ಧತಿಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಲೇ ಇದ್ದಾರೆ. ಈ ಎಲ್ಲ ಕಾರಣಗಳಿಂದ ಭಾರತದ ಚರಿತ್ರೆಯಲ್ಲಿ, ರಾಜಕೀಯದಲ್ಲಿ ಬೆರೆತುಹೋಗಿರುವ ಈ ಪ್ರಶ್ನೆ ಸಾಧಾರಣವಾದದ್ದಂತೂ ಅಲ್ಲ. ನನ್ನ ಈ ಲೇಖನ ಆ ತರುಣಿ ಎಬ್ಬಿಸಿದ ಚರ್ಚೆಗೆ ಮೀಸಲಷ್ಟೆ, ಭಾರತದ ಜಾತಿಪದ್ಧತಿಯ ವಿಶ್ಲೇಷಣೆಗಲ್ಲ.

ಸವಾಲಿನ ಸಾರಾಂಶ :

ಆಕೆ ಎಸೆದ ಸವಾಲಿನಲ್ಲಿ ಒಂದೆರಡು ಉತ್ತಮಾಂಶಗಳಿದ್ದವು. ಭಾರತೀಯ ಪುರಾಣ ಮತ್ತು ಇತಿಹಾಸಗಳಲ್ಲಿ ಹಾಗೂ ವೇದಾಂತಕ್ಕೆ ಸಂಬಂಧಿಸಿದ ಉಪನಿಷತ್ತುಗಳಲ್ಲಿ ಬ್ರಹ್ಮಜಿಜ್ಞಾಸೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಅಭ್ಯಸಿಸಿದರೆ, ಅವರೆಲ್ಲ ಅಸಾಧಾರಣರು, ಸತ್ಯಾನ್ವೇಶಣೆಯಲ್ಲಿ ತೊಡಗಿದವರು ಎಂಬುದು ಸ್ಪಷ್ಟವಾಗುತ್ತದೆ. ಅವರು ಗುರು-ಹಿರಿಯರ ವಾದವನ್ನು ಕಣ್ಮುಚ್ಚಿ ಒಪ್ಪಿಕೊಳ್ಳದೇ ಸ್ವಂತ ಸಾಧನೆಯ ಬಲದಿಂದ ಆಧ್ಯಾತ್ಮವನ್ನು ಅರಿತುಕೊಂಡವರು.

ಅದರಲ್ಲಿ ಹಲವರು, ಹುಟ್ಟಿನಿಂದ ಬ್ರಾಹ್ಮಣರಲ್ಲದಿದ್ದರೂ ಋಷಿಗಳಾದವರು, ಉದಾಹರಣೆಗೆ ವಾಲ್ಮೀಕಿ ಋಷಿಯಾಗುವ ಮುನ್ನ ಬೇಡನಾಗಿದ್ದ. ಕಠೋಪನಿಷತ್ತಿನಲ್ಲಿ ನಚಿಕೇತ ತಂದೆಗೇ ಸವಾಲು ಹಾಕುತ್ತಾನೆ, ಯಮನೊಂದಿಗೆ ವಾದ ಮಾಡುತ್ತಾನೆ, ಹುಟ್ಟು-ಸಾವುಗಳ ಗೂಢಾರ್ಥಗಳ ಬಗ್ಗೆ ಚರ್ಚೆ ನಡೆಸುತ್ತಾನೆ. ಶಂಕರರು, ರಾಮಾನುಜರು, ಮಧ್ವರು ಮುಂತಾದ ಆಚಾರ್ಯರು ಅವರ ಕಾಲದಲ್ಲಿ ಚಾಲತಿಯಲ್ಲಿದ್ದ ತಮಗೊಪ್ಪಿಗೆಯಾಗದ ತತ್ತ್ವಗಳನ್ನು ಪ್ರಶ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಆ ತರುಣಿ ಕೇಳುತ್ತಾಳೆ, -‘ನಿಮ್ಮಲ್ಲಿ ಎಷ್ಟು ಜನರಿಗೆ ಹೀಗೆ ಗುರುಹಿರಿಯರನ್ನು, ಮಠದ ಸ್ವಾಮಿಗಳನ್ನು ಪ್ರಶ್ನಿಸುವ ಛಾತಿಯಿದೆ? ವಿಶ್ವಾಮಿತ್ರರು ಹುಟ್ಟಾ ಕ್ಷತ್ರಿಯರಾಗಿದ್ದರೂ ಬ್ರಾಹ್ಮಣ್ಯವನ್ನು ಸಂಪಾದಿಸಿಕೊಂಡು ವಶಿಷ್ಟರಿಂದ ಭಲೇ ಎನ್ನಿಸಿಕೊಳ್ಳುತ್ತಾರೆ, ಬ್ರಹ್ಮರ್ಷಿಯ ಪಟ್ಟ ಕಟ್ಟಿಸಿಕೊಳ್ಳುತ್ತಾರೆ, ಗಾಯತ್ರೀಮಂತ್ರದ ಪ್ರವರ್ತಕರಾಗುತ್ತಾರೆ. ನಿಮ್ಮಲ್ಲಿ ಯಾರ್ಯಾರಿಗೆ ಅಂಥ ಯೋಗ್ಯತೆ ಇದೆ? ಸುಮ್ಮನೆ ಬ್ರಾಹ್ಮಣರಾಗಿ ಹುಟ್ಟಿಬಿಟ್ಟೆವೆಂದು ಏಕೆ ದರ್ಪ ತೋರುತ್ತೀರಿ? ಅರ್ಥಮಾಡಿಕೊಳ್ಳದೇ ಕೆಲವು ವಿಧಿ-ವಿಧಾನಗಳನ್ನು ಆಚರಿಸಿಬಿಟ್ಟಿದ್ದರಿಂದ ನೀವ್ಯಾರೂ ಬ್ರಾಹ್ಮಣರಾಗುವುದಿಲ್ಲ,’ ಎಂಬುದು ಆಕೆಯ ವಾದ.

ಅವಳ ವಾದ ಹಲವರಿಗೆ ಕೋಪ ತರಿಸುವಷ್ಟು ಚುರುಕಾಗಿತ್ತು ಎನ್ನುವುದಕ್ಕೆ ಅನೇಕರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳೇ ಸಾಕ್ಷಿ. ಬ್ರಾಹ್ಮಣನಾಗಲು ಸ್ವತಂತ್ರಚಿಂತನೆ ಅಗತ್ಯ ಎಂಬ ಅಂಶವನ್ನು ಮಂಡಿಸುವ ಉಮೇದಿನಲ್ಲಿ, ಗುರುಹಿರಿಯರಿಗೆ ಸವಾಲೆಸೆಯುವುದೇ ಬ್ರಾಹ್ಮಣನ ಲಕ್ಷಣ ಎನ್ನುವ ವಾದಸರಣಿ ಅವಳ ಪ್ರಬಂಧದ ತರ್ಕದಲ್ಲಿ ತಲೆಹಾಕಿದ್ದರೂ ಇರಬಹುದು, ಇರಲಿ, ಅದು ಮುಖ್ಯವಲ್ಲ. ಅನೇಕರು ಅವಳನ್ನು ಈ ವಿಚಾರದಲ್ಲಿ ವಿರೋಧಿಸಿದರೂ ಇನ್ನು ಕೆಲವರು ಹಾಗೆ ಪ್ರಶ್ನಿಸುವ ಹಕ್ಕು ಅವಳಿಗೂ ಇರಬೇಕು, ಇದು ವ್ಯಕ್ತಿಸ್ವಾತಂತ್ರ್ಯ ಮತ್ತು ಅಭಿಪ್ರಾಯಸ್ವಾತಂತ್ರ್ಯದ ವಿಷಯ ಎಂದು ವಾದಿಸಿದ್ದಾರೆ.

ಬ್ರಾಹ್ಮಣ ಹಾಗೂ ಜಾತಿಬ್ರಾಹ್ಮಣ :

ಸಂಸ್ಕೃತದಲ್ಲಿ ‘ಜಾತಿಬ್ರಾಹ್ಮಣ’ ಎಂಬ ಶಬ್ದವೊಂದಿದೆ. ಹಾಗೆಂದರೆ, ಜಾತಿಯಿಂದ ಬ್ರಾಹ್ಮಣ ಎಂದರ್ಥ, ಆಚರಣೆಯಿಂದ, ಅಧ್ಯಯನದಿಂದ ಅಲ್ಲ. ‘ಜಾತಿ’ ಎಂಬ ಶಬ್ದವೇ ಹುಟ್ಟನ್ನು ತಿಳಿಸುತ್ತದೆ, ‘ಜಾತ ’ ಎಂದರೆ, ಹುಟ್ಟಿದ ಎಂದರ್ಥ. ‘ಜಾತಕ’ ಎಂದರೆ ಹುಟ್ಟಿದ ಘಳಿಗೆ, ತಿಥಿ, ಲಗ್ನ, ರಾಶಿ, ನಕ್ಷತ್ರ ಮುಂತಾದ ವಿಷಯಗಳನ್ನು ತಿಳಿಸುವ ಜನ್ಮಕುಂಡಲಿ, ಇತ್ಯಾದಿ. ಅಂದರೆ ಬ್ರಾಹ್ಮಣನಾಗಿರಲು ಬ್ರಾಹ್ಮಣಜಾತಿಯಲ್ಲಿ (ಅಂದರೆ ಬ್ರಾಹ್ಮಣ ತಂದೆತಾಯಿಗಳಿಗೆ) ಹುಟ್ಟಿರಲೇಬೇಕು ಎಂಬ ವಾದ ‘ಜಾತಿಬ್ರಾಹ್ಮಣ’ನಿಗೆ ಮಾತ್ರ ಸಲ್ಲತಕ್ಕದ್ದು.

ಹುಟ್ಟಿನಿಂದ ಲಭ್ಯವಾಗುವ ಹಲವು ಅನುಕೂಲಗಳಿವೆ, ಉದಾಹರಣೆಗೆ, ಲಕ್ಷಾಧಿಪತಿಯ ಮಗನಾಗಿ ಹುಟ್ಟಿದವ ಹುಟ್ಟಿನಿಂದಲೇ ಹಣವಂತನಾಗಿರುತ್ತಾನೆ. ತಂದೆ ಮರಣಕಾಲದಲ್ಲಿ ಆಸ್ತಿಯನ್ನು ಮಗನಿಗೆ ಬಿಟ್ಟುಹೋದರೆ, ಅವ ದಿಢೀರ್‌ ಲಕ್ಷಾಧಿಪತಿಯಾಗುತ್ತಾನೆ. ಇದು ಅವನ ಅದೃಷ್ಟವಷ್ಟೇ ಹೊರತು ಅವನ ಯೋಗ್ಯತೆಯ ಸೂಚಕವಲ್ಲ. ಹಣವನ್ನು ಸರಿಯಾಗಿ ನಿರ್ವಹಿಸದೇ ಹುಚ್ಚಾಪಟ್ಟೆ ಖರ್ಚುಮಾಡಿ ತಿರುಕನಾಗಿ ಸಾಯಬಹುದು ಅಥವಾ ಉತ್ತಮವಾಗಿ ನಿರ್ವಹಿಸಿ ತನ್ನ ತಂದೆಗಿಂತಲೂ ಹೆಚ್ಚು ಸಂಪಾದಿಸಿ ಹಣವನ್ನು ಇಮ್ಮಡಿಗೊಳಿಸಿ ಮಕ್ಕಳು ಮೊಮ್ಮಕ್ಕಳಿಗೂ ಆಗುವಂತೆ ಆಸ್ತಿಯನ್ನು ಬಿಟ್ಟುಹೋಗಬಹುದು.

ಅಂದರೆ, ಹುಟ್ಟಿನಿಂದ ವಂಶಪಾರಂಪರ್ಯವಾಗಿ ಬಂದದ್ದರ ಜೊತೆಗೆ ಸ್ವಂತ ಸಂಪಾದನೆಯೂ ಇರಬೇಕು, ಇಲ್ಲದಿದ್ದರೆ ಅದು ‘ ಸ್ವಯಾರ್ಜಿತ’ವಾಗುವುದಿಲ್ಲ. ಆದೇ ರೀತಿ, ಬ್ರಾಹ್ಮಣನಾದವನು ಕೇವಲ ಹುಟ್ಟಿನಿಂದ ಬಂದ ‘ಜಾತಿಬ್ರಾಹ್ಮಣ್ಯ’ದಿಂದ ಮುಂದೆ ಸಾಗಬೇಕು. ತಂದೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶ ಮಾಡಿ ಬ್ರಹ್ಮಚರ್ಯೆಯ ಜೀವನಕ್ಕೆ ದೀಕ್ಷೆಕೊಟ್ಟಾಗ ಅವನ ಯಾತ್ರೆ ಪ್ರಾರಂಭವಾಗುತ್ತದೆ. ಗುರುವಿನಿಂದ ಕಲಿಯಬೇಕಾದ್ದನ್ನು ಕಲಿತು, ಶಾಸ್ತ್ರಾಭ್ಯಾಸಮಾಡಿ, ವೇದಾಧ್ಯಯನ ಮಾಡಿ ಕೊನೆಗೆ ಗುರುವಿನ ಮಾತನ್ನು ತಾನೇ ಸ್ವಯಂ ತರ್ಕ ಮಾಡಿಕೊಂಡು ಗ್ರಂಥಗಳಲ್ಲಿ ಹೇಳಿದ ಹಿಂದಿನ ಅನೇಕ ಚಿಂತಕರ ಮಾತುಗಳನ್ನು ಮನನ ಮಾಡಿಕೊಂಡು ಕೊನೆಗೆ ತನ್ನದೇ ಅನುಭವಗಳ ಮಾರ್ಗದರ್ಶನದಿಂದ ಜ್ಞಾನಾರ್ಜನೆ ಮಾಡಿಕೊಂಡು ಜೀವನಪರ್ಯಂತ ಮನನ, ಧ್ಯಾನ, ನಿಧಿಧ್ಯಾಸನಗಳ ಮೂಲಕ ಬೆಳೆಯುತ್ತಲೇ ಹೋದಾಗ, ಆತ ಬ್ರಹ್ಮಜ್ಞಾನಿಯಾಗುವ ಸಂಭವವಿದೆ. ಆಗ ಬ್ರಾಹ್ಮಣನಾಗಲು ಯೋಗ್ಯತೆ ಪಡೆಯುತ್ತಾನೆ. ಇಲ್ಲದಿದ್ದರೆ, ಕೇವಲ ಜಾತಿಬ್ರಾಹ್ಮಣನಾಗೇ ಉಳಿಯುತ್ತಾನೆ. ಇದೆಲ್ಲಕ್ಕೂ ಪೂರ್ವಾರ್ಜಿತ ಕರ್ಮ ಮತ್ತು ಪೂರ್ವಜನ್ಮ ಸಂಸ್ಕಾರಗಳ ಆವರಣಗಳ ಬಂಧನ ಇದ್ದೇ ಇರುತ್ತದೆ ಎಂಬುದು ಹಿಂದೂಜನಾಂಗದ ನಂಬಿಕೆ.

ಶೃತಿ-ಸ್ಮೃತಿಗಳು ಏನೆನ್ನುತ್ತವೆ?:

ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವನೆನ್ನಲಾದ ‘ಚಾತುರ್ವರ್ಣ್ಯಮ್‌ ಮಯಾಸೃಷ್ಟಮ್‌ ಗುಣಕರ್ಮ ವಿಭಾಗಶಃ’ (ಅವರವ ಗುಣ ಮತ್ತು ಕರ್ಮಗಳಿಗನುಸಾರವಾಗಿ ನಾನು ನಾಲ್ಕು ವರ್ಣಗಳನ್ನು ಸೃಷ್ಟಿಸಿದ್ದೇನೆ) ಎಂಬ ಮಾತುಗಳ ಪ್ರಕಾರ, ಈ ‘ವರ್ಣ’ ಗಳು ಮನುಷ್ಯನ ಗುಣ ಮತ್ತು ಕರ್ಮಗಳಿಗನುಸಾರವೇ ಹೊರತು ಹುಟ್ಟಿನ ಚರ್ಚೆ ಅಲ್ಲಿ ಬಂದಿಲ್ಲ.

ಆದೇ ರೀತಿ ಪುರುಷಸೂಕ್ತದ ‘ಬ್ರಾಹ್ಮಣೋಸ್ಯ ಮುಖಮಾಸೀತ್‌’ ಇತ್ಯಾದಿ, ವಾಣಿಯಲ್ಲಿ, ‘ಬ್ರಾಹ್ಮಣನು (ಪುರುಷನ)ಮುಖದಿಂದಲೂ, ಕ್ಷತ್ರಿಯನು ತೋಳಿನಿಂದಲೂ, ವೈಶ್ಯನು ತೊಡೆಯಿಂದಲೂ ಮತ್ತು ಶೂದ್ರನು ಪಾದಗಳಿಂದಲೂ ಉತ್ಪನ್ನರಾದರು’ ಎಂಬ ಮಾತಿನ ಒಂದು ವಿವರಣೆ ಹೀಗೂ ಇದೆ ಎಂದು ಕೇಳಿಬಲ್ಲೆ: ಪ್ರತಿ ಮನುಷ್ಯನಲ್ಲೂ ಮಿದುಳಿನ ಚಿಂತನಾಶಕ್ತಿ, ತೋಳಿನ ಬಲ ಎಂದರೆ ರಕ್ಷಿಸಿಕೊಳ್ಳುವ ಸಾಮರ್ಥ್ಯ, ತೊಡೆಯ ‘ಜಂಘಾಬಲ’ ಎಂದರೆ ಬದುಕಿಗೆ ಬೇಕಾದ ವ್ಯಾಪಾರ, ವ್ಯವಸಾಯ ಮುಂತಾದ ಚಾಕಚಕ್ಯತೆ, ಹಾಗೂ ಕಾಲಿನಮೇಲೆ ನಿಲ್ಲುವ ಸ್ಥಿರತೆ ಮತ್ತು ನಿಂತು ದುಡಿಯುವ ಸಾಮರ್ಥ್ಯ, ಇವೆಲ್ಲ ಬೇರೆಬೇರೆ ಮಿಶ್ರಣವಾಗಿ ವ್ಯಕ್ತಪಡುತ್ತವೆ. ಇವುಗಳಲ್ಲಿ ಹಲವು ಹೆಚ್ಚು ಬಲವಾಗಿ ಮತ್ತೆ ಹಲವು ಬಲಹೀನವಾಗಿರುತ್ತವೆ. ಯಾವ ಗುಣಕ್ಕೆ ಒತ್ತು ಸಿಕ್ಕುತ್ತದೋ, ಎಂತೆಂಥ ಅವಕಾಶಗಳು ದೊರಕುತ್ತವೋ, ಎಂತೆಂಥ ತಂದೆತಾಯಿಗಳು, ಗುರುಗಳು ದೊರಕುತ್ತಾರೋ, ಎಂತೆಂಥ ಶಾಲೆಗಳ ಮತ್ತು ಸಮಾಜದ ವಾತಾವರಣದ ಫಲ ದೊರಕುತ್ತದೋ ಅದರಂತೆ ಮನುಷ್ಯನ ಪ್ರತಿಭೆ ಅರಳುತ್ತದೆ.

ಒಂದೇ ರೀತಿಯ ಅವಕಾಶ ಮತ್ತು ವಾತಾವರಣ ಸಿಕ್ಕರೂ ಬೇರೆಬೇರೆ ಪ್ರಮಾಣದ ಫಲಿತಾಂಶಗಳು ದೊರಕುವುದಕ್ಕೆ ಕಾರಣ ನಮ್ಮ ಪೂರ್ವಜನ್ಮ ಸಂಸ್ಕಾರಗಳು ಮತ್ತು ಪೂರ್ವಾರ್ಜಿತ ಕರ್ಮಗಳೇ ಇರಬೇಕು ಎಂಬುದು ಹಿಂದೂಗಳ ನಂಬಿಕೆ. ಅಂದರೆ ಹುಟ್ಟುವಾಗ ಎಲ್ಲರೂ ನಾಲ್ಕೂ ವರ್ಣಗಳ ಮಿಶ್ರಗುಣಗಳಿಂದ ಪ್ರಾರಭಿಸಿ ಯಾವುದೋ ಒಂದು ಗುಣವನ್ನು ರೂಢಿಸಿಕೊಳ್ಳುತ್ತಾರೆ, ಹಲವರು ಬ್ರಾಹ್ಮಣರಾಗುತ್ತಾರೆ, ಹಲವರು ಕ್ಷತ್ರಿಯರಾಗುತ್ತಾರೆ, ಇನ್ನು ಕೆಲವರು ವೈಶ್ಯರಾಗುತ್ತಾರೆ ಮಿಕ್ಕವರು ಶೂದ್ರರಾಗುತ್ತಾರೆ.

ಈ ಸವಾಲು ಬ್ರಾಹ್ಮಣರಿಗೆ ಮಾತ್ರ ಸೀಮಿತವಲ್ಲ :

ಆ ತರುಣಿ ‘ನಾನಾಗಲೀ ನೀವಾಗಲೀ ಯಾರೂ ಬ್ರಾಹ್ಮಣರಲ್ಲ’ ಎಂದಂತೆ, ‘ನೀವ್ಯಾರೂ ಕ್ಷತ್ರಿಯರಲ್ಲ,’ ‘ನೀವ್ಯಾರೂ ವೈಶ್ಯರಲ್ಲ’ ಅಥವಾ ಶೂದ್ರರಲ್ಲ ಮುಂತಾಗಿ ಸವಾಲುಗಳನ್ನು ಎಸೆಯಬಹುದು. ಉದಾಹರಣೆಗೆ, ಕ್ಷತ್ರಿಯರೆಂದರೆ ತಮ್ಮ ತೋಳ್ಬಲದಿಂದ ರಾಜ್ಯವನ್ನು ಕಟ್ಟುವ, ಇತರ(ಶತ್ರು) ರಾಜ್ಯಗಳನ್ನು ಆಕ್ರಮಿಸಿ ಗೆಲ್ಲುವ ಅಥವಾ ರಣರಂಗದಲ್ಲಿ ಮಡಿದು ವೀರಸ್ವರ್ಗ ಸೇರುವ ಜನ. ಇವರು ಯುದ್ಧಮಾಡುವ ಕಲೆಯಲ್ಲಿ ನೈಪುಣ್ಯಹೊಂದಿ ಶಸ್ತ್ರಾಸ್ತ್ರಗಳ ಉಪಯೋಗದಲ್ಲಿ ಪರಿಣತಿ ಪಡೆದಿರಬೇಕು.

ಮಹಾರಾಷ್ಟ್ರದ ಮರಾಠರಲ್ಲಿ, ರಾಜಾಸ್ಥಾನದ ರಾಜಪುತ್ರರಲ್ಲಿ ಈಗಲೂ ತಮ್ಮನ್ನು ಕ್ಷತ್ರಿಯರೆಂದು ಕರೆದುಕೊಳ್ಳುವವರಿದ್ದಾರೆ. ಸೈನ್ಯವನ್ನು ಸೇರುವ ಸಿಖ್ಖರನ್ನು, ಕೊಡಗರನ್ನು ‘ಕ್ಷತ್ರಿಯ’ರೆಂದು ಪರಿಗಣಿಸಬಹುದೇನೋ? ಒಟ್ಟಿನಲ್ಲಿ, ಹುಟ್ಟಿನಿಂದ ಯಾವ ಜಾತಿಯವರಾದಾಗಿದ್ದರೂ ಸರಿ, ಇಂದಿನ ಲೆಕ್ಕದಲ್ಲಿ ಸೈನ್ಯಕ್ಕೆ ಸೇರಿದವರೆಲ್ಲ ಕ್ಷತ್ರಿಯರು. ಆದೇರೀತಿ ಆರ್ಥಿಕ ಪ್ರಗತಿಗಾಗಿ, ವ್ಯಾಪಾರ-ವ್ಯವಸಾಯಾದಿ ವೃತ್ತಿಗಳಲ್ಲಿ ತೊಡಗಿದವರೆಲ್ಲ ವೈಶ್ಯರೇ. ತಮಗೆ ತಾವೇ ಸ್ವಾಮಿಗಳಾಗದೇ ಇತರರ ಕೈಕೆಳಗೆ ದುಡಿಯುವ ಸೇವಕಜನರೆಲ್ಲ ಶೂದ್ರರು. ಈ ತಕ್ಕಡಿಯಲ್ಲಿ ತೂಗಿಕೊಂಡರೆ ನಮ್ಮಲ್ಲಿ ಬಹುಸಂಖ್ಯಾತರು ಶೂದ್ರರು.

ಬ್ರಾಹ್ಮಣ್ಯವೆಂಬುದು ಒಂದು ಆದರ್ಶ :

ಜಾತಿಯಿಂದ ಬ್ರಾಹ್ಮಣರಾಗಿ ವೃತ್ತಿಯಿಂದ ಇಂಜಿನಿಯರುಗಳೋ, ಡಾಕ್ಟರುಗಳೋ, ಲಾಯರುಗಳೋ ಆಗಿರುವ ನಮ್ಮಲ್ಲನೇಕರಲ್ಲಿ ಬ್ರಾಹ್ಮಣ್ಯದ ಆಚರಣೆಯಿಲ್ಲ, ಬ್ರಹ್ಮಜ್ಞಾನದ ಹಂಬಲವಾಗಲೀ ಅದನ್ನು ಕೈಗೂಡಿಸಿಕೊಳ್ಳಲು ಬೇಕಾದ ಸಿದ್ಧತೆಯಾಗಲೀ ಇಲ್ಲ. ತಾವೇ ಸ್ವತಃ ದಿಕ್ಕುಗಾಣದೇ ಇರುವ ತಂದೆತಾಯಿಗಳು ತಮ್ಮ ಮಕ್ಕಳಿಗೆ ಏನುತಾನೇ ದೀಕ್ಷೆ ಕೊಡಲು ಸಾಧ್ಯ?

ಬ್ರಾಹ್ಮಣ್ಯವೆಂಬುದು ಪ್ರತಿಯಾಬ್ಬನ ಆದರ್ಶದ ಹಂಬಲವಾಗಬೇಕು, ಅಂಥಾ ಆದರ್ಶ ಎಲ್ಲರ ಕೈಗೂ ಎಟಕಲಾರದ್ದು ಎಂಬ ತಿಳಿವು ಇದ್ದರೂ ಸಹ. ಅಲ್ಲೊಬ್ಬ ಸತ್ಯಕಾಮ, ಇಲ್ಲೊಬ್ಬ ನಚಿಕೇತ, ಅಲ್ಲೊಬ್ಬ ವಾಲ್ಮೀಕಿ, ಇಲ್ಲೊಬ್ಬ ವಿಶ್ವಾಮಿತ್ರ, ಅಲ್ಲೊಬ್ಬ ಕಬೀರ, ಇಲ್ಲೊಬ್ಬ ಕನಕ, ಹೀಗೆ ಪುರಾಣ ಇತಿಹಾಸಗಳನ್ನು ತಡಕಿದರೆ ಜಾತಿಯಿಂದ ಬ್ರಾಹ್ಮಣನಲ್ಲದವನು ಬ್ರಾಹ್ಮಣ್ಯವನ್ನು ಸಂಪಾದಿಸಿದ ಉದಾಹರಣೆಗಳು ದೊರಕುತ್ತವೆ.

ಸಮಾಜದ ರೀತಿ-ರಿವಾಜುಗಳು ಏನೇ ಇರಲಿ, ಬೌದ್ಧಿಕ ದೃಷ್ಟಿಕೋಣದಲ್ಲಿ ಬ್ರಾಹ್ಮಣ್ಯ ಕೇವಲ ಹುಟ್ಟಿನಿಂದ ಬರುವಂಥದ್ದಲ್ಲ (ಹುಟ್ಟಿನಿಂದ ಬರಬಾರದೆಂದಲ್ಲ) ಎಂಬ ಆ ಕಿರಿಯಳ ವಾದ ಹಿರಿಯರಿಗೂ ಒಪ್ಪಿಗೆಯಾಗಲೇಬೇಕಾದದ್ದು ಅನ್ನಿಸುವುದಿಲ್ಲವೇ? ‘ಐವೀ ಲೀಗ್‌ ವಿದ್ಯಾಲಯಗಳಿಗೆ ಯೋಗ್ಯತೆ ಇದ್ದವರಿಗೆಲ್ಲ ಪ್ರವೇಶ ದೊರಕುವುದು ನ್ಯಾಯವೋ, ಅಥವಾ ಐವೀ ಲೀಗ್‌ ಶಾಲೆಗಳಲ್ಲಿ ಕಲಿತವರ ಮಕ್ಕಳಿಗೆ ಮಾತ್ರ ಅಲ್ಲಿ ಪ್ರವೇಶ ದೊರಕಬೇಕೋ?’ ಎಂಬ ಪ್ರಶ್ನೆಯಾಂದಿಗೆ ವಿರಮಿಸುವೆ, ಮುಂದಿನ ಕಂತಿನವರೆಗೆ.

ಕೆ.ಜಿ.ವಿ.ಕೃಷ್ಣ ಅವರಿಗೆ ಸಹಸ್ರಚಂದ್ರದರ್ಶನ – K.G.Venkatakrishna – The Gentleman

ಅಮೆರಿಕದ ರಾಜಧಾನಿಯ ಕನ್ನಡಿಗರಲ್ಲಿ ಎಂಭತ್ತನ್ನು ದಾಟಿದವರು ಬೆರಳೆಣಿಸುವಷ್ಟು ಮಂದಿ ಇರಬಹುದು. ಇಂಥವರ ಅಗ್ರಪಂಕ್ತಿಯಲ್ಲಿ ಕೆ.ಜಿ.ವೆಂಕಟಕೃಷ್ಣ ಒಬ್ಬ ಅಪರೂಪದ ವ್ಯಕ್ತಿ. ಇವರ ಚಿರಯುೌವನದ ರಹಸ್ಯವೇನು ಎನ್ನುವಿರೊ? -ಸರಳ ಜೀವನ, ಹಿತಮಿತವಾದ ಆಹಾರ, ಮನಸ್ಸನ್ನು ಪ್ರಫುಲ್ಲಗೊಳಿಸುವಂಥ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು, ದೇಹವನ್ನು ಚುರುಕಾಗಿಡುವ ಟೆನ್ನಿಸ್‌ ಆಟ, ಮಿದುಳನ್ನು ಚುರುಕಾಗಿಡುವ ಓದು-ಬರಹ, ಸುತ್ತಮುತ್ತಲ ಬಂಧು-ಮಿತ್ರರೊಂದಿಗೆ ಆರೋಗ್ಯಕರ ಸಂಬಂಧ, ದೇವರ ಕೆಲಸವೇ ಆಗಲಿ, ಕನ್ನಡದ ಕೆಲಸವೇ ಆಗಲಿ, ಸಂಗೀತ-ಸಾಹಿತ್ಯಗಳ ಕೆಲಸವೇ ಆಗಲಿ ಎಲ್ಲದರಲ್ಲೂ ಆಸಕ್ತಿ.

ಈ ಕಾರಣಗಳಿಂದ ಇವರು ನಡೆಸುವ ಜೀವನ ಬಲು ಸ್ವಾರಸ್ಯಕರ, ಆರೋಗ್ಯಕರ ಮತ್ತು ಆಯುಷ್ಯವೃದ್ಧಿಗೆ ಹೇಳಿ ಮಾಡಿಸಿದ ಲೇಹ್ಯದಂತೆ ರುಚಿಕರ! ಉತ್ಸಾಹದಿಂದ ಪಾಲ್ಗೊಂಡು ಮುಕ್ತಹಸ್ತದಿಂದ ಸಹಾಯಮಾಡಿದರೂ ಎಲೆಮರೆಯ ಕಾಯಾಗಿ ವಾಷಿಂಗ್‌ಟನ್‌ ಕನ್ನಡಿಗರ ದೃಷ್ಟಿಯಲ್ಲಿ ‘ಜೆಂಟಲ್‌ಮನ್‌’ ಎನ್ನಿಸಿಕೊಳ್ಳುವ ಕೆ.ಜಿ. ವೆಂಕಟಕೃಷ್ಣ ಅವರಿಗೆ ಎಂಭತ್ತು ತುಂಬಿದ ಶುಭಸಂದರ್ಭವನ್ನು ಮೆಲಕುಹಾಕುತ್ತ ಜಾಲತಂಗದ ಓದುಗರಿಗೆ ಅವರ ಸಂಕ್ಷಿಪ್ತ ಪರಿಚಯ ಮಾಡಿಕೊಡುವುದೇ ಈ ಕಿರುಲೇಖನದ ಉದ್ದೇಶ.

KGV Krishna and Leela Krishnaಅಕ್ಟೋಬರ್‌ 9, 2005ರಂದು ಕೆಜಿವಿ ಅವರ ಕುಟುಂಬ -ಅರ್ಧಾಂಗಿ ಲೀಲಾ, ಮಗಳು ಗೌರಿ, ಮಗ ಸಂಜಯ, ಅಳಿಯ, ಸೊಸೆ ಮತ್ತು ಮೊಮ್ಮಕ್ಕಳು ಹಾಗು ಹತ್ತಿರದ ಸಂಬಂಧಿಗಳು, ಆಪ್ತಮಿತ್ರರು, ಕಾವೇರಿ ಕನ್ನಡಸಂಘದ ಹಲವಾರು ಹಿರಿಯ ಕಿರಿಯ ಗೆಳೆಯರೆಲ್ಲ ಒಟ್ಟುಗೂಡಿ ಶ್ರೀ ಶಿವ ವಿಷ್ಣು ದೇವಾಲಯದಲ್ಲಿ ಕೆಜಿವಿ ಅವರ ಎಂಭತ್ತನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬೆಂಗಳೂರಿನಲ್ಲಿ ಜನಿಸಿದ ಕೃಷ್ಣ ಅವರು, ಮೊದಲು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ, ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಳನ್ನು ಪಡೆದು 1950ರಿಂದ 56ರವರೆಗೆ ಮುಂಬೈನ ಜೈ ಹಿಂದ್‌ ಕಾಲೇಜಿನಲ್ಲಿ, ತದನಂತರ 1956ರಿಂದ 66ರವರೆಗೆ ಕೀನ್ಯಾದ ನೈರೋಬೀ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಬೋಧಿಸುವುದರಲ್ಲಿ ನಿರತರಾಗಿದ್ದರು. ಇದರ ಮಧ್ಯೆ ಒಂದು ವರ್ಷ (1963-64) ಅಮೆರಿಕದಲ್ಲಿ ನ್ಯೂಯಾರ್ಕ್‌ ಸಂಸ್ಥಾನದ ಸಿರಕ್ಯೂಸ್‌ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಉಪನ್ಯಾಸಮಾಡಿದರು. ಇವರ ನೈಪುಣ್ಯವನ್ನು ಗುರುತಿಸಿದ ವಿಶ್ವಸಂಸ್ಥೆ (ಯುನೆಸ್ಕೋ) ಇವರನ್ನು ಸಲಹೆಗಾರನನ್ನಾಗಿ ಮಾಡಿಕೊಂಡಿತು. 1966ರಲ್ಲಿ ಅಮೇರಿಕಕ್ಕೆ ಬಂದು ನೆಲಸಿದಮೇಲೆ 25 ವರ್ಷಗಳ ಸತತ ಸೇವೆಯನ್ನು ವಿಶ್ವ ಬ್ಯಾಂಕ್‌ ಸಂಸ್ಥೆಗೆ ಸಲ್ಲಿಸಿ ಎಲ್ಲರ ಮಾನ್ಯತೆ ಪಡೆದು ಈಗ ಸುಖ-ಶಾಂತಿ-ಸಮೃದ್ಧಿಗಳ ನಿವೃತ್ತಿಜೀವನದಲ್ಲಿ ವಿಶ್ರಾಂತಿಯ ನಡುವೆಯೂ ಅನೇಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಕೆಜಿವಿ ಅವರ ಸೇವೆಯ ವ್ಯಾಪ್ತಿಯಲ್ಲಿ ಸೇರಿದ ಪೂರ್ವ ಮತ್ತು ದಕ್ಷಿಣ ಆಫ್ರಿಕಾ, ದಕ್ಷಿಣ ಏಷ್ಯಾ, ದೂರಪ್ರಾಚ್ಯ, ಮೊದಲಾದ ಅನೇಕ ಭಾಗಗಳಲ್ಲಿ, ಟರ್ಕಿ, ಪಾಕೀಸ್ತಾನ ಮೊದಲುಗೊಂಡು 25ರಾಷ್ಟ್ರಗಳ ಸರ್ಕಾರಗಳಿಗೆ, ವ್ಯವಸಾಯದ ನಿರ್ವಹಣೆಗೆ ತಕ್ಕ ಆರ್ಥಿಕ ಸಲಹೆಗಳನ್ನು ಕೊಡುವುದರ ಮೂಲಕ, ಅಲ್ಲಿಯ ಜನತೆಯನ್ನು ಶ್ರೀಮಂತಗೊಳಿಸಿದ್ದಾರೆ.

ಸಂಗೀತ, ಸಾಹಿತ್ಯಗಳ ಬಗ್ಗೆ ಇವರಿಗಿರುವ ಒಲವು ವಾಷಿಂಗ್‌ಟನ್ನಿನ ಅವರ ಮಿತ್ರಮಂಡಲಿಗೆ ಚಿರಪರಿಚಿತ. ಸಂಗೀತದ ವಿಚಾರದಲ್ಲಿ ಕೆಜಿವಿ ಮಡಿವಂತರಲ್ಲ, ಅವರಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತ ಎಷ್ಟು ಪ್ರಿಯವೋ, ಲಘುಸಂಗೀತವೂ ಅಷ್ಟೇ ಪ್ರಿಯ, ಏಕೆ, ಪಾಶ್ಚಿಮಾತ್ಯ ಸಂಗೀತಕ್ಕೂ ಅವರು ತಲೆದೂಗುತ್ತಾರೆ, ಮಿಣುಕುವ ದೀಪದ ಕತ್ತಲು-ಬೆಳಕಿನ ತಾಕಲಾಟದ ನಡುವೆ ರಾಕ್‌ ಬ್ಯಾಂಡಿನ ಡ್ರಮ್ಮಿನ ಬಡಿತಕ್ಕೂ ತಾಳ ಹಾಕುತ್ತಾರೆ! ಇವರು ಒಳ್ಳೇ ಓದುಗರು, ಅದರಲ್ಲೂ ಹಣಕಾಸಿನ ವ್ಯವಸ್ಥೆಯ ವಿಷಯ ಮತ್ತು ಜಗತ್ತಿನ ಆಗುಹೋಗುಗಳು ಇವರ ಅಂತರಂಗಕ್ಕೆ ಹತ್ತಿರದ ವಸ್ತುಗಳು. ಮುಂಬೈನಲ್ಲಿ ಜೈಹಿಂದ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾಗ ರಂಗ-ಚಟುವಟಿಕೆಯಲ್ಲಿ ಸಹ ತೊಡಗಿದ್ದು, ನಟ ಮತ್ತು ನಿರ್ದೇಶಕರೂ ಆಗಿದ್ದರೆಂದರೆ, ಕೆಜಿವಿ ಅವರ ಬಹುಮುಖ ಪ್ರತಿಭೆಯ ಪರಿಚಯ ಕಿಂಚಿತ್ತಾದರೂ ಆಗಬಹುದೇನೋ? ಎಂಭತ್ತರ ತಾರುಣ್ಯದಲ್ಲಿ ತಪ್ಪದೇ ಟೆನ್ನಿಸ್‌ ಆಡುವ ಈ ಕ್ರೀಡಾಪಟು ಅನೇಕ ಟ್ರೋಫಿಗಳ ಒಡೆಯ.

ವಿಶ್ವಬ್ಯಾಂಕಿನ ವೃತ್ತಿಯ ಕಾರಣದಿಂದ ಕೆಜಿವಿ ಅವರಿಗೆ, ಹತ್ತಾರು ಸರ್ಕಾರಗಳೊಂದಿಗೆ, ಅನೇಕ ಮಜಲುಗಳಲ್ಲಿ, ದುಡಿಯುವ ಸದವಕಾಶಗಳು ಒದಗಿದವು. ಹಾಗಾಗಿ, ಇಥಿಯೋಪಿಯಾದ ಚಕ್ರವರ್ತಿ ಹೈಲಿ ಸೆಲಾಸಿ ಅವರೊಂದಿಗೆ ಮತ್ತು, ಕೀನ್ಯಾ, ಉಗಾಂಡ, ಟಾನ್‌ಜಾನಿಯಾ, ಮಲಾವಿ ಹಾಗು ಸುಡಾನ್‌ ದೇಶಗಳ ಅಧ್ಯಕ್ಷರುಗಳೊಂದಿಗೆ ರಸಮಯ ಘಳಿಗೆಗಳನ್ನು ಕಳೆಯುವ ಸುಯೋಗ ಅವರ ಪಾಲಿಗೆ ದೊರಕಿತ್ತು. ಆಫ್ರಿಕಾದಲ್ಲಿದ್ದಾಗ, ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರಿಗೆ ತಮ್ಮ ನೈರೋಬಿಯ ಮನೆಯಲ್ಲಿ ಆತಿಥ್ಯ ಮಾಡುವ ಅವಕಾಶ ಅವರಿಗೆ ದೊರಕಿದ್ದನ್ನು ಅವರು ಅತ್ಯಂತ ಅಕ್ಕರೆಯಿಂದ ನೆನೆಯುತ್ತಾರೆ.

ಕರ್ನಾಟಕದಿಂದ ಬರುವ ಯಾವ ಸಂಗೀತಗಾರರನ್ನಾಗಲೀ, ನಟರನ್ನಾಗಲೀ, ಕವಿಗಳನ್ನಾಗಲೀ, ಅವರು ಭೇಟಿಯಾಗಲು ಉತ್ಸುಕರಾಗುತ್ತಾರೆ. ಅವರೊಂದಿಗೆ ಬೆರೆತು, ಅವರನ್ನು ಗೌರವಿಸುವ ಸತ್ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. 1985ರಲ್ಲಿ ನಾನು ಕಾವೇರಿಯ ಅಧ್ಯಕ್ಷನಾಗಿದ್ದಾಗ, ಗಣೇಶನ ಹಬ್ಬದ ಕಾರ್ಯಕ್ರಮಕ್ಕೆ ಮೊಟ್ಟಮೊದಲ ಬಾರಿಗೆ ವಿದ್ವಾನ್‌ ಆರ್‌.ಕೆ. ಶ್ರೀಕಂಠನ್‌ ಅವರ ಸಂಗೀತ ಕಚೇರಿಯನ್ನು ಏರ್ಪಡಿಸಿವ ಸದವಕಾಶ ನನಗೆ ದೊರಕಿತ್ತು. ಆಗ ಕೆಜಿವಿ ಅವರು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ತಮ್ಮ ಸಹಪಾಠಿಗಳಾಗಿದ್ದ ಶ್ರೀಕಂಠನ್‌ ಅವರನ್ನು ಸ್ವಗೃಹದಲ್ಲಿ ಇಟ್ಟುಕೊಂಡು ಸತ್ಕರಿಸಿದ್ದಷ್ಟೇ ಅಲ್ಲ, ಸಂಗೀತಗಾರರಿಗೆ ಮತ್ತು ಅವರ ಪಕ್ಕವಾದ್ಯದವರಿಗೆ ಕೊಡಬೇಕಾದ ಸಂಭಾವನೆಯ ಗೌರವಧನವನ್ನೂ ಸಹ ಕೊಡಲು ಮುಂದೆ ಬಂದಿದ್ದನ್ನು ನಾನು ಎಂದೂ ಮರೆಯಲಾರೆ.

ಕೃಷ್ಣ ಅವರು ಕಾವೇರಿಯನ್ನು ಕಟ್ಟಿ ಬೆಳೆಸಿದ ಹಿರಿಯರಲ್ಲಿ ಒಬ್ಬರು. ರಾಜಧಾನಿಯ ಶ್ರೀ ಶಿವ ವಿಷ್ಣು ದೇವಾಲಯದ ಕೆಲಸದಲ್ಲೂ ಉತ್ಸಾಹದಿಂದ ಭಾಗವಹಿಸಿದ್ದಾರೆ. ಹಿರಿಯರಲ್ಲಿ ಗಣ್ಯರಾಗಿ, ಕಾವೇರಿ ಕನ್ನಡ ಸಂಘದ ಕನ್ನಡ ಚಟುವಟಿಕೆಗಳಿಗೆ ಸ್ಫೂರ್ತಿದಾಯಕರೂ ಮಾರ್ಗದರ್ಶಿಗಳೂ ಆಗಿದ್ದಾರೆ. ಇವರ ಬಾಳ ಪಯಣದಲ್ಲಿ ಸದಾ ಇವರೊಂದಿಗೆ ಇದ್ದು ಜೀವನಕ್ಕೆ ಅರ್ಥವನ್ನೂ ಬಲವನ್ನೂ ತುಂಬಿದ ತಮ್ಮ ಧರ್ಮಪತ್ನಿ ಲೀಲಾ ಅವರೊಂದಿಗೆ ಚೆವೀ ಚೇಸ್‌ನಲ್ಲಿ ಇವರ ವಾಸ. ಮೊಮ್ಮಕ್ಕಳಾದ ರೇಷ್ಮಾ ಮತ್ತು ಅಂಜಲಿ ಅವರ ಮೇಲೆ ಇವರಿಗೆ ತುಂಬಾ ಅಕ್ಕರೆ. ತಮ್ಮ ಜೀವನದ ಅನುಭವಗಳನ್ನು ಶ್ರೀಮಂತಗೊಳಿಸಿರುವ ನೂರಾರು ಸ್ವಾರಸ್ಯಕರ ಘಟನೆಗಳನ್ನು ತಿಳಿಹಾಸ್ಯ ಬೆರೆತ ಅವರದೇ ಶೈಲಿಯಲ್ಲಿ ಚಿತ್ರ ಬಿಡಿಸಿದಂತೆ ಬಣ್ಣಿಸುವುದನ್ನು ಅವರ ಬಾಯಿಂದಲೇ ಕೇಳಬೇಕು!

ಸಹಸ್ರಚಂದ್ರಗಳನ್ನು ಕಂಡ ನಮ್ಮ ‘ಜೆಂಟಲ್‌ಮನ್‌’ ಕೆಜಿವಿ ಆರೋಗ್ಯದಿಂದ ಬಾಳುತ್ತಾ ಶತಕವನ್ನು ಬಾರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ, ವಿರಮಿಸುವೆ ಮುಂದಿನ ಕಂತಿನ ವರೆಗೆ.

ಕೊನೆಗೂ ಆಪ್ತಮಿತ್ರನ ಭೇಟಿ ಆಯಿತು! – A few good words about Kannada movie Apthamitra

ಹಲವಾರು ವಾರಗಳ ಹಿಂದೆ ಈ ಅಂಕಣದಲ್ಲಿ ಕನ್ನಡ ಸಿನಿಮಾ ಬಗ್ಗೆ ಬರೆದು- ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ನಿಸ್ಸಂದೇಹವಾಗಿ- ಅನೇಕ ಜನರನ್ನು ಉದ್ರೇಕಗೊಳಿಸಿದ್ದೆ. ಜಾಲತರಂಗವನ್ನು ತಪ್ಪದೇ ಓದುವವರಲ್ಲದೇ ಇನ್ನೂ ಅನೇಕರು ನನ್ನ ‘ನೋಡಲಾರೆ ಕನ್ನಡ ಚಿತ್ರ’ ಲೇಖನವನ್ನೋದಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದರು. ಆ ಪ್ರತಿಕ್ರಿಯೆಗಳಲ್ಲಿ ಆಯ್ದ ಮುಖ್ಯಾಂಶಗಳೂ ಅವಕ್ಕೆ ನಾನು ಕೊಟ್ಟ ಸಮಾಧಾನಗಳೂ/ವಿವರಣೆಗಳೂ ಸಹ ‘ದುವೆ ಕನ್ನಡ’ ಓದುಗರಿಗೆ ಲಭಿಸಿದ್ದವು. ನನಗೆ ಬಂದ ಲೆಕ್ಕವಿಲ್ಲದಷ್ಟು ಈ-ಮೈಲುಗಳಲ್ಲಿ ಅನೇಕರು ನನ್ನ ವಾದಗಳನ್ನು ಒಪ್ಪಿ ಬರೆದಿದ್ದರು, ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಸಿಟ್ಟಿಗೆದ್ದಿದ್ದರು. ‘ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವ (ಅಂ)ಕಣಕ್ಕೆ ಇಳಿದಮೇಲೆ ಗುದ್ದಿಸಿಕೊಳ್ಳುವುದಕ್ಕೂ ತಯಾರಿರಬೇಕು’ ಎಂಬ ಸತ್ಯವನ್ನು ಚೆನ್ನಾಗಿ ಬಲ್ಲೆನಾಗಿ, ನಾನು ಘಾಸಿಗೊಳ್ಳದೇ ಕಣದಿಂದ ಹೊರಬಂದಿದ್ದೆ. ಹಾಗೆ ಒಮ್ಮೊಮ್ಮೆ ಓದುಗರಿಂದ ಗುದ್ದಿಸಿಕೊಂಡಾಗ ಬರಹಗಾರನ ವ್ಯಕ್ತಿತ್ವಕ್ಕೆ ಒಂದು ರೀತಿಯ ಸಂಸ್ಕಾರ ಉಂಟಾಗುತ್ತದೆ ಎಂಬ ವಿಚಾರವನ್ನೂ ಜಾಲತರಂಗದ ಓದುಗ-ಬಂಧುಗಳೊಂದಿಗೆ ಹಿಂದೆಯೇ ಹಂಚಿಕೊಂಡಿದ್ದೇನೆ. (ಅಳಿಸಿ ಹೋಗುತ್ತಿರುವ ಸಂಖ್ಯೆಗಳನ್ನು ಮತ್ತೆ ಮೈಲುಗಲ್ಲಿನ ಮೇಲೆ ತಿದ್ದುವ ‘ರೀ ಕ್ಯಾಲಿಬ್ರೇಷನ್‌’ ಎಂಬ ಕ್ರಿಯೆ ಅದು.)

‘ಕಹಿ ಸತ್ಯಗಳ ನಡುವೆಯೂ ಕನ್ನಡ ಪ್ರೀತಿಯನ್ನು ಉಳಿಸಿಕೊಳ್ಳುವ’ ಸಂದೇಶಗಳ ನಡುವೆ ಹತ್ತಾರು ಓದುಗ ಮಿತ್ರರು ಉತ್ತಮ ಕನ್ನಡಚಿತ್ರಗಳ ಪಟ್ಟಿಯನ್ನೇ ಒದಗಿಸಿದ್ದರು. ಅವುಗಳ ಪೈಕಿ ಎಲ್ಲ ಚಿತ್ರಗಳೂ ವಾಷಿಂಗ್‌ಟನ್ನಿ ಗೆ ಬಂದಿಲ್ಲ. ಅನೇಕರ ಮೆಚ್ಚುಗೆಯನ್ನು ಪಡೆದ ಎರಡೋ ಮೂರೋ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ. ಅವುಗಳಲ್ಲಿ ನನಗೆ ನೋಡಲಾಗಿದ್ದು,‘ಜೋಕ್‌ ಫಾಲ್ಸ್‌’ ಮತ್ತು ‘ಆಪ್ತಮಿತ್ರ’. ಜೋಕ್‌ ಫಾಲ್ಸ್‌ ಪರವಾಗಿಲ್ಲ, ತಮಾಷೆಯಾಗಿತ್ತು. ಅದರ ಬಗ್ಗೆ ಬರೆಯಲೇಬೇಕೆಂಬ ಒತ್ತಡ ಬರಲಿಲ್ಲ.

ಮೊನ್ನೆ ಕಾವೇರಿ ಕನ್ನಡ ಸಂಘದವರು ಏರ್ಪಡಿಸಿದ್ದ ‘ಆಪ್ತಮಿತ್ರ’ ಚಿತ್ರ ಪ್ರದರ್ಶನದಲ್ಲಿ ನಿರ್ಮಾಪಕ ದ್ವಾರಕೀಶ ಅವರನ್ನು ಪ್ರತ್ಯಕ್ಷವಾಗಿ ನೋಡುವ, ಕೈಕುಲುಕುವ ಮತ್ತು ಅವರ ನಾಲ್ಕು ಸಿಹಿ ಕನ್ನಡ ಮಾತುಗಳನ್ನು ಕೇಳುವ ಸುಯೋಗ ಸಹ ದೊರಕಿತು. ಸುಮಾರು ಮೂರು ದಶಕಗಳ ಹಿಂದೆ ಬೆಂಗಳೂರಿನಲ್ಲಿ ನೋಡಿದ್ದಾಗ ಹೇಗಿದ್ದರೋ ಈಗಲೂ ಹಾಗೇ ಇರುವುದನ್ನು ಕಂಡು ಮನಸಾರೆ ಅಚ್ಚರಿ ಪಟ್ಟೆ. ಅಂದು ಸಿನಿಮಾಕ್ಕೆ ಬಂದಿದ್ದ ಅನೇಕ ಸ್ನೇಹಿತರು ಸಹಜವಾಗೇ ಹಲವು ಸವಾಲುಗಳನ್ನು ಎಸೆದರು. ‘ಏನಪ್ಪ ಜಾಲತರಂಗದಲ್ಲಿ ಮುಂದಿನ ಲೇಖನ ಆಪ್ತಮಿತ್ರನ ಬಗ್ಗೇ ತಾನೆ? ಕೆಟ್ಟ ಸಿನಿಮಾ ನೋಡಿ ಬರೀ ನೆಗೆಟಿವ್‌ ಕಾಮೆಂಟ್ಸ್‌ ಮಾತ್ರ ಬರೆದು, ಒಳ್ಳೆಯದನ್ನು ನೋಡಿದಾಗ ಪಾಸಿಟಿವ್‌ ಕಾಮೆಂಟ್ಸ್‌ ಬರೀದೇ ಹೋದ್ರೆ ಸುಮ್ಮನೇ ಬಿಡ್ತೀವಾ?’ ಅಂತ ಬೇರೆ ಕೆಲವರು ಹೆದರಿಸಿದರು! ಮತ್ತೆ ಕೆಲವರು ಕೈಜೋಡಿಸಿ ದಯವಿಟ್ಟು ಕನ್ನಡ ಚಿತ್ರಗಳು ಕೆಟ್ಟವೆಂಬಂತೆ ಬರೆಯಬೇಡಿ ಎಂದು ಕಳಕಳಿಯಿಂದ ಪ್ರಾರ್ಥಿಸಿದರು. ನನಗೆ ಯಾರ ಮೇಲೂ ಕೊಡಲೀ ಮಸೆಯುವ ಅಗತ್ಯವಾಗಲೀ ಅಭ್ಯಾಸವಾಗಲೀ ಇಲ್ಲ. ‘ಜಾಲತರಂಗ’ ಸಿನಿಮಾ ವಿಮರ್ಶೆಯ ಅಂಕಣವಂತೂ ಅಲ್ಲ. ಆದರೂ, ‘ಆಪ್ತಮಿತ್ರ’ ಚಿತ್ರದ ಬಗ್ಗೆ ನಾಲ್ಕು ಮಾತುಗಳನ್ನು ಬರೆಯುವುದೇ ಸಮಂಜಸವೆಂದು ನಿರ್ಧರಿಸಿಕೊಂಡೆ. ‘ತುಂಟಾಟ’ದಲ್ಲಿ ಪ್ರಾರಂಭವಾದ ಚರ್ಚೆಗೆ ‘ಆಪ್ತಮಿತ್ರನಿಂದ’ ಪರಿಸಮಾಪ್ತಿ ದೊರಕಲಿ.

‘ಆಪ್ತಮಿತ್ರ’ ಚಿತ್ರದ ಬಗ್ಗೆ ಅನೇಕರು ಹೇಳಿದ್ದ ಮಾತುಗಳನ್ನು ಬಿಟ್ಟರೆ ನಾನು ಯಾವ ವಿಮರ್ಶೆಗಳನ್ನೂ ಓದಿರಲಿಲ್ಲ. ಅದು ದೆವ್ವ-ಭೂತಗಳ ಕಥಾವಸ್ತು ಹೊಂದಿದೆ ಎಂಬ ವಿಷಯ ಸಹ ನನ್ನ ಪಾಲಿಗೆ ಒಂದು ‘ಸಸ್ಪೆನ್ಸ್‌’ ಆಗಿದ್ದು ಒಂದುರೀತಿಯಲ್ಲಿ ಒಳ್ಳೆಯದೇ ಆಯಿತು. ‘ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳದೇ ತೆರೆದ ಮನಸ್ಸಿನಿಂದ ಸಿನಿಮಾ ನೋಡಿ ಖುಷಿಪಡಿ’ ಎಂದು ಒಬ್ಬ ಓದುಗರು ಕೊಟ್ಟಿದ್ದ ಸಲಹೆಯ ಮೇರೆಗೆ ಹೋಗಿ ಕೂತರೂ, ಅಷ್ಟೊಂದು ಜನ ಹೇಳಿದ ಮೇಲೆ ಚಿತ್ರ ಚೆನ್ನಾಗಿರಲೇಬೇಕೆಂಬ ನಿರೀಕ್ಷೆ ಮನಸ್ಸಿನಲ್ಲಿ ಬೇರೂರಿ ಆಗಿತ್ತು. ಹೀಗಾಗಿ, ಚಿತ್ರ ಚೆನ್ನಾಗಿರದೇ ಹೋಗಿದ್ದರೆ ಮನಸ್ಸಿಗೆ ತುಂಬಾ ನಿರಾಸೆಯಾಗುವ ಸಾಧ್ಯತೆ ಇತ್ತು. ಹಾಗಾಗದೇ ಇರಲಿ ಎಂದು ದೇವರಲ್ಲಿ ಮೊರೆ ಇಟ್ಟೆ. ಈ ಬಾರಿ, ಚಿತ್ರ ನೋಡಲು ಮಕ್ಕಳು ಬರಲಿಲ್ಲ, ಅರ್ಧಾಂಗಿ ಬಂದಳು. ದೆವ್ವ-ಭೂತದ ಮಾತು ಶುರುವಾದದ್ದೇ ತಡ, ನನಗೆ ಸ್ವಲ್ಪ ಆತಂಕ ಶುರುವಾಯಿತು, ಅರ್ಧಾಂಗಿ ಏನೇನೆನ್ನುವಳೋ ಎಂಬ ಅಳುಕನ್ನು ಅನುಭವಿಸುತ್ತಿರುವಾಗಲೇ ಕುತೂಹಲ ಹುಟ್ಟಿಸುವ ಕಥಾವಸ್ತು ಮನಸ್ಸನ್ನು ಆವರಿಸಿಕೊಂಡಿತು.

A still from Apthamitraಚಿತ್ರ ನೋಡುತ್ತ ನೋಡುತ್ತ, ಕ್ರಮೇಣ ಆತಂಕ ಕಮ್ಮಿಯಾಯಿತು. ನಟ ನಟಿಯರ ಅಭಿನಯ ಉತ್ತಮವಾಗಿತ್ತು, ಕೇವಲ ಮುಖ್ಯಪಾತ್ರಗಳದ್ದು ಮಾತ್ರ ಅಲ್ಲ, ಎಲ್ಲ ಪಾತ್ರಗಳದ್ದೂ! ಇದು ಒಂದು ವಿಶೇಷವೇ ಸರಿ. ಸಂಗೀತ ನೃತ್ಯಗಳೂ ಉತ್ತಮ ಮಟ್ಟದವಾಗಿದ್ದವು, ಇದೂ ಮತ್ತೊಂದು ವಿಶೇಷ. ಕಥೆ ‘ಅನಯೂಷಯಲ’ ಅನ್ನಬೇಕು. ಅತಿಮಾನುಷ ಕ್ರಿಯೆಗಳಿಂದ ಕೂಡಿದ ಕಥಾವಸ್ತುವಿನ ಕಾರಣದಿಂದ ಅಲ್ಲಿನ ಸನ್ನಿವೇಶಗಳನ್ನು ಯಾವ ತರ್ಕಕ್ಕೂ ಒಡ್ಡುವುದು ಸಾಧ್ಯವಿಲ್ಲ. ಅದರಿಂದ ವಿಮರ್ಶಕ ಮನಸ್ಸಿಗೆ ವಿದಾಯ ಹೇಳಿ ಹಗುರವಾದ ಮನಸ್ಸಿನಿಂದ ಸಿನಿಮಾ ನೋಡಬಹುದು. ಆದರೆ, ಮನೋವಿಜ್ಞಾನಿಯು ಪರೇಙ್ಗಿತ-ಜ್ಞಾನಿಯಾದಾಗ (ಅಂದರೆ, ಇತರರ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳನ್ನು ಅರಿತಿರುವ ‘ಮೈಂಡ್‌ ರೀಡರ್‌’ ಆದಾಗ) ಅದನ್ನು ತಮಾಷೆ ಎಂದು ಪರಿಗಣಿಸಿ ಮುಂದೆ ಸಾಗಬೇಕಷ್ಟೇ. ಚಿತ್ರ ತಾಂತ್ರಿಕವಾಗಿ ಪ್ರಶಸ್ತವಾಗಿತ್ತು. ವಿಷ್ಣು ಈಗಲೂ ಚೆನ್ನಾಗಿ ಕುಣಿಯುವುದು ಬಡಿದಾಡುವುದೂ ಮುಂತಾದ ಸಾಹಸಗಳನ್ನು ಮಾಡುವುದನ್ನು ಕಂಡರೆ ಸ್ವಲ್ಪ ಆಶ್ಚರ್ಯವೇ ಆಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರ ಮಾತುಗಳು ಮತ್ತು ನಡವಳಿಕೆಗಳಲ್ಲಿ ಅಶ್ಲೀಲವಿಲ್ಲದಿರುವುದು ತುಂಬಾ ಸಮಾಧಾನದ ವಿಷಯ.

ಮನೆಮಂದಿಯಾಂದಿಗೆ ಸಿನಿಮಾ ನೋಡುವಾಗ ಮುಜುಗರವಾಗದಂತೆ ನಿರ್ದೇಶಕರು ಶ್ರಮವಹಿಸಿರುವುದು ಪ್ರಶಂಸನೀಯ. ಮಾಟ-ಮಂತ್ರ, ದೆವ್ವ ಬಿಡಿಸುವ ದೃಶ್ಯಗಳು ಒಳ್ಳೇ ಆಥೆಂಟಿಕ ಆಗಿದ್ದವು. ಅದರಲ್ಲೂ ಮಂತ್ರವಾದಿಯ ವೇಷದಲ್ಲಿ ಮುಖ್ಯ ಪೂಜಾರಿಯ ಕಳೆ ಹೇಗಿತ್ತೆಂದರೆ ದೆವ್ವ ನಡುಗಿ ಓಡಬೇಕು! ಬೇರೆ-ಬೇರೆ ಪಾತ್ರಗಳ ಮೇಲೆ ಗುಮಾನಿ ಬರುವಂತೆ ಜಾಣ್ಮೆಯಿಂದ ಹೆಣೆದ ಕಥೆ ಕೊನೆಯವರೆಗೂ ಕುತೂಹಲವನ್ನು ಕಳೆದುಕೊಳ್ಳದಂತೆ ಕಥೆಯ ಓಟ ಸ್ವಾರಸ್ಯಕರವಾಗಿತ್ತು. ಒಟ್ಟಾರೆ ಮನರಂಜನೆಯ ದೃಷ್ಟಿಯಿಂದ ನಿರ್ಮಿಸಿದ ಈ ಚಿತ್ರ ಯಶಸ್ವಿಯಾಗಿರುವುದಕ್ಕೆ, ಬೆಂಗಳೂರಿನಲ್ಲಿ ಒಂದು ವರ್ಷ ತೆರೆಯ ಮೇಲೆ ನಿರಂತರ ಪ್ರದರ್ಶನ ಕಂಡಿರುವುದೇ ಸಾಕ್ಷಿ.

ವಿರಾಮದ ವೇಳೆಯಲ್ಲಿ ಮಾತಾಡಿದ ನಿರ್ಮಾಪಕ ದ್ವಾರಕೀಶರ ಹೇಳಿಕೆ, ‘ಎಲ್ಲಾ ಚಿತ್ರಗಳೂ ಚೆನ್ನಾಗಿರುವುದು ಸಾಧ್ಯವಿಲ್ಲ’ ಎಂಬುದು ಸತ್ಯ. ಹಾಗಿರಲೆಂದು ನಿರೀಕ್ಷಿಸುವುದೂ ತಪ್ಪು. ಆದರೆ, ವರ್ಷಕ್ಕೆ ನೂರು ಸಿನಿಮಾ ತೆಗೆದರೆ, ಹತ್ತಿಪ್ಪತ್ತು ಉತ್ಕೃಷ್ಠ ವಾಗಿರಲೆಂದು ಬಯಸುವುದು ತಪ್ಪಲ್ಲ. ಸುಮಾರು ಅರ್ಧದಷ್ಟು ಸರಾಸರಿಯಾಗಿರಲೆಂದು ಬಯಸುವುದೂ ಅಷ್ಟೇನೂ ಅನ್‌ರಿಯಲಿಸ್ಟಿಕ್‌ ಅಲ್ಲ. (ಶಾಲೆಯ ಮಕ್ಕಳೆಲ್ಲಾ ಉನ್ನತ ಮಟ್ಟದಲ್ಲಿ ತೇರ್ಗಡೆಯಾಗಬೇಕೆಂದು ಬಯಸಿದರೆ ನಿರಾಸೆ ಖಂಡಿತ, ಆದರೆ ಶೇಕಡಾ 50ರಷ್ಟು ಸರಾಸರೀ ಅಂಕಗಳನ್ನು ಪಡೆದು ತೇರ್ಗಡೆಯಾಗಲೆಂದು ಬಯಸುವುದು ತಪ್ಪಲ್ಲ.) ಅಂತೂ ಅಂಥ ಹತ್ತಿಪ್ಪತ್ತು ಉತ್ಕೃಷ್ಠ ಚಿತ್ರಗಳನ್ನು ಮಾತ್ರ ವಿದೇಶಗಳಿಗೆ ರಫ್ತು ಮಾಡಿದರೆ ಸಾಕು (ಮಿಕ್ಕವನ್ನು ದೊಡ್ಡ ತೆರೆಗೆ ಬೇಡ, ಡಿವಿಡಿ ಮಾಡಿ ಕಳಿಸಿ ಬಿಡಿ, ನೋಡುವವರು ತಮ್ಮ ಅನುಕೂಲ ಮತ್ತು ಸಮಯಕ್ಕೆ ತಕ್ಕಂತೆ ನೋಡಲಿ ಅದಕ್ಕೆ ಯಾರದೂ ಅಡ್ಡಿಯಿಲ್ಲ, ಇರಕೂಡದು) .

ಮುಗಿಸುವ ಮುನ್ನ ಒಂದು ಮುಖ್ಯ ಮಾತು ಹೇಳದಿದ್ದರೆ ಲೋಪವಾದೀತು. ಚಿತ್ರದ ಪರಾಕಾಷ್ಠೆಯಲ್ಲಿ ನರ್ತಕಿಯ ಭೂತ ಮೆಟ್ಟಿದಾಗ ಸೌಂದರ್ಯಳ ನಟನೆ ಶ್ಲಾಘನೀಯವಾಗಿತ್ತು. ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರಪ್ರೇಮಿಗಳ ಮನಸ್ಸನ್ನು ಸೂರೆಗೊಂಡ, ಹೆಸರಿಗೆ ತಕ್ಕಂತೆ ಅನ್ವರ್ಥನಾಮಳಾಗಿದ್ದ ‘ಸೌಂದರ್ಯ’ ಅಪಘಾತಕ್ಕೀಡಾದದ್ದು ಕನ್ನಡ ಚಿತ್ರರಂಗಕ್ಕಾದ ತುಂಬಲಾಗದ ನಷ್ಟ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತಾ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಸಂಗೀತಶಾಸ್ತ್ರದ ಬಗ್ಗೆ ವಸಂತಮಾಧವಿಯವರ ಒಂದು ಉಪಯುಕ್ತ ಪುಸ್ತಕ – Inside View : Theory of Music

ಮನುಷ್ಯನ ಲೆಕ್ಕದಲ್ಲಿ ಸ್ವರಗಳು ಏಳೇ ಆದರೂ ಅವುಗಳಿಂದ ಉದ್ಭವವಾಗುವ ರಾಗಗಳಿಗೆ ಲೆಕ್ಕವಿಲ್ಲ. ಸ್ವರವೆಂದರೇನು?, ರಾಗವೆಂದರೇನು? ಎಂಬ ಹಲವು ಹತ್ತು ಪ್ರಶ್ನೆಗಳನ್ನು ಕೇಳುವ ಬುದ್ಧಿಯುಳ್ಳ ಮನುಷ್ಯ ಹುಟ್ಟುವ ಮೊದಲೇ ಸಂಗೀತ ಹುಟ್ಟಿ ಆಗಿತ್ತು. ಪ್ರಕೃತಿಯಲ್ಲಿ ಪ್ರತಿನಿತ್ಯ ಧ್ವನಿಸುವ, ಗಿಡ-ಮರ-ಬಳ್ಳಿಗಳಲ್ಲಿ ಸ್ಫುರಿಸುವ, ಗಾಳಿ-ಮಳೆ-ಮಿಂಚು-ಗುಡುಗುಗಳ ಪಕ್ಕವಾದ್ಯಗಳಿಂದ ವಿಜೃಂಭಿಸುವ ಪಶು-ಪಕ್ಷಿಗಳ ಸಂಗೀತ ಯಾವ ಶಾಸ್ತ್ರಕ್ಕೂ ಕಟ್ಟುಬೀಳದಿದ್ದರೂ, ಆ ದನಿಗಳಲ್ಲಿ ದುಃಖ, ಆನಂದ, ಶಾಂತ, ಭಕ್ತಿ, ಭಯ, ಉನ್ಮಾದ, ರೌದ್ರ, ಸ್ನೇಹ, ಕರುಣ ಮುಂತಾದ ರಸಗಳು, ಭಾವಗಳು ವ್ಯಕ್ತವಾಗುತ್ತವೆ ಎಂಬುದು ಅನುಭವವೇದ್ಯವಾದದ್ದು.

ಯಾವ ಶಾಸ್ತ್ರೀಯಸಂಗೀತವನ್ನೂ ಕಲಿಯದ ಹಸುಕಾಯುವ ಗೊಲ್ಲ, ಕುರಿಕಾಯುವ ಕುರುಬ, ನೇಗಿಲನ್ನು ಹಿಡಿದು ಉಳುವ ರೈತ, ಗದ್ದೆಯಲ್ಲಿ ನಾಟಿ ಮಾಡುವ ಹೆಣ್ಣಾಳುಗಳು, ಭಾರಹೊರುವ ಕೆಲಸಗಾರರು, ಇವರಲ್ಲನೇಕರು ಮಧುರವಾಗಿ ಹಾಡುತ್ತಾರೆ, ಅವರಲ್ಲನೇಕರಿಗೆ ತಾಳದ ಪರಿವೆ ಅದ್ಭುತವಾಗಿರುತ್ತದೆ ಎಂಬುದನ್ನು ನಾವು ಗಮನಿಸಬಹುದು. ವ್ಯಾಕರಣದ ಜ್ಞಾನವಿಲ್ಲದ ಮಗು ಹಿರಿಯರು ಆಡುವ ಮಾತುಗಳನ್ನು ಕೇಳಿ ಕೇಳಿ, ಲಿಂಗ, ವಚನ, ವಿಭಕ್ತಿಗಳನ್ನು ಯಾವಗೊಂದಲವೂ ಇಲ್ಲದೇ ಪ್ರಯೋಗಿಸುವಹಾಗೆ, ಧ್ವನಿಯುಳ್ಳವರು ಶಾಸ್ತ್ರಜ್ಞಾನವಿಲ್ಲದಿದ್ದರೂ ಸುಮಧುರವಾಗಿ ಹಾಡಬಹುದು. ಅಂತು, ನಮಗೆ ತಿಳಿದೋ ತಿಳಿಯದೆಯೋ, ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಡುತ್ತದೆ. ಆದರೆ, ಸಂಗೀತವನ್ನು ಸುಮ್ಮನೇ ಕೇಳುವುದಕ್ಕೂ ಅದರ ರಹಸ್ಯಗಳನ್ನು ಅಭ್ಯಸಿಸಿ ಸವಿಯುವುದಕ್ಕೂ ತುಂಬಾ ವ್ಯತ್ಯಾಸವಿರುತ್ತದೆ.

Theory of Music by Vasanthamadhaviಎಲ್ಲರಿಗೂ ಸಂಗೀತ ಕಲಿಯಲಾಗುವುದಿಲ್ಲ. ಆದರೂ, ನಮ್ಮ ಜೀವನದ ಅವಿಭಾಜ್ಯ ಅಂಗವಾದ ಸಂಗೀತದ ಬಗ್ಗೆ, ಆಳವಾಗಿ ಅಲ್ಲದಿದ್ದರೂ ಅಲ್ಪ-ಸ್ವಲ್ಪವಾದರೂ ಕಲಿಯಬೇಕು. ಅಂಥ ಕಲಿಕೆಗೆ ಸಹಾಯವಾಗಲು ಸರಳವಾದ ಭಾಷೆಯಲ್ಲಿ ಬರೆದ ಪುಸ್ತಕಗಳಿರಬೇಕಲ್ಲವೇ? ಸಂಗೀತ ಶಾಸ್ತ್ರವೆಂಬುದು ಒಂದು ಮಹಾಸಾಗರವಿದ್ದಂತೆ. ಅದರಬಗ್ಗೆ ನೂರಾರು ಪುಸ್ತಕಗಳು ಹತ್ತಾರು ಭಾಷೆಗಳಲ್ಲಿ ಪ್ರಕಟವಾಗಿವೆ. 2005ರಲ್ಲಿ ಪ್ರಕಟವಾದ, ಸಂಗೀತವಿದುಷಿ ಶ್ರೀಮತಿ ವಸಂತಮಾಧವಿ ಅವರ Theory of Music ಎಂಬ (ಇಂಗ್ಲಿಷ್‌ ಭಾಷೆಯಲ್ಲಿರುವ) ಪುಸ್ತಕ ಗಮನಾರ್ಹವಾದುದು.

ಶ್ರೀಮತಿ ವಸಂತಮಾಧವಿ ಅವರು, ಸಂಗೀತ ವಿದುಷಿ, ಅಧ್ಯಾಪಕಿ, ಮತ್ತು ವಾಗ್ಗೇಯಕಾರ್ತಿ ಕೂಡ. ರಾಗಶ್ರೀ ಸಂಗೀತ ಕಾಲೇಜಿನ ಪ್ರಾಂಶುಪಾಲರು. ಹಲವಾರು ಯುವಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸಂಗೀತ ಕಲಿಸಿ, ನಿರಂತರ ಆಭ್ಯಾಸ ಮಾಡುವಂತೆ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ್ದಾರೆ. ‘ ಸುಬ್ಬರಾಮಯ್ಯ ಫೈನ್‌ ಆರ್ಟ್ಸ್‌ ಟ್ರಸ್ಟ್‌’ ಎಂಬ ಸಂಸ್ಥೆಯನ್ನು ತಮ್ಮ ಗುರುಗಳ ಹೆಸರಿನಲ್ಲಿ ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷವೂ ಬೆಂಗಳೂರಿನಲ್ಲಿ ಸಂಗೀತ-ನೃತ್ಯ-ನಾಟಕಗಳ ಹಬ್ಬವನ್ನು ನಡೆಸುತ್ತ, ಅನೇಕ ಪ್ರಸಿದ್ಧ ಕಲಾವಿದರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನೂ ಬೆಳೆಸಿಕೊಂಡಿದ್ದಾರೆ. ಸ್ವಯಂ ಸಂಸ್ಕೃತ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ವೆಂಕಟೇಶ್ವರನನ್ನು ಕುರಿತ ಇವರ ಒಂಬತ್ತು ಕೃತಿಗಳಲ್ಲಿ ಹಲವು ಅಪರೂಪದ ರಾಗಗಳನ್ನು ಬಳಸಿಕೊಂಡಿವೆ. ನವಗ್ರಹಗಳನ್ನು ಕುರಿತು ರಚಿಸಿದ ನವಗ್ರಹಕೃತಿಗಳು ಮತ್ತು ಎಲ್ಲ ವಿಭಕ್ತಿ ಪ್ರಯೋಗಗಳನ್ನೂ ಉಪಯೋಗಿಸಿ ರಚಿಸಿರುವ ಅಷ್ಟದಿಕ್ಪಾಲಕರ ಕೃತಿಗಳು ಪಂಡಿತರ ಗಮನ ಸೆಳೆದಿವೆ. ಪ್ರೌಢ ಮತ್ತು ವಿದ್ವತ್‌ ವಿಭಾಗದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಹಲವು ಪುಸ್ತಕಗಳನ್ನೂ ಇವರು ಬರೆದು ಪ್ರಕಟಿಸಿದ್ದಾರೆ.

‘ಥಿಯರಿ ಆಫ್‌ ಮ್ಯೂಸಿಕ್‌’ ಎಂಬ ಈ ಪುಸ್ತಕದಲ್ಲಿ, ಸುಮಾರು ಇನ್ನೂರಕ್ಕೂ ಹೆಚ್ಚು ಪುಟಗಳಲ್ಲಿ ಹದಿಮೂರು ಅಧ್ಯಾಯಗಳಲ್ಲಿ ಸರಳ ವಿಷಯಗಳಿಂದ ಹಿಡಿದು ಅತ್ಯಂತ ಗಹನವಾದ ವಿಷಯಗಳನ್ನು ಪ್ರಸ್ತುತ ಪಡಿಸಿದ್ದಾರೆ. ಅನೇಕ ಗ್ರಂಥಗಳನ್ನು ಓದಲಾಗದವರಿಗೆ ಒಂದೇ ಎಡೆಯಲ್ಲಿ ಅನೇಕ ವಿಷಯಗಳನ್ನು ಸಂಗ್ರಹಿಸಿ ಸರಳವಾಗಿ, ನೇರವಾಗಿ ಎಲ್ಲರಿಗೂ ತಿಳಿಯುವಂತೆ ವಿವರಿಸಿರುವುದೇ ಈ ಪುಸ್ತಕದ ವೈಶಿಷ್ಟ್ಯ. ಮೊದಲ ಎರಡು ಅಧ್ಯಾಯಗಳಲ್ಲಿ, ನಾದ, ಸ್ವರ, ಶ್ರುತಿ, ರಾಗ, ಸ್ಥಾಯಿ ಮುಂತಾದ ಪದಗಳಿಗೆ ಸರಳವಾದ ಆದರೆ ಖಚಿತವಾದ ವಿವರಣೆಗಳನ್ನು ಒದಗಿಸಿದ್ದಾರೆ. ಸಂಗೀತಶಾಸ್ತ್ರದ ಬಗ್ಗೆ ನಡೆಯುವ ಎಲ್ಲ ಚರ್ಚೆಗಳನ್ನು ಅನುಸರಿಸಲು ಈ ತಾಂತ್ರಿಕ ಶಬ್ದಗಳ ಅರಿವು ಬಲು ಮುಖ್ಯ.

ಮೂರನೆಯ ಅಧ್ಯಾಯ ‘ತಾಳ’ದ ವಿಷಯಕ್ಕೆ ಮುಡಿಪಾಗಿದೆ. ಅಲ್ಲಿ ಕೊಟ್ಟಿರುವ ಮುವ್ವತ್ತೈದು ತಾಳಗಳ ಪಟ್ಟಿಯಲ್ಲಿ ಸಾಧಾರಣವಾಗಿ ಎಲ್ಲರೂ ಕೇಳಿರಬಹುದಾದ ತಾಳಗಳ ಹೆಸರುಗಳಿವೆ. ಆದರೆ, ಎಪ್ಪತ್ತೆರಡು ಮೇಳಕರ್ತ ರಾಗಗಳಂತೆ ಅವೇ ಹೆಸರುಗಳುಳ್ಳ ‘ಮೇಳ-ತಾಳ’ಗಳೂ ಇವೆ ಎಂಬುದು ಎಲ್ಲರಿಗೂ ತಿಳಿಯದ ವಿಷಯ! ಅಭಂಗ, ಅನ್ನಲೀಲ, ಆನಂದ ಮುಂತಾದ ತಾಳಗಳ ಹೆಸರುಗಳು ಎಷ್ಟು ಜನರಿಗೆ ಗೊತ್ತು? ಇಲ್ಲಿ ಉದ್ಧರಿಸಲ್ಪಟ್ಟ ಸಂಗೀತ ಚಂದ್ರಿಕೆಯಲ್ಲಿರುವ ನೂರೆಂಟು ತಾಳಗಳ ಪಟ್ಟಿಯಲ್ಲಿ ಆ ಹೆಸರುಗಳನ್ನು ನಾವು ಓದಬಹುದು.

ಕಿವಿಗೆ ಇಂಪಾದ ಧ್ವನಿಯ ಕಂಪನದಿಂದ ಉದ್ಭವವಾಗುವುದೇ ‘ಗಮಕ’. ಗಮಕಕ್ಕೆ ಸಂಬಂಧಪಟ್ಟ ಚರ್ಚೆಗೆ ನಾಲ್ಕನೇ ಅಧ್ಯಾಯ ಮೀಸಲು. ಎಪ್ಪತ್ತೆರಡು ಜನಕರಾಗಗಳ ವಿವರಗಳು ಮತ್ತು ಪಟ್ಟಿಯಲ್ಲಿ ಅವುಗಳ ಸ್ಥಾನವನ್ನು ಕಂಡುಹಿಡಿಯುವ ‘ಕಟಪಯಾದಿ’ ಸೂತ್ರವನ್ನು ಉಪಯೋಗಿಸುವ ವಿಧಾನಗಳನ್ನು ಐದನೇ ಅಧ್ಯಾಯದಲ್ಲಿ ಕಾಣಬಹುದು. ಆರನೆಯ ಅಧ್ಯಾಯ ಅತ್ಯಂತ ಉಪಯುಕ್ತ ಅಧ್ಯಾಯಗಳಲ್ಲಿ ಒಂದು. ಇಲ್ಲಿ, ಸರಳೆ (ಸ್ವರಾವಳಿ), ವರಸೆಗಳು, ಅಲಂಕಾರ, ಜತಿಸ್ವರ ಮತ್ತು ಸ್ವರಜತಿ (ಸ್ವರಜತಿಯಲ್ಲಿ ಸಾಹಿತ್ಯವಿರುತ್ತದೆ, ಜತಿಸ್ವರದಲ್ಲಿ ಕೇವಲ ಸ್ವರಗಳು), ವರ್ಣ, ಕೃತಿ, ಕೀರ್ತನ, ಜಾವಳಿ, ತಿಲ್ಲಾನ, ದರು, ಪದ, ಪ್ರಬಂಧ ಮೊದಲಾದ ರಚನೆಗಳು ಮತ್ತು ಅವುಗಳ ಸ್ವರೂಪಗಳನ್ನು ಉದಾಹರಣೆಗಳ ಸಹಿತ ವಿವರಿಸಲಾಗಿದೆ.

‘ರಾಗಲಕ್ಷಣ’ಗಳ ಸುದೀರ್ಘ ಮಂಡನೆಯ ಏಳನೆಯ ಅಧ್ಯಾಯ ಪ್ರೌಢ ವಿದ್ಯಾರ್ಥಿಗಳಿಗೆ ಬಹೂಪಯೋಗಿ. ನೂರೈವತ್ತು ರಾಗಗಳ ವಿವರಣೆ ಇಲ್ಲಿದೆ. ಉದಾಹರಣೆಗೆ ‘ಧರ್ಮವತಿ’ಯನ್ನು ತೆಗೆದುಕೊಳ್ಳೋಣ. ಇದು 59ನೇ ಮೇಳ, ಹತ್ತನೇ ಚಕ್ರದ ಐದನೇ ರಾಗ. ಪ ಮತ್ತು ಧ ಗ್ರಹಸ್ವರಗಳು, ರಿ, ಮ ಮತ್ತು ನಿ ಅಂಶಸ್ವರಗಳು, ಸ, ರಿ, ಪ, ನಿ ಗಳು ನ್ಯಾಸಸ್ವರಗಳು. (ಗ್ರಹಸ್ವರ, ಅಂಶಸ್ವರ ಮತ್ತು ನ್ಯಾಸಸ್ವರಗಳ ತಿಳಿವಳಿಕೆಗೆ ಎರಡನೇ ಅಧ್ಯಾಯಕ್ಕೆ ಮತ್ತೊಮ್ಮೆ ಭೇಟಿ ಕೊಟ್ಟರೆ ಒಳ್ಳೆಯದು!) ಆಧಾರಷಡ್ಜದ ವರ್ಗಾವಣೆಯ ಮೂಲಕ, ರಿ ಯಿಂದ ಚಕ್ರವಾಕವನ್ನೂ, ಪ ದಿಂದ ಸರಸಾಂಗಿಯನ್ನೂ ಪಡೆಯಬಹುದು. ತ್ರಿಸ್ಥಾಯಿಗಳ ಈ ರಾಗ, ದಿನದ ಎಲ್ಲ ಸಮಯಗಳಲ್ಲೂ ಹಾಡಬಹುದಾದದ್ದು, ಭಕ್ತಿ ಮತ್ತು ಕರುಣಾ ರಸಗಳಿಗೆ ಹೇಳಿ ಮಾಡಿಸಿದ್ದು, ಇತ್ಯಾದಿ, ಇತ್ಯಾದಿ ವಿವರಗಳೇ ಅಲ್ಲದೇ ಮುಖ್ಯವಾದ ಸ್ವರಪ್ರಸ್ತಾರಗಳು ಮತ್ತು ಹಲವು ಪ್ರಮುಖ ವಾಗ್ಗೇಯಕಾರರು ಈ ರಾಗದಲ್ಲಿ ರಚಿಸಿರುವ ಜನಪ್ರಿಯ ಕೃತಿಗಳ ಪಟ್ಟಿ, ಇವೆಲ್ಲವೂ ಸುಮಾರು ಹತ್ತು ಸಾಲುಗಳಲ್ಲಿ ಅಡಕವಾಗಿವೆ ಎಂದರೆ ಈ ಅಧ್ಯಾಯದ ಪ್ರಾಮುಖ್ಯತೆಯನ್ನು ಓದುಗರೇ ಊಹಿಸಿಕೊಳ್ಳಬಹುದು!

ಎಂಟನೇ ಅಧ್ಯಾಯದಲ್ಲಿ ಸಂಗೀತಶಾಸ್ತ್ರದ ಬಗ್ಗೆ ನಮಗೆ ದೊರಕುವ ಅನೇಕ ಪ್ರಮುಖ ಗ್ರಂಥಗಳ ಸಂಕ್ಷಿಪ್ತ ವರ್ಣನೆ ದೊರಕುತ್ತದೆ. ಭರತನ ನಾಟ್ಯಶಾಸ್ತ್ರ, ಮತಂಗನ ಬೃಹದ್ದೇಶಿ, ಸೋಮೇಶ್ವರನ ಅಭಿಲಷಿತ ಚಿಂತಾಮಣಿ, ಪಾರ್ಶ್ವದೇವನ ಸಂಗೀತ ಸಮಯಸಾರ, ಶಾರ್ಙ್ಗದೇವನ ಸಂಗೀತ ರತ್ನಾಕರ, ವಿದ್ಯಾರಣ್ಯರ ಸಂಗೀತಸಾರ, ವೆಂಕಟಮುಖಿನ್‌ ಬರೆದ ಚತುರ್ದಂಡಿ ಪ್ರಕಾಶಿಕ, ರಾಮಾನುಜಯ್ಯನ ಸಂಗೀತ ಸರ್ವಾರ್ಥಸಾರ ಸಂಗ್ರಹಮು, ಗೋವಿಂದಾಚಾರ್ಯನ ಸಂಗೀತ ಚೂಡಾಮಣಿ, ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿ, ಇವುಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಗಳು ಮತ್ತು ಇನ್ನೂ ಹತ್ತಿಪ್ಪತ್ತು ಗ್ರಂಥಗಳ ಪಟ್ಟಿ ಸಹ ಇಲ್ಲಿ ಸಿಗುತ್ತದೆ.

ಒಂಬತ್ತನೇ ಅಧ್ಯಾಯದಲ್ಲಿ ಮನೋಧರ್ಮಸಂಗೀತದ ಬಗ್ಗೆ ಸುದೀರ್ಘ ಪ್ರಬಂಧವಿದೆ. ‘ರಾಗ-ತಾನ-ಪಲ್ಲವಿ’ಯ ವಿಷಯದಲ್ಲಿ ಆಸಕ್ತರಾದವರಿಗೆ ಇದು ಮುಖ್ಯವಾದ ಪಾಠ. ಹತ್ತನೇ ಅಧ್ಯಾಯದಲ್ಲಿ ಸಂಗೀತದ ವಿವಿಧ ಶಾಖೆಗಳ ಚರ್ಚೆ ಇದೆ. ಜಾನಪದ, ಭಕ್ತಿಸಂಗೀತ, ಹರಿಕಥಾಕಾಲಕ್ಷೇಪದಲ್ಲಿ ಸಂಗೀತದ ಸ್ಥಾನ, ನಾಟ್ಯಕ್ಕೆ ಬೇಕಾದ ಸಂಗೀತ, ವಚನಸಾಹಿತ್ಯವನ್ನು ಅಳವಡಿಸಿಕೊಂಡ ಶಾಸ್ತ್ರೀಯ ಸಂಗೀತ ಮುಂತಾದ ಸ್ವಾರಸ್ಯಕರವಾದ ವಿಚಾರಧಾರೆಯಿದೆ. ವಾದ್ಯಗಳಿಗೇ ಮುಡಿಪಾದ ಹನ್ನೊಂದನೇ ಅಧ್ಯಾಯದಲ್ಲಿ ಹತ್ತಾರು ಜನಪ್ರಿಯವಾದ್ಯಗಳ ಸಚಿತ್ರ ವಿವರಣೆ ಇದೆ. ವಾಗ್ಗೇಯಕಾರರ ಜೀವನಚರಿತ್ರೆ ಮತ್ತು ಅವರ ಶೈಲಿ ಹಾಗು ಕೊಡಿಗೆಗಳನ್ನು ಪ್ರಸ್ತುತಪಡಿಸುವ ಹನ್ನೆರಡನೇ ಅಧ್ಯಾಯದಲ್ಲಿ ಅನೇಕ ಸ್ವಾರಸ್ಯಕರವಾದ ಕಥೆಗಳು ಮತ್ತು ಪ್ರಮುಖರ ಸಂಕ್ಷಿಪ್ತ ಜೀವನಚರಿತ್ರೆ ದಾಖಲಾಗಿದೆ. ಸಂಗೀತಾಭ್ಯಾಸಿಗಳಿಗೆ ಮತ್ತು ಸಂಗೀತ ರಸಿಕರಿಗೆ ಇಲ್ಲಿ ನಮೂದಿಸಿರುವ ವಿಚಾರಗಳು ಉತ್ತಮ ಸಾಮಗ್ರಿ. ಹದಿಮೂರನೆಯ ಮತ್ತು ಕೊನೆಯ ಅಧ್ಯಾಯದಲ್ಲಿ ಸಂಗೀತ ಮತ್ತು ಸಂಗೀತಕ್ಕೆ ಸಂಬಂಧಿಸಿದಂತೆ ಇತರ ವಿಷಯಗಳ ಬಗ್ಗೆ (ಭೌತಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ, ಗಣಿತ, ಶಬ್ದಶಾಸ್ತ್ರ) ಕಿರು ಟಿಪ್ಪಣಿಗಳ ರೂಪದಲ್ಲಿ ಕೆಲವು ಉಪಯುಕ್ತ ಮಾಹಿತಿಗಳಿವೆ.

ಸಂಗೀತಕ್ಕೆ ಸಂಬಂಧಪಟ್ಟ ಅನೇಕ ಗ್ರಂಥಗಳು ಸಂಸ್ಕೃತದಲ್ಲಿರುವುದರಿಂದ ಆ ಭಾಷೆ ತಿಳಿಯದವರಿಗೆ ಅವುಗಳ ಉಪಯೋಗ ವಾಗುವುದಿಲ್ಲ. ಎಲ್ಲಾ ಮುಖ್ಯವಿಷಯಗಳೂ ಒಂದೇ ಪುಸ್ತಕದಲ್ಲಿ ದೊರಕದೇ ಇರುವುದರಿಂದ ಮತ್ತು ಹಲವಾರು ಪುಸ್ತಕಗಳ ಪ್ರತಿಗಳು ಮುಗಿದು ಸುಲಭವಾಗಿ ಸಿಕ್ಕದೇ ಇರುವುದರಿಂದ, ಒಂದೇ ಪುಸ್ತಕದಲ್ಲಿ ಅನೇಕ ಮುಖ್ಯವಿಚಾರಗಳನ್ನು ಕಲೆಹಾಕಿ ವಸಂತಮಾಧವಿಯವರು ಸಂಗೀತದ ವಿದ್ಯಾರ್ಥಿಗಳಿಗೆ ಮಹದುಪಕಾರ ಮಾಡಿದ್ದಾರೆ. ಮೂಲ ಸಂಸ್ಕೃತಗ್ರಂಥಗಳ ಹಲವು ವಿವರಣಾತ್ಮಕ ಶ್ಲೋಕಗಳನ್ನು ಯಥೋಚಿತವಾಗಿ ಉದ್ಧರಿಸಿರುವುದು ಈ ಪುಸ್ತಕದ ಮತ್ತೊಂದು ವಿಶೇಷ.

ಒಟ್ಟಿನಲ್ಲಿ, ಹೆಚ್ಚು ಶ್ರಮ ಮತ್ತು ಶ್ರದ್ಧೆಯಿಂದ ಶ್ರೀಮತಿ ವಸಂತಮಾಧವಿಯವರು ಬರೆದಿರುವ (ಪ್ರಿಸಮ್‌ ಬುಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಪ್ರಕಟಿಸಿರುವ) ಈ ಪಠ್ಯಪುಸ್ತಕ ವಿದ್ಯಾರ್ಥಿಗಳಿಗೂ, ಆಸಕ್ತರಿಗೂ, ಪಂಡಿತರಿಗೂ ಮತ್ತು ಪಾಮರರಿಗೂ ಉಪಯುಕ್ತ ಪುಸ್ತಕ. ಸ್ವತಃ ಸಂಗೀತಜ್ಞನಲ್ಲದಿದ್ದರೂ, ಸಂಗೀತದಲ್ಲಿ ಅಭಿರುಚಿಯುಳ್ಳವನಾಗಿ, ಇತರ ಸಮಾನಾಸಕ್ತರಿಗೆ ಸಹಾಯವಾಗಬಹುದೆಂಬ ದೃಷ್ಟಿಯಿಂದ ಈ ಪುಸ್ತಕದ ಸಮೀಕ್ಷೆ ಮಾಡಿದ್ದೇನೆ. (ಇದು ವರದಿಯೇ ಹೊರತು ವಿಮರ್ಶೆ ಖಂಡಿತ ಅಲ್ಲ!) ಅದರಲ್ಲಿರುವ ಶಾಸ್ತ್ರದ ಬಗ್ಗೆ ನಿಖರವಾದ ಅಭಿಪ್ರಾಯವನ್ನು ಪ್ರಕಟಪಡಿಸಲು ಬೇಕಾದ ಪರಿಕರ ನನ್ನಲ್ಲಿಲ್ಲವೆಂಬ ಸತ್ಯಾಂಶವನ್ನು ಓದುಗರಿಗೆ ನೆನಪಿಸುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.

ವಿ.ಸೂ : ಈ ಪುಸ್ತಕವನ್ನು ಖರೀದಿಸ ಬಯಸುವವರು ಶ್ರೀಮತಿ ವಸಂತಮಾಧವಿಯವರನ್ನು ನೇರವಾಗಿ vasanthamadhavi@upavan.comನಲ್ಲಿ ಸಂಪರ್ಕಿಸಬಹುದು.

ಪುಸ್ತಕದ ವಿವರ :

Theory of Music
Author : Vasanthamadhavi
PRISM BOOKS PVT LTD
ISBN:81-7286-355-1
Price in India Rs 225/-

ನೆಲಮಾಳಿಗೆಯಾಳದಲ್ಲಿ ಸುಳಿದ ನೆನಪುಗಳು – Resorted memories in the Cellarage!

ಅನೇಕ ವರ್ಷಗಳಿಂದ ಮನದೊಳಗೆ ಹುದುಗಿದ್ದ ನಮ್ಮದೊಂದು ಆಸೆ ಜೂನ್‌ 19ರಂದು ನೆರವೇರಿತು. ನಮ್ಮ ಮನೆಯಂಗಳದಲ್ಲೊಂದು ಸಂಗೀತ ಕಚೇರಿ ನಡೆಯಿತು. ಹಿಂದೆ ನಾವಿದ್ದ ಮನೆ ಎಲ್ಲ ವಿಷಯಗಳಲ್ಲೂ ಅನುಕೂಲವಾಗಿದ್ದರೂ ನೆಲಮಾಳಿಗೆಯ ವಿಸ್ತೀರ್ಣ ಸಮಾಧಾನಕರವಾಗಿರಲಿಲ್ಲ, ಹೆಚ್ಚು ಜನ ಒಂದೆಡೆ ಸೇರಲು ಸಾಕಷ್ಟು ಸೌಲಭ್ಯ ಯಾವ ಒಂದು ಕೊಠಡಿಯಲ್ಲೂ ಇರಲಿಲ್ಲ, ಹೀಗಾಗಿ ಹಲವುಬಾರಿ ನಮ್ಮ ಮನೆಗೆ ಕಲಾವಿದರೋ ಕವಿಗಳೋ ಬಂದಾಗ ನಡೆಸಿದ ಸಭೆಗಳಿಗೆ ಅತಿಥಿಗಳ ಸಂಖ್ಯೆಯನ್ನು ವಿಧಿಯಿಲ್ಲದೇ ಮಿತಿಗೊಳಿಸ ಬೇಕಾಗುತ್ತಿತ್ತು.

ಆದರೆ, ಈಚೆಗೆ ಬಂದು ನೆಲೆಸಿದ ಮನೆಯಾಳಗೆ ಆ ಕೊರತೆ ಸಾಕಷ್ಟು ಮಟ್ಟಿಗೆ ನೀಗಿದೆ. ನಾವು ಮನೆ ಕೊಂಡಾಗ ವಿಶಾಲವಾದ ನೆಲಮಾಳಿಗೆ ಇನ್ನೂ ಅಪೂರ್ಣವಾಗಿತ್ತು, ಹೀಗಾಗಿ ಅದಕ್ಕೆ ಒಂದು ರೂಪಕೊಟ್ಟು, ಮುಚ್ಚದೇ ಬಿಟ್ಟಿದ್ದ ತಳಪಾಯದ ಒಳಭಾಗವನ್ನು ಒಣಗೋಡೆಯ (ಡ್ರೈ ವಾಲ್‌) ಪದರದಿಂದ ಮುಚ್ಚಿಸಿ, ಸುಣ್ಣ ಬಣ್ಣ ಮಾಡಿಸಿ ಸೂರಿಗೆ ದೀಪಗಳನ್ನು ಹಾಕಿಸಿ ನೆಲಕ್ಕೆ ಜಮಖಾನೆ ಹಾಕಿಸಿ ಪೂರ್ಣಗೊಳಿಸುವ ಕೆಲಸ ನಮ್ಮ ಮೇಲೇ ಬಿತ್ತು. ಕೆಲಸ ಸಂಪೂರ್ಣವಾದ ಸಂಭ್ರಮವನ್ನು ಬಂಧುಮಿತ್ರರೊಂದಿಗೆ ಹಂಚಿಕೊಳ್ಳಲು ನೆಲಮಾಳಿಗೆ ಕಚೇರಿಗಿಂತ ಉತ್ತಮ ಮಾರ್ಗ ಯಾವುದು?ಸಂಗೀತ ಪ್ರೇಮಿಗಳ ಅದೃಷ್ಟವೋ ಎಂಬಂತೆ, ಪ್ರತಿ ವರ್ಷ ರಾಜಧಾನಿಗೆ ಆಗಮಿಸುವ ಕಲಾವಿದರಿಗೇನೂ ಕೊರತೆಯಿಲ್ಲ. ನಾದತರಂಗಿಣಿ ವಾರ್ಷಿಕ ಸಂಗೀತೋತ್ಸವದಲ್ಲಿ ಭಾಗವಹಿಸಲು ಶ್ರೀಮತಿ ಉಷಾ ಚಾರ್‌ ಕರೆಸಿಕೊಂಡಿದ್ದ ವೀಣಾ ವಾದಕಿ ಶ್ರೀಮತಿ ಪುಷ್ಪಾ ಕಾಶೀನಾಥ್‌, ಖಂಜೀರ ನುಡಿಸುವ ಅವರ ಪತಿ ಕಾಶೀನಾಥ್‌, ಮೃದಂಗವಿದ್ವಾನ್‌ ಆನೂರು ದತ್ತಾತ್ರೇಯ ಶರ್ಮ ಹಾಗೂ ಅವರ ಅಮೇರಿಕದ ಶಿಷ್ಯ ಗೌತಮ್‌ ಸುಧಾಕರ್‌ (ಈತ ಮೃದಂಗದ ಜೊತೆಗೆ ಘಟವನ್ನೂ ಅಭ್ಯಾಸಮಾಡಿದ್ದಾನೆ) ಇವರೆಲ್ಲ ನಮ್ಮ ನೆಲಮಾಳಿಗೆಯ ಪ್ರಪ್ರಥಮ ಕಚೇರಿಯನ್ನು ನಡೆಸಿಕೊಡಲು ಒಪ್ಪಿದ್ದು ನಮ್ಮೆಲ್ಲರ ಸುದೈವ.

ಆ ಭಾನುವಾರದ ಮದ್ಯಾಹ್ನ ಬಂಧುಮಿತ್ರರ ನಡುವೆ ಮನೆಯಲ್ಲಿ ಒಂದು ಸುಂದರ ವಾತಾವರಣ ಉಂಟಾಗಿತ್ತು. ರಂಗದ ಹಿನ್ನೆಲೆಯಲ್ಲಿ ಸಂಗೀತದ ಅಧಿದೇವತೆಯಾದ ವೀಣೆ ಹಿಡಿದ ಸರಸ್ವತಿಯ ವಿಗ್ರಹ, ಆ ವಿಗ್ರಹದ ಮುನ್ನೆಲೆಯಲ್ಲಿ ವೀಣೆ ಹಿಡಿದು ಕುಳಿತ ಕಲಾವಿದೆ ಸರಸ್ವತಿಯೇ ಪ್ರತ್ಯಕ್ಷಳಾಗಿ ಬಂದು ಕುಳಿತಂತೆ ಅನುಭವವಾಗಿ, ನನ್ನ ಮನಸ್ಸಿನ ನೆಲಮಾಳಿಗೆಯಾಳದಿಂದ ನೆನಪುಗಳು ಮರುಕಳಿಸಿಲಾರಂಭಿಸಿದವು. ಅದೇ ಕ್ಷಣ, ನನ್ನ ತಾಯಿ, ಅವರ ತಾಯಿ, ನಾನು ನೋಡದ ಆದರೆ ಕೇಳಿ ಮಾತ್ರ ಗೊತ್ತಿರುವ ನಮ್ಮ ತಾಯಿಯ-ತಾಯಿಯ-ತಂದೆ, ನನ್ನ ಅಕ್ಕ, ತಂಗಿ ಇವರೆಲ್ಲ ಹೇಗೋ, ಹಿಂದೆಂದೋ ಸಂಸ್ಕಾರದಾನ ಮಾಡುವ ಮೂಲಕ ನನ್ನನ್ನು ಈ ಕಚೇರಿಗೆ ಸಿದ್ಧಗೊಳಿಸಿದ್ದರೆಂಬ ಭಾವ ಉಂಟಾಗಿ ಮನಸ್ಸು ತುಂಬಿ ಬಂತು.

ಸ್ವತಃ ಸಂಗೀತವನ್ನು ಕಲಿಯದಿದ್ದ ನನಗೆ ಸಂಗೀತದ ಪ್ರೀತಿ ಮತ್ತು ಅಭಿರುಚಿ ಬರುವಂತೆ ಮಾಡಿದ ನಮ್ಮ ತಾಯಿ, ನಮ್ಮ ತಾಯಿಯ ತಾಯಿ, ಮೊದಲು ನನ್ನ ಕಣ್ಣಮುಂದೆ ಸುಳಿದು ಹೋದರು. ನಾನು ಚಿಕ್ಕವನಾಗಿದ್ದಾಗ ಸತತವಾಗಿ ಸಂಗೀತಾಭ್ಯಾಸ ಮಾಡುತ್ತಿದ್ದ ನನ್ನ ಅಕ್ಕತಂಗಿಯರು ನನ್ನ ಶ್ರವಣಜ್ಞಾನವನ್ನು ಹೆಚ್ಚಿಸುವಲ್ಲಿ ವಹಿಸಿದ ಪಾತ್ರ ಕೂಡ ನೆನಪಾಯಿತು. ಇಂದು, ಸಂಗೀತ ಕಚೇರಿಗಳಲ್ಲಿ ಹಾಡುಗಾರರು ಅಲಾಪ ಪ್ರಾರಂಭಿಸಿದ ಕೂಡಲೆ ಅವರು ಹಾಡಲು ಹೊರಟಿರುವ ರಾಗ ಯಾವುದು ಅನ್ನುವುದು ಥಟ್ಟನೆ ಹೊಳೆಯುವುದು ಆ ನನ್ನ ಬಾಲ್ಯದ ಶ್ರವಣಜ್ಞಾನದಿಂದಲೇ ಎಂಬುದನ್ನು ಕೃತಜ್ಞತಾ ಭಾವದಿಂದ ನೆನೆಸಿಕೊಂಡೆ. ಸ್ವರಗಳ ಬಗ್ಗೆ ಖಚಿತವಾದ ಜ್ಞಾನವಿಲ್ಲದಿದ್ದರೂ ಅಪಸ್ವರಗಳು ಬಂದರೆ ಥಟ್ಟನೆ ಮುಖಹಿಂಡುವಂತೆ ಪ್ರತಿಕ್ರಿಯಿಸುವುದೂ ಆ ಶ್ರವಣಜ್ಞಾನದಿಂದಲೇ.

ನಮ್ಮ ತಾಯಿ, ಹರಿಕಥಾವಿದ್ವಾನ್‌ ಕೊಣನೂರು ಸೀತಾರಾಮಶಾಸ್ತ್ರಿಗಳ ತಂದೆಯವರಿಂದ ಚಿಕ್ಕಂದಿನಲ್ಲಿ ಸಂಗೀತ ಕಲಿತರಂತೆ. ಹದಿಮೂರನೇ ವಯಸ್ಸಿನಲ್ಲೇ ಮದುವೆಯಾಗಿ ಹದಿನೈದು ತುಂಬುವ ಮೊದಲೇ ಗಂಡನ ಮನೆಯನ್ನು ಸೇರಿದ ನಮ್ಮ ತಾಯಿ ಮದುವೆಗೆ ಮುನ್ನ ಬಾಯಿ ಹಾಡುಗಾರಿಕೆಯ ಜೊತೆಗೆ ಹಾರ್ಮೋನಿಯಮ್‌ ಮತ್ತು ವೀಣಾವಾದನವನ್ನೂ ಅಭ್ಯಸಿಸಿದ್ದರೆಂದರೆ ಆಶ್ಚರ್ಯವಾಗುತ್ತದೆ. ಅವರ ವೀಣಾವಾದನ ಮಾತ್ರ ಒಂದು ಕ್ಷುಲ್ಲಕ ಕಾರಣದಿಂದ ನಿಂತುಹೋದ ಕಥೆಯನ್ನು ಅವರು ಅತ್ಯಂತ ನೋವಿನಿಂದ ಹೇಳಿಕೊಳ್ಳುತ್ತಿದ್ದರು. ಅವರಿಗಾಗಿ ಅವರ ತಂದೆಯೋ (ಅಜ್ಜನೋ, ಮರೆತು ಹೋಗಿದೆ), ಅಂತು ಮೈಸೂರಿನಿಂದ ಒಳ್ಳೆಯ ವೀಣೆಯನ್ನು ಖರೀದಿಸಿ ಭುಜದಮೇಲಿಟ್ಟುಕೊಂಡು ಕೊಣನೂರಿಗೆ ನಡೆದೇ ಬಂದಿದ್ದರಂತೆ. (ಗಾಡಿಯಲ್ಲಿಟ್ಟು ತಂದರೆ ಒಡೆದು ಹೋದೀತು ಎಂಬ ಕಾಳಜಿಯಿಂದ.) ಆ ವೀಣೆ ತಮ್ಮದೇ ಎಂಬ ನಂಬಿಕೆ ಅವರದ್ದಾಗಿತ್ತು, ಆದರೆ, ಅವರ ನಂತರ ಅವರ ತಮ್ಮನಿಗೆ (ನಮ್ಮ ಮಾವನಿಗೆ) ಮೈಸೂರಿನ ಹೆಣ್ಣು ಕೊಟ್ಟು ಮದುವೆಯಾಯಿತು, ಆಕೆಯೂ ವೀಣೆ ನುಡಿಸಲು ಕಲಿಕೆ ಶುರುಮಾಡಿದ್ದರಂತೆ, ಆ ಕಾರಣದಿಂದ ನಮ್ಮ ಅಜ್ಜಿ ವೀಣೇಯನ್ನು ಕೊಣನೂರಿನಲ್ಲೇ ಇಟ್ಟುಕೊಂಡು ಹಾರ್ಮೋನಿಯಮ್‌ ಮಾತ್ರ ಕೊಟ್ಟು ಮಗಳನ್ನು ಕಳಿಸಿಕೊಟ್ಟರಂತೆ. ವೀಣೆಯಿಂದ ವಂಚಿತರಾಗಿ ಮತ್ತೆಂದೂ ವೀಣೆಯನ್ನು ಮುಟ್ಟುವುದಿಲ್ಲವೆಂದು ನಮ್ಮ ತಾಯಿ ಪಣತೊಟ್ಟ ಕಾರಣ ಅವರು ವೀಣೆ ನುಡಿಸುವುದನ್ನು ನಾವ್ಯಾರೂ ನೋಡುವ/ಕೇಳುವ ಸುಯೋಗ ಒದಗಲೇ ಇಲ್ಲ.

ನಮ್ಮ ತಾಯಿಯ ಹಾರ್ಮೋನಿಯಮ್‌ ವಾದನ ಮಾತ್ರ ಮುಂದುವರೆಯಿತು. ಅವರ ಕೈ ಎಷ್ಟು ಚೆನ್ನಾಗಿತ್ತೆಂದರೆ, ಅವರು ಶೃಂಗೇರಿಗೆ ಹೋಗಿದ್ದಾಗ ಅವರು ನುಡಿಸುವುದನ್ನು ಕೇಳಿದ ಮಠದ ಸಂಚಾಲಕರು ಜಗದ್ಗುರು ಚಂದ್ರಶೇಖರಭಾರತಿಗಳ ಸಮ್ಮುಖದಲ್ಲಿ ‘ಶಂಕರ-ಗುರುವರ-ಮಹಿಮ’ ಎಂಬ ಕೃತಿಯನ್ನು ನುಡಿಸಲು ಅವಕಾಶ ಮಾಡಿಕೊಟ್ಟಿದ್ದರಂತೆ, ಆಗ ನನಗೆ ಇನ್ನೂ ಎರಡೇ ವರ್ಷವಂತೆ, ನನ್ನನ್ನು ಅಜ್ಜಿಯಾಂದಿಗೆ ಮನೆಯಲ್ಲೇ (ಶಿವಮೊಗ್ಗೆಯಲ್ಲಿ) ಬಿಟ್ಟು ಶೃಂಗೇರಿಗೆ ತಾವೊಬ್ಬರೇ ಹೋಗಿದ್ದನ್ನು ಆಗಾಗ್ಗೆ ನಮ್ಮಮ್ಮ ನೆನೆಸಿಕೊಳ್ಳುತ್ತಿದ್ದರು. ಅವರು ಎಪ್ಪತ್ತು ಮೀರಿದ ವಯಸ್ಸಿನಲ್ಲಿ ನುಡಿಸಿದ ಒಂದೋ ಎರಡೋ ಹಾರ್ಮೋನಿಯಂ ದ್ವನಿಸುರುಳಿ ಮಕ್ಕಳಾದ ನಮ್ಮಬಳಿ ಇವೆ, ಈಗಲ್ಲೂ ಒಮ್ಮೊಮ್ಮೆ ಕೇಳಿ ಸಂತೋಷ ಪಡುತ್ತೇವೆ.

ನಮ್ಮ ತಾಯಿಯ ಬಾಯಿ ಹಾಡುಗಾರಿಕೆ ಮಾತ್ರ ನನಗೆ ಅಚ್ಚರಿ ಉಂಟು ಮಾಡುತ್ತದೆ. ಅಷ್ಟು ಅಲ್ಪ ಸಮಯದಲ್ಲಿ (ಬಾಲ್ಯಪಾಠವೂ ಸೇರಿ ಸುಮಾರು ಐದಾರು ವರ್ಷಕ್ಕಿಂತ ಹೆಚ್ಚಿರಲಾರದು) ನೂರಿನ್ನೂರು ಕೃತಿಗಳನ್ನೂ ಅದಕ್ಕೆ ಮುಪ್ಪಟ್ಟೋ ನಾಲ್ಪಟ್ಟೋ ದೇವರನಾಮಗಳನ್ನು ಕಲಿತಿದ್ದರು. ಬೆಳಗಿನಿಂದ ಸಂಜೆಯವರೆಗೆ ಒಂದಿಲ್ಲ ಒಂದು ಹಾಡನ್ನು ಹಾಡುತ್ತಲೇ ಕೆಲಸಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದರು. ಹಾಡಿನ ಮಧ್ಯೆ ಅಡಚಣೆ ಬಂದರೆ, ಅದರ ನಂತರ ಏನೂ ಆಗೇ ಇಲ್ಲವೆನ್ನುವಂತೆ ಯಾವ ಸ್ಥಳದಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಮುಂದಕ್ಕೆ ಹಾಡಿಕೊಂಡು ಹೋಗುತ್ತಿದ್ದರು.

‘ಏಳು ನಾರಾಯಣನೇ ಏಳು ಲಕ್ಷ್ಮೀರಮಣ, ಏಳು ಕಮಲಾಕ್ಷ ಕಮಲನಾಭ’ ದಿಂದ ಅವರ ದಿನಚರಿ ಪ್ರಾರಂಭವಾದರೆ, ಸಂಜೆ ದೀಪ ಹಚ್ಚುವ ಸಮಯದಲ್ಲಿ ‘ದೀಪ ಮಂಗಳ ಜ್ಯೋತಿ ನಮೋ ನಮೋ’ ಎಂಬ ದೀಪಕರಾಗದ ಹಾಡಿನೊಂದಿಗೆ ಮುಕ್ತಾಯವಾಗುತ್ತಿತ್ತು. ಪ್ರತಿನಿತ್ಯ ಬೇರೆ ಬೇರೆ ಕೃತಿಗಳನ್ನು ನೆನಪಿಸಿಕೊಳ್ಳುತ್ತ ಕಲಿತ ಎಲ್ಲಾ ಕೃತಿಗಳನ್ನೂ ಮರೆಯದಂತೆ ನೋಡಿಕೊಳ್ಳುತ್ತಿದ್ದರು. ಸಂಗೀತದ ಜೊತೆಗೆ ರಾಮಾಯಣ ಮಹಾಭಾರತ ಮುಂತಾದ ಇತಿಹಾಸ ಪುರಾಣಗಳನ್ನು ಓದಿ ನೂರಾರು ಕಥೆ-ಉಪಕಥೆಗಳನ್ನು ನೆನಪಿನಲ್ಲಿಟ್ಟುಕೊಂಡು ಮಕ್ಕಳಿಗೆ ಹೇಳುತ್ತಿದ್ದರು. ನನ್ನ ತಮ್ಮ ಹುಟ್ಟಿದಾಗ, ಅವರ ಬಾಣಂತನದ ಸಮಯದಲ್ಲಿ, ಎಲ್ಲಿ ಮರೆತು ಹೋಗುವುವೋ ಎಂದು ಹೆದರಿ, ನಮ್ಮಣ್ಣನ ಕೈಯ್ಯಲ್ಲಿ (ಅವನ ಅಕ್ಷರ ಗುಂಡಾಗಿತ್ತು ಎಂದು) ತಾವು ಕಲಿತ ಎಲ್ಲ ಕೃತಿಗಳನ್ನೂ ಬರೆಸಿಕೊಂಡಿದ್ದರು.

ನಮ್ಮ ತಾಯಿಯ ತಾಯಿ ವೆಂಕಮ್ಮನವರು ಪ್ರಚಂಡ ಹೆಂಗಸರ ಪೈಕಿಯವರು. ಎಪ್ಪತ್ತೆರಡು ಜನರಾಗದ ಕೃತಿಯಾಂದನ್ನು ಅವರು ಹೇಳುತ್ತಿದ್ದರಂತೆ (ಕೇಳುವ ಸುಯೋಗ ನನಗೆ ದೊರಕಲಿಲ್ಲ). ಅವರ ಆ ಕೃತಿಯನ್ನು ಧ್ವನಿಮುದ್ರಿಸಿಕೊಳ್ಳಲು ಆಕಾಶವಾಣಿಯ ತಂತ್ರಜ್ಞರು ಕೊಣನೂರಿಗೆ ಬಂದಿದ್ದ ವಿಷಯ ನನಗೆ ಚೆನ್ನಾಗಿ ನೆನಪಿದೆ. ಅವರು ಕನ್ನಡ [^], ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನುರಿತಿದ್ದರು. (ಇಂಗ್ಲಿಷ್‌ ಸಹ ಅರ್ಥವಾಗುತ್ತಿತ್ತು!) ತ್ಯಾಗರಾಜ ಕೃತಿಗಳ ಅರ್ಥವನ್ನು ಚೆನ್ನಾಗಿ ವಿವರಿಸುವಷ್ಟು ತೆಲುಗಿನ ಭಾಷಾಜ್ಞಾನವಿತ್ತು. ಅವರ ತಂದೆ ಅಮುಲ್ದಾರ್‌ ಕೇಶವಯ್ಯನವರು, ಅವರ ಮನೆಯಲ್ಲಿ ಕುದುರೆ ನೋಡಿಕೊಳ್ಳಲು ಮುಸಲ್ಮಾನ ಸೇವಕರು ಇದ್ದದ್ದರಿಂದ ಅವರಿಗೆ ಉರ್ದೂ ಭಾಷೆ ಚೆನ್ನಾಗಿ ಬರುತ್ತಿತ್ತು! (ಒಮ್ಮೆ, ಅವರು ಹಾಸನದಲ್ಲಿ ನಮ್ಮ ಮನೆಗೆ ಬಂದಿದ್ದಾಗ, ಒಬ್ಬ ಮುಸಲ್ಮಾನ ಚಾಪೆ ಮಾರಲು ಬಂದಿದ್ದ, ಅವನೊಂದಿಗೆ ಸರಂಪುರಿಯಾಗಿ ಉರ್ದುವಿನಲ್ಲಿ ಸಂಭಾಷಣೆ ಮಾಡುತ್ತಿದ್ದ ವಯಸ್ಸಾದ ಮಡಿ ಹೆಂಗಸನ್ನು ನೋಡಿದ ಅಕ್ಕಪಕ್ಕದವರೆಲ್ಲ ದಂಗುಬಡಿದು ಹೋಗಿದ್ದರು, ಆ ದೃಶ್ಯ ಇನ್ನೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.)

ನನಗೆ ಸಂಗೀತದಬಗ್ಗೆ ಅಭಿರುಚಿ ಇರುವುದನ್ನು ಕಂಡುಕೊಂಡಿದ್ದ ನಮ್ಮಜ್ಜಿ, ನನಗೆ ಅನೇಕ ಸಂಗೀತಕ್ಕೆ ಸಂಬಂಧಪಟ್ಟ ಕತೆಗಳನ್ನು ತಿಳಿಸುತ್ತಿದ್ದರು. ಅವರು ನಮ್ಮಜ್ಜನನ್ನು ಮದುವೆಯಾಗಿ ಕೊಣನೂರಿಗೆ ಬರುವ ಮೊದಲು ಮೈಸೂರಿನಲ್ಲಿ ಬೆಳೆಯುತ್ತಿದ್ದಾಗ ಮೈಸೂರರಸರ ಅರಮನೆಯಲ್ಲಿ ನಡೆಯುತ್ತಿದ್ದ ದಸರಾ ಕಚೇರಿಗಳನ್ನು ಕೇಳಿದವರು ಅವರು. ಮೈಸೂರು [^] ವಾಸುದೇವಾಚಾರ್ಯರಂಥ ಸಂಗೀತಗಾರರು ಅವರ ಮನೆಯ ಅಂಗಳದಲ್ಲಿ ಬಂದು ಹಾಡುತ್ತಿದ್ದ ವಿಷಯವನ್ನು ಸ್ವಯಂ ವಾಸುದೇವಾಚಾರ್ಯರೇ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ‘ಕೇಶವಯ್ಯನವರು ಸಂಗೀತ ರಸಿಕರು, ಅವರು ಎಷ್ಟು ಉದಾರಿಗಳೆಂದರೆ, ಐದು ರೂಪಾಯಿ ಸಂಭಾವನೆ ಕೊಟ್ಟು ನಮ್ಮನ್ನು ಆದರಿಸುತ್ತಿದ್ದರು’ ಎಂಬ ವಾಸುದೇವಾಚಾರ್ಯರ ಮಾತನ್ನು ನೆನೆಸಿಕೊಂಡರೆ, ಮತ್ತು ಆ ಘಟನೆ ನಡೆದದ್ದು ನೂರು ವರ್ಷಗಳಿಗಿಂತ ಹೆಚ್ಚು ಕಾಲದಹಿಂದೆ ಎಂಬುದನ್ನು ನೆನೆಸಿಕೊಂಡರೆ ಮೈಯ್ಯಲ್ಲಿ ರೋಮಾಂಚನವಾಗುತ್ತದೆ.

ಪುಷ್ಪಾ ಕಾಶೀನಾಥ್‌ ಅವರು ವೀಣೆ ನುಡಿಸುತ್ತಿದ್ದಾಗ ಮರುಕಳಿಸಿದ ನಮ್ಮ ತಾಯಿ, ಅವರ ತಾಯಿ, ಅವರ ತಂದೆ, ಮತ್ತು ನನ್ನ ಅಕ್ಕ ತಂಗಿಯರು ನನ್ನ ಸಂಗೀತಪ್ರೀತಿಗೆ ತಮಗೇ ತಿಳಿಯದಂತೆ ಹೇಗೆ ಹೊಣೆಯಾಗಿದ್ದಾರೆ ಎಂಬ ಕೃತಜ್ಞತೆ ಮನಸ್ಸಿನಲ್ಲಿ ಮೂಡಿಬಂತು. ಆ ಕಾರಣದಿಂದ ನಮ್ಮ ನೆಲಮಾಳಿಗೆಯ ಪ್ರಥಮ ಕಚೇರಿ ಮಕ್ಕಳಲ್ಲಿ ಸಂಗೀತ ಪ್ರೀತಿಯನ್ನು ಬೆಳೆಸಿದ ಆ ತಾಯಂದಿರಿಗೆ ಅರ್ಪಣೆ ಮಾಡಿದ್ದು ನನ್ನ ಮನಸ್ಸಿಗೆ ತುಂಬ ತೃಪ್ತಿ ಕೊಟ್ಟಿತು. ಇಂಥಾ ಅವಕಾಶಗಳನ್ನು ಆಗಾಗ್ಗೆ ಸಂಗೀತದ ಅಧಿದೇವತೆಯಾದ ಸರಸ್ವತಿಯು ನಮಗೆ ದಯಪಾಲಿಸಲಿ ಎಂಬ ಕೋರಿಕೆಯಾಂದಿಗೆ ವಿರಮಿಸುವೆ ಮುಂದಿನ ಕಂತಿನ ವರೆಗೆ.

ಲಾಮಾಮೃತಸಿಂಚನ – Dalai Lama: The Purpose of Life

ಜೀವನ ಮೊದಲೇ ಸಂಕೀರ್ಣವಾದದ್ದು. ಅದನ್ನು ಮತ್ತಷ್ಟು ಗೋಜುಗೊಳಿಸುವುದು ಮನುಷ್ಯನ ಮೂರ್ಖಸ್ವಭಾವ. ಈ ಮನುಷ್ಯಸ್ವಭಾವವನ್ನು ಬದಲಿಸುವುದು ಸುಲಭದ ಮಾತಲ್ಲ. ಆದರೂ, ನಮ್ಮ ಇತಿಮಿತಿಗಳಲ್ಲೇ, ಬಾಳ್ವೆಯನ್ನು ಸುಗಮಗೊಳಿಸಿಕೊಳ್ಳಲು ಯತ್ನಿಸಬೇಕಾದರೆ, ಮಹಾತ್ಮರು ತೋರಿಸುವ ಮಾರ್ಗದತ್ತ ಗಮನಹರಿಸಬೇಕು. ಉತ್ತಮಬಾಳ್ವೆನಡೆಸಲು ಬೇಕಾದ ಹಲವಾರು ಸುಲಭೋಪಾಯಗಳನ್ನು ನಮಗೆ ಅನೇಕ ಸಂತರು ತೋರಿಸಿಕೊಟ್ಟಿದ್ದಾರೆ. ಆದರೆ ಕುಮತಿಗಳಾದ ನಾವು ಅಂಥ ಸುಲಭಮಾರ್ಗವನ್ನು ಬಿಟ್ಟು ನಿರಂತರ ಸಂಕಟದ ಮಾರ್ಗವನ್ನೇ ಹಿಡಿದು ಹೋಗುತ್ತೇವೆ. ಪ್ರತಿಯಾಂದು ದೇಶದ ಪುರಾಣ ಇತಿಹಾಸಗಳಲ್ಲೂ ಮನುಷ್ಯನನ್ನು ಕತ್ತಲಿನಿಂದ ಬೆಳೆಕಿನೆಡೆಗೆ ಕರೆದೊಯ್ಯುವ ದಾರಿದೀವಿಗೆಗಳು ಹೇರಳವಾಗಿ ದೊರಕುತ್ತವೆ.

ಭಾರತದಲ್ಲಂತೂ ಇಂಥ ಇತಿಹಾಸ-ಪುರಾಣಗಳಿಗೆ ಲೆಕ್ಕವೇ ಇಲ್ಲ. ಭಾರತದ ಉತ್ತರಗಡಿಯಲ್ಲಿರುವ ಟಿಬೆಟ್ಟಿನಿಂದ ಭಾರತಕ್ಕೆ ಆಶ್ರಯಕೋರಿ ಬಂದು ಅನೇಕ ದಶಕಗಳಿಂದ ಹಿಮಾಲಯದ ಬಳಿ ಧರ್ಮಶಾಲಾ ಎಂಬ ಸ್ಥಳದಲ್ಲಿ ಮೊಕ್ಕಾಂ ಮಾಡಿರುವ, ಧರ್ಮಗುರುಗಳೂ ಉದ್ದಾಮ ತತ್ತ್ವಜ್ಞರೂ, ವಿಶ್ವವಿಖ್ಯಾತ ಬೌದ್ಧಭಿಕ್ಷುಗಳೂ ಆದ ಪೂಜ್ಯ ದಲೈ-ಲಾಮ ಅವರ ಹೆಸರನ್ನು ಕೇಳದವರಾರು? ಅವರು ಸಾಧಾರಣ ಜನರಿಗೆಲ್ಲ ಅರ್ಥವಾಗುವಂತೆ ಉಪದೇಶಿಸಿದ ಕೆಲವು ಸುಲಭಸೂತ್ರಗಳನ್ನು ನನ್ನ ಬಾಲ್ಯಮಿತ್ರರಲ್ಲೊಬ್ಬರಾದ ಶ್ರೀಯುತ ಹರಿಸರ್ವೋತ್ತಮ ದಾಸ್‌ ನನ್ನ ಗಮನಕ್ಕೆ ಇತ್ತೀಚೆಗೆ ತಂದುಕೊಟ್ಟರು.

Dalai Lamaಆವುಗಳನ್ನು ಓದಿದಾಗ ಆಂಗ್ಲಭಾಷೆಯಲ್ಲಿದ್ದ ಆ ಆಣಿಮುತ್ತುಗಳನ್ನು ಕನ್ನಡದಲ್ಲಿ ಜಾಲತರಂಗದ ಓದುಗರೊಂದಿಗೆ ಹಂಚಿಕೊಳ್ಳುವ ಬಯಕೆಯಾಯಿತು. ಅವರ ಹೇಳಿಕೆಗಳ ಭಾವಾನುವಾದದ ಜೊತೆಗೆ ನನ್ನ ಕೆಲ ಟಿಪ್ಪಣಿಗಳನ್ನೂ ಸೇರಿಸಿ ಕೊಟ್ಟಿರುವ ಈ ಲೇಖನವನ್ನು ಇಗೋ ಓದಿ.

ದಲೈ-ಲಾಮಾ ಬೋಧಿಸಿದ ಜೀವನಸೂತ್ರಗಳ ಪೈಕಿ ಆಯ್ದ ಇಪ್ಪತ್ತು ಆಣಿಮುತ್ತುಗಳು ಹೀಗಿವೆ :

ಲಾಮ ಅವರ ಉವಾಚಗಳೆಲ್ಲ ಮೊದಲ ಭಾಗದಲ್ಲಿ, ನನ್ನ ಟಿಪ್ಪಣಿಗಳೆಲ್ಲ ಎರಡನೆಯ ಭಾಗದಲ್ಲಿ ಮೂಡಿಬಂದಿವೆ.

(1) ‘ಅಪಾರವಾದ ಅಪಾಯಕ್ಕೆ ನಮ್ಮನ್ನು ನಾವು ಒಡ್ಡಿಕೊಳ್ಳದೇ ಆಳವಾದ ಪ್ರೇಮವಾಗಲೀ ಮಹತ್ತರವಾದ ಸಾಧನೆಗಳಾಗಲೀ ಕರಗತವಾಗಲಾರವು’ ಎಂಬುದನ್ನು ಗಮನದಲ್ಲಿಟ್ಟು ಮುಂದೆ ಸಾಗಿರಿ.

-ವ್ಯಾಪಾರಿಯಾಬ್ಬ ಬಹುದೊಡ್ಡ ಲಾಭವನ್ನು ಪಡೆಯುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರೆ ಆತ ನಷ್ಟವನ್ನು ಅನುಭವಿಸಲೂ ತಯಾರಿರಬೇಕು ಅಲ್ಲವೇ? ಅಂದಮೇಲೆ, ವ್ಯಾಪಾರಿಯು ತನ್ನನ್ನು ತಾನು ನಷ್ಟದ ಅಪಾಯಕ್ಕೆ ಒಡ್ಡಿಕೊಳ್ಳಲು ಹಿಂದೆಗೆಯುವುದಿಲ್ಲ. ಅದೇರೀತಿ ಸಾಧನೆಯಮಾರ್ಗವೂ ಸಹ ನಿರಾಸೆ ಮತ್ತು ನಷ್ಟಗಳಿಂದ ಕೂಡಿರುವ ಸಾಧ್ಯತೆಯನ್ನು ಸಾಧಕರು ಮನಗಾಣಬೇಕು.

(2) ‘ ಸೋತರೂ ಚಿಂತೆಯಿಲ್ಲ, ನಷ್ಟವಾದರೂ ಚಿಂತೆಯಿಲ್ಲ, ಸೋಲಿನಿಂದ ಕಲಿತ ಪಾಠವನ್ನು ಮಾತ್ರ ಕಳೆದುಕೊಳ್ಳಬೇಡಿ.’

-ಇಂದಿನ ಪ್ರಪಂಚದಲ್ಲಿ ಗೆಲವು ಎಷ್ಟು ಮುಖ್ಯವಾಗಿಬಿಟ್ಟಿದೆಯೆಂದರೆ, ಮನುಷ್ಯ ಏನನ್ನು ಬೇಕಾದರೂ ಮಾಡಿಬಿಡುತ್ತಾನೆ, ಯಾವ ನಿಯಮವನ್ನು ಬೇಕಾದರೂ ಮೀರಿಬಿಡುತ್ತಾನೆ, ಆಟದಲ್ಲಿ ಸೋತಾಗ, ಬಾಜಿಯನ್ನು ಕಳೆದುಕೊಂಡಾಗ ಏನನ್ನೂ ಕಲಿಯುವುದಿಲ್ಲ, ಪಂದ್ಯದಲ್ಲಿ ಸೋಲುವುದಲ್ಲದೇ ಇಡೀ ಅನುಭವವನ್ನೂ ಕಳೆದುಕೊಳ್ಳುತ್ತಾನೆ.

(3) ‘ಆತ್ಮಗೌರವ, ಇತರರಬಗ್ಗೆ ಗೌರವ ಮತ್ತು ನಿಮ್ಮ ನಿರ್ಧಾರ ಮತ್ತು ಕ್ರಿಯೆಗಳಿಗೆ ನೀವೇ ಜವಾಬ್ದಾರರು ಎಂಬ ದೃಢವಾದ ನಂಬಿಕೆ, ಈ ಮೂರು ಗುಣಗಳನ್ನು ಮೈಗೂಡಿಸಿಕೊಳ್ಳಿ.’

-ಮನುಷ್ಯ ಬೆಳೆದು ದೊಡ್ಡವನಾದ ಎಂಬುದಕ್ಕೆ ಏನು ಸಾಕ್ಷಿ? ಮನಸ್ಸು ಪಕ್ವವಾಗಿದ್ದಕ್ಕೇನು ಕುರುಹು? ಮನುಷ್ಯ ತನ್ನಬಗ್ಗೆ ಮತ್ತು ಇತರರ ಬಗ್ಗೆ ಹೇಗೆ ನಡೆದುಕೊಳ್ಳುತ್ತಾನೆ, ತನ್ನ ಕ್ರಿಯೆಗಳ ಫಲಿತಾಂಶದ ಬಗ್ಗೆ ಎಂಥ ನಿಲುವನ್ನು ಪ್ರದರ್ಶಿಸುತ್ತಾನೆ ಎಂಬುದನ್ನು ಪರೀಕ್ಷಿಸಿದರೆ ತಿಳಿಯುತ್ತದೆ, ಅವನ ಪಕ್ವತೆಯ ಕುರುಹು. ತಾನೇ ಮಾಡಿದ ನಿರ್ಧಾರಗಳ ಹೊಣೆಯನ್ನು ಹೊರಲು ಮನುಷ್ಯ ಸದಾ ಸಿದ್ಧನಿರಬೇಕು.

(4) ‘ನಿಮಗೆ ಬೇಕಾದ್ದೆಲ್ಲ ಸಿಗುತ್ತಿದ್ದರೆ ಚೆನ್ನ ಎಂದುಕೊಳ್ಳಬೇಡಿ, ಒಮ್ಮೊಮ್ಮೆ ಬೇಕಾದ್ದೆಲ್ಲ ಸಿಗದಿದ್ದರೆ ಅದೇ ಪರಮ ಅದೃಷ್ಟ ಎಂಬ ಸತ್ಯವೂ ನಿಮಗೆ ಅರಿವಾಗಬಹುದು.’

-ಬೇಕಾದ್ದೆಲ್ಲ ಬೇಕಾದಾಗ ಸಿಗುತ್ತ ಹೋದರೆ ಮನುಜ ಸುಖಿಯಾಗುತ್ತಾನೆಂಬುದು ಭ್ರಮೆ. ಯಾವುದು ತನ್ನ ಬಳಿ ಇಲ್ಲವೋ ಅದಕ್ಕೇ ಮನುಷ್ಯ ಹೆಚ್ಚಿನ ಬೆಲೆ ಕೊಡುತ್ತಾನೆ. ಇರುವುದೆಲ್ಲವನ್ನೂ ಬಿಟ್ಟು ಇಲ್ಲದಿದ್ದನ್ನು ಹುಡುಕುವುದು ಮನುಷ್ಯಸ್ವಭಾವ. ಬೇಕಾದ್ದು ಸಿಗದಿದ್ದಾಗ ನಿರಾಸೆಯಿಂದ ನರಳುವುದು ಸಹ ಬಲು ಸಾಮಾನ್ಯ. ಮುಟ್ಟಿದ್ದೆಲ್ಲ ಚಿನ್ನವಾದಾಗ ಅನುಭವಿದ ಬವಣೆ ಮೈದಾಸನಿಗೆ ಮಾತ್ರ ಗೊತ್ತು. ಬೇಡಿದ್ದೆಲ್ಲ ಸಿಗದಿದ್ದರೇ ಸುಖ ಎಂದು ಅವನಿಗೆ ಅನ್ನಿಸಿತಲ್ಲವೇ?

(5) ‘ನಿಯಮಗಳನ್ನು ಸರಿಯಾಗಿ ಕಲಿತರೆ, ಅವುಗಳನ್ನು ಮುರಿಯುವುದು ಹೇಗೆ ಎಂಬ ಕಲ್ಪನೆ ಉಂಟಾಗುತ್ತದೆ.’ -ನಿಯಮಗಳಿರುವುದೇ ಮುರಿಯುವುದಕ್ಕಾಗಿ ಎಂಬ ನಾಣ್ನುಡಿಯನ್ನು ಕೇಳಿರಬಹುದಲ್ಲವೇ? ಆದರೆ ಎಲ್ಲ ನಿಯಮಗಳನ್ನು ಮನಸ್ಸಿಗೆಬಂದಂತೆ ಮುರಿಯಲಾಗದು. ಉಲ್ಲಂಘಿಸಲೇಬೇಕಾದ ಪರಿಸ್ಥಿತಿಬಂದಾಗ, ಯಾವ ನಿಯಮವನ್ನು ಎಷ್ಟು ಬಗ್ಗಿಸಬಹುದು, ಎಷ್ಟು ಮೀರಬಹುದು ಎಂಬ ತಿಳುವಳಿಕೆ ಅಗತ್ಯ.

(6) ‘ಒಂದು ಪುಟ್ಟ ಜಗಳ ದೊಡ್ಡದೊಂದು ಸಂಬಂಧವನ್ನು ಮುರಿಯದಂತೆ ಜಾಗರೂಕರಾಗಿರಿ.’

-ಅತ್ಯುತ್ತಮ ಸಂಬಂಧಗಳು ಸಣ್ಣಪುಟ್ಟ ವಿಚಾರಗಳಿಂದ ಹಳಸಿಕೊಂಡು ಕೊನೆಗೆ ಮುರಿದೂ ಹೋಗುವುದು ಎಲ್ಲರಿಗೂ ಒಂದಿಲ್ಲೊಂದು ಬಾರೀ ಆಗುವ ಅನುಭವ. ಪುಟ್ಟ ಜಗಳ ದೊಡ್ಡ ಕದನವಾಗದಂತೆ ಎಚ್ಚರಿಕೆ ವಹಿಸುವುದೇ ಜಾಣತನ.

(7) ‘ತಪ್ಪುಮಾಡಿದ ಅರಿವು ಬಂದೊಡನೆಯೆ ಅದನ್ನು ತಿದ್ದಿಕೊಳ್ಳಲು ಬೇಕಾದ ಕ್ರಮವನ್ನು ತೆಗೆದುಕೊಳ್ಳಿ.’

-ತಪ್ಪು ಮಾಡುವುದು ಸಹಜ, ತಾನು ಮಾಡಿದ್ದು ತಪ್ಪು ಎಂದು ತಿಳಿದರೂ ಅದನ್ನು ಒಪ್ಪಿಕೊಳ್ಳದಿರುವುದಕ್ಕೆ ಮನುಷ್ಯನ ಅಹಂಕಾರವೇ ಕಾರಣ. ಒಪ್ಪಿಕೊಂಡೂ ತಿದ್ದಿಕೊಳ್ಳದಿರುವುದು ಭಂಡತನ.

(8) ‘ಪ್ರತಿನಿತ್ಯ ಏಕಾಂತದಲ್ಲಿ ಒಂದಿಷ್ಟು ಸಮಯವನ್ನು ಕಳೆಯಿರಿ.’

-ಈ ಜೀವನ ಗದ್ದಲದಿಂದ ಕೂಡಿದ್ದು. ಮನೆಮಂದಿಯಿಂದ ಹಿಡಿದು ಬಂಧುಮಿತ್ರರ ಮತ್ತು ಸಹೋದ್ಯೋಗಿಗಳ ಹಗರಣದ ಮಧ್ಯೆ, ಸಂತೆ-ಪೇಟೆಗಳ ಗಲಾಟೆಗಳ ನಡುವೆ ಶಾಂತಿ ಎಲ್ಲಿಂದ ಬರಬೇಕು? ಅದಕ್ಕೇ ಏಕಾಂತವನ್ನು ಹುಡುಕಬೇಕು, ಇಲ್ಲವಾದರೆ, ಸಂತೆಯಲ್ಲಿದ್ದೂ ಏಕಾಂತದಲ್ಲಿರುವುದನ್ನು ಕಲಿಯಬೇಕು.

(9) ‘ಬದಲಾವಣೆಯನ್ನು ಸ್ವಾಗತಿಸಿ, ಆದರೆ, ಮೂಲಭೂತ ನಂಬಿಕೆಗಳಿಗೆ, ಮೌಲ್ಯಗಳಿಗೆ ತಿಲಾಂಜಲಿ ಕೊಡಬೇಡಿ.’ -ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ. ಕೆಲವು ನಾವೇ ಒಪ್ಪಿ ಮಾಡಿಕೊಳ್ಳುವ ಬದಲಾವಣೆಯಾದರೆ ಇನ್ನು ಕೆಲವು ನಮ್ಮ ಮೇಲೆ ಹೇರಲ್ಪಡುವ ಬದಲಾವಣೆಗಳು. ಆದರೆ ನಾಯಿ ಬಾಲವನ್ನು ಅಲ್ಲಾಡಿಸಬೇಕೇ ಹೊರತು ಬಾಲವೇ ನಾಯಿಯನ್ನು ಅಲ್ಲಡಿಸುವಂತಾಗಬಾರದಲ್ಲವೇ? ಮಾಡಿಕೊಳ್ಳುವ ಬದಲಾವಣೆ ಆರೋಗ್ಯಕರವಾಗಿದ್ದರೆ ಮಾತ್ರ ಅದಕ್ಕೆ ಸ್ವಾಗತವಿರಲಿ.

(10) ‘ ಹಲವೊಮ್ಮೆ, ಎಲ್ಲಕ್ಕಿಂತ ಉತ್ತಮವಾದ ಪ್ರತ್ಯುತ್ತರ ಮೌನ ಎಂಬುದನ್ನು ಮರೆಯಬೇಡಿ.’

-ಪ್ರತಿಯಾಂದು ವಾಗ್ಯುದ್ಧದಲ್ಲೂ ನಾವೇ ಕೊನೆಯ ಮಾತನ್ನಾಡಬೇಕೆಂಬ ಆಂತರಿಕ ತುಡಿತ ಮನುಷ್ಯನನ್ನು ಕಾಡುವುದು. ಇದಕ್ಕೆ ಕಾರಣ, ನಮ್ಮ ಮೇಲ್ಗೈಯ್ಯನ್ನು ತೋರಿಸಬೇಕೆಂಬ ಅಹಂ, ಸೋಲಬಾರದೆಂಬ ಉತ್ಕಟೇಚ್ಛೆ. ಹಲವೊಮ್ಮೆ ಸೋಲಿನಲ್ಲೇ ಜಯ ಅಡಗಿರುತ್ತದೆ ಎಂಬುದನ್ನು ಮನಗಾಣಬೇಕು.

(11) ‘(ಯೌವನದಲ್ಲಿ) ಗೌರವದಿಂದ ಬಾಳಿದರೆ ಮುಂದೆ (ವಯಸ್ಸಾದಾಗ) ಹಿಂದಿರುಗಿ ನೋಡುವಂತಾದಾಗ ಕಳೆದ ಜೀವನವನ್ನು ಮತ್ತೊಮ್ಮೆ ಸವಿಯಲು ಎರಡನೇ ಅವಕಾಶ ದೊರಕುತ್ತದೆ.’

-ತಿಂದ ಆಹಾರದ ತೇಗು ಬಾಯಿಗೆ ಬರುವಂತೆ ಬಾಳಿನ ಘಟನೆಗಳೂ ಸಹ ಹಿಂದಿರುಗುತ್ತವೆ. ಜೀವನದಲ್ಲಿ ನಾವು ಕಳೆಯುವ ಘಳಿಗೆಗಳು ಮತ್ತೆ ಬರಲಾರವಾದರೂ ಸುಂದರ ಘಳಿಗೆಗಳನ್ನು ಮತ್ತೆ ಮತ್ತೆ ಮೆಲಕು ಹಾಕಲು ಸಾಧ್ಯ, ಆದ್ದರಿಂದ, ಮೆಲಕು ಹಾಕಲು ಯೋಗ್ಯವಾದದ್ದನ್ನು ಮಾತ್ರ ತಿನ್ನಬೇಕು.

(12) ‘ಪ್ರೀತಿ-ವಾತ್ಸಲ್ಯಮಯವಾದ ವಾತಾವರಣ ಮನೆಯಲ್ಲಿದ್ದರೆ, ಅದು ನಿಮ್ಮ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ.’ -ಪ್ರತಿನಿತ್ಯದ ಬದುಕಿನ ಜಂಜಾಟದಲ್ಲಿ ನಮ್ಮ ಸುತ್ತಮುತ್ತಲಿನವರಿಗೆ ನಾವು ಎಂಥ ವಾತಾವರಣವನ್ನು ಉಂಟುಮಾಡುತ್ತೇವೆ ಎಂಬುದನ್ನು ಮರೆತೇ ಬಿಡುತ್ತೇವೆ. ನಮ್ಮ ನಡವಳಿಕೆ ಇತರರಮೇಲೆ ಎಷ್ಟು ದೀರ್ಘಕಾಲದ ಪರಿಣಾಮಗಳನ್ನು ಮಾಡಬಹುದು ಎಂಬ ಕಲ್ಪನೆ ನಮಗಿದ್ದರೆ, ಸಾಧ್ಯವಾದಷ್ಟೂ ಕಹಿ ವಾತಾವರಣವನ್ನು ಉಂಟುಮಾಡದಹಾಗೆ ಜಾಗರೂಕತೆ ವಹಿಸಬಹುದು.

(13) ‘ ಆತ್ಮೀಯರೊಂದಿಗೆ ಭಿನ್ನಾಭಿಪ್ರಾಯವಾದಾಗ ಇಂದಿನ ಬಗ್ಗೆ ಮಾತ್ರ ಚರ್ಚಿಸಿ, ಹಳೆಯ ಪುರಾಣವನ್ನೆಲ್ಲ ಹಿಂದಕ್ಕೇ ಬಿಟ್ಟುಬಿಡಿ.’

-ಬಂಧುಮಿತ್ರರೊಂದಿಗೆ ಭಿನ್ನಾಭಿಪ್ರಾಯವಾದಾಗ ಒಬ್ಬರಿಗೊಬ್ಬರು ಸಮಾಧಾನಮಾಡಿಕೊಳ್ಳುವಾಗ ಹಿಂದಿನ ಚರಿತ್ರೆಯನ್ನೆಲ್ಲ ಮತ್ತೆ ಮತ್ತೆ ಎತ್ತಾಡಿದರೆ ಮನಸ್ತಾಪ ಪರಿಹಾರವಾಗುವುದೇ? ಒಬ್ಬರು ಒಂದು ಕಹಿ ಘಟನೆಯನ್ನು ನೆನಪಿಸಿದರೆ ಮತ್ತೊಬ್ಬರು ಇನ್ನೊಂದನ್ನು ನೆನಪಿಸುತ್ತಾ, ಹಳೇ ಗಾಯಗಳು ಮಾಯುವಬದಲು ಹೊಸ ಗಾಯಗಳಾಗುತ್ತಾ ಹೋಗುತ್ತವೆ, ಮತ್ತಷ್ಟು ಮನಸ್ತಾಪವಾಗುತ್ತದೆ.

(14) ‘ ನಿಮ್ಮಲ್ಲಿರುವ ಜ್ಞಾನಭಂಡಾರವನ್ನು ಇತರರೊಂದಿಗೆ ಹಂಚಿಕೊಳ್ಳಿ, ಆಗ ನೀವು ಅಮರರಾಗುತ್ತೀರಿ’

-ಮನುಷ್ಯ ಚಿರಕಾಲ ಬದುಕಲು ಇಚ್ಚಿಸುತ್ತಾನೆ, ಸತ್ತಮೇಲೂ ತನ್ನನ್ನು ಇತರರು ನೆನಪಿನಲ್ಲಿಡಲಿ ಎಂಬುದು ಅವನ ಆಸೆ. ಜ್ಞಾನದಾನ ಮಾಡಿದರೆ ನಿಮ್ಮಿಂದ ಕಲಿತವರು ಮತ್ತಿತರರಿಗೆ ಹೇಳಿಕೊಟ್ಟಾಗ ನಿಮ್ಮ ಹೆಸರೂ ಮುಂದುವರೆದು ಶಾಶ್ವತವಾಗುತ್ತದೆ.

(15) ‘ ಭೂಮಿತಾಯಿಯ ಬಗ್ಗೆ ಮೃದುವಾಗಿ ನಡೆದುಕೊಳ್ಳಿ.’

-ನಮಗೆ ಅನ್ನ ನೀರು ಕೊಡುವ ಈ ಭೂಮಾತೆಯಬಗ್ಗೆ ನಾವು ಎಷ್ಟು ಅನಾದರದಿಂದ ವರ್ತಿಸುತ್ತೇವೆ ಎಂಬ ಅರಿವು ನಮಗಾದಾಗ ತಲೆ ತಗ್ಗಿಸುವಷ್ಟು ನಾಚಿಕೆಯಾಗುತ್ತದೆ. ಆ ನಾಚಿಕೆ ಮನಃಪೂರ್ವಕವಾಗಿದ್ದರೆ ಭೂಮಿತಾಯಿಯಬಗ್ಗೆ ನಮ್ಮ ನಡವಳಿಕೆ ತಾನಾಗೆ ಭಕ್ತ್ಯಾದರಗಳಿಂದ ಕೂಡಿರುತ್ತದೆ.

(16) ‘ ವರ್ಷಕ್ಕೊಮ್ಮೆಯಾದರೂ ನೀವು ಹಿಂದೆಂದೂ ಹೋಗಿರದ ಸ್ಥಳಕ್ಕೆ ಭೇಟಿ ಕೊಡಿ.’

-ತಾವಿರುವ ಪರಿಚಿತತಾಣವು ತಮಗೆ ಒದಗಿಸುವ ಭದ್ರತೆಯಕಾರಣ ನಮ್ಮಲ್ಲಿ ಹಲವರು ಇತರ ಸ್ಥಳಗಳಿಗೆ ಭೇಟಿ ಕೊಡುವುದೇ ಇಲ್ಲ. ಈ ಸುಂದರ ವಿಶ್ವದಲ್ಲಿ ಎಷ್ಟೊಂದು ನೊಡಬೇಕಾದ ಸ್ಥಳಗಳಿವೆ? ಅವನ್ನೆಲ್ಲ ನೋಡುವುದು ಯಾವಾಗ?

(17) ‘ ಪರಸ್ಪರ ಅವಲಂಬನೆಗಿಂತ ಪರಸ್ಪರ ಪ್ರೇಮವೇ ಅಧಿಕವಾಗಿದ್ದಾಗ ಗೆಳೆತನ ಶ್ರೇಷ್ಠದರ್ಜೆಯದಾಗಿರುತ್ತದೆ.’ -ಸಂಬಂಧಗಳು ಹಳಸಿಕೊಳ್ಳುವುದು ಯಾವಾಗ? ಒಬ್ಬರನ್ನೊಬ್ಬರು ಪರಸ್ಪರ ಹಿಂಡಲು ಪ್ರಾರಂಭಿಸಿದಾಗ. ಇತರರಿಂದ ಏನನ್ನು ಯಾವಾಗ ಹೇಗೆ ಪಡೆದುಕೊಳ್ಳಲಿ ಎಂದು ಚಿಂತಿಸುವ ಸ್ವಾರ್ಥದಿಂದ ಗೆಳೆತನ ಹಳಸುತ್ತದೆ. ಇತರರಿಗೆ ಏನನ್ನು ಕೊಡಲಿ ಎಂದು ಚಿಂತಿಸುವ ಔದಾರ್ಯಮನೋಭಾವದಿಂದ ಗೆಳೆತನ ವರ್ಧಿಸುತ್ತದೆ.

(18) ‘ ಏನನ್ನು ತೆತ್ತು ಏನನ್ನು ಪಡೆದೆ?’ ಎಂಬ ಪ್ರಶ್ನೆಗೆ ಉತ್ತರವೇ ಗೆಲುವಿನ ನಿಜವಾದ ಅಳತೆಗೋಲು.’

-ಲಾಭಕ್ಕಾಗಿ ಮಾಡಿದ ತ್ಯಾಗ ಏನು, ಸ್ವಾಭಿಮಾನವೋ, ಆತ್ಮಗೌರವವೋ, ಪಾತಿವ್ರತ್ಯವೋ, ದೇಶಪ್ರೇಮವೋ? ಯಾವ ಮೌಲ್ಯವನ್ನು ಬಿಟ್ಟುಕೊಡಬೇಕಾಯಿತು, ಪಡೆದದ್ದೇನು? ಅಷ್ಟು ಮಹತ್ವಪೂರ್ಣವಾದದ್ದೇ? ಎಂಬುದನ್ನು ತೂಗುವ ತಕ್ಕಡಿಬೇಕು. ಕೆಲವೊಮ್ಮೆ ಒಂದನ್ನು ಗಳಿಸಲು ನಾವು ಹತ್ತನ್ನು ಖರ್ಚುಮಾಡುತ್ತೇವೆ. ನೊಣವನ್ನು ತಿಂದು ವ್ರತವನ್ನು ಕೆಡಿಸಿಕೊಳ್ಳುತ್ತೇವೆ, ಸಣ್ಣ ಲಾಭಕ್ಕಾಗಿ ಅತಿಬೆಲೆಬಾಳುವದನ್ನು ಬಿಟ್ಟುಕೊಟ್ಟುಬಿಡುತ್ತೇವೆ.

(19) ‘ ಪ್ರೀತಿಸುವಾಗ ನಿಮ್ಮನ್ನು ನೀವೇ ಅರ್ಪಿಸಿಕೊಳ್ಳಿ.’

-ಕೆಲವು ವ್ಯಾಪಾರಗಳಲ್ಲಿ ತೆಗೆದುಕೊಳ್ಳುವುದಕ್ಕಿಂತ ಕೊಡುವುದೇ ಲಾಭಕರ. ಪ್ರೀತಿಯೂ ಇಂಥ ಒಂದು ‘ ವ್ಯಾಪಾರ.’

(20) ‘ ಮಾಡಿ ಬಡಿಸುವಾಗ ಸಂಪೂರ್ಣವಾಗಿ ನಿಮ್ಮನ್ನು ನೀವೇ ತೊಡಗಿಸಿಕೊಳ್ಳಿ.’

-ಪ್ರೀತಿಯಂತೇ ಮತ್ತೊಂದುಂಟು, ಅದು ರಸದೌತಣ, ಅದನ್ನು ತಯಾರಿಸುವಾಗ ತಾಯಿ ಅಟ್ಟು ಮಕ್ಕಳಿಗೆ ಬಡಿಸುವಂತೆ ತಾದಾತ್ಮ್ಯವಿರಬೇಕು, ತನ್ಮಯತೆ ಇರಬೇಕು, ನಿರ್ಮಲ ಅಂತಃಕರಣದ ವಾತ್ಸಲ್ಯವಿರಬೇಕು.

***

ಮೇಲಿನ ಇಪ್ಪತ್ತು ಸುಲಭಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಿಂಚಿತ್‌ ಯತ್ನ ಮಾಡಿದರೂ ಉತ್ತಮ ಫಲಿತಾಂಶ ದೊರಕಬಹುದೆಂಬ ಆಶಾವಾದದೊಂದಿಗೆ ಆ ಹರಿಸರ್ವೋತ್ತಮನ ಕೃಪೆಯಿಂದ ಬುದ್ಧನಿಗಾದಂತೆ ಎಲ್ಲರಿಗೂ ಜ್ಞಾನೋದಯವಾಗಲೆಂದು ಲಾಮಾಮೃತಸಿಂಚನಮಾಡುತ್ತ ವಿರಮಿಸುವೆ ಮುಂದಿನ ಕಂತಿನ ವರೆಗೆ.