ಬಾ ನಲ್ಲೆ ಮಧುಚಂದ್ರಕೆ (1993) – ಆ ಬೆಟ್ಟದಲ್ಲಿ

ಸಾಹಿತ್ಯ : ಪ್ರೊ. ಸಿದ್ದಲಿಂಗಯ್ಯ
ಸಂಗೀತ : ಹಂಸಲೇಖ
ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
ಹಾಡು ಕೇಳಿ

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.

ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ!
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು!! ಮುತ್ತುವುವು ಮೊಲದ ಹಿಂಡು.

ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ!
ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ
ನೀನೆತ್ತ ಪ್ರೀತಿ ಬಳ್ಳಿ ಹೂದೋಟದಲ್ಲಿ
ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ!! ಉಲ್ಲಾಸವನ್ನು ಚೆಲ್ಲಿ.

ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು!
ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೆಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ!! ದುಂಬಿಗಳ ದಾಳಿಯಲ್ಲಿ.

ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.

About sujankumarshetty

kadik helthi akka

Posted on ಆಗಷ್ಟ್ 9, 2009, in ಕವನ, ಚಿತ್ರಗೀತೆ, ಪ್ರೊ. ಸಿದ್ದಲಿಂಗಯ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮ ಟಿಪ್ಪಣಿ ಬರೆಯಿರಿ