ಸ್ವಾಮಿ ರಾಮಾನಂದ ತೀರ್ಥ

ಸ್ವಾಮಿ ರಾಮಾನಂದ ತೀರ್ಥರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೧೯೦೩ ಜುಲೈ ೨೬ ರಂದು ಜನಿಸಿದರು.ಇವರ ತಂದೆ ಭವಾನರಾಯ ಬೇಡಗಿ. ರಾಮಾನಂದ ತೀರ್ಥರ ಹುಟ್ಟು ಹೆಸರು ವೆಂಕಟೇಶ. ತಮ್ಮ ಮೊದಲ ಹಂತದ ವಿದ್ಯಾಭ್ಯಾಸವನ್ನು ಇವರು ದೇವಳ ಗಾಣಗಾಪುರದಲ್ಲಿ ತಮ್ಮ ದೊಡ್ಡ ಅಕ್ಕ ಗಂಗಾಬಾಯಿಯ ಬಳಿಯಲ್ಲಿ ಮಾಡಿದರು. ಬಳಿಕ ಸೊಲ್ಲಾಪುರದ ನಾರ್ಥಕೋಟ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿ ಗಾಂಧೀಜಿ ಹಾಗು ಲೋಕಮಾನ್ಯ ತಿಲಕರ ದರ್ಶನ ಪಡೆದರು.

ತಿಲಕ ವಿದ್ಯಾಲಯದಿಂದ ಎಮ್.ಏ. ಪದವಿ ಪಡೆದ ಬಳಿಕ ಕಾರ್ಮಿಕ ಧುರೀಣ ಎನ್.ಎಮ್.ಜೋಶಿ ಅವರ ಕಾರ್ಯದರ್ಶಿಯಾಗಿ ದಿಲ್ಲಿಗೆ ತೆರಳಿದರು. ದಿಲ್ಲಿಯ ಹವಾಮಾನದಿಂದ ಬಳಲಿದ ವೆಂಕಟೇಶ ಅವರು ಹವಾ ಬದಲಾವಣೆಗೆಂದು ಉಸ್ಮಾನಾಬಾದ ಜಿಲ್ಲೆಯ ಹಿಪ್ಪರಗಾಕ್ಕೆ ಬಂದರು.ಅಲ್ಲಿ ಹೈದರಾಬಾದ ನಿಜಾಮನ ರಾಜ್ಯವಿತ್ತು. ಸಾಮಾನ್ಯ ಪ್ರಜೆಗಳ ಮೇಲೆ ನಿಜಾಮ ಆಡಳಿತ ನಡೆಯಿಸುತ್ತಿದ್ದ ಅತ್ಯಾಚಾರದ ವಿರುದ್ಧ ರಾಮಾನಂದರು ಪ್ರಜೆಗಳನ್ನು ಸಂಘಟಿಸಿದರು. ಹೈದರಾಬಾದ ಕಾಂಗ್ರೆಸ್ ಪಕ್ಷ ಕಟ್ಟಿದರು.ಅತ್ಯಾಚಾರದ ವಿರುದ್ಧ ಹೋರಾಟಕ್ಕಿಳಿದರು. ನಿಜಾಮ ಸರಕಾರ ರಾಮಾನಂದರನ್ನು ಬಂಧಿಸಿ ಚಂಚಲಗುಡ್ಡಾ ಸೆರೆಮನೆಗೆ ಕಳಿಯಿಸಿತು.

೧೯೪೮ ಸಪ್ಟಂಬರ ೧೧ ರಿಂದ ಸಪ್ಟಂಬರ ೧೭ ರವರೆಗೆ ಜರುಗಿದ ಹೈದರಾಬಾದ ವಿಮೋಚನಾ ಕಾರ್ಯಾಚರಣೆ‍ಯ ನಾಯಕತ್ವವನ್ನು ಇವರು ವಹಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಇವರನ್ನು ಪೂಜ್ಯ ಭಾವನೆಯಿಂದ ನೋಡುವ ಲಕ್ಷಾಂತರ ಜನರಿದ್ದಾರೆ. ಹೈದರಾಬಾದ್ ವಿಮೋಚನೆಯ ನಂತರ ರಾಜಕೀಯ ಸೇರದೆ, ಸ್ವಾಮಿ ರಾಮಾನಂದ ತೀರ್ಥರು ಆನಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು.

ಸ್ವಾಮಿ ರಾಮಾನಂದ ತೀರ್ಥರು ೧೯೭೨ ಜನೆವರಿ ೨೨ರಂದು ಹೈದರಾಬಾದಿನಲ್ಲಿ ನಿಧನರಾದರು. ಮಹಾರಾಷ್ಟ್ರದಲ್ಲಿ ಇವರ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.

Advertisements

ಪ್ರಭುರಾಜ ಪಾಟೀಲ

ನೀಲಕಂಠ ಗೌಡ

ಕೊಪ್ಪಳ ಸಮೀಪದ ಬನಾಪುರದಲ್ಲಿ ಕೃಷಿಕ ಕುಟುಂಬದಲ್ಲಿ ಜನಸಿದ ನೀಲಕಂಠಗೌಡ, ಕಾಲೇಜು ತೊರೆದು ಮುಂಡರಗಿ ಶಿಬಿರ ಸೇರಿ ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡವರು. ಇದರಿಂದ ಕುಪಿತಗೊಂಡ ನಿಜಾಂ ಸರ್ಕಾರ ಮತ್ತು ರಜಾಕಾರರು, ಇವರ ಕುಟುಂಬದವರಿಗೆ ನಾನಾ ರೀತಿಯ ಕಿರುಕುಳ ನೀಡಿದರು.

ಹೈದರಾಬಾದು ಸಂಸ್ಥಾನ ವಿಮೋಚನೆಯಾದ ನಂತರ ಮತ್ತೆ ಕಾಲೇಜು ಶಿಕ್ಷಣ ಮುಂದುವರಿಸಿದ ಇವರು, ಕರ್ನಾಟಕ ಏಕೀಕರಣವಾದ ನಂತರ ಕರ್ನಾಟಕ ಸರ್ಕಾರದಲ್ಲಿ ನೌಕರಿ ಪಡೆದರು. ಪ್ರಾಮಾಣಿಕ, ದಕ್ಷ ಅಧಿಕಾರಿಯಂದು ಹೆಸರು ಪಡೆದ ಇವರು, ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದಾಗ, ಹಲವಾರು ಜನಪರ ಯೋಜನೆಗಳನ್ನು ಕೈಗೊಂಡರು. ಬೆಂಗಳೂರಿನ ಜಯನಗರದಲ್ಲಿರುವ ವಿಶಾಲ ಉದ್ಯಾನವನಗಳು ಭೂಗಳ್ಳರ ಪಾಲಾಗದೆ, ಜನರಿಗೆ ದೊರೆಯುವಂತೆ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ನಿವೃತ್ತ ಜೀವನವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ಇವರು, ವರ್ಷ 2001ರಲ್ಲಿ ನಿಧನರಾದರು.

ಅನ್ನದಾನಯ್ಯ ಪುರಾಣಿಕ

ಅನ್ನದಾನಯ್ಯ ಪುರಾಣಿಕರವರು(ಜನನ:೧೯೨೮) ಕನ್ನಡದ ಹಿರಿಯ ಸಾಹಿತಿಗಳಲ್ಲೊಬ್ಬರು ಮತ್ತು ಆಧುನಿಕ ವಚನಕಾರರಲ್ಲೊಬ್ಬರು. ಇವರು ಮದ್ದೂರಿನಲ್ಲಿ ನೆಡೆದ ಪ್ರಪ್ರಥಮ ಅಖಿಲ ಕರ್ನಾಟಕ ವಚನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.
ಕನ್ನಡ, ಕರ್ನಾಟಕದ ನಾಡು-ನುಡಿಗಾಗಿ ಸುಮಾರು ಆರು ದಶಕಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯಹೋರಾಟ, ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಹೈದರಾಬಾದ ಪ್ರಾಂತ್ಯ ವಿಮೋಚನಾ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅನ್ನದಾನಯ್ಯ ಪುರಾಣಿಕರ ನಾಯಕತ್ವವನ್ನು ಪ್ರತ್ಯಕ್ಷವಾಗಿ ನೋಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಬಿ.ಡಿ.ಜತ್ತಿ ಮೊದಲಾದ ಗಣ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಕರ್ನಾಟಕ ಸರ್ಕಾರವು ಅನ್ನದಾನಯ್ಯ ಪುರಾಣಿಕರಿಗೆ ಸ್ವಾತಂತ್ರ್ಯ ಹೋರಾಟಗಾರರೆಂದು ಗುರುತಿಸಿದೆ. ವರ್ಷ 2006, ಸುವರ್ಣ ಕರ್ನಾಟಕ ವರ್ಷಾಚರಣೆಯ ಅಂಗವಾಗಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಹಿರಿಯ ನಾಯಕರಲ್ಲಿ ಒಬ್ಬರೆಂದು, ಇವರನ್ನು ಗೌರವಿಸಿ, ಕರ್ನಾಟಕ ರಾಜ್ಯ ಸರ್ಕಾರವು “ಏಕೀಕರಣ ಪ್ರಶಸ್ತಿ” ನೀಡಿದೆ.

ಕರ್ನಾಟಕ ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾನವತಾವಾದಿ, ಗಾಂಧಿವಾದಿ, ಅನ್ನದಾನಯ್ಯ ಪುರಾಣಿಕರವರನ್ನು, ಕರ್ನಾಟಕ ರಾಜ್ಯಾದ್ಯಂತ ಜನರು, ಗೌರವ-ಅಭಿಮಾನದಿಂದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರೆಂದು ಕರೆಯುತ್ತಾರೆ.( ಧಾರವಾಡದ ಮುರುಘಾಮಠದಲ್ಲಿ ಲಿಂಗೈಕ್ಯ ಮೃತ್ಯುಂಜಯ ಸ್ವಾಮಿಗಳು , ಸಾರ್ವಜನಿಕವಾಗಿ ಪ್ರಪ್ರಥಮವಾಗಿ “ಸಾಹಿತ್ಯರತ್ನ”ನೆಂದು ಗೌರವಿಸಿದರು.[೧] ಬೀದರ್ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ಅನ್ನದಾನಯ್ಯನವರಿಗೆ ಪಟ್ಟದೇವರು ಪ್ರಶಸ್ತಿ , ಸಿದ್ದಗಂಗಾ ಮಠದಲ್ಲಿ ಡಾ.ಶಿವಕುಮಾರ ಸ್ವಾಮಿಗಳವರ ೯೮ನೆ ಹುಟ್ಟುಹಬ್ಬದಂದು ಅನ್ನದಾನಯ್ಯನವರಿಗೆ “ಶರಣ ತಪಸ್ವಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಆಧುನಿಕ ವಚನ ರಚನಾ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ೨೦೦೬ನೆಯ ಸಾಲಿನ ರಮಣಶ್ರೀ ಶರಣ ಪ್ರಶಸ್ತಿಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗು ರಮಣಶ್ರೀ ಪ್ರತಿಷ್ಠಾನಗಳು ಜೊತೆಯಾಗಿ ಅನ್ನದಾನಯ್ಯ ಪುರಾಣಿಕರಿಗೆ ನೀಡಿವೆ.

ಬಾಲ್ಯ ಮತ್ತು ಶಿಕ್ಷಣ

ಮಾರ್ಚ್ ೮, ೧೯೨೮ರಲ್ಲಿ, ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ದ್ಯಾಂಪುರವೆಂಬ ಗ್ರಾಮದಲ್ಲಿ ಇವರು ಜನಸಿದರು. ಇವರ ತಂದೆ ಕವಿರತ್ನ ಪಂಡಿತ ಕಲ್ಲಿನಾಥ ಶಾಸ್ತ್ರೀ ಪುರಾಣಿಕ ಮತ್ತು ತಾಯಿ ದಾನಮ್ಮ. ಸಿದ್ದಯ್ಯ ಪುರಾಣಿಕ ಮತ್ತು ಬಸವರಾಜ ಪುರಾಣಿಕ ಇವರ ಸಹೋದರರಾಗಿದ್ದಾರೆ. ಶಾಲಾ ಶಿಕ್ಷಣವನ್ನು ಕುಕನೂರು ಮತ್ತು ಕೊಪ್ಪಳದಲ್ಲಿ ಮತ್ತು ಬಿ.ಕಾಂ ಪದವಿಯನ್ನು ಧಾರವಾಡದಲ್ಲಿ ಮತ್ತು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.

ಸಾಹಿತ್ಯ

ಅನ್ನದಾನಯ್ಯ ಪುರಾಣಿಕರು ವಚನ ಸಾಹಿತ್ಯ, ಸಂಶೋಧನೆ, ನ್ಯಾಯಾಂಗ ಮೊದಲಾದ ಪ್ರಕಾರಗಳಿಗೆ ಸೇರಿದ ಸುಮಾರು ೩೦ ಮೌಲಿಕ ಕೃತಿಗಳನ್ನು, ಹಲವಾರು ಲೇಖನಗಳನ್ನು ಮತ್ತು ಸುಮಾರು ೨೦೦೦ ವಚನಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ ಮತ್ತು ಅನೇಕ ಗ್ರಂಥಗಳ ಸಂಪಾದನೆ ಮಾಡಿದ್ದಾರೆ.

ಇವರ ಪ್ರಮುಖ ಕೃತಿಗಳು ಹೀಗಿವೆ: ೧) ಶರಣು ಸ್ವಾಮಿ ೨) ಭಗೀರಥ (ಭಗೀರಥನ ಚರಿತ್ರೆ, ಆತನ ಬಗ್ಗೆ ಸಂಶೋಧನೆ) ೩) ಚೆನ್ನಬಸವ ಸಾಹಿತ್ಯ (ಚೆನ್ನಬಸವಣ್ಣನವರ ಕೃತಿಗಳ ಕುರಿತು ಪ್ರಥಮ ಪ್ರಕಟಣೆ) ೪) ವಚನ ಪ್ರಕಾಶ ೫) ವಚನ ಮಂದಾರ ೬) ವಚನ ದೀಪ್ತಿ ೭) ವಚನ ಸಂಗಮ ೮) ಷಟಸ್ಥಳಬ್ರಹ್ಮಿ ಚೆನ್ನಬಸವಣ್ಣ (ಚೆನ್ನಬಸವಣ್ಣನ ಜೀವನ-ಸಾಧನೆ) ೯) ಕರ್ನಾಟಕ ಸಹಕಾರ ಸಂಘಗಳ ಕಾನೂನು ೧೦)”ಪುರುಷ ಸಿಂಹ” ಸರ್ದಾರ ವಲಭಬಾಯಿ ಪಟೇಲ್ ೧೧)ಭಗತ್ ಸಿಂಗ್ ೧೨)ನೀತಿವಂತ ನ್ಯಾಯವಾದಿ (ಆತ್ಮ ಕಥನ) 13)ನ್ಯಾಯ ದರುಶನ ( ನ್ಯಾಯ ಶಾಸ್ತ್ರದ ಸಾಮಾನ್ಯ ಪರಿಚಯ) 14)ವಚನ ಸೌರಭ 15)ಷಟ್ ಸ್ಥಲ ಧರ್ಮಸಾರ

ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ (೧೯೬೦೬೩), ಕನ್ನಡ ನುಡಿ ಮಾಸ ಪತ್ರಿಕೆ ಮತ್ತು ನ್ಯಾಯ ದರ್ಶನ ಪತ್ರಿಕೆಗಳ ಸಂಪಾದಕರಾಗಿ ಇವರು ಕೆಲಸ ಮಾಡಿದ್ದಾರೆ. ಸಹಜೀವನ ಪ್ರಕಾಶನ, ಶ್ರೀ ಸಿದ್ಧಲಿಂಗ ಪ್ರಕಾಶನವೆಂಬ ಎರಡು ಪ್ರಕಾಶನ ಸಂಸ್ಥೆಯ ಪ್ರಕಾಶಕರಾಗಿ, ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಹಲವಾರು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಪ್ರಥಮ ಕನ್ನಡ ನಿಘಂಟು ಪ್ರಕಟಣೆ ( ಕನ್ನಡ ನಿಘಂಟು ಸಂಪಾದಕ ಮಂಡಳಿಯ ಸದಸ್ಯರಾಗಿ) , ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ರಣಾಲಯ, ಭಾತಂಬ್ರಾ ಮೊದಲಾದ ಕಡೆ ಪ್ರಾರಂಭವಾದ ಗಡಿ ನಾಡ ಕನ್ನಡ ಸಾಹಿತ್ಯ ಸಮ್ಮೇಳನಗಳ ಪರಂಪರೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಶಾಶ್ವತವಾಗಿ ವಾರ್ಷಿಕ ಅನುದಾನ, ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯ ಹೀಗೆ ಹಲವಾರು ಕೆಲಸಗಳನ್ನು ಇವರು ಪರಿಷತ್ತಿನ ಕಾರ್ಯದರ್ಶಿಯಾಗಿ(೧೯೬೦೬೩) ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ(೧೯೬೪೬೮) ಮಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಉತ್ತಮ ಪಡಿಸಿದರು.

ಕರ್ನಾಟಕ ಭಾಷಾ ಆಯೋಗದ ಸದಸ್ಯರಾಗಿ (೧೯೬೬೬೯) ಮತ್ತು ಕರ್ನಾಟಕ ಗೆಝೆಟಿಯರ್ ಸಂಪಾದಕ ಮಂಡಳಿಯ ಸದಸ್ಯರಾಗಿ ( ೧೯೭೧೧೯೯೩) ಕೆಲಸ ಮಾಡಿದ್ದಾರೆ. ಕರ್ನಾಟಕದ ಜಿಲ್ಲೆಗಳ ಗೆಝೆಟಿಯರ್ ಗಳ ಸಂಪಾದನೆ ಮತ್ತು ಪ್ರಕಟಣೆ ( ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ) ಇವರ ಮುಖ್ಯವಾದ ಕಾರ್ಯಗಳಲ್ಲೊಂದಾಗಿದೆ.

ಸಂಘ ಸಂಸ್ಥೆಗಳು

ಅನ್ನದಾನಯ್ಯ ಪುರಾಣಿಕರು ಅನೇಕ ಜಾತ್ಯಾತೀತ ಸಂಘ-ಸಂಸ್ಥೆಗಳ ಸ್ಥಾಪನೆ ಮಾಡಿದ್ದಾರೆ. ಬಸವೇಶ್ವರರ 8ನೆ ಶತಮಾನೋತ್ಸವವನ್ನು ರಾಜ್ಯ ಸರ್ಕಾರ ಆಚರಿಸಿದಾಗ ಬಸವ ಕಲ್ಯಾಣದಿಂದ ಹಂಪೆಯವರೆಗೆ ನೆಡೆದ ಪಾದಯಾತ್ರೆಯ ನೇತ್ರತ್ವ ವಹಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬಸವೇಶ್ವರ ಅಂಚೆ ಚೀಟಿ ಬಿಡುಗಡೆಗಾಗಿ ಬಿ.ಡಿ.ಜತ್ತಿಯವರೊಡನೆ ಕೆಲಸ ಮಾಡಿದ್ದಾರೆ. ಇಂದು ನಾಡಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಗಿರುವ ಅಖಿಲ ಭಾರತ ಬಸವ ಸಮಿತಿಯಲ್ಲಿ, ಸ್ಥಾಪಕ ಧರ್ಮದರ್ಶಿಯಾಗಿದ್ದಾರೆ ಮತ್ತು ೨೭ ವರ್ಷ ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ಧಾರೆ. ಪ್ರಪಥಮವಾಗಿ ರಾಜ್ಯದ ವಿದ್ಯಾರ್ಥಿಗಳನ್ನು ಸಂಘಟಿಸಿ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತು ಸ್ಥಾಪಿಸಿ, ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಸಾಹಿತ್ಯ ಸಂವರ್ಧಕ ಟ್ರಸ್ಟ್ ನ ಧರ್ಮದರ್ಶಿಯಾಗಿದ್ದಾರೆ. ಶೇಷಾದ್ರಿಪುರ ಶಿಕ್ಷಣ ದತ್ತಿ, ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ, ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ ಸಮಿತಿ ಮತ್ತು ಅಲ್ಲಿ ಸಂಶೋಧನೆ-ಪ್ರಕಟಣೆ-ಶಿಕ್ಷಣ ಸಮಿತಿ , ಜಯನಗರ ನಾಗರೀಕರ ಕ್ಷೇಮಾಭಿವೃದ್ಧಿ ಸಂಘ, ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸದಸ್ಯರಾಗಿ, ಪದಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ.

ನ್ಯಾಯಾಂಗ

ರಾಜ್ಯ ಹೈಕೋರ್ಟಿನ ಹಿರಿಯ ನ್ಯಾಯವಾದಿಯಾಗಿ ( 1957ರಿಂದ) 10,000ಕ್ಕೂ ಹೆಚ್ಚು ಕೇಸುಗಳನ್ನು ಬಡವರಿಗೆ-ದಲಿತರಿಗೆ-ಅಲ್ಪಸಂಖ್ಯಾತರಿಗಾಗಿ ಉಚಿತವಾಗಿ ನೆಡೆಸಿದ್ದಾರೆ. ರಾಜ್ಯ ಹೈಕೋರ್ಟಿನ ಅಡ್ವೋಕೇಟ್ ಆಗಿ (1969-81) ಸರ್ಕಾರಕ್ಕೆ ಸಾವಿರಾರು ಕೋಟಿ ಬೆಲೆ ಬಾಳುವ ಆಸ್ತಿಯನ್ನು ಉಳಿಸಿ ಕೊಟ್ಟಿದ್ದಾರೆ. ಹಲವಾರು ಬಾರಿ ಹೈಕೋರ್ಟ್ ನ್ಯಾಯಾಧೀಶರಾಗುವ ಅವಕಾಶ ಬಂದಾಗಲೂ ಅದನ್ನು ನಿರಾಕರಿಸಿ ಬಡವರಿಗೆ-ದಲಿತರಿಗೆ-ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸುವ ಹೋರಾಟವನ್ನು ಮುಂದುವರೆಸಿದವರಾಗಿದ್ದಾರೆ. ಜನಸಾಮಾನ್ಯರಿಗೆ ನ್ಯಾಯಾಂಗ ಮಾಹಿತಿ ತಲಪಲು, ಕನ್ನಡದಲ್ಲಿ ಹಲವಾರು ನ್ಯಾಯಾಂಗ ಪುಸ್ತಕಗಳನ್ನು ಮತ್ತು ಲೇಖನಗಳನ್ನು ಬರೆದಿದ್ದಾರೆ. ಅಖಿಲ ಭಾರತ ನ್ಯಾಯವಾದಿಗಳ ಸಂಘಟಣೆ, ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ (1976-78) ಕೆಲಸ ಮಾಡಿದ್ದಾರೆ. ಬೆಂಗಳೂರಿನ ಸರ್ಕಾರಿ ಲಾ ಕಾಲೇಜನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಪರೀಕ್ಸಾ ವಿಭಾಗದ ಮುಖ್ಯ ಪರಿವಿಕ್ಷಕರಾಗಿ (1962-69) ಕೆಲಸ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟ

ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು, ಸ್ವಾತಂತ್ರ್ಯ ಚಳುವಳಿ ಸೇರಿ, ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ (ಕ್ವಿಟ್ ಇಂಡಿಯಾ ಚಳುವಳಿ) ಸಕ್ರಿಯ ಪಾತ್ರವಹಿಸಿದ್ದರು.

ಹೈದರಾಬಾದ್ ವಿಮೋಚನಾ ಕಾರ್ಯಾಚರಣೆ

ಭಾರತಕ್ಕೆ ೧೯೪೭ಆಗಸ್ಟ್ ೧೫ರಂದು ಸ್ವಾತಂತ್ರ್ಯ ಬಂದರೆ, ಹೈದರಾಬಾದಿನ ನಿಜಾಂ ಮಾತ್ರ ಬಹುಸಂಖ್ಯಾತ ಜನರ ಅಭಿಪ್ರಾಯದಂತೆ, ಹೈದರಾಬಾದ್ ಪ್ರಾಂತ್ಯವನ್ನು ಭಾರತದೊಡನೆ ವಿಲೀನಗೊಳಿಸಲು ಒಪ್ಪಲಿಲ್ಲ. ಹೈದರಾಬಾದ್ ಪ್ರಾಂತ್ಯವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಂ ಘೋಷಿಸಿದಾಗ, ಭಾರತದೊಡನೆ ವಿಲೀನದ ಪರವಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಜನಸಾಮಾನ್ಯರ ಮೇಲೆ ನಿಜಾಂ ಬೆಂಬಲಿಗರಾದ ರಜಾಕಾರರು ದೌರ್ಜನ್ಯ ನಡೆಸಿ, ಆಸ್ತಿ-ಪಾಸ್ತಿ ದೋಚಿದ್ದರೆಂದು ನಂಬಲಾಗಿದೆ. ಆಗ, ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಬಿ ವ್ಯಾಸಂಗ ಮಾಡುತ್ತಿದ್ದ ಅನ್ನದಾನಯ್ಯ ಪುರಾಣಿಕ, ನಿಜಾಂ ವಿರುದ್ಧ ಪ್ರತಿಭಟಿಸಿ, ಓದು ತೊರೆದು, ಅನ್ನಪೂರ್ಣಯ್ಯ ಸ್ವಾಮಿ, ಮೊದಲಾದವರ ಜೊತೆ ಸೇರಿ ಹೈದರಾಬಾದಿನಲ್ಲಿದ್ದ ಕನ್ನಡಿಗರ ರಕ್ಷಣೆಗಾಗಿ ಕೆಲಸ ಮಾಡಿದ್ದಾರೆ. ಮುಂದೆ ಕರ್ನಾಟಕದಲ್ಲಿ ಮುಂಡರಗಿಯಲ್ಲಿ ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕಾಗಿ ಶಿಬಿರವನ್ನು ಸ್ಥಾಪಿಸಿದ್ದಾರೆ.ಸರ್ದಾರ ಪಟೇಲ್, ನಿಜಲಿಂಗಪ್ಪ ಮೊದಲಾದವರ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿ ನೆಡೆದ ಈ ಹೋರಾಟದ ನೇತ್ರತ್ವ ವಹಿಸಿ ಹೈದರಾಬಾದು ಸಂಸ್ಥಾನದ ಜನರಿಗೆ ಸ್ವಾತಂತ್ರ್ಯ ದೊರೆಯಲು ಪ್ರಮುಖ ಕಾರಣವಾಗಿದ್ದಾರೆ.

ಕರ್ನಾಟಕ ಏಕೀಕರಣ ಹೋರಾಟ

ಕರ್ನಾಟಕ ಏಕೀಕರಣವಾಗ ಬೇಕೆಂದು ಸ್ವಾತಂತ್ರ್ಸ ಪೂರ್ವದಿಂದಲೂ ಹೋರಾಟ ನೆಡೆದಿತ್ತು. ಹೈದರಾಬಾದು ಕಾಂಗ್ರೆಸ್ ಅಧಿವೇಶನದಲ್ಲಿ, ಕರ್ನಾಟಕ ಏಕೀಕರಣ ಬೇಡಿಕೆಯನ್ನು ವಿರೋಧಿಸಿ ನಿರ್ಣಯವಾದಾಗ, ಕನ್ನಡಿಗರಿಗೆ ಬಹಳ ನಿರಾಸೆಯಾಯಿತು. ಕರ್ನಾಟಕದ ಕಾಂಗ್ರೆಸ್ ಮುಖಂಡರು, ನಿಜಲಿಂಗಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸಭೆ ಸೇರಿ, ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಂದರ್ಭ ಬಂದಿತ್ತು. ಈ ನಡುವೆ, ರಾಜ್ಯಾದಂತ್ಯ ಸಂಚರಿಸಿ, ವಿದ್ಯಾರ್ಥಿಗಳನ್ನು ಸಂಘಟಿಸಿದ್ದ ಅನ್ನದಾನಯ್ಯ ಪುರಾಣಿಕ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತನ್ನು ಸ್ಥಾಪಿಸಿ, ಅದರ ಪ್ರಥಮ ಅಧಿವೇಶನವನ್ನು ಹೈದರಾಬಾದಿನಲ್ಲಿ ನೆಡೆಸಿದ್ದರು. ರಾಜ್ಯದ ಹಿರಿಯ ರಾಜಕಾರಣಿ ಮಾರ್ಗರೇಟ್ ಆಳ್ವಾರವರು ಈ ಪರಿಷತ್ತಿನಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಈ ಅಧಿವೇಶನದ ಸರ್ವಾನುಮತದ ನಿರ್ಣಯದಂತೆ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನಕರ್ನಾಟಕ ಏಕೀಕರಣ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿತ್ತು. ಅದರಂತೆ ಕರ್ನಾಟಕ ಏಕೀಕರಣದ ಪರವಾಗಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ನೆಡೆದಿತ್ತು. ಕರ್ನಾಟಕ ಏಕೀಕರಣದ ವಿರೋಧಿಗಳು ಕೆಲವು ಈ ಸಂದರ್ಭದಲ್ಲಿ ಹಿಂಸಾಚಾರ ನೆಡೆಸಿದ ಕಾರಣ, ಜನಸಾಮಾನ್ಯರು, ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೋಲಿಸರು ವಿದ್ಯಾರ್ಥಿಗಳೇ ಹಿಂಸಾಚಾರ ನೆಡೆಸಿದರೆಂದೂ ಆಪಾದಿಸಿ, ಅನ್ನದಾನಯ್ಯ ಪುರಾಣಿಕ ಮತ್ತು ಕೆಲವು ವಿದ್ಯಾರ್ಥಿ ಪರಿಷತ್ತಿನ ಮುಖಂಡರನ್ನು ಪೋಲಿಸರು ಬಂಧಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಹುಬ್ಬಳಿಯ ಹಿರಿಯ ರಾಜಕಾರಣಿ-ವಕೀಲರಾದ ಶೆಟ್ಟರ್ರವರು ನ್ಯಾಯಾಲಯದಲ್ಲಿ ವಾದಿಸಿ, ಅನ್ನದಾನಯ್ಯ ಪುರಾಣಿಕರನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. (( ಕರ್ನಾಟಕ ಏಕೀಕರಣದ ಬಗ್ಗೆ ಪುಸ್ತಕ ಬರೆದಿರುವ ಕೆಲವು ಲೇಖಕರು ಪೋಲಿಸರ ಈ ಕ್ರಮವನ್ನು ಸರಿಯಂದು ದಾಖಲಿಸಿ, ಹುಬ್ಬಳ್ಳಿ ಗಲಭೆಗಾಗಿ ವಿದ್ಯಾರ್ಥಿಗಳನ್ನು ದೂಷಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ))

ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ನೆಡೆಸಿದ ಮೆರವಣಿಗೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನೀಡಿದ ಬೆಂಬಲ, ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಕರ್ನಾಟಕದ ಏಕೀಕರಣದ ಪರವಾಗಿ ಕೆಲಸ ಮಾಡಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎಂದು ಎಸ್.ನಿಜಲಿಂಗಪ್ಪ,ಬಿ.ಡಿ.ಜತ್ತಿ ಮೊದಲಾದವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.

ಕರ್ನಾಟಕ ಏಕೀಕರಣವಾದ ನಂತರ ಸಮಾಜ, ನ್ಯಾಯಾಂಗ, ಸಮಾಜ ಮತ್ತು ಸಾಹಿತ್ಯ ಸೇವೆಗೆ ಅನ್ನದಾನಯ್ಯ ಪುರಾಣಿಕರು ಹೆಚ್ಚು ಗಮನ ನೀಡಿದ್ದಾರೆ. ಇವರು ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಪತ್ನಿ ನೀಲಾಂಬಿಕೆಯವರು, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಾದ ಶ್ರೀ ಸಿದ್ಧಲಿಂಗ ಪ್ರಕಾಶನ ಸಂಸ್ಥೆ ನೆಡೆಸುತ್ತಿದ್ದಾರೆ. ಮಗಳು ಚಂದ್ರಿಕಾ ಪುರಾಣಿಕ, ಕನ್ನಡದ ಮಹಿಳಾ ಸಾಹಿತಿ, ಆಕಾಶವಾಣಿ-ದೂರದರ್ಶನ ಕಲಾವಿದೆ ಮತ್ತು ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಮಗ ಉದಯ ಶಂಕರ ಪುರಾಣಿಕ, ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿದ್ದು, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ ( ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಇತ್ಯಾದಿ) ಮತ್ತು ವಿಶ್ವವಿದ್ಯಾಲಯಗಳು ಇವರು ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆದಿರುವ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗಿವೆ.

ಉಲ್ಲೇಖಗಳು

  1. ಬೆಂಗಳೂರು ದೂರದರ್ಶನ, ಉದಯ ಟಿ.ವಿ ಸಂದರ್ಶನ ಕಾರ್ಯಕ್ರಮಗಳು, ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್, ಸುಧಾ, ಕನ್ನಡಮ್ಮ, ಹಿಂದೂ ದಿನಪತ್ರಿಕೆ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಂದರ್ಶನ-ಲೇಖನಗಳು

ಪೆರಿಯಾರ್ ರಾಮಸ್ವಾಮಿ

ಪೆರಿಯಾರ್ ರಾಮಸ್ವಾಮಿ

ಪೆರಿಯಾರ್ ರಾಮಸ್ವಾಮಿ (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) – ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ “ಪೆರಿಯಾರ್ ರಾಮಸ್ವಾಮಿ” ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು “ತಮಿಳು ಸ್ವಾಭಿಮಾನ ಚಳುವಳಿ” ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು.

ಮೇಲ್ಜಾತಿಯಲ್ಲಿ ಜನಿಸಿದ್ದರೂಅಸ್ಪೃಶ್ಯತೆ ಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.

ಗೋವಿಂದ ವಲ್ಲಭ ಪಂತ್

Govind Ballabh Pant

Bharat Ratna Pandit Govind Ballabh Pant (August 30, 1887March 7, 1961) was a statesman of India, an Indian independence activist, and one of the foremost political leaders from Uttarakhand (then in United Provinces) and of the movement to establish Hindi as the national language of India.

Early life

Govind Ballabh Pant was born on August 30, 1887 in Shyahi Devi hills in Almora. His mother’s name was Govindi. His father, Manorath Pant, was constantly on the road. Govind was brought up by his grandfather, Bandri Dutt Joshi, who played a significant part in molding his political views.[1]

As a lawyer in Kashipur, Pant began his active work against the British Raj in 1914, when he helped a local parishad, or village council, in their successful challenge of a law requiring locals to provide free transportation of the luggage of travelling British officials. In 1921, he entered politics and was elected to the Legislative Assembly of the United Provinces of Agra and Oudh.

In the freedom struggle

In 1930, he was arrested and imprisoned for several weeks for organizing a Salt March inspired by Gandhi‘s earlier actions. In 1933, he was arrested and imprisoned for seven months for attending a session of the then-banned provincial Congress. In 1935, the ban was rescinded, and Pant joined the new Legislative Council. During the Second World War, Pant acted as the tiebreaker between Gandhi’s faction, which advocated supporting the British Crown in their war effort, and Subash Chandra Bose‘s faction, which advocated taking advantage of the situation to expel the British Raj by any means necessary.

In 1934, the Congress ended its boycott of the legislatures and put up candidates, and Pant was elected to the Central Legislative Assembly. His political skills won the admiration of the leaders of the Congress, and he became deputy leader of the Congress party in the Assembly.[2]

In 1940, Pant was arrested and imprisoned for helping organize the Satyagraha movement. In 1942 he was arrested again, this time for signing the Quit India resolution, and spent three years in Ahmednagar Fort along with other members of the Congress working committee until March 1945, at which point Jawaharlal Nehru pleaded successfully for Pant’s release, on grounds of failing health.[2]

Chief Minister

In 1937, provincial elections were held as a result of the Government of India Act 1935.[2] The Indian National Congress secured a majority in the United Provinces, but did not immediately take office because of a dispute over the use of the Governor’s special powers.[3] Therefore, on April 1, 1937, the Nawab of Chhatari, the leader of NAPs (National Agriculturist Parties), was invited to form a minority government. Within a few months, the Congress accepted to form the government under Pant who was made the Chief Minister on July 17, 1937 and was in power till 1939 when all Congress ministries in India resigned.

As Chief Minister, Pant won the confidence of the Indian Civil Service, and Sir Harry Haig, the governor of the United Provinces, wrote to the Viceroy that Pant was “an interesting and rather attractive personality… essentially a conciliator and not a dictator”[4] However, in 1939 the Viceroy’s declaration of war, without consultation, led to a clash with the Indian National Congress, and its Provincial ministers resigned.[2]

In 1945, the new British Labour government ordered new elections to the Provincial legislatures.[2] The Congress won a majority in the 1946 elections in the United Provinces and Pant was again made the Chief Minister, continuing even after India’s independence in 1947. Among his achievements in that position was the abolition of the zamindari system.

At centre

In 1955 he was called on to succeed Kailash Nath Katju as Home Minister; in that position, his chief achievement was the establishment of Hindi as an official language of the central government and a few states.

In 1957, he was awarded the Bharat Ratna.

Death

In 1960, he had a heart attack. After this his health started deteriorating and he later died on March 7, 1961 after spending several days in a coma.

Family

Pant’s son, Krishna Chandra Pant, is likewise a politician.

ಹೆಚ್ ನರಸಿಂಹಯ್ಯ

ಡಾ. ಹೆಚ್ ನರಸಿಂಹಯ್ಯ

ಡಾ. ಹೆಚ್.ನರಸಿಂಹಯ್ಯ (ಜೂನ್ ೬, ೧೯೨೦ಜನವರಿ ೩೧, ೨೦೦೫) ಬೆಂಗಳೂರಿನ ಹೆಸರಾಂತ ಭೌತಶಾಸ್ತ್ರಜ್ಞರೂ, ಶಿಕ್ಷಣತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕ ದೇಶದಲ್ಲಿನ ಓಹಿಯೋ ವಿಶ್ವವಿದ್ಯಾಲಯದಲ್ಲಿ ಪರಮಾಣು ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನ್ಯಾಷನಲ್ ಕಾಲೇಜು, ಬೆಂಗಳೂರಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಸೇರಿಕೊಂಡ ಇವರು, ತದನಂತರ ಕಾಲೇಜಿನ ಪ್ರಾಂಶುಪಾಲರಾದರು.

ಜೀವನ

ಡಾ. ಹೆಚ್.ನರಸಿಂಹಯ್ಯನವರು ಜೂನ್ ೬, ೧೯೨೦ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಒಂದು ಬಡ, ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿ ಮುಗಿಸಿ, ೧೯೩೫ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಹಾನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು.

೧೯೪೬ನೇ ಇಸವಿಯಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ, ಭೌತಶಾಸ್ತ್ರ ಆಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ನಂತರ ಹನ್ನೆರೆಡು ವರ್ಷಗಳು ಪ್ರಾಂಶುಪಾಲರಾಗಿದ್ದರು. ೧೯೭೨ ರಿಂದ ೧೯೭೭ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳು. ಆ ಕಾಲದಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಎಚ್.ಎನ್.ನ್ಯಾಷನಲ್ ಎಜುಕೇಷನ್ ಸೊಸೈಟಿ ಆಪ್ ಕರ್ನಾಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.

ವಿದ್ಯಾರ್ಥಿ ದೆಸೆಯಲ್ಲಿ ಅವರು ವಿವಿಧ ಉಚಿತ ವಿದ್ಯಾರ್ಥಿನಿಲಯಗಳಲ್ಲಿದ್ದರು. ಅಧ್ಯಾಪಕರಾದ ಮೇಲೂ ೧೯೪೬ರಿಂದ ಕೊನೆವರೆಗೂ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿಯೇ ವಾಸವಾಗಿದ್ದರು. ಒಟ್ಟು ೫೭ ವರ್ಷಗಳ ವಿದ್ಯಾರ್ಥಿನಿಲಯದಲ್ಲಿಯೇ ನೆಲೆಸಲು ಅವರ ಸರಳ, ಆದರ್ಶಮಯ ಜೀವನವೇ ಕಾರಣವೆಂದು ಹೇಳಲಾಗುತ್ತದೆ.
೧೯೪೨ ನೆಯ ಇಸವಿಯಲ್ಲಿ, ಸೆಂಟ್ರಲ್ ಕಾಲೇಜ್‌ನಲ್ಲಿ ಮೂರನೆಯ ಬಿ.ಎಸ್ಸಿ, ಆನರ್ಸ್ ತರಗತಿಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರು ಮೊದಲು ಮಾಡಿದ ಕ್ವಿಟ್ ಇಂಡಿಯಾ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದಾಗ ವಿದ್ಯಾಭ್ಯಾಸಕ್ಕೆ ಎರಡು ವರ್ಷ ವಿದಾಯ. ಬೆಂಗಳೂರು, ಮೈಸೂರು ಮತ್ತು ಪುಣೆಯ ಯರವಾಡಾ ಜೈಲುವಾಸ. ಅಮೆರಿಕಾದ ಓಹಿಯೋ ರಾಜ್ಯ ವಿಶ್ವವಿದ್ಯಾಲಯದಲ್ಲಿ (Ohio State University) ಮೂರು ವರ್ಷ ಅಭ್ಯಾಸ ಮಾಡಿ ನ್ಯೂಕ್ಲಿಯಾರ್ ಫಿಸಿಕ್ಸ್‌ನಲ್ಲಿ ೧೯೬೦ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅಲ್ಲಿಯ ಪರೀಕ್ಷೆಗಳಲ್ಲಿಯೂ ಉತ್ತಮ ಶ್ರೇಣಿ ಪಡೆದರು. ಏಳು ವರ್ಷಗಳ ನಂತರ ಅಮೇರಿಕಾದ ಸದರನ್ ಇಲ್ಲಿನಾಯ್ ವಿಶ್ವವಿದ್ಯಾಲಯ (Southern Illinois University) ದಲ್ಲಿ ಒಂದು ವರ್ಷ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಇವರ ಇಡೀ ಜೀವನ ಶಿಕ್ಷಣಕ್ಕೆ ಮತ್ತು ನಾಲ್ಕು ನ್ಯಾಷನಲ್ ಕಾಲೇಜು, ಐದು ನ್ಯಾಷನಲ್ ಹೈಸ್ಕೂಲ್ ಮತ್ತು ಎರಡು ಪ್ರೈಮರಿ ಶಾಲೆಗಳನ್ನೊಳಗೊಂಡ ನ್ಯಾಷನಲ್ ಎಜುಕೇಷನ್ ಸೊಸೈಟಿಗೆ ಮೀಸಲಿಟ್ಟಿದ್ದರು. ಈ ಸಂಸ್ಥೆಗಳ ಉನ್ನತಿಗಾಗಿ ಶ್ರಮಿಸಿದ್ದಾರೆ ಎನ್ನಲಾಗುತ್ತದೆ. ಅಲ್ಲದೆ ಈ ಸಂಸ್ಥೆಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹ ಮಾಡಿದ್ದಾರೆ. ಈ ಸಂಸ್ಥೆಗಳ ಪೈಕಿ ಆರೇಳು ಸಂಸ್ಥೆಗಳು, ಇವರ ಪ್ರಯತ್ನದ ಫಲವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಾಪಿಸಲ್ಪಟ್ಟಿವೆ.

ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ.ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು ಬೆಂಗಳೂರು ವಿಜ್ಞಾನ ವೇದಿಕೆ (Bangalore Science forum) ಎಂಬ ವಿಜ್ಞಾನ ವೇದಿಕೆಯನ್ನು ಸ್ಥಾಪಿಸಿ ಅದರ ಅಧ್ಯಕ್ಷರಾದರು. ಸಂಗೀತ, ನಾಟಕ, ನೃತ್ಯ ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅವರ ವಿಶಿಷ್ಟ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ , ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ ಪ್ಯಾರಾ ನಾರ್ಮಲ್` ( Committee for Scientific Investigation of the claims of the Paranomal) ಸಂಸ್ಥೆಯ ಭಾರತದ ಏಕೈಕ `ಫೆಲೋ` ಎಂಬ ಗೌರವ ಪಡೆದಿದ್ದಾರೆ. ಕರ್ನಾಟಕ ರಾಜ್ಯ ವಿಧಾನ ಪರಿಷತ್ನಲ್ಲಿ ಶಿಕ್ಷಣ ಮತ್ತು ವಿಜ್ಞಾನವನ್ನು ಪ್ರತಿನಿಧಿಸುವ ನಾಮಕರಣ ಸದಸ್ಯರಾಗಿದ್ದರು.
ಉತ್ತಮ ಅಧ್ಯಾಪಕ, ದಕ್ಷ ಆಡಳಿತಗಾರ, ಸ್ನೇಹಮಯ ಮಾನವತಾವಾದಿ, ವಿಚಾರವಾದಿ, ಮೇಲ್ಮಟ್ಟದ ಹಾಸ್ಯ ಪ್ರಜ್ಞೆ ಅವರದು ಎಂದು ಹೆಚ್.ಎನ್ ಅವರ ನಿಕಟವರ್ತಿಗಳ ಅಭಿಪ್ರಾಯ. ಸರಳ ಜೀವನ ನಡೆಸುತ್ತಿದ್ದರು. ರಾಷ್ಟ್ರೀಯತಾವಾದಿಯಾಗಿದ್ದರು ಮತ್ತು ಖಾದಿ ಬಟ್ಟೆಯನ್ನೇ ಧರಿಸುತ್ತಿದ್ದರು.

ಅನಾಥ ವಿದ್ಯಾರ್ಥಿಯಾಗಿ ಹಳ್ಳಿಯಿಂದ ಬಂದು, ಉನ್ನತ ಸ್ಥಾನಗಳನ್ನು ಗಳಿಸಿ ಐವತ್ತೇಳು ವರ್ಷಗಳ ಹಿಂದೆ ಯಾವ ಶಾಲೆಯಲ್ಲಿ ಓದಿದರೋ, ತದನಂತರ ಯಾವ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರೋ ಅದೇ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯಾದ ಪ್ರತಿಷ್ಟಿತ ನ್ಯಾಷನಲ್ ಸೊಸೈಟಿಗೆ ಅಧ್ಯಕ್ಷರಾಗಿದ್ದರು.

ನಿಧನ

ಡಾ. ಹೆಚ್.ನರಸಿಂಹಯ್ಯನವರು ೨೦೦೫ ಜನವರಿ ೩೧ರಂದು ನಿಧನರಾದರು

ಲಕ್ಷ್ಮಿ ಸೆಹಗಲ್

Captain Laxmi Sehgal is one of the lion hearted women, India ever had. She picked up the Gun for the Indian National Army (INA) founded by Netaji Subash Chandra Bose and led it like a tigress for the struggle for Indian freedom.

Laxmi Sehgal was born in 1914 to a traditional Tamil family. She got her first patriotic lessons from her mother who was a member of the Congress herself. She completed her degree in medicine from the Madras Medical College and went to Singapore for a career as a doctor, however something very different was waiting for her.

Singapore at that time was ruled by British and they had to surrender when the Japanese invaded the country. Thousands of Indians were taken as prisoners. At this juncture, Netaji invited the Indian prisoners to join the INA and fight against the British. Laxmi was one of them and Netaji was impressed by her courage and asked her to lead the Rani Jhansi Regiment. She fought like a tigress against the British in the jungles of Burma.

Today octogenarian, Captain Laxmi Sehgal still has the same indomitable attitude and is a practicing Doctor in Kanpur. She is a major attraction to the seminars and conference and is still working for the betterment of the Society.

ಬಾಬು ಜಗಜೀವನ ರಾಮ್

ಬಾಬು ಜಗಜೀವನ ರಾಮ್ (೫ ಎಪ್ರಿಲ್ ೧೯೦೮ – ೬ ಜುಲೈ ೧೯೮೬)”ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು.

ಕೆ.ಬಿ.ಹೆಡಗೆವಾರ್

ಡಾಕ್ಟರ್ ಜೀ

ಪರಿಚಯ

ಡಾಕ್ಟರ್ ಜೀ ಎಂದೇ ಪ್ರಸಿದ್ಧರಾದ ಕೇಶವ ಬಲಿರಾಮ ಹೆಡಗೆವಾರ್, ೧೮೮೯ರಲ್ಲಿ ಯುಗಾದಿಯ ದಿನವಾದ ಏಪ್ರಿಲ್ ೧ರಂದು ನಾಗಪುರದಲ್ಲಿದಲ್ಲಿ ಜನಿಸಿದರು. ಚಿಕ್ಕವರಾಗಿದ್ದಾಗಲಿಂದ ಹಿಡಿಯಷ್ಟು ಜನ ಪರಕೀಯರು ನಮ್ಮನ್ನು ಹೇಗೆ ಆಳುತ್ತಿರುವರು ಎಂದು ಪ್ರಶ್ನಿಸುತ್ತಿದ್ದರು.

ಗುರಿ

ಮೂಲತಃ ವೈದ್ಯರಾದ ಡಾಕ್ಟರ್ ಜೀ ಮನುಷ್ಯನ ರೋಗ ವಾಸಿಮಾಡುವುದನ್ನ್ನು ಬಿಟ್ಟು ಹಿಂದೂ ಸಮಾಜದ ರೋಗವನ್ನು ವಾಸಿಮಾಡಲು ಹೊರಟರು.

ಸಾಧನೆ

೧೨೨೫ನೇ ವಿಜಯದಶಮಿಯ ಶುಭದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭಿಸಿದರು.

ಬಾಹ್ಯ ಸಂಪರ್ಕಗಳು

ಆರ್ ಎಸ್ ಎಸ್