Category Archives: ಪ್ರತಾಪ್ ಸಿಂಹ – ಬೆತ್ತಲೆ ಜಗತ್ತು

ಸಮಕಾಲೀನ ಆಗುಹೋಗುಗಳನ್ನು ವೈಚಾರಿಕತೆ ಒರೆಗೆ ಉಜ್ಜುವುದು ಪ್ರತಾಪ್ ಅವರ ಬರಹಗಳ ವೈಶಿಷ್ಟ್ಯ. ನಿಖರತೆ ಮತ್ತು ದಿಟ್ಟ ಬರವಣಿಗೆಗೆ ಹೆಸರಾದ ಅವರು ಓರ್ವ ಪತ್ರಕರ್ತರಾಗಿ ಸಾರ್ವಜನಿಕ ಅಭಿಪ್ರಾಯಗಳಿಗೆ ಎರಕ ಹೊಯ್ಯುತ್ತಾರೆ. ಬರಹಗಾರರಾಗಿ ನಿರ್ದಿಷ್ಟ ಚಿಂತನೆ ಮತ್ತು ಸ್ಪಷ್ಟ ಅಭಿಪ್ರಾಯಗಳನ್ನು ತಾಳುತ್ತಾರೆ. ಅದು ಅವರ ವೈಖರಿ ಮತ್ತು ಜಾಯಮಾನ. ಪತ್ರಿಕೋದ್ಯಮ ವ್ಯಾಸಂಗ ಮಾಡಿದವರು ಪತ್ರಕರ್ತರಾಗಿ ವೃತ್ತಿಪರರಾಗುವುದು ನಮ್ಮ ನಾಡಿನಲ್ಲಿ ಇನ್ನೂ ಸಾಬೀತಾಗಿಲ್ಲ. ಇದಕ್ಕೆ ನಾವು ಕಾಣುವ ಕೆಲವು ಅಪವಾದಗಳಲ್ಲಿ ಪ್ರತಾಪ್ ಅವರೂ ಒಬ್ಬರು. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಅವರು ವಿಜಯ ಕರ್ನಾಟಕ ಪತ್ರಿಕೆ ಆರಂಭವಾದಂದಿನಿಂದ ಅಲ್ಲಿನ ಸಂಪಾದಕೀಯ [^] ವಿಭಾಗದಲ್ಲಿ ಮುಖ್ಯ ಉಪ-ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಏಳು ವರ್ಷಗಳಿಂದ ಅವರ ಸಾಪ್ತಾಹಿಕ ಅಂಕಣ “ಬೆತ್ತಲೆ ಜಗತ್ತು” ಪ್ರಕಟವಾಗುತ್ತಿದೆ. ವಯಸ್ಸಿನಲ್ಲಿ ಇತರೆಲ್ಲ ಕನ್ನಡ ಅಂಕಣಕಾರರಿಗಿಂತ ಕಿರಿಯರು ಮತ್ತು ವಿಜಯ ಕರ್ನಾಟಕ [^] ಅಂಕಣ ಬರಹಗಾರರಲ್ಲಿ ಉಳಿದೆಲ್ಲರಿಗಿಂತ ಸೀನಿಯರ್ ಎಂಬ ಅಂಶವೂ ಅವರ ಇವತ್ತಿನ ಬಯೋಡೇಟದೊಳಗೆ ಕಾಣುತ್ತದೆ.

ಆಧುನಿಕ ಭಾರತ ಅನೇಕ ಆಷಾಢಭೂತಿಗಳಿಗೆ ಅನ್ನ ನೀರು ಕೊಟ್ಟಿದೆ. ಆ ಕಸುವುಂಡು ಬೆಳೆದ ಮನಸ್ಸುಗಳು ಸಹಜವಾಗಿಯೇ ಡಾಂಭಿಕತೆ ಮತ್ತು ವಿತಂಡವಾದವನ್ನು ಪೋಷಿಸಿಕೊಂಡು ಬರುತ್ತಿವೆ. ಈ ವಿದ್ಯಮಾನಕ್ಕೆ ಇತ್ತೀಚಿನ ನಿದರ್ಶನ ಗುರುವಿನ ಮಿಂಚಿನ ಶಿಷ್ಟುಡು, ತಮಿಳ್ ಇನ ತಲೈವರ್ ಎಂ. ಕರಣಾನಿಧಿಯವರು ಎತ್ತಿರುವ ರಾಮನ ಅಸ್ಥಿತ್ವದ ಪ್ರಶ್ನೆ.

ರಾಮನಿದ್ದಾನೋ ಇಲ್ಲವೋ ಎನ್ನುವ ಸಂವಾದವನ್ನು ಬದಿಗಿಟ್ಟು ಕಲೈಂಗರ್ ಕರುಣಾನಿಧಿಯವರ ವೈಚಾರಿಕತೆಯ ಬುನಾದಿಯನ್ನು, ತಮಿಳುತಲೆಗಳ ಪಾರಂಪರಿಕ ಪದರಗಳನ್ನು ಬಿಡಿಸಿನೋಡುವ ಪ್ರಯತ್ನ ಪ್ರತಾಪ್ ಸಿಂಹ ಅವರ ಮೊದಲ ಲೇಖನದ ವಸ್ತು ಮತ್ತು ವಿನ್ಯಾಸ. “ರಾಮನೇ ಇರಲಿಲ್ಲ ಅನ್ನುವುದಾದರೆ ಮುರುಗ ಎಲ್ಲಿಂದ ಬಂದ?” ಲೇಖನದ ಮೂಲಕ ಅವರ ಬೆತ್ತಲೆ ಜಗತ್ತು ಜಗದ್ವ್ಯಾಪಿ ಆಗುತ್ತಿದೆ

ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಸ್ಟೀವ್ ಜಾಬ್ಸ್ !

ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

ಐಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಸ್ಟೀವ್ ಜಾಬ್ಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ, ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚುಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

“Think Different”The people who are crazy enough to think they can change the world are the ones who do!!

ಈ ರೀತಿ ಸಾಗುವ “ಆಪಲ್” ಕಂಪನಿಯ ಜಾಹೀರಾತು ಆತನ ಮನೋಬಲದ ಪ್ರತಿಬಿಂಬವೇ ಆಗಿದೆ. 1997ರಲ್ಲಿ ಆತ ರೂಪಿಸಿದ `ಐ-ಮ್ಯಾಕ್’ ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, 2001ರಲ್ಲಿ ಹೊರತಂದ “ಐ-ಪಾಡ್” ಸಂಗೀತವನ್ನು ಆಲಿಸುವ ಪ್ರಕ್ರಿಯೆಗೇ ಹೊಸ ಅರ್ಥ ನೀಡಿತು. ಇದುವರೆಗೂ 11 ಕೋಟಿ ಐ-ಪಾಡ್‌ಗಳು ಖರ್ಚಾಗಿವೆ. ಅದರ ಬೆನ್ನಲ್ಲೇ ಪ್ರಾರಂಭವಾದ “ಐ-ಟ್ಯೂನ್ಸ್ ಸ್ಟೋರ್”ಗಳಿಂದ 400 ಕೋಟಿ ಹಾಡುಗಳು ಖರೀದಿಯಾಗಿವೆ!! 2007ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ “ಐ-ಫೋನ್”(ಮೊಬೈಲ್) ಖರೀದಿಸಲು ಅಮೆರಿಕನ್ನರು ಹಿಂದಿನ ದಿನದಿಂದಲೇ ಸಾಲುಗಟ್ಟಿ ನಿಂತಿದ್ದರು. ಅಂದು 599 ಡಾಲರ್‌ಗೆ ನೀಡಿದ್ದ ಫೋನ್‌ಗಳನ್ನು ಮೊನ್ನೆ ಜೂನ್ 10ರಂದು 199 ಡಾಲರ್‌ಗೆ ಮಾರುಕಟ್ಟೆಗೆ ಬಿಟ್ಟಿದ್ದಾನೆ. ಭಾರತದಲ್ಲೂ ಅತ್ಯಂತ ಕಾತರದಿಂದ ಕಾಯುತ್ತಿರುವ ಮೊಬೈಲ್ ಎಂದರೆ ಐ-ಫೋನ್. ಬರುವ ಆಗಸ್ಟ್‌ನಲ್ಲಿ ಐ-ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದ್ದು ನಮ್ಮಲ್ಲಿನ ಮುಂಚೂಣಿ ಮೊಬೈಲ್ ಕಂಪನಿಗಳಾದ ನೋಕಿಯಾ, ಸೋನಿ ಎರಿಕ್‌ಸನ್ ಹಾಗೂ ಮೋಟೊರೊಲಾ ಕಂಪನಿಗಳು ಮಳೆಗಾಲದಲ್ಲೂ ಬೆವರಲು ಆರಂಭಿಸಿವೆ!

ಇದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಲ್ಲಿ ದುಬಾರಿ ಎನಿಸಿದ್ದ ಐ-ಪೋನ್‌ನ ಬೆಲೆಯನ್ನು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿರುವುದರಿಂದ ಸಾಮಾನ್ಯ ಜನರೂ ಖರೀದಿಸಬಹುದಾಗಿದೆ. “3ಜಿ ನೆಟ್‌ವರ್ಕ್”ನಿಂದಾಗಿ ಇಂಟರ್‌ನೆಟ್ ಅನ್ನು ಜಾಲಾಡುವುದು ತೀರಾ ಸರಳ ಹಾಗೂ ಸುಲಭವಾಗಲಿದೆ. ಐ-ಫೋನ್‌ನಲ್ಲೇ ಐ-ಪಾಡ್ ಕೂಡ ಇರುವುದರಿಂದ ಸಂಗೀತವನ್ನು ಉತ್ಕೃಷ್ಟ ಸ್ತರದಲ್ಲಿ ಕೇಳಬಹುದು. ಇಂತಹ ಸಾಧನೆಯನ್ನು ಗುರುತಿಸಿರುವ ಖ್ಯಾತ “ಬ್ಲೆಂಡರ್” ಮ್ಯಾಗಝಿನ್, ಜಾಬ್ಸ್ ಅವರನ್ನು ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದಿದೆ. ಎಪ್ಪತ್ತೈದು ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಅಂತಹ ಬಿರುದು ನೀಡಿದೆ. ‘The undisputed king of the online music revolution’, ‘Technology trendsetter’ ಎಂದು ಮ್ಯಾಗಝಿನ್‌ನ ಸಂಪಾದಕ ಕ್ರೇಗ್ ಮಾರ್ಕ್ಸ್ ಶ್ಲಾಘಿಸಿದ್ದಾರೆ. “MySpace”ನ ಸ್ಥಾಪಕ ಟಾಮ್ ಆಂಡರ್‌ಸನ್, “YouTube” ಸೃಷ್ಟಿಕರ್ತರಾದ ಚಾಡ್ ಹರ್ಲೆ ಮತ್ತು ಸ್ಟೀವ್ ಚೆನ್ ಅವರು ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಜಾಬ್ಸ್ ಎಂತಹ ಸಾಧಕನಿರಬಹುದು?!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ
ಎನಬೇಡಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಇಂದು ಸ್ಟೀವ್ ಜಾಬ್ಸ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಈ ಮೇಲಿನ ಡಿವಿಜಿ ಕವನ ನೆನಪಾಗುತ್ತದೆ. ಅವನ ಹುಟ್ಟೇ ಒಂದು ದುರಂತ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡುಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಆದರೇನಂತೆ ಜಸ್ಟಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. ಹದಿನೇಳನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್‌ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೇನಂತೆ ಭಾನುವಾರ ಮಾತ್ರ `ಫುಲ್ ಮೀಲ್ಸ್’ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್, ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್‌ನಲ್ಲಿ ಪಂಟ.ಇವರಿಬ್ಬರೂ ಸೇರಿ 1976, ಏಪ್ರಿಲ್ 1ರಂದು ಆರಂಭಿಸಿದ್ದೇ “ಆಪಲ್ ಕಂಪ್ಯೂಟರ್”!

ಆಗ ಜಾಬ್ಸ್‌ಗೆ ಕೇವಲ 21 ವರ್ಷ. ಆಪಲ್ ಪ್ರಾರಂಭವಾಗಿದ್ದು ಜಾಬ್ಸ್‌ನ ಮನೆಯ ಗ್ಯಾರೇಜ್‌ನಲ್ಲಿ. ಆದರೇನಂತೆ ಯಶಸ್ಸು ಅರಸಿಕೊಂಡು ಬಂತು. ಆಪಲ್ ರೂಪಿಸಿದ ಆಪಲ್-1, ಆಪಲ್-2 ಕಂಪ್ಯೂಟರ್‌ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ(ಸಿಇಓ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್‌ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಓ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆಪಲ್‌ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್‌ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆಪಲ್ ಸೇರಿಬಿಟ್ಟ. 1984ರಲ್ಲಿ ಆಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ 1984, ಜನವರಿ 24ರಂದು ನಡೆದ ಆಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್ `ಮ್ಯಾಕಿಂತೋಷ್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ `ಮೌಸ್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್‌ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್‌ನನ್ನೇ ಹೊರಹಾಕಲಾಯಿತು!

ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸಿಟ್ಟಿಗೆದ್ದು ಯಾರನ್ನಾದರೂ ಕೊಲ್ಲುತ್ತಿದ್ದರು, ಇಲ್ಲವೇ ಹುಚ್ಚರಾಗುತ್ತಿದ್ದರು. ಆದರೆ ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್”ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವವರಿಂದ “ಪಿಕ್ಸರ್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ `ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು `ಪಿಕ್ಸರ್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್‌ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್‌ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ `ಆಪರೇಟಿಂಗ್ ಸಿಸ್ಟಮ್’ಗಳನ್ನು ಹೊರತರಲಾಗದೆ ಆಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಮತ್ತೆ ಆಪಲ್ ತಲೆಯೆತ್ತಬೇಕಾದರೆ ಜಾಬ್ಸ್‌ನ `ನೆಕ್ಸ್ಟ್’ ಕಂಪನಿಯ ಜತೆ ಕೈಜೋಡಿಸುವುದು ಮಾತ್ರವಲ್ಲ, ಜಾಬ್ಸ್‌ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!! 1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆಪಲ್‌ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಆನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ. ಅಲ್ಲದೆ ಈಚೆಗೆ ಆತ ಹೊರತಂದ ಐಫೋನ್ ವರ್ಷ ತುಂಬುವುದಕ್ಕೂ ಮೊದಲೇ ಜಗತ್ತಿನ ಮೆಚ್ಚುಗೆ ಗಳಿಸಿದೆ, ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್, “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ಸಂದ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ….”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ “The Whole Earth Catalog”ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish! ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

Advertisements

Apple ಹೆಮ್ಮರವಾಗಲು ಆತ ಹರಿಸಿದ ಬೆವರು ಎಂಥಾದ್ದು?

https://i2.wp.com/pratapsimha.com/wp-content/uploads/2011/09/apple.jpg

ಐ ಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್, ಈಗ ಐ ಪ್ಯಾಡ್. ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯಲ್ಲ ಸ್ಟೀವ್ ಜಾಬ್ಸ್. ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚು ಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

ಇಂದು ಸ್ಟೀವ್ ಜಾಬ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಅವನ ಹುಟ್ಟೇ ಒಂದು ಆಕಸ್ಮಿಕವೆಂಬುದು ತಿಳಿಯುತ್ತದೆ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡು ಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಈ ಮಧ್ಯೆ ಜಸ್ಪಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. 17ನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್್ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೂ ಭಾನುವಾರ ಮಾತ್ರ”ಫುಲ್ ಮೀಲ್ಸ್ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆ ತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್ ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್್ನಲ್ಲಿ ಪಂಟ.

ಇವರಿಬ್ಬರೂ ಸೇರಿ 1976, ಏಪ್ರಿಲ್ 1 ರಂದು ಆರಂಭಿಸಿದ್ದೇ “ಆ್ಯಪಲ್ ಕಂಪ್ಯೂಟರ್್”!

ಆಗ ಜಾಬ್ಸ್್ಗೆ ಕೇವಲ 21 ವರ್ಷ. ಆ್ಯಪಲ್ ಪ್ರಾರಂಭವಾಗಿದ್ದು ಜಾಬ್ಸ್್ನ ಮನೆಯ ಗ್ಯಾರೇಜ್್ನಲ್ಲಿ. ಆ್ಯಪಲ್-1, ಆ್ಯಪಲ್-2 ಕಂಪ್ಯೂಟರ್್ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್್ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಒ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆ್ಯಪಲ್್ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared water, or do you want a chance to change the world? ಎಂಬ ಜಾಬ್ಸ್್ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆ್ಯಪಲ್ ಸೇರಿಬಿಟ್ಟ. 1984ರಲ್ಲಿ ಆ್ಯಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ1984, ಜನವರಿ 24 ರಂದು ನಡೆದ ಆ್ಯಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್”ಮ್ಯಾಕಿಂತೋಷ್್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ”ಮೌಸ್್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್್ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆ್ಯಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು.  ಅದು ಯಾವ ಮಟ್ಟಕ್ಕೆ  ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್್ನನ್ನೇ ಹೊರಹಾಕಲಾಯಿತು!

ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್್” ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವರಿಂದ “ಪಿಕ್ಸರ್್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆ್ಯನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ”ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು”ಪಿಕ್ಸರ್್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್್ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್್ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ”ಆಪರೇಟಿಂಗ್ ಸಿಸ್ಟಮ್್’ ಗಳನ್ನು ಹೊರತರಲಾಗದೆ ಆ್ಯಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು.

ಮತ್ತೆ ಆ್ಯಪಲ್ ತಲೆಯೆತ್ತಬೇಕಾದರೆ ಜಾಬ್ಸ್್ನ”ನೆಕ್ಸ್ಟ್್’ ಕಂಪನಿಯ ಜತೆ ಕೈ ಜೋಡಿಸುವುದು ಮಾತ್ರವಲ್ಲ ಜಾಬ್ಸ್್ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!

1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆ್ಯಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆ್ಯಪಲ್್ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಅನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್್ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ ಐಫೋನ್ ಜಗತ್ತಿನ ಮೆಚ್ಚುಗೆ ಗಳಿಸಿದೆ. ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆಯಿತು. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್್ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್್ಪೋರ್ಡ್ ವಿಶ್ವವಿದ್ಯಾಲಯವೂ ಒಂದು 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್ “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್ ಫೋರ್ಡ್್ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ, ಬರೀ ಮೂರು ಕಥೆಗಳಷ್ಟೇ…..”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ, ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು, ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಅನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು  ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೆ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿ ಬಿಡು ಎಂದು ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು  ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್್ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು!

ಅಂದು ನಾನು ಸಾವನ್ನು ಸ್ಪರ್ಷಿಸಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಇಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ  ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ.  ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯಭಾಗದಲ್ಲಿ The Whole Earth Catal

ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೋ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು – Stay Hungry, Stay Foolish ! ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish ! ಮನದ ತುಂಬಾ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಇಂತಹ ಪ್ರೇರಣಾದಾಯಿಕ ಭಾಷಣ ಮಾಡಿದ್ದ, ಸಾಧನೆಯಲ್ಲೂ ಪ್ರೇರಕ ಶಕ್ತಿಯಾಗಿರುವ ಸ್ಟೀವ್್ಜಾಬ್ಸ್ ಆ್ಯಪಲ್ ಕಂಪನಿಯ ಸಿಇಒ ಸ್ಥಾನಕ್ಕೆ ಆಗಸ್ಟ್ 24ರಂದು ರಾಜೀನಾಮೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಯೇ ಅದಕ್ಕೆ ಮುಖ್ಯ ಕಾರಣವೆಂಬ ಗುಮಾನಿಯಿದೆ. 2008ರಲ್ಲಿ ಬ್ಲೂಮ್್ಬರ್ಗ್ ಟೀವಿಯಂತೂ ಜಾಬ್ಸ್ ತೀರಿಕೊಂಡಿದ್ದಾರೆ ಎಂದು ಶ್ರದ್ಧಾಂಜಲಿ ಸುದ್ದಿಯನ್ನು ಪ್ರಕಟಿಸಿಬಿಟ್ಟಿತ್ತು. ಇದೇನೇ ಇರಲಿ, ಹಾಲಿವುಡ್್ನಲ್ಲಿ ಜೇಮ್ಸ್ ಕ್ಯಾಮರಾನ್ ಹೇಗೆ ನಮ್ಮ ಕಲ್ಪನೆಗಳ ಹರವನ್ನೇ ವಿಸ್ತಾರ ಮಾಡುವ ನಿರ್ದೇಶಕರೋ, ಕಂಪ್ಯೂಟರ್ ಮತ್ತು ಮೊಬೈಲ್ ಕ್ಷೇತ್ರದಲ್ಲಿ ನಮ್ಮ ಕಲ್ಪನೆಗೂ ನಿಲುಕದ ಅದ್ಭುತ ಲೋಕವನ್ನು ವಾಸ್ತವಕ್ಕಿಳಿಸುವ ಮಾಂತ್ರಿಕ ಸ್ಟೀವ್್ಜಾಬ್ಸ್. ಅವರಿಲ್ಲದ ಆ್ಯಪಲ್ ಅನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ, ಅಲ್ಲವೇ?

ಆಕ್ಸ್‌ಫರ್ಡ್‌ನ ಅರ್ಥಶಾಸ್ತ್ರಜ್ಞರೇ ಚರ್ಚೆಗೆ ಅಂಜಿದೊಡೆಂತಯ್ಯ?

ಹೆಸರು: ಡಾ ಮನಮೋಹನ್ ಸಿಂಗ್

ಹುದ್ದೆ: ಭಾರತದ ಪ್ರಧಾನಿ

ಶಿಕ್ಷಣ: ಪ್ರತಿಷ್ಠಿತ ಆಕ್ಸ್‌ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ೧೯೬೨ರಲ್ಲಿ ಅರ್ಥ ಶಾಸ್ತ್ರದಲ್ಲೇ ಡಾಕ್ಟರೇಟ್.

ಸಾಧನೆ: 1966ರಲ್ಲಿ UNCTAD ಕಾರ್ಯದರ್ಶಿಯಾಗಿ ನೇಮಕ, 1971ರಲ್ಲಿ ಕೇಂದ್ರ ವಾಣಿಜ್ಯ ಖಾತೆಯ ಆರ್ಥಿಕ ಸಲಹೆಗಾರರಾಗಿ ನೇಮಕ, ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಉಪನ್ಯಾಸಕರಾಗಿ ಸೇವೆ, 1982ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ದ ಗವರ್ನರ್, 1987ರಲ್ಲಿ ‘ನ್ಯಾಮ್’ನ ‘ದಿ ಸೌತ್ ಕಮಿಷನ್’ನ ಮಹಾ ಕಾರ್ಯದರ್ಶಿಯಾಗಿ ಆಯ್ಕೆ.

ಅಷ್ಟೇ ಅಲ್ಲ, 1991ರಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನಿಯುಕ್ತಿಗೊಳ್ಳುವ ಮೊದಲು ಯುಜಿಸಿ ಅಧ್ಯಕ್ಷರಾಗಿ, ವಿತ್ತಖಾತೆ ಸಲಹೆಗಾರ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಪ್ರಧಾನಿ ಸಲಹೆಗಾರರಾಗಿಯೂ ಮನಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು. ಈಗಂತೂ ಡಾ. ಮನಮೋಹನ್ ಸಿಂಗ್ ಅವರ profile ಇನ್ನೂ ದೊಡ್ಡದಾಗಿದೆ. ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರಂತೆ ಕಾಗದದ ಮೇಲಷ್ಟೇ ಖ್ಯಾತ ಅರ್ಥಶಾಸ್ತ್ರಜ್ಞರಾಗದೆ, ಭಾರತದ ಆರ್ಥಿಕ ಉದಾರೀಕರಣದ ಹರಿಕಾರ ಎನಿಸಿಕೊಂಡಿದ್ದಾರೆ. ಜತೆಗೆ ಪ್ರಧಾನಿಯಾಗಿ ಐದು ವರ್ಷ ಪೂರೈಸುವ ಹಂತಕ್ಕೆ ಬಂದಿದ್ದಾರೆ. ಇಂತಹ ಶ್ರೀಮಂತ ಅನುಭವವೊಂದೇ ಸಾಕು ಜಗತ್ತಿನ ಯಾವುದೇ ವ್ಯಕ್ತಿಯ ಜತೆ ಚರ್ಚೆಗಿಳಿಯಲು. ನಿಜ ಹೇಳಬೇಕೆಂದರೆ, ಚರ್ಚೆಗೆ ಬರುವಂತೆ ಮನಮೋಹನ್ ಸಿಂಗ್ ಅವರೇ ತಮ್ಮ ವಿರೋಧಿಗಳಿಗೆ ಪಂಥಾಹ್ವಾನ ನೀಡಬೇಕಿತ್ತು!
ಆದರೆ ಆಗಿದ್ದೇನು?

ಮಾರ್ಚ್ 25ರಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಯನ್ನು ಬಿಡುಗಡೆ ಮಾಡಿದ ಸೋನಿಯಾ ಗಾಂಧಿಯವರು, “ಮನಮೋಹನ್ ಸಿಂಗ್ ಅವರೇ ನಮ್ಮ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ” ಎಂದು ಘೋಷಣೆ ಮಾಡಿದರು. ಪಕ್ಕದಲ್ಲೇ ಇದ್ದ ಮನಮೋಹನ್ ಸಿಂಗ್ ಎಷ್ಟು ಉತ್ಸಾಹಿತರಾದರೆಂದರೆ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿಯವರ ವಿರುದ್ಧ ಟೀಕಾ ಪ್ರಹಾರ ಆರಂಭಿಸಿದರು. ಆಡ್ವಾಣಿಯವರನ್ನು “ಅವಕಾಶವಾದಿ” ಎಂದು ಟೀಕಿಸಿದರು. “ಆಡ್ವಾಣಿಯವರು ಗೃಹ ಸಚಿವರಾಗಿದ್ದಾಗ ಸಂಸತ್ತಿನ ಮೇಲೆ ದಾಳಿಯಾಯಿತು, ಕೆಂಪುಕೋಟೆಯ ಮೇಲೆ ಆಕ್ರಮಣ ನಡೆಯಿತು,  ಗುಜರಾತ್ ಹತ್ಯಾಕಾಂಡವೂ ಸಂಭವಿಸಿತು, ಇಂಡಿಯನ್ ಏರ್‌ಲೈನ್ಸ್ ವಿಮಾನವೂ ಅಪಹರಣಕ್ಕೊಳಗಾಯಿತು. ಕೊನೆಗೆ ಭಯೋತ್ಪಾದಕರಿಗೇ ಬಿಡುಗಡೆಯ ಉಡುಗೊರೆ ಸಿಕ್ಕಿತು. ಆಡ್ವಾಣಿಯವರ ಸಾಧನೆ ಇದೇ! “.
ಮನಮೋಹನ್ ಸಿಂಗ್ ಇಷ್ಟಕ್ಕೇ ಸುಮ್ಮನಾಗಲಿಲ್ಲ.

ಮಗ್ಗುಲಲ್ಲೇ ಸೋನಿಯಾ ಗಾಂಧಿಯವರು ಕುಳಿತಿದ್ದ ಕಾರಣದಿಂದಲೋ ಏನೋ ಹಿಂದೆಂದೂ ಕಾಣದಂತಹ ಧೈರ್ಯ ತೋರಿಸಿದ ಅವರು, “ನಾನು ದುರ್ಬಲ ಪ್ರಧಾನಿಯೋ ಅಥವಾ ಪ್ರಬಲ ಪ್ರಧಾನಿಯೋ ಎಂಬುದನ್ನು ನಮ್ಮ ಸರಕಾರದ ಸಾಧನೆಗಳೇ ಹೇಳುತ್ತವೆ. ಆದರೆ ನನ್ನನ್ನು ದುರ್ಬಲ ಪ್ರಧಾನಿ ಎನ್ನುವ ಆಡ್ವಾಣಿಯವರು, ಬಾಬರಿ ಮಸೀದಿ ನೆಲಸಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಬಿಟ್ಟರೆ ರಾಷ್ಟ್ರ ಕಲ್ಯಾಣಕ್ಕೆ ಯಾವ ಕೊಡುಗೆ ಕೊಟ್ಟಿದ್ದಾರೆ?” ಎಂದು ಬಿಟ್ಟರು!

ಅದು ನಿಜಕ್ಕೂ ಗಂಭೀರ ಆರೋಪವಾಗಿತ್ತು. ವರುಣ್ ಗಾಂಧಿಯವರು ಕೋಮುದ್ವೇಷ ಹುಟ್ಟುಹಾಕಿದ್ದಾರೆ ಎಂದು ಯಾವ ಭಾಷಣವನ್ನು ಕಾಂಗ್ರೆಸ್ ಟೀಕಿಸುತ್ತಿತ್ತೋ, ಮನಮೋಹನ್ ಸಿಂಗ್ ಟೀಕೆ ಕೂಡ ಅಷ್ಟೇ ಅಪಾಯಕಾರಿಯಾಗಿತ್ತು. ಹಾಗಂತ ಆಡ್ವಾಣಿಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನ ಅಂದರೆ ಮಾರ್ಚ್ 26 ರಂದು ಅರುಣಾಚಲ ಪ್ರದೇಶದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಲು ನಿಂತ ಆಡ್ವಾಣಿ ಯವರು, ‘ಮನಮೋಹನ್ ಸಿಂಗ್ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಸೋನಿಯಾ ಗಾಂಧಿಯವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಪ್ರಧಾನಿ ಯಾರಾಗಬಹುದೆಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಆದರೆ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ಹಿಂಬಾಗಿಲು ಬಿಟ್ಟು ನೇರವಾಗಿ ಜನರಿಂದ ಲೋಕಸಭೆಗೆ ಆಯ್ಕೆಯಾಗಬೇಕು! ಆಗ ಜನರೂ ಅವರನ್ನು ಒಪ್ಪಿಕೊಳ್ಳುತ್ತಾರೆ’ ಎಂದು ಮೊದಲ ಗುದ್ದು ನೀಡಿದರು. ‘ಮನಮೋಹನ್ ಸಿಂಗ್ ಅವರು ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ. ಸೋನಿಯಾ ಗಾಂಧಿಯವರ ಅನುಮತಿಯಿಲ್ಲದೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ! ಸೋನಿಯಾ ಅಂಕಿತವಿಲ್ಲದೆ ಒಂದು ಕಡತವೂ ಮುಂದೆ ಸಾಗುವುದಿಲ್ಲ’ ಎಂದು ಟೀಕಾಪ್ರಹಾರ ಮಾಡಿದರು. ಇನ್ನೂ ಮುಂದುವರಿದು, ‘ಅಮೆರಿಕದಲ್ಲಿ ಡೆಮೋಕ್ರಾಟ್ ಹಾಗೂ ರಿಪಬ್ಲಿಕನ್ ಪಕ್ಷಗಳ ಅಧ್ಯಕ್ಷೀಯ ಅಭ್ಯರ್ಥಿಗಳು ಟೀವಿ ಮುಂದೆ ನೇರವಾಗಿ ಚರ್ಚಾಸಮರ ನಡೆಸುತ್ತಾರೆ. ಇಡೀ ದೇಶ ಅದನ್ನು ವೀಕ್ಷಿಸಿ, ಯಾರಿಗೆ ವೋಟು ಹಾಕಬೇಕೆಂದು ನಿರ್ಧರಿಸುತ್ತದೆ. ಮನಮೋಹನ್ ಸಿಂಗ್ ಅವರ ಜತೆ ನಾನೂ ನೇರ ಚರ್ಚೆಗೆ ಸಿದ್ಧನಿದ್ದೇನೆ’ ಎಂದರು.

ಅದು ಖಂಡಿತ ಒಳ್ಳೆಯ ಸವಾಲೇ ಆಗಿತ್ತು.

ಮನಮೋಹನ್ ಸಿಂಗ್ ಅವರ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಆ ಸವಾಲನ್ನು ಸ್ವೀಕರಿಸಬೇಕಿತ್ತು ಹಾಗೂ ಸ್ವೀಕರಿಸುತ್ತಿದ್ದರು. ಆದರೆ ಒಬ್ಬ ಜವಾಬ್ದಾರಿಯುತ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರು ೧೫ ದಿನಗಳ ಕಾಲ ಮೌನಕ್ಕೆ ಶರಣುಹೋಗಿದ್ದೇಕೆ? ಪಕ್ಷದ ವಕ್ತಾರೆ ಜಯಂತಿ ನಟರಾಜನ್ ಅವರ ಮೂಲಕ  “ಈ ಆಡ್ವಾಣಿಗೆ ಅಮೆರಿಕದ ಬಗ್ಗೆ ವ್ಯಾಮೋಹ ಹೆಚ್ಚು” ಎಂದು ಪ್ರತಿಕ್ರಿಯೆ ಕೊಡಿಸಿ, Spit and run ಥರಾ ಓಡಿ ಹೋಗಿದ್ದು ಎಷ್ಟು ಸರಿ? ಅಲ್ಪಸಂಖ್ಯಾತರ ವಿರುದ್ಧ ದ್ವೇಷಕಾರುವ ಭಾಷಣ ಮಾಡಿದ್ದಾರೆಂದು ವರುಣ್ ಗಾಂಧಿಯವರನ್ನು ಟೀಕಿಸಿದ ಮನಮೋಹನ್ ಸಿಂಗ್, “ಆಡ್ವಾಣಿಯವರ ಏಕೈಕ ಸಾಧನೆಯೆಂದರೆ ಬಾಬರಿ ಮಸೀದಿ ನೆಲಸಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದು” ಎಂದಿದ್ದೂ ಕೋಮುವಾದಿ ಹೇಳಿಕೆಯೇ ಆಗಿರಲಿಲ್ಲವೆ? ಅಷ್ಟಕ್ಕೂ, 17 ವರ್ಷಗಳ ಹಿಂದೆ ನಡೆದ ಬಾಬರಿ ಮಸೀದಿ ದ್ವಂಸ ಪ್ರಕರಣವನ್ನು ಕೆದಕಿದ್ದು, ಮುಸ್ಲಿಮರಲ್ಲಿ ಬಿಜೆಪಿ ವಿರುದ್ಧ ದ್ವೇಷಭಾವನೆ ಹುಟ್ಟುಹಾಕುವ ಹಾಗೂ ಮುಸ್ಲಿಮರನ್ನು ತಮ್ಮತ್ತ ಸೆಳೆದುಕೊಳ್ಳುವ ಒಳಉದ್ದೇಶದಿಂದಲೇ ಅಲ್ಲವೆ? ಅಂತಹ ಗುರುತರ ಆರೋಪ ಮತ್ತು ಟೀಕೆಯನ್ನು ಮಾಡಿದ ಮೇಲೆ ಮನಮೋಹನ್ ಸಿಂಗ್ ಅವರು ಮುಂದಿನ ಹಂತದ ಆರೋಪ-ಪ್ರತ್ಯಾರೋಪ ಅಥವಾ ಚರ್ಚೆಗೆ ಸಿದ್ಧವಾಗಿರ ಬೇಕಿತ್ತಲ್ಲವೆ?

ಆದರೆ ಚರ್ಚೆಯಿಂದ ಪಲಾಯನ ಮಾಡಿದ್ದೇಕೆ?

ಆಕ್ಸ್‌ಫರ್ಡ್‌ನಲ್ಲಿ ಓದಿದ, ರಿಸರ್ವ್ ಬ್ಯಾಂಕನ್ನು ಮುನ್ನಡೆಸಿದ, ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಮಹಾನ್ ವ್ಯಕ್ತಿಯಲ್ಲೇ ‘Courage of conviction” ಇಲ್ಲ ಅಂದರೆ ಹೇಗೆ ಸ್ವಾಮಿ? ಇಷ್ಟೆಲ್ಲಾ ಅನುಭವ ಹೊಂದಿರುವ ನಿಮ್ಮನ್ನು ಸಮರ್ಥಿಸಿಕೊಳ್ಳಲು ಆ ರಾಜ್‌ದೀಪ್ ಸರ್ದೇಸಾಯಿ, ಅವರ ಪತ್ನಿ ಸಾಗರಿಕಾ ಘೋಷ್, ನಿಖಿಲ್ ವಾಗ್ಲೆ, ಬರ್ಖಾ ದತ್ ಏಕೆ ಬೇಕು ಸಾರ್?! ಮೊನ್ನೆ ಲಂಡನ್‌ನಲ್ಲಿ ನಡೆದ ಜಿ-೨೦ ರಾಷ್ಟ್ರಗಳ ಸಭೆಯ ವೇಳೆ ತನ್ನ ಮಗಳಿಗಾಗಿ ಆಟೋಗ್ರಾಫ್ ಕೊಡಿ ಎಂದು ಬರಾಕ್ ಒಬಾಮ ಅವರನ್ನು ಕೇಳಿಕೊಂಡ ಮನಮೋಹನ್ ಸಿಂಗ್, ‘ನೀವು ಭಾರತದಲ್ಲಿರುವ ಯುವಜನತೆಯಲ್ಲೂ ಅಪಾರ ಜನಪ್ರಿಯತೆ ಹೊಂದಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬರಾಕ್ ಒಬಾಮ ಭಾರತದ ಯುವಜನತೆಯ ಮನಗೆದ್ದಿದ್ದು ಅವರ ಮಾತಿನ ಮೋಡಿಯಿಂದಲೇ ಅಲ್ಲವೆ? ಆಡಳಿತದ ಯಾವ ಅನುಭವವೂ ಇಲ್ಲದ ಬರಾಕ್ ಒಬಾಮ ಎಂಬ ಮೊದಲ ಬಾರಿಯ ಸೆನೆಟರ್. ಹಾಗಿದ್ದರೂ ವಿಯೆಟ್ನಾಂ ಯುದ್ಧದ ಹೀರೋ, ರಿಪಬ್ಲಿಕನ್ ಪಕ್ಷದ ಹಿರಿಯ ನೇತಾರ, ನಾಲ್ಕು ಬಾರಿ ಸೆನೆಟರ್ ಆಗಿದ್ದ ಅನುಭವಿ ಜಾನ್ ಮೆಕೇನ್ ಅವರನ್ನೇ ಸೋಲಿಸುತ್ತಾರೆಂದರೆ ಇನ್ನು ಐದು ವರ್ಷ ಪ್ರಧಾನಿಯಾಗಿರುವ ಹಾಗೂ ಅನುಭವ ಶ್ರೀಮಂತಿಕೆ ಹೊಂದಿರುವ ನೀವೇ ಪುಕ್ಕಲರಂತೆ ಓಡಿ ಹೋದರೆ ಹೇಗೆ ಸ್ವಾಮಿ?

ಆಡ್ವಾಣಿಯವರ ಬಗ್ಗೆ ಸಿಟ್ಟು ಮಾಡಿಕೊಳ್ಳಲು, ಅವರೇನು ಇದೇ ಮೊದಲ ಬಾರಿಗೆ ನಿಮ್ಮನ್ನು ಈ ದೇಶ ಕಂಡ ಅತ್ಯಂತ ‘ದುರ್ಬಲ ಪ್ರಧಾನಿ’ ಎಂದು ಹೇಳಿದ್ದಲ್ಲ. ಕಳೆದ ಮೂರು ವರ್ಷಗಳಿಂದಲೂ ಹಾಗೆ ಹೇಳುತ್ತಾ ಬಂದಿದ್ದಾರೆ. ಅಂತಹ ಮಾತನ್ನು ಇದುವರೆಗೂ ನೀವು ನಿರ್ಲಕ್ಷಿಸುತ್ತಾ ಬಂದಿದ್ದೇನೋ ಸರಿ. ಆದರೆ ನಿಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ ಕೂಡಲೇ ಕೋಪ ನೆತ್ತಿಗೇರಿಸಿಕೊಂಡು ಪ್ರತಿದಾಳಿ ಮಾಡಿದ ಮೇಲೆ ಮುಂದಿನ ಸುತ್ತಿಗೂ ತಯಾರಾಗಬೇಕಿತ್ತಲ್ಲವೆ? ಆದರೆ ಪಲಾಯನವಾದ ವೇಕೆ? ಭಯ ಕಾಡುತ್ತಿದೆಯೇ? ಅಮೆರಿಕದ ಜತೆಗಿನ ಅಣುಸಹಕಾರ ಒಪ್ಪಂದ ವಿಷಯದಲ್ಲಿ ನೀವು ತೋರಿದ ಧೈರ್ಯ, ದೃಢ ನಿಲುವು ಎಲ್ಲವೂ ಮೆಚ್ಚುವಂಥವುಗಳೇ ಆಗಿದ್ದವು. ಆದರೆ ಅವುಗಳನ್ನು ಹೊರತುಪಡಿಸಿ ಹೇಳಿಕೊಳ್ಳಲು ನಿಮ್ಮ ಬಳಿ ಯಾವ ಸಾಧನೆಗಳಿವೆ?

ನೀವೇ ಹೇಳಿ?

ಕಳೆದ ೫ ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ಮಾಡಿರುವ ಸಾಧನೆಯಾದರೂ ಏನು? ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಸವಲತ್ತಿನ ಬಗ್ಗೆ ಮಾತನಾಡುತ್ತೀರಲ್ಲಾ, ಈ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ ಜನರ ಬಾಯನ್ನೇ ಮುಚ್ಚಲು ಪ್ರಯತ್ನಿಸಿದವರಾರು? ಅದು ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳುವ ಯತ್ನವಾಗಿರಲಿಲ್ಲವೆ? ಗುಜರಾತ್ ಹಿಂಸಾಚಾರ ತಪ್ಪು ಎನ್ನುವುದಾದರೆ ೧೯೮೪ರ ಸಿಖ್ ಹತ್ಯಾಕಾಂಡ ಸರಿಯೆ? ಗುಜರಾತ್ ಹಿಂಸಾಚಾರಕ್ಕಾಗಿ ಬಿಜೆಪಿ ದೇಶದ ಕ್ಷಮೆಯಾಚಿಸಿಲ್ಲ ಎಂದು ದೂರುತ್ತೀರಲ್ಲಾ, ಸಿಖ್ ಹತ್ಯಾಕಾಂಡಕ್ಕಾಗಿ ನೀವು ದೇಶದ ಕ್ಷಮೆಯಾಚಿಸಲು 20 ವರ್ಷಗಳನ್ನು ತೆಗೆದುಕೊಂಡಿದ್ದೇಕೆ? ಒಂದು ವೇಳೆ ಆಡ್ವಾಣಿಯವರು ಬಾಬರಿ ಮಸೀದಿ ನೆಲಸಮಕ್ಕೆ ಕಾರಣ ಎನ್ನುವುದಾದರೆ, ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ (ನೀವೂ ಮಂತ್ರಿಯಾಗಿದ್ದ) ಕಾಂಗ್ರೆಸ್ ಸರಕಾರ ಮೂಕಪ್ರೇಕ್ಷಕನಾಗಿ ಕುಳಿತಿದ್ದೇಕೆ? ಧರ್ಮನಿರಪೇಕ್ಷತೆಯ ಬಗ್ಗೆ ಭಾಷಣ ನೀಡುತ್ತೀರಲ್ಲಾ, ದೇಶಾದ್ಯಂತ ಸಮಾನ ನಾಗರೀಕ ಸಂಹಿತೆಯನ್ನು ಜಾರಿಗೆ ತರಲು ಏಕೆ ವಿರೋಧಿಸುತ್ತೀರಿ? ಬಿಜೆಪಿಯನ್ನು ಕೋಮುವಾದಿ ಎನ್ನುವುದಾದರೆ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯನ್ನು ಪ್ರತಿಪಾದಿಸಿದ ಮುಸ್ಲಿಂ ಲೀಗ್‌ನ ಹಾಲಿ ರೂಪವಾದ ಇಂಡಿಯನ್ ಯುನಿಯನ್ ಆಫ್ ಮುಸ್ಲಿಂ ಲೀಗ್ ಜತೆ ನೀವು ಕೇರಳದಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಿರುವುದೇಕೆ? ವರುಣ್ ಗಾಂಧಿ ಮಾತನಾಡಿದ ಕೂಡಲೇ ಜೈಲಿಗೆ ತಳ್ಳಬೇಕು ಎನ್ನುತ್ತೀರಲ್ಲಾ ಮಹಾರಾಷ್ಟ್ರದಲ್ಲಿ ಪ್ರಾದೇಶಿಕತೆ ಮತ್ತು ಭಾಷೆ ಹೆಸರಿನಲ್ಲಿ ರಾಜ್‌ಠಾಕ್ರೆ ಮಾಡಿದ್ದೇನು? ಅವರನ್ನೇಕೆ ನಿಮ್ಮ ಕಾಂಗ್ರೆಸ್ ಸರಕಾರ ಬಂಧಿಸಿ ಜೈಲಿಗೆ ತಳ್ಳಿಲ್ಲ? ರಾಜ್ ಠಾಕ್ರೆಯನ್ನು ಪೋಷಿಸಿದರೆ ಭಾಳಾ ಠಾಕ್ರೆಯವರನ್ನು ಹತ್ತಿಕ್ಕಬಹುದು ಎಂಬ ಲೆಕ್ಕಾಚಾರವೇ? ವಿದೇಶಿಯರು ಟಿಬೆಟ್ ಪರವಾಗಿ ಭಾರತದಲ್ಲಿ ಪ್ರತಿಭಟನೆ ನಡೆಸುವ ವಿರುದ್ಧ ನಿರ್ಬಂಧ ಹೇರಿದ್ದೀರಲ್ಲಾ, ವಿದೇಶಿ ಮಿಷನರಿಗಳು ಭಾರತದಲ್ಲಿ ಮತಪ್ರಚಾರ ಮಾಡಲು ಅವಕಾಶ ಕೊಟ್ಟಿರುವುದೇಕೆ? ನಿಮ್ಮ ಧರ್ಮನಿರಪೇಕ್ಷತೆ ಎಂಥದ್ದು ಎಂಬುದು ಇದರಿಂದ ಗೊತ್ತಾಗುವುದಿಲ್ಲವೆ?

ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ಮಾಡಿದ್ದು ಹಾಗೂ ಮಾಡುತ್ತಿರುವುದು ಖಂಡಿತ ರಾಜಕಾರಣವನ್ನೇ.

ಆದರೆ ನೀವು ಮಾಡುತ್ತಿರುವುದೇನು? ರಾಮಸೇತು ವಿವಾದ ವನ್ನು ಸೂಕ್ತ ರೀತಿಯಲ್ಲಿ ಬಗೆಹರಿಸುವ ಬದಲು ಸುಪ್ರೀಂಕೋರ್ಟ್‌ನಲ್ಲಿ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿತಲ್ಲಾ ನಿಮ್ಮ ಸರಕಾರ, ಕ್ರೈಸ್ತರ ಮೂಲದೈವ ಲಾರ್ಡ್ ಅಬ್ರಹಾಂನ ಅಸ್ತಿತ್ವವನ್ನು ಪ್ರಶ್ನಿಸುವ ತಾಕತ್ತು ನಿಮಗಿದೆಯೇ? ರಾಮಸೇತುವನ್ನು ‘ಅಡಮ್ಸ್ ಬ್ರಿಜ್’ ಎಂದು ಉಲ್ಲೇಖಿಸುತ್ತೀರಲ್ಲಾ ಯಾವನು ಆ ಅಡಮ್ಸ್? ನೀವು ಮಾಡುತ್ತಿರುವುದು ವಿಭಜಕ ರಾಜಕಾರಣ ವನ್ನಲ್ಲವೆ? ಮನಮೋಹನ್ ಸಿಂಗ್ ಅವರೇ, ಆರ್ಥಿಕ ವಿಚಾರದಲ್ಲಿ ನೀವು ಖಂಡಿತ ಬುದ್ಧಿವಂತರಿರಬಹುದು, ಆದರೆ ಅಮರನಾಥ ಸಂಘರ್ಷದ ವೇಳೆ, ‘ಹೊಸ ದಿಲ್ಲಿಗಿಂತ ಮುಜಫ್ಫರಾಬಾದೇ(ಪಾಕಿಸ್ತಾನ) ನಮಗೆ ಹತ್ತಿರ’ ಎಂದ ಮೆಹಬೂಬಾ ಮುಫ್ತಿಗೆ ಒಂದು ಸಣ್ಣ ಎಚ್ಚರಿಕೆಯನ್ನೂ ಕೊಡದ ನೀವು ದುರ್ಬಲ ಪ್ರಧಾನಿಯಲ್ಲದೆ ಪ್ರಬಲರೇನು? ಆಕೆ ಆಡಿದ್ದು ದೇಶ ತುಂಡರಿಸುವ ಮಾತನ್ನೇ ಅಲ್ಲವೆ? ಒಂದು ಹಾಗೂ ಎರಡು ರೂಪಾಯಿ ನಾಣ್ಯದ ಮೇಲೆ ಕ್ರಾಸ್ ಅಚ್ಚುಹಾಕಿಸಿದ್ದು ಯಾವ ಸೀಮೆ ಜಾತ್ಯತೀತವಾದ? ನೀವೇ ಉತ್ತರಿಸಿ, ದೇಶವನ್ನು ಮುನ್ನಡೆಸುವುದು ಕಷ್ಟವೋ ಅಥವಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ  ಗೆಲ್ಲುವುದು ಕಷ್ಟವೋ? ಒಬ್ಬ ಅನಕ್ಷರಸ್ಥನೂ ಚುನಾವಣೆಯಲ್ಲಿ ಗೆಲ್ಲುವುದೇ ಸುಲಭ ಎಂದು ಹೇಳುತ್ತಾನೆ. ಆದರೆ ದೇಶದಲ್ಲೇ ಅತ್ಯಂತ ಜನಪ್ರಿಯ ವ್ಯಕ್ತಿ ನೀವು ಎನ್ನುವುದಾದರೆ, ನಿಮ್ಮ ಪ್ರಾಬಲ್ಯವೇನೆಂಬುದನ್ನು ನಿಮ್ಮ ಸರಕಾರದ ಸಾಧನೆಗಳೇ ಹೇಳುವುದಾದರೆ ಏಕೆ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ? ರಾಜ್ಯಸಭೆಯೆಂಬ ಹಿಂಬಾಗಿಲೇ ಏಕೆ ಬೇಕು? ದೇಶದ ಮತದಾರರಲ್ಲಿ ಹೆಚ್ಚಿನವರು ದಡ್ಡರು, ಅನಕ್ಷರಸ್ಥರು, ಜಾತಿ ನೋಡಿ ವೋಟು ಹಾಕುವವರು ಎಂದೇ ಇಟ್ಟುಕೊಂಡರೂ ಯಾವ ಒಂದು ಜಾತಿಯ ಹಿಡಿತದಲ್ಲೂ ಇರದ ದಕ್ಷಿಣ ದಿಲ್ಲಿಯಂತಹ ದೇಶದ ಅತ್ಯಂತ ಸುಶಿಕ್ಷಿತ ಕ್ಷೇತ್ರದಲ್ಲಿ  ನೀವು ೧೯೯೯ರಲ್ಲಿ ಸೋತಿದ್ದೇಕೆ?

ಸ್ವಿಸ್ ಬ್ಯಾಂಕ್‌ನಲ್ಲಿ ೨೫ ಲಕ್ಷ ಕೋಟಿ ರೂ. ಕಳ್ಳ ಹಣವಿದೆ ಎಂದು ಆಡ್ವಾಣಿಯವರು ಗಂಭೀರ ಆರೋಪ ಮಾಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಆ ಹಣವನ್ನು ವಾಪಸ್ ತರುವುದಾಗಿ ವಾಗ್ದಾನ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ನಿಮ್ಮ ಪಕ್ಷದ ವಕ್ತಾರ ಜೈರಾಮ್ ರಮೇಶ್ ಆಡುತ್ತಿರುವ ಮಾತುಗಳೇನು? ‘ಆಡ್ವಾಣಿ ಸುಳ್ಳು ಹೇಳುತ್ತಿದ್ದಾರೆ, ಇಂಟರ್‌ನೆಟ್ ಹಾಗೂ ಅಲ್ಲಿ ಇಲ್ಲಿ ತಡಕಾಡಿ ಹುಸಿ ಅಂಕಿ-ಆಂಶ ನೀಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗೇಕೆ ಹಣವನ್ನು ವಾಪಸ್ ತರಲಿಲ್ಲ?’ ಎಂದು ಪ್ರಶ್ನಿಸುತ್ತಿರುವ ಜೈರಾಮ್ ರಮೇಶ್ ಅವರ ಮಾನಸಿಕ ಆರೋಗ್ಯ ಕೆಟ್ಟಿದೆ ಎಂದು ನಿಮಗನಿಸುತ್ತಿಲ್ಲವೆ? ಒಂದು ವೇಳೆ, ಆಡ್ವಾಣಿಯವರು ಸುಳ್ಳು ಹೇಳುತ್ತಿದ್ದಾರೆ ಎಂದರೆ ಸತ್ಯ ಯಾವುದು? ಅವರ ಅಂಕಿ-ಅಂಶ ತಪ್ಪಿರಬಹುದು. ಆದರೆ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಕಳ್ಳಸಂಪತ್ತು ಇರುವುದು ಸುಳ್ಳಾ? ಎಷ್ಟಾದರೂ ಇರಲಿ, ವಾಪಸ್ ತರುತ್ತೇವೆ ಎಂದು ನೀವೇ ಏಕೆ ಹೇಳುವುದಿಲ್ಲ? ಬಿಜೆಪಿಯವರು ಅಧಿಕಾರದಲ್ಲಿದ್ದಾಗೇಕೆ ಹಣವನ್ನು ವಾಪಸ್ ತರಲಿಲ್ಲ ಎಂದು ಪ್ರಶ್ನಿಸುತ್ತಿದ್ದೀರಲ್ಲಾ, ತನ್ನಲ್ಲಿ ಖಾತೆ ಹೊಂದಿದವರ ಹೆಸರುಗಳನ್ನು ಬಹಿರಂಗಪಡಿಸಲು ಸ್ವಿಸ್ ಬ್ಯಾಂಕ್ ಒಪ್ಪಿಕೊಂಡು ೬ ತಿಂಗಳೂ ಆಗಿಲ್ಲ. ಅದೂ ಅಮೆರಿಕದ ತೀವ್ರ ಒತ್ತಡದ ಮೇರೆಗೆ ಮಾಹಿತಿ ನೀಡಲು ಒಪ್ಪಿಕೊಂಡಿದೆಯಷ್ಟೇ. ಜತೆಗೆ ಒಂದು ದೇಶದ ಹಾಲಿ ಸರಕಾರ ಔಪಚಾರಿಕವಾಗಿ ಮನವಿ ಸಲ್ಲಿಸಿದರೆ ಮಾತ್ರ ಮಾಹಿತಿ ನೀಡುತ್ತದೆ. ಈಗ ಅಧಿಕಾರದಲ್ಲಿರುವುದು ಯುಪಿಎನೋ, ಎನ್‌ಡಿಎಯೋ?

ಬಹಿರಂಗ ಚರ್ಚೆಗೆ ಬಂದರೆ ಈ ಮೇಲಿನ ವಿಚಾರಗಳೆಲ್ಲ ಬಹಿರಂಗವಾಗುತ್ತವೆ, ನಿಮ್ಮ ಬಣ್ಣ ಬಯಲಾಗುತ್ತದೆ ಎಂಬ ಭಯ ಕಾಡುತ್ತಿದೆಯೇ ಮನಮೋಹನ್ ಸಿಂಗ್ ಅವರೇ?

ಅಂದಮಾತ್ರಕ್ಕೆ ಆಡ್ವಾಣಿಯವರನ್ನೇನು ಹೊಗಳುತ್ತಿಲ್ಲ.  ಒಬ್ಬ ಗೃಹ ಸಚಿವರಾಗಿ ಆಡ್ವಾಣಿಯವರು ಹೇಳಿಕೊಳ್ಳುವ ಯಾವ ಸಾಧನೆಯನ್ನೂ ಮಾಡಿಲ್ಲ. ಒಳ್ಳೆಯದೆಲ್ಲ ತನ್ನದು, ಕೆಟ್ಟದ್ದೆಲ್ಲಾ ವಾಜಪೇಯಿಯವರದ್ದು ಎನ್ನುವ ಆಡ್ವಾಣಿಯವರು ಕಿಲಾಡಿ ಅಸಾಮಿಯೇ ಸರಿ. ಒಬ್ಬ ರಾಜಕಾರಣಿಯಲ್ಲಿರುವ ಎಲ್ಲ ಗುಣ-ದೋಷಗಳೂ ಅವರಲ್ಲಿವೆ. ಹಾಗಂತ ಅವರನ್ನು ಪ್ರಧಾನಿ ಹುದ್ದೆಗೆ ಅನರ್ಹ ಎಂದು ಹೇಳಲು ಸಾಧ್ಯವಿಲ್ಲ. ಅವರೊಬ್ಬ ಮಹಾನ್ ಸಂಘಟಕ, Strategist. ನೀವು ಆಕ್ಸ್‌ಫರ್ಡ್‌ನಲ್ಲಿ ಓದಿದ್ದರೂ ಆಡ್ವಾಣಿಯವರು ನಿಮಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲರು. Pseudo-secularism, cultural nationalism, Hindutva, minorityism ಮುಂತಾದ ಪದ, ಪದಗುಚ್ಛಗಳನ್ನು ಸೃಷ್ಟಿಸಿದ್ದು, ಆ ಮೂಲಕ ತಮ್ಮ ರಾಷ್ಟ್ರವಾದವನ್ನು ಸಮರ್ಥಿಸಿಕೊಂಡಿದ್ದು ಸಾಮಾನ್ಯ ಮಾತಲ್ಲ. 1984ರ ಚುನಾವಣೆಯಲ್ಲಿ 2 ಸ್ಥಾನಗಳಿಗಿಳಿದಿದ್ದ ಬಿಜೆಪಿಯನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅವರೇ. ಅಟಲ್ ಪ್ರಧಾನಿಯಾಗಿದ್ದರ ಹಿಂದೆ ಆಡ್ವಾಣಿಯವರ ಪರಿಶ್ರಮವಿದೆ. ಈಗ ತಾವೇ ಪ್ರಧಾನಿಯಾಗಬೇಕೆಂದು ಅವರು ಆಸೆ ಪಡುತ್ತಿರುವುದರಲ್ಲಿ ಯಾವ ತಪ್ಪೂ ಇಲ್ಲ.

ನಿಮ್ಮಿಬ್ಬರನ್ನೂ ತೆಗಳುವ ಉದ್ದೇಶ ಇಲ್ಲಿಲ್ಲ. ಆದರೆ ನೀವಿ ಬ್ಬರೂ ಚರ್ಚೆಗೆ ಕುಳಿತಿದ್ದರೆ ಅದರಿಂದ ಒಬ್ಬ ಸಾಮಾನ್ಯ ಮತದಾರನಿಗೆ ಅನುಕೂಲವಾಗುತ್ತಿತ್ತು. ಅಷ್ಟಕ್ಕೂ ಪ್ರಜಾ ಪ್ರಭುತ್ವ ಬೆಳೆಯಬೇಕಾದರೆ ಆಗಾಗ್ಗೆ ಆರೋಗ್ಯಕರ ಚರ್ಚೆಗಳೂ ನಡೆಯಬೇಕು. ಅದಕ್ಕೆ ಚುನಾವಣೆಗಿಂತ ಒಳ್ಳೆಯ ಸಂದರ್ಭ ಯಾವುದಿದೆ? ಹಾಗಿರುವಾಗ ಒಂದು ಘನ ಚರ್ಚೆಗೆ ನಾಂದಿಯಾಗುವ ಮೂಲಕ ಕೈ ಕಡಿ, ಕತ್ತು ಕಡಿ, ರೋಲರ್ ಹತ್ತಿಸುತ್ತೇನೆ ಎಂಬ ಚಿಲ್ಲರೆ ರಾಜಕೀಯದಲ್ಲಿ ತೊಡಗಿರುವವರಿಗೆ ನಿಮ್ಮಂಥ ಸಭ್ಯರಾಜಕಾರಣಿಗಳು ಮೇಲ್ಪಂಕ್ತಿ ಹಾಕಿಕೊಡಬಹುದಿತ್ತು. ಇಂಥದ್ದೊಂದು ಚರ್ಚೆ ನಡೆದಿದ್ದರೆ ಜಾತಿ ಹಾಗೂ ಇನ್ನಿತರ ಲೆಕ್ಕಾಚಾರದ ಮೇಲೆ ಪ್ರಧಾನಿ ಸ್ಥಾನಕ್ಕೇರಲು ಹವಣಿಸುತ್ತಿರುವವರಿಗೂ ಒಂದು ಪಾಠವಾಗುತ್ತಿತ್ತು. ಲಲ್ಲು, ಉಲ್ಲು, ಪಾಸ್ವಾನ್, ಪವಾರ್ ಹಾಗೂ ಸ್ವತಂತ್ರವಾಗಿ ನಾಲ್ಕು ಸಾಲು ಹೇಳಲು ಬಾರದ ಮಾಯಾವತಿಯವರಂತಹವರೂ ಪ್ರಧಾನಿ ಸ್ಥಾನಕ್ಕಾಗಿ ಜೊಲ್ಲು ಸುರಿಸುವ ಮೊದಲು ಬೆವರುಹರಿಸಬೇಕಾಗಿ ಬರುತ್ತಿತ್ತು. ಇಂತಹ ಬಹಿರಂಗ ಚರ್ಚೆ ಅಧ್ಯಕ್ಷೀಯ ಪ್ರಜಾತಂತ್ರವಿರುವ ಅಮೆರಿಕ ಮಾತ್ರವಲ್ಲ,  ಪ್ರಧಾನಿ ಹುದ್ದೆ ಹೊಂದಿರುವ ಜಪಾನ್, ಬ್ರಿಟನ್‌ಗಳಲ್ಲೂ ನಡೆಯುತ್ತವೆ. ನಾವೂ ಬರುತ್ತೇವೆ ಎನ್ನುತ್ತಿರುವ ಕಮ್ಮಿನಿಸ್ಟರು ಹಾಗೂ ಇತರರ ಬಗ್ಗೆ ತಲೆಕೆಡಿಸಿಕೊಳ್ಳದೆ ನೀವಿಬ್ಬರು ಚರ್ಚೆಗೆ ಕುಳಿತುಕೊಳ್ಳಬಹುದಿತ್ತು. ಖಂಡಿತ, ದೇಶದಲ್ಲಿರುವುದು ಎನ್‌ಡಿಎ-ಯುಪಿಎಗಳೆರಡೇ ಅಲ್ಲ ಅನ್ನುವುದು ಪೊಳ್ಳುವಾದವಷ್ಟೇ. ಯಾವುದೇ ಪಕ್ಷವನ್ನು ರಾಷ್ಟ್ರೀಯ ಪಕ್ಷವೆನ್ನಬೇಕಾದರೆ ಅದು ರಾಷ್ಟ್ರದಲ್ಲಿ ಚಲಾವಣೆಯಾಗುವ ಮತಗಳಲ್ಲಿ ಒಟ್ಟು ಶೇ. ೬ರಷ್ಟನ್ನು ಪಡೆದುಕೊಂಡಿರಬೇಕು. ಅಂತಹ ಅರ್ಹತೆ ಕಾಂಗ್ರೆಸ್-ಬಿಜೆಪಿ ಬಿಟ್ಟರೆ ಬೇರಾವ ಪಕ್ಷಗಳಿಗೂ ಇಲ್ಲ.

ಹಾಗಿದ್ದರೂ ನೀವು ಮಾಡುತ್ತಿರುವುದೇನು ಮನಮೋಹನ್ ಸಿಂಗ್?

ಆಡ್ವಾಣಿಯವರು ನಿಮಗೆ ಸವಾಲೆಸೆದು 15 ದಿನಗಳು ಕಳೆದ ನಂತರ ಬಾಯ್ಬಿಟ್ಟಿದ್ದೀರಲ್ಲಾ, ಒಂದು ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟು ಸಮಯ ಬೇಕಾ? ಅದೂ ನೀವು ಕೊಟ್ಟಿರುವ ಪ್ರತಿಕ್ರಿಯೆಯಾದರೂ  ಏನು? “ಆಡ್ವಾಣಿಯವರಿಗೆ   ಪರ್ಯಾಯ ಪ್ರಧಾನಿಯೆಂಬ ಸ್ಥಾನ ನೀಡಲು ಇಷ್ಟವಿಲ್ಲ ದಿರುವುದರಿಂದ  ಟಿವಿ ಮುಂದೆ ನೇರ ಚರ್ಚೆಗೆ ಸಿದ್ಧನಿಲ್ಲ” ಎಂದಿದ್ದೀರಲ್ಲಾ ನಿಮ್ಮಲ್ಲಿ ಕನಿಷ್ಠ ಪ್ರಾಮಾಣಿಕತೆ, ಸೌಜನ್ಯಗಳಾದರೂ ಇವೆಯೇ? ಆಡ್ವಾಣಿಯವರು ಪರ್ಯಾಯ ಪ್ರಧಾನಿಯೋ, ಅಲ್ಲವೋ ಎಂಬುದನ್ನು ನಿರ್ಧರಿಸಬೇಕಾಗಿರುವವರು ಈ ದೇಶದ ಮತದಾರರೋ ಅಥವಾ ನೀವೋ? ಅಥವಾ ನಿಮ್ಮನ್ನು ಪ್ರಧಾನಿ ಸ್ಥಾನಕ್ಕೆ ಕುಳ್ಳಿರಿಸಿರುವ ಸೋನಿಯಾ ಗಾಂಧಿಯವರೋ? ಇನ್ನು Decency, Morality  ಬಗ್ಗೆ ಅದ್ಯಾವ ಮುಖ ಇಟ್ಟುಕೊಂಡು ಮಾತನಾಡುತ್ತಿದ್ದೀರಿ ಸಾರ್? ಸರಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಕಂಬಿ ಎಣಿಸುತ್ತಿದ್ದ ಆರ್‌ಜೆಡಿ ಸಂಸದ ಪಪ್ಪು ಯಾದವ್ ಹಾಗೂ ಶಹಾಬುದ್ದೀನ್ ಅವರನ್ನು ಜೈಲಿನಿಂದ ಸಂಸತ್ತಿಗೆ ಕರೆತರುವಾಗ ನಿಮ್ಮ ನೈತಿಕತೆ ಎಲ್ಲಿಗೆ ಹೋಗಿತ್ತು? ಕಾಸು ಕೊಟ್ಟು ವೋಟು ಖರೀದಿಸುವಾಗ ಎಲ್ಲಿ ನಿದ್ರಿಸುತ್ತಿತ್ತು ನಿಮ್ಮ ನೈತಿಕ ಪ್ರe?

ಚರ್ಚೆಗೆ ಬರಲು ತಾಕತ್ತಿಲ್ಲದಿದ್ದರೆ ಒಪ್ಪಿಕೊಳ್ಳಿ, ನೆಪ ಹೇಳಬೇಡಿ.

ಡಿಸೆಂಬರ್ 7 ಬಂದು ಹೋಯಿತು, ಅಂದೇ ಅವರ ನೆನಪಾಗಿತ್ತು, ಆದರೆ…

(Photo: Master Hirannaiah, Beechi and Uday Shankar)

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.

ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿ ವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ” ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.

ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ  ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾ ಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.

ಮರುದಿನ ರೈಲು ಪ್ರಯಾಣವಿತ್ತು.

ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.

ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!

ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ” ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ.

ಹಾಗಂತ ಹೇಳಿದರೆ ಖಂಡಿತ ಅತಿಶಯೋಕ್ತಿಯಾಗದು.

ನಿಮಗೆ ಆರ್ಟ್ ಬುಕ್‌ವಾಲ್ಡ್ ಗೊತ್ತಿರಬಹುದು. ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆದಾತ. ಒಮ್ಮೆ ಅಮೆರಿಕದ ಅಧ್ಯಕ್ಷರು ಬುಕ್‌ವಾಲ್ಡ್ ನನ್ನು ಔತಣಕ್ಕೆ ಕರೆದರು. ಪತ್ನಿ ಸಮೇತ ಬುಕ್‌ವಾಲ್ಡ್ ಹೋದ. ಆ ವೇಳೆಗಾಗಲೇ ಬುಕ್‌ವಾಲ್ಡ್ ಬುದ್ಧಿಗೆ ಸ್ವಲ್ಪ ಮಂಕು ಕವಿದು ಅರುಳೋ-ಮರುಳೋ ಎಂಬಂತಾಗಿತ್ತು. ಇತ್ತ ಬುಕ್‌ವಾಲ್ಡ್ ಪತ್ನಿ ಮಹಾ ಕುಳ್ಳಿ. ಊಟಕ್ಕೆ ಕುಳಿತಿದ್ದಾಗ ಬುಕ್‌ವಾಲ್ಡ್ ತನ್ನ ಬಗ್ಗೆಯೇ ಒಂದು ಜೋಕು ಹೇಳಿದ- I am mentally challenged and she is vertically challenged!!

ಅಂಕಣದಲ್ಲಿ ಬುಕ್‌ವಾಲ್ಡ್ ರಾಜಕೀಯ ವಿಡಂಬನೆ ಮಾಡುತ್ತಿದ್ದರು. ಆದರೆ ಬೀಚಿಯವರು ಅತ್ಯಂತ ಗಂಭೀರ ಸಮಸ್ಯೆಗಳ ಬಗ್ಗೆಯೂ ಮಾರ್ಮಿಕವಾಗಿ ಹಾಸ್ಯ ಮಾಡುತ್ತಿದ್ದರು.

ಒಮ್ಮೆ ಇಬ್ಬರು ವ್ಯಕ್ತಿಗಳು ಕುರಿಯೊಂದನ್ನು ಕಸಾಯಿ ಖಾನೆಗೆ ಎಳೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕ ಅಪ್ಪನನ್ನು ಕೇಳಿದ-ಕುರಿಯನ್ನು ಎಲ್ಲಿಗೆ ಎಳೆದೊಯ್ಯುತ್ತಿದ್ದಾರೆ?
ಅಪ್ಪ: ಕಸಾಯಿ ಖಾನೆಗೆ.
ಮಗ: ಸಧ್ಯಾ
ಅಪ್ಪ: ಏಕೆ ಹಾಗೆ ನಿಟ್ಟುಸಿರು ಬಿಡುತ್ತಿದ್ದೀಯಾ?
ಮಗ: ನನ್ನಂತೆಯೇ ಆ ಕುರಿಯನ್ನೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ನಾನಂದುಕೊಂಡಿದ್ದೆ!

ಆಗ ದೇಶಾದ್ಯಂತ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿತ್ತು. ಹಠ ಹಿಡಿದ ಮಕ್ಕಳನ್ನು ಹೊಡೆದು, ಬಡಿದಾದರೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದರು. ಅಂದರೆ ಕಡ್ಡಾಯ ಶಿಕ್ಷಣ ಜಾರಿಯ ಉದ್ದೇಶವೇನೋ ಒಳ್ಳೆಯದಿತ್ತು. ಮಾರ್ಗ ಸರಿಯಿರ ಲಿಲ್ಲ ಎಂಬುದನ್ನು ತಿಳಿಹಾಸ್ಯದೊಂದಿಗೆ ಹೇಳುವ ಜಾಣ್ಮೆ ಬೀಚಿ ಯವರಲ್ಲಿ ಮಾತ್ರ ಇತ್ತು. ಅವರ “ಬೆಳ್ಳಿ ತಿಂಮ ೧೦೮ ಹೇಳಿದ”, “ತಿಮ್ಮನ ತಲೆ”, “ಅಂದನಾ ತಿಮ್ಮ”- ಈ ಮೂರು ಪುಸ್ತಕಗಳೂ ನಿಮ್ಮನ್ನು ನಕ್ಕು ನಗಿಸಿದರೂ ಒಂದಕ್ಕಿಂತ ಒಂದು ಭಿನ್ನ.

ಭ್ರಾತೃಪ್ರೇಮ
ಪ್ರಾಣಿದಯೆಯ ಬಗ್ಗೆ ದೀರ್ಘ ಭಾಷಣ ಮಾಡಿದ ಆನಂತರ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು ತಿಂಮನ ಮಾಸ್ತರು. “ರಸ್ತೆಯಲ್ಲಿ ಹೋಗುವಾಗ ನಾನೊಬ್ಬ ತುಂಟ ಹುಡುಗನನ್ನು ನೋಡುತ್ತೇನೆ. ಯಾರ ಗೋಜಿಗೂ ಹೋಗದೆ ತಲೆಬಗ್ಗಿಸಿ ತನ್ನಷ್ಟಕ್ಕೆ ಹೋಗುತ್ತಿದ್ದ ಮೂಕಪ್ರಾಣಿ ಕತ್ತೆಯೊಂದನ್ನು ಹುಡುಗ ಹೊಡೆಯುತ್ತಿದ್ದಾನೆ. ಆಗ ನಾನು ಅವನಿಗೆ ಛೀ ಮಾಡಿ ಕಳಿಸಿ ಕತ್ತೆಯನ್ನು ಕಷ್ಟದಿಂದ ಪಾರುಮಾಡುತ್ತೇನೆ. ಈ ನನ್ನ ಕಾರ್ಯ ಏನನ್ನು ಸೂಚಿಸುತ್ತದೆ?”.
“ನಾನು ಹೇಳುತ್ತೇನೆ ಸಾರ್” ಎಂದು ಎದ್ದು ನಿಂತ ತಿಂಮ. ಕೂಡಲೇ ಉತ್ತರವನ್ನೂ ಹೇಳಿದ “ನಿಮ್ಮದು ಭ್ರಾತೃಪ್ರೇಮ ಸಾರ್!”

ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು, ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-“ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?”.
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
“ಹೌದು, ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ-ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!”

ಮಾತು ಕೇಳುವ ಹೆಂಡತಿ
“ತಿಂಮಾ?”
“ಏನು ಸ್ವಾಮಿ?”
“ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ, ನಿನ್ನ ಹೆಂಡತಿ?”
“ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?”
“ಹೌದು, ಕೇಳುತ್ತಾಳೇನಯ್ಯಾ ನಿನ್ನ ಮಾತು?”
“ಏನು ಸ್ವಾಮಿ, ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಕೊಟ್ಟು ಕೇಳುತ್ತಾಳೆ ಗೊತ್ತೆ?!”

ತಂದೆಯ ಶತ್ರುವಿನಂತೆ ಮಗ
ಹೊಸದಾಗಿ ಸಾಹಿತಿಯಾಗಿದ್ದ ತನ್ನ ಗೆಳೆಯನನ್ನು ಕಾಣಲು ತಿಂಮ ಹೋಗಿದ್ದ. ಆದರೆ ಮಿತ್ರನ ಮನೆಯ ಸನ್ನಿವೇಶವನ್ನು ಕಂಡು ತಿಂಮ ಪೆಚ್ಚಾದ. ತನ್ನ ಕೊನೆಯ ಮಗನ ಮೇಲೆ ಗೆಳೆಯ ಸಿಟ್ಟಾಗಿದ್ದ, ಬೈಗುಳಗಳ ಸುರಿಮಳೆಗೈಯ್ಯುತ್ತಿದ್ದ. ಅದನ್ನು ಕಂಡ ತಿಂಮ, ‘ಏನು?’ ಎಂದು ಕೇಳುವ ಮೊದಲೇ ಸ್ನೇಹಿತ ಎಲ್ಲವನ್ನೂ ವಿವರಿಸಿದ.

“ನೋಡಯ್ಯಾ ಈ ಅವಿವೇಕಿಯನ್ನ. ಎಂತಹ ಕೆಲಸ ಮಾಡಿ ದ್ದಾನೆ? ರಾತ್ರಿಯೆಲ್ಲಾ ಕುಳಿತು ೬ ಕವನ ಬರೆದಿಟ್ಟಿದ್ದೆ. ಆ ಎಲ್ಲ ಕಾಗದಗಳನ್ನೂ ಒಯ್ದು ಒಲೆಯಲ್ಲಿ ಹಾಕಿದ್ದಾನೆ ಇವನು”.

ಆದರೆ ದುಃಖ ತೋಡಿಕೊಂಡ ಗೆಳೆಯನನ್ನು ಸಮಾಧಾನ ಮಾಡುವ ಬದಲು “ಶಬಾಸ್” ಎಂದು ಆತನ ಮಗನ ಬೆನ್ನು ತಟ್ಟಿದ ತಿಂಮ, ಸ್ನೇಹಿತನಿಗೆ ಹೇಳಿದ-“ನಿಮ್ಮ ವಂಶವೇ ಅಂಥದ್ದು. ತಂದೆ ಸಾಹಿತಿ, ಮಗ ವಿಮರ್ಶಕ! ಈ ವಯಸ್ಸಿಗೇ ನಿನ್ನ ಕೃತಿಗಳನ್ನು ಅರ್ಥಮಾಡಿಕೊಂಡಿದ್ದಾನೆ ನೋಡು!!”

ಇಂದು ಜೋಕುಗಳು ಬೇಕೆಂದರೆ ಗೂಗಲ್ ಡಾಟ್‌ಕಾಮ್ ಮೂಲಕ ತಡಕಾಡಬಹುದು, ‘ವಿಕಿಪೀಡಿಯಾ’ದ ಮೊರೆಹೋಗ ಬಹುದು, ಆನ್‌ಲೈನ್ ಜೋಕ್ಸ್‌ಗಾಗಿಯೇ “Funtoosh” ಇದೆ. ಇದು ಇಂಟರ್‌ನೆಟ್ ಯುಗ. ನಮ್ಮ ಕನ್ನಡದಲ್ಲಿ ಈಗ ಕಾಣ ಸಿಗುತ್ತಿರುವವರೂ ಇಂಟರ್‌ನೆಟ್ ಕವಿಗಳು, ಸಣ್ಣಕಥೆಗಾರರೇ. ಗದ್ಯದ ಒಂದು ಸಾಲು ಅಥವಾ ವಾಕ್ಯವನ್ನು ನಾಲ್ಕು ಕಡೆ ತುಂಡು ಮಾಡಿ ಅದೇ ಕವಿತೆ, ಕವನ ಹಾಗೂ ತಾನೊಬ್ಬ ಕವಿ, ಕವಯಿತ್ರಿ ಎಂದು ಪೋಸು ಕೊಡುವವರಿಗೂ ಕಡಿಮೆಯೇನಿಲ್ಲ. ಇನ್ನು ಕೆಲವರು ಶಬ್ದಗಳ ಆಡಂಬರವೇ ಸಾಹಿತ್ಯ ಎಂಬಂತೆ ಪೋಸು ಕೊಡುತ್ತಾರೆ. ಇದನ್ನೆಲ್ಲಾ ನೋಡಿದಾಗ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ಕಾಲದಲ್ಲಿ ಬೀಚಿ ಹೇಗೆ ಇಂತಹ ಹಾಸ್ಯಚಟಾಕಿಗಳನ್ನು ಬರೆದರು ಎಂದು ಆಶ್ಚರ್ಯವಾಗುತ್ತದೆ. ಈಗಿನ ಜೋಕು, ಚಟಾಕಿ, ಚೋದ್ಯ, ಸಣ್ಣಕಥೆಗಳನ್ನು ಓದಿದಾಗ ಅವುಗಳನ್ನು ಅನುಭವಿಸುವ ಬದಲು ‘ಎಲ್ಲೋ ಕೇಳಿದ್ದೇನಲ್ಲಾ, ಎಲ್ಲೋ ಓದಿದ ಹಾಗೆ ಇದೆಯೆಲ್ಲಾ’ ಎಂದು ಮನಸ್ಸು ಮೂಲ ವನ್ನು ಹುಡುಕಲಾರಂಭಿಸುತ್ತದೆ. ಒಂದೇ ಜೋಕು ಹಲವು ಪತ್ರಿಕೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ‘ರೀಸೈಕ್ಲ್’ ಆಗುತ್ತದೆ. ಆದರೆ ಬೀಚಿಯವರ ಬಹುದೊಡ್ಡ ಹೆಗ್ಗಳಿಕೆಯೆಂದರೆ ಅವರ ಜೋಕುಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತೀರಾ Original ಎನಿಸುತ್ತವೆ.

ಬೀಚಿ ಕಾರ್ಯಕ್ಷೇತ್ರ ಬರೀ ಜೋಕು, ಕಥೆಗಳಿಗಷ್ಟೇ ಸೀಮಿತವಾಗಲಿಲ್ಲ.

‘ಸುಧಾ’ ವಾರಪತ್ರಿಕೆಯಲ್ಲಿ ‘ನೀವು ಕೇಳಿದಿರಿ?’ ಎಂಬ ಅಂಕಣ ಇಂದಿಗೂ ಪ್ರಕಟವಾಗುತ್ತದೆ. ಒಂದು ಕಾಲದಲ್ಲಿ ಈ ಅಂಕಣದಲ್ಲಿ ಬರುತ್ತಿದ್ದ ಪ್ರಶ್ನೆಗಳಿಗೆ ಬೀಚಿ ಉತ್ತರಿಸುತ್ತಿದ್ದರು.
ಪ್ರಶ್ನೆ: ಸರ್, ನಾನು ಎಂ.ಎಲ್.ಎ. ಹಾಗೂ ಎಂ.ಪಿ. ಎರಡಕ್ಕೂ ನಿಂತುಕೊಳ್ಳಬೇಕೆಂದಿದ್ದೇನೆ?
ಬೀಚಿ: ಒಂದಕ್ಕೆ ನಿಂತುಕೊಳ್ಳುತ್ತಾರೆ. ಆದರೆ ಎರಡಕ್ಕೂ ನಿಂತು ಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ!

‘ಪ್ರಜಾಮತ’ದ ‘ಗುಪ್ತ ಸಮಾಲೋಚನೆ’ ಒಂಥರಾ ಮಜಾ ಕೊಟ್ಟರೆ ಬೀಚಿ ಬುಲೆಟ್‌ಗಳು ಚಿಳ್ ಎನಿಸುತ್ತಿದ್ದವು. ಇವತ್ತಿಗೂ ಇಂತಹ ಪ್ರಶ್ನೆ-ಉತ್ತರಗಳ ಕಾಲಂಗಳು ಹೆಚ್ಚೂಕಡಿಮೆ ಎಲ್ಲ ವಾರಪತ್ರಿಕೆ, ಟ್ಯಾಬ್ಲಾಯ್ಡ್‌ಗಳಲ್ಲೂ ಪ್ರಕಟವಾಗುತ್ತಿವೆ. ಉತ್ತರ ಕೊಡುವವರೇ ಕೆಲವೊಮ್ಮೆ ಪ್ರಶ್ನೆಗಳನ್ನೂ ‘ಕೇಳಿ’ಕೊಳ್ಳುತ್ತಾರೆ! ಅವುಗಳಲ್ಲಿ ತಿಳಿಹಾಸ್ಯದ ಬದಲು ಯಾರನ್ನೋ ಅವಹೇಳನ ಮಾಡುವ ಉದ್ದೇಶ ತೂರಿಬಂದಿರುತ್ತದೆ. ಹಾಗಾಗಿ ನಕ್ಕು, ನಗಿ ಸುವ ಬದಲು “PJ’ (poor jokes)ಗಳೆನಿಸಿಕೊಂಡು ಬಿಡುತ್ತವೆ. ಇಂಗ್ಲಿಷ್‌ನಲ್ಲಿ ಜಗ್ ಸುರೈಯಾ(ಟೈಮ್ಸ್ ಆಫ್ ಇಂಡಿಯಾ) ಅವರಂತಹ ಕೆಲವರು ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಇಂದಿಗೂ ಚೆನ್ನಾಗಿ ಬರೆಯುತ್ತಿದ್ದಾರೆ. ಆದರೆ ಕನ್ನಡದಲ್ಲಿ ಬೀಚಿ ಹಾಕಿಕೊಟ್ಟ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗುವ ಸಾಮರ್ಥ್ಯ ಪೂರ್ಣಮಟ್ಟದಲ್ಲಿ ಯಾರಲ್ಲೂ ಕಾಣಲಿಲ್ಲ. ಒಂದೆರಡು ದಶಕಗಳ ಕಾಲ ‘ಕೊರವಂಜಿ’ ಕೊಂಚ ಕೊರತೆಯನ್ನು ನೀಗಿಸಿದರೂ ಕಾಲಾಂತರದಲ್ಲಿ ಬದುಕುಳಿಯಲಿಲ್ಲ. ವೈಯೆನ್ಕೆ, ನಾ. ಕಸ್ತೂರಿ, ಪುಂಡಲಿಕ ಶೇಠ್ ಅವರಂತಹವರು ಈ ಪರಂಪರೆಯನ್ನು ಮುಂದುವರಿಸಿದರೂ ತಟ್ಟೆ ಖಾಲಿಯಾದ ನಂತರ ಬೆರಳು ನೆಕ್ಕುವಾಗ ಸಿಕ್ಕಷ್ಟು ಸುಖ ಅವುಗಳಿಂದ ಸಿಕ್ಕಿತೇ ಹೊರತು ಬೀChiಯವರಂತೆ ಭರಪೂರ ಭೋಜನವನ್ನು ಉಣ ಬಡಿಸಲೂ ಯಾರಿಗೂ  ಸಾಧ್ಯವಾಗಲಿಲ್ಲ. ಈಗಂತೂ ಯಾರೂ ಇಲ್ಲವಾಗಿದ್ದಾರೆ.

ಅಶ್ಲೀಲ ಸಾಹಿತ್ಯ
“ಅಪ್ಪಾ”
“ಏನೋ ತಿಂಮಾ?”
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?”
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ”
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?”
“ಹೌದೋ ತಿಂಮಾ”
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ ಚಿಕ್ಕವರು ಓದಕೂಡದು ಎಂಬುದಕ್ಕೇ ಅಶ್ಲೀಲಸಾಹಿತ್ಯವೆನ್ನುತ್ತಾರೇನಪ್ಪಾ?”

ಅವರಷ್ಟು ಚೆನ್ನಾಗಿ ಕಾಲೆಳೆಯಲು, ಕಾಲೆಳೆಯುತ್ತಲೇ ದೊಡ್ಡವರನ್ನು, ದೊಡ್ಡವರ ಧೂರ್ತತನವನ್ನು ಬೆತ್ತಲು ಮಾಡಲು ಬಹುಶಃ ಯಾರಿಗೂ ಬರುವುದಿಲ್ಲ.

ಜನಿವಾರ
ಅಪ್ಪ: ತಿಂಮಾ ಜನಿವಾರ ಹಾಕಿಕೋ.
ತಿಂಮಾ: ಯಾಕಪ್ಪಾ?
ಅಪ್ಪ: ಜನಿವಾರ ಹಾಕಿಕೊಳ್ಳದಿದ್ದರೆ ಮುಂದಿನ ಜನ್ಮದಲ್ಲಿ ನೀನು ಕತ್ತೆಯಾಗಿ ಹುಟ್ಟುತ್ತೀಯಾ.
ತಿಂಮಾ: ಅಪ್ಪಾ ಊರಲ್ಲಿ ಬಹಳ ಕತ್ತೆಗಳಿವೆ. ಅವರೆಲ್ಲ ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿದ್ದು ಜನಿವಾರ ಹಾಕಿಕೊಳ್ಳುವುದನ್ನು ಮರೆತಿದ್ದವರಾ?!

ಝೆನ್ ಕಥೆಗಳಂತೆ ಅತ್ಯಂತ ಕಡಿಮೆ ಪದ, ಸಾಲುಗಳಲ್ಲಿ ಕಥೆ, ಜೋಕು ಹೇಳುತ್ತಿದ್ದ ಬೀಚಿ, ಆಧುನಿಕ ಬರಹಗಾರರಿಗೆ ಮಾದರಿ. ಅರವತ್ಮೂರು ಕೃತಿಗಳನ್ನು ರಚಿಸಿರುವ ಅವರಲ್ಲಿ ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ, ಸ್ವತಃ ಬಡತನದಲ್ಲಿದ್ದರೂ ಸಮಾಜವನ್ನು ಗೇಲಿ ಮಾಡಿ ನಗುವ, ನಗಿಸುವ ಸಾಮರ್ಥ್ಯ, ಒಬ್ಬ ವ್ಯಂಗ್ಯಚಿತ್ರ ಬರಹಗಾರನಲ್ಲಿರಬೇಕಾದ ಹಾಸ್ಯಪ್ರeಯನ್ನು ಕಾಣಬಹು ದಾಗಿತ್ತು. ಹಾಗಾಗಿಯೇ ಆ ಕಾಲದಲ್ಲಿ ಹೊಸದಾದ ಒಂದು ಓದುಗ ವರ್ಗವನ್ನು ಸೃಷ್ಟಿಸಿದರು. ಒಂದಿಡೀ ತಲೆಮಾರು ಅವರ ಜೋಕು, ಕಥೆಗಳನ್ನು ಕೇಳಿಕೊಂಡು ಬೆಳೆಯಿತು. ಇಂದು ಅವರ ಸ್ಥಾನವನ್ನು ತುಂಬುವ ಮಾತು ಹಾಗಿರಲಿ, ಅವರನ್ನು ನೆನಪು ಮಾಡಿಕೊಡುವಂತಹವರೂ ಕಾಣ ಸಿಗುವುದಿಲ್ಲ.

ಮೊನ್ನೆ ಡಿಸೆಂಬರ್ 7ರಂದು ಬೀChi ಯವರ (ರಾಯಸಂ ಭೀಮಸೇನ ರಾವ್ ) ಪುಣ್ಯತಿಥಿ ಇತ್ತು. ಆದರೆ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದನೆಯ ಬೊಬ್ಬೆಯಲ್ಲಿ ಅವರನ್ನು ನೆನಪಿಸಿ ಕೊಳ್ಳಲಾಗಿರಲಿಲ್ಲ. ತಡವಾದರೂ ನೆನಪಿಸಿಕೊಳ್ಳದೇ ಇದ್ದರೆ ಹೇಗೆ, ಅಲ್ಲವೆ?

ಅಂದು ಮಠಗಳಲ್ಲಿತ್ತು ನಮ್ಮ ವಿಶ್ವಾಸದ ಗಂಟು, ಇಂದು ಗಂಟಿದ್ದರಷ್ಟೇ ನಂಟು!

“ಸರಕಾರ ನೆಲ, ಜಲ, ವಿದ್ಯುತ್ ಹಾಗೂ ಶಿಕ್ಷಣ ವಲಯವನ್ನು ಖಾಸಗೀಕರಣ ಮಾಡುತ್ತಿದೆ. ಉದಾರೀಕರಣ, ಜಾಗತೀಕರಣದ ಕಪಿಮುಷ್ಟಿ ಯಲ್ಲಿ ಸಿಲುಕಿ ಈಗಾಗಲೇ ನಲುಗಿದ್ದೇವೆ. ಕಳ್ಳಕಾಕರು, ಮಠಾಧೀಶರು ಹಾಗೂ ಉಳ್ಳವರಿಂದಾಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಇದು ನಾಚಿಕೆಗೇಡಿನ ಸಂಗತಿ. ಜನರ ಬದುಕಿಗೆ ಸಂಬಂಧಿಸಿದ ನೆಲ, ಜಲ , ವಿದ್ಯುತ್ ಹಾಗೂ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ. ಈ ಕೆಲಸವನ್ನು ಕಳ್ಳಕಾಕರಿಗೆ ವಹಿಸಬೇಡಿ. ಈ ಕೆಲಸ ಮಾಡಿದರೆ ನೀವು ಪುನಃ ಅಧಿಕಾರಕ್ಕೆ ಬರುವುದು ಖಚಿತ. ಇದು ನನ್ನ ಭವಿಷ್ಯವಾಣಿ”.

ಕಳೆದ ವಾರ ಚಿತ್ರದುರ್ಗದಲ್ಲಿ ಮುಕ್ತಾಯಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಪ್ರೊ. ಎಲ್. ಬಸವರಾಜು ಸರಕಾರಕ್ಕೆ ಹೇಳಿದ ಕಿವಿಮಾತಿದು.

“ಮಠಗಳು, ಮಠಾಧೀಶರು ನಮ್ಮ ಶತ್ರುಗಳು” ಎಂದು ಹೇಳಿಕೆ ನೀಡುವ ಮೂಲಕ ಸಮ್ಮೇಳನಕ್ಕೂ ಮುನ್ನವೇ ಒಂದಿಷ್ಟು ಅನಗತ್ಯ ಚರ್ಚೆ, ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದನ್ನು ಬಿಟ್ಟರೆ ಬಸವರಾಜು ಅವರು ಎತ್ತಿರುವ ವಿಚಾರಗಳ ಬಗ್ಗೆ  ನೈಜ ಕಾಳಜಿ ಇರುವವರೆಲ್ಲ ಖಂಡಿತ ಯೋಚಿಸಬೇಕಾದ ಅಗತ್ಯವಿದೆ.

ಬಹುಶಃ ನೀವು Jim Crow laws ಬಗ್ಗೆ ಕೇಳಿರಬಹುದು.

ಹದಿನೆಂಟನೇ ಶತಮಾನದಲ್ಲಿ ಅಮೆರಿಕದಲ್ಲಿ ಕರಿಯರನ್ನು ಮಾರುಕಟ್ಟೆಯಲ್ಲಿ ಹರಾಜಿಗಿಟ್ಟು ಮಾರಾಟ ಮಾಡುತ್ತಿದ್ದರು. ಇಂತಹ ಗುಲಾಮಗಿರಿ ಹಾಗೂ ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದ್ದ ನೀತಿಯ ವಿರುದ್ಧ ೧೮೬೧ರಿಂದ ೬೫ರವರೆಗೂ ಅಮೆರಿಕದಾದ್ಯಂತ ಒಂದು ಯಶಸ್ವಿ ‘ಸಿವಿಲ್ ವಾರ್’ ನಡೆಯಿತು. ಆನಂತರ ಗುಲಾಮಗಿರಿಯನ್ನು ನಿಷೇಧಿಸಿದ್ದಲ್ಲದೆ, ಕರಿಯರಿಗೆ ರೈಲು, ಬಸ್, ಶಾಲೆ, ಕಾಲೇಜು ಸೇರಿದಂತೆ ಎಲ್ಲ ಸಾರ್ವಜನಿಕ ಸೇವೆಗಳಲ್ಲೂ “ಪ್ರತ್ಯೇಕ, ಆದರೆ ಸಮಾನ”(Separate but Equal) ವ್ಯವಸ್ಥೆಯನ್ನು ಮಾಡಲಾಯಿತು. ಅವುಗಳನ್ನೇ ‘ಜಿಮ್ ಕ್ರೋ ಲಾ’ ಎನ್ನುವುದು. ಈ ಕಾನೂನಿನ ಪ್ರಕಾರ ಕರಿಯರಿಗೂ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಶಾಲೆ, ಕಾಲೇಜುಗಳನ್ನು ತೆರೆಯಲಾಯಿತು. ಉಚಿತ ಶಿಕ್ಷಣ ಸೇವೆ ಆರಂಭವಾಯಿತು. ತೊಗಲಿನ ಬಣ್ಣದ ಸಲುವಾಗಿ ಶಿಕ್ಷಣದಿಂದಲೇ ವಂಚಿತರಾಗಿದ್ದ ಕರಿಯರಿಗೆ ಪ್ರತ್ಯೇಕ ಶಾಲೆ, ಕಾಲೇಜುಗಳ ಸ್ಥಾಪನೆಯಿಂದಾಗಿ ವಿದ್ಯೆ ಸಿಗುವಂತಾಯಿತು. Historically Black Colleges and Universities (ಎಚ್‌ಬಿಸಿಯು) ಸ್ಥಾಪನೆಯಿಂದಾಗಿ ಕರಿಯರು ಬಿಳಿಯರ ಜತೆ ಸ್ಪರ್ಧೆ ಮಾಡುವಷ್ಟರ ಮಟ್ಟಿಗೆ ಬೆಳೆಯಲು ಅನುಕೂಲವಾಯಿತು. ಎಲ್ಲದರಲ್ಲೂ ಕರಿಯರನ್ನು ಪ್ರತ್ಯೇಕವಾಗಿಡಲು ಆರಂಭಿಸಿದ ಈ ಕಾಯಿದೆ ಕಾಲಾಂತರದಲ್ಲಿ ಅರ್ಥ ಕಳೆದುಕೊಂಡು ಕರಿಯರೇ ಅದನ್ನು ವಿರೋಧಿಸುವಂತಾದರೂ, ೧೯೫೪ರಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್ ಈ ಕಾಯಿದೆಗೆ ತಡೆಹಾಕಿದರೂ ಶಿಕ್ಷಣದ ವಿಷಯದಲ್ಲಿ ಕಾಯಿದೆಯಿಂದ ಕರಿಯರಿಗೆ ಅಪಾರ ಲಾಭವಾಗಿದ್ದಂತೂ ನಿಜ. ಇಂದಿಗೂ ಅಮೆರಿಕದಲ್ಲಿ ೧೦೩ ಎಚ್‌ಬಿಸಿಯುಗಳಿವೆ. ಅವುಗಳಲ್ಲಿ ದೊರೆಯುತ್ತಿರುವ ಗುಣ ಮಟ್ಟದ ಶಿಕ್ಷಣ ಎಷ್ಟು ಹೆಸರುವಾಸಿಯಾಗಿದೆಯೆಂದರೆ ಬಿಳಿಯರೂ ಎಚ್‌ಬಿಸಿಯುಗಳನ್ನು ಸೇರಿದ್ದಾರೆ. ಅಲ್ಲಿ ಕಲಿತು ಮೇಲೆ ಬಂದ ವಿದ್ಯಾರ್ಥಿಗಳು ಪ್ರತಿಯಾಗಿ ನೀಡುತ್ತಿರುವ ದೇಣಿಗೆ ಸರಕಾರದ ಸಹಾಯ ಧನಕ್ಕಿಂತ ಹೆಚ್ಚಾಗಿದೆ. ಅಂದರೆ ಸರಕಾರದಿಂದ ಉಚಿತವಾಗಿ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ನಿಂತ ಮೇಲೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಾಲೇಜುಗಳಿಗೆ ಸಹಾಯ ನೀಡುವ ಮೂಲಕ ಸಮಾಜದ ಋಣಭಾರವನ್ನು ತೀರಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, “ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸಿ. ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ. ಊಟದ ವ್ಯವಸ್ಥೆ ಮಾಡಿ” ಎಂಬ ಬಸವರಾಜು ಅವರ ಕೂಗಿನ ಹಿಂದೆಯೂ ಒಂದು ತರ್ಕವಿದೆ, ದಲಿತರ ಆರ್ತನಾದವಿದೆ. ಅಷ್ಟಕ್ಕೂ ಪ್ರತ್ಯೇಕ ಶಾಲೆಗಳೆಂದರೆ ಸಾಮಾಜಿಕವಾಗಿ ದೂರವಿಡುವುದೆಂದಲ್ಲ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ದೀನ-ದಲಿತರಿಗೆ ಉತ್ತಮ ದರ್ಜೆಯ ಶಿಕ್ಷಣ ಉಚಿತವಾಗಿ ಸಿಗುವಂತೆ ಮಾಡುವ ವ್ಯವಸ್ಥೆ ಯಷ್ಟೇ.
ಇಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸ್ವಾತಂತ್ರ್ಯ ಬಂದು ೬೨ ವರ್ಷಗಳ ನಂತರ ಕರೆ ನೀಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ?

ತುಂಬಾ ಹೆಚ್ಚು ಹಿಂದಕ್ಕೆ ಹೋಗುವುದು ಬೇಡ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಿ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ಕಟಾವಾಗಿ, ಸಂಕ್ರಾಂತಿ ಕಳೆದ ನಂತರ ನಮ್ಮ ಕಿರಿಯ ಮಠಾಧೀಶರು ಊರೂರು ಗಳಿಗೆ ಬರುತ್ತಿದ್ದರು. ಅವರ ಜತೆ ಒಂದು ದೊಡ್ಡ ದಂಡೂ ಬರುತ್ತಿತ್ತು. ಒಂದು ಊರಿನಲ್ಲಿ ಒಂದೆರಡು ದಿನ ಮೊಕ್ಕಾಂ ಹೂಡಿ, ನೆರೆಯ ಹಳ್ಳಿಗಳಿಗೂ ಭೇಟಿಕೊಟ್ಟು ಸಂಜೆ ಬೀಡಿಗೆ ಮರಳುತ್ತಿದ್ದರು. ಹಾಗೆ ಆಗಮಿಸಿದ ಸ್ವಾಮೀಜಿ ಯಾವ ಜಾತಿ, ಮಠದವರು ಎಂದು ಯಾರೂ ಕೇಳುತ್ತಿರಲಿಲ್ಲ. ಸ್ವಾಮೀಜಿಗಳೂ ತಮ್ಮ ಜಾತಿಯವರನ್ನು ಮಾತ್ರ ಕಾಣಲು ಆಗಮಿಸುತ್ತಿರಲಿಲ್ಲ. ಒಬ್ಬ ಸ್ವಾಮೀಜಿ ಬಂದಿದ್ದಾರೆ ಎಂದರೆ ಎಲ್ಲ ಮನೆಯವರೂ ತಮ್ಮ ಶಕ್ತಿಗನುಸಾರ ದವಸ-ಧಾನ್ಯ, ಕಾಣಿಕೆಗಳನ್ನು ತಂದು ಒಪ್ಪಿಸುತ್ತಿದ್ದರು. ಸಂಜೆಯ ವೇಳೆ ಧಾರ್ಮಿಕ ಕಾರ್ಯಕ್ರಮ, ಪ್ರವಚನ ನಡೆಯುತ್ತಿತ್ತು. ಅವತ್ತು ಜನ ಕೊಟ್ಟ ದವಸ-ಧಾನ್ಯ, ಕಾಣಿಕೆಯಿಂದ ಮಠಗಳು ವರ್ಷ ಕಳೆಯುತ್ತಿದ್ದವು. ಜನ ಕೂಡ ಆ ಜಾತಿ, ಈ ಜಾತಿ ಎನ್ನದೆ ಎಲ್ಲರೂ ಏಕೆ ಕಾಣಿಕೆ ನೀಡುತ್ತಿದ್ದರು ಎಂದರೆ ಮಠಗಳು ಯಾವುದೇ ಜಾತಿಗಳದ್ದಾಗಿದ್ದರೂ ಸಮಾಜದ ಎಲ್ಲರ ಅಭ್ಯುದಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು.

‘ಇವನಾರವ ಇವನಾರವ ಎನ್ನದಿರು, ಇವ ನಮ್ಮವ’ ಎಂದು ಬಸವಣ್ಣ ಹೇಳಿದಂತೆ ಮಠಗಳೂ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಮಕ್ಕಳಿಗೆ ಮೂಲ ಶಿಕ್ಷಣವನ್ನು (ಫಂಡಮೆಂಟಲ್ ಎಜುಕೇಶನ್) ಹೇಳಿಕೊಡುತ್ತಿದ್ದವು. ಧಾರ್ಮಿಕ ಪಾಠದ ಜತೆಗೆ  “”3 R’s” ಅಂದರೆ ಓದು, ಬರಹ, ಲೆಕ್ಕ (Reading, Writing, Arithmetics) ಮುಂತಾದ ಬದುಕಿಗೆ ಬೇಕಾದ ಪ್ರಾಥಮಿಕ ವಿದ್ಯೆಯನ್ನು ಹೇಳಿ ಕೊಡುವ ಕೆಲಸ ಮಾಡುತ್ತಿ ದ್ದವು. ಹಾಗಾಗಿ ಮಠಗಳೆಂದರೆ ಸಮಾಜದ ಎಲ್ಲರೂ ಗೌರವಿ ಸುವ ಕೇಂದ್ರಗಳಾಗಿದ್ದವು. ‘ಮಠಕ್ಕೆ ಹಾಕಿದರೆ ಮಗ ಉದ್ಧಾರ ಆಗುತ್ತಾನೆ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಒಂದು ವೇಳೆ, ಮಠದಲ್ಲಿ ಕಲಿತು ಹೊರಬಂದವನೊಬ್ಬ ಸಣ್ಣ ತಪ್ಪು ಮಾಡಿದರೂ ಅದು ಅಕ್ಷಮ್ಯ ಅಪರಾಧವೆನಿಸುತ್ತಿತ್ತು. ಅಂದರೆ ಮಠದಲ್ಲಿ ಕಲಿತವನೆಂದರೆ ಆತ ಎಲ್ಲ ಸದ್ಗುಣಗಳನ್ನೂ ರೂಢಿಸಿಕೊಂಡವನೆಂಬ ನಂಬಿಕೆ ಇತ್ತು. ಹೀಗೆ ನಮ್ಮ ಜನ ಮಠ-ಮಂದಿರಗಳಲ್ಲಿ ತಮ್ಮ ವಿಶ್ವಾಸದ ಗಂಟನ್ನಿಟ್ಟಿದ್ದರು.

ಆದರೆ ಇಂದು ಆ ಮಾತನ್ನು ಹೇಳಲು ಸಾಧ್ಯವಿದೆಯೇ?

ಯಾವ ಮಠಾಧೀಶರೂ ಸಂಕ್ರಾಂತಿ ಕಳೆದ ನಂತರ ಊರೂರು ಸುತ್ತಲು ಬರುವುದಿಲ್ಲ. ಜನರೇ ಶಾಲೆ, ಕಾಲೇಜು ಪ್ರಾರಂಭ ವಾಗುವ ಮುನ್ನ ಮಗ, ಮಗಳಿಗೆ ಅಡ್ಮಿಶನ್ ಕೋರಿ ಸ್ವಾಮೀಜಿಗಳ ಕಾಲ ಬಳಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅಂದು ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸಿದರೆ ಭಸ್ಮ ಕೊಡುತ್ತಿದ್ದರು, ಇಂದು ನಮಸ್ಕರಿಸಿ ನೋಟು, ಚೆಕ್ಕು ಇಟ್ಟರೆ ‘ಸೀಟು’, ಸೇಬು, ಮೂಸಂಬಿ ಅಥವಾ ಕಿತ್ತಳೆ ಹಣ್ಣನ್ನು ನಿಮ್ಮ ಕೈಗಿಡುತ್ತಾರೆ.

ಇಂತಹ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು?

ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಿಕ್ಷಣದ ವಿಚಾರ ಬಂದಾಗ “Profit is a dirty word” ಎನ್ನುತ್ತಿದ್ದರು. ಅಂದರೆ ವಿದ್ಯೆ ಎಂಬುದು ಲಾಭದ ಉದ್ದೇಶ ಇಟ್ಟುಕೊಂಡು ಮಾಡುವ ಉದ್ದಿಮೆಯಲ್ಲ. ಅದಕ್ಕೇ ನಮ್ಮಲ್ಲಿ ‘ವಿದ್ಯಾದಾನ’ ಎನ್ನುತ್ತಿದ್ದುದು. ಆದರೆ ಸರಕಾರವೊಂದರಿಂದಲೇ ಹತ್ತಾರು ಕೋಟಿ ಭಾರತೀಯರಿಗೆ ವಿದ್ಯಾದಾನ ಮಾಡಲು ಸಾಧ್ಯವಿಲ್ಲ ಎಂದರಿತ ಸರಕಾರ, ಸಾಮಾಜಿಕ ಕಾಳಜಿ ಇರುವವರಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು, ಸ್ವತಂತ್ರವಾಗಿ ನಡೆಸಲು ಧಾರಾಳವಾಗಿ ಅನುಮತಿ ಕೊಡಲು ಆರಂಭಿಸಿತು. ಇದರ ಲಾಭವನ್ನು ದುಡ್ಡಿದ್ದವರು ಹಾಗೂ ಮಠಗಳು ಪಡೆದುಕೊಳ್ಳಲಾರಂಭಿಸಿದವು. ಆದರೆ ಯಾವಾಗ ಮಠಗಳು ಬದುಕಿಗೆ ಬೇಕಾದ ಮೂಲ ಶಿಕ್ಷಣದ ಬದಲು ಉನ್ನತ ಶಿಕ್ಷಣದತ್ತ ಹೆಚ್ಚು ಹೆಚ್ಚು ಗಮನಹರಿಸಲು ಪ್ರಾರಂಭಿಸಿದವೋ ಆಗ ನೆಹರು ಹೇಳಿದ್ದ ಮಾತು ಅರ್ಥಕಳೆದುಕೊಳ್ಳಲಾರಂಬಿಸಿತು. ಇವತ್ತು ಕರ್ನಾಟಕದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಡಿ (ವಿಟಿಯು) ೧೫೯ ಎಂಜಿನಿಯರಿಂಗ್ ಹಾಗೂ ಬ್ಯುಸಿನೆಸ್ ಮೇನೇಜ್‌ಮೆಂಟ್ ಕಾಲೇಜುಗಳಿವೆ. ಅವುಗಳಲ್ಲಿ ಎಷ್ಟು ಸರಕಾರಿ ಕಾಲೇಜುಗಳಿವೆ ಹಾಗೂ ಎಷ್ಟು ಕಾಲೇಜುಗಳು ಮಠಗಳು ಹಾಗೂ ದುಡ್ಡಪ್ಪಗಳ ನಿಯಂತ್ರಣದಲ್ಲಿವೆ ಎಂಬುದನ್ನು ಲೆಕ್ಕಹಾಕಿ. ನಮ್ಮ ರಾಜ್ಯದಲ್ಲಿ ಅತ್ಯಂತ ಪ್ರಬಲ ಎನಿಸಿಕೊಂಡ ಎಲ್ಲ ಮಠಗಳ ಬಳಿಯಲ್ಲೂ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಅಥವಾ ಎರಡೂ ಕಾಲೇಜುಗಳಿವೆ. ಅವುಗಳಿಗೆ ಪ್ರಾಬಲ್ಯ ಬಂದಿದ್ದೇ ಇಂತಹ ಕಾಲೇಜುಗಳಿಂದ. ಹೀಗೆ  ಕಾಲೇಜುಗಳನ್ನೇ ಕಾಮಧೇನುಗಳನ್ನಾಗಿ ಮಾಡಿಕೊಂಡ ಮಠಗಳು ‘ಪವರ್ ಸೆಂಟರ್’ಗಳಾದವು. ಅಂದು ರಾಜಕಾರಣಿಗಳು ಎಲ್ಲರಿಗೂ ಸರಕಾರವೇ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಠಗಳಿಗೆ ಜವಾಬ್ದಾರಿ ಕೊಟ್ಟರು. ಇವತ್ತು ಮಠಗಳು ರಾಜಕಾರಣವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿ ಬೆಳೆದಿವೆ. ನೀವೇ ಯೋಚನೆ ಮಾಡಿ, ರಾಮಕೃಷ್ಣ ಮಠದಂತಹ ಕೆಲವನ್ನು ಬಿಟ್ಟು ಯಾವುದೇ ಮಠವನ್ನು ಹೆಸರಿಸಿ, ಕೂಡಲೇ ‘ಇಂತಹ ಜಾತಿಯದ್ದು’ ಎಂಬ ಯೋಚನೆ ಅರಿವಿಲ್ಲದಂತೆಯೇ ನಿಮ್ಮ ಮನಸ್ಸಿಗೆ ಬರುತ್ತದೆ. ಅಂದರೆ ಹಿಂದೆ ಸರ್ವಜನರ ಅಭ್ಯುದಯದ ಗುರಿ ಇಟ್ಟುಕೊಂಡಿದ್ದ ಮಠಗಳ ಕೈಗೆ ಉನ್ನತ ಶಿಕ್ಷಣದ ‘ಫಲ’ ಸಿಕ್ಕಿದ ನಂತರ ದುಡ್ಡು ಹರಿದು ಬಂತು. ಆ ದುಡ್ಡು ಎಷ್ಟು ಪ್ರಚೋದಕವಾಗಿತ್ತೆಂದರೆ ಮಠಗಳಿಗೆ “”3 R’s” ಇತ್ತಲ್ಲ ಅದು “”Rs” ಥರಾ ಕಾಣಲಾರಂಭಿಸಿತು. ಹೀಗೆ ಮೂಲ ಶಿಕ್ಷಣ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗುತ್ತಾ ಹೋದ ಮಠಗಳು ಹಾಗೂ ಜನರ ನಡುವೆ ಅಂತರ ಸೃಷ್ಟಿಯಾಗತೊಡಗಿತು. ಕಾಲಕ್ರಮೇಣ ಜಾತಿ ತಾರತಮ್ಯವಿಲ್ಲದೆ ಎಲ್ಲರೂ ಎಲ್ಲ ಮಠಗಳಿಗೂ ಹೋಗುತ್ತಿದ್ದ ಕಾಲ ಬದಲಾಗಿ ಅವು ಜಾತಿ ಮಠಗಳಾಗತೊಡಗಿದವು. ಹೀಗೆ ಮಠಗಳು ಆಯಾ ಜಾತಿಗಳಿಗೆ ಸೀಮಿತವಾಗಿದ್ದು ಸಮಾಜಕ್ಕೆ ನಷ್ಟವಾದರೂ, ಮಠಗಳಿಗೆ ಮಾತ್ರ ವರದಾನವಾಯಿತು. ಅಂದರೆ ಮಠಗಳೂ ವೋಟ್ ಬ್ಯಾಂಕ್ ಪಾಲಿಟಿಕ್ಸ್ ನಡೆಸಲು ಅವಕಾಶ ಲಭ್ಯವಾಯಿತು. ಇಂತಹ ಸ್ವಾಮೀಜಿಯವರನ್ನು ಎದುರು ಹಾಕಿಕೊಂಡರೆ ಅವರ ಸಮುದಾಯದವರು ಮುನಿಸಿಕೊಳ್ಳುತ್ತಾರೆ, ಇಂತಹ ಜಾತಿಯ ಮತಗಳು ಕೈತಪ್ಪಿ ಹೋಗುತ್ತವೆ ಎಂಬ ಭಯ ನಮ್ಮ ರಾಜಕಾರಣಿಗಳನ್ನು ಕಾಡು ವಂತೆ ಮಾಡಿದರು. ಹೀಗೆ ಮಠಗಳು ಇಂದು ರಾಜಕೀಯದ ಮೇಲೆಯೂ ನಿಯಂತ್ರಣ ಸಾಧಿಸಿವೆ.

ಈ ರೀತಿ ಸರಕಾರ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮರೆತು ವಿದ್ಯಾದಾನದ ಜವಾಬ್ದಾರಿಯನ್ನು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು, ದುಡ್ಡಪ್ಪಗಳು ಮತ್ತು ಮಠಗಳಿಗೆ ವಹಿಸಿದ್ದು ಹಾಗೂ ವಹಿಸಿಕೊಂಡವರು ಅದನ್ನು ಉದ್ಯಮದಂತೆ ನಡೆಸಿಕೊಂಡಿದ್ದರ ಪರಿಣಾಮವಾಗಿ ದೀನ ದಲಿತರು ಮೂಲ ಹಾಗೂ ಉನ್ನತ ಶಿಕ್ಷಣ ಎರಡರಿಂದಲೂ ವಂಚಿತರಾಗಬೇಕಾಗಿ ಬಂತು. ಇತ್ತ ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರೆಂಬ ಹಣೆ ಪಟ್ಟಿ ಹಾಕಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿರುವವರು ‘ನಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್. ನಾವು ಮೀಸಲಾತಿ ಕೊಡಬೇಕೆಂದಿಲ್ಲ’ ಎಂದು ವಾದಿಸಿ ಗೆದ್ದರು. ಇನ್ನೊಂದೆಡೆ ದುಡ್ಡಪ್ಪಗಳು ಹಾಗೂ ಮಠಗಳು ರಾಜಕೀಯದ ಮೇಲೆ ತಾವು ಸಾಧಿಸಿರುವ ನಿಯಂತ್ರಣವನ್ನು ಉಪಯೋಗಿಸಿಕೊಂಡು ತಮ್ಮ ಶಿಕ್ಷಣ ಸಂಸ್ಥೆಗಳನ್ನು “ಡೀಮ್ಡ್ ಯೂನಿವರ್ಸಿಟಿ”ಗಳೆಂದು ಘೋಷಿಸಿಕೊಳ್ಳುತ್ತಿದ್ದಾರೆ, ಇಲ್ಲವೇ “ಸ್ವಾಯತ್ತ ಸಂಸ್ಥೆ”(ಅಟಾನಮಸ್ ಸ್ಟೇಟಸ್) ಎಂಬ ಸ್ಥಾನಮಾನ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸರಕಾರಿ ಸೀಟುಗಳು ಗಣನೀಯ ಪ್ರಮಾಣದಲ್ಲಿ ಕುಸಿಯುತ್ತಿವೆ. ಹೀಗೆ ಎಲ್ಲರೂ ತಮ್ಮದು ಮೈನಾರಿಟಿ ಇನ್‌ಸ್ಟಿಟ್ಯೂಶನ್, ರಿಸರ್ವೇಶನ್ ಕೊಡುವುದಿಲ್ಲ ಎನ್ನಲು ಆರಂಭಿಸಿದರೆ, ಡೀಮ್ಡ್ ಹಾಗೂ ಆಟಾನಮಸ್ ಎಂಬ ತಡೆಗೋಡೆ ಕಟ್ಟಿಕೊಂಡರೆ ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿ, ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತನಾಗಿರುವ ದಲಿತರು ಎಲ್ಲಿಗೆ ಹೋಗಬೇಕು? ಅವರ ನೋವು ನಮಗೇಕೆ ಅರ್ಥವಾಗುವುದಿಲ್ಲ?

“ಪರಿಶಿಷ್ಟ ಜಾತಿ ಹಾಗೂ ವರ್ಗದ ಮಕ್ಕಳಿಗೆ ಪ್ರತಿ ತಾಲೂಕು ಮಟ್ಟದಲ್ಲಿ ಸುಸಜ್ಜಿತವಾದ  ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆದು ಶಿಕ್ಷಣ ಕೊಡಿಸಿ”, “ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಿ” ಎಂದಿರುವ ಬಸವರಾಜು ಅವರ ಕೂಗಿನ ಹಿಂದೆ ಇಂತಹ ಹಾಲಿ ಪರಿಸ್ಥಿತಿಯ ಕ್ರೂರ ಅಣಕವಿದೆ, ದಲಿತ ಹಾಗೂ ಎಲ್ಲ ಜಾತಿಯ ಬಡಬಗ್ಗರ ಹತಾಶೆಯಿದೆ ಎಂಬುದನ್ನು ನಾವೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?

ಖಂಡಿತ ಮಠಗಳು ಏನನ್ನೂ ಮಾಡಿಲ್ಲ ಎಂದು ಸಾರಾ ಸಗಟಾಗಿ ಇಲ್ಲಿ ಹೇಳುತ್ತಿಲ್ಲ.

ಒಂದು ವೇಳೆ, ಬಸವರಾಜು ಅವರ ಮಾತು, ಟೀಕೆಯಲ್ಲಿ ಹುರುಳಿಲ್ಲ ಎನ್ನುವುದಾದರೆ ಎಲ್ಲ ಮಠಗಳೂ ತಮ್ಮ ಆದಾಯ ಮತ್ತು ಬಡವರ ಕಲ್ಯಾಣಕ್ಕಾಗಿ ಇದುವರೆಗೂ ಮಾಡಿರುವ ವೆಚ್ಚದ ಬಗ್ಗೆ ಶ್ವೇತಪತ್ರ ಹೊರಡಿಸಲಿ? ಒಬ್ಬ ಸಾಮಾನ್ಯ ನಾಗರಿಕ ಸರಕಾರಕ್ಕೆ ತನ್ನ ಆದಾಯ ಹಾಗೂ ವೆಚ್ಚದ ಲೆಕ್ಕ ಕೊಡುತ್ತಾನೆ. ಆ ಕೆಲಸವನ್ನು ಮಠಗಳೂ ಮಾಡಲಿ. ಅವು ನಡೆಸುತ್ತಿರುವ ಉಚಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯನ್ನೂ ತೆರೆದಿಡಲಿ.

ಇವತ್ತು ಶಿಕ್ಷಣ ವ್ಯವಸ್ಥೆ ಮೇಲೆ ಮಠಗಳ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ತಮ್ಮ ಪ್ರಾಬಲ್ಯವಿರುವ, ಶಿಕ್ಷಣ ಸಂಸ್ಥೆಗಳಿರುವ ಪ್ರದೇಶಗಳಲ್ಲಿ ಕನಿಷ್ಠ ಸೌಲಭ್ಯಗಳ ಸರಕಾರಿ ಕಾಲೇಜುಗಳನ್ನು ಸ್ಥಾಪಿಸುವುದಕ್ಕೂ ಅಡ್ಡಿ ಬಂದಿವೆ. ಇನ್ನು ವೃತ್ತಿಪರ ಕಾಲೇಜುಗಳೆಂಬ ಕಾಮಧೇನು ನೀಡುವ ಫಲವನ್ನು ಕೆಳಸ್ತರಕ್ಕೆ ಹಂಚುವ ಕೆಲಸವನ್ನಾದರೂ ಮಠಗಳು ಮಾಡುತ್ತಿವೆಯೇ? ಎಷ್ಟು ಮಠಗಳು ಎಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಮಕ್ಕಳನ್ನು ಕನಿಷ್ಠ ಮಟ್ಟದ ಸುಶಿಕ್ಷಿತರನ್ನಾಗಿಸುವ ಪ್ರಯತ್ನ ನಡೆಸಿವೆ? ಮಠಮಾನ್ಯಗಳು ಈ ಸಾಮಾಜಿಕ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಅಂಗನವಾಡಿಗಳ ಅಗತ್ಯವಾದರೂ ಏನಿತ್ತು? ಕ್ಯಾಪಿಟೇಶನ್ ವಿರುದ್ಧ ವೀರಪ್ಪ ಮೊಯಿಲಿ ಅವರು ಕೆಂಡಕಾರಿ ಅದರ ನಿಷೇಧಕ್ಕೆ ಕರೆ ನೀಡಿದಾಗ ರೌದ್ರಾವತಾರ ತಳೆದ ಈ ‘ಉಳ್ಳವರ’ ಮಠಗಳು ಸರಕಾರವನ್ನು ಕಿತ್ತೊಗೆಯಲು ಪಣತೊಟ್ಟಿದ್ದನ್ನು ಮರೆಯಲಾದೀತೆ? ಅಷ್ಟೇ ಏಕೆ, ಮಠಗಳು ಸ್ವಜಾತಿಯ ಬಡವರಿಗೇ ಸಹಾಯ ಮಾಡುತ್ತಿಲ್ಲ ಎಂಬ ಆರೋಪ ವನ್ನು ಅಲ್ಲಗಳೆಯಲು ಸಾಧ್ಯವಿದೆಯೆ?

ಅಂದ ಮಾತ್ರಕ್ಕೆ “ಮಠಗಳಿಂದ ಶಿಕ್ಷಣವನ್ನು ಕಿತ್ತುಕೊಳ್ಳಬೇಕು ಎಂದಲ್ಲ”, ನರ್ಸಿಂಗ್, ಮೆಡಿಕಲ್, ಎಂಜಿನಿಯರಿಂಗ್, ಬ್ಯುಸಿನೆಸ್ ಮೇನೇಜ್‌ಮೆಂಟ್ ಮುಂತಾದ ಉನ್ನತ ಶಿಕ್ಷಣದ ಮೋಹವನ್ನು ಸ್ವಲ್ಪ ಕಡಿಮೆ ಮಾಡಿ “”Back to roots” ಎಂಬಂತೆ ಮಕ್ಕಳಿಗೆ ಓದು, ಬರಹ, ಲೆಕ್ಕವನ್ನು ಕಲಿಸುವಂತಹ ಮೂಲ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು, ಎಲ್ಲ ಮಕ್ಕಳೂ ಒಟ್ಟಿಗೆ ಕುಳಿತು ಧಾರ್ಮಿಕ ಹಾಗೂ ಲೌಖಿಕ ಪಾಠವನ್ನು ಕಲಿಯುವಂತಹ ವಾತಾವರಣವನ್ನು ಸೃಷ್ಟಿಸಿ ಜಾತಿರಹಿತ ಭಾವನೆ ಮೂಲದಲ್ಲೇ ಮೈಗೂಡುವಂತೆ ಮಾಡಬೇಕು. ಅಂತಹ ಸಮಾನ ಶಿಕ್ಷಣ ವ್ಯವಸ್ಥೆ ಸಿಕ್ಕಾಗ ಮಾತ್ರ ಒಂದು ಸ್ವಸ್ಥ ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ.

ಇಲ್ಲಿ ನಾವೆಲ್ಲ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ವಾದ ಅಂಶವಿದೆ.

ಒಬ್ಬ ದಲಿತ ಮತಾಂತರಗೊಂಡ ಕೂಡಲೇ ನಮಗೆ ಸಿಟ್ಟು ಬರುತ್ತದೆ. ಮಿಷನರಿಗಳನ್ನು ದೂಷಿಸಲಾರಂಭಿಸುತ್ತೇವೆ. ಆದರೆ ಆ ದಲಿತ ಮಾತೃಧರ್ಮ ತೊರೆಯುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದವರಾರು? ಮತಾಂತರಗೊಳ್ಳುವವರೇನೂ ದಡ್ಡರಲ್ಲ. ಯೇಸುವನ್ನು ಪ್ರಾರ್ಥಿಸಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ, ಪಾದ್ರಿಗಳು ಹೇಳುತ್ತಿರುವುದೆಲ್ಲ ಪೊಳ್ಳು ಎಂಬುದು ಅವರಿಗೂ ಗೊತ್ತು. ಆದರೂ ಸಾಮಾಜಿಕ ಅಸಮಾನತೆ, ತಾರತಮ್ಯಗಳಿಲ್ಲದ ಒಂದು Better life ಎಂಬ ಮರೀಚಿಕೆಯನ್ನರಸಿಕೊಂಡು, ತಮ್ಮ ಮಕ್ಕಳಿಗೆ ಕಾನ್ವೆಂಟ್‌ಗಳಲ್ಲಿ ಪ್ರವೇಶ ಹಾಗೂ ಪುಕ್ಕಟೆ ಶಿಕ್ಷಣ ಸಿಗುತ್ತದೆ, ನಮ್ಮ ಮಕ್ಕಳಿಗಾದರೂ ಒಂದು ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತದೆ ಎಂಬ ಆಸೆಯಿಂದ ಹೋಗುತ್ತಾರೆ. ಅಂತಹ ಅನುಕೂಲಗಳನ್ನು ಸ್ವಧರ್ಮೀಯರೇ ಏಕೆ ಸೃಷ್ಟಿಸಬಾರದು? ಆಗಾಧ ಆದಾಯವನ್ನು ಹೊಂದಿರುವ ನಮ್ಮ ಮಠ-ಮಂದಿರಗಳೇಕೆ ಆ ಕೆಲಸ ಮಾಡಬಾರದು? ಎಲ್ಲವನ್ನೂ ಸರಕಾರದಿಂದಲೇ ನಿರೀಕ್ಷಿಸಲಾಗದು. ಅಷ್ಟಕ್ಕೂ, ಸರಕಾರ ದಲಿತರಿಗೆ ಒಂದಿಷ್ಟು ಮೀಸಲು ನೀಡಬಹುದು, ಒಂದು ಹಂತದವರೆಗೂ ಪುಕ್ಕಟೆ ಶಿಕ್ಷಣ ಕೊಡಬಹುದು. ಆದರೆ ಮನಸ್ಸು-ಮನಸ್ಸುಗಳ ನಡುವೆ ಇರುವ ಕಂದಕವನ್ನು ಯಾವ ಕಾನೂನಿನಿಂದಲೂ ಮುಚ್ಚಲು ಸಾಧ್ಯವಿಲ್ಲ. ಆ ಕೆಲಸ ವನ್ನು ಮಠ-ಮಂದಿರಗಳು ಮಾಡಬೇಕು.  ಹೀಗಿದ್ದರೂ ‘ಮತಾಂತರಗೊಳ್ಳಬೇಡಿ, ನಿಮ್ಮನ್ನೆಲ್ಲ ಒಪ್ಪಿಕೊಳ್ಳುತ್ತೇವೆ, ಅಪ್ಪಿಕೊಳ್ಳುತ್ತೇವೆ’ ಎಂದು ಭಾಷಣ ಕೊಟ್ಟು, ಸಹಪಂಕ್ತಿ ಬೋಜನ ಮಾಡೋಣ ಬನ್ನಿ ಎಂದ ಕೂಡಲೇ ಮೌನಕ್ಕೆ ಶರಣಾಗುತ್ತಾರೆ. ಹಾಗಾದರೆ ಒಬ್ಬ ಶಂಕರಾಚಾರ್ಯ, ವಿವೇಕಾನಂದ ಯಾವ ಉದ್ದೇಶಕ್ಕಾಗಿ ದೇಶ ಸುತ್ತಿದರು?  ಶ್ರೀ ನಾರಾಯಣ ಗುರುಗಳು ಯಾವ ಕಾರಣಕ್ಕಾಗಿ ನಾಡನ್ನಲೆದರು? ಅವರೂ ಪೀಠದ ಮೇಲೆ ಕುಳಿತುಕೊಂಡು ನೋಟು ಮುಂದಿಟ್ಟವರಿಗೆ ಸೀಟು, ಸೇಬು, ಮೂಸಂಬಿ, ಕಿತ್ತಳೆ ಹಣ್ಣು ಕೊಡಬಹುದಿತ್ತಲ್ಲವೆ? ಹಾಗೆ ಕೊಟ್ಟಿದ್ದರೆ ಅವರು ದೇಹಬಿಟ್ಟ ನಂತರವೂ ಬದುಕಿರುತ್ತಿರಲಿಲ್ಲ.

ಇದು ಎಲ್ಲ ಮಠಾಧೀಶರಿಗೂ ಅರ್ಥವಾಗಬೇಕು. ಮಠ ಎಂದರೆ ಪೀಠದ ಮೇಲೆ ಆಸೀನರಾಗಿ, “ರೆವಿನ್ಯೂ ಜನರೇಟಿಂಗ್ ಸ್ಕೂಲ್, ಕಾಲೇಜು”ಗಳನ್ನು ಸ್ಥಾಪಿಸಿ, ಗಂಟಿದ್ದವರಿಗೆ ಮಾತ್ರ ತಮ್ಮ ಕಾಲೇಜುಗಳ ಬಾಗಿಲು ತೆರೆಯುವುದಲ್ಲ.

ಈ ಹಿನ್ನೆಲೆಯಲ್ಲಿ, ಎಲ್ಲ ಮಠಗಳನ್ನೂ ಒಂದೇ ತಕ್ಕಡಿಗೆ ಹಾಕಿ, ಮಠಗಳೆಂದರೆ ಸಮಾಜ ವಿರೋಧಿಗಳು ಎಂದು ಏಕಾಏಕಿ ತೀರ್ಪು ಕೊಟ್ಟ ಬಸವರಾಜು ಅವರ ಆ ಮಾತನ್ನು ನಿರ್ಲಕ್ಷಿಸಿ,  ಬಸವರಾಜು ಅವರನ್ನೂ ನಿಮಿತ್ತವಾಗಿಟ್ಟುಕೊಂಡು ಅವರು ಎತ್ತಿರುವ ಕೆಲವು ಪ್ರಶ್ನೆಗಳ ಹಿಂದೆ ಇರುವ ಸಾಮಾಜಿಕ ಪರಿಸ್ಥಿತಿ ಹಾಗೂ ಅದರ ಗಂಭೀರತೆಯನ್ನು ಅರ್ಥಮಾಡಿಕೊಳ್ಳಿ. ದಲಿತರು ಮತ್ತು ಎಲ್ಲ ಜಾತಿಗಳ ಹಿಂದುಳಿದವರನ್ನು ಕಡೆಗಣಿಸಿದರೆ ಮುಂದೆ ಎಂತಹ ಅಪಾಯ ಎದುರಾಗಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ.

ಎಲ್ಲವೂ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

Stop character assassination! – ಸತ್ತ ಮೇಲೆ ಶೀಲದ ಸತ್ವಪರೀಕ್ಷೆ ಸರಿಯೇ?

ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ.
Uma Khurana, Padmapriya, Arushiಬಹುಶಃ ನೀವು ಮರೆತೇ ಬಿಟ್ಟಿರಬಹುದು ಉಮಾ ಖುರಾನಾ ಅವರನ್ನ.

ಆಕೆ ದಿಲ್ಲಿಯ ದರ್ಯಾಗಂಜ್‌ನಲ್ಲಿರುವ ಸರಕಾರಿ ಶಾಲೆಯಾದ “ಸರ್ವೋದಯ ಕನ್ಯಾ ವಿದ್ಯಾಲಯ”ದಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದರು. ಇತ್ತ 2007, ಆಗಸ್ಟ್ 30ರಂದು ದಿಲ್ಲಿಯ ಸ್ಥಳೀಯ ಖಾಸಗಿ ಹಿಂದಿ ಚಾನೆಲ್ಲಾದ “Live India”ದಲ್ಲಿ ಇದ್ದಕ್ಕಿದ್ದಂತೆಯೇ “Sting operation” ಪ್ರಸಾರವಾಗ ತೊಡಗಿತು. ರಶ್ಮಿ ಖನ್ನಾ ಎಂಬಾಕೆ ತೆರೆಯ ಮೇಲೆ ಕಾಣಿಸಿಕೊಂಡಳು. ಆಕೆ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಎಂದು ಒಕ್ಕಣೆ ಕೊಟ್ಟರು. ಅಶ್ಲೀಲ ಚಿತ್ರ, ವಿಡಿಯೋ ಚಿತ್ರಣಗಳನ್ನು ತೋರಿಸಿದರು. ಗಣಿತ ಶಿಕ್ಷಕಿಯಾದ ಉಮಾ ಖುರಾನಾ ಸರ್ವೋದಯ ಶಾಲೆಯ ವಿದ್ಯಾರ್ಥಿನಿಯರನ್ನು `ಮಾಂಸ ದಂಧೆ’ಗೆ ದೂಡುತ್ತಿದ್ದಾರೆ, ಪ್ರಚೋದಿಸುತ್ತಿದ್ದಾರೆ ಎಂದು ಪದೇ ಪದೆ ಪ್ರಸಾರ ಮಾಡಲಾಯಿತು. ಅದನ್ನು ನೋಡಿದ್ದೇ ತಡ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರ ಕೋಪ ನೆತ್ತಿಗೇರಿತು. ಎಲ್ಲಿ ತಮ್ಮ ಮಕ್ಕಳನ್ನೂ ವೇಶ್ಯಾವಾಟಿಕೆಗೆ ದೂಡಲಾಗಿದೆಯೋ ಎಂಬ ಆತಂಕವೂ ಕಾಡತೊಡಗಿತು. ಹೀಗೆ ಕೋಪ, ಆತಂಕಗಳೊಂದಿಗೆ ಶಾಲೆಗೆ ನುಗ್ಗಿದ ಪೋಷಕರು ಉಮಾ ಖುರಾನಾ ಅವರನ್ನು ಹಿಡಿದು ಎಳೆದಾಡತೊಡಗಿದರು. ಆಕೆ ಧರಿಸಿದ್ದ ಉಡುಪಿನ ಮೇಲ್ಭಾಗ ಸಂಪೂರ್ಣವಾಗಿ ಹರಿದು ಅರೆನಗ್ನಗೊಂಡರೂ ಅಮಾನುಷವಾಗಿ ಥಳಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಟಿವಿ ಚಾನೆಲ್‌ಗಳು ಉಮಾ ಖುರಾನಾಗೆ ಹಿಗ್ಗಾಮುಗ್ಗ ಥಳಿಸುವುದನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದವು. `Porn racket`, `Porn in School”ಎಂಬ ಶೀರ್ಷಿಕೆಗಳೊಂದಿಗೆ ರಾಷ್ಟ್ರೀಯ ಚಾನೆಲ್‌ಗಳೂ ಕೂಡ ಉಮಾ ಖುರಾನಾ ಅವರನ್ನು ಥಳಿಸುತ್ತಿರುವುದನ್ನು, ಬಟ್ಟೆ ಚಿಂದಿಯಾಗುವಂತೆ ಹೊಡೆಸಿಕೊಳ್ಳುತ್ತಿರುವುದನ್ನು ಪ್ರಸಾರ ಮಾಡತೊಡಗಿದವು. TV sting shows school teacher in ‘porn racket” ಎಂದು ಮರುದಿನ ಪತ್ರಿಕೆಗಳೂ ಬರೆದವು. ಅದರಲ್ಲೂ `ಹಿಂದೂಸ್ಥಾನ್ ಟೈಮ್ಸ್’ ಪತ್ರಿಕೆಯಂತೂ “Who is Uma Khurana?” ಎಂಬ ಶೀರ್ಷಿಕೆಯಡಿ “ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂಬ ಸ್ಟಿಂಗ್ ಆಪರೇಶನ್‌ನ ಬೆನ್ನಲ್ಲೇ ಸರ್ವೋದಯ ಕನ್ಯಾ ವಿದ್ಯಾಲಯದ ಗಣಿತ ಶಿಕ್ಷಕಿಯನ್ನು ಕೋಪೋದ್ರಿಕ್ತ ಪೋಷಕರು ಚೆನ್ನಾಗಿ ಥಳಿಸಿದ್ದಾರೆ. ಖುರಾನಾ ಅವರ ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಇಂತಹ ಕಪ್ಪುಚುಕ್ಕೆಗಳು ಕಾಣ ಸಿಗುತ್ತವೆ. ವಿವೇಕ್ ವಿಹಾರ್ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಸಂದರ್ಭದಲ್ಲೂ ಖುರಾನಾ ಅವರನ್ನು ಒಮ್ಮೆ ಸಸ್ಪೆಂಡ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಬಿಟ್ಟು ವಿವಾದಕ್ಕೆ ಸಿಲುಕಿದ್ದರು” ಎಂದು ಬರೆಯಿತು. ಈ ಮಧ್ಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವುದೇ ಆಧಾರಗಳಿಲ್ಲದ್ದರೂ ಎಫ್‌ಐಆರ್ ದಾಖಲಿಸಿದರು. “ಅನೈತಿಕ ಚಟುವಟಿಕೆ ತಡೆ ಕಾಯಿದೆ”ಯಡಿ ಬಂಧಿಸಿದರು. ಶೀಲಾ ದಿಕ್ಷೀತ್ ಅವರ ಸರಕಾರವೂ ಶೀಲದ ವಿಷಯದಲ್ಲಿ ಭಾರೀ ಸಂವೇದನೆ ತೋರಿತು! ಮೊದಲಿಗೆ ಉಮಾ ಖುರಾನಾ ಅವರನ್ನು ಸಸ್ಪೆಂಡ್ ಮಾಡಿದ ದಿಲ್ಲಿ ಸರಕಾರ, ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ಉತ್ತೇಜನಗೊಂಡು ಆಕೆಯನ್ನು ಕೆಲಸದಿಂದಲೂ ಕಿತ್ತುಹಾಕಿ ಬಿಟ್ಟಿತು. ಶಿಕ್ಷಕಿಯೇ ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ದೂಡುತ್ತಿದ್ದಾಳೆ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ಬೆತ್ತಲೆ ಚಿತ್ರ ತೆಗೆದು ಬೆದರಿಸುತ್ತಿದ್ದಾಳೆ ಅಂದರೆ ಯಾರು ತಾನೇ ರೊಚ್ಚಿಗೇಳುವುದಿಲ್ಲ? ಆದರೆ ವಾಸ್ತವದಲ್ಲಿ ನಡೆದಿದ್ದೇನು?

`ಸ್ಟಿಂಗ್ ಆಪರೇಶನ್’ ಹಾಗೂ ಹಲ್ಲೆ ಪ್ರಕರಣ ನಡೆದು ಐದು ದಿನ ಕಳೆದರೂ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಯಾವ ವಿದ್ಯಾರ್ಥಿನಿಯೂ ಉಮಾ ಖುರಾನಾ ವಿರುದ್ಧ ದೂರು ನೀಡಲಿಲ್ಲ! ಪೋಷಕರ ಆರೋಪದ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ನೆಪ ಹೇಳಲಾರಂಭಿಸಿದ ಪೊಲೀಸರು ನುಣುಚಿಕೊಳ್ಳಲು ಯತ್ನಿಸಲಾರಂಭಿಸಿದರು. ಅಷ್ಟಕ್ಕೂ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಲು ಯಾವ ಸಾಕ್ಷ್ಯಾಧಾರಗಳೂ ಇರಲಿಲ್ಲ. ಪ್ರಕರಣ ಕೋರ್ಟ್ ಮುಂದೆ ಬಂತು, ಸಾಕ್ಷ್ಯ ಒದಗಿಸುವಂತೆ ಪೊಲೀಸರು “ಲೈವ್ ಇಂಡಿಯಾ” ಚಾನೆಲ್ಲನ್ನೇ ಬೆನ್ನುಹತ್ತಬೇಕಾಯಿತು. ಆಗ ನೋಡಿ ಸತ್ಯ ಹೊರಬಿತ್ತು. ಉಮಾ ಖುರಾನಾ ಹಾಗೂ ವೀರೇಂದ್ರ ಅರೋರಾ ಎಂಬವರ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿ, ಜಗಳಕ್ಕೆ ಕಾರಣವಾಗಿತ್ತು. ಆಕೆಯ ಮಾನ ಕಳೆಯಲು ಮುಂದಾದ ಅರೋರಾ, `ಲೈವ್ ಇಂಡಿಯಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಧೀರ್ ಚೌಧುರಿ ಜತೆ ಸೇರಿ ಯೋಜನೆಯೊಂದನ್ನು ರೂಪಿಸಿದರು. ಅದೇ ಸ್ಟಿಂಗ್ ಆಪರೇಶನ್. ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ರಶ್ಮಿ ಖನ್ನಾ ಎಂಬಾಕೆ ವಿದ್ಯಾರ್ಥಿನಿಯ ವೇಷ ತಳೆದರು. ಬಲಿಪಶುವಿನಂತೆ ಕ್ಯಾಮೆರಾ ಮುಂದೆ ನಟನೆ ಮಾಡಿದರು. ಚಾನೆಲ್‌ನ ವರದಿಗಾರ ಪ್ರಕಾಶ್ ಸಿಂಗ್ ಸುದ್ದಿ ಸೃಷ್ಟಿಸಿ, `ಸ್ಟಿಂಗ್ ಆಪರೇಶನ್’ ಹೆಸರಿನಲ್ಲಿ ಅಶ್ಲೀಲ ಚಿತ್ರ, ಚಿತ್ರಣಗಳೊಂದಿಗೆ ವರದಿ ಮಾಡಿದರು. ಆದರೆ 2007, ಸೆಪ್ಟೆಂಬರ್ 13ರಂದು ಪ್ರಕರಣದ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ.ಕೆ. ಶರ್ಮಾ ಹಾಗೂ ಸಂಜೀವ್ ಖನ್ನಾಗೆ ಪಿತೂರಿಯ ಅರಿವಾಯಿತು. ಉಮಾ ಖುರಾನಾ ಅವರನ್ನು ದೋಷಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಿದರು. ಅಷ್ಟೇ ಅಲ್ಲ, ವರದಿಗಾರ ಪ್ರಕಾಶ್ ಸಿಂಗ್ ಹಾಗೂ ರಶ್ಮಿ ಖನ್ನಾ ಅವರನ್ನು ಬಂಧಿಸುವಂತೆ ಆದೇಶ ನೀಡಿದರು. `ಲೈವ್ ಇಂಡಿಯಾ’ ಚಾನೆಲ್ಲನ್ನೇ ಮುಚ್ಚಿಹಾಕಿಸಿದರು. ಆದರೆ ಅಷ್ಟರೊಳಗೆ ಉಮಾ ಖುರಾರಾ ಮರ್ಯಾದೆ ಬೀದಿ ಪಾಲಾಗಿತ್ತು. ಅಂದು ಸ್ಟಿಂಗ್ ಆಪರೇಶನ್ ಪ್ರಸಾರವಾದಾಗ ಇಡೀ ದೇಶವೇ ದಿಗ್ಭ್ರಮೆಗೊಂಡಿತ್ತು, ರಾಷ್ಟ್ರವೇ ರೊಚ್ಚಿಗೆದ್ದಿತ್ತು. ನಾವೆಲ್ಲರೂ ನೈತಿಕಪ್ರಜ್ಞೆ ಅದಾಗತಾನೇ ಜಾಗೃತಗೊಂಡಂತೆ “Moral high ground” ಏರಿ ಬೋಧನೆಗಿಳಿದು ಬಿಟ್ಟಿದ್ದೆವು.

ಒಂದು ತಿಂಗಳ ಹಿಂದೆ ನೋಯ್ಡಾ ಪೊಲೀಸರು ಮಾಡಿದ್ದೂ ಇದೇ ಕೆಲಸವನ್ನು! ಮನೆ ಕೆಲಸದ ಹೇಮರಾಜ್ ಮಹಡಿ ಮೇಲೆಯೇ ಹೆಣವಾಗಿ ಬಿದ್ದಿದ್ದರೂ ಆರುಷಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ತೀರ್ಪುಕೊಟ್ಟರು. ಸತ್ಯಸಂಗತಿ ಗೊತ್ತಾದ ಕೂಡಲೇ ಪತ್ರಿಕಾಗೋಷ್ಠಿ ಕರೆದ ಪೊಲೀಸರು, ಅಪ್ಪ ಡಾ. ರಾಜೇಶ್ ತಲ್ವಾರ್ ಅವರೇ ಆರುಷಿಯ ಕೊಲೆಗಾರ. ಮನೆಯಲ್ಲಿ ಕೆಲಸಕ್ಕಿದ್ದ ಹೇಮ್‌ರಾಜ್ ಜತೆ ಆರುಷಿ ಅಸಭ್ಯ ಭಂಗಿಯಲ್ಲಿದ್ದಿದ್ದು ಕಣ್ಣಿಗೆ ಬಿದ್ದಿದ್ದೇ ಕೊಲೆಗೆ ಕಾರಣ ಎಂದು `ಅನೈತಿಕ’ ಸಂಬಂಧದ ಕಥೆ ಕಟ್ಟಿದರು. ಆ 14 ವರ್ಷದ ಹುಡುಗಿ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳೋ ಗೊತ್ತಿಲ್ಲ, ಆದರೆ ಅಕಾಲಿಕವಾಗಿ ಕೊಲೆಯಾಗಿ ಒಂದು ತಿಂಗಳು ಕಳೆದರೂ ಇಂದಿಗೂ ಚಾರಿತ್ರ್ಯವಧೆಗೆ ಗುರಿಯಾಗುತ್ತಿದ್ದಾಳೆ. ನಿಜವಾಗಿ ನಡೆದಿದ್ದೇನು ಎಂದು ಹೇಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಆಕೆಯೇ ಇಲ್ಲದಿರುವಾಗ ಶೀಲದ ಮೇಲೆ ಶಂಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಜೀವನ ಏನು ಎಂಬುದು ಅರ್ಥವಾಗುವ ಮೊದಲೇ ಅಗಲಿರುವ ಒಬ್ಬ ಹೆಣ್ಣುಮಗಳ ಚಾರಿತ್ರ್ಯದ ಬಗ್ಗೆ ಏಕಿಂಥ ಅನುಮಾನ? ಅಕಸ್ಮಾತ್, ಆರುಷಿ ಅಸಭ್ಯವಾದ ಭಂಗಿಯಲ್ಲಿದ್ದಾಗ ಸಿಕ್ಕಿಬಿದ್ದಿದ್ದರೂ ಬೈದು ಬುದ್ಧಿಹೇಳುವ ಬದಲು, ಅದೊಂದೇ ಕಾರಣಕ್ಕೆ ಹೆತ್ತಮಗಳನ್ನೇ ಕೊಲೆಗೈಯ್ಯುವಷ್ಟು ಅಪ್ಪ ಕಟುನಾಗಿರುತ್ತಾನೆಯೇ? ಹದಿನಾಲ್ಕು ವರ್ಷದ ಹುಡುಗಿ 47 ವರ್ಷದ ಮುದುಕನ ಬಳಿ ಲೈಂಗಿಕ ಸಂಬಂಧ ಬೆಳೆಸಬೇಕಾದ ಅನಿವಾರ್ಯತೆಯಾದರೂ ಏನಿತ್ತು? ಆಕೆಗೆ ಅಷ್ಟೊಂದು ಆಸಕ್ತಿಯಿದ್ದರೆ ಆಕೆಯ ಸಹಪಾಠಿಗಳು, ಹುಡುಗರು ಸಿಗುತ್ತಿದ್ದರಲ್ಲವೆ? ಅಷ್ಟಕ್ಕೂ ಒಂದಿಬ್ಬರು ಸಹಪಾಠಿಗಳ ಜತೆ ಆಕೆ ವಿನಿಮಯ ಮಾಡಿಕೊಂಡಿರುವ ಪ್ರಚೋದಕ ಎಸ್‌ಎಂಎಸ್‌ಗಳನ್ನು ಮಾಧ್ಯಮಗಳೇ ಪ್ರಕಟಿಸಿವೆ. ಅದಿರಲಿ, ಡಾ.ತಲ್ವಾರ್ ಜತೆ ಡಾ. ದುರಾನಿ, ಹೇಮ್‌ರಾಜ್ ಜತೆ ಆರುಷಿಯ ಸಂಬಂಧ ಹೊಂದಿದ್ದರು ಎಂದು ಘೋಷಣೆ ಮಾಡಲು ಪೊಲೀಸರೇನು ಪ್ರತ್ಯಕ್ಷವಾಗಿ ಕಂಡಿದ್ದರೆ? ನಾವೇಕೆ ಎಲ್ಲದರಲ್ಲೂ ಅನೈತಿಕ ಸಂಬಂಧವನ್ನೇ ಹುಡುಕಲು ಪ್ರಯತ್ನಿಸುತ್ತೇವೆ?

ಮೊನ್ನೆ ಪ್ರಾಣಕಳೆದುಕೊಂಡ ನಮ್ಮ ರಾಜ್ಯದವರೇ ಆದ ಪದ್ಮಪ್ರಿಯಾ ಎಂಬ ನತದೃಷ್ಟ ಮಹಿಳೆಯ ಚಾರಿತ್ರ್ಯದ ಬಗ್ಗೆ ವರದಿಯಾದ ಕಟ್ಟುಕಥೆಗಳನ್ನು ಓದಿದಾಗ ಅಂತರಾತ್ಮ ಅನ್ನುವುದು ಇದ್ದವರಿಗೆ ಖಂಡಿತ ಅತೀವ ದುಃಖವಾಗಿರುತ್ತದೆ, ಮನಸ್ಸು ಘಾಸಿಗೊಂಡಿರುತ್ತದೆ. ಆಕೆ ಕಾಣೆಯಾಗಿದ್ದಾಳೆ, ಮನೆ ಬಿಟ್ಟು ತೆರಳಿದ್ದಾಳೆ ಎಂದ ಕೂಡಲೇ ನಮ್ಮ ಮನಸ್ಸಿಗೆ ಅನೈತಿಕ ಸಂಬಂಧವೇ ನೆನಪಾಗುವುದೇಕೆ? ನಮ್ಮಲ್ಲಿ ನೈತಿಕತೆ ಅನ್ನುವುದು ಉಳಿದಿಲ್ಲದಿರುವುದೇ ನಾವು ಹಾಗೆ ಯೋಚಿಸಲು ಕಾರಣ ಅಂತ ಅನ್ನಿಸುವುದಿಲ್ಲವೆ? ಒಂದು ಗಂಡು-ಹೆಣ್ಣು ಭಾಗಿಯಾಗಿರುವ ಘಟನೆಗಳು ಸಂಭವಿಸಿದಾಗ ನಮ್ಮ ಮನಸ್ಸೇಕೆ ಅನೈತಿಕ ಸಂಬಂಧದ ಕಡೆಯೇ ಸಾಗುತ್ತದೆ? ನಾವೇಕೆ ಹೆಣ್ಣನ್ನು ಅನುಮಾನದಿಂದಲೇ ನೋಡುತ್ತೇವೆ? ನಮ್ಮ ಕಣ್ಣುಗಳಲ್ಲಿ ಶಂಕೆಯೇ ಏಕೆ ತುಂಬಿ ಬಿಡುತ್ತದೆ? ಅಷ್ಟಕ್ಕೂ ದೈಹಿಕ ಸುಖ ಬೇಕಾಗಿದ್ದರೆ ಎರಡು ಮಕ್ಕಳಿಗೆ ಜನ್ಮಕೊಟ್ಟು, 35 ವರ್ಷ ತುಂಬಿ ಅರ್ಧ ಪ್ರಾಯ ಕಳೆಯುವವವರೆಗೂ ಪದ್ಮಪ್ರಿಯಾ ಕಾಯಬೇಕಾಗಿರಲಿಲ್ಲ. ಮಿಗಿಲಾಗಿ ಆಕೆಗೆ ದೈಹಿಕ ಸುಖವೇ ಮುಖ್ಯವಾಗಿದ್ದರೆ, ಅತುಲ್‌ರಾವ್ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದರೆ ದಿಲ್ಲಿಗೆ ಪಲಾಯನ ಮಾಡಬೇಕಾದ ಅಗತ್ಯವೇನಿತ್ತು? ಗಂಡ ರಘುಪತಿ ಭಟ್ಟರ ಅನೈತಿಕ ಸಂಬಂಧದಿಂದ ಬೇಸತ್ತು ಆಕೆ ಅಂತಹ ನಿರ್ಧಾರಕ್ಕೆ ಬಂದಿರಬಹುದು. ಅಷ್ಟಕ್ಕೂ ಆಕೆ ನೀತಿಗೆಟ್ಟ ಹೆಣ್ಣಾಗಿದ್ದರೆ ತೆರೆಮರೆಯಲ್ಲಿ ಸುಖಪಡೆದುಕೊಳ್ಳುತ್ತಾ ಗಂಡನ ಅನೈತಿಕತೆಯನ್ನೂ ಸಹಿಸಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳಬಹುದಿತ್ತು. ಜಗತ್ತಿನ ಎಲ್ಲ ಗಂಡಾಂತರ, ಸಾಮಾಜಿಕ ಅವಹೇಳನದ ಭಯವನ್ನು ಮೈಮೇಲೆ ಎಳೆದುಕೊಂಡು ದಿಲ್ಲಿಗೆ ಓಡಿ ಹೋಗುವ ಅಗತ್ಯವೇನಿತ್ತು? ವ್ಯವಹಾರ ಚತುರೆಯಾದ ಆಕೆಗೆ ಲೋಕಜ್ಞಾನ ಇಲ್ಲದೇ ಇರುತ್ತಾ? ಇಷ್ಟೆಲ್ಲಾ ಅಪಾಯಗಳಿವೆ ಎಂದು ಗೊತ್ತಿದ್ದೂ ಆಕೆ ದಿಲ್ಲಿಗೆ ತೆರಳಿ ಕಾಲ್‌ಸೆಂಟರ್ ಸೇರಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಟ್ಟಿದ್ದಳೆಂದರೆ ಆಕೆಯೊಳಗೆ ಬಲವಾದ ಯಾವುದೋ ನೋವು, ಗಂಡನ ಪ್ರವೃತ್ತಿಯ ಬಗ್ಗೆ ಅಸಹ್ಯ ಭಾವನೆ ಇದ್ದಿರಬಹುದಲ್ಲವೆ? ಇಲ್ಲದೇ ಹೋಗಿದ್ದರೆ ಯಾವ ತಾಯಿ ತಾನೇ ತನ್ನ ದೈಹಿಕ ಸುಖಕ್ಕಾಗಿ ಹೆತ್ತಮಕ್ಕಳನ್ನು ಬಿಟ್ಟು ಹೋಗುತ್ತಾಳೆ? ಅದಿರಲಿ, ವ್ಯಭಿಚಾರವೆಂಬುದು ಏಕೆ ಹೆಣ್ಣಿಗೆ ಮಾತ್ರ ಸಂಬಂಧಪಟ್ಟ ವಿಷಯವಾಗಿ ಬಿಡುತ್ತದೆ? ರಘುಪತಿ ಭಟ್ಟರ ಚಾರಿತ್ಯ್ರವನ್ನೇಕೆ ನಾವು ಸತ್ವಪರೀಕ್ಷೆಗೆ ಒಳಪಡಿಸುತ್ತಿಲ್ಲ? ಅವರೇನು ಶ್ರೀರಾಮಚಂದ್ರನೇ? ನಮ್ಮ ಸಮಾಜ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿದೆಯೇ?

ಅದು ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ರೋನನ್ ಸೇನ್ ಅವರಿಂದ “Headless Chickens” ಎಂದು ಕರೆಸಿಕೊಂಡ ಪತ್ರಕರ್ತರಿರಬಹುದು, `ರಾಜಶೇಖರ್, ನಿಮ್ಮ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ನಿಮಗೇನನಿಸುತ್ತಿದೆ?!’ ಎಂದು ಕೇಳುವ ಟಿವಿ ಆಂಕರ್‌ಗಳಿರಬಹುದು ಅಥವಾ ಅವರು ಬರೆದಿದ್ದನ್ನು ಬಾಯಿ ಚಪ್ಪರಿಸಿಕೊಂಡು ಓದುವ ಹಾಗೂ ಬಾಯಿ ತೆರೆದುಕೊಂಡು ಟಿವಿ ನೋಡುವವರು ಆಗಿರಬಹುದು. ಅವರು ಪದ್ಮಪ್ರಿಯಾ ಅವರ ಚಾರಿತ್ರ್ಯಕ್ಕಿಂತ ಮೊದಲು ತಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುವುದು, ತಮ್ಮ ನೈತಿಕತೆಯನ್ನು ಪರಾಮರ್ಶಿಸಿಕೊಳ್ಳುವುದೊಳಿತು. ಇವತ್ತು ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನಮ್ಮ ಕುತೂಹಲಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಗಿ ಬಂದಿದ್ದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇವತ್ತು ವಿಷಯ ತಣ್ಣಗಾಗಿರಬಹುದು. ಮುಂದೊಂದು ದಿನ ಮರೆತಂತೆಯೂ ಭಾಸವಾಗಬಹುದು. ಆದರೆ ನೆನಪುಗಳು ಅಳಿಸಿ ಹೋಗುವುದಿಲ್ಲ. ಆಕೆ ಕಳಂಕಿತ ಹೆಣ್ಣಾಗಿಯೇ ಉಳಿದು ಬಿಡುತ್ತಾಳೆ. ಅಷ್ಟಕ್ಕೂ ತನ್ನನ್ನು ಸಮರ್ಥಿಸಿಕೊಳ್ಳಲು, ನೈಜ ಕಾರಣವನ್ನು ವಿವರಿಸಲು ಆಕೆಯೇ ಇಲ್ಲ. ಆಕೆಯ ಮಕ್ಕಳು `ಇಂಥಾಕೆಯ ಮಕ್ಕಳು’ ಎಂಬ ಕಳಂಕವನ್ನು ಜೀವನ ಪರ್ಯಂತ ಹೊರಬೇಕಾಗುತ್ತದೆ. ನೀವೇ ಹೇಳಿ, ಸತ್ತು ಚಿತೆಯೇರಿದ ಮೇಲೂ ನಾವೇಕೆ ಶೀಲದ ಸತ್ವಪರೀಕ್ಷೆ ಮಾಡುತ್ತಿದ್ದೇವೆ? ಅವರಿಬ್ಬರ ಮಧ್ಯೆ ಯಾವ ಸಂಬಂಧವಿತ್ತು ಎಂಬುದು ಅವರಿಬ್ಬರಿಗಷ್ಟೇ ಗೊತ್ತು. ಹಾಗಿರುವಾಗ ತಾವೇ ಇಣುಕಿ ನೋಡಿದಂತೆ, ಪ್ರತ್ಯಕ್ಷವಾಗಿ ಕಂಡಂತೆ ಬರೆಯುವುದು ಮತ್ತು ಹಾಗೆ ಬರೆದಿದ್ದನ್ನು ಸತ್ಯವೆಂಬಂತೆ ನಂಬುವುದು ಎಷ್ಟು ಸರಿ? ಪತ್ರಿಕೆಗಳಲ್ಲಿ ಬರೆಯುವವರು, ಬರೆದಿದ್ದನ್ನು ಓದುವ ಓದುಗರೆಲ್ಲರೂ ಸುಶಿಕ್ಷಿತರೇ. ಅನಕ್ಷರಸ್ಥರು ಪತ್ರಿಕೆ ಓದುವುದಿಲ್ಲ. ಸುಶಿಕ್ಷಿತರೇ ಹೀಗೆ ವರ್ತಿಸಿದರೆ ಸಮಾಜದ ಗತಿಯೇನು?

“ಅದು ಯಾವುದೇ ವ್ಯಕ್ತಿಯಾಗಿರಲಿ ಆರೋಪ ಸಾಬೀತಾಗುವವರೆಗೂ ನಿರಪರಾಧಿ” ಎಂದು ನಮ್ಮ ಕಾನೂನು ಹೇಳುತ್ತದೆ.

ಆದರೆ ರಘುಪತಿ ಭಟ್ಟರೆ, ನಿಮ್ಮ ಪತ್ನಿ ಪದ್ಮಪ್ರಿಯಾ ಅವರ ಬದುಕು ಮೊಟಕುಗೊಳ್ಳುವುದಕ್ಕೆ ಕಾರಣ ಯಾರು? ನೀವೋ ಅಥವಾ ಅತುಲ್‌ನೋ? ಅತುಲ್ ಕೆಟ್ಟವ್ಯಕ್ತಿಯೇ ಆಗಿರಬಹುದು. ಆದರೆ ನೀವು ಸರಿಯಿದ್ದಿದ್ದರೆ ನಿಮ್ಮ ಹೆಂಡತಿ ಅತುಲ್ ಸಹಾಯ ಕೇಳುವ ಅಗತ್ಯವೇಕೆ ಬರುತ್ತಿತ್ತು? ಯಾವ ಹೆಣ್ಣುತಾನೇ ಸೆಕ್ಸ್‌ಗಾಗಿ ಸಂಬಂಧವನ್ನೇ ಕಡಿದುಕೊಳ್ಳಲು ಮುಂದಾಗುತ್ತಾಳೆ? ಕಾಮತೃಷೆ ತೀರಿಸಿಕೊಳ್ಳುವ ಬಯಕೆ ಆಕೆಗಿದ್ದರೆ ವಿಚ್ಛೇದನೆ ನೀಡುವಂತೆ ನಿಮ್ಮನ್ನು ಅಂಗಲಾಚುತ್ತಿರಲಿಲ್ಲ. ನಿಮಗೆ ಹೆಂಡತಿ ಮೇಲೆ ಪ್ರೀತಿ ಉಳಿದಿಲ್ಲವೆಂದಾಗಿದ್ದರೆ ಸಂಬಂಧದ ಕೊಂಡಿಯೇಕೆ ಬೇಕಿತ್ತು? ಆಕೆಯ ಇಚ್ಛೆಯಂತೆ ಡೈವೋರ್ಸ್ ನೀಡಿದ್ದಿದ್ದರೆ ಕನಿಷ್ಠ ಒಂದು ಹೆಣ್ಣಿನ ಪ್ರಾಣವಾದರೂ ಉಳಿದಿರುತ್ತಿತ್ತಲ್ಲವೆ?

ಏನೇ ಹೇಳಿ, ಕೈಹಿಡಿದವಳನ್ನು ಪ್ರೀತಿಗೆ ಬದಲು ಸಂಬಂಧದಲ್ಲಿ ಕಟ್ಟಿಹಾಕುವ ರಘುಪತಿ ಭಟ್ಟರಂತಹ ಗಂಡಂದಿರಿರುವವರೆಗೂ, `ಶಾಸಕರ ಪತ್ನಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯರ ಗತಿಯೇನು?’ ಎಂದು ಹೇಳಿಕೆ ನೀಡುವ ಬಾಯಿಬಡುಕಿ ಪ್ರಮೀಳಾ ನೇಸರ್ಗಿ, ಖರ್ಗೆಯವರಂತಹ ನಿರ್ಭಾವುಕ ಮನಸ್ಸುಗಳು ಇರುವವರೆಗೂ ಸಮಾಜ ಹೆಣ್ಣಿನ ಶೀಲದ ಸತ್ವಪರೀಕ್ಷೆ ನಡೆಸುವುದನ್ನು ನಿಲ್ಲಿಸುವುದಿಲ್ಲ. ಛೇ.

ಗುದ್ದು ಕೊಟ್ಟಿದ್ದೇನೋ ನಿಜ, ಬೇರೇನು ಮಾಡಿದ್ರಿ ಸಿದ್ದು?

Siddu

ಕನ್ಸರ್ವೇಟಿವ್ ಪಾರ್ಟಿ
ಲೇಬರ್ ಪಾರ್ಟಿ

ಬ್ರಿಟನ್‌ನಲ್ಲಿ ಮುಖ್ಯವಾಗಿ ಇರುವುದೇ ಈ ಎರಡು ಪಕ್ಷಗಳು. ಒಮ್ಮೆ ಲೇಬರ್, ಮತ್ತೊಮ್ಮೆ ಕನ್ಸರ್ವೇಟಿವ್…ಒಂಥರಾ ಸರದಿಯ ಪ್ರಕಾರ ಅಧಿಕಾರಕ್ಕೇರುತ್ತಿರುತ್ತವೆ. ಸಾರ್ವತ್ರಿಕ ಚುನಾ ವಣೆಯ ನಂತರ ಲೇಬರ್ ಪಕ್ಷ ಅಧಿಕಾರಕ್ಕೆ ಬಂದು ಅದರ ನೇತಾರ ಪ್ರಧಾನಿಯಾದರೆ ಮುಖ್ಯ ಪ್ರತಿಪಕ್ಷವನ್ನು(ವಿರೋಧ ಪಕ್ಷ) ಅಲ್ಲಿನ ಪತ್ರಿಕೆಗಳು “Our Party” (ನಮ್ಮ ಪಕ್ಷ) ಅಂತ ಸಂಬೋಧಿಸುತ್ತವೆ. ಒಂದು ವೇಳೆ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದರೆ ಲೇಬರ್ ಪಕ್ಷ “Our Party”ಯಾಗುತ್ತದೆ.

ಅಂದರೆ ಆಳುವ ಪಕ್ಷ ಜನಹಿತ ಮರೆತಾಗ ಪ್ರತಿಪಕ್ಷವೆಂಬುದು ಸರಕಾರದ ಮುಂದೆ ಜನರ ಪ್ರತಿನಿಧಿಯಾಗಿ ವಕಾಲತ್ತು ವಹಿಸಿ, ಹೋರಾಡಿ ಹಿತರಕ್ಷಣೆ ಮಾಡಬೇಕು. ಅಕಸ್ಮಾತ್ ಜನರಿಗೇ ನೇರವಾಗಿ ಸರಕಾರವನ್ನು ಪ್ರಶ್ನಿಸಲು ಅವಕಾಶವಿದ್ದರೆ ಯಾವ ಪ್ರಶ್ನೆ ಕೇಳುತ್ತಿದ್ದರೋ ಆ ಪ್ರಶ್ನೆಗಳನ್ನು ಜನರ ಪರವಾಗಿ ಪ್ರತಿಪಕ್ಷ ಕೇಳಬೇಕು. ಆ ಕಾರಣಕ್ಕಾಗಿಯೇ ಪ್ರತಿಪಕ್ಷವನ್ನು ‘ನಮ್ಮ ಪಕ್ಷ’, ನಮ್ಮ ಪರವಾಗಿ ಹೋರಾಡುವ ಪಕ್ಷ ಎಂಬ ಅರ್ಥದಲ್ಲಿ ನೋಡುತ್ತಾರೆ.  ಇನ್ನು ಪ್ರತಿಪಕ್ಷದ ನಾಯಕನನ್ನು “People’s No-1 representative” ಅಥವಾ “Shadow Prime Minister” ಎನ್ನುತ್ತಾರೆ. ಆತನನ್ನು ಮುಂದಿನ ಅಥವಾ ಪರ್ಯಾಯ ಪ್ರಧಾನಿಯೆಂಬಂತೆ ಕಾಣಲಾಗುತ್ತದೆ. ಆಡಳಿತ ನಡೆಸುವ, ಅಧಿಕಾರ ಚಲಾಯಿಸುವ ಹಕ್ಕು ಆತನಿಗಿಲ್ಲದಿದ್ದರೂ ಪ್ರಧಾನಿಯನ್ನೇ ‘ಮಾನಿಟರ್’ ಮಾಡುವ ಗುರುತರ ಜವಾಬ್ದಾರಿಯಿರುತ್ತದೆ. ನೆರಳು ನಮ್ಮನ್ನು ಹೇಗೆ ಹಿಂಬಾಲಿಸುತ್ತದೋ ಹಾಗೆ ಪ್ರತಿಪಕ್ಷದ ನಾಯಕ ಪ್ರಧಾನಿಯ ಕಾರ್ಯಚಟುವಟಿಕೆಗಳನ್ನು ನೆರಳಿನಂತೆ ಹಿಂಬಾಲಿಸಬೇಕು, ಕಣ್ಣಿಡಬೇಕು, ತಪ್ಪೆಸಗಿದಾಗ ಎತ್ತಿತೋರಿಸಬೇಕು. ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕಿಂತ ಜವಾಬ್ದಾರಿ ಬಹುಮುಖ್ಯ. ಮೊನ್ನೆ ವಿಧಾನಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಾಲಿ ಜವಾಬ್ದಾರಿಯಾದ ‘ಪ್ರತಿಪಕ್ಷದ ನಾಯಕ’ನ ಸ್ಥಾನವನ್ನು “Shadow Chief Minister” ಅಂತ ವರ್ಣಿಸಿದ್ದು ಇದೇ ಅರ್ಥದಲ್ಲಿ ಹಾಗೂ ಕಾರಣಕ್ಕೆ. ಆದರೆ ಕರ್ನಾಟಕದಲ್ಲಿ ಪ್ರತಿಪಕ್ಷದ ನಾಯಕರೊಬ್ಬರು ಇದ್ದಾರೆ ಎಂಬುದು ಕಳೆದ ಒಂದು ವರ್ಷದಲ್ಲಿ ಎಂದಾದರೂ ನಿಮಗೆ ಅನಿಸಿತ್ತಾ?

ಅಬ್ಬಾ!

ಕರ್ನಾಟಕದಲ್ಲೂ ಪ್ರತಿಪಕ್ಷಗಳಿವೆ, ಮುಖ್ಯ ಪ್ರತಿಪಕ್ಷವೊಂದಿದೆ, ಅದಕ್ಕೊಬ್ಬ  ನೇತಾರನಿದ್ದಾನೆ, ಆತನಿಗೆ ಮುಖ್ಯಮಂತ್ರಿಯನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ, ಬೆವರಿಳಿಸುವ ತಾಕತ್ತಿದೆ ಎಂಬುದು ಒಂದು ವರ್ಷ ಕಳೆದ ನಂತರ ಇದೀಗ ರಾಜ್ಯದ ಜನತೆಯ ಅನುಭವಕ್ಕೆ ಬಂದಿದೆ! ಕಾಂಗ್ರೆಸ್ ಶಾಸಕಾಂಗ ಪಕ್ಷದ ನೇತಾರರಾಗಿ ಸಿದ್ದರಾಮಯ್ಯನವರು ನೇಮಕವಾದಾಗಲೇ ಮುಂದಿನ ರಾಜ್ಯ ವಿಧಾನಸಭೆ ಅಧಿವೇಶನ ಸ್ವಲ್ಪವಾದರೂ ರಂಗೇರಲಿದೆ ಎಂಬುದರ ಸೂಚನೆ ಸಿಕ್ಕಿತ್ತು. ಕಾರ್ಯಭಾರ ವಹಿಸಿಕೊಂಡ ಬೆನ್ನಲ್ಲೇ ತುಮಕೂರಿನಲ್ಲಿ ಅಧಿಕಾರಿಗಳ ಸಭೆ ಕರೆದು, ಮಾಹಿತಿ ಕೇಳಿ ಸರಕಾರಕ್ಕೆ ಮುಂದೈತೆ ಊರಹಬ್ಬ ಎಂಬ ಸೂಚನೆಯನ್ನು ರವಾನೆಯೂ ಮಾಡಿದ್ದರು. ಇಷ್ಟಾಗಿಯೂ ಕಳೆದ 1 ವರ್ಷದಲ್ಲಿ ನಡೆದ ಅಧಿವೇಶನಗಳನ್ನು ಕಂಡಿದ್ದ ಜನರಿಗೆ, ಈ ಬಾರಿಯ ಅಧಿವೇಶನವೂ ಧರಣಿ, ಸಭಾತ್ಯಾಗಗಳಿಗೆ ತುತ್ತಾಗಿ ವಾರ, ಹತ್ತು ದಿನಗಳೊಳಗೆ ಪರಿಸಮಾಪ್ತಿಗೊಳ್ಳಬಹುದು ಎಂಬ ಆತಂಕವೂ ಇತ್ತು. ಜತೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳೆರಡೂ ಸದನದೊಳಗೆ ಒಂದಾಗಿ ನಿಂತರೆ ಮಾತ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಸಾಧ್ಯ, ಆದರೆ ಸಿದ್ದರಾಮಯ್ಯನವರು ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಾರೇ ಎಂಬ ಅನುಮಾನಗಳೂ ಇದ್ದವು. ಎಲ್ಲರೂ ಆಶ್ಚರ್ಯಪಡುವಂತೆ ಸಿದ್ದು ಸ್ವತಃ Rallying Point ಆಗಿ, ಜೆಡಿಎಸ್ ಅನ್ನೂ ಜತೆಗೆ ಕೊಂಡೊಯ್ದರು. ಎಚ್.ಡಿ. ರೇವಣ್ಣನವರೂ ಎಂದಿನ ಆಲಸ್ಯ ಬಿಟ್ಟು ಚರ್ಚೆ, ವಾದಕ್ಕೆ ನಿಂತು ಬಿಟ್ಟರು. ನಿಜಕ್ಕೂ ವಿಧಾನಸಭೆಯಲ್ಲಿ ಸಿದ್ದು, ರೇವಣ್ಣ, ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್‌ನಲ್ಲಿ ಎಂ.ಸಿ. ನಾಣಯ್ಯ, ಉಗ್ರಪ್ಪ ಮುಂತಾದವರು ಭರ್ಜರಿಯಾ ಗಿಯೇ ಬ್ಯಾಟಿಂಗ್ ಆರಂಭಿಸಿದರು. ಒಂದು ವರ್ಷದಲ್ಲಿ ಬಿಜೆಪಿ ಸರಕಾರ ಸೃಷ್ಟಿಸಿರುವುದು ಅದೇನು ಕಡಿಮೆ ಹಗರಣಗಳಾ?

ಕರ್ನಾಟಕ ಗೃಹ ಮಂಡಳಿ ಭೂ ಖರೀದಿ ಹಗರಣ,
ಸಾರಿಗೆ ಇಲಾಖೆ ಹಗರಣ
ವರ್ಗಾವಣೆ ಹಗರಣ
ಸೈಕಲ್ ಖರೀದಿಯಲ್ಲಿ 35 ಕೋಟಿ ಗುಳುಂ
ಇಸ್ಕಾನ್ ಅವ್ಯವಹಾರ
ರಾಜ್ಯವ್ಯಾಪಿ ಅನಾರೋಗ್ಯ, ನೆರೆ, ರಸಗೊಬ್ಬರ ಕೊರತೆ
ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಹಗರಣ
ಪಂಪ್‌ಸೆಟ್ ಖರೀದಿ ಹಗರಣ
ರೆಡ್ಡಿ ಸಹೋದರರ ವಿರುದ್ಧದ ಕೇಸು ಹಿಂತೆಗೆತ
ಆಗ್ರೋಕಾರ್ನ್ ಹಗರಣ

ಇಂತಹ ಒಂದೊಂದು ವಿಚಾರಗಳನ್ನು ಕೈಗೆತ್ತಿಕೊಂಡು ಸಿದ್ದು, ನಾಣಯ್ಯ, ಡಿ.ಕೆ. ಶಿವಕುಮಾರ್, ರೇವಣ್ಣ ಮುಂತಾದವರು ಸರಿಯಾಗಿಯೇ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಆದರೂ ಬರು ಬರುತ್ತಾ ಅಧಿವೇಶನ ಪ್ರತಿಷ್ಠೆಯ ಕಣವಾಗಿ, ನೈಜ ಉದ್ದೇಶ ಎಲ್ಲೋ ಕಳೆದುಹೋಯಿತು! ಕರ್ನಾಟಕ ಗೃಹ ಮಂಡಳಿಯಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಸೃಷ್ಟಿಸಿದ್ದ ಭೂ ಖರೀದಿ ಹಗರಣವೊಂದನ್ನೇ ಇಟ್ಟುಕೊಂಡು ನಾಲ್ಕು ದಿನ ಕಲಾಪ ಹಾಳುಮಾಡಿದ್ದು ಎಷ್ಟು ಸರಿ?

ರತ್ನಗಿರಿ ರಹಸ್ಯ
ಭೈರವಿ ದ್ವೀಪಂ

ಮುಂತಾದ ಹಳೆಯ ಕನ್ನಡ ಚಲನಚಿತ್ರಗಳನ್ನು ಈ ಕಾಂಗ್ರೆಸ್ಸಿಗರು ಹಾಗೂ ಜೆಡಿಎಸ್‌ನವರು ಬಹಳಷ್ಟು ಬಾರಿ ನೋಡಿದ್ದಾರೆ ಅಂತ ಅನಿಸುತ್ತದೆ! ಅಂದರೆ ಹಿಂದೆಲ್ಲಾ ಬಿಡುಗಡೆಯಾಗುತ್ತಿದ್ದ ಚಿತ್ರಗಳನ್ನು ತೆಗೆದುಕೊಳ್ಳಿ. ವಿಲನ್ ಅಥವಾ ರಾಕ್ಷಸನನ್ನು ಹೀರೋ ಎಷ್ಟೇ ಹೊಡೆದರೂ ಆತ ಸಾಯುತ್ತಿರಲಿಲ್ಲ, ಸೋಲುತ್ತಲೂ ಇರಲಿಲ್ಲ. ಒಂದು ವೇಳೆ ಗುದ್ದು ತಿಂದು ಕೆಳಗೆ ಬಿದ್ದರೂ ಮತ್ತೆ ಎದ್ದು ಬಂದು ಹೀರೋ ಜತೆ ಕಾಳಗಕ್ಕಿಳಿಯುತ್ತಿದ್ದ. ಆ ವಿಲನ್/ರಾಕ್ಷಸನ ಜೀವ ಯಾವುದೋ ಒಂದು ಗಿಳಿ, ಪಾರಿವಾಳ ಅಥವಾ ಕನ್ನಡಿಯಲ್ಲಿರುತ್ತಿತ್ತು. ಗಿಳಿ, ಪಾರಿವಾಳಗಳನ್ನು ಮುಷ್ಟಿಯಲ್ಲಿ ಬಿಗಿದರೆ ವಿಲನ್‌ಗೆ ಕುತ್ತಿಗೆಯನ್ನು ಹಿಸುಕಿದಂತಾಗುತ್ತಿತ್ತು. ಅದನ್ನರಿತ ಕೂಡಲೇ ಹೀರೋ ಗಿಳಿ, ಪಾರಿವಾಳವನ್ನು ಕೊಲ್ಲುತ್ತಿದ್ದ. ಆಗ ವಿಲನ್ ಸಾಯುತ್ತಿದ್ದ. ಗಿಳಿಗೆ ಪೆಟ್ಟಾದರೆ ವಿಲನ್‌ಗೆ ನೋವಾಗುವ ಚಿತ್ರಕಥೆಗಳಂತೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನವರು ಯಾರಿಗೆ ಗುದ್ದಿದರೂ ನೋವಾಗುವುದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೇ ಎಂಬುದನ್ನು ಅರಿತುಕೊಂಡು ಕೃಷ್ಣಯ್ಯ ಶೆಟ್ಟಿ, ಇಸ್ಕಾನ್, ಸಾರಿಗೆ ಹಗರಣ, ರೆಡ್ಡಿ ಕೇಸು ಮುಂತಾದ ವಿಚಾರಗಳನ್ನೆತ್ತಿಕೊಂಡು ಮುಖ್ಯಮಂತ್ರಿಯವರನ್ನು ಪೇಚಿಗೆ ಸಿಲುಕಿಸಲು, ಅವಮಾನ ಮಾಡಲು ಯತ್ನಿಸಲಾರಂಭಿಸಿದವೇ ಹೊರತು Constructive opposition ಅಥವಾ ರಚನಾತ್ಮಕ ಪ್ರತಿಪಕ್ಷಗಳಾಗಿ ಕಾರ್ಯ ನಿರ್ವಹಿಸಲಿಲ್ಲ. ಈ ಮಾತನ್ನು ಹೇಳಲೇಬೇಕಾಗಿದೆ. ಎರಡು ವಾರಗಳಲ್ಲಿ ಪ್ರತಿಪಕ್ಷಗಳು ಎತ್ತಿದ ವಿಷಯಗಳೆಂಥವು? ಹಗರಣ ಗಳನ್ನೆತ್ತಿಕೊಂಡು ಯಡಿಯೂರಪ್ಪನವರ ಕಾಲೆಳೆಯಲು, ಒಂಥರಾ Insult ಮಾಡಲು ಯತ್ನಿಸಿದ್ದನ್ನು, ಅದೇ ತಮ್ಮ ಉದ್ದೇಶ, ಗುರಿ ಎಂಬಂತೆ ವರ್ತಿಸಿದ್ದನ್ನು ಬಿಟ್ಟರೆ ಬೇರೇನನ್ನು ಮಾಡಿದವು? Insult  ಮಾಡಬೇಡಿ ಎಂದು ಖಂಡಿತ ಹೇಳುತ್ತಿಲ್ಲ, ಆದರೆ ಹಗರಣಗಳ ಜತೆಗೆ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವಂತಹ ಹಾಲಿ ಸಮಸ್ಯೆ, ವಿಷಯ, ವಿಚಾರಗಳನ್ನೂ ಎತ್ತಿಕೊಂಡು ಸರಕಾರ ಹಾಗೂ ಮುಖ್ಯಮಂತ್ರಿಗೆ ಮಂಗಳಾರತಿ ಮಾಡಿದ್ದರೆ ನಾಡಿನ ಜನರಿಗೂ ಒಳಿತಾಗುತ್ತಿರಲಿಲ್ಲವೆ?

ಅಷ್ಟಕ್ಕೂ ಹಗರಣಗಳನ್ನು ಬಿಟ್ಟರೆ ಬೇರಾವ ವಿಷಯಗಳೂ ಇರಲಿಲ್ಲವೆ?

ಆಶ್ರಯ ಮನೆಗಳನ್ನೇ ತೆಗೆದುಕೊಳ್ಳಿ. ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಕೊಡುತ್ತೇವೆ ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ವಾಗ್ದಾನ ಮಾಡಿತ್ತು. ವಾಗ್ದಾನ ಮಾಡಿದರಷ್ಟೇ ಸಾಕೇ? ಮೊದಲು ಆಶ್ರಯ ಸಮಿತಿಗಳನ್ನು ರಚನೆ ಮಾಡಬೇಕು. ಅದು ಬಡತನ ರೇಖೆಗಿಂತ ಕೆಳಗಿರುವ ಹಾಗೂ ವಸತಿ ರಹಿತರಾಗಿರುವವರನ್ನು ಪಂಚಾಯಿತಿ ಮಟ್ಟದಲ್ಲಿ ಗುರುತಿಸಿ ಫಲಾನುಭವಿಗಳನ್ನು ಪಟ್ಟಿ ಮಾಡಬೇಕು. ಅದರ ಆಧಾರದ ಮೇಲೆ ಒಟ್ಟು ನಿರ್ಮಾಣ ಆಗಬೇಕಿರುವ ಮನೆಗಳ ಸಂಖ್ಯೆ, ಅದಕ್ಕೆ ಬೇಕಾಗಿರುವ ವೆಚ್ಚ, ಕಾಮಗಾರಿ ಮುಂತಾದುವುಗಳನ್ನು ನಿರ್ಧರಿಸಬೇಕು. ಆ ಮೇಲೆ ಸರಕಾರ ನಿಧಿ ಬಿಡುಗಡೆ ಮಾಡಿ, ಕಾರ್ಯಚಾಲನೆಗೆ ಅನುವು ಮಾಡಿಕೊಡಬೇಕು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಡಿಯೂರಪ್ಪ ಸರಕಾರ ಆಶ್ರಯ ಸಮಿತಿಗಳನ್ನೇ ರಚನೆ ಮಾಡಿಲ್ಲ! ಈಗ ಮಳೆಗಾಲ ಬಂದಿದೆ, ಸೂರಿಲ್ಲದವರ ಕಥೆ ಏನಾಗಬೇಕು?

ಇದು ಚರ್ಚೆ ಮಾಡುವಂತಹ, ಸರಕಾರವನ್ನು ಪ್ರಶ್ನಿಸುವಂತಹ ಗಂಭೀರ ಸಮಸ್ಯೆಯಲ್ಲವೆ ಸಿದ್ದು?

ರಾಜ್ಯದ ಒಟ್ಟು ಜನಸಂಖ್ಯೆ 5.28 ಕೋಟಿ. ಒಟ್ಟು ಕುಟುಂಬಗಳ ಸಂಖ್ಯೆ 1.06 ಕೋಟಿ. ಅವುಗಳಲ್ಲಿ ಬಡತನ ರೇಖೆಗಿಂತ(BPL) ಕೆಳಗಿರುವ ಕುಟುಂಬಗಳು 33 ಲಕ್ಷ. ಆದರೆ ರಾಜ್ಯದಲ್ಲಿ ಒಟ್ಟು 98 ಲಕ್ಷ ಪಡಿತರ ಚೀಟಿಗಳಿವೆ(ರೇಶನ್ ಕಾರ್ಡ್)!! ಅಂದರೆ ಇಡೀ ರಾಜ್ಯವೇ BPLನಲ್ಲಿದೆಯೇ? ಶ್ರೀಮಂತರು 1ಕ್ಕಿಂತ ಹೆಚ್ಚು ಕಾರ್ಡ್ ಹೊಂದಿದ್ದಾರೆ ಎಂಬುದು ಇದರಿಂದಲೇ ಗೊತ್ತಾಗುವುದಿಲ್ಲವೆ? ಇದೇ ಜುಲೈನಲ್ಲಿ 28 ಲಕ್ಷ ಕುಟುಂಬಗಳಿಗೆ ಅಕ್ಕಿ ಸಿಕ್ಕಿಲ್ಲ. ಏಕೆ? ತೊಗರಿ ಬೇಳೆಗೆ 100 ರೂ., ಅಕ್ಕಿಗೆ 40 ರೂ. ಆಗಿದೆ. ಏಕೆ ರಾಜ್ಯಾದ್ಯಂತ ಯದ್ವಾತದ್ವಾ ಬೆಲೆಯೇರಿಕೆಯಾಗುತ್ತಿದೆ? ಡೀಲರ್‍ಸ್ ಹಾಗೂ ಟ್ರೇಡರ್‍ಸ್‌ಗಳ ಕುತಂತ್ರವನ್ನು ಮಟ್ಟಹಾಕಲು ಸರಕಾರವೇಕೆ ಪ್ರಯತ್ನಿಸುತ್ತಿಲ್ಲ? ಅಲ್ಲೂ ಜಾತಿ ಮತ್ತು ಪಕ್ಷ ರಾಜಕಾರಣ ಕೆಲಸ ಮಾಡುತ್ತಿದೆಯೇ? ಈ ಬಗ್ಗೆ ಪ್ರತಿಪಕ್ಷಗಳು ಅಧಿವೇಶನದಲ್ಲಿ ಮಾಡಿದ್ದೇನು? ನಾವು ಅಧಿಕಾರಕ್ಕೆ ಬಂದ ಮೇಲೆ ಪಡಿತರ ವಿತರಣೆ ವ್ಯವಸ್ಥೆ(PDS)ಯನ್ನು ಸರಿಮಾಡುತ್ತೇವೆ ಎಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾಗಲೇ ಯಡಿಯೂರಪ್ಪನವರು ಭರವಸೆ ಕೊಟ್ಟಿದ್ದರು. ಪಡಿತರ ವಿತರಣೆ ವ್ಯವಸ್ಥೆಯನ್ನು ಸರಿ ಮಾಡುವುದು ಅಂದರೆ ಜನ ಏನು ತಿನ್ನುತ್ತಾರೋ ಅದನ್ನೇ ಕೊಡುವುದು. ಉತ್ತರ ಕರ್ನಾಟಕದ ಜನ ಜೋಳ, ದಕ್ಷಿಣ ಕರ್ನಾಟಕದವರು ಸಣ್ಣ ಅಕ್ಕಿ, ರಾಗಿ, ಕರಾವಳಿ ಭಾಗದವರು ದಪ್ಪ ಅಕ್ಕಿ ಬಳಸುತ್ತಾರೆ. ಈ ಮೂರೂ ಧಾನ್ಯಗಳು PDSನಲ್ಲಿಲ್ಲ!! ಏಕೆಂದರೆ ಶೇ.70ರಷ್ಟು ಪಡಿತರ ಬರುವುದು ಪಂಜಾಬಿನಿಂದ. ಅಲ್ಲಿನ ರೈತರು ಬೆಳೆದ ಗೋಧಿ ಮತ್ತು ಅಕ್ಕಿಯೇ ವಿತರಣೆಯಾಗುತ್ತದೆ. ಪಂಜಾಬ್‌ನ ರೈತರಿಗೆ ಮಾತ್ರ ಸದಾ ಸ್ಥಿರ ಮಾರುಕಟ್ಟೆ ಹಾಗೂ ನಿಶ್ಚಿತ ಬೆಲೆ ಲಭ್ಯವಾಗುತ್ತದೆ. ನಮ್ಮಲ್ಲಿ ಅಕ್ಕಿ ಬೆಲೆ 40 ರೂ. ಆಗಿದ್ದರೂ ಭತ್ತದ ಬೆಲೆ ಕ್ವಿಂಟಾಲ್‌ಗೆ ಕೇವಲ 700-800 ರೂ. ಇದೆ! ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತಂದು ಅಥವಾ ಜಗಳವಾಡಿಯಾದರೂ ನಮ್ಮ ರೈತರಿಂದಲೇ PDSಗೆ ಧಾನ್ಯ ಖರೀದಿ ಮಾಡಿ ಎಂದು ಒತ್ತಾಯಿಸಬಹುದಲ್ಲವೆ? ಅಥವಾ ರಾಜ್ಯ ಸರಕಾರವೇ ನಮ್ಮ ರೈತರಿಂದ ಭತ್ತ, ಜೋಳ, ರಾಗಿ ಖರೀದಿ ಮಾಡಿ PDS ಮೂಲಕ ನೀಡಬಹುದಲ್ಲವೆ? ಆ ಮೂಲಕ ಪಡಿತರ ವಿತರಣೆ ವ್ಯವಸ್ಥೆಯನ್ನು ಬಲಗೊಳಿಸಲು ಸಾಧ್ಯವಾಗುವುದಿಲ್ಲವೆ? ಛತ್ತೀಸ್ ಗಢದಂತಹ ರಾಜ್ಯವೇ ಪಡಿತರ ಖರೀದಿಗೆ 2000 ಕೋಟಿ ರೂ. ವೆಚ್ಚ ಮಾಡಿದರೆ ಕರ್ನಾಟಕ ಖರ್ಚು ಮಾಡುವುದು 1000 ಕೋಟಿಗೂ ಕಡಿಮೆ. ಕೇಂದ್ರ ಸರಕಾರ ಕೊಟ್ಟಿದ್ದನ್ನು ಹಂಚಿ ಕೈತೊಳೆದುಕೊಳ್ಳುತ್ತಿದೆ.

ಇದು ಪ್ರತಿಪಕ್ಷಗಳಿಗೆ ತಿಳಿದಿಲ್ಲವೆ? ಆಳುವ ಬಿಜೆಪಿ ಸರಕಾರ ಕ್ಕಂತೂ ಬುದ್ಧಿಯಿಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ಗಳಿಗೆ 60 ವರ್ಷ ರಾಜ್ಯವನ್ನಾಳಿದ, ದೋಚಿದ “ಶ್ರೀಮಂತ” ಅನುಭವವಿದೆಯಲ್ಲವೆ?! ಬುದ್ಧಿವಂತರಾದ ನೀವು ಈ ವಿಷಯ ಗಳನ್ನೆತ್ತಿಕೊಂಡು ಸದನದಲ್ಲಿ ಸರಕಾರದ ನೀರಿಳಿಸಬಹುದಿತ್ತಲ್ಲವೆ?

ಅಲ್ಲಾ, “ನೇಗಿಲ ಯೋಗಿ” ಪದ್ಯವನ್ನು ನಾಡಗೀತೆ ಮಾಡುವಂತಹ ಸಾಂಕೇತಿಕ ಕ್ರಮಗಳಿಂದ ರೈತನಿಗೆ ಯಾವ ಉಪಯೋಗವಾಗುತ್ತದೆ?

Agriculture policy document-2004 ಹಾಗೂ 2006ಗಳೆಂಬ ಎರಡು ಕರಡುಗಳು ಕೊಳೆಯುತ್ತಾ ಬಿದ್ದಿವೆ. 2004ರ ಕರಡಿನ ಪ್ರಕಾರ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಕೃಷಿ ಉತ್ಪನ್ನ ಸಂಸ್ಕರಣಾ ಘಟಕ (ಆಗ್ರೋ ಪ್ರೊಸೆಸಿಂಗ್ ಯುನಿಟ್’) ಸ್ಥಾಪನೆ ಮಾಡಬೇಕು. ಅಂದರೆ ಆಯಾ ಜಿಲ್ಲೆಯಲ್ಲಿ ಯಾವುದು ಮುಖ್ಯ ಬೆಳೆಯೋ ಅದಕ್ಕೆ ಸಂಬಂಧಿಸಿದ ಕೃಷಿ ಉತ್ಪನ್ನ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡುವ ಮೂಲಕ ರೈತನ ಕೈಬಲಪಡಿಸಬೇಕು. ಉದಾಹರಣೆಗೆ ಮಂಗಳೂರಿನಲ್ಲಿ ಮೀನು ಮತ್ತು ಕೊಬ್ಬರಿ ಎಣ್ಣೆ, ಕೋಲಾರದಲ್ಲಿ ಟೊಮೇಟೊ ಕೆಚಪ್, ಹಾಸನದಲ್ಲಿ ರಾಗಿ ಮಾಲ್ಟ್, ಆಲೂಗಡ್ಡೆ ಚಿಪ್ಸ್, ಶಿರಸಿಯಲ್ಲಿ ಗಂಧದ ಎಣ್ಣೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಬ್ಬು, ಕಾಳು, ಜೋಳ, ಎಣ್ಣೆಬೀಜ ಹಾಗೂ ಇತರ ದವಸ ಧಾನ್ಯಗಳ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಿದರೆ ರೈತರಿಗೆ ಮಾರುಕಟ್ಟೆಯೂ ಲಭ್ಯವಾಗುತ್ತದೆ, ಸೂಕ್ತ ಹಾಗೂ ಸ್ಥಿರ ಬೆಲೆಯೂ ದೊರೆತಂತಾಗುತ್ತದೆ. ಇತ್ತೀಚೆಗೆ ಕೇಂದ್ರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿಯೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ! ಈ ಮೇಲಿನ ವ್ಯವಸ್ಥೆ ಕಲ್ಪಿಸಿದರೆ ರೈತ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ? ಮಹಾರಾಷ್ಟ್ರದಲ್ಲಿ ರೈತ ಸಹಕಾರಿ ಸಂಸ್ಥೆಗಳು ಪೆಟ್ರೋಲ್ ಬಂಕ್ ನಡೆಸುತ್ತಿವೆ. ಉತ್ತಮ ಬ್ಯಾಂಕಿಂಗ್ ಹಾಗೂ ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸುತ್ತಿವೆ. ನಮ್ಮ 2006ರ ಕೃಷಿ ನೀತಿ ಕೂಡ ಸಾಲದಿಂದ ರೈತನನ್ನು ಋಣಮುಕ್ತನನ್ನಾಗಿ ಮಾಡಬೇಕು. ಆತನಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ, ಮರುಪಾವತಿಗೆ ದೀರ್ಘಾವಧಿ ನೀಡಬೇಕೆನ್ನುತ್ತದೆ. ಇಂತಹ ಕೆಲಸಗಳನ್ನು ರಾಜ್ಯ ಸರಕಾರ ಮಾಡಬೇಕೇ ಹೊರತು ನಾಡಗೀತೆಯನ್ನು ಬದಲಾ ಯಿಸುವುದಲ್ಲ. “ನೇಗಿಲ ಯೋಗಿಯ ನೇತಾರ” ಅಂತ ತಾವೇ ಬೋರ್ಡು ಹಾಕಿಕೊಂಡು ಓಡಾಡುವ ಯಡಿಯೂರಪ್ಪನವರು ಘೋಷಣೆ, ಗಿಮಿಕ್‌ಗಳಲ್ಲಿ ಎತ್ತಿದ ಕೈ. ಪ್ರತಿಪಕ್ಷಗಳು ಇಂತಹ ವಿಷಯಗಳನ್ನೆತ್ತಿಕೊಂಡು ಸರಕಾರವನ್ನು ದಬಾಯಿಸಿದ್ದರೆ, ಕಾರ್ಯ ಪ್ರವೃತ್ತಗೊಳ್ಳುವಂತೆ ಮಾಡಿದ್ದರೆ ನಾಡಿನ ಜನರಿಗೆ ಅನುಕೂಲ ವಾಗುತ್ತಿರಲಿಲ್ಲವೆ?

ರಾಜ್ಯದಲ್ಲಿ ೩೦ ಪರ್ಸೆಂಟ್ ವಿದ್ಯುತ್ ಕೊರತೆ ಇದೆ. ನೀರಾವರಿ ಯೋಜನೆಗಳಾದ ಕಳಸಾ-ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳ ಕಥೆ ಏನಾಯಿತು? ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ ಮಾಡಿಕೊಂಡು ಬರುವುದು ಮತ್ತು ವಿಜಾಪುರ ವಿದ್ಯುತ್ ಸ್ಥಾವರದ ಸ್ಟೇಟಸ್ ಏನು? ಆಲಮಟ್ಟಿಯಲ್ಲಿ ಸಾಕಷ್ಟು ನೀರಿದೆ. ಅಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚು ಮಾಡುವ ಬಗ್ಗೆ ಏಕೆ ಆಲೋಚಿಸಬಾರದು? ಒಬ್ಬ ಸರಕಾರಿ ಉದ್ಯೋಗಿಯನ್ನು ಕನಿಷ್ಠ ಮೂರು ವರ್ಷ, ಗರಿಷ್ಠ 7 ವರ್ಷ ಒಂದು ಕಡೆಯಲ್ಲಿ ಉಳಿಸಿಕೊಳ್ಳಬಹುದು ಎನ್ನುತ್ತದೆ ಕರ್ನಾಟಕ ವರ್ಗಾವಣೆ ನೀತಿ. ಆದರೆ ವಾರ, ತಿಂಗಳಿಗೊಮ್ಮೆ ಎತ್ತಂಗಡಿ ಮಾಡುತ್ತಿರುವ ಬಿಜೆಪಿ ಸರಕಾರ ಮಾಡಿದ್ದು, ಮಾಡುತ್ತಿರುವುದೇನು? ಜನರ ಮೇಲೆ ಪ್ರಭಾವ ಬೀರುವ ಇಂಥ ಸಮಸ್ಯೆಗಳ ನಿವಾರಣೆ ಬಗ್ಗೆ ಯಾವ ಪ್ರಶ್ನೆ ಕೇಳಿದ್ದೀರಿ ಸಿದ್ದು? ಏಳು ಬಾರಿ ಬಜೆಟ್ ಮಂಡಿಸಿದ ಅನುಭವ ಹೊಂದಿರುವ ಹಾಗೂ ಪ್ರತಿಪಕ್ಷದ ನಾಯಕನಾಗಿರುವ ನೀವೇ ಕಳ್ಳ ಸರಕಾರವನ್ನು ಹಣಿಯದಿದ್ದರೆ ರಾಜ್ಯದ ಗತಿಯೇನಾದೀತು? ಮುಖ್ಯಮಂತ್ರಿಗಳಿಗೆ ಬರೀ Pinch, Itch, Embarrass  ಮಾಡುವುದರಲ್ಲಿ ಕಾಲಹರಣ ಮಾಡಿದರೆ ಜನಸಾಮಾನ್ಯರು ಯಾರ ಮೊರೆ ಹೋಗಬೇಕು? ಎರಡು ವಾರಗಳಲ್ಲಿ ನಾವು ಕೇಳಿದ್ದು, ಕಂಡಿದ್ದು, ಓದಿದ್ದು ಬರೀ ಹಗರಣ, ಬೀದಿ ಜಗಳ, ಮೇಲಾಟ, ವೈಯಕ್ತಿಕ ಪ್ರತಿಷ್ಠೆಗಳ ಸುದ್ದಿಯನ್ನೇ. ಬಿಜೆಪಿಯವರು ದುಡ್ಡು ಹೊಡೆಯುವುದಕ್ಕೇ ಜನ್ಮತಳೆದಿದ್ದಾರೆ ಎಂದೇ ಅಂದುಕೊಂಡರೂ 224 ಸದಸ್ಯ ಬಲದ ಸದನದಲ್ಲಿ 100ಕ್ಕೂ ಹೆಚ್ಚಿರುವ ಪ್ರತಿಪಕ್ಷ ಶಾಸಕ ಮಹಾಶಯರಾದ ನಿಮ್ಮಗಳನ್ನು ಆರಿಸಿ ಕಳುಹಿಸಿರುವುದೇಕೆ? ‘Power tends to corrupt, and absolute power corrupts absolutely” ಎಂಬ ಲಾರ್ಡ್ ಆಕ್ಟನ್  ಮಾತಿನಂತೆ ಬಿಜೆಪಿಯನ್ನು ಅಧಿಕಾರವೆಂಬುದು ಭ್ರಷ್ಟಗೊಳಿಸುತ್ತಿರಬಹುದು. ಆದರೆ ಜನರ ಪರವಾಗಿ ನಿಲ್ಲದ ಪ್ರತಿಪಕ್ಷಗಳೂ ಅದಕ್ಕೆ ಹೊಣೆಗಾರರಲ್ಲವೆ? ಪ್ರತಿಪಕ್ಷಗಳಾದ ನಿಮಗೆ ಬಿಜೆಪಿಯನ್ನು ಧೈರ್ಯವಾಗಿ ಎದುರಿಸಲು ನಿಮ್ಮಗಳ Past record ಅಡ್ಡಬರುತ್ತಿದೆಯೇ?! ಅಳುಕು, ಅರೆಮನಸ್ಸಿನ ವಿರೋಧ, ಹೋರಾಟಗಳನ್ನು ನೀವು ಬಿಡದಿದ್ದರೆ ಇನ್ನೂ ನಾಲ್ಕು ವರ್ಷ ನಾವು ಕೆಟ್ಟ ಆಡಳಿತವನ್ನು ಸಹಿಸಿಕೊಳ್ಳಬೇಕಾದ ದೌರ್ಭಾಗ್ಯಕ್ಕೊಳಗಾಗಬೇಕಾಗುತ್ತದೆ. ಪ್ರತಿಪಕ್ಷಗಳು ಧ್ವನಿಯೆತ್ತಿ ದರೆ ಮಾತ್ರ ಹಾಲಿ ಸರಕಾರದಿಂದ ಸ್ವಲ್ಪವಾದರೂ ಉತ್ತಮ ಆಡಳಿತವನ್ನು ನಾವು ನಿರೀಕ್ಷಿಸಲು ಸಾಧ್ಯ. ದಕ್ಷಿಣ ಆಫ್ರಿಕಾದ ಭೆಕಿ ಸಿಬಿಯಾ ಏನಂಥ ಹೇಳಿದ್ದಾರೆ ಗೊತ್ತಾ?

There is no strong democracy which has no strong opposition.

ನಿಜ ಅಲ್ವಾ?

Stop character assassination! – ಸತ್ತ ಮೇಲೆ ಶೀಲದ ಸತ್ವಪರೀಕ್ಷೆ ಸರಿಯೇ?

ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ.

Uma Khurana, Padmapriya, Arushiಬಹುಶಃ ನೀವು ಮರೆತೇ ಬಿಟ್ಟಿರಬಹುದು ಉಮಾ ಖುರಾನಾ ಅವರನ್ನ.

ಆಕೆ ದಿಲ್ಲಿಯ ದರ್ಯಾಗಂಜ್‌ನಲ್ಲಿರುವ ಸರಕಾರಿ ಶಾಲೆಯಾದ “ಸರ್ವೋದಯ ಕನ್ಯಾ ವಿದ್ಯಾಲಯ”ದಲ್ಲಿ ಗಣಿತ ಪಾಠ ಹೇಳಿಕೊಡುತ್ತಿದ್ದರು. ಇತ್ತ 2007, ಆಗಸ್ಟ್ 30ರಂದು ದಿಲ್ಲಿಯ ಸ್ಥಳೀಯ ಖಾಸಗಿ ಹಿಂದಿ ಚಾನೆಲ್ಲಾದ “Live India”ದಲ್ಲಿ ಇದ್ದಕ್ಕಿದ್ದಂತೆಯೇ “Sting operation” ಪ್ರಸಾರವಾಗ ತೊಡಗಿತು. ರಶ್ಮಿ ಖನ್ನಾ ಎಂಬಾಕೆ ತೆರೆಯ ಮೇಲೆ ಕಾಣಿಸಿಕೊಂಡಳು. ಆಕೆ ಸರ್ವೋದಯ ಕನ್ಯಾ ವಿದ್ಯಾಲಯದ ವಿದ್ಯಾರ್ಥಿನಿ ಎಂದು ಒಕ್ಕಣೆ ಕೊಟ್ಟರು. ಅಶ್ಲೀಲ ಚಿತ್ರ, ವಿಡಿಯೋ ಚಿತ್ರಣಗಳನ್ನು ತೋರಿಸಿದರು. ಗಣಿತ ಶಿಕ್ಷಕಿಯಾದ ಉಮಾ ಖುರಾನಾ ಸರ್ವೋದಯ ಶಾಲೆಯ ವಿದ್ಯಾರ್ಥಿನಿಯರನ್ನು `ಮಾಂಸ ದಂಧೆ’ಗೆ ದೂಡುತ್ತಿದ್ದಾರೆ, ಪ್ರಚೋದಿಸುತ್ತಿದ್ದಾರೆ ಎಂದು ಪದೇ ಪದೆ ಪ್ರಸಾರ ಮಾಡಲಾಯಿತು. ಅದನ್ನು ನೋಡಿದ್ದೇ ತಡ ಆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದ ಪೋಷಕರ ಕೋಪ ನೆತ್ತಿಗೇರಿತು. ಎಲ್ಲಿ ತಮ್ಮ ಮಕ್ಕಳನ್ನೂ ವೇಶ್ಯಾವಾಟಿಕೆಗೆ ದೂಡಲಾಗಿದೆಯೋ ಎಂಬ ಆತಂಕವೂ ಕಾಡತೊಡಗಿತು. ಹೀಗೆ ಕೋಪ, ಆತಂಕಗಳೊಂದಿಗೆ ಶಾಲೆಗೆ ನುಗ್ಗಿದ ಪೋಷಕರು ಉಮಾ ಖುರಾನಾ ಅವರನ್ನು ಹಿಡಿದು ಎಳೆದಾಡತೊಡಗಿದರು. ಆಕೆ ಧರಿಸಿದ್ದ ಉಡುಪಿನ ಮೇಲ್ಭಾಗ ಸಂಪೂರ್ಣವಾಗಿ ಹರಿದು ಅರೆನಗ್ನಗೊಂಡರೂ ಅಮಾನುಷವಾಗಿ ಥಳಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಆ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಟಿವಿ ಚಾನೆಲ್‌ಗಳು ಉಮಾ ಖುರಾನಾಗೆ ಹಿಗ್ಗಾಮುಗ್ಗ ಥಳಿಸುವುದನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದವು. `Porn racket`, `Porn in School”ಎಂಬ ಶೀರ್ಷಿಕೆಗಳೊಂದಿಗೆ ರಾಷ್ಟ್ರೀಯ ಚಾನೆಲ್‌ಗಳೂ ಕೂಡ ಉಮಾ ಖುರಾನಾ ಅವರನ್ನು ಥಳಿಸುತ್ತಿರುವುದನ್ನು, ಬಟ್ಟೆ ಚಿಂದಿಯಾಗುವಂತೆ ಹೊಡೆಸಿಕೊಳ್ಳುತ್ತಿರುವುದನ್ನು ಪ್ರಸಾರ ಮಾಡತೊಡಗಿದವು. TV sting shows school teacher in ‘porn racket” ಎಂದು ಮರುದಿನ ಪತ್ರಿಕೆಗಳೂ ಬರೆದವು. ಅದರಲ್ಲೂ `ಹಿಂದೂಸ್ಥಾನ್ ಟೈಮ್ಸ್’ ಪತ್ರಿಕೆಯಂತೂ “Who is Uma Khurana?” ಎಂಬ ಶೀರ್ಷಿಕೆಯಡಿ “ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂಬ ಸ್ಟಿಂಗ್ ಆಪರೇಶನ್‌ನ ಬೆನ್ನಲ್ಲೇ ಸರ್ವೋದಯ ಕನ್ಯಾ ವಿದ್ಯಾಲಯದ ಗಣಿತ ಶಿಕ್ಷಕಿಯನ್ನು ಕೋಪೋದ್ರಿಕ್ತ ಪೋಷಕರು ಚೆನ್ನಾಗಿ ಥಳಿಸಿದ್ದಾರೆ. ಖುರಾನಾ ಅವರ ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಇಂತಹ ಕಪ್ಪುಚುಕ್ಕೆಗಳು ಕಾಣ ಸಿಗುತ್ತವೆ. ವಿವೇಕ್ ವಿಹಾರ್ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದ ಸಂದರ್ಭದಲ್ಲೂ ಖುರಾನಾ ಅವರನ್ನು ಒಮ್ಮೆ ಸಸ್ಪೆಂಡ್ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಕಾಪಿ ಮಾಡಲು ಬಿಟ್ಟು ವಿವಾದಕ್ಕೆ ಸಿಲುಕಿದ್ದರು” ಎಂದು ಬರೆಯಿತು. ಈ ಮಧ್ಯೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಯಾವುದೇ ಆಧಾರಗಳಿಲ್ಲದ್ದರೂ ಎಫ್‌ಐಆರ್ ದಾಖಲಿಸಿದರು. “ಅನೈತಿಕ ಚಟುವಟಿಕೆ ತಡೆ ಕಾಯಿದೆ”ಯಡಿ ಬಂಧಿಸಿದರು. ಶೀಲಾ ದಿಕ್ಷೀತ್ ಅವರ ಸರಕಾರವೂ ಶೀಲದ ವಿಷಯದಲ್ಲಿ ಭಾರೀ ಸಂವೇದನೆ ತೋರಿತು! ಮೊದಲಿಗೆ ಉಮಾ ಖುರಾನಾ ಅವರನ್ನು ಸಸ್ಪೆಂಡ್ ಮಾಡಿದ ದಿಲ್ಲಿ ಸರಕಾರ, ಮಾಧ್ಯಮಗಳ ಅಬ್ಬರದ ಪ್ರಚಾರದಿಂದ ಉತ್ತೇಜನಗೊಂಡು ಆಕೆಯನ್ನು ಕೆಲಸದಿಂದಲೂ ಕಿತ್ತುಹಾಕಿ ಬಿಟ್ಟಿತು. ಶಿಕ್ಷಕಿಯೇ ವಿದ್ಯಾರ್ಥಿನಿಯರನ್ನು ವೇಶ್ಯಾವಾಟಿಕೆ ದೂಡುತ್ತಿದ್ದಾಳೆ, ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ, ಬೆತ್ತಲೆ ಚಿತ್ರ ತೆಗೆದು ಬೆದರಿಸುತ್ತಿದ್ದಾಳೆ ಅಂದರೆ ಯಾರು ತಾನೇ ರೊಚ್ಚಿಗೇಳುವುದಿಲ್ಲ? ಆದರೆ ವಾಸ್ತವದಲ್ಲಿ ನಡೆದಿದ್ದೇನು?

`ಸ್ಟಿಂಗ್ ಆಪರೇಶನ್’ ಹಾಗೂ ಹಲ್ಲೆ ಪ್ರಕರಣ ನಡೆದು ಐದು ದಿನ ಕಳೆದರೂ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ, ಕಿರುಕುಳ ನೀಡಿದ್ದಾರೆ ಎಂದು ಯಾವ ವಿದ್ಯಾರ್ಥಿನಿಯೂ ಉಮಾ ಖುರಾನಾ ವಿರುದ್ಧ ದೂರು ನೀಡಲಿಲ್ಲ! ಪೋಷಕರ ಆರೋಪದ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ನೆಪ ಹೇಳಲಾರಂಭಿಸಿದ ಪೊಲೀಸರು ನುಣುಚಿಕೊಳ್ಳಲು ಯತ್ನಿಸಲಾರಂಭಿಸಿದರು. ಅಷ್ಟಕ್ಕೂ ದೋಷಾರೋಪಣೆ ಪಟ್ಟಿ ಸಿದ್ಧಪಡಿಸಲು ಯಾವ ಸಾಕ್ಷ್ಯಾಧಾರಗಳೂ ಇರಲಿಲ್ಲ. ಪ್ರಕರಣ ಕೋರ್ಟ್ ಮುಂದೆ ಬಂತು, ಸಾಕ್ಷ್ಯ ಒದಗಿಸುವಂತೆ ಪೊಲೀಸರು “ಲೈವ್ ಇಂಡಿಯಾ” ಚಾನೆಲ್ಲನ್ನೇ ಬೆನ್ನುಹತ್ತಬೇಕಾಯಿತು. ಆಗ ನೋಡಿ ಸತ್ಯ ಹೊರಬಿತ್ತು. ಉಮಾ ಖುರಾನಾ ಹಾಗೂ ವೀರೇಂದ್ರ ಅರೋರಾ ಎಂಬವರ ನಡುವೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿ, ಜಗಳಕ್ಕೆ ಕಾರಣವಾಗಿತ್ತು. ಆಕೆಯ ಮಾನ ಕಳೆಯಲು ಮುಂದಾದ ಅರೋರಾ, `ಲೈವ್ ಇಂಡಿಯಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಧೀರ್ ಚೌಧುರಿ ಜತೆ ಸೇರಿ ಯೋಜನೆಯೊಂದನ್ನು ರೂಪಿಸಿದರು. ಅದೇ ಸ್ಟಿಂಗ್ ಆಪರೇಶನ್. ಹಿಂದಿ ಪತ್ರಿಕೆಗಳಿಗೆ ಬರೆಯುತ್ತಿದ್ದ ರಶ್ಮಿ ಖನ್ನಾ ಎಂಬಾಕೆ ವಿದ್ಯಾರ್ಥಿನಿಯ ವೇಷ ತಳೆದರು. ಬಲಿಪಶುವಿನಂತೆ ಕ್ಯಾಮೆರಾ ಮುಂದೆ ನಟನೆ ಮಾಡಿದರು. ಚಾನೆಲ್‌ನ ವರದಿಗಾರ ಪ್ರಕಾಶ್ ಸಿಂಗ್ ಸುದ್ದಿ ಸೃಷ್ಟಿಸಿ, `ಸ್ಟಿಂಗ್ ಆಪರೇಶನ್’ ಹೆಸರಿನಲ್ಲಿ ಅಶ್ಲೀಲ ಚಿತ್ರ, ಚಿತ್ರಣಗಳೊಂದಿಗೆ ವರದಿ ಮಾಡಿದರು. ಆದರೆ 2007, ಸೆಪ್ಟೆಂಬರ್ 13ರಂದು ಪ್ರಕರಣದ ವಿಚಾರಣೆ ನಡೆಸಿ, ವಾದ-ಪ್ರತಿವಾದ ಆಲಿಸಿದ ವಿಭಾಗೀಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಂ.ಕೆ. ಶರ್ಮಾ ಹಾಗೂ ಸಂಜೀವ್ ಖನ್ನಾಗೆ ಪಿತೂರಿಯ ಅರಿವಾಯಿತು. ಉಮಾ ಖುರಾನಾ ಅವರನ್ನು ದೋಷಮುಕ್ತರೆಂದು ಘೋಷಿಸಿ ಬಿಡುಗಡೆಗೊಳಿಸಿದರು. ಅಷ್ಟೇ ಅಲ್ಲ, ವರದಿಗಾರ ಪ್ರಕಾಶ್ ಸಿಂಗ್ ಹಾಗೂ ರಶ್ಮಿ ಖನ್ನಾ ಅವರನ್ನು ಬಂಧಿಸುವಂತೆ ಆದೇಶ ನೀಡಿದರು. `ಲೈವ್ ಇಂಡಿಯಾ’ ಚಾನೆಲ್ಲನ್ನೇ ಮುಚ್ಚಿಹಾಕಿಸಿದರು. ಆದರೆ ಅಷ್ಟರೊಳಗೆ ಉಮಾ ಖುರಾರಾ ಮರ್ಯಾದೆ ಬೀದಿ ಪಾಲಾಗಿತ್ತು. ಅಂದು ಸ್ಟಿಂಗ್ ಆಪರೇಶನ್ ಪ್ರಸಾರವಾದಾಗ ಇಡೀ ದೇಶವೇ ದಿಗ್ಭ್ರಮೆಗೊಂಡಿತ್ತು, ರಾಷ್ಟ್ರವೇ ರೊಚ್ಚಿಗೆದ್ದಿತ್ತು. ನಾವೆಲ್ಲರೂ ನೈತಿಕಪ್ರಜ್ಞೆ ಅದಾಗತಾನೇ ಜಾಗೃತಗೊಂಡಂತೆ “Moral high ground” ಏರಿ ಬೋಧನೆಗಿಳಿದು ಬಿಟ್ಟಿದ್ದೆವು.

ಒಂದು ತಿಂಗಳ ಹಿಂದೆ ನೋಯ್ಡಾ ಪೊಲೀಸರು ಮಾಡಿದ್ದೂ ಇದೇ ಕೆಲಸವನ್ನು! ಮನೆ ಕೆಲಸದ ಹೇಮರಾಜ್ ಮಹಡಿ ಮೇಲೆಯೇ ಹೆಣವಾಗಿ ಬಿದ್ದಿದ್ದರೂ ಆರುಷಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ತೀರ್ಪುಕೊಟ್ಟರು. ಸತ್ಯಸಂಗತಿ ಗೊತ್ತಾದ ಕೂಡಲೇ ಪತ್ರಿಕಾಗೋಷ್ಠಿ ಕರೆದ ಪೊಲೀಸರು, ಅಪ್ಪ ಡಾ. ರಾಜೇಶ್ ತಲ್ವಾರ್ ಅವರೇ ಆರುಷಿಯ ಕೊಲೆಗಾರ. ಮನೆಯಲ್ಲಿ ಕೆಲಸಕ್ಕಿದ್ದ ಹೇಮ್‌ರಾಜ್ ಜತೆ ಆರುಷಿ ಅಸಭ್ಯ ಭಂಗಿಯಲ್ಲಿದ್ದಿದ್ದು ಕಣ್ಣಿಗೆ ಬಿದ್ದಿದ್ದೇ ಕೊಲೆಗೆ ಕಾರಣ ಎಂದು `ಅನೈತಿಕ’ ಸಂಬಂಧದ ಕಥೆ ಕಟ್ಟಿದರು. ಆ 14 ವರ್ಷದ ಹುಡುಗಿ ಭವಿಷ್ಯದ ಬಗ್ಗೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳೋ ಗೊತ್ತಿಲ್ಲ, ಆದರೆ ಅಕಾಲಿಕವಾಗಿ ಕೊಲೆಯಾಗಿ ಒಂದು ತಿಂಗಳು ಕಳೆದರೂ ಇಂದಿಗೂ ಚಾರಿತ್ರ್ಯವಧೆಗೆ ಗುರಿಯಾಗುತ್ತಿದ್ದಾಳೆ. ನಿಜವಾಗಿ ನಡೆದಿದ್ದೇನು ಎಂದು ಹೇಳಲು, ತನ್ನನ್ನು ಸಮರ್ಥಿಸಿಕೊಳ್ಳಲು ಆಕೆಯೇ ಇಲ್ಲದಿರುವಾಗ ಶೀಲದ ಮೇಲೆ ಶಂಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಜೀವನ ಏನು ಎಂಬುದು ಅರ್ಥವಾಗುವ ಮೊದಲೇ ಅಗಲಿರುವ ಒಬ್ಬ ಹೆಣ್ಣುಮಗಳ ಚಾರಿತ್ರ್ಯದ ಬಗ್ಗೆ ಏಕಿಂಥ ಅನುಮಾನ? ಅಕಸ್ಮಾತ್, ಆರುಷಿ ಅಸಭ್ಯವಾದ ಭಂಗಿಯಲ್ಲಿದ್ದಾಗ ಸಿಕ್ಕಿಬಿದ್ದಿದ್ದರೂ ಬೈದು ಬುದ್ಧಿಹೇಳುವ ಬದಲು, ಅದೊಂದೇ ಕಾರಣಕ್ಕೆ ಹೆತ್ತಮಗಳನ್ನೇ ಕೊಲೆಗೈಯ್ಯುವಷ್ಟು ಅಪ್ಪ ಕಟುನಾಗಿರುತ್ತಾನೆಯೇ? ಹದಿನಾಲ್ಕು ವರ್ಷದ ಹುಡುಗಿ 47 ವರ್ಷದ ಮುದುಕನ ಬಳಿ ಲೈಂಗಿಕ ಸಂಬಂಧ ಬೆಳೆಸಬೇಕಾದ ಅನಿವಾರ್ಯತೆಯಾದರೂ ಏನಿತ್ತು? ಆಕೆಗೆ ಅಷ್ಟೊಂದು ಆಸಕ್ತಿಯಿದ್ದರೆ ಆಕೆಯ ಸಹಪಾಠಿಗಳು, ಹುಡುಗರು ಸಿಗುತ್ತಿದ್ದರಲ್ಲವೆ? ಅಷ್ಟಕ್ಕೂ ಒಂದಿಬ್ಬರು ಸಹಪಾಠಿಗಳ ಜತೆ ಆಕೆ ವಿನಿಮಯ ಮಾಡಿಕೊಂಡಿರುವ ಪ್ರಚೋದಕ ಎಸ್‌ಎಂಎಸ್‌ಗಳನ್ನು ಮಾಧ್ಯಮಗಳೇ ಪ್ರಕಟಿಸಿವೆ. ಅದಿರಲಿ, ಡಾ.ತಲ್ವಾರ್ ಜತೆ ಡಾ. ದುರಾನಿ, ಹೇಮ್‌ರಾಜ್ ಜತೆ ಆರುಷಿಯ ಸಂಬಂಧ ಹೊಂದಿದ್ದರು ಎಂದು ಘೋಷಣೆ ಮಾಡಲು ಪೊಲೀಸರೇನು ಪ್ರತ್ಯಕ್ಷವಾಗಿ ಕಂಡಿದ್ದರೆ? ನಾವೇಕೆ ಎಲ್ಲದರಲ್ಲೂ ಅನೈತಿಕ ಸಂಬಂಧವನ್ನೇ ಹುಡುಕಲು ಪ್ರಯತ್ನಿಸುತ್ತೇವೆ?

ಮೊನ್ನೆ ಪ್ರಾಣಕಳೆದುಕೊಂಡ ನಮ್ಮ ರಾಜ್ಯದವರೇ ಆದ ಪದ್ಮಪ್ರಿಯಾ ಎಂಬ ನತದೃಷ್ಟ ಮಹಿಳೆಯ ಚಾರಿತ್ರ್ಯದ ಬಗ್ಗೆ ವರದಿಯಾದ ಕಟ್ಟುಕಥೆಗಳನ್ನು ಓದಿದಾಗ ಅಂತರಾತ್ಮ ಅನ್ನುವುದು ಇದ್ದವರಿಗೆ ಖಂಡಿತ ಅತೀವ ದುಃಖವಾಗಿರುತ್ತದೆ, ಮನಸ್ಸು ಘಾಸಿಗೊಂಡಿರುತ್ತದೆ. ಆಕೆ ಕಾಣೆಯಾಗಿದ್ದಾಳೆ, ಮನೆ ಬಿಟ್ಟು ತೆರಳಿದ್ದಾಳೆ ಎಂದ ಕೂಡಲೇ ನಮ್ಮ ಮನಸ್ಸಿಗೆ ಅನೈತಿಕ ಸಂಬಂಧವೇ ನೆನಪಾಗುವುದೇಕೆ? ನಮ್ಮಲ್ಲಿ ನೈತಿಕತೆ ಅನ್ನುವುದು ಉಳಿದಿಲ್ಲದಿರುವುದೇ ನಾವು ಹಾಗೆ ಯೋಚಿಸಲು ಕಾರಣ ಅಂತ ಅನ್ನಿಸುವುದಿಲ್ಲವೆ? ಒಂದು ಗಂಡು-ಹೆಣ್ಣು ಭಾಗಿಯಾಗಿರುವ ಘಟನೆಗಳು ಸಂಭವಿಸಿದಾಗ ನಮ್ಮ ಮನಸ್ಸೇಕೆ ಅನೈತಿಕ ಸಂಬಂಧದ ಕಡೆಯೇ ಸಾಗುತ್ತದೆ? ನಾವೇಕೆ ಹೆಣ್ಣನ್ನು ಅನುಮಾನದಿಂದಲೇ ನೋಡುತ್ತೇವೆ? ನಮ್ಮ ಕಣ್ಣುಗಳಲ್ಲಿ ಶಂಕೆಯೇ ಏಕೆ ತುಂಬಿ ಬಿಡುತ್ತದೆ? ಅಷ್ಟಕ್ಕೂ ದೈಹಿಕ ಸುಖ ಬೇಕಾಗಿದ್ದರೆ ಎರಡು ಮಕ್ಕಳಿಗೆ ಜನ್ಮಕೊಟ್ಟು, 35 ವರ್ಷ ತುಂಬಿ ಅರ್ಧ ಪ್ರಾಯ ಕಳೆಯುವವವರೆಗೂ ಪದ್ಮಪ್ರಿಯಾ ಕಾಯಬೇಕಾಗಿರಲಿಲ್ಲ. ಮಿಗಿಲಾಗಿ ಆಕೆಗೆ ದೈಹಿಕ ಸುಖವೇ ಮುಖ್ಯವಾಗಿದ್ದರೆ, ಅತುಲ್‌ರಾವ್ ಜತೆ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದರೆ ದಿಲ್ಲಿಗೆ ಪಲಾಯನ ಮಾಡಬೇಕಾದ ಅಗತ್ಯವೇನಿತ್ತು? ಗಂಡ ರಘುಪತಿ ಭಟ್ಟರ ಅನೈತಿಕ ಸಂಬಂಧದಿಂದ ಬೇಸತ್ತು ಆಕೆ ಅಂತಹ ನಿರ್ಧಾರಕ್ಕೆ ಬಂದಿರಬಹುದು. ಅಷ್ಟಕ್ಕೂ ಆಕೆ ನೀತಿಗೆಟ್ಟ ಹೆಣ್ಣಾಗಿದ್ದರೆ ತೆರೆಮರೆಯಲ್ಲಿ ಸುಖಪಡೆದುಕೊಳ್ಳುತ್ತಾ ಗಂಡನ ಅನೈತಿಕತೆಯನ್ನೂ ಸಹಿಸಿಕೊಂಡು ಸಂಬಂಧವನ್ನು ಕಾಪಾಡಿಕೊಳ್ಳಬಹುದಿತ್ತು. ಜಗತ್ತಿನ ಎಲ್ಲ ಗಂಡಾಂತರ, ಸಾಮಾಜಿಕ ಅವಹೇಳನದ ಭಯವನ್ನು ಮೈಮೇಲೆ ಎಳೆದುಕೊಂಡು ದಿಲ್ಲಿಗೆ ಓಡಿ ಹೋಗುವ ಅಗತ್ಯವೇನಿತ್ತು? ವ್ಯವಹಾರ ಚತುರೆಯಾದ ಆಕೆಗೆ ಲೋಕಜ್ಞಾನ ಇಲ್ಲದೇ ಇರುತ್ತಾ? ಇಷ್ಟೆಲ್ಲಾ ಅಪಾಯಗಳಿವೆ ಎಂದು ಗೊತ್ತಿದ್ದೂ ಆಕೆ ದಿಲ್ಲಿಗೆ ತೆರಳಿ ಕಾಲ್‌ಸೆಂಟರ್ ಸೇರಿ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೊರಟ್ಟಿದ್ದಳೆಂದರೆ ಆಕೆಯೊಳಗೆ ಬಲವಾದ ಯಾವುದೋ ನೋವು, ಗಂಡನ ಪ್ರವೃತ್ತಿಯ ಬಗ್ಗೆ ಅಸಹ್ಯ ಭಾವನೆ ಇದ್ದಿರಬಹುದಲ್ಲವೆ? ಇಲ್ಲದೇ ಹೋಗಿದ್ದರೆ ಯಾವ ತಾಯಿ ತಾನೇ ತನ್ನ ದೈಹಿಕ ಸುಖಕ್ಕಾಗಿ ಹೆತ್ತಮಕ್ಕಳನ್ನು ಬಿಟ್ಟು ಹೋಗುತ್ತಾಳೆ? ಅದಿರಲಿ, ವ್ಯಭಿಚಾರವೆಂಬುದು ಏಕೆ ಹೆಣ್ಣಿಗೆ ಮಾತ್ರ ಸಂಬಂಧಪಟ್ಟ ವಿಷಯವಾಗಿ ಬಿಡುತ್ತದೆ? ರಘುಪತಿ ಭಟ್ಟರ ಚಾರಿತ್ಯ್ರವನ್ನೇಕೆ ನಾವು ಸತ್ವಪರೀಕ್ಷೆಗೆ ಒಳಪಡಿಸುತ್ತಿಲ್ಲ? ಅವರೇನು ಶ್ರೀರಾಮಚಂದ್ರನೇ? ನಮ್ಮ ಸಮಾಜ ಸಂವೇದನೆಯನ್ನೇ ಕಳೆದುಕೊಂಡು ಬಿಟ್ಟಿದೆಯೇ?

ಅದು ಅಮೆರಿಕದಲ್ಲಿದ್ದ ಭಾರತದ ರಾಯಭಾರಿ ರೋನನ್ ಸೇನ್ ಅವರಿಂದ “Headless Chickens” ಎಂದು ಕರೆಸಿಕೊಂಡ ಪತ್ರಕರ್ತರಿರಬಹುದು, `ರಾಜಶೇಖರ್, ನಿಮ್ಮ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ, ನಿಮಗೇನನಿಸುತ್ತಿದೆ?!’ ಎಂದು ಕೇಳುವ ಟಿವಿ ಆಂಕರ್‌ಗಳಿರಬಹುದು ಅಥವಾ ಅವರು ಬರೆದಿದ್ದನ್ನು ಬಾಯಿ ಚಪ್ಪರಿಸಿಕೊಂಡು ಓದುವ ಹಾಗೂ ಬಾಯಿ ತೆರೆದುಕೊಂಡು ಟಿವಿ ನೋಡುವವರು ಆಗಿರಬಹುದು. ಅವರು ಪದ್ಮಪ್ರಿಯಾ ಅವರ ಚಾರಿತ್ರ್ಯಕ್ಕಿಂತ ಮೊದಲು ತಮ್ಮೊಳಗಿನ ಸಾಕ್ಷಿಪ್ರಜ್ಞೆಯನ್ನು ಪ್ರಶ್ನಿಸಿಕೊಳ್ಳುವುದು, ತಮ್ಮ ನೈತಿಕತೆಯನ್ನು ಪರಾಮರ್ಶಿಸಿಕೊಳ್ಳುವುದೊಳಿತು. ಇವತ್ತು ಮಾಧ್ಯಮದಲ್ಲಿರುವವರಿಗಾಗಲಿ, ಅವರು ರಸವತ್ತಾಗಿ ಬರೆದಿದ್ದನ್ನು ಜೊಲ್ಲು ಸುರಿಸಿಕೊಂಡು ಓದುವವರಿಗಾಗಲಿ ಏಕೆ ಇದೆಲ್ಲಾ ಅರ್ಥವಾಗುತ್ತಿಲ್ಲವೆಂದರೆ ಅವರು ಸ್ವತಃ ಇಂತಹ ಚಾರಿತ್ರ್ಯವಧೆಗೆ ಒಳಗಾಗಿಲ್ಲ. ಒಳಗಾಗಿದ್ದರೆ ಬೇರೆಯವರ ನೋವು ಅರ್ಥವಾಗುತ್ತಿತ್ತು. ವಾಸ್ತವದಲ್ಲಿ ನಮ್ಮೆಲ್ಲರಿಗೂ ಕಾಮದ ಬಗ್ಗೆ ತೀರದ ಕುತೂಹಲವಿದೆ. ಇಂತಹ ಕುತೂಹಲವನ್ನು ತಣಿಸಲು ತಿಳಿಗೇಡಿ ಮಾಧ್ಯಮಗಳು ಪ್ರಯತ್ನಿಸುತ್ತಿವೆ. ಆದರೆ ನಮ್ಮ ಕುತೂಹಲಕ್ಕೆ ಇಬ್ಬರು ಮಕ್ಕಳು ಅನಾಥವಾಗಬೇಕಾಗಿ ಬಂದಿದ್ದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಇವತ್ತು ವಿಷಯ ತಣ್ಣಗಾಗಿರಬಹುದು. ಮುಂದೊಂದು ದಿನ ಮರೆತಂತೆಯೂ ಭಾಸವಾಗಬಹುದು. ಆದರೆ ನೆನಪುಗಳು ಅಳಿಸಿ ಹೋಗುವುದಿಲ್ಲ. ಆಕೆ ಕಳಂಕಿತ ಹೆಣ್ಣಾಗಿಯೇ ಉಳಿದು ಬಿಡುತ್ತಾಳೆ. ಅಷ್ಟಕ್ಕೂ ತನ್ನನ್ನು ಸಮರ್ಥಿಸಿಕೊಳ್ಳಲು, ನೈಜ ಕಾರಣವನ್ನು ವಿವರಿಸಲು ಆಕೆಯೇ ಇಲ್ಲ. ಆಕೆಯ ಮಕ್ಕಳು `ಇಂಥಾಕೆಯ ಮಕ್ಕಳು’ ಎಂಬ ಕಳಂಕವನ್ನು ಜೀವನ ಪರ್ಯಂತ ಹೊರಬೇಕಾಗುತ್ತದೆ. ನೀವೇ ಹೇಳಿ, ಸತ್ತು ಚಿತೆಯೇರಿದ ಮೇಲೂ ನಾವೇಕೆ ಶೀಲದ ಸತ್ವಪರೀಕ್ಷೆ ಮಾಡುತ್ತಿದ್ದೇವೆ? ಅವರಿಬ್ಬರ ಮಧ್ಯೆ ಯಾವ ಸಂಬಂಧವಿತ್ತು ಎಂಬುದು ಅವರಿಬ್ಬರಿಗಷ್ಟೇ ಗೊತ್ತು. ಹಾಗಿರುವಾಗ ತಾವೇ ಇಣುಕಿ ನೋಡಿದಂತೆ, ಪ್ರತ್ಯಕ್ಷವಾಗಿ ಕಂಡಂತೆ ಬರೆಯುವುದು ಮತ್ತು ಹಾಗೆ ಬರೆದಿದ್ದನ್ನು ಸತ್ಯವೆಂಬಂತೆ ನಂಬುವುದು ಎಷ್ಟು ಸರಿ? ಪತ್ರಿಕೆಗಳಲ್ಲಿ ಬರೆಯುವವರು, ಬರೆದಿದ್ದನ್ನು ಓದುವ ಓದುಗರೆಲ್ಲರೂ ಸುಶಿಕ್ಷಿತರೇ. ಅನಕ್ಷರಸ್ಥರು ಪತ್ರಿಕೆ ಓದುವುದಿಲ್ಲ. ಸುಶಿಕ್ಷಿತರೇ ಹೀಗೆ ವರ್ತಿಸಿದರೆ ಸಮಾಜದ ಗತಿಯೇನು?

“ಅದು ಯಾವುದೇ ವ್ಯಕ್ತಿಯಾಗಿರಲಿ ಆರೋಪ ಸಾಬೀತಾಗುವವರೆಗೂ ನಿರಪರಾಧಿ” ಎಂದು ನಮ್ಮ ಕಾನೂನು ಹೇಳುತ್ತದೆ.

ಆದರೆ ರಘುಪತಿ ಭಟ್ಟರೆ, ನಿಮ್ಮ ಪತ್ನಿ ಪದ್ಮಪ್ರಿಯಾ ಅವರ ಬದುಕು ಮೊಟಕುಗೊಳ್ಳುವುದಕ್ಕೆ ಕಾರಣ ಯಾರು? ನೀವೋ ಅಥವಾ ಅತುಲ್‌ನೋ? ಅತುಲ್ ಕೆಟ್ಟವ್ಯಕ್ತಿಯೇ ಆಗಿರಬಹುದು. ಆದರೆ ನೀವು ಸರಿಯಿದ್ದಿದ್ದರೆ ನಿಮ್ಮ ಹೆಂಡತಿ ಅತುಲ್ ಸಹಾಯ ಕೇಳುವ ಅಗತ್ಯವೇಕೆ ಬರುತ್ತಿತ್ತು? ಯಾವ ಹೆಣ್ಣುತಾನೇ ಸೆಕ್ಸ್‌ಗಾಗಿ ಸಂಬಂಧವನ್ನೇ ಕಡಿದುಕೊಳ್ಳಲು ಮುಂದಾಗುತ್ತಾಳೆ? ಕಾಮತೃಷೆ ತೀರಿಸಿಕೊಳ್ಳುವ ಬಯಕೆ ಆಕೆಗಿದ್ದರೆ ವಿಚ್ಛೇದನೆ ನೀಡುವಂತೆ ನಿಮ್ಮನ್ನು ಅಂಗಲಾಚುತ್ತಿರಲಿಲ್ಲ. ನಿಮಗೆ ಹೆಂಡತಿ ಮೇಲೆ ಪ್ರೀತಿ ಉಳಿದಿಲ್ಲವೆಂದಾಗಿದ್ದರೆ ಸಂಬಂಧದ ಕೊಂಡಿಯೇಕೆ ಬೇಕಿತ್ತು? ಆಕೆಯ ಇಚ್ಛೆಯಂತೆ ಡೈವೋರ್ಸ್ ನೀಡಿದ್ದಿದ್ದರೆ ಕನಿಷ್ಠ ಒಂದು ಹೆಣ್ಣಿನ ಪ್ರಾಣವಾದರೂ ಉಳಿದಿರುತ್ತಿತ್ತಲ್ಲವೆ?

ಏನೇ ಹೇಳಿ, ಕೈಹಿಡಿದವಳನ್ನು ಪ್ರೀತಿಗೆ ಬದಲು ಸಂಬಂಧದಲ್ಲಿ ಕಟ್ಟಿಹಾಕುವ ರಘುಪತಿ ಭಟ್ಟರಂತಹ ಗಂಡಂದಿರಿರುವವರೆಗೂ, `ಶಾಸಕರ ಪತ್ನಿಗೇ ರಕ್ಷಣೆ ಇಲ್ಲವೆಂದಾದರೆ ಸಾಮಾನ್ಯರ ಗತಿಯೇನು?’ ಎಂದು ಹೇಳಿಕೆ ನೀಡುವ ಬಾಯಿಬಡುಕಿ ಪ್ರಮೀಳಾ ನೇಸರ್ಗಿ, ಖರ್ಗೆಯವರಂತಹ ನಿರ್ಭಾವುಕ ಮನಸ್ಸುಗಳು ಇರುವವರೆಗೂ ಸಮಾಜ ಹೆಣ್ಣಿನ ಶೀಲದ ಸತ್ವಪರೀಕ್ಷೆ ನಡೆಸುವುದನ್ನು ನಿಲ್ಲಿಸುವುದಿಲ್ಲ. ಛೇ.

Wisdom from The Podfather – Steven Jobs – ಸ್ಟೇ ಹಂಗ್ರಿ, ಸ್ಟೇ ಫೂಲಿಷ್ ಎನ್ನುತ್ತಾನೆ ಜಾಬ್ಸ್ !

ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಸಾಧನೆ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!
Steven Paul Jobs, Apple Inc founderಐಮ್ಯಾಕ್, ಐ ಪಾಡ್, ಐ ಟ್ಯೂನ್ಸ್, ಐ ವರ್ಕ್, ಐ ಲೈಫ್, ಐ ಫೋನ್.

ಇವುಗಳಲ್ಲಷ್ಟೇ ಅಲ್ಲ, ಆತನ ಬಗ್ಗೆ ಬರೆಯಲಾಗಿರುವ ಅನಧಿಕೃತ ಆತ್ಮಚರಿತ್ರೆಯಾದ “ಐಕಾನ್”ನಲ್ಲೂ “ಐ” ಇದೆ! ಅವನನ್ನು ಟೀಕಾಕಾರರು “Ego Maniac” ಎಂದು ಜರಿದರೂ ಆತನಲ್ಲಿರುವುದು “ನಾನು” ಎಂಬ “ಅಹಂ” ಅಲ್ಲ, ನಾನೇನಾದರೂ ವಿಭಿನ್ನವಾದುದನ್ನು ಮಾಡಬೇಕೆಂಬ ಹಂಬಲ. ಇಂತಹ ಹಂಬಲವನ್ನು ಕೆಲವರು ಆಡಿಕೊಂಡಿದ್ದೂ ಇದೆ. ಸ್ಟೀವ್ ಜಾಬ್ಸ್ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ, ಆದರೆ ಬೇರೆಯವರ ತಲೆಕೆಡಿಸಿ ಬಿಡುತ್ತಾನೆ. ಅದಕ್ಕಾಗಿಯೇ “Reality Distortion” ಎಂದು ದೂರುತ್ತಾರೆ. ಆದರೇನಂತೆ ಹುಚ್ಚುಭ್ರಮೆ ಎನಿಸುವುದನ್ನೂ ವಾಸ್ತವಕ್ಕಿಳಿಸುವ ಆತನನ್ನು ನಿರ್ಲಕ್ಷಿಸಲು ಜಗತ್ತಿನಲ್ಲಿ ಯಾರಿಗೂ ಸಾಧ್ಯವಿಲ್ಲ.

“Think Different”
The people who are Crazy [^] enough to think they can change the world are the ones who do!!

ಈ ರೀತಿ ಸಾಗುವ “ಆಪಲ್” ಕಂಪನಿಯ ಜಾಹೀರಾತು ಆತನ ಮನೋಬಲದ ಪ್ರತಿಬಿಂಬವೇ ಆಗಿದೆ. 1997ರಲ್ಲಿ ಆತ ರೂಪಿಸಿದ `ಐ-ಮ್ಯಾಕ್’ ಕಂಪ್ಯೂಟರ್ ಜಗತ್ತಿನ ಅತ್ಯಂತ ಹಗುರವಾದ ಪಿಸಿ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, 2001ರಲ್ಲಿ ಹೊರತಂದ “ಐ-ಪಾಡ್” ಸಂಗೀತವನ್ನು ಆಲಿಸುವ ಪ್ರಕ್ರಿಯೆಗೇ ಹೊಸ ಅರ್ಥ ನೀಡಿತು. ಇದುವರೆಗೂ 11 ಕೋಟಿ ಐ-ಪಾಡ್‌ಗಳು ಖರ್ಚಾಗಿವೆ. ಅದರ ಬೆನ್ನಲ್ಲೇ ಪ್ರಾರಂಭವಾದ “ಐ-ಟ್ಯೂನ್ಸ್ ಸ್ಟೋರ್”ಗಳಿಂದ 400 ಕೋಟಿ ಹಾಡುಗಳು ಖರೀದಿಯಾಗಿವೆ!! 2007ರಲ್ಲಿ ದೂರಸಂಪರ್ಕ ಕ್ಷೇತ್ರಕ್ಕೂ ಕಾಲಿರಿಸಿದ ಆತ ಹೊರತಂದ “ಐ-ಫೋನ್”(ಮೊಬೈಲ್) ಖರೀದಿಸಲು ಅಮೆರಿಕನ್ನರು ಹಿಂದಿನ ದಿನದಿಂದಲೇ ಸಾಲುಗಟ್ಟಿ ನಿಂತಿದ್ದರು. ಅಂದು 599 ಡಾಲರ್‌ಗೆ ನೀಡಿದ್ದ ಫೋನ್‌ಗಳನ್ನು ಮೊನ್ನೆ ಜೂನ್ 10ರಂದು 199 ಡಾಲರ್‌ಗೆ ಮಾರುಕಟ್ಟೆಗೆ ಬಿಟ್ಟಿದ್ದಾನೆ. ಭಾರತದಲ್ಲೂ ಅತ್ಯಂತ ಕಾತರದಿಂದ ಕಾಯುತ್ತಿರುವ ಮೊಬೈಲ್ ಎಂದರೆ ಐ-ಫೋನ್. ಬರುವ ಆಗಸ್ಟ್‌ನಲ್ಲಿ ಐ-ಫೋನ್ ಭಾರತದಲ್ಲೂ ಬಿಡುಗಡೆಯಾಗಲಿದ್ದು ನಮ್ಮಲ್ಲಿನ ಮುಂಚೂಣಿ ಮೊಬೈಲ್ ಕಂಪನಿಗಳಾದ ನೋಕಿಯಾ, ಸೋನಿ ಎರಿಕ್‌ಸನ್ ಹಾಗೂ ಮೋಟೊರೊಲಾ ಕಂಪನಿಗಳು ಮಳೆಗಾಲದಲ್ಲೂ ಬೆವರಲು ಆರಂಭಿಸಿವೆ!

ಇದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಾರಂಭದಲ್ಲಿ ದುಬಾರಿ ಎನಿಸಿದ್ದ ಐ-ಪೋನ್‌ನ ಬೆಲೆಯನ್ನು ಮೂರನೇ ಎರಡು ಭಾಗದಷ್ಟು ಕಡಿತಗೊಳಿಸಿರುವುದರಿಂದ ಸಾಮಾನ್ಯ ಜನರೂ ಖರೀದಿಸಬಹುದಾಗಿದೆ. “3ಜಿ ನೆಟ್‌ವರ್ಕ್”ನಿಂದಾಗಿ ಇಂಟರ್‌ನೆಟ್ ಅನ್ನು ಜಾಲಾಡುವುದು ತೀರಾ ಸರಳ ಹಾಗೂ ಸುಲಭವಾಗಲಿದೆ. ಐ-ಫೋನ್‌ನಲ್ಲೇ ಐ-ಪಾಡ್ ಕೂಡ ಇರುವುದರಿಂದ ಸಂಗೀತವನ್ನು ಉತ್ಕೃಷ್ಟ ಸ್ತರದಲ್ಲಿ ಕೇಳಬಹುದು. ಇಂತಹ ಸಾಧನೆಯನ್ನು ಗುರುತಿಸಿರುವ ಖ್ಯಾತ “ಬ್ಲೆಂಡರ್” ಮ್ಯಾಗಝಿನ್, ಜಾಬ್ಸ್ ಅವರನ್ನು ಪ್ರಪಂಚದ ಅತ್ಯಂತ ಪ್ರಭಾವಿ ವ್ಯಕ್ತಿ ಎಂದಿದೆ. ಎಪ್ಪತ್ತೈದು ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿ ಅಂತಹ ಬಿರುದು ನೀಡಿದೆ.  ‘The undisputed King [^] of the online music revolution’, ‘Technology trendsetter’ ಎಂದು ಮ್ಯಾಗಝಿನ್‌ನ ಸಂಪಾದಕ ಕ್ರೇಗ್ ಮಾರ್ಕ್ಸ್ ಶ್ಲಾಘಿಸಿದ್ದಾರೆ. “MySpace”ನ ಸ್ಥಾಪಕ ಟಾಮ್ ಆಂಡರ್‌ಸನ್, “YouTube” ಸೃಷ್ಟಿಕರ್ತರಾದ ಚಾಡ್ ಹರ್ಲೆ ಮತ್ತು ಸ್ಟೀವ್ ಚೆನ್ ಅವರು ನಂತರದ ಸ್ಥಾನದಲ್ಲಿದ್ದಾರೆ ಎಂದರೆ ಜಾಬ್ಸ್ ಎಂತಹ ಸಾಧಕನಿರಬಹುದು?!

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ
ಬತ್ತಿತೆನ್ನೊಳು ಸತ್ವದೂಟೆ ಎನಬೇಡ
ಮೃತ್ಯುವೆನ್ನುವುದೊಂದು ತೆರೆ ಇಳಿತ..!
ತೆರೆ ಏರು, ಮತ್ತೆ ತೋರ್ಪುದು ನಾಳೆ ಮಂಕುತಿಮ್ಮ…

ಇಂದು ಸ್ಟೀವ್ ಜಾಬ್ಸ್ ಹೆಸರು ಕೇಳಿದರೆ ಜಗತ್ತೇ ರೋಮಾಂಚನಗೊಳ್ಳುತ್ತಿರಬಹುದು. ಆದರೆ ಆತನ ಬದುಕಿನ ಪುಟಗಳನ್ನು ತಿರುವುತ್ತಾ ಹೋದರೆ ಈ ಮೇಲಿನ ಡಿವಿಜಿ ಕವನ ನೆನಪಾಗುತ್ತದೆ. ಅವನ ಹುಟ್ಟೇ ಒಂದು ದುರಂತ. ಅವಿವಾಹಿತಳಾಗಿದ್ದ ಅಮ್ಮ ಕಾಲೇಜಿಗೆ ಹೋಗುತ್ತಿರುವಾಗಲೇ ಗರ್ಭ ಧರಿಸಿದ್ದಳು. ಹಾಗಾಗಿ ಮಗು ಹೊಟ್ಟೆಯಲ್ಲಿರುವಾಗಲೇ ದತ್ತು ನೀಡುವ ನಿರ್ಧಾರಕ್ಕೆ ಬಂದಳು. ಆದರೆ ಆಕೆಯದ್ದೊಂದು ಪೂರ್ವ ಷರತ್ತಿತ್ತು. ಮಗುವನ್ನು ದತ್ತು ಸ್ವೀಕರಿಸುವ ಪೋಷಕರಿಬ್ಬರೂ ಕಾಲೇಜು ಪದವೀಧರರಾಗಿರಬೇಕು. ವಿದ್ಯಾವಂತ ಪೋಷಕರು ದೊರೆತರೆ ತನ್ನ ಮಗುವನ್ನೂ ಕಾಲೇಜು ವ್ಯಾಸಂಗ ಮಾಡಿಸುತ್ತಾರೆ ಎಂಬ ನಂಬಿಕೆ ಆಕೆಯದ್ದು. ಪದವೀಧರ ದಂಪತಿಯೊಬ್ಬರು ಮಗುವನ್ನು ದತ್ತು ಸ್ವೀಕರಿಸಲು ಮುಂದೆ ಬಂದರು. ಆದರೆ ಅವರಿಗೆ ಬೇಕಿದ್ದು ಹೆಣ್ಣು ಮಗು. ಹುಟ್ಟಿದ್ದು ಗಂಡುಮಗು. ಹುಟ್ಟಿದ ಕ್ಷಣದಲ್ಲೇ ಮಗು ಅನಾಥವಾಯಿತು. ಆದರೇನಂತೆ ಜಸ್ಟಿನ್ ಹಾಗೂ ಕ್ಲಾರಾ ಜಾಬ್ಸ್ ಎಂಬ ಕ್ಯಾಲಿಫೋರ್ನಿಯಾದ ದಂಪತಿಯೊಬ್ಬರು ಮಗುವನ್ನು ದತ್ತು ತೆಗೆದುಕೊಳ್ಳಲು ಮುಂದಾದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ದತ್ತು ನೀಡಲು ಒಪ್ಪಲಿಲ್ಲ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿದ ಜಾಬ್ಸ್ ದಂಪತಿಗಳು ಮಗುವನ್ನು ದತ್ತು ತೆಗೆದುಕೊಂಡು ಸ್ಟೀವನ್ ಪೌಲ್ ಜಾಬ್ಸ್ ಎಂಬ ಹೆಸರಿಟ್ಟರು. ಹದಿನೇಳನೇ ವರ್ಷಕ್ಕೆ ಕಾಲೇಜು ಮೆಟ್ಟಿಲು ತುಳಿದ ಸ್ಟೀವ್ ಜಾಬ್ಸ್‌ಗೆ ಓದು ರುಚಿಸಲಿಲ್ಲ. ಕಾಲೇಜನ್ನು ಅರ್ಧಕ್ಕೇ ಬಿಟ್ಟ ಆತನಿಗೆ ಒಪ್ಪೊತ್ತಿನ ಊಟಕ್ಕೂ ಕುತ್ತು ಬಂತು. ಆದರೇನಂತೆ ಭಾನುವಾರ ಮಾತ್ರ `ಫುಲ್ ಮೀಲ್ಸ್’ ದೊರೆಯುತ್ತಿತ್ತು! ಕಾಲೇಜಿನಿಂದ 7 ಕಿ.ಮೀ. ದೂರದಲ್ಲಿದ್ದ ಹರೇ ಕೃಷ್ಣ ದೇವಾಲಯದಲ್ಲಿ ಪ್ರತಿ ಭಾನುವಾರ ಉಚಿತ ಊಟ ನೀಡಲಾಗುತ್ತಿತ್ತು. ಆ ಊಟಕ್ಕಾಗಿ 7 ಕಿ.ಮೀ. ನಡೆದು ಹೋಗುತ್ತಿದ್ದ. ಆತ ಹೋಗಿದ್ದು ಹೊಟ್ಟೆತುಂಬಿಸುವ ಊಟಕ್ಕಾದರೂ ಊಟಕ್ಕಿಂತ ಆಧ್ಯಾತ್ಮ ರುಚಿಸತೊಡಗಿತು. ಆಧ್ಯಾತ್ಮವನ್ನು ಅರಸಿಕೊಂಡು ಭಾರತಕ್ಕೂ ಭೇಟಿ ನೀಡಿದ. ಭಾರತದಿಂದ ವಾಪಸ್ಸಾದ ಜಾಬ್ಸ್, ಅಟಾರಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸ್ಟೀವ್ ವೋಝ್ನಿಯಾಕ್ ಪರಿಚಯವಾಗಿದ್ದು ಅಲ್ಲೇ. ಆತ ಮಹಾಬುದ್ಧಿವಂತ. ತಾಂತ್ರಿಕ ವಿಷಯಗಳಲ್ಲಿ ಪರಿಣತ. ಇತ್ತ ಜಾಬ್ಸ್ ಕೂಡ ತಾಂತ್ರಿಕ ವಿಷಯದಲ್ಲಿ ಉತ್ತಮ ಜ್ಞಾನ ಹೊಂದಿದ್ದರೂ ಮಾರ್ಕೆಟಿಂಗ್‌ನಲ್ಲಿ ಪಂಟ.
ಇವರಿಬ್ಬರೂ ಸೇರಿ 1976, ಏಪ್ರಿಲ್ 1ರಂದು ಆರಂಭಿಸಿದ್ದೇ “ಆಪಲ್ ಕಂಪ್ಯೂಟರ್”!

ಆಗ ಜಾಬ್ಸ್‌ಗೆ ಕೇವಲ 21 ವರ್ಷ. ಆಪಲ್ ಪ್ರಾರಂಭವಾಗಿದ್ದು ಜಾಬ್ಸ್‌ನ ಮನೆಯ ಗ್ಯಾರೇಜ್‌ನಲ್ಲಿ. ಆದರೇನಂತೆ ಯಶಸ್ಸು ಅರಸಿಕೊಂಡು ಬಂತು. ಆಪಲ್ ರೂಪಿಸಿದ ಆಪಲ್-1, ಆಪಲ್-2 ಕಂಪ್ಯೂಟರ್‌ಗಳು ಕಂಪನಿಗೆ ಒಳ್ಳೆಯ ಹೆಸರು, ಹಣ ತಂದುಕೊಟ್ಟವು. ಈ ಮಧ್ಯೆ 1981ರಲ್ಲಿ ನಡೆದ ವಿಮಾನ ದುರ್ಘಟನೆಯೊಂದರಲ್ಲಿ ವೋಝ್ನಿಯಾಕ್ ಗಾಯಗೊಂಡರು. ಹಾಗಾಗಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ(ಸಿಇಓ) ಜಾಬ್ಸ್ ಜವಾಬ್ದಾರಿ ವಹಿಸಿಕೊಂಡರು. ಹಾಗೆ ಅಧಿಕಾರ ವಹಿಸಿಕೊಂಡ ಜಾಬ್ಸ್‌ಗೆ ಕಂಪನಿಯನ್ನು ಇನ್ನೂ ವಿಸ್ತಾರಗೊಳಿಸಲು, ಯಶಸ್ಸಿನತ್ತ ಕೊಂಡೊಯ್ಯಲು ಸೂಕ್ತ ವ್ಯಕ್ತಿಯೊಬ್ಬರ ಸಾಥ್ ಬೇಕೆನಿಸತೊಡಗಿತು. ಆಗ ಕಣ್ಣಿಗೆ ಕಂಡಿದ್ದೇ ಪೆಪ್ಸಿ ಕಂಪನಿಯ ಸಿಇಓ ಜಾನ್ ಸ್ಕೂಲಿ. ಆದರೆ ಪೆಪ್ಸಿಯಂತಹ ಕಂಪನಿಯನ್ನು ಬಿಟ್ಟು ಯಾರು ತಾನೇ ಆಪಲ್‌ನಂತಹ ಅದಾಗತಾನೇ ಹೊರಹೊಮ್ಮುತ್ತಿರುವ ಕಂಪನಿಗೆ ಬರುತ್ತಾರೆ? ಹಾಗಂತ ಜಾಬ್ಸ್ ಸುಮ್ಮನಾಗಲಿಲ್ಲ. ಸ್ಕೂಲಿಯನ್ನು ಮನವೊಲಿಸಲು ಮುಂದಾದ. Do you want to spend the rest of your life selling sugared Water [^], or do you want a chance to change the world? ಎಂಬ ಜಾಬ್ಸ್‌ನ ಮಾತುಗಳು ಸ್ಕೂಲಿಯನ್ನು ಯಾವ ರೀತಿ ಪ್ರಚೋದಿಸಿದವೆಂದರೆ ಪೆಪ್ಸಿ ಕಂಪನಿ ಬಿಟ್ಟ ಸ್ಕೂಲಿ 1983ರಲ್ಲಿ ಆಪಲ್ ಸೇರಿಬಿಟ್ಟ. 1984ರಲ್ಲಿ ಆಪಲ್ ಕಂಪನಿ ಅತ್ಯಂತ ಆಕರ್ಷಕ ಟಿವಿ ಜಾಹೀರಾತೊಂದನ್ನು ಹೊರತಂದಿತು. ಇದಾಗಿ ಎರಡು ದಿನಗಳಲ್ಲೇ ಅಂದರೆ 1984, ಜನವರಿ 24ರಂದು ನಡೆದ ಆಪಲ್ ಕಂಪನಿಯ ಷೇರುದಾರರ ಸಭೆಯಲ್ಲಿ ಜಾಬ್ಸ್ `ಮ್ಯಾಕಿಂತೋಷ್’ (ಪಿಸಿ) ಕಂಪ್ಯೂಟರನ್ನು ಅನಾವರಣಗೊಳಿಸಿದರು. ನಾವು ಬಳಸುವ `ಮೌಸ್’ ಮೊದಲಿಗೆ ಬಳಕೆಗೆ ಬಂದಿದ್ದೇ ಮ್ಯಾಕಿಂತೋಷ್‌ನೊಂದಿಗೆ! ಇಂತಹ ನವೀನ ಸಂಶೋಧನೆಯಿಂದಾಗಿ ಆಪಲ್ 2 ಶತಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿತು. ಈ ನಡುವೆ ಜಾಬ್ಸ್ ಮತ್ತು ಸ್ಕೂಲಿ ನಡುವೆ ಭಿನ್ನಾಭಿಪ್ರಾಯ ಕಾಣಿಸತೊಡಗಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಆಡಳಿತ ಮಂಡಳಿಯ ಸದಸ್ಯರು ಸ್ಕೂಲಿ ಪರ ನಿಂತ ಕಾರಣ ಕಂಪನಿಯ ಸ್ಥಾಪಕನಾದ ಜಾಬ್ಸ್‌ನನ್ನೇ ಹೊರಹಾಕಲಾಯಿತು!

ಅವನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಸಿಟ್ಟಿಗೆದ್ದು ಯಾರನ್ನಾದರೂ ಕೊಲ್ಲುತ್ತಿದ್ದರು, ಇಲ್ಲವೇ ಹುಚ್ಚರಾಗುತ್ತಿದ್ದರು. ಆದರೆ ಅಂತಹ ಆಘಾತದಿಂದಲೂ ಸಾವರಿಸಿಕೊಂಡ ಜಾಬ್ಸ್ “ನೆಕ್ಸ್ಟ್”ಎಂಬ ಕಂಪನಿ ಪ್ರಾರಂಭಿಸಿದ. ಅಲ್ಲದೆ ಜಾರ್ಜ್ ಲುಕಾಸ್ ಎಂಬುವವರಿಂದ “ಪಿಕ್ಸರ್” ಎಂಬ ಡಿಜಿಟಲ್ ಗ್ರಾಫಿಕ್ಸ್ ಕಂಪನಿಯನ್ನೂ ಖರೀದಿ ಮಾಡಿದ. ಆ ಕಂಪನಿ Toy Story ಎಂಬ ಆನಿಮೇಷನ್ ಚಿತ್ರವನ್ನು ರೂಪಿಸಿತು. ಅದು ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡಿತು. ಕಂಪನಿಗೂ ಒಳ್ಳೆಯ ಹೆಸರು ಬಂತು. ಇದನ್ನು ಗಮನಿಸಿದ ವಿಶ್ವವಿಖ್ಯಾತ `ಡಿಸ್ನಿ’ ಕಂಪನಿ 7.4 ಶತಕೋಟಿ ಡಾಲರ್ ಕೊಟ್ಟು `ಪಿಕ್ಸರ್’ ಅನ್ನೇ ಖರೀದಿ ಮಾಡಿತು. ಸ್ಟೀವ್ ಜಾಬ್ಸ್‌ನ ಗ್ರಹಗತಿಯೇ ಬದಲಾಯಿತು. ಇತ್ತ ಜಾಬ್ಸ್ ಅನುಪಸ್ಥಿತಿಯಲ್ಲಿ ಐಬಿಎಂ, ಮೈಕ್ರೊಸಾಫ್ಟ್‌ಗಳ ಜತೆ ಸ್ಪರ್ಧೆ ಮಾಡಲಾಗದೆ, ಹೊಸ ಹೊಸ `ಆಪರೇಟಿಂಗ್ ಸಿಸ್ಟಮ್’ಗಳನ್ನು ಹೊರತರಲಾಗದೆ ಆಪಲ್ ಕಂಪನಿ ನಷ್ಟ ಅನುಭವಿಸಲಾರಂಭಿಸಿತು. ಮತ್ತೆ ಆಪಲ್ ತಲೆಯೆತ್ತಬೇಕಾದರೆ ಜಾಬ್ಸ್‌ನ `ನೆಕ್ಸ್ಟ್’ ಕಂಪನಿಯ ಜತೆ ಕೈಜೋಡಿಸುವುದು ಮಾತ್ರವಲ್ಲ, ಜಾಬ್ಸ್‌ನ ನಾಯಕತ್ವದ ಅಗತ್ಯವೂ ಅನಿವಾರ್ಯವಾಯಿತು!! 1997ರಲ್ಲಿ ನೆಕ್ಸ್ಟ್ ಕಂಪನಿಯನ್ನು ಖರೀದಿ ಮಾಡಿದ ಆಪಲ್, ಜಾಬ್ಸ್ ಅವರನ್ನೇ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿತು!!

ಆಪಲ್‌ಗೆ ಹಿಂದಿರುಗಿದ ಜಾಬ್ಸ್ “Mac OS X” ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಹೊರತರುವ ಮೂಲಕ ಕಂಪನಿಗೆ ಮತ್ತೆ ಜೀವ ತುಂಬಲಾರಂಭಿಸಿದ. ಆನಂತರ ಐಮ್ಯಾಕ್ ಬಂತು, ಐಪಾಡ್, ಐಟ್ಯೂನ್‌ನೊಂದಿಗೆ ಸಂಗೀತ ಕ್ಷೇತ್ರಕ್ಕೂ ಕಾಲಿರಿಸಿದ. ಅಲ್ಲದೆ ಈಚೆಗೆ ಆತ ಹೊರತಂದ ಐಫೋನ್ ವರ್ಷ ತುಂಬುವುದಕ್ಕೂ ಮೊದಲೇ ಜಗತ್ತಿನ ಮೆಚ್ಚುಗೆ ಗಳಿಸಿದೆ, ಮೊಬೈಲ್ ಕ್ಷೇತ್ರಕ್ಕೆ ಹೊಸ ಭಾಷ್ಯ ಬರೆದಿದೆ. ಇವತ್ತು ಜಾಬ್ಸ್ ಮಾಡುವ ಭಾಷಣಗಳು “Stevenotes” ಎಂದೇ ಪ್ರಸಿದ್ಧಿಯಾಗುತ್ತಿವೆ. ಆತ ಕಾಲೇಜು ಓದದಿದ್ದರೇನಂತೆ, ಜಗತ್ತಿನ ಅತ್ಯುತ್ತಮ ಕಾಲೇಜುಗಳು ಜಾಬ್ಸ್‌ನನ್ನು ಉಪನ್ಯಾಸಕ್ಕಾಗಿ ಕರೆಯುತ್ತಿವೆ. ಅಂತಹ ಕಾಲೇಜುಗಳಲ್ಲಿ ವಿಶ್ವವಿಖ್ಯಾತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವೂ ಒಂದು. 2005, ಜೂನ್ 12ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ನಿಂತ ಜಾಬ್ಸ್, “ಜಗತ್ತಿನ ಅತ್ಯುತ್ತಮ ವಿವಿಗಳಲ್ಲಿ ಒಂದಾದ ಸ್ಟ್ಯಾನ್‌ಫೋರ್ಡ್‌ನ ವಿದ್ಯಾರ್ಥಿಗಳಾದ ನಿಮ್ಮನ್ನುದ್ದೇಶಿಸಿ ಮಾತನಾಡುವ ಅವಕಾಶ ದೊರೆತಿರುವುದು ನನಗೆ ಸಂದ ದೊಡ್ಡ ಗೌರವ. ಆದರೆ ನಾನೆಂದೂ ಕಾಲೇಜಿನಿಂದ ಪದವಿ ಪಡೆದು ಹೊರಹೋದವನಲ್ಲ. ಇಂದು ನಾನು ನಿಮಗೆ ನನ್ನ ಜೀವನದ ಮೂರು ಕಥೆಗಳನ್ನು ಹೇಳಲು ಬಯಸುತ್ತೇನೆ. ಅವುಗಳಲ್ಲಿ ವಿಶೇಷವೇನಿಲ್ಲ. ಬರೀ ಮೂರು ಕಥೆಗಳಷ್ಟೆ….”

ಅಂದು ಆತ ಹೇಳಿದ ಮೊದಲ ಕಥೆ ಆತನ ದತ್ತು ಸ್ವೀಕಾರ ಹಾಗೂ ಕಾಲೇಜಿಗೆ ತಿಲಾಂಜಲಿ ಇತ್ತ ಘಟನೆಯ ಬಗ್ಗೆ. ಎರಡನೆಯದ್ದು ತಾನೇ ಪ್ರಾರಂಭಿಸಿದ ಕಂಪನಿಯಿಂದ ತನ್ನನ್ನೇ ಕಿತ್ತೊಗೆದಿದ್ದು ಹಾಗೂ ಅದನ್ನು ಸವಾಲಿನಂತೆ ತೆಗೆದುಕೊಂಡು ಪರಿಸ್ಥಿತಿಯನ್ನು ಎದುರಿಸಿದ ಘಟನೆಗೆ ಸಂಬಂಧಿಸಿದ್ದು. ಮೂರನೆಯದ್ದನ್ನು ಅವರ ಮಾತಿನಲ್ಲೇ ಕೇಳೋಣ.

“ಇದೇ ನಿನ್ನ ಕೊನೆಯ ದಿನ ಎಂಬಂತೆ ನೀನು ಪ್ರತಿದಿನವನ್ನೂ ಕಳೆದರೆ ಒಂದಲ್ಲ ಒಂದು ದಿನ ಅದು ನಿಜವಾಗುತ್ತದೆ ಎಂಬ ಯಾರೋ ಹೇಳಿದ್ದ ಮಾತು 17 ವರ್ಷದವನಾಗಿದ್ದ ನನ್ನ ಮೇಲೆ ತುಂಬಾ ಪ್ರಭಾವ ಬೀರಿತ್ತು. ಆನಂತರ ಪ್ರತಿದಿನವೂ ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು, ಇವತ್ತೇ ನನ್ನ ಜೀವಮಾನದ ಕಡೆಯ ದಿನ ಎಂದಾಗಿದ್ದರೆ ಇಂದು ಮಾಡಲು ಹೊರಟಿರುವ ಕೆಲಸವನ್ನು ಮಾಡುತ್ತಿದ್ದೆನೇ? ಎಂದು ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೆ. ಅಷ್ಟಕ್ಕೂ ಸಾವು ಎದುರಿಗೆ ನಿಂತಿದ್ದಾಗ ಎಲ್ಲವೂ ನಗಣ್ಯವಾಗಿ ಬಿಡುತ್ತದೆ. ಒಂದು ವರ್ಷದ ಹಿಂದೆ ನನಗೆ ಕ್ಯಾನ್ಸರ್ ಬಂದಿರುವುದು ಪತ್ತೆಯಾಯಿತು. ಬೆಳಗ್ಗೆ 7.30ಕ್ಕೆ ವೈದ್ಯಕೀಯ ತಪಾಸಣೆ ನಡೆಯಿತು. ಅದರಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಸ್ಪಷ್ಟವಾಗಿ ಗೋಚರಿಸಿತು. ಅದು ವಾಸಿಯಾಗದ ವಿಧದ ಕ್ಯಾನ್ಸರ್ ಆಗಿತ್ತು. ಆರು ತಿಂಗಳಿಗಿಂತ ಹೆಚ್ಚು ಕಾಲ ನಾನು ಬದುಕುವುದಿಲ್ಲ ಎಂದು ವೈದ್ಯರು ಹೇಳಿಯೂ ಬಿಟ್ಟರು. ಮನೆಗೆ ಹೋಗಿ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸಿಬಿಡು ಎಂದ ಸಲಹೆ ನೀಡಿದರು. ವೈದ್ಯರು ನಮ್ಮನ್ನು ಸಾವಿಗೆ ಅಣಿಗೊಳಿಸುವುದೇ ಹಾಗೆ. ಅಂದರೆ ನಿನ್ನ ಹೆಂಡತಿ, ಮಕ್ಕಳ ಜತೆ ಏನೇನು ಮಾತನಾಡಿಕೊಳ್ಳಬೇಕು ಅದನ್ನೆಲ್ಲ ಮಾತಾಡಿ ಮುಗಿಸು, ಅವರ ಭವಿಷ್ಯಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡು, ನೀನು ಸತ್ತ ನಂತರವೂ ಅವರು ಖುಷಿಯಿಂದ ಇರಲು ಬೇಕಾದ ಮುಂಜಾಗ್ರತೆಗಳನ್ನು ತೆಗೆದುಕೋ ಅಂತ. ಆದರೆ ಕ್ಯಾನ್ಸರ್ ಬಂದಿರುವ ವಿಚಾರ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಅದೇ ದಿನ ಸಂಜೆ ವೇಳೆಗೆ ಬಯಾಪ್ಸಿ ಮಾಡಿದರು. ಸೂಜಿ ಹಾಕಿ ಕ್ಯಾನ್ಸರ್ ಗಡ್ಡೆಯ ಕೆಲವು ಸೆಲ್‌ಗಳನ್ನು ಹೊರತೆಗೆದು, ಪರೀಕ್ಷಿಸಿದರು. ಅದೃಷ್ಟವಶಾತ್, ಅದು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದಾದ ಕ್ಯಾನ್ಸರ್ ಆಗಿತ್ತು! ಅಂದು ನಾನು ಸಾವನ್ನು ಮುಟ್ಟಿನೋಡಿ ಬಂದಿದ್ದೆ!

ಅಂತಹ ಅನುಭವದ ಬಲದಿಂದ ಹೇಳುವುದಾದರೆ ಸಾವು ಕೂಡ ಒಂದು ಉಪಯುಕ್ತ ಅನುಭವ. ಆದರೆ ಅದು ಬುದ್ಧಿಗೆ ಮಾತ್ರ ನಿಲುಕುವಂಥದ್ದು. ಅಷ್ಟಕ್ಕೂ ಯಾರೂ ಸಾಯಲು ಬಯಸುವುದಿಲ್ಲ. ಸ್ವರ್ಗಕ್ಕೆ ಹೋಗಬೇಕು ಎಂದು ಬಯಸುವವರೂ ಸಾಯಲು ಇಷ್ಟಪಡುವುದಿಲ್ಲ. ಆದರೆ ನಾವೆಲ್ಲ ಸೇರುವ ಅಂತಿಮ ತಾಣ ಸಾವು. ಇದುವರೆಗೂ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಾಗಿಲ್ಲ. ಅದು ಹಾಗೆಯೇ ಇರಬೇಕು. Death is very likely the single best invention of Life! ಜೀವನದಲ್ಲಿ ಸಾವು ಬದಲಾವಣೆಯ ಏಜೆಂಟ್. ಹಳಬರನ್ನು ಜಾಗ ಖಾಲಿ ಮಾಡಿಸಿ, ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆ. ಇವತ್ತು ನೀವು ಹೊಸಬರು. ಆದರೆ ಮುಂದೊಂದು ದಿನ ನೀವು ಕೂಡ ಹಳಬರಾಗಿ ಜಾಗ ಖಾಲಿ ಮಾಡಬೇಕಾಗುತ್ತದೆ! ನಿಮಗಿರುವ ಅವಧಿ ತೀರಾ ಕ್ಷಣಿಕ. ಬೇರೆಯವರಿಗಾಗಿ ನಿಮ್ಮ ಬದುಕನ್ನು ಸವೆಸಿ ಆ ಸಮಯವನ್ನು ವ್ಯರ್ಥ ಮಾಡಬೇಡಿ. ಯಾವುದೋ ಸಿದ್ಧಾಂತಕ್ಕೆ ಸಿಕ್ಕಿಬಿದ್ದು ಬೇರೊಬ್ಬರ ಚಿಂತನೆಗಳ ಬಗ್ಗೆ ಚಿಂತೆ ಮಾಡುತ್ತಾ ಚಿತೆ ಏರಬೇಡಿ. ಇತರರ ಗದ್ದಲ ನಿಮ್ಮ ಅಂತರಾತ್ಮದ ಧ್ವನಿಯನ್ನು ಹೊಸಕಿಹಾಕಲು ಬಿಡಬೇಡಿ. ನಿಮ್ಮ ಮನಸ್ಸು ಮತ್ತು ಅಂತಃಧ್ವನಿಯನ್ನು ಹಿಂಬಾಲಿಸಿ. ನೀವೇನಾಗಬೇಕು ಎಂಬುದು ನಿಮ್ಮ ಅಂತರಾತ್ಮಕ್ಕೆ ಚೆನ್ನಾಗಿ ಗೊತ್ತಿರುತ್ತದೆ. ನಾನು ಪ್ರಾಪ್ತವಯಸ್ಕನಾಗಿದ್ದಾಗ “The Whole Earth Catalog” ಎಂಬ ಅದ್ಭುತ ಪುಸ್ತಕವೊಂದಿತ್ತು. ನನ್ನ ತಲೆಮಾರಿನವರ ಬೈಬಲ್ ಅದಾಗಿತ್ತು. ಆದರೆ ಕಾಲಾಂತರದಲ್ಲಿ ಅದು ಕಾಲಗರ್ಭದಲ್ಲಿ ಸೇರುವ ಸಮಯ ಬಂತು. 1970ರ ದಶಕದ ಮಧ್ಯ ಭಾಗದಲ್ಲಿ “The Whole Earth Catalog”ನ ಕೊನೆಯ ಪ್ರಕಟಣೆ ಹೊರಬಿತ್ತು. ಅದರ ಹಿಂಬದಿಯ ಪುಟದ ಮೇಲೆ ಹಳ್ಳಿಯ ರಸ್ತೆಯೊಂದರ ಮುಂಜಾವಿನ ಫೋಟೊ ಇತ್ತು. ಅದರ ಮೇಲೆ ವಿದಾಯದ ಒಕ್ಕಣೆಯೊಂದಿತ್ತು- Stay Hungry, Stay Foolish!  ನಾನು ನಿಮಗೆ ಹಾರೈಸುವುದೂ ಅದನ್ನೇ – Stay Hungry, Stay Foolish! ಮನದ ತುಂಬ ಕಲಿಕೆಯ ಹಸಿವಿರಲಿ, ಮನದಾಸೆಯಂತೆ ನಡೆದುಕೊಳ್ಳಿರಿ”.

ಜಾಬ್ಸ್ ಭಾಷಣದಲ್ಲಿ ನಮಗೂ ಒಂದು ಕಿವಿಮಾತಿದೆ. ಕಾಲೇಜು ಓದದ ಜಾಬ್ಸ್ ಇಷ್ಟೆಲ್ಲಾ ಮಾಡಬಹುದಾಗಿದ್ದರೆ ಮಾರ್ಕ್ಸ್ ಕಡಿಮೆ ಬಂತು, ಫೇಲಾಯಿತು ಅಂತ ನೇಣುಹಾಕಿಕೊಳ್ಳುವ ನಾವೇಕೆ ಜೀವನವನ್ನು ಸಕಾರಾತ್ಮಕವಾಗಿ ನೋಡಬಾರದು? ಸೋಲನ್ನೇಕೆ ಸವಾಲಾಗಿ ಸ್ವೀಕರಿಸಬಾರದು? ಜಾಬ್ಸ್‌ನಂತೆ ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕನ್ನು ಬದಲಾಯಿಸಲಾಗದಿದ್ದರೂ ಕನಿಷ್ಠ ನಮ್ಮ ಬದುಕು ಮತ್ತು ಭವಿಷ್ಯವನ್ನಾದರೂ ಹಸನಾಗಿಸಿಕೊಳ್ಳಬಹುದಲ್ಲವೆ? ಆದರೆ ಅದಕ್ಕೆ ಕಲಿಯುವ ಹಸಿವು, ಏನಾದರೂ ಮಾಡಬೇಕೆಂಬ ಹಂಬಲ, ಯಾರನ್ನೂ ಲೆಕ್ಕಿಸದೆ ತೋಚಿದ್ದನ್ನು ಸಾಧಿಸುವ ಎದೆಗಾರಿಕೆ ಬೇಕು. ಅದಕ್ಕೇ ಜಾಬ್ಸ್ ಹೇಳಿದ್ದು Stay Hungry, Stay Foolish!

Rafael Nadal : The Hercules of Clay Court – ಅಪ್ಪಟ ‘ಮಣ್ಣಿನ ಮಗ’ ರಾಫೆಲ್ ನಡಾಲ್

ಟೆನಿಸ್ ಅಂಗಳದಲ್ಲಿ ವಿಶಿಷ್ಟ ಪ್ರದರ್ಶನ ನೀಡಿ ದಾಖಲೆಗಳನ್ನು ಬರೆದ ಅನೇಕ ಆಟಗಾರರಿದ್ದಾರೆ. ಆದರೆ, ಸ್ಪೇನಿನ ಮಣ್ಣಿನ ಮಗ ರಾಫೆಲ್ ನಡಾಲ್ ಅಂತಹ ಇನ್ನೊಬ್ಬ ಪ್ರಚಂಡ ಕ್ರೀಡಾಳುವನ್ನು ಟೆನಿಸ್ ಪ್ರಪಂಚ ಕಂಡೇಯಿಲ್ಲ. ನಿನ್ನೆ ಭಾನುವಾರ ಆತ ಫ್ರೆಂಚ್ ಓಪನ್ ಅಂತಿಮ ಹಣಾಹಣಿಯಲ್ಲಿ ಮತ್ತೊಂದು ವಿಕ್ರಮ ಸ್ಥಾಪಿಸಿದ್ದಾನೆ. ಗೆಲವು ಮುಖ್ಯನೆ. ನಮಗೆ ಫೈನಲ್ ಪಂದ್ಯದ ಫಲಿತಾಂಶಕ್ಕಿಂತಲೂ ಟೆನಿಸ್ ಕರ್ಮಚಾರಿ ನಡಾಲ್ ಮಖ್ಯನಾಗುತ್ತಾನೆ. ಯಾಕೆ ?

French Open champion Rafael Nadal of Spainಮುಂಗಾರು ಮಳೆಗಿಂತ ಮೊದಲು ಮಾರ್ಚ್, ಏಪ್ರಿಲ್‌ನಲ್ಲಿ ಧೋ ಎಂದು ಸುರಿವ ಮಳೆಯ ನೀರು ಹಳ್ಳಿಗಳ ರಸ್ತೆಯ ಮೇಲೆ ಹರಿದು ಹೊಂಡ ಸೇರಿ ಸಂಗ್ರಹವಾದಾಗ ಹೇಗೆ ಕಾಣುತ್ತದೋ ಹಾಗಿರುತ್ತದೆ ಫ್ರೆಂಚ್ ಓಪನ್ ಟೆನಿಸ್! ಆಸ್ಟ್ರೇಲಿಯನ್ ಹಾಗೂ ಅಮೆರಿಕನ್ ಓಪನ್‌ಗಳ ಹಾರ್ಡ್‌ಕೋರ್ಟ್, ವಿಂಬಲ್ಡನ್‌ನ ಗ್ರಾಸ್ ಕೋರ್ಟ್‌ಗಳಿಗೆ ಹೋಲಿಸಿದರೆ ಕೆಂಭೂತದಂತೆ ಕಾಣುವ ಫ್ರೆಂಚ್ ಓಪನ್ ಟೆನಿಸ್ ಯಾರಿಗೆ ತಾನೇ ಇಷ್ಟವಾದೀತು? ಅಷ್ಟೇ ಅಲ್ಲ, ‘ಕ್ಲೇ”(ಕೆಮ್ಮಣ್ಣು) ಕೋರ್ಟ್‌ನಲ್ಲಿ ನಡೆಯುವ ಆಟ ನೋಡಲೂ ನೀರಸವೆನಿಸಿ ಬಿಡುತ್ತದೆ. ಟೆನಿಸ್‌ನಲ್ಲಿ ಸಹಜವಾಗಿ ಕಾಣಬಹುದಾದ ಮೆರುಗು ಇಲ್ಲಿ ಮಾತ್ರ ಕಾಣುವುದಿಲ್ಲ. ಸರ್ವ್ ಮತ್ತು ವಾಲಿಗಳಿಗೆ ಇಲ್ಲಿ ಅವಕಾಶವೇ ಇಲ್ಲ. ಏಸ್ ಹಾಕಲು ಹೆಚ್ಚುಕಡಿಮೆ ಸಾಧ್ಯವೇ ಇಲ್ಲ. ಬಾಲು ನೆಲಕ್ಕೆ ಅಪ್ಪಳಿಸಿದ ನಂತರ ಸ್ಪಿನ್ ಆಗುವ, ಪುಟಿದೇಳುವ ಪರಿ ಎಂಥವರೂ ಹೆಣಗುವಂತೆ ಮಾಡಿಬಿಡುತ್ತದೆ. ಅದರಲ್ಲೂ ಎರಡೇ ಹೊಡೆತದಲ್ಲಿ ಆಟ ಮುಗಿಸಲು ಯಾರಿಗೂ ಸಾಧ್ಯವಿಲ್ಲ. ಒಂದೊಂದು ಪಾಯಿಂಟ್‌ಗೂ ಒಂದೊಂದು ಬಕೆಟ್ ಬೆವರು ಸುರಿಸಬೇಕು. ರ್‍ಯಾಲಿ ಇಲ್ಲದೆ ಪಾಯಿಂಟ್ ದೊರೆಯುವುದಿಲ್ಲ. ಕೋರ್ಟ್ ತುಂಬಾ ಓಡಾಡಬೇಕು. ಕೆಮ್ಮಣ್ಣಿನ ಕೋರ್ಟ್ ಆದ್ದರಿಂದ ಜಾರುವುದೂ ಜಾಸ್ತಿ. ಸ್ಲೈಡ್ ಮಾಡದೇ ಆಟವಾಡಲು ಆಗದು. ಬಾಲು ಮುಟ್ಟಿದರೆ ಕೈ ಒರೆಸಿಕೊಳ್ಳಬೇಕು. ಇವುಗಳ ಜತೆಗೆ ಬರೀ ಕೆಮ್ಮಣ್ಣಿನ ಮೇಲಷ್ಟೇ ತಮ್ಮ ತಾಕತ್ತು ತೋರುವ ಗುಸ್ತಾವೋ ಕುಯೆರ್ಟನ್, ಗಾಸ್ಟನ್ ಗಾಡಿಯೋ, ಮಾರ್ಸಿಲೋ ರಿಯೋಸ್, ಅಲೆಕ್ಸ್ ಕೊರೆಟ್ಜಾ, ಕೊರಿಯಾ, ಸೆಡ್ರಿಕ್ ಪಿಯೋಲಿನ್, ಜುವಾನ್ ಕಾರ್ಲೋಸ್ ಫೆರೇರೋ, ಥಾಮಸ್ ಮಸ್ಟರ್, ಸೆರ್ಗಿ ಬ್ರುಗೇರಾಗಳನ್ನು ಕಂಡರಂತೂ ಮೈ ಉರಿಯುತ್ತದೆ. ಅದರಲ್ಲೂ ಸ್ಯಾಂಪ್ರಾಸ್‌ನಂತಹ ಪ್ರತಿಭಾವಂತರೇ ಮೊದಲ ಅಥವಾ ಎರಡನೇ ಸುತ್ತಿನಲ್ಲೇ ಹೊರಬೀಳುವುದನ್ನು ಕಂಡಾಗ ಫ್ರೆಂಚ್ ಓಪನ್ ಮೇಲೆಯೇ ಸಿಟ್ಟು ಬರುತ್ತಿತ್ತು.

ಇಂತಹ ಅತ್ಯಂತ ನೀರಸ ಫ್ರೆಂಚ್ ಓಪನ್‌ಗೂ ಒಬ್ಬ “ಕಾನ್‌ಕ್ವಿಸ್ಟೆಡಾರ್” ಸಿಕ್ಕಿದ್ದಾನೆ! ಅವನು ಕಳೆದ ಮೂರು ವರ್ಷಗಳಿಂದ ಫ್ರೆಂಚ್ ಓಪನ್ ಬಗ್ಗೆಯೂ ಒಂದಿಷ್ಟು ನಿರೀಕ್ಷೆ ಇಟ್ಟುಕೊಳ್ಳುವಂತೆ, ಟಿವಿ ಮುಂದೆ ಕುಳಿತುಕೊಳ್ಳುವಂತೆ ಮಾಡಿದ್ದಾನೆ. ಭುಜದಿಂದ ಕೆಳಕ್ಕಿಳಿಯುವ ಉದ್ದ ಕೂದಲು, ಹಣೆಯ ಸುತ್ತ ಪಟ್ಟಿ, ತೋಳಿಲ್ಲದ ಟೀ ಷರ್ಟ್, ಅತ್ತ ಮುಕ್ಕಾಲು ಪ್ಯಾಂಟೂ ಅಲ್ಲ, ಇತ್ತ ಚೆಡ್ಡಿಯೂ ಅಲ್ಲ, ಮಂಡಿಯಿಂದ ಕೆಳಗಿಳಿದರೂ ಬರ್ಮುಡಾ ಎನಿಸುವುದಿಲ್ಲ, ಅಂಥದ್ದೊಂದು ನಿಕ್ಕರ್ ಹಾಕಿಕೊಳ್ಳುವ ಆತನನ್ನು ನೋಡಿದಾಗ ರಸ್ತೆಯಲ್ಲಿ ಹೋಗುತ್ತಿದ್ದ ಪಡ್ಡೆಯನ್ನು ಯಾರೋ ಎಳೆದುಕೊಂಡು ಬಂದಿದ್ದಾರೆ, ಕೈಗೊಂದು ರಾಕೆಟ್ ಕೊಟ್ಟು ಕೋರ್ಟ್‌ಗಿಳಿಸಿದ್ದಾರೆ ಎಂದನಿಸಿಬಿಡುತ್ತದೆ!

ಆಟಗಾರರು ಸಾಂಪ್ರದಾಯಿಕ ಶೈಲಿಯಲ್ಲಿರಬೇಕು ಎಂದು ಬಯಸುವ ಟೆನಿಸ್‌ನ ಹಳೆಯ ಅಭಿಮಾನಿಗಳು ಹಾಗೂ ಮಡಿವಂತರಂತೂ ಈತನನ್ನು ನೋಡಿದರೆ ಉರಿದು ಬೀಳುತ್ತಾರೆ. ಅದರಲ್ಲೂ ಮಾಜಿ ಟೆನಿಸ್ ಆಟಗಾರ ಗೈ ಫೂಜೇಟ್ “ಕಟ್ಟಡ ಕಾಮಗಾರಿ ಕಾರ್ಮಿಕನಂತಿರುವ ವ್ಯಕ್ತಿ ಟೆನಿಸ್‌ಗೆ ಬೇಕಿಲ್ಲ” ಎನ್ನುವ ಮೂಲಕ ಸಾರ್ವಜನಿಕವಾಗಿಯೇ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಆತನ ವೆಬ್‌ಸೈಟ್‌ನಲ್ಲಿ “King of Clay” ಎಂದು ಬರೆದಿರುವುದನ್ನು ದ್ವೇಷಿಸುವವರೂ ಸಾಕಷ್ಟಿದ್ದಾರೆ. ಆತ ಏನೇ ಮಾಡಿದರೂ, ಯಾವುದೇ ಉಡುಪು ಧರಿಸಿದರೂ ಎಲ್ಲದರಲ್ಲೂ ಹುಳುಕು ಹುಡುಕುವವರಿದ್ದಾರೆ. ಪ್ರತಿ ಪಾಯಿಂಟ್‌ಗಳ ನಡುವೆ ಭಾರೀ ಸಮಯ ತೆಗೆದುಕೊಳ್ಳುತ್ತಾನೆ, ಯಾವಾಗಲೂ ಟವೆಲ್ ತೆಗೆದು ಮುಖ, ಮೈ ತೀಡಿಕೊಳ್ಳುತ್ತಾನೆ, ಬಾಲನ್ನು ಬೌನ್ಸ್ ಮಾಡುತ್ತಾನೆ, ಆಗಾಗ ಚೆಡ್ಡಿ, ಷರ್ಟ್ ಸರಿಪಡಿಸಿಕೊಳ್ಳುತ್ತಾನೆ ಎಂದು ವಟವಟ ಎನ್ನುವವರಿಗೂ ಕಡಿಮೆಯಿಲ್ಲ. ಅಷ್ಟೇ ಅಲ್ಲ, ಸೆರ್ಗಿ ಬ್ರುಗೇರಾ, ಜುವಾನ್ ಕಾರ್ಲೋಸ್ ಫೆರೆರೋ ಅವರಂತೆ ಆರಂಭ ಶೂರತ್ವ ತೋರಿ, ಒಮ್ಮೆಲೆ ಉರಿದು ಹೋಗುತ್ತಾನೆ ಎಂದು ಕೆಟ್ಟದ್ದನ್ನು ಬಯಸುತ್ತಿರುವವರು, ಶಪಿಸುತ್ತಿರುವವರೂ ಇದ್ದಾರೆ.

ಅದಕ್ಕೆ ಬಲವಾದ ಕಾರಣವೂ ಇದೆ!ಇವತ್ತು ಟೆನಿಸ್‌ನಲ್ಲಿ “ಕಂಪ್ಲೀಟ್ ಪ್ಲೇಯರ್” ಅಂತ ಯಾರಾದರೂ ಇದ್ದರೆ ಅದು ರೋಜರ್ ಫೆಡರರ್ ಮಾತ್ರ. ಹದಿನಾಲ್ಕು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದರೂ ಪೀಟ್ ಸ್ಯಾಂಪ್ರಾಸ್ ಸರ್ವ್ ಮತ್ತು ವಾಲಿಗಳಿಗಾಗಿ ಹೆಸರುವಾಸಿಯಾದನೇ ಹೊರತು ಪರಿಪೂರ್ಣ ಆಟಗಾರ ಎಂದೆನಿಸಿಕೊಳ್ಳಲಿಲ್ಲ. ಆದರೆ ಫೆಡರರ್‌ನಲ್ಲಿ ಟೆನಿಸ್‌ನ ಎಲ್ಲ ಹೊಡೆತಗಳನ್ನೂ ಕಾಣಬಹುದು. ಆತ ಯಾವತ್ತೂ ಭಾವೋದ್ವೇಗಕ್ಕೊಳಗಾಗುವುದಿಲ್ಲ. ಯಾವತ್ತೂ ಸಮಚಿತ್ತ, ಸಮಸ್ಥಿತಿಯನ್ನು ಕಳೆದುಕೊಳ್ಳುವುದಿಲ್ಲ. ಇಂತಹ ಗುಣ ಆತನನ್ನು ಟೆನಿಸ್ ಪ್ರೇಮಿಗಳ ಹೃದಯಕ್ಕೆ ಹತ್ತಿರವಾಗಿಸಿದೆ. ಆತ ಟೆನಿಸ್‌ನ ಅನಭಿಷಿಕ್ತ ದೊರೆಯೆನಿಸಿಕೊಂಡಿದ್ದಾನೆ. ಆದರೂ ಒಂದು ಕೊರಗಿದೆ. ಅಮೆರಿಕನ್, ಆಸ್ಟ್ರೇಲಿಯನ್ ಹಾಗೂ ವಿಂಬಲ್ಡನ್ ಗೆದ್ದಿರುವ ಆತನಿಗೆ ಫ್ರೆಂಚ್ ಓಪನ್ ಮರೀಚಿಕೆಯಾಗಿಬಿಟ್ಟಿದೆ. ಆತನಿಂದ ಫ್ರೆಂಚ್ ಓಪನ್ ಗೆಲ್ಲಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಬೇಸರ ಆತನಿಗಿಂತ ಆತನ ಅಭಿಮಾನಿಗಳಲ್ಲಿ ಬಲವಾಗಿದೆ. ಆ ಬೇಸರ ಇತ್ತೀಚೆಗಂತೂ ಅವರನ್ನು ಸಿಟ್ಟಿಗೇಳಿಸಲಾರಂಭಿಸಿದೆ. “To have a hero you need a villain” ಎಂಬ ಮಾತಿದ್ದು, ದುರದೃಷ್ಟವಶಾತ್ ಫೆಡರರ್ ಅಭಿಮಾನಿಗಳು ಸ್ಪೇನ್‌ನ ರಾಫೆಲ್ ನಡಾಲ್‌ನಲ್ಲಿ ಅಂತಹ ವಿಲನ್‌ನನ್ನು ಕಂಡುಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ರೋಜರ್ ಫೆಡರರ್ ಹಾಗೂ ಫ್ರೆಂಚ್ ಓಪನ್ ಪ್ರಶಸ್ತಿಯ ನಡುವೆ ಕಳೆದ ಮೂರು ವರ್ಷಗಳಿಂದ ಅಡ್ಡಗೋಡೆಯಾಗಿ ನಿಂತಿರುವವನೇ 22 ವರ್ಷದ ರಾಫೆಲ್ ನಡಾಲ್!ಇದುವರೆಗೂ ಹೇಳಿದ್ದು ಆತನ ಬಗ್ಗೆಯೇ. ಇಂದು ರಾಫೆಲ್ ನಡಾಲ್ ಎಂದರೆ ಜಗತ್ತೇ ಗುರುತಿಸುತ್ತದೆ, ಗೌರವಿ ಸುತ್ತದೆ. ಆದರೆ ಈ ಮೊದಲು ಮಿಗೆಲ್ ಏಂಜೆಲ್ ರಾಫೆಲ್ ದೊಡ್ಡ ಹೆಸರು ಮಾಡಿದ್ದರು. ಆತ ರಾಫೆಲ್ ನಡಾಲ್‌ಗೆ ದೂರದ ಸೋದರ. “ಬೀಸ್ಟ್ ಆಫ್ ಬಾರ್ಸಿಲೋನಾ” ಎಂದೇ ಹೆಸರುವಾಸಿಯಾಗಿದ್ದ ಮಿಗೆಲ್, ಖ್ಯಾತ ಫುಟ್ಬಾಲ್ ಕ್ಲಬ್ ‘ಬಾರ್ಸಿಲೋನಾ”ದ ದೈತ್ಯ ಡಿಫೆಂಡರ್ ಆಗಿದ್ದರು. ಮೂರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬಕ್ಕೆ ಹೆಸರು ತಂದಿದ್ದರು. ರಾಫೆಲ್ ನಡಾಲ್ ಕೂಡ ಮೂಲತಃ ಫುಟ್ಬಾಲ್ ಆಟಗಾರನಾಗಿದ್ದ. ಒಳ್ಳೆಯ ಜೂನಿಯರ್ ಫುಟ್ಬಾಲರ್ ಎನಿಸಿಕೊಂಡಿದ್ದ. ಆತನಿಗೆ ಟೆನಿಸ್‌ನ ಗೀಳು ಅಂಟಿಸಿದ್ದು ಚಿಕ್ಕಪ್ಪ ಟೋನಿ ನಡಾಲ್. ಇಂದಿಗೂ ಆತನೇ ನಡಾಲ್‌ನ ಕೋಚ್. ನಡಾಲ್ ಎಡಗೈನಲ್ಲಿ ಟೆನಿಸ್ ಆಡುತ್ತಾನಾದರೂ ಸ್ವಾಭಾವಿಕವಾಗಿ ಆತ ಬಲಗೈ ಆಟಗಾರ. ಬಲಗೈ ಸಹಜವಾಗಿಯೇ ಬಲಿಷ್ಠವಾಗಿರುವುದರಿಂದ ಎಡಗೈನಲ್ಲಿ ಆಟವಾಡಿದರೆ ಬ್ಯಾಕ್‌ಹ್ಯಾಂಡ್ ಇನ್ನೂ ಬಲವಾಗುತ್ತದೆ ಎಂದು ಭಾವಿಸಿದ ಟೋನಿ ನಡಾಲ್, ರಾಫೆಲ್‌ಗೆ ಎಡಗೈನಲ್ಲಿ ಆಟವಾಡುವುದನ್ನು ಅಭ್ಯಾಸ ಮಾಡಿಸಿದರು.

ಅದರ ಫಲವನ್ನು ನಾವಿಂದು ಕಾಣುತ್ತಿದ್ದೇವೆ. ಹಾಗಂತ ಅವನೇನು ‘ಗಿಫ್ಟೆಡ್ ಪ್ಲೇಯರ್” ಅಲ್ಲ, ಅಂತಹ ಸ್ಕಿಲ್ ಕೂಡ ಇಲ್ಲ. ಇರುವುದೊಂದೇ- ಆತ್ಮವಿಶ್ವಾಸ. ಆತನಲ್ಲಿ ಅತ್ಯುತ್ತಮ ಆಟ ಹೊರಬರುವುದೇ ಆತ ಸೋಲುವ ಸ್ಥಿತಿಯಲ್ಲಿದ್ದಾಗ. ಕಳೆದ ಹ್ಯಾಂಬರ್ಗ್ ಟೂರ್ನಿಯಲ್ಲಿ ಫೆಡರರ್ ಎದುರು 2-5ರಿಂದ ಹಿಂದಿದ್ದ ಆತ, ಅಂತಿಮವಾಗಿ 7-5ರಿಂದ ಸೆಟ್ ಗೆದ್ದುಕೊಂಡನೆಂದರೆ ಆತನ ಆತ್ಮವಿಶ್ವಾಸ, ಸ್ವಸಾಮರ್ಥ್ಯದ ಬಗ್ಗೆ ಇರುವ ನಂಬಿಕೆ ಎಂಥದ್ದಿರಬಹುದು! “never give up a point not even in practice match” ಎಂದು ಹೇಳಿಕೊಟ್ಟವರು ಟೋನಿ ನಡಾಲ್. ಇಂತಹ ಪಾಠವನ್ನು ಎಲ್ಲ ಗುರುಗಳೂ ಹೇಳಿಕೊಡುತ್ತಾರೆ. ಆದರೆ ನಡಾಲ್ ಒಬ್ಬ ಕಟಿಬದ್ಧ ಶಿಷ್ಯ. ಹಾಗಾಗಿಯೇ ಕೋಚ್ ಹೇಳಿಕೊಟ್ಟಿದ್ದನ್ನು ಕೃತಿಗಿಳಿಸಿದ್ದಾನೆ. ಪ್ರತಿಯೊಂದು ಪಾಯಿಂಟನ್ನೂ ಅಳಿವು-ಉಳಿವಿನಂತೆ ತೆಗೆದುಕೊಂಡು ಆಟವಾಡುವ ಏಕೈಕ ಆಟಗಾರ ನಡಾಲ್.

ಟೆನಿಸ್‌ನಲ್ಲಿ ಮಹಾಕಾವ್ಯವೆಂದರೆ ಐದು ಸೆಟ್‌ಗಳಿಗೆ ಸಾಗುವ ಪಂದ್ಯಗಳು: ಫೆಡರರ್ ಹಾಗೂ ನಡಾಲ್ ಈವರೆಗೂ 14 ಬಾರಿ ಮುಖಾಮುಖಿಯಾಗಿದ್ದಾರೆ. ಅವುಗಳಲ್ಲಿ ಮೂರು ಪಂದ್ಯಗಳು ಐದು ಸೆಟ್‌ಗಳವರೆಗೂ ಸಾಗಿದ್ದವು. ಅದರಲ್ಲೂ ರೋಮ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಬ್ಬರ ನಡುವೆ ಐದು ಗಂಟೆಗಳ ಕಾಲ ಕಾದಾಟ ನಡೆದಿತ್ತು. ಅಂದು ಫೆಡರರ್‌ನನ್ನು ಸೋಲಿಸಿದ ನಡಾಲ್‌ನನ್ನು “one surface wonder” ಎಂದು ಕುಟುಕಿದವರೇ ಹೆಚ್ಚು. ಆದರೇನಂತೆ ಕಳೆದ ವರ್ಷ ನಡೆದ ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ತೋರಿದ ಹೋರಾಟದಿಂದಾಗಿ ಟೆನಿಸ್ ಪ್ರೇಮಿಗಳು ನಡಾಲ್‌ನನ್ನು ಗೌರವದಿಂದ ನೋಡುವಂತೆ ಮಾಡಿತು. ಐದನೇ ಬಾರಿಗೆ ವಿಂಬಲ್ಡನ್ ಮೇಲೆ ಕಣ್ಣಿಟ್ಟಿದ್ದ ಫೆಡರರ್ ಆಸೆ ಈ ಬಾರಿ ಈಡೇರುವುದಿಲ್ಲ ಎಂದು ಭಾವಿಸುವಷ್ಟರ ಮಟ್ಟಿಗೆ ನಡಾಲ್ ಸ್ಪರ್ಧೆ ಒಡ್ಡಿದ್ದ.

ಕೊನೆಗೂ 7- 6(7), 4-6, 7-6(3), 2-6, 6-2 ಅಂತರದಲ್ಲಿ ಫೆಡರರ್ ಗೆದ್ದರೂ I was happy to win the title before Rafa takes them all” ಎನ್ನುವ ಮೂಲಕ ಪಂದ್ಯದ ವೇಳೆ ತಮಗೆ ಎದುರಾಗಿದ್ದ ಆತಂಕವನ್ನು ಹೊರಗೆಡವಿದರು. ಅಷ್ಟೇಕೆ, “ಫೆಡರರ್‌ನದ್ದು ಪರ್ಫೆಕ್ಟ್ ಆಟ. ಆತನ ಬ್ಯಾಕ್‌ಹ್ಯಾಂಡ್ ಎಲ್ಲಕ್ಕಿಂತ ಪರ್ಫೆಕ್ಟ್” ಎಂದಿದ್ದ ಟೆನಿಸ್ ದಂತಕಥೆ ಸ್ಯಾಂಪ್ರಾಸ್ ಮಾತನ್ನು ಸುಳ್ಳಾಗಿಸಿದ್ದೇ ನಡಾಲ್! ಅಂದರೆ ಬಾಲನ್ನು ನೆಲಕ್ಕೆ ಅಪ್ಪಳಿಸಿ ಭುಜದ ಮಟ್ಟಕ್ಕೆ ಬೌನ್ಸ್ ಮಾಡಿ ಅದನ್ನು ಬ್ಯಾಕ್‌ಹ್ಯಾಂಡ್‌ನಲ್ಲಿ ಹೊಡೆ ಯಲು ಫೆಡರರ್ ತಿಣುಕಾಡುವಂತೆ ಮಾಡಿದ ನಡಾಲ್, ಫೆಡರರ್‌ನ ಬ್ಯಾಕ್‌ಹ್ಯಾಂಡ್‌ನಲ್ಲಿ ದೌರ್ಬಲ್ಯವಿದೆ ಎಂದು ಜಗತ್ತಿಗೆ ತೋರಿಸಿಕೊಟ್ಟ. ಇದೇನೇ ಇರಲಿ, ಫೆಡರರ್ ಟೆನಿಸ್ ಕಲಿತಿದ್ದು, ಪ್ರಾಕ್ಟಿಸ್ ಮಾಡಿದ್ದೇ ಕ್ಲೇ ಕೋರ್ಟ್‌ನಲ್ಲಿ. ಆತನ ಆಟ ಕ್ಲೇ ಕೋರ್ಟ್‌ಗೂ ಹೇಳಿ ಮಾಡಿಸಿದಂತಿದೆ. ಆದರೂ ಏಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂದರೆ ನಡಾಲ್ ದೊಡ್ಡ ಅಡ್ಡಿಯಾಗಿದ್ದಾನೆ. ನಡಾಲ್ ಇಲ್ಲದೇ ಹೋಗಿದ್ದರೆ ಫೆಡರರ್ ಈಗಾಗಲೇ ಎರಡು ಬಾರಿ ಫ್ರೆಂಚ್ ಓಪನ್ ಗೆದ್ದಿರುತ್ತಿದ್ದ.

ಬೋರಿಸ್ ಬೆಕರ್, ಮೈಕೆಲ್ ಚಾಂಗ್ 17ನೇ ವರ್ಷಕ್ಕೆ, ಮರಾಟ್ ಸಾಫಿನ್ 20ನೇ ವರ್ಷಕ್ಕೆ ಗ್ರ್ಯಾನ್‌ಸ್ಲ್ಯಾಮ್ ಗೆದ್ದರೂ ಆನಂತರ ಬರ ಎದುರಿಸಿದರು. ಆರಂಭದಲ್ಲಿ ಯಶಸ್ಸು ಪಡೆದರೂ ಗೆಲುವಿನ ಓಘವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. 18ನೇ ವರ್ಷಕ್ಕೆ ಫ್ರೆಂಚ್ ಒಪನ್ ಗೆದ್ದ ನಡಾಲ್ ಬಗ್ಗೆಯೂ ಇಂತಹದ್ದೇ ಮಾತು ಕೇಳಿ ಬಂದಿತ್ತು. ಬ್ರುಗೇರಾ ಹಾಗೂ ಕಾರ್ಲೋಸ್ ಫೆರೆರೋ ಥರಾ ನಡಾಲ್ ಕೂಡ ಬೇಗ ಮರೆಯಾಗುತ್ತಾನೆ ಎನ್ನಲಾಗಿತ್ತು. ಆದರೆ ಸತತ ಮೂರು ಬಾರಿ ಫ್ರೆಂಚ್ ಒಪನ್ ಗೆದ್ದ ಹಾಗೂ ಈಗ ನಾಲ್ಕನೇ ಬಾರಿಗೆ ಗೆಲ್ಲುವ ಹಂತಕ್ಕೆ ಬಂದಿರುವ ಆತ ಎಲ್ಲರ ಮಾತನ್ನೂ ಹುಸಿಯಾಗಿಸಿದ್ದಾನೆ. ಅಲ್ಲದೆ ಸತತ ನಾಲ್ಕು ಬಾರಿ ಫ್ರೆಂಚ್ ಓಪನ್ ಗೆದ್ದಿದ್ದ ಟೆನಿಸ್‌ನ ದಂತಕಥೆ ಜೋರ್ನ್ ಬೋರ್ಗ್ ನನ್ನು ಸರಿಗಟ್ಟುವ ಹೊಸ್ತಿಲಲ್ಲಿದ್ದಾನೆ. ಕಳೆದ ವರ್ಷ ನಡೆದ ವಿಂಬಲ್ಡನ್ ಟೆನಿಸ್‌ನ ಫೈನಲ್ ತಲುಪಿದ್ದ ನಡಾಲ್‌ನನ್ನು ಕಂಡ ಮೆಕೆನ್ರೋ, “”He`s is a made a beliver out of me” ಎನ್ನುವ ಮೂಲಕ ಆತನ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದಾರೆ.

ನಡಾಲ್‌ನದ್ದು ನಾಚಿಕೆ ಸ್ವಭಾವ.ಮಾತು ಕಡಿಮೆ. ಆದರೆ ಹೋರಾಟಕ್ಕೆ ಇಳಿದಾಗ ಕದನಕಲಿಯಂತೆ ಕಾಣುತ್ತಾನೆ. ಅವನೊಬ್ಬ ಒಳ್ಳೆಯ ಅಥ್ಲೀಟ್. ಕೋರ್ಟ್ ತುಂಬಾ ಓಡಾಡುತ್ತಾನೆ. ಆದರೂ ಬಳಲುವುದಿಲ್ಲ. “ಸಾಮಾನ್ಯವಾಗಿ ಐದು ಬಾರಿ ಕ್ರಾಸ್‌ಕೋರ್ಟ್ ಹೊಡೆತ ಹೊಡೆದರೆ 6ನೆಯದು ಬರುವುದಿಲ್ಲ ಎಂದು ನಿರಾಳವಾಗಬಹುದು. ಆದರೆ ನಡಾಲ್ ಎದುರು 19 ಬಾರಿ ಕ್ರಾಸ್ ಕೋರ್ಟ್ ಶಾಟ್ ಹೊಡೆದರೂ 20ನೆಯದು ತಿರುಗಿ ಬಂದಿರುತ್ತದೆ. ಆಟ ಸಡಿಲಿಸಿದರೆ ನಡಾಲ್ ಬಿಡುವುದಿಲ್ಲ” ಎನ್ನುತ್ತಾನೆ ಫಿನ್‌ಲ್ಯಾಂಡ್‌ನ ಜಾರ್ಕೋ ನಿಮ್ಮೆನ್. ರಾವಣ ಇಲ್ಲದಿದ್ದರೆ ರಾಮನಿಗೆ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಮಾತಿದೆ. ಅಂದರೆ ರಾವಣ ಬಲಿಷ್ಠ ಎದುರಾಳಿಯಾಗಿದ್ದರಿಂದಲೇ ರಾಮನ ಶೌರ್ಯ ಬೆಳಕಿಗೆ ಬಂದಿದ್ದು. ಅಂತೆಯೇ ಕ್ರೀಡೆಯಲ್ಲೂ ಒಬ್ಬ ಆಟಗಾರನಿಂದ ಅತ್ಯುತ್ತಮ ಆಟ ಯಾವಾಗ ಹೊರಬರುತ್ತದೆಂದರೆ ಆತನ ಎದುರಾಳಿ ಪ್ರಬಲ ಪ್ರತಿರೋಧವನ್ನು ಒಡ್ಡಿದಾಗ ಮಾತ್ರ. ಈ ದೃಷ್ಟಿಯಿಂದ ಫೆಡರರ್‌ಗೆ ಸವಾಲು ಹಾಕಿ ಆತನಿಂದ ಅತ್ಯುತ್ತಮ ಆಟವನ್ನು ಹೊರತಂದ ಕೀರ್ತಿ ನಡಾಲ್‌ಗೇ ಸಲ್ಲಬೇಕು. “ನನ್ನ ಅತ್ಯುತ್ತಮ ಆಟದಲ್ಲಿ ಅಗಾಸಿಗೂ ಪಾಲಿದೆ” ಎಂದಿದ್ದ ಸ್ಯಾಂಪ್ರಾಸ್ ಮಾತು ಫೆಡರರ್ ಗೆಲುವಿಗೂ ಅನ್ವಯವಾಗುತ್ತದೆ.

ಇದುವರೆಗೂ 26 ಬಾರಿ ವಿವಿಧ ಟೆನಿಸ್ ಟೂರ್ನಿಗಳ ಫೈನಲ್ ತಲುಪಿರುವ ನಡಾಲ್ 22 ಬಾರಿ ಗೆದ್ದಿದ್ದಾನೆ. 2005, ಜುಲೈ 25ರಂದು 2ನೇ ರ್‍ಯಾಂಕಿಂಗ್‌ಗೇರಿದ ಆತ, ಅತಿ ಹೆಚ್ಚುಕಾಲದಿಂದ ಎರಡನೇ ರ್‍ಯಾಂಕಿಂಗ್‌ನಲ್ಲಿರುವ ಏಕೈಕ ಆಟಗಾರ ಎಂಬ ದಾಖಲೆಯನ್ನೂ ಸೃಷ್ಟಿಸಿದ್ದಾನೆ. ಅಲ್ಲದೆ ಕ್ಲೇ ಕೋರ್ಟ್‌ನಲ್ಲಿ ಸತತ 81 ಪಂದ್ಯಗಳನ್ನು ಗೆದ್ದಿದ್ದಾನೆ. ಇದುವರೆಗೂ ಯಾರೂ ಯಾವುದೇ ಒಂದು ಸರ್ಫೇಸ್ ಮೇಲೆ ಇಷ್ಟು ಪಂದ್ಯಗಳನ್ನು ಅವಿರತವಾಗಿ ಗೆದ್ದಿಲ್ಲ. ‘ಗ್ರೀಕ್ ಗಾಡ್” ಥರಾ ಕಾಣುವ ಆತನನ್ನು ನೋಡುವುದೇ ಒಂದು ಖುಷಿ. ಹೋರಾಡಿ ಪಾಯಿಂಟ್ ಗಳಿಸಿದಾಗ ಆತ ಬೀರುವ ನೋಟದಲ್ಲೂ ಒಂದು ವೈಭವ, ಅಗ್ರೆಶನ್ ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಟೆನಿಸ್‌ಗೆ ಬೇಕಾದ ಡಿಸಿಪ್ಲೀನ್ ಆತನಲ್ಲಿದೆ. ಸಂದಿಗ್ಧ ಸಂದರ್ಭದಲ್ಲಿ ಆಡುವ ಎದೆಗಾರಿಕೆ ಇದೆ. ಬರೀ ಸರ್ವೀಸ್‌ನಲ್ಲೇ ಮ್ಯಾಚ್ ಗೆಲ್ಲಲು ಪ್ರಯತ್ನಿಸುವ ರಾಡಿಕ್ ಒಂದೆಡೆಯಾದರೆ, ಹೆವಿಟ್ ಕಥೆ ಮುಗಿದೇ ಹೋಯಿತು. ಮರಾಟ್ ಸಫಿನ್ ಅರ್ಧವರ್ಷ ಗಾಯದಿಂದ ಮನೆಯಲ್ಲಿ ಕುಳಿತರೆ, ಇನ್ನರ್ಧ ವರ್ಷ ತಲೆಕೆಡಿಸಿಕೊಂಡು ಹುಚ್ಚನಂತೆ ವರ್ತಿಸುತ್ತಾನೆ. ಇವರ ನಡುವೆ ಕಾಣುವ ಏಕೈಕ ಆಶಾಕಿರಣವೆಂದರೆ ನಡಾಲ್.

ನಂಬರ್-1 ಎನಿಸಿ ಕೊಂಡಿರುವ ಫೆಡರರ್‌ನ ಸಾಕ್ಷಿಪ್ರಜ್ಞೆಯನ್ನೇ ಕೆಣಕುವ, ಅದ್ಭುತ ಆಟ ಹೊರತರುವ ತಾಕತ್ತು ಇರುವುದು ನಡಾಲ್‌ಗೆ ಮಾತ್ರ. ಸ್ಪ್ಯಾನಿಷ್‌ನಲ್ಲಿ Conquistador (ಜಯಶಾಲಿ)ಎಂಬ ಪದವಿದೆ. ಫುಟ್ಬಾಲ್ ಆಟಗಾರ ರಾಲ್ ಗಾನ್ಝಾಲೆಝ್, ಫಾರ್ಮುಲಾ-1 ಡ್ರೈವರ್ ಫರ್ನಾಂಡೋ ಅಲೊನ್ಸೋ ಹಾಗೂ ರಾಫೆಲ್ ನಡಾಲ್ ಮುಂತಾದವರು ಸ್ಪೇನ್‌ನಲ್ಲಿ ಜನಿಸುವ ಮೂಲಕ ಆ ಪದದ ಹಿರಿಮೆಯನ್ನು ಇನ್ನೂ ಎತ್ತರಿಸಿದ್ದಾರೆ.

ಇದೇನೇ ಇರಲಿ, ಕೆಲವರಿಗೆ ಆಸ್ತಿಪಾಸ್ತಿ ಮಾಡುವುದರಲ್ಲಿ ಖುಷಿ ಸಿಗಬಹುದು, ಕೆಲವರಿಗೆ ಒಳ್ಳೆಯ ಊಟದಲ್ಲಿ ಮಜಾ ಸಿಗಬಹುದು, ಇನ್ನು ಕೆಲವರಿಗೆ ದೈಹಿಕ ಸುಖದಲ್ಲಿ ಅಹ್ಲಾದ ಹೊರೆಯಬಹುದು. ಆದರೆ ಒಂದು ಒಳ್ಳೆಯ ಪುಸ್ತಕವನ್ನೋದಿದಾಗ, ಒಂದು ಕ್ರೀಡೆಯನ್ನೇ ಉನ್ನತಸ್ತರಕ್ಕೆ ಕೊಂಡೊಯ್ಯುವಂತೆ ಆಡುವ ನಡಾಲ್-ಫೆಡರರ್ ಕಾದಾಟವನ್ನು ನೋಡಿದಾಗ ಸಿಗುವ ಸುಖವೇ ಬೇರೆ! ಮೆಕೆನ್ರೋ-ಬೋರ್ಗ್, ಅಗಾಸಿ-ಸ್ಯಾಂಪ್ರಾಸ್ ನಡುವಿನ ಸೆಣಸಾಟಗಳು ಹೇಗೆ ಟೆನಿಸನ್ನೇ ಎತ್ತರಕ್ಕೆ ಕೊಂಡೊಯ್ದವೋ ಹಾಗೆಯೇ ನಡಾಲ್-ಫೆಡರರ್ ನಡುವಿನ ಹೋರಾಟಗಳೂ ಟೆನಿಸ್‌ನ ಘನತೆಯನ್ನು ಹೆಚ್ಚಿಸುತ್ತಿವೆ.