Category Archives: ರವಿ ಬೆಳಗೆರೆ – ಸೂರ್ಯ ಶಿಕಾರಿ

‘ಸೂರ್ಯ ಶಿಕಾರಿ’ ಅಂಕಣಕಾರ ರವಿ ಬೆಳಗೆರೆ

ಓದುವ ಸುಖ ಬಲ್ಲ ಬಲ್ಲಿದರಷ್ಟೇ ಅಲ್ಲ ; ಬಸ್ಸು ಬರದ ಊರಿನ ರೈತ [^] ಹಾಗೂ ಬೆಂಗಳೂರಿನ ಆಟೊ ಚಾಲಕ ಓದುವ ಅಭ್ಯಾಸ ಉಳಿಸಿಕೊಂಡಿರುವುದಕ್ಕೆ ‘ಹಾಯ್‌ ಬೆಂಗಳೂರ್‌” ಎಂಬ ಕಪ್ಪು ಸುಂದರಿಯೇ ಕಾರಣ.

ಪ್ರತಿ ಅಕ್ಷರವನ್ನೂ ಅಕ್ಕರಾಸ್ಥೆಯಿಂದ ಪೊರೆವ ‘ಹಾಯ್‌ ಬೆಂಗಳೂರ್‌” ಸಾರಥಿ ರವಿ ಬೆಳಗೆರೆ- ಲಂಕೇಶ್‌ ನಂತರದಲ್ಲಿ ಕನ್ನಡ [^] ಪತ್ರಿಕೆಗಳ ಓದುಗ ಸಮೂಹವನ್ನು ಸೆಳೆದ ಬಹುದೊಡ್ಡ ಚುಂಬಕಶಕ್ತಿ. ಪ್ರತಿ ಸೋಮವಾರ, ಈ ಅಕ್ಷರ ಮಾಂತ್ರಿಕನ ಬಹುಮುಖಿ ಬರಹಗಳು ‘ಸೂರ್ಯ ಶಿಕಾರಿ”ಯಲ್ಲಿ ದಾಖಲು!

ಮದುವೆ ಕೊಲ್ಲುವ ಪ್ಯಾರಲಲ್ ಲೈಫ್ ಎಂಬ ಕಾಯಿಲೆ!- Seven year itch marriage extra marital affair

1013 Seven Year Itch Marriage Extra Marital Affair Aid0038

ಅದು ಮರ್ಲಿನ್ ಮನ್ರೋ ನಟಿಸಿದ ಚಿತ್ರ: ಸೆವೆನ್ ಇಯರ್ಸ್ ಇಚ್. ಅದಕ್ಕೂ ಮುಂಚೆ 1952ರಲ್ಲಿ ಜಾರ್ಜ್ ಎಕ್ಸಲ್ ರಾಡ್ ಎಂಬಾತ ಇದೇ ಹೆಸರಿನ ನಾಟಕ ಬರೆದಿದ್ದ. ಮುಂದೆ ಅದು ಸಿನಿಮಾ ಆದಾಗ ಈ Seven Years Itch ಎಂಬುದು ಮನೆ ಮಾತಾಯಿತು. ವೈದ್ಯ ಪ್ರಪಂಚದಲ್ಲಿ ಅದೇ ಬೇರೆಯದೇ ಅರ್ಥ ಪಡೆದು ವೈದರು ಕೂಡ ಬಳಸುವಂತಾಯಿತು.

ಇಷ್ಟಕ್ಕೂ ದಾಂಪತ್ಯ ಜೀವನದಲ್ಲಿ ಏಳು ವರ್ಷದ ನಂತರ, ಗಂಡ ಅಥವಾ ಹೆಂಡತಿ (ಅಥವಾ ಇಬ್ಬರೂ) ಒಂದು ಮದುವೆಯ ಆಚೆಗಿನ ಸಂಬಂಧಕ್ಕೆ ಹಾತೊರೆಯುತ್ತಾರೆ ಎಂಬ ಅಂದಾಜು ಸಿದ್ಧಾಂತ, ಹಾತೊರೆಯುವಿಕೆಯನ್ನೇ itch ಅಂದಿದ್ದಾರೆ. ಅದನ್ನೇ ಮತ್ತಷ್ಟು ಒರಟಾಗಿ ಚಿತ್ರನಟ ಉಪೇಂದ್ರ ‘ಕೆರೆತ ಕಾಂತಾ ಕೆರೆತ’ ಅಂದ. ಸಾಮಾನ್ಯವಾಗಿ ಇಂಥ ಸಮಸ್ಯೆ ದಂಪತಿಗಳು 30 ದಾಟಿದ ನಂತರ ತಮ್ಮ ನಡುವೆ ತಂದುಕೊಳ್ಳುತ್ತಾರೆ ಎಂಬ ನಂಬಿಕೆ.

ಆದರೆ ಮೊದಲೆಲ್ಲಾ ಚಿಕ್ಕ ವಯಸ್ಸಿಗೇ ಮದುವೆಯಾಗುತ್ತಿತ್ತು. ಅನೇಕರು ಮದುವೆಯೆಂಬುದಕ್ಕೆ ಬೌದ್ಧಿಕವಾಗಿ prepare ಆಗಿಯೇ ಇರುತ್ತಿರಲಿಲ್ಲ. ಆದರೆ ದೇಹದಲ್ಲಿನ ಹಾರ್ಮೋನ್ ಗಳ ಕಲರವ ಇರುತ್ತಿತ್ತಲ್ಲ? ದಾಂಪತ್ಯವನ್ನು ತುಂಬಾ intimate ಆಗಿ enjoy ಮಾಡುತ್ತಿದ್ದರು. ಆಮೇಲೆ ನಿಧಾನವಾಗಿ ಮನಸ್ಸು ಬಲಿತು, ದೇಹ ತಂಪಾಗಿ ಆಕರ್ಷಣೆಯ ಮಟ್ಟ ಕಡಿಮೆಯಾದ ಮೇಲೆ, ತಮ್ಮನ್ನು ಪುಳಿಕಿತಗೊಳಿಸಬಲ್ಲಂಥ, stimulate ಮಾಡುವಂತಹುದು ಇನ್ನೇನೋ ಬೇಕು ಎಂಬ ಹಂಬಲಗೊಂದಿಗೆ ಮದುವೆಯ ಬೇಲಿ ಹಾರಿ ಹೊರಗಿನ ಸಂಬಂಧಕ್ಕೆ ಕೈ ಚಾಚುತ್ತಿದ್ದರು. ಅಷ್ಟು ಹೊತ್ತಿಗೆ ಬಹುಶಃ ಏಳು ವರ್ಷಗಳಾಗುರುತ್ತಿದ್ದವು.

ಈಗ ಅಷ್ಟೆಲ್ಲಾ ಬೇಗ ಮದುವೆಗಳಾಗುವುದಿಲ್ಲ. ಚೆನ್ನಾಗಿ ಸೆಟ್ಲ್ ಆಗಿ ದುಡಿದು, ಸ್ವಂತ ಮನೆಮಾಡಿ, ಜವಾಬ್ದಾರಿ ಮುಗಿಸಿಕೊಂಡು ಮದುವೆಯಾಗಲು ನಿರ್ಧರಿಸುವ ಹೊತ್ತಿಗೆ ಯಾವ ಇಪ್ಪತ್ತೊಂಬತ್ತೋ? ಮೂವತ್ತೋ? ಅವರು ಮಾನಸಿಕವಾಗಿ ಪ್ರಬುದ್ಧರಾಗಿರುತ್ತಾರೆ. ಮದುವೆಗೆ, ವೈವಾಹಿಕ ಜೀವನಕ್ಕೆ ಮಾನಸಿಕವಾಗಿ ಸಂಸಿದ್ಧರಾಗಿರುತ್ತಾರೆ. ಆದರೆ ಅವರೂ ಈ seven years itchಗೆ ಒಳಗಾಗುತ್ತಾರಾ? ಅಷ್ಟು ಪ್ರಬುದ್ಧ ದಂಪತಿಗಳು, ತಮ್ಮ ಶಾಶ್ವತ ಬಾಂಧವ್ಯಕ್ಕಾಗಿ ತುಂಬಾ ಶ್ರಮಿಸಿದವರು, ಪರಸ್ಪರರನ್ನು ತುಂಬಾ ಪ್ರೀತಿಸಿದವರು, ಅವರೂ…? [ಅನೈತಿಕ ಸಂಬಂಧಕ್ಕಿಂತ ಡೇಂಜರ್ ಯಾವ್ದು ಗೊತ್ತಾ? ಮುಂದೆ ಓದಿ…]

Advertisements

ಇದು ಅನೈತಿಕ ಸಂಬಂಧಕ್ಕಿಂತ ಅಪಾಯಕಾರಿ!- Parallel life dangerous than infidelity

1013 Parallel Life Dangerous Than Infidelity Aid0038

ಯಸ್, ಅನೇಕ ಪ್ರಕರಣಗಳಲ್ಲಿ ಆಗುತ್ತಾರೆ. ತುಂಬಾ ಪ್ರಬುದ್ಧರೂ ಇಂಥ itchಗೆ ಒಳಗಾಗುತ್ತಾರೆ. ಆಫ್ ಕೋರ್ಸ್, ಇದರರ್ಥ ಅವರೆಲ್ಲಾ ಮದುವೆಯಾಚೆಗಿನ ಸಂಪರ್ಕಗಳನ್ನು ಇಟ್ಟುಕೊಳ್ಳುತ್ತಾರೆ ಅಂತ ಅರ್ಥವಲ್ಲ. ಒಂದು ಮದುವೆ ಶಿಥಿಲಗೊಳ್ಳುವುದಕ್ಕೆ ಮದುವೆಯಾಚೆಗಿನ ಸಂಬಂಧವೇ ಅಥವಾ ಅಂಥ ಸಂಬಂಧವೊಂದೇ ಕಾರಣವಾಗಬೇಕಿಲ್ಲ. Seven years itch ಎಂಬುದು ಅದೊಂದೇ ಅನಾಹುತ ಮಾಡಿಸುವುದಿಲ್ಲ. ಅದಕ್ಕಿಂತ ದೊಡ್ಡ, ಅಸಹನೀಯವಾದ ಕೆಲಸ ಮಾಡಿಸಿಬಿಡಬಹುದು.

ಅದನ್ನೇ ಮನೋವೈದ್ಯರು parallel life pattern ಅನ್ನುತ್ತಾರೆ. ಮದುವೆಯಾಚೆಗಿನ ಸಂಬಂಧ-ಅದರ ಸಮಸ್ಯೆಗಳನ್ನು ಹೇಗೋ ಸಹಿಸಿಕೊಳ್ಳಬಹುದು, ಸರಿಪಡಿಸಿಕೊಳ್ಳಬಹುದು. ಆದರೆ parallel life pattern ಭಯಾನಕ. ಇಂಥ ಅನಾಹುತ ಮದುವೆಯಾದ ಏಳು ವರ್ಷಗಳಿಗೇ ಸಂಭವಿಸಬೇಕು ಅಂತಿಲ್ಲ. ಅದು 3ನೇ ವರ್ಷದಲ್ಲೂ ದಾಂಪತ್ಯದ ನಡುವೆ ತನ್ನ ವಿಕಾರದ ತಲೆ ಎತ್ತಬಹುದು.

ಮತ್ತೇನಿಲ್ಲ, “ನನ್ನ ಪಾಲಿಗೆ ಜೀವನವೆಂದರೆ ನೀನೇ. ನಿನ್ನನ್ನು ಬಿಟ್ಟು ಬೇರೊಂದಿಲ್ಲ” ಅಂತ ಮಾತನಾಡುತ್ತಿದ್ದ ಹೆಂಡತಿ ತನ್ನ emotional needsಗಾಗಿ ಮತ್ಯಾವುದೋ ಕಡೆಗೆ ತಿರುಗಿಬಿಡುತ್ತಾಳೆ. ಕೆಲಸವಿರಬಹುದು, ಮಕ್ಕಳಿರಬಹುದು, ಉಳಿದ ಕುಟುಂಬದ ವ್ಯಕ್ತಿಗಳಿರಬಹುದು, ಗೆಳೆಯರಿರಬಹುದು, ಭಜನೆ, ದೇವರ ಭಕ್ತಿ, ಫೇಸ್ ಬುಕ್- ಏನು ಬೇಕಾದರೂ ಆಗಬಹುದು. ಇಂಥ ಅಕರ್ಷಣೆಗಳಿಗೆ ಗಂಡಸೂ ಒಳಗಾಗಬಲ್ಲ. ಹಾಗಂತ, ಅವರಿಬ್ಬರಲ್ಲಿ ದ್ವೇಷವಿಲ್ಲದಿರಬಹುದು. ಆದರೆ ಮದುವೆಯಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಭಾವನೆ ಉಂಟಾಗಿಬಿಟ್ಟಿರುತ್ತದೆ. ಆಗಲೇ ಶುರುವಾಗೋದು parallel living. ಒಂದೇ ಸೂರಿನಡಿ ಬದುಕುತ್ತಿರುತ್ತಾರೆ. ಚರ್ಚೆ, ಮಾತು, ನಿಯಮಬದ್ಧ ಸೆಕ್ಸು, ಮಕ್ಕಳಲ್ಲಿ ಆಸಕ್ತಿ, ಜವಾಬ್ದಾರಿ ಎಲ್ಲಾ ಮೊದಲಿನಂತೆಯೆ ಇವೆ. ಆದರೆ ಇಬ್ಬರೂ ಬೇರೆ ಬೇರೆ. ಹೀಗಾಗುವುದಕ್ಕೆ ಮುಖ್ಯ ಕಾರಣವೆಂದರೆ, ದಂಪತಿಗಳ ಮಧ್ಯೆ ಹುಟ್ಟಿಕೊಳ್ಳುವ ‘ಬೋರು’. [ಬೋರನ್ನು ಒದ್ದೋಡಿಸಿ ಸಂಬಂಧ ಬೆಸೆಯುವ ಮಂತ್ರ…]

ಇಬ್ಬರನ್ನೂ ಬೆಸೆಯಬಲ್ಲ ಏಕೈಕ ಮಂತ್ರ ‘ಆತ್ಮೀಯತೆ’- Togetherness cure for all marriage problems

1013 Togetherness Cure For All Marriage Problems Aid0038

ನಿಜ, ಪ್ರತಿ ಮದುವೆಯಲ್ಲೂ- ಸಂಸಾರದಲ್ಲೂ boredom ಇದ್ದೇ ಇರುತ್ತದೆ. ‘ಏನೇ ಪ್ರೀತಿಯಿಟ್ಟುಕೊಂಡು ಮದುವೆಯಾದರೂ ಕ್ರಮೇಣ ಆಕೆಗೆ ಅವನು ಮತ್ತು ಅವನಿಗೆ ಆಕೆ ಬೋರ್ ಆಗತೊಡಗುತ್ತಾರೆ. ಈ ಬದುಕೇ ಬೋರು ಹೊಡೆಯತೊಡಗಿದೆ ಅನ್ನಿಸಬಹುದು. 3 ವರ್ಷಕ್ಕೆ ಈ ಬೋರು ಶುರುವಾದರೆ ಅದು ಏಳನೆಯ ವರ್ಷಕ್ಕೆ ಮತ್ತೂ ಹೆಚ್ಚಿಸಿ, ಹದಿನಾರನೇ ವರ್ಷದ ಹೊತ್ತಿಗೆ ಭಯಂಕರ ಸ್ಥಿತಿ ತಲುಪಿರುತ್ತದೆ ಎಂಬುದು ಇತ್ತೀಚಿನ ರಿಸರ್ಚು ಹೊರ ಹಾಕಿರುವ ಸತ್ಯ.

ಯಾವಾಗ ದಂಪತಿಗಳು ಪರಸ್ಪರ ಬೋರ್ ಆಗುತ್ತಾರೋ, ಆಗ ಸಹಜವಾಗಿಯೇ ಇಬ್ಬರ ನಡುವಿನ ಆತ್ಮೀಯ ಭಾವ ಕಡಿಮೆಯಾಗುತ್ತ ಹೋಗುತ್ತದೆ. ಇದರಿಂದಾಗಿ ಮದುವೆಯ ಅಥವಾ ದಾಂಪತ್ಯದಲ್ಲಿ ಸಿಗಬೇಕಾದ ತೃಪ್ತಿ, satisfaction ನಶಿಸಿ ಹೋಗುತ್ತದೆ. ಉಳಿದೆಲ್ಲಕ್ಕಿಂತ ಇದು ಹೆಚ್ಚು ಅಪಾಯಕಾರಿ. ದಾಂಪತ್ಯದಲ್ಲಿ ಇಡೀ ನೂರು ವರ್ಷ ಎಕ್ಸೈಟ್ ಮೆಂಟ್ ಇರಲು ಸಾಧ್ಯವಿಲ್ಲ. ಆದರೆ ಮದುವೆಯನ್ನು ಗಟ್ಟಿ ಬಂಧವನ್ನಾಗಿ ಇಡಬಲ್ಲಂತಹುದು ಇವೆರಡನ್ನೂ ಮೀರಿದ ‘ಆತ್ಮೀಯತೆ’. ಮುಖ್ಯವಾಗಿ ಒಂದು ದಾಂಪತ್ಯವನ್ನು ಕೊನೆ ತನಕ ಕಾಯುವುದೇ ಈ ಆತ್ಮೀಯತೆ.

ಗಂಡನ ಹುಳುಕು ಹಲ್ಲು, ಜಿಪುಣತನ, ಕುಡಿತ, ಹೆಂಡತಿಯ ಬೊಜ್ಜು, ಅವಳ ಪೆಡಸು ಮಾತು, ಕೆಟ್ಟ ಅಡುಗೆ-ಎಲ್ಲವನ್ನೂ ಮರೆಯಿಸಿ ಅವರಿಬಬ್ರನ್ನು ಕಡೆ ತನಕ ಬಂಧಿಸಿಡಬಲ್ಲ ಒಂದೇ ಬೆಸುಗೆಯೆಂದರೆ ಆತ್ಮೀಯತೆ. ಆದರೆ ಇಂಥ ಆತ್ಮೀಯತೆ ಕಳೆದುಕೊಂಡು seven years itchಗೆ ಒಳಗಾಗುವ parallel livingನ ಶಾಪಕ್ಕೆ ತುತ್ತಾಗುವ ಮದುವೆಗಳು ಅದೆಷ್ಟೋ. ಇವು ಜಗತ್ತಿನ ಅತ್ಯುತ್ತಮ ಮದುವೆಗಳಿಗೆ ಆಗಬಹುದು, ಪ್ರೇಮ ವಿವಾಹಗಳಿಗೆ ಆಗಬಹುದು, ಹಿರಿಯರು ನೋಡಿದ ಮದುವೆಗಳಿಗೆ ಆಗಬಹುದು, ಅತ್ಯಂತ ರಸವತ್ತಾದ ಸಾಂಗತ್ಯದ ಫಲವಾಗಿ ಆದ ಗಾಂಧರ್ವ ವಿವಾಹಗಳಿಗೂ ಆಗಬಹುದು. ತಪ್ಪಿಸಿಕೊಂಡವರು ಅಪರೂಪ. [ಮೋಹಕ್ಕೊಳಗಾಗುವ ಆ ಪರಿ…]

ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ?- Attraction between couple should last long

1013 Attraction Between Couple Should Last Long Aid0202

ದುರಂತವೆಂದರೆ, ನಾವು ಆತ್ಮೀಯತೆ ಕಳೆದುಕೊಂಡಿದ್ದೇವೆ ಎಂಬುದು ಅರ್ಥವಾಗಲಿಕ್ಕೇ ತುಂಬಾ ಸಮಯ ಹಿಡಿಯುತ್ತದೆ. ಒಂಥರಾ ಮರಮೋಸದ ಕಾಯಿಲೆ. ಕ್ಯಾನ್ಸರ್ ಬಂದು ಅದು ಮೊದಲ stageನಲ್ಲೇ ಇದೆ ಅಂತ ಗೊತ್ತಾದರೆ ಅದಕ್ಕೆ ಔಷಧಿ ಇದೆ. ಆದರೆ ಹೆಚ್ಚಿನ ಸಲ. ಅದು ಗೊತ್ತಾಗುವುದೇ ಕೊನೆಯದಾದ ನಾಲ್ಕನೇ stageನಲ್ಲಿ! ಮದುವೆಗಳ ವಿಷಯದಲ್ಲಿ ಇಂಥ ಪ್ರಮಾದಗಳಾಗುತ್ತವೆ.

ಆದರೆ, ಅಷ್ಟು ಚೆನ್ನಾಗಿದ್ದ ನನ್ನ ಸಂಸಾರ, ನನ್ನ ದಾಂಪತ್ಯ ಹೀಗಾಗಿ ಹೋಯಿತಲ್ಲಾ ಅಂತ ಯಾರೂ ತಲೆ ಚಚ್ಚಿಕೊಳ್ಳಬೇಕಾಗಿಲ್ಲ. ಒಣಗಿದ ಪ್ರತಿ ಮರವೂ ಚಿಗುರಬಹುದು. ಹಣ್ಣೆಲೆಗೂ ಆಯುಷ್ಯವುಂಟು. ಇಂಥ ಸಂದರ್ಭದಲ್ಲಿ ಬೇಗ ಎಚ್ಚರಗೊಂಡಷ್ಟೂ ಬೇಗ ಚಿಕಿತ್ಸೆ, ಬೇಗ ಚೇತರಿಕೆ ಸಾಧ್ಯ. ಮೊದಲಿಗಿಂತ ಈಗ ಪರಿಸ್ಥಿತಿ ಸುಧಾರಿಸಿದೆ. Marriage counselling ಅಂತಲೇ ಒಂದು ವಿಶೇಷ ವಿಜ್ಞಾನ, ತರಬೇತಿ ಬೆಳೆದು ನಿಂತಿವೆ. ಬೇರೆ ಯಾರೂ ಬಗೆಹರಿಸಲಾಗದ ವೈವಾಹಿಕ ಸಮಸ್ಯೆಯನ್ನು ಧಾರವಾಡದ ಡಾ. ಆನಂದ ಪಾಂಡುರಂಗಿಯಥ ಮನೋವೈದ್ಯರು ಪರಿಹರಿಸಿ ಬಿಡತ್ತಾರೆ.

ಇಷ್ಟಾಗಿ, ಎಲ್ಲ ಹಾದರಗಳಿಗಂತ, ಮದುವೆಯಾಚೆಗಿನ ಸಂಬಂಧಗಳಿಗಿಂತ, parallel livingಗಿಂತ ಮಧುರವಾದದ್ದು ದಾಂಪತ್ಯ. ಅನೇಕ ಸಲ ನಾವು ಅದರ ಸಂತಸ, ಖುಷಿ, ರುಚಿಯನ್ನಷ್ಟೆ ಉಂಡೆದ್ದರುತ್ತೇವೆ. ಆದರೆ ರುಚಿ ಬದಲಿಸಿಕೊಳ್ಳುವ, ಮತ್ತೆ ಅವಳಲ್ಲಿಗೇ ಹಿಂತಿರುಗುವ, ಮತ್ತೆ ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ? ಅದರ ಮಾಧುರ್ಯವೇ ಬೇರೆ. [ಸ್ನೇಹಸೇತು : ಹಾಯ್ ಬೆಂಗಳೂರು]

ಅಷ್ಟು ಅಮೂಲ್ಯವಾದ ಕಣ್ಣೊಳಕ್ಕೆ ಕಸ ಬೀಳಬಾರದು!

Srinagar Kitty and Ravi Belagere

“ಅದು ಎಷ್ಟು?” ಕೇಳಿದೆ. ಆತ ಕೇವಲ ಬೆಲೆ ಹೇಳಲಿಲ್ಲ. ಆ ವಸ್ತುವಿನ ನಾನಾ ಮಾಡೆಲ್ ಗಳನ್ನು ತೋರಿಸಿ, ಪ್ರತಿಯೊಂದರದೂ ಬೆಲೆ ಹೇಳಿ, ಆ ಪೈಕಿ ಸರ್ವೋತ್ಕೃಷ್ಟವಾದ ಹೈ ಎಂಡ್ ಮಾಡೆಲ್ ನ ಬಗ್ಗೆ ವಿವರಣೆ ನೀಡಿ, ಇದರ ಬೆಲೆ ಇಷ್ಟು ಅಂದ. ನಾನು ಕೊಳ್ಳುವುದೇ ಆದರೆ ಸರ್ವೋತ್ಕೃಷ್ಟವಾದುದನ್ನೇ ಕೊಳ್ಳುತ್ತೇನೆ ಎಂದು ತೀರ್ಮಾನಿಸಿದ್ದೇನೆಂಬುದು ಅವನಿಗೆ ಗೊತ್ತಿತ್ತಾ? ಅದನ್ನೇ ಕೊಳ್ಳುವಂತೆ ಗಂಟುಬಿದ್ದ.

ಲೇಕಿನ್, ನಾನು ಬ್ರಾಂಡ್ ವ್ಯಸನಿಯಲ್ಲ. ನನ್ನ ಅನೇಕ ಗೆಳೆಯರು ಭಯಂಕರ ಬ್ರಾಂಡ್ ವ್ಯಸನಿಗಳು. ಬೂಟಿನೊಳಗಿನ ಸಾಕ್ಸ್ ನಿಂದ ಹಿಡಿದು, ಕೊರಳ ಸುತ್ತಲಿನ ಟೈ ತನಕ ಅವರಿಗೆ ಎಲ್ಲವೂ ಅತ್ಯಾಧುನಿಕ ಕಂಪನಿಗಳ ಬ್ರಾಂಡ್ ಗಳೇ ಆಗಬೇಕು. ದುಬಾರಿಯವೇ ಆಗಬೇಕು. ಅಂಗಿ ಪ್ಯಾಂಟಿಗಿಂತ ಹೆಚ್ಚಾಗಿ ಒಳ ಉಡುಪುಗಳ ಬ್ರಾಂಡ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಮಿತ್ರರೂ ನನಗಿದ್ದಾರೆ. ಕೇವಲ ಐದು ನೂರು ರುಪಾಯಿಯಲ್ಲಿ ಆರು ಬನೀನು ಮತ್ತು ಅದರ ‘ಪ್ರತಿಸ್ಪರ್ಧಿ’ ಉಡುಪನ್ನು ಸಲೀಸಾಗಿ ಜಯನಗರದ ಫುಟ್ ಪಾತ್ ನಿಂದ ತಂದು ‘ಈ ವರ್ಷದ ಷಾಪಿಂಗ್ ಮುಗಿಯಿತು’ ಎಂದು ಘೋಷಿಸುವ ಸಾಧ್ವೀ ಶಿರೋಮಣಿಯ ಏಕೈಕ ಗಂಡನಾದ ನಾನು ಇಂಥ ಖಯಾಲಿಗಳಿಂದ ದೂರ. ಕೇವಲ ಉಡುಪು, ವಾಚು, ಪೆನ್ನು ಇತ್ಯಾದಿಗಳ ಬಗ್ಗೆ ಅಲ್ಲ, ಕಾರು-ಬಂಗಲೆಗಳ ಬಗ್ಗೆಯೂ ನಾನು ಪರ್ಟಿಕ್ಯುಲರ್ ಅಲ್ಲ. ಆದರೆ ನನಗೆ ಒಬ್ಬ ಬೆಳೆದ ಮಗ ಮತ್ತು ಇಬ್ಬರು ಕ್ರೇಜಿ ಖಯಾಲುಗಳ ಅಳಿಯಂದಿರಿದ್ದಾರೆ. ಎಲ್ಲರೂ ಹೆಚ್ಚು ಕಡಿಮೆ ಒಂದು ವಯಸ್ಸಿನವರು. ಅವರಿಗೆ ಬ್ರಾಂಡ್ ಗಳ ಬಗ್ಗೆ ಹುಚ್ಚು ಸಹಜ. ಚಿಕ್ಕ ಅಳಿಯ ಚಿತ್ರ ನಟ.

“ಅಂಕಲ್, ಆಡಿ ಅಂತ ಹೊಸ ಕಾರು ಬಂದಿದೆ. ಅದರ ಲೇಟೆಸ್ಟ್ ಮಾಡೆಲ್ ಬಿಡುಗಡೆಯಾಗಿದೆ. ಹೆಚ್ಚೆಂದರೆ ಐವತ್ತು ಲಕ್ಷ. ನೀವು ತಗೋಬೇಕು ಅಂಕಲ್…” ಅಂತ ಮಾತಿಗಾರಂಭಿಸುತ್ತಾನೆ.

“ನೋಡು ಮಿತ್ರಾ, ನೀನು ನಟ. ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ನಿನ್ನ ಚಿತ್ರದ ನಿರ್ಮಾಪಕ ನಿನ್ನ ರೇಟು ಹೆಚ್ಚಿಸುತ್ತಾನೆ. ನಿನ್ನ ಕೋ-ಬ್ರದರ್ ವೃತ್ತಿಯಿಂದ ಬಿಲ್ಡರ್. ಅವನು ಆಡಿ ಕಾರ್ ನಲ್ಲಿ ಹೋಗಿ ಇಳಿದರೆ ವ್ಯಾಪಾರ ಕುದುರಬಹುದು. ಆದರೆ ನಾನು ಆಡಿ ಕಾರಿನಲ್ಲಿ ಹೋದರೂ, ಲಗೇಜ್ ಗಾಡಿಯಲ್ಲಿ ಹೋದರೂ ಜನ ಗುರುತಿಸುವುದು ರವಿ ಬೆಳಗೆರೆ ಅಂತಲೇ. ಕೊಡೋದು, ಒಂದು ಸಂಚಿಕೆಗೆ ಹದಿನಾಲ್ಕೇ ರುಪಾಯಿ. ನಂಗ್ಯಾಕಪ್ಪಾ ಆಡಿ ಕಾರು?” ಎಂದು ನಗೆಯಾಡಿದ್ದೆ.

ಠೀಕ್ ಹೈ, ಬದುಕಿಗೊಂದು ಸ್ಟೈಲ್ ಇರಬೇಕು. ಆ ಮನುಷ್ಯ ಅಭಿರುಚಿಯುಳ್ಳವನು ಅಂತ ಜನ ಅಂದುಕೊಳ್ಳುವ ಹಾಗಿರಬೇಕು. ನಾವು ಆಕರ್ಷಕವಾಗಿ ಕಾಣಬೇಕು. ಅದೆಲ್ಲ ಒಪ್ಪುತ್ತೇನೆ. ಆದರೆ ನಾವು ಧರಿಸುವ ವಸ್ತುಗಳು, ಓಡಾಡುವ ಕಾರು, ವಾಸಿಸುವ ಬಂಗಲೆ – ಅಭಿರುಚಿಯೆಂದರೆ ಇಷ್ಟೇ ಅಲ್ಲವಲ್ಲ? ಅರ್ಧಕ್ಕೂ ಹೆಚ್ಚಿನ ಬದುಕನ್ನು ನಾನು ಕೊಳಗೇರಿಗಳಲ್ಲಿ, ಪುಟ್ಟಮನೆಗಳಲ್ಲಿ, ಬಸ್ ಸ್ಟ್ಯಾಂಡುಗಳಲ್ಲಿ ಕಳೆದಿದ್ದೇನೆ. ನನ್ನ ಆಫೀಸು ಇವತ್ತಿಗೂ ಇಟ್ಟಿಗೆ ಬಟ್ಟಿಯಂತೆ ಕಾಣುತ್ತದೆ. ನನ್ನ ಪುಸ್ತಕ, ಪತ್ರಿಕೆಗಳು ತುಂಬ ಸಾಧಾರಣ ಹಾಳೆಯಲ್ಲಿ – ಬಣ್ಣಗಳೇ ಇಲ್ಲದೆ ಪ್ರಿಂಟಾಗುತ್ತವೆ. ಸಭೆಗಳಿಗೆ ಹೊರಡುವಾಗ ಕೊಂಚ ಫಾರ್ಮಲ್ ಆಗಿ ಉಡುಪು ಧರಿಸುತ್ತೇನೆಯೇ ಹೊರತು, ಉಳಿದಂತೆ ನನ್ನ ದಿರಿಸು- ಒಂದು ಕಾಟನ್ ಷರಟು ಮತ್ತು ಟ್ರ್ಯಾಕ್ ಪ್ಯಾಂಟು. ಆದರೆ ಈ ಅಸಡ್ಡೆ, ಕಾಂಪ್ರೊಮೈಸುಗಳನ್ನು ನಾನು ಎರಡು ವಿಷಯಗಳಲ್ಲಿ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಮೊದಲನೆಯದು, ಓದು-ಬರಹ. ಎರಡನೆಯದು, ಆರೋಗ್ಯ.

ನಾನು ಅಪ್ಪಿತಪ್ಪಿ ಕೂಡ ನನಗೆ ಪರಿಚಯವಿಲ್ಲದ, ಆತನ ಬುದ್ಧಿವಂತಿಕೆ ಮನವರಿಕೆಯಾಗದ ಮಾಮೂಲಿ ವೈದ್ಯರಿಂದ ನನ್ನ ಆರೋಗ್ಯವನ್ನು ಒಪ್ಪಿಸುವುದಿಲ್ಲ. ಯಾರೋ ಔಷಧಿ ಅಂಗಡಿಯವನು ಕೊಡುವ ಸಲಹೆ ಮತ್ತು ಮಾತ್ರೆ ತೆಗೆದುಕೊಳ್ಳುವುದಿಲ್ಲ. ಡಾಕ್ಟರು ಎಂಥವರು ಮತ್ತು ಅವರು ಕೊಡುವ ಚಿಕಿತ್ಸೆ ಎಂಥದು ಎಂಬುದನ್ನು ಇಂಟರ್ನೆಟ್ ನಲ್ಲಿ ಚೆಕ್ ಮಾಡಿಕೊಳ್ಳುತ್ತೇನೆ. ಯಾರೋ ಹೇಳಿದರು ಅಂತ ಮನೆ ಮದ್ದು, ನಾಟಿ ವೈದ್ಯ ಮುಂತಾದವುಗಳನ್ನು ಮಾಡಿಕೊಳ್ಳುವುದಿಲ್ಲ. ಅವೆಲ್ಲ ಪರಿಣಾಮಕಾರಿಯೇ ಇರಬಹುದು. ಆದರೆ ನಾನು ಅಲೋಪತಿಯ ಹೊರತು ಮತ್ಯಾವುದೇ ಔಷಧೀಯ ಪದ್ಧತಿಯನ್ನು ನಂಬುವುದಿಲ್ಲ. ನೋ ರಿಸ್ಕ್.

ಬರಹದ ವಿಷಯಕ್ಕೆ ಬಂದರೆ, ನಾನು ತುಂಬ ಶ್ರೇಷ್ಠವಾದುದನ್ನು ಬರೆದಿದ್ದೇನೆ ಅಂತ ಭಾವಿಸುವುದಿಲ್ಲ. ಆದರೆ ಓದುಗರಿಗೆ ಅವಶ್ಯಕವಾದುದನ್ನು, ಅರ್ಥವಾಗುವುದನ್ನು ಮಾತ್ರ ಬರೆದಿದ್ದೇನೆ. ಬರೆಯುವುದು ನನ್ನ ವೃತ್ತಿಯಾದ್ದರಿಂದ, ಹಣ ಬಾರದ ಹೊರತು ನಾನು ಏನನ್ನೂ ಬರೆಯುವುದಿಲ್ಲ. ಹಾಗಂತ, ಹಣ ಬರುವುದೆಂಬ ಕಾರಣಕ್ಕೆ ಏನನ್ನಾದರೂ ಸರಿ, ಬರುಯುತ್ತೇನೆ ಎಂದು ಹೊರಡುವುದಿಲ್ಲ. ನನ್ನ ಆತ್ಮ ಸಮಾಧಾನ ಹಣಕ್ಕಿಂತ ಅಥವಾ ಅಟ್ಲೀಸ್ಟ್, ಹಣದಷ್ಟೇ ಮುಖ್ಯ.

ಇನ್ನು ಓದು, ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಷ್ಟೇ ಎಚ್ಚರಿಕೆಯಿಂದ ನಾವು ನಮ್ಮ ಓದನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿ ಚೂಸಿ. ಯಾರೋ ಹೆಸರಾಂತ(?) ಲೇಖಕರು ಬರೆದರು ಎಂಬ ಕಾರಣಕ್ಕೆ ಅವರು ಬರೆದುದನ್ನೆಲ್ಲ ಓದಲು ಕೂರಬೇಡಿ. ಕೆಲವರ ಶೈಲಿ ಇಷ್ಟವಾಗಬಹುದು. ಕೆಲವರ ವಾದ ಸರಿಯೆನ್ನಿಸಬಹುದು. ಆದರೆ ಅವರು ಕೊಡುವ ‘ಕಸ’ವನ್ನೆಲ್ಲ ತಲೆಗೆ ತುಂಬಿಸಿಕೊಳ್ಳಬೇಡಿ. ನಿಮಗೆ ಸಿಟ್ಟು ಬರಬಹುದು. ನಾನು ಕನ್ನಡದಲ್ಲಿ ಕಥೆ, ಕಾದಂಬರಿ ಓದುವುದನ್ನು ನಿಲ್ಲಿಸಿ ವರ್ಷಗಳೇ ಆದವು. ಆವರಣ ಕಾದಂಬರಿಯನ್ನು ಹಟಕ್ಕೆ ಬಿದ್ದು ಓದಿದೆನಾದರೂ, ಭೈರಪ್ಪನವರ ಕೊನೆಯ ಕಾದಂಬರಿ ಅಂತ ನಾನು ಓದಿದ್ದು ಸಾಕ್ಷಿ. ಲೇಖಕನಾದವನು ಒಂದು ಹಂತದಲ್ಲಿ ಬೆಳೆಯುವುದನ್ನು ನಿಲ್ಲಿಸಿ ಬಿಡುತ್ತಾನೆ. ಬರೆದದ್ದನ್ನೇ ತಿರುವಿ-ತಿರುವಿ ಬರೆಯುತ್ತಾನೆ. ಅಥವಾ ಓದುಗ, ಲೇಖಕನ ಮಟ್ಟವನ್ನು ಮೀರಿ ಬೆಳೆಯತೊಡಗುತ್ತಾನೆ. ಬಾಲ್ಯದಲ್ಲಿ ಕಣ್ಣರಳಿಸಿ ಓದುತ್ತಿದ್ದ ಚಂದಮಾಮ, ಬಾಲಮಿತ್ರ ಇವತ್ತು ನೆನಪು ಮಾಡಿಕೊಳ್ಳಲು ಚೆಂದವೇ ಹೊರತು, ನಮ್ಮ ಓದು ಅಲ್ಲಿಗೇ ನಿಂತುಬಿಡಬಾರದು. ಲೇಖಕ ಎಷ್ಟೇ ದೊಡ್ಡವನಾದರೂ, ಏನೇ ಶ್ರೇಷ್ಠನೆನ್ನಿಸಿಕೊಂಡರೂ ಅವನನ್ನೂ ದಾಟಿ ಮುಂದಕ್ಕೆ ಹೋಗಲೇಬೇಕು. ಓದುಗ ಬೆಳೆಯುವುದೇ ಹಾಗೆ. ನೀವು ಹತ್ತು ವರ್ಷ ಕಳೆದರೂ ಅದದೇ ಸಾಹಿತ್ಯ, ಅವೇ ಲೇಖಕರು, ಅಂಥವೇ ಕಥಾವಸ್ತುಗಳನ್ನು ಓದುತ್ತಿದ್ದೀರಾ? ದಯವಿಟ್ಟು ಮುಂದಿನ ಮೆಟ್ಟಿಲು ಹತ್ತುವ ಬಗ್ಗೆ ಯೋಚಿಸಿ.

ಇಷ್ಟಾಗಿ, ಏನನ್ನು ಮತ್ತು ಯಾರನ್ನು ಓದಬೇಕು ಎಂಬ ಆಯ್ಕೆ, ನಿಮ್ಮ ಬುದ್ಧಿಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ನಾನು ಇಂಟರ್ನೆಟ್ ಹೊಕ್ಕೆನೆಂದರೆ ಒಂದು ಕಡೆಯಿಂದ ನೂರಾರು ಪುಸ್ತಕಗಳ ಕ್ಷಿಪ್ರ ಪರಿಚಯಗಳು, ಓದುಗರ ವಿಮರ್ಶೆಗಳು, ಲೇಖಕರ ವಿವರಗಳು – ಇವನ್ನು ಓದಿಕೊಳ್ಳುತ್ತೇನೆ. ಅಷ್ಟು ತಿಳಿದುಕೊಂಡರೆ ಸಾಕು. ಆ ಪುಸ್ತಕವನ್ನು ಓದಬೇಕೋ, ಓದಬಾರದೋ ಗೊತ್ತಾಗಿ ಬಿಡುತ್ತದೆ. ಕೆಲವು ಇಂಗ್ಲಿಷ್ ಪತ್ರಿಕೆಗಳನ್ನು ಅವುಗಳಲ್ಲಿ ಪ್ರಕಟವಾಗುವ ಪುಸ್ತಕ ವಿಮರ್ಶೆಗಳಿಗಾಗಿಯೇ ತರಿಸುತ್ತೇನೆ. ಅಲ್ಲಿ ಹೊಸ ಪುಸ್ತಗಳ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತೇನೆ. ಕೆಲ ಬಾರಿ ಪುಸ್ತಕ ಕೈಗೆತ್ತಿಕೊಳ್ಳುತ್ತೇನಾದರೂ, ಪೂರ್ತಿ ಓದುವುದಿಲ್ಲ. ಆಯ್ದ ಅಧ್ಯಾಯಗಳನ್ನು ಓದಿ ಮುಚ್ಚಿಡುತ್ತೇನೆ. ಅದೊಂಥರಾ ವಿಸ್ತೃತವಾಗಿ ಬಿಡಿಸಿದ ಎಲೆಯಲ್ಲಿ ನಮಗೆ ಬೇಕಾದುದನ್ನಷ್ಟೇ ತಿಂದ ಹಾಗೆ. ವಿರಾಮದಲ್ಲಿ ಕುಳಿತು ಛಾನಲ್ ಬದಲಿಸಿದ ಹಾಗೆ.

ಓದಿನ ಬಗ್ಗೆ ಯಾಕಿಷ್ಟು ಚೂಸಿ ಆಗಿರಬೇಕು ಅಂದರೆ, ನಮ್ಮ ಸಮಯ ಅತ್ಯಂತ ಮುಖ್ಯವಾದುದು. ಎಷ್ಟು ವರ್ಷ ಬದುಕಿರುತ್ತೇವೆ? ವರ್ಷಕ್ಕೆ ಎಷ್ಟು ಪುಸ್ತಕ? ಎಷ್ಟು ವರ್ಷ ನಮ್ಮ ಕಣ್ಣು ಕೆಲಸ ಮಾಡುತ್ತವೆ? ಮನುಷ್ಯರ ಅಂಗಗಳ ಪೈಕಿ ಕಣ್ಣು ಅತ್ಯಂತ ಅಮೂಲ್ಯವಾದುದು. ಅಂಥ ಕಣ್ಣಿನೊಳಕ್ಕೆ ಕಸ ಬೀಳದಂತೆ ನೋಡಿಕೊಳ್ಳಬೇಕಲ್ಲವೆ?

ನಮ್ಮ ನಂತರವೂ ನಮ್ಮ ಬಗ್ಗೆ ಬದುಕು ಮಾತನಾಡುತ್ತದೆ – ಸಾವಿನ ನಂತರವೂ ಬದುಕಿರುವುದು ಯಾವುದು?

Ravi Belagere

 

ಅದೊಂದು ಚಿಕ್ಕ ಸಮಸ್ಯೆ. ನಮ್ಮ ಆಫೀಸಿನೆದುರು ನಾನೊಂದು ಸೈಟು ಖರೀದಿಸಿದೆ. ವಿಶಾಲವಾಗಿತ್ತು. ಆದರೆ ಅಲ್ಲಿ ಮನೆ ಕಟ್ಟುವಂತಿರಲಿಲ್ಲ. ಏಕೆಂದರೆ ಸೈಟು ತೀರಾ ರಸ್ತೆಗೇ ಇತ್ತು. ಅಲ್ಲದೆ ಅಷ್ಟು ದೊಡ್ಡ ಸೈಟಿನಲ್ಲಿ ಮನೆ ಕಟ್ಟುವ ಇರಾದೆ ನನಗಿರಲಿಲ್ಲ. ಹಾಗಾದರೆ ಪ್ರಿಂಟಿಂಗ್ ಪ್ರೆಸ್ ಹಾಕಿ ಅಂತ ಕೆಲವರು ಸಲಹೆ ನೀಡಿದರು. ನಾನು ಈ ಹಿಂದೆಯೇ ಪ್ರಿಂಟಿಂಗ್ ಪ್ರೆಸ್ ಹಾಕಿ ಕೈಸುಟ್ಟುಕೊಂಡವನು. ಅಲ್ಲದೆ ನನ್ನದು ವಾರಪತ್ರಿಕೆ. ತಿಂಗಳಿಗೊಂದು ಸಲ ಚೌರ ಮಾಡಿಸಿಕೊಳ್ಳುವವರ್ಯಾರಾದರೂ ಷೇವಿಂಗ್ ಸಲೂನ್ ಇಡುತ್ತಾರಾ? ಮಷೀನುಗಳ ಸಹವಾಸವೇ ಬೇಡ ಅಂತ ತೀರ್ಮಾನಿಸಿದೆ.

ಒಳ್ಳೆಯದೊಂದು ಗಾರ್ಡನ್ ರೆಸ್ಟುರಾಂಟ್ ಮಾಡು. ಪದ್ಮನಾಭನಗರದಲ್ಲಿ ಒಳ್ಳೆಯ ಹೊಟೇಲ್ ಇಲ್ಲ ಅಂತ ಕೆಲವರೆಂದರು. ಇವತ್ತಿಗೂ ನಾನು ಹೆಚ್ಚಾಗಿ ಹೊಟೇಲುಗಳಿಗೆ ಹೋಗುವವನಲ್ಲ. ಅಂಥದರಲ್ಲಿ ಹೊಟೇಲು ನಡೆಸುವುದು ನನ್ನಿಂದ ಆದೀತೆ? ಹಿಟ್ಟು ರುಬ್ಬುವವನು ರಜೆ ಹಾಕಿದರೆ ನಾನೇ ಕುಳಿತು ಹಿಟ್ಟು ರುಬ್ಬಬೇಕಾಗುತ್ತದೆ. ಅದರ ಸಹವಾಸವೇ ಬೇಡ ಅಂದುಕೊಂಡೆ. ಕಡೆಗೆ ಒಳ್ಳೆಯದೊಂದು ಛತ್ರ ಕಟ್ಟಿಸು. ಬೆಂಗಳೂರಿನಲ್ಲಿ ಛತ್ರಗಳಿಗೆ ಡಿಮ್ಯಾಂಡ್ ಇದೆ. ಪದೇ ಪದೆ ಇನ್ವೆಸ್ಟ್ ಮಾಡಬೇಕಿಲ್ಲ. ತಂತಾನೇ ಹಣ ಬರುತ್ತಿರುತ್ತದೆ ಅಂದರು. ಒಳ್ಳೆಯ ಐಡಿಯಾ ಅನ್ನಿಸಿತು. ಒಂದಷ್ಟು ಪಾತ್ರೆ, ಪಡಗ, ಕೊಳದಪ್ಪಲೆ, ಹಂಡೆ ಇಟ್ಟರೆ ಅದನ್ನೂ ಬಾಡಿಗೆಗೆ ಕೊಡಬಹುದು ಅಂದರು. ಸುತ್ತಮುತ್ತಲಿನ ಛತ್ರಗಳ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ತಂದರು. ಇನ್ನೇನು ಆರ್ಕಿಟೆಕ್ಟ್ ಗೆ ಹೇಳಿ ಒಂದು ಪ್ಲಾನ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲೇ ಒಂದು ಪ್ರಶ್ನೆ ಇದಿರಾಯಿತು.

ಯಾವತ್ತೋ ಒಂದು ದಿನ, ನಾನು ಸತ್ತ ಎಷ್ಟೋ ವರ್ಷಕ್ಕೆ ರವಿ ಬೆಳಗೆರೆ ಏನು ಮಾಡುತ್ತಿದ್ದ? ಅಂತ ಯಾರಾದರೂ ಕೇಳಿದರೆ, ಛತ್ರ ಕಟ್ಟಿಸಿ ಹಂಡೆ-ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಅಂತ ಉತ್ತರ ಬರುತ್ತದೆ. ಅದು ಸರಿಯಾ? ಕೇಳಿಕೊಂಡೆ. ಛತ್ರದ ಐಡಿಯಾ ಬೆಳಗ್ಗೆ ಹೊತ್ತಿಗೆ ಕಸದ ಬುಟ್ಟಿ ಸೇರಿತ್ತು. ಆಮೇಲೆ ಅದೇ ಸೈಟಿನಲ್ಲಿ ಎದ್ದು ನಿಂತಿದ್ದು ಪ್ರಾರ್ಥನಾ ಸ್ಕೂಲ್. ಇವತ್ತು ಅಂಥ ಆರು ಕಟ್ಟಡಗಳಲ್ಲಿ, ಆರು ಸಾವಿರ ಮಕ್ಕಳೊಂದಿಗೆ ಶಾಲೆ ಕಳೆ ಕಳೆಯಾಗಿ ನಡೆಯುತ್ತಿದೆ. ಅದು, ನಾನು ಸತ್ತ ಮೇಲೂ ನಡೆಯುತ್ತದೆ. ಅಂದರೇನರ್ಥ? ನೀನು ಸತ್ತ ಮೇಲೂ ಈ ಸಮಾಜ ನಿನ್ನನ್ನು ಒಬ್ಬ ಮಹಾತ್ಮನನ್ನು ನೆನಪಿಟ್ಟುಕೊಳ್ಳುವಂತೆ ನೆನಪಿಟ್ಟುಕೊಂಡಿರಬೇಕಾ? ಅಂತ ಗೆಳೆಯನೊಬ್ಬ ಕೇಳಿದ.

ಈ ಸಮಾಜ ಕೇವಲ ಮಹಾತ್ಮರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನ ರೆಪ್ಯುಟೇಷನ್ ಎಂಬುದಿದೆಯಲ್ಲ? ಅದು ಅವನ ಸಾವಿನ ನಂತರವೂ ಜೀವಂತವಾಗಿರುತ್ತದೆ ಅಂದೆ. ಅದು ನನ್ನ ದೃಢವಾದ ನಂಬಿಕೆಯೂ ಹೌದು. ಒಳ್ಳೆಯದಷ್ಟೇ ಅಲ್ಲ; ಒಳ್ಳೆಯದಲ್ಲದ್ದೂ ಜೀವಂತವಿರುತ್ತದೆ. ಆಫ್ ಕೋರ್ಸ್, ನಮ್ಮದು ಒಂಥರಾ ಕೃತಘ್ನ ದೇಶ, ಕೃತಘ್ನ ಸಮಾಜ. ಯಾರಿಗೆ, ಯಾವುದಕ್ಕೆ, ಎಷ್ಟು ಋಣ-ಸ್ಮರಣೆ ಸಂದಾಯ ಮಾಡಬೇಕೋ ಅಷ್ಟನ್ನು ನಾವು ಮಾಡುವುದಿಲ್ಲ. ಒಬ್ಬ ಸಿನೆಮಾ ನಟ ಸತ್ತು ಹೋದರೆ ನಮ್ಮಲ್ಲಿ ಊರಿಗೆ ಊರು ಹೊತ್ತಿ ಉರಿಯುತ್ತದೆ. ಪುಡಿ ರಾಜಕಾರಣಿಗಳ ಜನ್ಮದಿನಗಳಂದು ಜಾಹಿರಾತುಗಳೊಂದಿಗೆ ಪತ್ರಿಕೆಗಳು ತುಂಬಿ ತುಳುಕುತ್ತವೆ. ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಹಾಗೂ ಉಂಟೆ? ಹೀಗೂ ಉಂಟೆ? ಅಂತ ಟೀವಿ ಕಾರ್ಯಕ್ರಮಗಳು ನಡೆಯುತ್ತವೆ.

ಆದರೆ, ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಅಗ್ರಗಣ್ಯರಾದ ಆರ್.ಕೆ. ನಾರಾಯಣ್ ಯಾವತ್ತು ತೀರಿಕೊಂಡರು? ಯಾರಿಗೂ ನೆನಪಿಲ್ಲ. ಅಷ್ಟೇ ಖ್ಯಾತನಾಮರಾದ ಮುಲ್ಕ್ ರಾಜ್ ಆನಂದ್ ಕಡೇ ಪಕ್ಷ ಮುಂಬಯಿಯಲ್ಲಿ ತೀರಿಕೊಂಡಿದ್ದರಿಂದ ಕೊಂಚಮಟ್ಟಿಗೆ ಅದು ಸುದ್ದಿಯಾಯಿತು. ಈಗ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್ ಅವರ ದೇಹ ಸ್ಥಿತಿ ಗಂಭೀರವಾಗಿದೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿರುವುದು ಫುಟ್ಬಾಲ್ ಬಗ್ಗೆ.

ಮೊನ್ನೆ ತೀರಿಕೊಂಡ ಲೇಖಕ ಮನೋಹರ ಮಳಗಾಂವಕರ್ ರ ಬಗ್ಗೆಯೇ ಯೋಚಿಸಿ. ಅವರು ಇಂಗ್ಲಿಷಿನಲ್ಲಿ ಬರೆಯತೊಡಗಿದ ಮೊದಲ ಭಾರತೀಯ ತಲೆಮಾರಿನ ಲೇಖರರು. ಕೇವಲ ಕಾಲ್ಪನಿಕ ಸಾಹಿತ್ಯವನ್ನು ಅವರು ಬರೆಯಲಿಲ್ಲ. ಇತಿಹಾಸದಂತಹ ಡ್ರೈ ಸಬ್ಜೆಕ್ಟ್ ಇಟ್ಟುಕೊಂಡು ಅತ್ಯಂತ ರಸವತ್ತಾಗಿ ಬರೆದರು. ಅವರು ಬೆಳೆದದ್ದು ಇಂಗ್ಲಿಷರ ಮಧ್ಯೆ. ಇಂಗ್ಲಿಷರ ಸೈನ್ಯದಲ್ಲಿ ಅಧಿಕಾರಿಯೂ ಆಗಿದ್ದರು. ಇಂಗ್ಲಿಷರಿಂದ ಪ್ರಭಾವಿತರೂ ಆಗಿದ್ದರು. ಹೀಗಾಗಿ ಅವರು ಬರೆದದ್ದು ಭಾರತಕ್ಕಿಂತ ಹೆಚ್ಚಾಗಿ ಇಂಗ್ಲೆಂಡಿನಲ್ಲಿ ಖ್ಯಾತಿ ಪಡೆಯಿತು. ಅಲ್ಲಿಂದ ಅದು ಫ್ರಾನ್ಸ್ ಗೆ, ರೋಮ್ ಗೆ, ಇಟಲಿಗೆ, ಅಮೆರಿಕಕ್ಕೆ ಹರಡಿತು. ನಾವು ಭಾರತೀಯರು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಓದಲೂ ಇಲ್ಲ. ತಮ್ಮ ಸಾಹಿತ್ಯ ದೇಶಾನುದೇಶಗಳಲ್ಲಿ ಖ್ಯಾತಿ ಪಡೆಯುತ್ತಿದ್ದರೆ, ಮನೋಹರ ಮಳಗಾಂವಕರ್ ಅವರು ತಮ್ಮ ಪಾಡಿಗೆ ದಟ್ಟ ಕಾಡಿನ ಮಧ್ಯೆ ಬಂಗಲೆ ಕಟ್ಟಿಕೊಂಡು ಐವತ್ತು ಸುದೀರ್ಘ ವರ್ಷಗಳ ತನಕ ಋಷಿಯಂತೆ ಬದುಕಿದರು. ಬರೆದಂತೆ ಬದುಕಿದರು. ಬಹಳ ಕಾಲದ ತನಕ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರಿಂದ, ಅವರು ತೀರಿಕೊಂಡಾಗ ಆ ಪತ್ರಿಕೆ ಒಂದು ಸಂಪಾದಕೀಯ ಪ್ರಕಟಿಸಿತು. ಅಷ್ಟು ಬಿಟ್ಟರೆ, ಒಂದೇ ಒಂದು ಚಾನಲ್ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಳಗಾಂವಕರ್ ರ ಸಾವಿನ ಸುದ್ದಿ ಬಿತ್ತರಿಸಲಿಲ್ಲ. ಅಂಥ ಹಿರಿಯ ಚೇತನಕ್ಕೆ ಸರಿಯಾದ ರೀತಿಯಲ್ಲಿ ನುಡಿ ನಮನ ಸಲ್ಲಿಸಿದ್ದು ಒಂದು ವಿಜಯ ಕರ್ನಾಟಕ ಮಾತ್ರ.

ಬಿಡಿ, ಹೋದವರು ಹೋದರು. ಆದರೆ ಅವರ ಹೆಸರು, ಅವರ ಕೀರ್ತಿ, ಅಗ್ಗಳಿಕೆ, ಹೆಗ್ಗಳಿಕೆ ಅವು ಹೋಗುತ್ತವೆಯಾ? ನಾನು ಕೇವಲ ಲೇಖಕರು, ಖ್ಯಾತನಾಮರು, ರಾಜಕೀರಣಿಗಳು, ನಟರು ಮುಂತಾದವರ ಬಗ್ಗೆಯಷ್ಟೇ ಮಾತನಾಡುತ್ತಿಲ್ಲ. ರೆಪ್ಯುಟೇಷನ್ ಎಂಬುದು ಪ್ರತಿ ಮನುಷ್ಯನೂ ತನ್ನ ವರ್ಷಾಂತರಗಳ ಬದುಕಿನಲ್ಲಿ ಪ್ರಯತ್ನಪೂರ್ವಕವಾಗಿಯೋ, ಸಂಟೈಮ್ಸ್ ಅಪ್ರಯತ್ನಪೂರ್ವಕವಾಗಿಯೋ ಗಳಿಸಿಕೊಳ್ಳುತ್ತ ಹೋಗುತ್ತಾನೆ. ಅದು ಆತನೊಂದಿಗೆ ಬೆಳೆಯುತ್ತದೆ, ಇಳಿಯುತ್ತದೆ, ಕುಸಿಯುತ್ತದೆ. ಇದ್ದಕ್ಕಿದ್ದಂತೆ ಶಿಖರದ ತುದಿ ತಲುಪುತ್ತದೆ. ಒಬ್ಬ ಎಲಿಮೆಂಟರಿ ಶಾಲಾ ಶಿಕ್ಷಕ ಜೀವನ ಪರ್ಯಂತ ಮಕ್ಕಳಿಗೆ ಅದೇ ಪಾಠ ಹೇಳುಕೊಡುತ್ತಿರುತ್ತಾನೆ. ನಾಕೊಂದ್ಲ ನಾಕು ಎಂಬುದು ಬದಲಾಗುವುದೇ ಇಲ್ಲ. ಆದರೆ ಮಕ್ಕಳು ಬದಲಾಗುತ್ತಿರುತ್ತಾರೆ. ಪ್ರತಿ ವರ್ಷ, ಪ್ರತಿ ನಿತ್ಯ, ಪ್ರತಿ ಕ್ಷಣ. ಅವರೊಂದಿಗೆ ಆ ಮೇಷ್ಟು ರಿಪ್ಯುಟೇಷನ್ ಕೂಡ ಬೆಳೆಯುತ್ತ ಹೋಗುತ್ತದೆ. ಅದು ಮೇಷ್ಟ್ರು ಕಲಿಸಿದ ಪಾಠವೆಲ್ಲ ಬಳಕೆಯಾದ ನಂತರವೂ, ಮರೆತು ಹೋದ ನಂತರವೂ, ಕೆಲಸಕ್ಕೆ ಬಾರದಾದ ನಂತರವೂ ಬದುಕಿರುತ್ತದೆ. ಮೇಷ್ಟ್ರು ಎಂಬುದು ನಾನು ಕೊಟ್ಟ ಉದಾಹರಣೆಯಷ್ಟೇ. ಈ ಮಾತು ನಮಗೆಲ್ಲ ಅನ್ವಯಿಸುತ್ತದೆ.

ನಮ್ಮ ನಂತರವೂ ನಮ್ಮ ರೆಪ್ಯುಟೇಷನ್ ಜೀವಂತವಾಗಿರುತ್ತದೆ ಎಂಬ ವಿಷಯ ನಮಗೆ ಮನವರಿಕೆಯಾದರೆ ಸಾಕು. ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಹೆಚ್ಚಿನ ಶ್ರದ್ಧೆಯಿಂದ ಮಾಡುತ್ತೇವೆ. ಇವತ್ತಿನದಕ್ಕಿಂತ ಹೆಚ್ಚಿನದೇನನ್ನೋ ಸಾಧಿಸಲು ತೀರ್ಮಾನಿಸುತ್ತೇವೆ. ಪಡುವ ಸುಖಕ್ಕಿಂತ, ಮಾಡುವ ಸಾಧನೆಯ ಕಡೆಗೆ ಹೆಚ್ಚು ಗಮನ ವಹಿಸುತ್ತೇವೆ. ಅಯ್ಯೋ ಬಿಡು, ನಾವು ಸತ್ತ ಮೇಲೆ ಯಾರು ಏನಂದುಕೊಂಡರೇನಂತೆ? ನಮಗೇನು ಗೊತ್ತಾಗುತ್ತದಾ? ಎಂಬ ನಿಲುವು ತಳೆಯಬೇಡಿ. ನಮ್ಮ ನಂತರವೂ ನಮ್ಮ ಬದುಕು ಮಾತನಾಡುತ್ತದೆ. ಅದಕ್ಕೆ ಸುಳ್ಳು ಹೇಳಲು ಬರುವುದಿಲ್ಲ. (ಸ್ನೇಹಸೇತು : ಹಾಯ್ ಬೆಂಗಳೂರು)

ಕುದಿಯುವ ಬಯಕೆ ಎಂಬುದಿಲ್ಲದಿದ್ದರೆ ಬೆಟ್ಟ ಹತ್ತಲಾಗದು

Should sexual act be planned in advance?
“ಬಯಕೆ, ಬರುವುದರ ಕಣ್ಸನ್ನೆ ಕಾಣೋ…” ಅಂತ ಬರೆದವರು ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಮಧುರ ಚೆನ್ನ. ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಮಧುರ ಚೆನ್ನರ ಎಂಟನೇ ಮಗಳು ಡಾ. ಸೂರ್ಯಮುಖಿ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರ ಪತ್ನಿ. ಮಧುರ ಚೆನ್ನರನ್ನು ನಾನು ಪ್ರತೀಸಲ defeat ಆದಾಗ, ವಿಷಣ್ಣನಾದಾಗ ಒಬ್ಬನೇ ಕುಳಿತು ಓದುತ್ತೇನೆ. ‘ನನ್ನ ನಲ್ಲ’ ಅತ್ಯುತ್ತಮ ಕೃತಿ. ಅದರಲ್ಲಿನ ದೇವರು, ಧರ್ಮ ಶ್ರದ್ಧೆ ಬೇರೆಯವೇ ಸಂಗತಿಗಳು. ನಾನು ಮಧುರ ಚೆನ್ನರಲ್ಲಿ ಇಷ್ಟಪಡುವುದು ಅವರಿಗೆ ದಕ್ಕಿದ ಅನುಭಾವ.

ಇದು ಮೊನ್ನೆ ನೆನಪಾದದ್ದು ಅಮೆರಿಕದ ಹನಿ ಮಿಲೆತ್ ಸ್ಕಿ ಎಂಬಾಕೆಯ ನೂತನ ಸಿದ್ಧಾಂತದ ಬಗ್ಗೆ ಇಂಟರ್ನೆಟ್ ನಲ್ಲಿ ಓದತೊಡಗಿದಾಗ. ಆಕೆ ಅಲ್ಲಿ ಸೆಕ್ಸ್ ಥೆರಪಿಸ್ಟ್. ಗಂಡ-ಹೆಂಡಿರು ತಮ್ಮ ಮಿಲನ ಮಹೋತ್ಸವವನ್ನು ಮೊದಲೇ ಪ್ಲಾನ್ ಮಾಡಿಕೊಂಡಿರುವುದು ಅತ್ಯಗತ್ಯ ಎಂಬ ನೂತನ ಸಿದ್ಧಾಂತ ಆಕೆಯದು. ಇದೆಲ್ಲಿಯ ಮಾತು? ಗಂಡು-ಹೆಣ್ಣಿನ ಸಮಾಗಮವೆಂಬುದು ಟೈಮ್ ಟೈಬಲ್ ನ ಪ್ರಕಾರ ನಡೆಯಲು ಸಾಧ್ಯವೆ? ಕೆಲವರ ಪಾಲಿಗೆ ಅದು ದೈವ ನಿರ್ಣಯ. “ಹುಟ್ಟಿಸಿದ ದೇವರು…” ಅಂತ ಅನ್ನುವುದರಲ್ಲೇ ಅವರು ಮಿಲನ ಮಹೋತ್ಸವವನ್ನು ದೈವಿಕವೆಂಬುದು ನಂಬಿರುವುದನ್ನು ತೋರಿಸುತ್ತಾರೆ. ಇನ್ನುಳಿದವರ ಪಾಲಿಗೆ, ಸಮಾಗಮವೆಂಬುದು ‘ಆ ಕ್ಷಣದ ಸತ್ಯ’. ಕಲ್ಲು ಕರಗುವ ಸಮಯ ಯಾವುದು ಎಂಬುದನ್ನು ಮೊದಲೇ ಹೇಳುವುದಾದರೂ ಹೇಗೆ? ಹಂಬಲ ಬಲವಾದಾಗ, ಏಕಾಂತ ದೊರಕಿದಾಕ, ಮಗು ಮಲಗಿದಾಗ, ಜಗಳ ಬಗೆಹರಿದಾಗ – ಹೀಗೆ ಹಲವಾರು ಮುಹೂರ್ತಗಳು ಬದುಕಿನ ಆ ದಿವ್ಯ ಸಂತೋಷವನ್ನು ಕರುಣಿಸುತ್ತದೆ. ಆದರೆ ಅದನ್ನು ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಹೇಗೆ? ಅದೇನು ವೈದ್ಯರೊಂದಿಗಿನ ಅಪಾಯಿಂಟ್ ಮೆಂಟಾ? ಬೋರ್ಡ್ ಮೀಟಿಂಗಾ? ಅಂತ ಅನೇಕರು ತಳ್ಳಿ ಹಾಕಿಬಿಡಬಹುದು. ಆದರೆ ಸೆಕ್ಸ್ ಥೆರಪಿಸ್ಟ್ ಹನಿ, ಹೇಳುವುದೇ ಬೇರೆ.

ಸಿದ್ದನಿಗೆ ಎದ್ದದ್ದೇ ಹೊತ್ತು ಎಂಬಂತೆ sporadic ಆಗಿ ಮಿಲನ ಮಹೋತ್ಸವಕ್ಕೆ ಮುಗಿ ಬೀಳಬೇಡಿ. ಅದರಲ್ಲಿ ಸಿಕ್ಕುವ ಆನಂದ ಕಳಪೆಯಾದದ್ದು. ಅದರ ಬದಲಿಗೆ ಪ್ಲಾನ್ ಮಾಡಿಕೊಳ್ಳಿ. ಲೈಂಗಿಕ ಜೀವನವನ್ನು ಇನ್ನಷ್ಟು ವ್ಯವಸ್ಥಿತ ರೀತಿಯಲ್ಲಿ ಆನಂದಿಸಿ. ಏಕೆಂದರೆ, ನಮ್ಮ ಬದುಕಿನಲ್ಲಿ ಉಳಿದದ್ದೆಲ್ಲವೂ ಬದಲಾಗಿದೆ. ಇಬ್ಬರೂ ದುಡಿಯಬೇಕು. ಇಬ್ಬರಿಗೂ ಮನೆಯ ಹೊರಗೆ ಟಿನ್ಷನ್ನು, ಗೊಂದಲ, ಜವಾಬ್ದಾರಿ. ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ಮೊದಲಿನಂತೆ ಮನೆಯಲ್ಲಿ ಅಜ್ಜ-ಅಜ್ಜಿಯರಿರುವುದಿಲ್ಲ. ಈ ತೆರನಾದ ಬದುಕು ಎಷ್ಟು ಹೈರಾಣ ಮಾಡುತ್ತದೆಯೆಂದರೆ, ದಂಪತಿಗಳಿಗೆ ಏಕಾಂತವೇ ಸಿಗುವುದಿಲ್ಲ. ಸಿಕ್ಕರೂ ಅದನ್ನು ಸವಿಯುವ ಮನಸ್ಥಿತಿ ಇರುವುದಿಲ್ಲ. ಹೀಗಾಗಿ, ನಿಮ್ಮ quality time ಅಥವಾ ಅತ್ಯುತ್ತಮ ಘಳಿಗೆಗಳೇನಿವೆ ಅವುಗಳ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯಲು ನಿರ್ಧರಿಸಿ. ಅಂಥ ಟೈಮು ಯಾವಾಗ ಸಿಗುತ್ತದೆಯೆಂಬುದನ್ನು ನೋಡಿಕೊಂಡು, ಕ್ಯಾಂಲೆಂಡರಿನಲ್ಲಿ ಚಿಕ್ಕದಾಗಿ ಗುರುತು ಹಾಕಿಕೊಳ್ಳಿ. ಇಂಥ ಅಮೃತ ಘಳಿಗೆಗಳಲ್ಲಿ ಕೇವಲ ದೈಹಿಕ ಅನುಸಂಧಾನವೇ ಆಗಬೇಕು ಅಂತಲ್ಲ. ಆಪ್ತ ಮಾತು, ಒಂದು long walk ಕೂಡ ಆಗಬಹುದು. ಹಿತವಾದ ಸಮಯವನ್ನು ಒಟ್ಟಿಗೆ ಕಳೆಯಬೇಕು.

ಹಾಗಂತ ಸಲಹೆ ನೀಡುವ ಹನಿ, ಮತ್ತೊಂದು ಹೊಸ ಸಂಗತಿ ಹೇಳುತ್ತಾಳೆ. ನೀವು ಯಾವ ದಿವಸ, ಯಾವ ತಾರೀಕಿನಂದು ಒಟ್ಟಿಗಿರಲು ನಿರ್ಧರಿಸುತ್ತೀರೋ, ಅವತ್ತು ಏನನ್ನು ಅನುಭವಿಸಬೇಕೆಂದಿದ್ದೀರಿ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಿ ಅನ್ನುತ್ತಾಳೆ. ಹಾಗೆ ಇಬ್ಬರೂ ಯೋಚಿಸುವ, ಟಿಪ್ಪಣಿ ಮಾಡಿಕೊಳ್ಳುವ ಮತ್ತು ಪರಸ್ಪರ ಚರ್ಚಿಸುವ ಮೂಲಕ ಇಬ್ಬರೂ ಆ ಬಗ್ಗೆ ಕುತೂಹಲಿಗಳಾಗುತ್ತೀರಿ. ನಿಮ್ಮಲ್ಲಿ ಹೊಸ ಆಸಕ್ತಿ ಮೂಡುತ್ತದೆ ಅನ್ನುತ್ತಾಳೆ.

ಮುಕ್ತ ಮಿಲನ ಮಹೋತ್ಸವದ ಬಗ್ಗೆ ಸುಮ್ಮನೆ ಯೋಚಿಸುವುದೇ ವ್ಯಕ್ತಿಗಳಲ್ಲಿ ಸಂತೋಷವನ್ನುಂಟು ಮಾಡುತ್ತದೆ. ಇದು ಕೇವಲ ಮನಸ್ಸಿನ ಸಂಗತಿಗಳಲ್ಲ. ದೇಹದಲ್ಲೂ ರಾಸಾಯನಿಕ ಬದಲಾವಣೆಗಳಾಗುತ್ತವೆ. ಉತ್ಸಾಹದ ಕೆಮಿಕಲ್ ಗಳು ರಕ್ತಕ್ಕೆ ಸೇರಿಕೊಡು ಆರೋಗ್ಯಕರ ರಕ್ತ ಸಂಚಾರವಾಗುತ್ತದೆ ಅನ್ನುತ್ತಾಳೆ.

ಆಗಲೇ ಮಧುರ ಚೆನ್ನರ ಕವಿತೆ ಸಾಲು ನೆನಪಾದದ್ದು. ಬಯಕೆ ಎಂಬುದು ಕೇವಲ ನಮ್ಮ ಹುಸಿ ಕಲ್ಪನೆಯಲ್ಲ. ಅದು ಬರುವುದರ ಕಣ್ಸನ್ನೆ ಅನ್ನುತ್ತಾರೆ ಮಧುರ ಚೆನ್ನ. ಅಂಥದೊಂದು ಭಾಗ್ಯ, ತಾನು ಬರುವುದಕ್ಕೆ ಮುಂಚೆಯೇ ನಮ್ಮಲ್ಲೊಂದು ಬಯಕೆ ಉಂಟುಮಾಡುತ್ತದೆ ಎಂಬುದು ಅವರ ಆಶಯ. May be, ಅವರು ಅನುಭಾವಿಗಳಾದ್ದರಿಂದ ಈ ವಿಷಯವನ್ನು ಆಧ್ಯಾತ್ಮಿಕ ನೆಲೆಯ್ಲಿ ಪ್ರಸ್ತಾಪಿಸಿರಬಹುದು. ಸೆಕ್ಸ್ ಥೆರಪಿಸ್ಟ್ ಆದ ಹನಿ ಮಿಲೆತ್ ಸ್ಕಿ ಈ ಮಾತನ್ನು ಮಿಲನ ಮಹೋತ್ಸವಕ್ಕೆ ಸಂಬಂಧಿಸಿದಂತೆ ಅಂದಿರಬಹುದು. ಆದರೆ ಮಧುರ ಚೆನ್ನರ ಮಾತನ್ನು ನಾನು ಬದುಕಿನ ಪ್ರತಿ ಸಾಧನೆಗೂ ಅನ್ವಯಿಸಿಕೊಂಡು ನೋಡುತ್ತೇನೆ.

ನನ್ನ ಪಾಲಿಗೆ ಯಶಸ್ಸು ಸುಮ್ಮನೆ ಬಂದದ್ದಲ್ಲ. ಹುಟ್ಟು, ಮನೆತನ, ಜಾತಿ, ಇನ್ ಫ್ಲುಯೆನ್ಸು, ಕನೆಕ್ಷನ್ನು ಇವ್ಯಾವವೂ ಅದಕ್ಕೆ ಕಾರಣವಾಗಲಿಲ್ಲ. ಯಾವ ಜ್ಯೋತಿಷಿಯೂ ನನಗೆ ಇದರ ಸುಳಿವು ಕೊಡಲಿಲ್ಲ. ಮೂವತ್ತಾರು ವರ್ಷ ನನ್ನನ್ನು ಗರತಿಪ್ಪಾಳೆ ಆಡಿಸಿ, ಊರೂರು, ಬೀದಿಬೀದಿ ಅಲೆಸಿ, ಯಾವುದೂ ಪುಗಸಟ್ಟೆ ಸಿಗಲ್ಲ ಕಣಯ್ಯಾ ಅತ ಖಡಾ ಖಂಡಿತವಾಗಿ ಹೇಳಿ ಕಡೆಗೆ ಒಲಿದ ಮಹಾ ಸುಂದರಿ, ಯಶಸ್ಸು. ‘ಇವರಿಗೆ ಸರಸ್ವತಿ ಒಲಿದಿದ್ದಾಳೆ’ ಅಂತ ಯಾರೋ ನನ್ನನ್ನು ಪರಿಚಯಿಸುತ್ತಾ ವೇದಿಕೆಯಲ್ಲಿ ಹೇಳಿದಾಗ, ‘ಯಾರದು ಸರಸ್ವತಿ?’ ಅಂತ ತಕರಾರು ತೆಗೆದಿದ್ದೆ. ಆದರೆ ನೂರಾರು ವೈಫಲ್ಯಗಳ, ಸೋಲುಗಳ, ನಿರಾಸೆ ಅವಮಾನಗಳ ನಂತರ ನನ್ನಲ್ಲೊಂದು burning desire ಶುರುವಾಯಿತಲ್ಲ? ಅದು ಮಹಾ ಬಯಕೆ. ಮಧುರ ಚೆನ್ನರ ಮಾತು ನಿಜವಾದದ್ದೇ ಅಲ್ಲಿ. ಅದು ಬರುವುದರ ಕಣ್ಸನ್ನೆಯಾಗಿತ್ತು.

ಅಂಥದೊಂದು desire ನಿಮ್ಮಲ್ಲಿ ಕುದಿಯದೆ ಹೋದರೆ ನೀವು ಏನನ್ನೂ ಸಾಧಿಸಲಾರಿರಿ. ಇದ್ದಕ್ಕಿದ್ದಂತೆ ಕೋಟ್ಯಧೀಶರಾದವರ ಮಾತು ಬಿಟ್ಟುಬಿಡಿ. ಅದು ಯೋರೋ ಕೆಲವರ ವಿಷಯದಲ್ಲಿ ಸತ್ಯವಾಗಿರಬಹುದು. ಅಂಥವರು ದೇವರು-ಅದೃಷ್ಟ ಮುಂತಾದವುಗಳನ್ನು ನಂಬಿದರೆ ನಂಬಿಕೊಳ್ಳಲಿ. ಆದರೆ ಈ ಜಗತ್ತಿನಲ್ಲಿ ಯಶಸ್ಸಿನ ಬೆಟ್ಟ ಹತ್ತಿ ನಿಂತವರೆಲ್ಲರನ್ನೂ ಒಮ್ಮೆ ನೋಡಿ. ಅವರನ್ನೇ ಕೇಳೆ. ಅವರು ಅಂಥದೊಂದು burning desire ಇಟ್ಟುಕೊಂಡೇ ಆ ಬೆಟ್ಟದ ಪ್ರತಿ ಮೆಟ್ಟಿಲೂ ಹತ್ತಿದ್ದಾರೆ. ಅವರಿಗೆ ಅದೇ ಇಂಧನ. ಅದೇ ಊರುಗೋಲು. ಯಶಸ್ಸು ಅವರನ್ನು ಸುಮ್ಮನೇ ಕರೆಯಲಿಲ್ಲ. ಬಯಕೆಯ ಕಿಚ್ಚು ಹೊತ್ತಿಸಿ, ಅದಕ್ಕಾಗಿ ಚಡಪಡಿಸುವಂತೆ ಮಾಡಿ, ಕೆಲಸಕ್ಕೆ ಹಚ್ಚಿಸಿದ ನಂತರವೇ ಬೆಟ್ಟದ ತುದಿಗೆ ಒಯ್ದು ತಲುಪಿಸಿದ್ದು. ಬಯಕೆ ಎಂಬುದು ಎಂಥವನನ್ನೂ ಧೀರನನ್ನಾಗಿ, ಶೂರನನ್ನಾಗಿ, ಶಕ್ತಿವಂತನನ್ನಾಗಿ ಮಾಡಿಬಿಡುತ್ತದೆ. ನೆಗೆಟಿವ್ ಆದ ಬಯಕೆಗಳು ಅನೇಕರನ್ನು ಹುಂಬರನ್ನಾಗಿ, ವ್ಯರ್ಥ ಸಾಹಸಿಗಳನ್ನಾಗಿ ಮಾಡಿರುವುದು ನಿಜ. ಹತ್ತೇ ಹತ್ತು ಓಟು ತಂದುಕೊಳ್ಳಲಾಗದವರು ಪಾರ್ಲಿಮೆಂಟ್ ಚುನಾವಣೆಗೆ ನಿಂತದ್ದನ್ನು ನೋಡಿದ್ದೇನೆ. ಪಕ್ಷ ಕಟ್ಟಿದ್ದನ್ನು ನೋಡಿದ್ದೇನೆ. ಅವು ವ್ಯರ್ಥ ಬಯಕೆಗಳು.

ಆದರೆ ಪಾಸಿಟಿವ್ ಅದೊಂದು ಬಯಕೆ ಇಟ್ಟುಕೊಂಡು ಹೊರಟು ನೋಡಿ. ಗೆಲುವು ಕೈಚಾಚಿ ಕರೆದುಕೊಳ್ಳುತ್ತದೆ. ಯಾವ ಬೆಟ್ಟವೂ ಹತ್ತಲಾಗದಷ್ಟು ಅಗಾಧವಲ್ಲ. ಆದರೆ ಪ್ರತಿ ಮೆಟ್ಟಿಲೂ ನೀವೇ ಹತ್ತಬೇಕು. ಅಂಥದೊಂದು ಬಯಕೆ ನಿಮ್ಮಲ್ಲಿ ಕುದಿಯಬೇಕು.

ಸಾವಿನ ನಂತರವೂ ಬದುಕಿರುವುದು ಯಾವುದು?

Ravi Belagere

ಒಳ್ಳೆಯದೊಂದು ಗಾರ್ಡನ್ ರೆಸ್ಟುರಾಂಟ್ ಮಾಡು. ಪದ್ಮನಾಭನಗರದಲ್ಲಿ ಒಳ್ಳೆಯ ಹೊಟೇಲ್ ಇಲ್ಲ ಅಂತ ಕೆಲವರೆಂದರು. ಇವತ್ತಿಗೂ ನಾನು ಹೆಚ್ಚಾಗಿ ಹೊಟೇಲುಗಳಿಗೆ ಹೋಗುವವನಲ್ಲ. ಅಂಥದರಲ್ಲಿ ಹೊಟೇಲು ನಡೆಸುವುದು ನನ್ನಿಂದ ಆದೀತೆ? ಹಿಟ್ಟು ರುಬ್ಬುವವನು ರಜೆ ಹಾಕಿದರೆ ನಾನೇ ಕುಳಿತು ಹಿಟ್ಟು ರುಬ್ಬಬೇಕಾಗುತ್ತದೆ. ಅದರ ಸಹವಾಸವೇ ಬೇಡ ಅಂದುಕೊಂಡೆ. ಕಡೆಗೆ ಒಳ್ಳೆಯದೊಂದು ಛತ್ರ ಕಟ್ಟಿಸು. ಬೆಂಗಳೂರಿನಲ್ಲಿ ಛತ್ರಗಳಿಗೆ ಡಿಮ್ಯಾಂಡ್ ಇದೆ. ಪದೇ ಪದೆ ಇನ್ವೆಸ್ಟ್ ಮಾಡಬೇಕಿಲ್ಲ. ತಂತಾನೇ ಹಣ ಬರುತ್ತಿರುತ್ತದೆ ಅಂದರು. ಒಳ್ಳೆಯ ಐಡಿಯಾ ಅನ್ನಿಸಿತು. ಒಂದಷ್ಟು ಪಾತ್ರೆ, ಪಡಗ, ಕೊಳದಪ್ಪಲೆ, ಹಂಡೆ ಇಟ್ಟರೆ ಅದನ್ನೂ ಬಾಡಿಗೆಗೆ ಕೊಡಬಹುದು ಅಂದರು. ಸುತ್ತಮುತ್ತಲಿನ ಛತ್ರಗಳ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾಹಿತಿ ತಂದರು. ಇನ್ನೇನು ಆರ್ಕಿಟೆಕ್ಟ್ ಗೆ ಹೇಳಿ ಒಂದು ಪ್ಲಾನ್ ಮಾಡಿಸಬೇಕು ಅಂದುಕೊಳ್ಳುವಷ್ಟರಲ್ಲೇ ಒಂದು ಪ್ರಶ್ನೆ ಇದಿರಾಯಿತು.

ಯಾವತ್ತೋ ಒಂದು ದಿನ, ನಾನು ಸತ್ತ ಎಷ್ಟೋ ವರ್ಷಕ್ಕೆ ರವಿ ಬೆಳಗೆರೆ ಏನು ಮಾಡುತ್ತಿದ್ದ? ಅಂತ ಯಾರಾದರೂ ಕೇಳಿದರೆ, ಛತ್ರ ಕಟ್ಟಿಸಿ ಹಂಡೆ-ಕೊಳದಪ್ಪಲೆ ಬಾಡಿಗೆಗೆ ಕೊಡುತ್ತಿದ್ದ ಅಂತ ಉತ್ತರ ಬರುತ್ತದೆ. ಅದು ಸರಿಯಾ? ಕೇಳಿಕೊಂಡೆ. ಛತ್ರದ ಐಡಿಯಾ ಬೆಳಗ್ಗೆ ಹೊತ್ತಿಗೆ ಕಸದ ಬುಟ್ಟಿ ಸೇರಿತ್ತು. ಆಮೇಲೆ ಅದೇ ಸೈಟಿನಲ್ಲಿ ಎದ್ದು ನಿಂತಿದ್ದು ಪ್ರಾರ್ಥನಾ ಸ್ಕೂಲ್. ಇವತ್ತು ಅಂಥ ಆರು ಕಟ್ಟಡಗಳಲ್ಲಿ, ಆರು ಸಾವಿರ ಮಕ್ಕಳೊಂದಿಗೆ ಶಾಲೆ ಕಳೆ ಕಳೆಯಾಗಿ ನಡೆಯುತ್ತಿದೆ. ಅದು, ನಾನು ಸತ್ತ ಮೇಲೂ ನಡೆಯುತ್ತದೆ. ಅಂದರೇನರ್ಥ? ನೀನು ಸತ್ತ ಮೇಲೂ ಈ ಸಮಾಜ ನಿನ್ನನ್ನು ಒಬ್ಬ ಮಹಾತ್ಮನನ್ನು ನೆನಪಿಟ್ಟುಕೊಳ್ಳುವಂತೆ ನೆನಪಿಟ್ಟುಕೊಂಡಿರಬೇಕಾ? ಅಂತ ಗೆಳೆಯನೊಬ್ಬ ಕೇಳಿದ.

ಈ ಸಮಾಜ ಕೇವಲ ಮಹಾತ್ಮರನ್ನು ನೆನಪಿಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯನ ರೆಪ್ಯುಟೇಷನ್ ಎಂಬುದಿದೆಯಲ್ಲ? ಅದು ಅವನ ಸಾವಿನ ನಂತರವೂ ಜೀವಂತವಾಗಿರುತ್ತದೆ ಅಂದೆ. ಅದು ನನ್ನ ದೃಢವಾದ ನಂಬಿಕೆಯೂ ಹೌದು. ಒಳ್ಳೆಯದಷ್ಟೇ ಅಲ್ಲ; ಒಳ್ಳೆಯದಲ್ಲದ್ದೂ ಜೀವಂತವಿರುತ್ತದೆ. ಆಫ್ ಕೋರ್ಸ್, ನಮ್ಮದು ಒಂಥರಾ ಕೃತಘ್ನ ದೇಶ, ಕೃತಘ್ನ ಸಮಾಜ. ಯಾರಿಗೆ, ಯಾವುದಕ್ಕೆ, ಎಷ್ಟು ಋಣ-ಸ್ಮರಣೆ ಸಂದಾಯ ಮಾಡಬೇಕೋ ಅಷ್ಟನ್ನು ನಾವು ಮಾಡುವುದಿಲ್ಲ. ಒಬ್ಬ ಸಿನೆಮಾ ನಟ ಸತ್ತು ಹೋದರೆ ನಮ್ಮಲ್ಲಿ ಊರಿಗೆ ಊರು ಹೊತ್ತಿ ಉರಿಯುತ್ತದೆ. ಪುಡಿ ರಾಜಕಾರಣಿಗಳ ಜನ್ಮದಿನಗಳಂದು ಜಾಹಿರಾತುಗಳೊಂದಿಗೆ ಪತ್ರಿಕೆಗಳು ತುಂಬಿ ತುಳುಕುತ್ತವೆ. ಕೆಲಸಕ್ಕೆ ಬಾರದ ಸಂಗತಿಗಳ ಬಗ್ಗೆ ಹಾಗೂ ಉಂಟೆ? ಹೀಗೂ ಉಂಟೆ? ಅಂತ ಟೀವಿ ಕಾರ್ಯಕ್ರಮಗಳು ನಡೆಯುತ್ತವೆ.

ಆದರೆ, ಭಾರತೀಯ ಇಂಗ್ಲಿಷ್ ಲೇಖಕರಲ್ಲಿ ಅಗ್ರಗಣ್ಯರಾದ ಆರ್.ಕೆ. ನಾರಾಯಣ್ ಯಾವತ್ತು ತೀರಿಕೊಂಡರು? ಯಾರಿಗೂ ನೆನಪಿಲ್ಲ. ಅಷ್ಟೇ ಖ್ಯಾತನಾಮರಾದ ಮುಲ್ಕ್ ರಾಜ್ ಆನಂದ್ ಕಡೇ ಪಕ್ಷ ಮುಂಬಯಿಯಲ್ಲಿ ತೀರಿಕೊಂಡಿದ್ದರಿಂದ ಕೊಂಚಮಟ್ಟಿಗೆ ಅದು ಸುದ್ದಿಯಾಯಿತು. ಈಗ ಖ್ಯಾತ ವ್ಯಂಗ್ಯಚಿತ್ರಕಾರರಾದ ಆರ್.ಕೆ.ಲಕ್ಷ್ಮಣ್ ಅವರ ದೇಹ ಸ್ಥಿತಿ ಗಂಭೀರವಾಗಿದೆ. ಪತ್ರಿಕೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿರುವುದು ಫುಟ್ಬಾಲ್ ಬಗ್ಗೆ.

ಮೊನ್ನೆ ತೀರಿಕೊಂಡ ಲೇಖಕ ಮನೋಹರ ಮಳಗಾಂವಕರ್ ರ ಬಗ್ಗೆಯೇ ಯೋಚಿಸಿ. ಅವರು ಇಂಗ್ಲಿಷಿನಲ್ಲಿ ಬರೆಯತೊಡಗಿದ ಮೊದಲ ಭಾರತೀಯ ತಲೆಮಾರಿನ ಲೇಖರರು. ಕೇವಲ ಕಾಲ್ಪನಿಕ ಸಾಹಿತ್ಯವನ್ನು ಅವರು ಬರೆಯಲಿಲ್ಲ. ಇತಿಹಾಸದಂತಹ ಡ್ರೈ ಸಬ್ಜೆಕ್ಟ್ ಇಟ್ಟುಕೊಂಡು ಅತ್ಯಂತ ರಸವತ್ತಾಗಿ ಬರೆದರು. ಅವರು ಬೆಳೆದದ್ದು ಇಂಗ್ಲಿಷರ ಮಧ್ಯೆ. ಇಂಗ್ಲಿಷರ ಸೈನ್ಯದಲ್ಲಿ ಅಧಿಕಾರಿಯೂ ಆಗಿದ್ದರು. ಇಂಗ್ಲಿಷರಿಂದ ಪ್ರಭಾವಿತರೂ ಆಗಿದ್ದರು. ಹೀಗಾಗಿ ಅವರು ಬರೆದದ್ದು ಭಾರತಕ್ಕಿಂತ ಹೆಚ್ಚಾಗಿ ಇಂಗ್ಲೆಂಡಿನಲ್ಲಿ ಖ್ಯಾತಿ ಪಡೆಯಿತು. ಅಲ್ಲಿಂದ ಅದು ಫ್ರಾನ್ಸ್ ಗೆ, ರೋಮ್ ಗೆ, ಇಟಲಿಗೆ, ಅಮೆರಿಕಕ್ಕೆ ಹರಡಿತು. ನಾವು ಭಾರತೀಯರು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಓದಲೂ ಇಲ್ಲ. ತಮ್ಮ ಸಾಹಿತ್ಯ ದೇಶಾನುದೇಶಗಳಲ್ಲಿ ಖ್ಯಾತಿ ಪಡೆಯುತ್ತಿದ್ದರೆ, ಮನೋಹರ ಮಳಗಾಂವಕರ್ ಅವರು ತಮ್ಮ ಪಾಡಿಗೆ ದಟ್ಟ ಕಾಡಿನ ಮಧ್ಯೆ ಬಂಗಲೆ ಕಟ್ಟಿಕೊಂಡು ಐವತ್ತು ಸುದೀರ್ಘ ವರ್ಷಗಳ ತನಕ ಋಷಿಯಂತೆ ಬದುಕಿದರು. ಬರೆದಂತೆ ಬದುಕಿದರು. ಬಹಳ ಕಾಲದ ತನಕ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಅಂಕಣ ಬರೆಯುತ್ತಿದ್ದರಿಂದ, ಅವರು ತೀರಿಕೊಂಡಾಗ ಆ ಪತ್ರಿಕೆ ಒಂದು ಸಂಪಾದಕೀಯ ಪ್ರಕಟಿಸಿತು. ಅಷ್ಟು ಬಿಟ್ಟರೆ, ಒಂದೇ ಒಂದು ಚಾನಲ್ ಇಂಗ್ಲಿಷಿನಲ್ಲಿ, ಹಿಂದಿಯಲ್ಲಿ ಮಳಗಾಂವಕರ್ ರ ಸಾವಿನ ಸುದ್ದಿ ಬಿತ್ತರಿಸಲಿಲ್ಲ. ಅಂಥ ಹಿರಿಯ ಚೇತನಕ್ಕೆ ಸರಿಯಾದ ರೀತಿಯಲ್ಲಿ ನುಡಿ ನಮನ ಸಲ್ಲಿಸಿದ್ದು ಒಂದು ವಿಜಯ ಕರ್ನಾಟಕ ಮಾತ್ರ.

ಬಿಡಿ, ಹೋದವರು ಹೋದರು. ಆದರೆ ಅವರ ಹೆಸರು, ಅವರ ಕೀರ್ತಿ, ಅಗ್ಗಳಿಕೆ, ಹೆಗ್ಗಳಿಕೆ ಅವು ಹೋಗುತ್ತವೆಯಾ? ನಾನು ಕೇವಲ ಲೇಖಕರು, ಖ್ಯಾತನಾಮರು, ರಾಜಕೀರಣಿಗಳು, ನಟರು ಮುಂತಾದವರ ಬಗ್ಗೆಯಷ್ಟೇ ಮಾತನಾಡುತ್ತಿಲ್ಲ. ರೆಪ್ಯುಟೇಷನ್ ಎಂಬುದು ಪ್ರತಿ ಮನುಷ್ಯನೂ ತನ್ನ ವರ್ಷಾಂತರಗಳ ಬದುಕಿನಲ್ಲಿ ಪ್ರಯತ್ನಪೂರ್ವಕವಾಗಿಯೋ, ಸಂಟೈಮ್ಸ್ ಅಪ್ರಯತ್ನಪೂರ್ವಕವಾಗಿಯೋ ಗಳಿಸಿಕೊಳ್ಳುತ್ತ ಹೋಗುತ್ತಾನೆ. ಅದು ಆತನೊಂದಿಗೆ ಬೆಳೆಯುತ್ತದೆ, ಇಳಿಯುತ್ತದೆ, ಕುಸಿಯುತ್ತದೆ. ಇದ್ದಕ್ಕಿದ್ದಂತೆ ಶಿಖರದ ತುದಿ ತಲುಪುತ್ತದೆ. ಒಬ್ಬ ಎಲಿಮೆಂಟರಿ ಶಾಲಾ ಶಿಕ್ಷಕ ಜೀವನ ಪರ್ಯಂತ ಮಕ್ಕಳಿಗೆ ಅದೇ ಪಾಠ ಹೇಳುಕೊಡುತ್ತಿರುತ್ತಾನೆ. ನಾಕೊಂದ್ಲ ನಾಕು ಎಂಬುದು ಬದಲಾಗುವುದೇ ಇಲ್ಲ. ಆದರೆ ಮಕ್ಕಳು ಬದಲಾಗುತ್ತಿರುತ್ತಾರೆ. ಪ್ರತಿ ವರ್ಷ, ಪ್ರತಿ ನಿತ್ಯ, ಪ್ರತಿ ಕ್ಷಣ. ಅವರೊಂದಿಗೆ ಆ ಮೇಷ್ಟು ರಿಪ್ಯುಟೇಷನ್ ಕೂಡ ಬೆಳೆಯುತ್ತ ಹೋಗುತ್ತದೆ. ಅದು ಮೇಷ್ಟ್ರು ಕಲಿಸಿದ ಪಾಠವೆಲ್ಲ ಬಳಕೆಯಾದ ನಂತರವೂ, ಮರೆತು ಹೋದ ನಂತರವೂ, ಕೆಲಸಕ್ಕೆ ಬಾರದಾದ ನಂತರವೂ ಬದುಕಿರುತ್ತದೆ. ಮೇಷ್ಟ್ರು ಎಂಬುದು ನಾನು ಕೊಟ್ಟ ಉದಾಹರಣೆಯಷ್ಟೇ. ಈ ಮಾತು ನಮಗೆಲ್ಲ ಅನ್ವಯಿಸುತ್ತದೆ.

ನಮ್ಮ ನಂತರವೂ ನಮ್ಮ ರೆಪ್ಯುಟೇಷನ್ ಜೀವಂತವಾಗಿರುತ್ತದೆ ಎಂಬ ವಿಷಯ ನಮಗೆ ಮನವರಿಕೆಯಾದರೆ ಸಾಕು. ನಾವು ಇನ್ನಷ್ಟು ಎಚ್ಚರಿಕೆಯಿಂದ ಬದುಕುತ್ತೇವೆ. ಮಾಡುವ ದಿನನಿತ್ಯದ ಕೆಲಸವನ್ನೇ ಹೆಚ್ಚಿನ ಶ್ರದ್ಧೆಯಿಂದ ಮಾಡುತ್ತೇವೆ. ಇವತ್ತಿನದಕ್ಕಿಂತ ಹೆಚ್ಚಿನದೇನನ್ನೋ ಸಾಧಿಸಲು ತೀರ್ಮಾನಿಸುತ್ತೇವೆ. ಪಡುವ ಸುಖಕ್ಕಿಂತ, ಮಾಡುವ ಸಾಧನೆಯ ಕಡೆಗೆ ಹೆಚ್ಚು ಗಮನ ವಹಿಸುತ್ತೇವೆ. ಅಯ್ಯೋ ಬಿಡು, ನಾವು ಸತ್ತ ಮೇಲೆ ಯಾರು ಏನಂದುಕೊಂಡರೇನಂತೆ? ನಮಗೇನು ಗೊತ್ತಾಗುತ್ತದಾ? ಎಂಬ ನಿಲುವು ತಳೆಯಬೇಡಿ. ನಮ್ಮ ನಂತರವೂ ನಮ್ಮ ಬದುಕು ಮಾತನಾಡುತ್ತದೆ. ಅದಕ್ಕೆ ಸುಳ್ಳು ಹೇಳಲು ಬರುವುದಿಲ್ಲ. (ಸ್ನೇಹಸೇತು : ಹಾಯ್ ಬೆಂಗಳೂರು)

ತಂದೆಯಂಥ ಗೆಳೆಯನನ್ನು ಕಳೆದುಕೊಂಡೆ

Manohar Malgaonkar, Indian writer in english

ಮನೋಹರ ಮಳಗಾಂವ್‌ಕರ್ ತೀರಿಕೊಂಡಿರುವುದು ತಂದೆಯನ್ನು ಕಳೆದುಕೊಂಡಷ್ಟೇ ದುಃಖವಾಗಿದೆ. ಶಾಮರಾಯರು ನನ್ನ ಪತ್ರಿಕೋದ್ಯಮದ ಗುರು. ಸಾಹಿತ್ಯದ ವಿಷಯಕ್ಕೆ ಬಂದರೆ ಒಂದು ಕಾದಂಬರಿಯನ್ನು ಹೇಗೆ ಪಕ್ವವಾಗಿ ಬರೆಯಬೇಕು ಎಂಬುದನ್ನು ನನಗೆ ಕಲಿಸಿಕೊಟ್ಟದ್ದೇ ಮಳಗಾಂವಕರ್ ಬರಹಗಳು. ಒಟ್ಟಿನಲ್ಲಿ ಅವರು ನನಗೆ ಗುರು ಮಾತ್ರವಲ್ಲ, ಗೆಳೆಯರೂ ಆಗಿದ್ದರು.

ನಿಮಗೆ ಗೊತ್ತಿಲ್ಲದ ಮಳಗಾಂವ್‌ಕರ್ : ಮಳಗಾಂವ್‌ಕರ್ ಅವರಿಗೆ 97 ವರ್ಷವಾಗಿತ್ತು. ಜೊಯಿಡಾ ಸಮೀಪದ ಬುರ್ಬುಸಾ ಎಂಬಲ್ಲಿ ಕಾಡಿನ ಮಧ್ಯೆ ಒಂಟಿ ಬಂಗಲೆಯಲ್ಲಿ ವಾಸವಿದ್ದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕರ್ನಲ್‌ ಆಗಿ ಸ್ವಯಂ ನಿವೃತ್ತಿ ಪಡೆದಿದ್ದ ಅವರು, ಇದಕ್ಕೂ ಮುನ್ನ ರೈಲ್ವೆ ಹಳಿಗಳನ್ನು ಹಾಕುವ ಕಂಟ್ರಾಕ್ಟರ್ ಆಗಿದ್ದರು! ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿ.ಎ ವ್ಯಾಸಂಗ ಮಾಡಿದ್ದರು. ತುಂಬ ಜನಕ್ಕೆ ಗೊತ್ತಿಲ್ಲ, ಅವರು ಹುಟ್ಟಿದ್ದು ದಾಂಡೇಲಿ ಸಮೀಪದ ಜಗಲ್ ಪೇಟೆ ಎಂಬ ಪುಟ್ಟ ಹಳ್ಳಿಯಲ್ಲಿ.

50ರ ದಶಕದಲ್ಲಿ ಗೋವಾದಿಂದ ಎರಡು ಬಾರಿ ಅವರು ಲೋಕಸಭೆಗೆ ಸ್ಫರ್ಧಿಸಿ ಪರಾಭವಗೊಂಡಿದ್ದರು. ರಾಜಕೀಯ ಅವರ ಮೆಚ್ಚಿನ ಕ್ಷೇತ್ರ ಆಗಿತ್ತೇ ಹೊರತು ರಾಜಕಾರಣಿಗಳನ್ನು ಅವರು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿರಲಿಲ್ಲ.

`ಶಾಲಿಮಾರ್’ ಹೆಸರಿನಲ್ಲಿ ಮೂಡಿಬಂದ ಇವರ ಕಾದಂಬರಿ ಇದೇ ಹೆಸರಿನಲ್ಲಿ ಹಿಂದಿ ಚಿತ್ರವಾಗಿ ಮೂಡಿಬಂತು. ಧರ್ಮೇಂದ್ರ ಈ ಚಿತ್ರದ ನಾಯಕ ಪಾತ್ರ ವಹಿಸಿದ್ದ. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಇವರು ಕೆಲಸ ಮಾಡಿದ್ದರು. ಧರ್ಮದ ಬಗ್ಗೆ ಸಾಕಷ್ಟು ಓದಿಕೊಂಡಿದ್ದ ಇವರು ಭಗವದ್ಗೀತೆಯಲ್ಲಿ ಪಾಂಡಿತ್ಯವನ್ನೇ ಪಡೆದಿದ್ದರು. ಸಂಸ್ಕೃತವನ್ನು ಆಳವಾಗಿ ವ್ಯಾಸಂಗ ಮಾಡಿದ್ದರು. ತಮಾಷೆ ಎಂದರೆ, ಇವರು ದೇವರನ್ನು ನಂಬುತ್ತಿರಲಿಲ್ಲ! ಒಂದು ಕಾಲದಲ್ಲಿ ವೃತ್ತಿಪರ ಹುಲಿ ಬೇಟೆಗಾರರಾಗಿದ್ದ ಮಳಗಾಂವ್‌ಕರ್, ನಂತರ ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆಯಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದರು.

ಸಾಹಿತಿಯಾಗಿ… : ಭಾರತದ ಮೊದಲ ಸಾಲಿನ ಆಂಗ್ಲ ಲೇಖಕರಲ್ಲಿ ಒಬ್ಬರಾದ ಮಳಗಾಂವ್‌ಕರ್ ಅವರ ಸಾಹಿತ್ಯ ಕೃತಿಗಳು ಫ್ರಾನ್ಸ್ ಮತ್ತು ಈಜಿಪ್ಟ್‌ಗಳಲ್ಲಿ ಹೆಚ್ಚು ಜನಪ್ರಿಯಗೊಂಡಿದ್ದವು. ಮುಖ್ಯವಾಗಿ, ಭಾರತದ ಎಲ್ಲ ರಾಜ ಮನೆತನಗಳೊಂದಿಗೆ ಅವರ ಗೆಳತನವಿತ್ತು. ರಾಜರ ಲೋಲುಪತೆ, ಆಳ್ವಿಕೆ, ಕಾರ್ಯ ವೈಖರಿ ಇತ್ಯಾದಿಗಳನ್ನು ಬರಹಕ್ಕೆ ಇಳಿಸುವುದು ಅವರ ಮೆಚ್ಚಿನ ಕೆಲಸವಾಗಿತ್ತು. ಈ ದಿಸೆಯಲ್ಲಿ ಮೂಡಿಬಂದ `ಪ್ರಿನ್ಸೆಸ್’ ಅವರ ಉತ್ಕೃಷ್ಟ ಕಾದಂಬರಿ. `ಮಹಾನ್ ಮರಾಠ’ ಮರೆಯಲಾರದ ಕೃತಿ. ಉಳಿದಂತೆ `ಡೆವಿಲ್ಸ್ ವಿಂಡ್’ ಎಂಬ ಅವರ ಕಾದಂಬರಿಯನ್ನು `ದಂಗೆಯ ದಿನಗಳು’ ಹೆಸರಿನಲ್ಲಿ ನಾನೇ ಕನ್ನಡಕ್ಕೆ ತಂದಿದ್ದೇನೆ. ನಾಥೂರಾಮ್ ಗೋಡ್ಸೆಯನ್ನು ಜಗತ್ತೇ ವಿಲನ್ ಥರ ನೋಡುತ್ತದೆ. ಆದರೆ, ಇವರು ಮಾತ್ರ ಆತನನ್ನು ದಾರಿತಪ್ಪಿದ ಪ್ರಾಮಾಣಿಕ ದೇಶಭಕ್ತ ಎಂಬುದನ್ನು `ಮೆನ್ ಹು ಕಿಲ್ಡ್ ಗಾಂಧಿ’ ಎಂಬ ಕೃತಿಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನೂ ನಾನು ಅನುವಾದ ಮಾಡಿದ್ದೇನೆ (ಅವನೊಬ್ಬನಿದ್ದ ಗೋಡ್ಸೆ). ಇನ್ನು ಇವರ `ಇನ್‌ಸೈಡ್ ಗೋವಾ’ ಪುಸ್ತಕವನ್ನು ಓದಿಯೇ ಆನಂದಿಸಬೇಕು.

ಉಳಿದಂತೆ, ಮಳಗಾಂವ್‌ಕರ್ ಅವರ ಸಾಹಿತ್ಯದ ಬಗ್ಗೆ ನಮ್ಮ ಖ್ಯಾತ ವಿಮರ್ಶಕ ಜಿ.ಎಸ್.ಆಮೂರ ಅದ್ಭುತ ಪುಸ್ತಕ ಬರೆದಿದ್ದಾರೆ. ಇತಿಹಾಸಕಾರ ಷ.ಶೆಟ್ಟರ್ ಆಂಗ್ಲದಲ್ಲಿ ಮತ್ತು ಕನ್ನಡದಲ್ಲಿ ನಾನು- ಅವರ ಮುರಾರ್ ರಾವ್ ಘೋರ್ಪಡೆ ಕುರಿತ ಪುಸ್ತಕವನ್ನು ಅನುವಾದ ಮಾಡುತ್ತಿದ್ದೇವೆ. ಚರ್ಚಿಲ್‌ನಿಂದ ಕೊಲ್ಲಾಪುರದ ರಾಜರ ತನಕ ಅವರ ಬಳಿ ಸಾಕಷ್ಟು ವೈವಿಧ್ಯಮಯ ಪುಸ್ತಕಗಳ ಭಂಡಾರವೇ ಇದೆ.

ಎರಡು ದೊಡ್ಡ ಹೊಡೆತ: ಮಳಗಾಂವ್ ಕರ್ ಅವರೊಂದಿಗೆ ಅರ್ಧ ಶತಮಾನ ಬದುಕು ಹಂಚಿಕೊಂಡ ಅವರ ಪತ್ನಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಇದಾದ ಐದೇ ವರ್ಷಕ್ಕೆ ಅವರ ಒಬ್ಬಳೇ ಮಗಳೂ ಕಣ್ಮುಚ್ಚಿದಳು. ಇಬ್ಬರೂ ಕ್ಯಾನ್ಸರಿಗೆ ಬಲಿಯಾಗಿದ್ದು ದುರಂತ. ಇದು ಅವರ ಬದುಕಿನಲ್ಲಿ ನಡೆದ ಎರಡು ದೊಡ್ಡ ದುರಂತ. ಇವರ ಅಳಿಯ ಅಂಜ್ರೇ ಕಪೂರ್ ಮುಂಬೈನಲ್ಲಿದ್ದರೆ, ಕಿರಿಯ ಸೋದರರೊಬ್ಬರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅಂದಹಾಗೆ, ಅವರು ಮಾತ್ರ ಒಂದು ದಿನವೂ ಮಾತ್ರೆ ನುಂಗಲಿಲ್ಲ. ಚುಚ್ಚುಮದ್ದು ತೆಗೆದುಕೊಳ್ಳಲಿಲ್ಲ.

ಅಷ್ಟು ಶಿಸ್ತಿನ ಬದುಕು ಅವರದು. ತೀರಾ ವಯಸ್ಸಾಗಿದ್ದ ಕಾರಣ ಅವರ ಅನ್ನನಾಳ ಚಿಕ್ಕದಾಗಿ, ಗಂಟಲಲ್ಲಿ ಆಹಾರ ಇಳಿಸುವುದು ತ್ರಾಸದಾಯಕವಾಗಿತ್ತು ಎನ್ನುವುದನ್ನು ಬಿಟ್ಟರೆ, ಅವರು ಆರೋಗ್ಯವಂತರಾಗಿದ್ದರು. ಉಳಿದಂತೆ ನೆನಪಾಗುವ ವಿಷಯ ಅಂದರೆ, `ಸರ್… ನೀವು ಮದುವೆಯಾದ ದಿನಾಂಕ ನೆನಪಿದೆಯೇ?’ ಎಂದು ಒಮ್ಮೆ ಕೇಳಿದ್ದೆ. ಅದಕ್ಕೆ ಅವರು, `ಮರೆಯಲು ಸಾಧ್ಯವೇ? ಭಾರತ- ಪಾಕ್ ಯುದ್ಧ ಶುರುವಾದ ಮೊದಲ ದಿನವೇ ನಮ್ಮ ದಾಂಪತ್ಯದ ಮೊದಲ ದಿನವಾಗಿತ್ತು’ ಎಂದು ನಕ್ಕಿದ್ದರು!

ಕಡೆಯಲ್ಲಿ… ನನ್ನ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಎಂದರೆ ಅವರ ಕೃತಿಗಳನ್ನು ಅನುವಾದಿಸುವ ಹಕ್ಕನ್ನು ನನಗೆ ಮಳಗಾಂವ್ ಕರ್ ನೀಡಿದ್ದರು. ನಾನು ಜೋಯಿಡಾ ಕಾಡಿಗೆ ಹೋದಾಗಲೆಲ್ಲ ಅವರ ಇಷ್ಟದ ಪುಸ್ತಕ, ರಮ್ಮು ಮತ್ತು ಸಂಗೀತದ ಸಿ.ಡಿಗಳನ್ನು ಕೊಟ್ಟುಬರುತ್ತಿದ್ದೆ. ಕಡೆಗಾಲದಲ್ಲಿ ಮನೋಹರ ಮಳಗಾಂವ್‌ಕರ್ ಅವರ ಸೇವೆ ಮಾಡಿದ ಪುಣ್ಯ ನನ್ನದು ಎಂಬುದೇ ನನ್ನ ಭಾಗ್ಯ! ತಂದೆಯಂಥ ಗುರುವಿಗೆ ಅಂತಿಮ ನಮಸ್ಕಾರ…

ಅಕ್ಕಪಕ್ಕದಲ್ಲಿ ಹಾಲಪ್ಪ-ರೇಣುಕಾ ಜೊತೆಗೆ ಜಾಂಬವತಿ!

Hartal Halappa, Yeddyurappa, Shobha Karandlaje, Renukacharya

ಶುದ್ಧ ಲಂಪಟನಾಗಿ, ಕುಡುಕನಾಗಿ, ರೌಡಿಯಾಗಿ, ಬ್ಲಾಕ್ ಮೇಲರ್ ಆಗಿ ವಿಧಾನಸೌಧದಲ್ಲಿ ಕಾಣಿಸಿಕೊಂಡ ಹೊನ್ನಾಳಿಯ ರೇಣುಕಾಚಾರ್ಯ ತನ್ನ ಅಕ್ಕಪಕ್ಕದಲ್ಲಿ ಶಾಸಕರನ್ನಿಟ್ಟುಕೊಂಡು ಮಂತ್ರಿ ಪದವಿಗಾಗಿ ಬಡಿದಾಡಿದ್ದಿದ್ದರೆ ಕಡೇ ಪಕ್ಷ, ಆ ಕಾರಣಕ್ಕಾಗಿಯಾದರೂ ಅವನನ್ನು ಅಹುದೆನ್ನಬಹುದಿತ್ತು. ಆದರೆ ರೇಣುಕಾ ಮೊದಲು ರೆಡ್ಡಿಗಳ ಹಣ ತಿಂದ. ನಂತರ ಯಡಿಯೂರಪ್ಪನವರನ್ನು ಕೆಡವಿಯೇ ಬಿಡುತ್ತೇನೆಂದು, ದೇವೇಗೌಡರ ಮಗ ಕುಮಾರಸ್ವಾಮಿಯೊಂದಿಗೆ ಮಾತನಾಡಿ ಎಂಟು ಕೋಟಿ ರುಪಾಯಿಗೆ ಸುಪಾರಿ ತೆಗೆದುಕೊಂಡ. ಅದು ಗೊತ್ತಾಗುತ್ತಿದ್ದಂತೆಯೇ ಕಂಗಾಲೆದ್ದ ಯಡಿಯೂರಪ್ಪ ಸಂಧಾನಕ್ಕೆ ಕರೆದರೆ ತನ್ನ ಅಕ್ಕಪಕ್ಕದಲ್ಲಿ ಸುತ್ತೂರು ಸ್ವಾಮಿ ಮತ್ತು ಸಿದ್ದಗಂಗೆಯ ಸ್ವಾಮಿಗಳನ್ನು ಕೂಡಿಸಿಕೊಂಡು ಮಂತ್ರಿ ಪದವಿ ಕೇಳಿದ. ಕೊಡಬೇಕೆಂದರೆ, ವ್ಯಭಿಚಾರಿ ಖಾತೆ ಅಂತ ಒಂದಿರಲಿಲ್ಲವಾದ್ದರಿಂದ ಯಡಿಯೂರಪ್ಪನವರು ಇವನಿಗೆ ಅಬಕಾರಿ ಖಾತೆಯನ್ನು ಕೊಟ್ಟರು.

ಇಂಥ ರಾಜ್ಯದಲ್ಲಿ ಆಹಾರ ಮಂತ್ರಿಯಾಗಿದ್ದ ಹರತಾಳು ಹಾಲಪ್ಪ ಈಗ ಫಕ್ಕನೆ ಬೆತ್ತಲಾಗಿದ್ದಾನೆ. ಹಾಗಂತ, ಇದು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಸೆಕ್ಸ್ ಸ್ಕ್ಯಾಂಡಲ್ ಏನಲ್ಲ. ಹರತಾಳು ಹಾಲಪ್ಪನ ಲೀಲಾವಿನೋದಗಳು ಮೊದಲಿನಿಂದಲೂ ಜನಜನಿತವೇ. ಹೋದಲ್ಲೆಲ್ಲ ಸ್ನೇಹತರ, ಕೈಕೆಳಗಿನ ಅಧಿಕಾರಿಗಳ, ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಮಗಲುತ್ತಿದ್ದ ಹಾಲಪ್ಪ, ಆ ಕುಟುಂಬದಲ್ಲಿ ಸುಳಿಗಾಳಿಯೆಬ್ಬಿಸುತ್ತಿದ್ದ. ಅಕ್ಕಪಕ್ಕದ ಜನ ಆ ಕುಟುಂಬದವರ ಹೆಣ್ಣುಮಕ್ಕಳ ಬಗ್ಗೆ ಅಸಹ್ಯವಾಗಿ ಮಾತನಾಡಲಾರಂಭಿಸುತ್ತಿದ್ದರು. ಇಂಥದೊಂದು ಅಪಖ್ಯಾತಿಗೆ ಒಳಗಾದ ರಾಜಕಾರಣಿಗಳಲ್ಲಿ ಹರತಾಳು ಹಾಲಪ್ಪ ಮೊದಲಿಗನೂ ಅಲ್ಲ, ಕೊನೆಯವನೂ ಅಲ್ಲ. ಹಿಂದೆ ಹಿರೀಸಾವೆ ಅಣ್ಣಯ್ಯ, ಬಂಗಾರಪ್ಪ, ತಿಮ್ಮಪ್ಪ ಮುಂತಾದವರೆಲ್ಲ ಮನೆಯಲ್ಲಿ ಹಾಸುಂಡು ಬೀಸಿ ಬಗೆಯ ಮಹಾಮಹಿಮರೇ.

ರಾಜಕಾರಣಿಗಳ ಬುಡಕಟ್ಟು ಅಂದರೇನೇ ಅದು. ಕಂಡ ಕಂಡಲ್ಲಿ ಆಸ್ತಿ ಕೊಳ್ಳತೊಡಗುತ್ತ, ರಿಯಲ್ ಎಸ್ಟೇಟ್ ಮೇಲೆ ಅಧಿಪತ್ಯ ಸ್ಥಾಪಿಸಿಬಿಡುತ್ತಾರೆ. ಅದರ ನಂತರದ ಹಂತವೇ-ಹೆಣ್ಣು. ಕಣ್ಣಿಗೆ ಬಿದ್ದ, ಕೈಯಳೆತೆಯಲ್ಲಿನ ಪ್ರತಿ ಹೆಂಗಸರನ್ನೂ ತಮ್ಮ ಭೋಗಕ್ಕೆ ಬಳಸಿಕೊಳ್ಳಲಾರಂಭಿಸುತ್ತಾರೆ. ಪ್ರಮೋದ್ ಮಹಾಜನ್ ನಂತಹ ರಾಜಕೀಯ ನಾಯಕನ ಬಗ್ಗೆ ಓದುತ್ತ ಹೋದಂತೆಲ್ಲ ಈ ಮಾತು ಸತ್ಯವೆನಿಸುತ್ತದೆ. ಅಕ್ಷರಶಃ ಕೈಯಳತೆಯಲ್ಲಿನ ಕಣ್ಣಳತೆಯಲ್ಲಿನ ಪ್ರತಿ ಹೆಂಗಸರನ್ನೂ ತಮ್ಮ ವೈಯಕ್ತಿಕ ಆಸ್ತಿಯೆಂಬಂತೆ ಇವರು ಅನುಭವಿಸಿ ಬಿಡುತ್ತಾರೆ. ಇವತ್ತಿನ ಈ ಗಲೀಜು ಮಂತ್ರಿ ಹಾಲಪ್ಪ, ರೇಣುಕನ ಮಾತು ಒತ್ತಟ್ಟಿಗಿರಲಿ, ಅವತ್ತು ಸ್ವಾತಂತ್ರ್ಯದ ಮಹಾಸಂಗ್ರಾಮ ನಡೆಯುತ್ತಿದ್ದ ಕಾಲದಲ್ಲಿ ಅಂಥ ಜವಾಹರ್ ಲಾಲ್ ನೆಹರೂ ಅವರೇ ಮೌಂಟ್ ಬ್ಯಾಟನ್ ನ ಪತ್ನಿಯೊಂದಿಗೆ ಸರಸವಾಡುತ್ತಿದ್ದರು ಅಂದರೆ, ನಿಮಗೆ ರಾಜಕಾರಣಿಗಳ ಮನಸ್ಥಿತಿ, ಅಧಿಕಾರ ಉಂಟು ಮಾಡುವ ಡಿಸೈರ್ ಇತ್ಯಾದಿಗಳು ಹೇಗಿರುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.

ಮತ್ತೆ ಯಡಿಯೂರಪ್ಪನವರ ವಿಷಯಕ್ಕೇ ಬರೋಣ. ಎಲ್ಲೋ ಪುತ್ತೂರಿನ ಮೂಲೆಯಲ್ಲಿದ್ದ ಶೋಭಾ ಕರಂದ್ಲಾಜೆಯನ್ನು ತಂದು ಊರೂರು ತಿರುಗಿಸಿ ಮೆರೆಸಿದವರು ಯಡಿಯೂರಪ್ಪ. ಕಡೆಗೆ ಆಕೆಯನ್ನು ಮಂತ್ರಿಯನ್ನಾಗಿ ಮಾಡಿ ಮೈಸೂರಿನಂತಹ ಪ್ರೆಸ್ಟೀಜಿಯಸ್ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿಬಿಟ್ಟರು. ಸಂಪುಟ ಸಭೆಯಲ್ಲಿ ‘ಕೂತ್ಕೋ ಶೋಭಾ, ಬಿಸ್ಕತ್ ತಿನ್ನು ಶೋಭಾ, ಸೆಖೆಯಾಗುತ್ತಾ ಶೋಭಾ’ ಅಂತ ಎಷ್ಟು ಬಾಲಿಶವಾಗಿ ಆಡತೊಡಗಿದರೆಂದರೆ, ಅದನ್ನು ಕಂಡು ರೋಸಿ ಹೋದ ಭಿನ್ನಮತೀಯ ಸಚಿವರೊಬ್ಬರು ರಾಜನಾಥ್ ಸಿಂಗ್ ಮುಂದೆ ಕುಳಿತು, ‘ಮುಖ್ಯಮಂತ್ರಿಗಳಿಗೆ ಆಕೆಯನ್ನು ಮದುವೆಯಾಗಲು ಹೇಳಿಬಿಡಿ. ಮುಖ್ಯಮಂತ್ರಿಯ ಪತ್ನಿ ಅಂತಲಾದರೂ ಗೌರವಿಸುತ್ತೇವೆ. ಇದೇನು ಅಸಹ್ಯ?’ ಎಂದು ಗುಡುಗಿಬಿಟ್ಟಿದ್ದರು.

ಕಡೆಗೆ ಶೋಭಾಳನ್ನು ಇಳಿಸಲೆಂದೇ ಸುಮಾರು ಅರವತ್ತು ಶಾಸಕರು ಬಂಡಾಯವೆದ್ದಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಯಡಿಯೂರಪ್ಪ ಶೋಭಾ ಕರಂದ್ಲಾಜೆಯನ್ನು ಮಂತ್ರಿಮಂಡಲದಿಂದ ಕೈಬಿಟ್ಟರು. ಅದಕ್ಕಾಗಿ ಹೈಸ್ಕೂಲು ಹುಡುಗನಂತೆ ಟೀವಿಗಳ ಮುಂದೆ ಗೋಳಾಡಿದರು. ಇಷ್ಟೆಲ್ಲ ಆಗಿ ರೆಡ್ಡಿಗಳು ಐವತ್ತೇಳು ಶಾಸಕರೊಂದಿಗೆ ಹೈದರಾಬಾದಿನಿಂದ ಹಿಂತಿರುಗಿ ಏರ್ಪೋರ್ಟಿನಿಂದ ಯಡಿಯೂರಪ್ಪನವರ ಮನೆಗೆ ಔಪಚಾರಿಕವಾಗಿ ಮಾತುಕತೆಗೆ ಅಂತ ಹೋದರಲ್ಲ, ಆಗ ಯಡಿಯೂರಪ್ಪ ಅಂದದ್ದೇನು ಗೊತ್ತೆ? ‘ಆ ಹುಡುಗಿ ನಂಗೆ ಮಗಳ ಸಮಾನ ರೆಡ್ಡಿಯವರೆ!’

ಇದನ್ನು ನಿರ್ಲಜ್ಜೆ ಅನ್ನುತ್ತೀರಾ? ರಾಜಕಾರಣದ ವರಸೆ ಅನ್ನುತ್ತೀರಾ? ಅಧಿಕಾರದಲ್ಲಿದ್ದವನ ಮನಸ್ಥಿತಿ ಅನ್ನುತ್ತೀರಾ? ನೀವೇ ಹೇಳಿ. ಅಧಿಕಾರ ಸಿಕ್ಕಿದ ಕೂಡಲೆ ಮನುಷ್ಯನಿಗೆ ಏನು ಮಾಡಲಿ, ಏನು ಬಿಡಲಿ, ಎಲ್ಲಿ ಸುಖಪಡಲಿ ಎಂಬ ಹಂಬಲ ಆರಂಭವಾಗಿ ಬಿಡುತ್ತದೆ. ಇಲ್ಲದಿದ್ದರೆ, ಚಟ್ಟಹತ್ತಲು ಸಿದ್ಧರಾಗಿರುವ ಹಣ್ಣಣ್ಣು ಮುದುಕ – ಆಂಧ್ರ ರಾಜ್ಯವಾಲ ಎನ್ ಡಿ ತಿವಾರಿ ಹಾಗೆ ಮೂರು ಮೂರು ಜನ ಹೆಂಗಸರೊಂದಿಗೆ ಮಂಚಕ್ಕೆ ಬಿದ್ದು ನೀರು ನೀರಾಗುತ್ತಿದ್ದನೆ?

ಹರತಾಳು ಹಾಲಪ್ಪ ಮಾಡಿಕೊಂಡಿರುವುದೂ ಇದೇ ಫಜೀತಿಯನ್ನ. ಅವನದಿನ್ನೂ ಚಿಕ್ಕವಯಸ್ಸು. ಒಂದರ್ಥದಲ್ಲಿ ಗೆಳೆಯನೂ, ಸಂಬಂಧಿಕನೂ ಆದ ವ್ಯಕ್ತಿಯ ಮನೆಗೆ ಪದೇ ಪದೇ ಹೋಗಿದ್ದಾನೆ. ಆ ಗೆಳೆಯನ ಎರಡನೇ ಹೆಂಡತಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಾನೆ. ಗೆಳೆಯನಿಲ್ಲದಾಗ ಮನೆಗೆ ಹೋಗುವುದು, ಅವನನ್ನು ಏನಾದರೂ ನೆಪ ಹೇಳಿ ಮನೆಯಿಂದ ಹೊರಕ್ಕೆ ಕಳಿಸುವುದು, ಹಾಗೆ ಆತ ಹೋದ ಮೇಲೆ ಆತನ ಪತ್ನಿಯೊಂದಿಗೆ ಇರುವುದು – ಇವೆಲ್ಲ ಕೆಲವು ತಿಂಗಳಿನಿಂದ ನಡೆದಿದೆ. ಆ ಗೆಳೆಯನಾದರೂ ಎಂಥ ಧೂರ್ತನೆಂದರೆ, ವಿಷಯ ಹೀಗೆ ಅಂತ ಗೊತ್ತಾದ ಮೇಲೆ ಅದನ್ನು ಪ್ರತಿಭಟಿಸಲು ಹೋಗದೆ- ಹರತಾಳು ಹಾಲಪ್ಪ ಮತ್ತು ತನ್ನ ಹೆಂಡತಿ ಒಟ್ಟಿಗಿರುವ ದೃಶ್ಯವನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಅದನ್ನಿಟ್ಟುಕೊಂಡು ಹಾಲಪ್ಪನನ್ನು ದುಡ್ಡಿಗಾಗಿ ಬೆದರಿಸಿದ್ದಾನೆ. ರಾಜ್ಯ ಬಿಜೆಪಿಯ ಘಟಾನುಘಟಿಗಳಿಗೆಲ್ಲ ವಿಡಿಯೋ ತೋರಿಸಿ ‘ನಂಗೇನಾದರೂ ಕೊಡಿಸಿ’ ಅಂತ ಗೋಗರೆದಿದ್ದಾನೆ. ಯಾವುದೂ ಗಿಟ್ಟದೆ ಇದ್ದಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಆದರೆ ಹೊರಬಿದ್ದ ವಿಷಯ ಹಾಲಪ್ಪನ ಮಂತ್ರಿಗಿರಿಯನ್ನು ಸರಾಗವಾಗಿ ಆಪೋಶನ ತೆಗೆದುಕೊಂಡಿದೆ. ತಮ್ಮ ಖಾಸಾ ಶಿಷ್ಯನೇ ಆಗಿದ್ದರೂ ಯಡಿಯೂರಪ್ಪನವರು ಹಾಲಪ್ಪನನ್ನು ರಕ್ಷಿಸಿಕೊಳ್ಳಲಾಗದೆ ರಾಜೀನಾಮೆ ಕೊಡು ಮುಂದೆ ನೋಡೋಣ ಅಂದಿದ್ದಾರೆ.

ಈ ಮಧ್ಯೆ ಆದ ಮತ್ತೊಂದು ಬೆಳವಣಿಗೆಯೆಂದರೆ, ಮುಖ್ಯಮಂತ್ರಿಗಳ ಶೋಭಾ ಯಾತ್ರೆ! ಕಾಲೇಜು ಪ್ರೇಮಿಗಳಂತೆ ಕದ್ದು ಮಲೇಶಿಯಾಕ್ಕೆ ಹೋಗಿ ಬಂದದ್ದೇ ಅಲ್ಲದೆ ದಿನ ಬೆಳಗಾದರೆ ಸಾಕು ನಗರ ಸಂಚಾರ ಹೊರಡುವ ಯಡಿಯೂರಪ್ಪ ಯಥಾಪ್ರಕಾರ ಶೋಭಾ ಕರಂದ್ಲಾಜೆಯನ್ನು ಬೆನ್ನಿಗೆ ಕಟ್ಟಿಕೊಂಡೇ ಹೊರಡುತ್ತಾರೆ. ಕೆಲವು ದಿನ ಅವರಿಬ್ಬರೂ ಒಟ್ಟೊಟ್ಟಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗ ರೆಡ್ಡಿಗಳು ಗಣಿ ರಗಳೆಯಲ್ಲಿ ಸಿಲುಕಿಕೊಂಡರೋ, ಆ ವೃದ್ಧ ಪ್ರೇಮಿಗೆ ಧೈರ್ಯ ಚಿಗಿತುಬಿಟ್ಟಿದೆ. ನೀವು ನೋಡುತ್ತಿರಿ, ಇನ್ನು ಕೆಲವೇ ದಿನಗಳಲ್ಲಿ ಈಶ್ವರಪ್ಪನವರು ಖಾಲಿ ಬಿಟ್ಟು ಹೋದ ಖಾತೆಗೆ ಶೋಭಾಳನ್ನು ತಂದು ಕೂಡಿಸುತ್ತಾರೆ. ತಪ್ಪಿದರೆ, ಅರವಿಂದ ಲಿಂಬಾವಳಿಯನ್ನು ಹದ ಹಾಕಿ ಅವರ ಜಾಗಕ್ಕೆ ಶೋಭಾಳನ್ನು ಕೂಡಿಸಿಬಿಡುತ್ತಾರೆ. ಒಟ್ಟಿನಲ್ಲಿ ಸಖಿಯನ್ನು ಬಿಟ್ಟಿರಲಾರರು ಯಡಿಯೂರಪ್ಪ.

ಕರ್ನಾಟಕದ ದುರಂತವೆಂದರೆ, ಅಪಾರವಾದ ಪ್ರಗತಿಯನ್ನು ಕಾಣಬೇಕಾದ ಕಾಲದಲ್ಲಿ ನಾವು ಮುಖ್ಯಮಂತ್ರಿಗಳ, ಸಚಿವರ ವಿಡಿಯೋ ಕ್ಲಿಪ್ಪಿಂಗ್ ನೋಡುತ್ತ ಕೂಡಬೇಕಾಗಿ ಬಂದಿದೆ. ಇದಕ್ಕೆ ಧಿಕ್ಕಾರವಿರಲಿ.